ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಎರಡು ವರ್ಷಗಳ ಹಿಂದೆ ಈ ಅಂಕಣಬರಹಗಳ ಸಂಕಲನರೂಪದಲ್ಲಿ ಪ್ರಕಟವಾದ `ವಿಚಿತ್ರಾನ್ನ' ಪುಸ್ತಕವನ್ನು ಖರೀದಿಸಿದ್ದ ಅಮೆರಿಕನ್ನಡತಿಯೊಬ್ಬರು ನನಗೆ ಒಂದು ಇಮೇಲ್ ಕಳಿಸಿದ್ದರು. ``ಜೋಶಿಯವರೆ, ನಾನು ಹೀಗೆ ಬರೆಯುತ್ತಿರುವುದಕ್ಕೆ ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ನನ್ನ ಗಂಡ ನಿಮ್ಮ ವಿಚಿತ್ರಾನ್ನ ಪುಸ್ತಕವನ್ನು ಬಾತ್‌ರೂಮ್ ಬುಕ್ ಆಗಿ ಉಪಯೋಗಿಸುತ್ತಿದ್ದಾರೆ; ಪ್ರಾಥರ್ವಿಧಿಯ ವೇಳೆ ದಿನಕ್ಕೊಂದರಂತೆ ವಿಚಿತ್ರಾನ್ನ ಸಂಚಿಕೆಗಳನ್ನು ಓದುತ್ತಿದ್ದಾರೆ, ತುಂಬಾ ಮೆಚ್ಚಿಕೊಂಡಿದ್ದಾರೆ. ನನಗೂ ಇದರಿಂದ ಖುಶಿಯೇ, ಆ ರೀತಿಯಿಂದಾದ್ರೂ ನಮ್ಮೆಜಮಾನ್ರು ಕನ್ನಡ ಪುಸ್ತಕ ಓದ್ತಾರಲ್ಲಾ ಎಂದು..."! ಪಾಯಿಖಾನೆಯಲ್ಲಿನ ಪರಮೋಲ್ಲಾಸವನ್ನು ಹೆಚ್ಚಿಸುವ ಸತ್ಕಾರ್ಯವನ್ನು ಒಂದು ಪುಸ್ತಕವು ಮಾಡಬಲ್ಲದಾದರೆ/ಮಾಡುತ್ತದಾದರೆ ಅದು ನಿಜವಾಗಿಯೂ ಆ ಪುಸ್ತಕದ ಸಾರ್ಥಕತೆಯೇ! ಬೇಸ್‌ಮೆಂಟಿನ ಕಪಾಟಿನಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳಿಗೆಲ್ಲಿದೆ ಆ ಸಾರ್ಥಕತೆ? ....

- Login or register to post comments
- 434 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಹೆ ಹೆ ಹೆ!
ಬಹಳ ವಿಚಿತ್ರವಾಗಿದೆ.
ವಿಚಿತ್ರಾನ್ನದ ಭಕ್ಷಣೆಯ ಬಳಿಕ ಬಾತ್ ರೂಮಿಗೆ ಭೇಟಿಯ ಬದಲು ಬಾತ್ ರೂಮಿನಲ್ಲೇ ವಿಚಿತ್ರಾನ್ನದ ಭೋಜನ.
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಮನುಷ್ಯನಿಗೆ ಜೀವನ ಅದೆಷ್ಟು ಬೇಸರವಾಗಿದೆ ಎ೦ದರೆ ತಿನ್ನುವುದರಿ೦ದಾ ಹಿಡಿದೂ ಹೇ**ವವರೆಗೂ
ಆತನಿಗೆ ಏನಾದರೂ ಇರ್ಬೇಕು .
ಒಬ್ಬ೦ಟಿಯಾಗಿ ಇರೋದಿಲ್ಲಾ ಅ೦ತಾನೇ >>
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಅಮೇರಿಕದವರಿಗೆ ಸುಮ್ಮನೆ ಹೇ...ದಿಕ್ಕೆ ಬೇಜಾರಾಗುವುದು, ಆಗ ಪುಸ್ತಕಗಳನ್ನೋದೋದು ಇವೆಲ್ಲ ಮಾಮೂಲಿ!
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಅಲ್ಲಿ ಅಸ್ಟೊಂದು ಹೊತ್ತು ಪಾಯಿಖಾನೆಯಲ್ಲಿ ಕುರುತ್ತಾರೊ!! ಅಥವಾ ಅಸ್ಟು ಬೇಗ ಓದಿಮುಗಿಸುತ್ತಾರೊ?
)
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಮೂಲವ್ಯಾಧಿ ಬರದಂತೆ, ತಡೆಯುವ ಒಂದು ಉಪಾಯ, ಪಾಯಿಖಾನೆಯಲ್ಲಿ ಓದುವ ಅಭ್ಯಾಸ
ನಮ್ಮಲ್ಲೂ ಅನೇಕರಿಗೆ ಈ ಅಭ್ಯಾಸವಿರುವುದನ್ನು ಗಮನಿಸಿದ್ದೇನೆ.
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಎಲ್ಲದರಲ್ಲೂ ತಪ್ಪು ನೋಡ್ಬೇಡಿ ಸ್ವಾಮೀ
ಪಾಪ, ಪುಸ್ತಕ ಓದೋದಕ್ಕೆ ಹೆಚ್ಚು ಸಮಯ ಸಿಗದವರು ಏನು ಮಾಡಕ್ಕಾಗತ್ತೆ?
ಎಲ್ಲೋ ಒಟ್ಟಲ್ಲಿ ಓದುತ್ತಾರಲ್ಲ ಅಂತ ಸಂತೋಷಪಡಬೇಡವೇ?
-ಹಂಸಾನಂದಿ
ಉ: ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಕನ್ನಡ ಪುಸ್ತಕಗಳಿವೆಯೇ?
ಪಾಯೀಖಾನೆಯಲ್ಲಿ ಓದುವು ಪುಸ್ತಕಗಳ ಒಂದು genreನೇ ಇದೆ ಸ್ವಾಮಿ. ಮನಸ್ಸಿಗೆ, ಮೆದುಳಿಗೆ ಹೆಚ್ಚು ಕೆಲಸ ಕೊಡದಂತೆ (ಅದರಿಂದ ಹೊಟ್ಟೆ ಕಟ್ಟಿಬಿಟ್ಟರೆ ಹೋದ ಕೆಲಸವೇ ಹಾಳಾಗಿಬಿಡುತ್ತಲ್ಲ) ಇರುವ ಪುಸ್ತಕಗಳು, ಸಿನಿಮಾ, ಫ್ಯಾಶನ್ ಮಾಗಜೀನ್ ಗಳು ಇರತ್ತ್ವೆ ಪಾಯಿಖಾನೆಯ ಕಾಬಿನೆಟ್ ಗಳಲ್ಲಿ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ