Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಶಿಕ್ಷಣ

ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

July 26, 2007 - 11:14pm — Aram

ಅರಸೀಕೆರೆಯ ಅರವಿಂದ PUC- PCM ಪಾಸು ಮಾಡಿ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರೂ 3500 ಸಂಬಳದ ಕೆಲಸದಲ್ಲಿದ್ದಾನೆ.

ಇಪ್ಪತ್ತೊಂದು ವಯಸ್ಸು.

SSLC ಯ ತನಕ ಕನ್ನಡಮಾಧ್ಯಮ. ಇಂಗ್ಲೀಷ್ ಕಷ್ಟ ಪಟ್ಟು ಒಂದೊಂದೇ ಅಕ್ಷರ ಜೋಡಿಸಿ TALK = ಟಾಲ್ ಕ್ ಎಂದು ಓದುತ್ತಾನೆ.

PUC MATHS ಪಾಸಾದರೂ ತ್ರಿಜ್ಯ, ವ್ಯಾಸ ಕೂಡಾ ಗೊತ್ತಿಲ್ಲ.

ಹೋಗಲಿ ಕನ್ನಡವಾದರೂ ಚೆನ್ನಾಗಿ ಬರಬಹುದೇನೋ ಅಂದುಕೊಂಡರೆ, ( ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಬಾರದು) ಬರೆಯುವಾಗ ಹಾಸನಕ್ಕೆ ಆಸನವೆಂದೂ, ಆದರಕ್ಕೆ ಹಾದರವೆಂದೂ ಬರೆಯುತ್ತಾನೆ.

25ರ ತಿಪಟೂರಿನ ತಿಪ್ಪೇಸ್ವಾಮಿ ಮೈಸೂರಿನಲ್ಲಿ BA final ತನಕ ಓದಿ Englishನಲ್ಲಿ fail ಆಗಿ ಓದು ಬಿಟ್ಟು ಬಿಟ್ಟಿದ್ದಾನೆ. ಇವನ ಕನ್ನಡ ಬರಹ ಕೂಡಾ ಮೊದಲಿನವನ ಹಾಗೆಯೇ - ಆಸನ-ಹಾದರ.. ಇಂಗ್ಲೀಷಂತೂ ದೊಡ್ಡಸೊನ್ನೆ.

ಬೆಂಗಳೂರಿನ ಸರಕಾರೀಶಾಲೆಯಲ್ಲಿನ ಏಳನೇ ತರಗತಿಯ ಹುಡುಗನಿಗೆ ಯಾವ ಮಗ್ಗಿಯೂ ಬಾರದು, ಕನ್ನಡವನ್ನು ತಡವರಿಸದೆ ಓದಲೂ ಬಾರದು.

ಶಿಕ್ಷಣತಜ್ನರೇ ಹೇಳಿ ಯಾಕೆ ಹೀಗೆ? ಮಾತೃಭಾಷೆಯಲ್ಲಿ ಕಲಿತರೆ ವಿಷಯಗಳು ಸುಲಭವಾಗಿ ಅರ್ಥವಾಗಿ ಮನಸ್ಸಿನಲ್ಲಿ ಉಳಿಯಬೇಕಲ್ಲವೇ?

ನಾನೂ ಕನ್ನಡಮಾಧ್ಯಮದಲ್ಲೇ SSLC ಯ ತನಕ ಓದಿದವನು. ಹಾಗೆಂದುಕೊಂಡು ಹೋದವರುಷ ಈಗಿನ SSLC ಯ ಗಣಿತಪುಸ್ತಕ ತೆಗೆದುನೋಡಿದರೆ ಒಂದೇ ಒಂದು ವಾಕ್ಯ ಕೂಡಾ ಅರ್ಥವಾಗಲಿಲ್ಲ. Recreational Maths ನನ್ನ ಅಭಿರುಚಿಯ ವಿಷಯ.

ಸರಿ, ಇಂಗ್ಲೀಷ್ ಮಾಧ್ಯಮದಲ್ಲಿ ಪರಿಸ್ತಿಥಿ ಹೇಗಿದೆ ಎಂಬ ಕುತೂಹಲವಾಯಿತು.

English ಭಾಷೆಯಲ್ಲಿ ಲಭ್ಯವಿರುವ ಪುಸ್ತಕಸಂಪತ್ತು ನೋಡಿ ದಂಗಾದೆ.

Oxford University Press, Cambridge University Press, Orient Longman ಮುಂತಾದ ಪ್ರಮುಖ ಸಂಸ್ಥೆಗಳು ಎಷ್ಟು ಮುದ್ದಾಗಿ, colorful ಆಗಿ, ಯಾರೇ ಆಗಲಿ ನೋಡಿದರೆ ಪ್ರತೀ ಪುಟವನ್ನೂ ವಿವರವಾಗಿ ಓದುವ ಮನಸ್ಸಾಗುವಂತೆ, ಯಾರಿಗೇ ಆಗಲಿ ಸುಲಭವಾಗಿ ಮನದಟ್ಟಾಗುವಂತೆ ಬರೆದಿದ್ದಾರೆ.

ಕರುನಾಡ ಸರಕಾರವು ಪ್ರತಿವರ್ಷ ಎಷ್ಟೋ ಕೋಟಿಗಳನ್ನು ಪ್ರಾಥಮಿಕ ಕನ್ನಡಮಾಧ್ಯಮದ ಶಿಕ್ಷಣಕ್ಕಾಗಿ, ಕನ್ನಡ ಅಭಿವೃದ್ಧಿಗಾಗಿ ಖರ್ಚಿಸುತ್ತದೆ.

ಏನು ಸಾಧಿಸಿದಂತಾಯಿತು?

ಸರಕಾರೀ ಶಾಲೆಗಳಲ್ಲಿ ಪಠ್ಯಪುಸ್ತಕಗಳಲ್ಲಿ ಶಿಕ್ಷಣಮಟ್ಟ ಏಕೆ ಇಷ್ಟೊಂದು ಕುಸಿದಿದೆ?

ಕಾರಣಗಳೇನು?
ಪ್ರಾಥಮಿಕ ಶಿಕ್ಷಣದ ಬುನಾದಿಯೇ ಇಷ್ಟು ಶಿಥಿಲವಾಗಿರುವಾಗ ಅದನ್ನು ಮೊಟ್ಟಮೊದಲು ಸರಿಪಡಿಸುವುದು ಬಿಟ್ಟು ಉಚ್ಚ ಶಿಕ್ಷಣದ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳನ್ನು ಇನ್ನಷ್ಟು ತೆರೆಯುವ ತರಾತುರಿ ಏಕೆ?

‹ ಬುದ್ದ ಯಾವ ಮೊಟರು ಬಯಿಕು ಚನ್ನಾಗಿದೆ? ›
  • ಶಿಕ್ಷಣ
Ornamental seperator
  • Login or register to post comments
  • 531 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 27, 2007 - 3:13pm — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

^^^

ಈ ವಿಸಯಕ್ಕೆ ನಂಟಾದ "ಕನ್ನಡದಲ್ಲಿ science ಬಲು ಕಸ್ಟ" ಅನ್ನೋ ಮಾತುಕತೆ ನೋಡಿರಿ ಗೊತ್ತಾಗುತ್ತೆ!!

ಎಲ್ಲಿಯವರೆಗೂ "ಕನ್ನಡದಲ್ಲಿ ಶಿಕ್ಷಣ", "ಕನ್ನಡದಲ್ಲಿ ಕಲಿಕೆ" ಆಗುವುದಿಲ್ಲವೋ, ಇದು ಹೀಗೆ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 27, 2007 - 3:51pm — roshan_netla

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

roshan_netla's picture

ಸರಿಯಾಗಿ ಹೇಳಿದಿರಿ ಶಿಕ್ಷಣ ಪಡೆದ ನಮ್ಮ ಹುಡುಗರ ಹಣೆಬರಹ. ಜಾತಿ ರಾಜಕೀಯ, ಮತ್ತು ಶಿಫಾರಸಿನಿಂದ ಒಳಬಂಧ ಶಿಕ್ಷಣದ ಮಹತ್ವ ತಿಳಿಯದ ಅಧಿಕಾರಿಗಳು ಇವಕ್ಕೆ ಕಾರಣ. ನಮ್ಮ ಕನ್ನಡ ಅತಿಅಭಿಮಾನಿಗಳು ತಮಟೆ ಹೊಡಿದು ಪ್ರತಿಬಟಿಸುವ ನಾಯಕರಿಗೆ ಇವೆಲ್ಲ ಕಾಣುದಿಲ್ಲ!!

  • Login or register to post comments
  • link
  • Email this ಪ್ರತಿಕ್ರಿಯೆ
July 28, 2007 - 10:43am — ASHOKKUMAR

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

ASHOKKUMAR's picture

Quote:
ಪರಿಸ್ತಿಥಿ ಹೇಗಿದೆ
,
Quote:
ಶಿಕ್ಷಣತಜ್ನರೇ

ಹಾದರ,ಆಸನದ ಬಗ್ಗೆ ಬರೆಯುವ ನೀವೇ ಹೀಗೆ ಬರೆದರೆ ಹೇಗೆ? Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
July 28, 2007 - 5:29pm — Aram

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

Aram's picture

ಅಶೋಕ್ ರವರೇ:

ನಿಮ್ಮ ಪ್ರತಿಕ್ರಿಯೆಗೆ ನನ್ನಿಗಳು.

ಇನ್ನೊಬ್ಬರನ್ನು ಒಂದು ಬೊಟ್ಟುಮಾಡಿ ತೋರಿಸುವಾಗ ಕೈಯ ಮೂರು ಬೊಟ್ಟುಗಳು ನನ್ನೆಡೆ ತೋರಿಸುತ್ತವೆ ಎನ್ನುವ ಹಾಗಾಯಿತು.

ಗೊತ್ತಿದ್ದೂ ಮಾಡಿದ ತಪ್ಪು.

ಕಾಗದದ ಮೇಲೆ ಬರೆಯುತ್ತಿದ್ದಿದ್ದರೆ ಹೀಗಾಗುತ್ತಿರಲಿಲ್ಲ; ಕೀಲಿಮಣೆಯ ಇಂಗ್ಲೀಷ್ ಭಾಷೆಯ ರೋಮನ್ ಲಿಪಿಯನ್ನು ಬಳಸಿ ಬರೆದುದರಿಂದ ಹೀಗಾಯಿತು, ಕ್ಷಮಿಸಿ.

ಕನ್ನಡ ಬರವಣಿಗೆಯನ್ನು ಇನ್ನೂ ಕಲಿಯುತ್ತಿದ್ದೇನೆ. ಬೆಂಗಳೂರಿಗರ ಭಾಷೆಯಲ್ಲಿ ಹೇಳುತ್ತಾರೆ: "ಸ್ವಲ್ಪ adjust ಮಾಡಿಕೊಳ್ಳಿ." ಆದರೆ ನಾನು ಹಾಗೆ ಹೇಳಲಾರೆ.

ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುವ ಇರಾದೆ ಇಲ್ಲವಾದರೂ ಸುಮ್ಮನಿರಲಾರದೆ ಹೇಳುತ್ತಿದ್ದೇನೆ: ನನ್ನ ಮನೆಮಾತು ಕನ್ನಡವಲ್ಲ ಹಾಗೂ ಕನ್ನಡ Paper ನಲ್ಲಿ ಎರಡನೇಯ supplementary ಪರೀಕ್ಷೆ ಬರೆದು ಕನಿಷ್ಟ ಅಂಕಗಳೊಂದಿಗೆ ಪಾಸಾಗಿದ್ದೆ.

ಆದರೂ "ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ" ಎಂದು ಹೇಳುವುದಿಲ್ಲ; ತಪ್ಪಾಗಿದೆ, ಕೊಡುವ ಶಿಕ್ಷೆಯನ್ನು ಸ್ವೀಕರಿಸುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
July 28, 2007 - 7:48pm — gc

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

gc's picture

ಅರಾಮರೆ, ನೀವು ಹೇಳುವುದು ಸಮಂಜಸ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ನಮ್ಮ್ "ನಾಯಕರು' ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ತಳಹದಿ ನೀಡದೆ ಉನ್ನತ ಶಿಕ್ಷಣದತ್ತ ಹೆಚ್ಚಿನ ಗಮನ ನೀಡುತ್ತಾರೆ. ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ತೆರೆಯುವುದು ನಮ್ಮವರಿಗೆ ಹೆಮ್ಮೆಯ ವಿಷಯ.

B.K.C ಯವರು ಶಿಕ್ಷಣ ಮಂತ್ರಿಯಾಗಿದ್ದಾಗ ರಾಜ್ಯದ ಪ್ರಾಥಮಿಕ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ತಂದರು. ಮಕ್ಕಳಿಗೆ ಕಲಿಯಲು ಸಹಾಯಕವಾಗುವ ಅನೇಕ ಅಂಶಗಳನ್ನು ಪಠ್ಯಕ್ರಮದಲ್ಲಿ ಈಗ ಸೇರಿಸಲಾಗಿದೆ. ಈ ಬದಲಾವಣೆಗಳ ಪೂರ್ಣ ಲಾಭ ಪಡೆಯಲು ಹಲವಾರು ವರ್ಷಗಳೆ ಬೇಕಾಗಬಹುದು. ಜೊತೆಗೆ ಶಿಕ್ಷಕರ ವಿರೋಧ ಕೂಡ!!

ನಮ್ಮ ದೇಶಕ್ಕೆ ೬೦ ವರ್ಷಗಳಾದವು. ಇಂದಿಗೂ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಾಲೆಗಳು ಮರೀಚಿಕೆಯಾಗಿವೆ. ಇದು ನಾಚಿಗೆ ತರುವ ವಿಷಯ. ಶಿಕ್ಷಣ ಮಾಧ್ಯಮದ ಬಗ್ಗೆ ವಿವಾದವಿದೆ. ಆದರೆ ಗುಣಮಟ್ಟದ ಬಗ್ಗೆ?

  • Login or register to post comments
  • link
  • Email this ಪ್ರತಿಕ್ರಿಯೆ
July 28, 2007 - 10:48pm — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

ಅರಾಮ್

ನಮ್ಮ "ಕಲಿಕೆ ಓಜೆ" ಬಗ್ಗೆ ನೀವು ಸೊಲ್ಲೆತ್ತಿದ್ದಕ್ಕೆ ನನ್ನಿ!!

ನನ್ನ ಚಿಕ್ಕಪ್ಪನವರು ಹೈಸ್ಕೂಲ್ ಮಾಸ್ತುರು. ಕೊನೆಯ ಪರೀಕಸೆಯಿಂದ ಬಂದ ಉತ್ತರದ ಹಾಳೆಗಳನ್ನು ನಾನು ತಿದ್ದಿ, ಅಂಕ ಹಾಕುತ್ತಿದ್ದೆ. ( ಇದು ಸರಿಯಿಲ್ಲ. ಆದರೆ ಪಾಪಾ ಚಿಕ್ಕಪ್ಪ!! )

ಯಾಕೆ ಈ ಕೆಟ್ಟಪಾಡು ನಮ್ಮ ಕಲಿಕೆಯದು
೧) ಕಲಿಸುವವರು ಹೆಚ್ಚು ಓದಿರುವುದಿಲ್ಲ. ಓದಿದ್ದರೂ ಸರಿಯಾಗಿ ಓದಿರುವುದಿಲ್ಲ. ಸರಿಯಾಗಿ ಓದಿದ ಜಾಣರು, ಕಲಿಸುವ ಕೆಲಸಕ್ಕೆ ಹೋಗುವುದಿಲ್ಲ.
೨) ನಮ್ಮ ಕಲಿಕೆ ಇನ್ನೂ ಪರಂಗಿಯವರು ಬಿಟ್ಟು ಹೋದ ಪಳೆಯುಳಿಕೆಯಾಗಿದೆ. ಅದರಲ್ಲಿ ಮಾರ್ಪು ಆಗಿದ್ದರೂ ಸಾಲದು
೩) ಹಳ್ಳಿಗಳಲ್ಲಿ, ಪಾಠಗಳು ನಡೆಯುವುದಿಲ್ಲ. ನಡೆದರೂ, ಮಕ್ಕಳು ಬರುವುದಿಲ್ಲ. ಈಗೀಗ ಊಟಕ್ಕಾಗಿ ಬರುತ್ತಾರಂತೆ
೪)ನನಗೆ ನಮ್ಮ "ಕಲಿಕೆ ಪದ್ದತಿ"ಯದ್ದೇ ಹೆಚ್ಚು ತಪ್ಪು ಎಂದು ಕಾಣಲ್ಲ. ಯಾವುದೋ ಒಂದು ಪದ್ದತಿ, ಅದನ್ನೇ ನೆಟ್ಟಗೆ ಹೇಳಿಕೊಟ್ಟರಾಯಿತು. ನೋಡಿ ನಮ್ಮ ಬೆಂಗಳೂರು, ಮೈಸೂರು, ಬೆಳಗಾಮಿ, ಮಂಗಳೂರಿನ ಪರೈವೇಟ್ ಸಾಲೆಯ ಮಕ್ಕಳನ್ನು. ಹೇಗೆ ಅಂಕಗಳನ್ನು ಗೋರುವರು. ಇದಕ್ಕೆ ಸರಿಯಾದ ಕಲಿಸಿಕೆ/couching ಬೇಕು. ಅದನ್ನು ಕೊಡಲು ನಮ್ಮ ಸರಕಾರಿ ಮಾಸ್ತು ಬಾಳಿಕೆಗೆ ಬಂದಿಲ್ಲ.

ಇನ್ನು ಕನ್ನಡದ ಮೀಡಿಯಂ ಕಲಿಕೆ!! ಇದರ ಬಗ್ಗೆ ನೀವು ಹೇಳಿದುದು ಸರಿಯಾಗಿದೆ. ಯಾವ ಕನ್ನಡ ಹೇಳಿಕೊಡಬೇಕೋ, ಅದನ್ನು ಸರಿಯಾಗಿ ಹೇಳಿಕೊಡದೇ, ಅವರಿಗೆ ಅತ್ತ ಅವರಾಡುವ ಕನ್ನಡವನ್ನೂ ಬರೆಯಲು ಬರದು, ಕಲಿತ ಕನ್ನಡವನ್ನೂ ಬರೆಯಲಾರರು.

ಕನ್ನಡ ಕಲಿಸಿಕೆಯಲ್ಲಿ ಇರುವ ತಪ್ಪುಗಳನ್ನು ಶಂಕರಭಟ್ಟರು ತಮ್ಮ ಹೊತ್ತಗೆಗಳಲ್ಲಿ ಹೇಳಿದ್ದಾರೆ. ಹೆಚ್ಚಿನವು ನಿಮಗೂ ಹಿಡಿಸೀತು.

ಮಾದರಿ: ( ಇದು ಭಟ್ಟರ ಹೊತ್ತಗೆಯಲ್ಲಿಲ್ಲ )
ನಾವು ಸಾಲೆಯಲ್ಲಿ "ಇಲ್ಲ ಮತ್ತು ಅಲ್ಲ" ಇವುಗಳ ನಡುವಿನ ಬೇರೆತನವನ್ನು 'ಪಠ್ಯಪುಸ್ತಕ’ದಲ್ಲಿ ಓದಿದ್ದೀವ? ಇಂತಹ ಕನ್ನಡದ ಮುಕಿಯ ಗುಣವನ್ನೇ ಬಿಟ್ಟುಬಿಟ್ಟಿದ್ದಾರೆ. ಇಂತವು ಹಲವಿವೆ. ಸರಿಯಾಗಿ ಕನ್ನಡ ಹೇಳಿಕೊಡಲ್ಲ, ಸರಿಯಾಗಿ ಹೇಳಿಕೊಡಲು ಸರಕಿಲ್ಲ ಅನ್ನೋದು ದಿಟ.

ಇನ್ನೂ
೨) ನಮ್ಮ ಕನ್ನಡದಲ್ಲಿ ಹೆಚ್ಚಿಗೆ ಬಳಕೆಯಾಗುವ ಸಂಸ್ಕೃತಪದಗಳ ರಚನೆ, ಒಳರಚನೆ ಹೇಳಿಯೇ ಕೊಡುವುದಿಲ್ಲ. ಇದನ್ನೂ ಹೇಳಿಕೊಟ್ಟರೇ, ವಿಜ್ನಾನ, ಗಣಿತದಲ್ಲಿ ತುಂಬಿಕೊಂಡಿರುವ ಸಂಸ್ಕೃತದ ಪದಗಳನ್ನು ಅರಿಯುವುದು ಸಲೀಸು. ( ಅಚ್ಚ-ಕನ್ನಡದಲ್ಲಿ ಇಗನಾನ, ಲೆಕ್ಕ ಹೇಳಿಕೊಡುವ ಕಾಲ ಬರುವುದು ಎಂಬ ನಚ್ಚು ನನಗಿಲ್ಲ Sad, ಕಡೆ ಅಂದರು ಸಂಸ್ಕೃತದ ಪದಗಳು ಬಂದರು ಅದು ಸುಲಭವಾದವಾಗಿರಲಿ ಎಂದು ಹಂಬಲವಿದೆ (ನೇರ ಪ್ರಸಾರ vs ಸಜೀವ ಪ್ರಕ್ಷೇಪಣೆ ನೆನೆಸಿಕೊಳ್ಳಿರಿ) ).
ಅದಕ್ಕೆ ಕನ್ನಡದ ಕೂಟೇ ಕೊಂಚ ಸಂಸ್ಕೃತದ ಆಳವನ್ನು ಕನ್ನಡದಲ್ಲಿ ವಿಜ್ಞಾನ, ಗಣಿತ ಓದುವ ಮಕ್ಕಳು ಪಡೆಯಲಿ.
೩) ಕನ್ನಡದಲ್ಲಿ ಹೆಚ್ಚಿನ ಓದಿಲ್ಲ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 29, 2007 - 1:28am — Aram

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

Aram's picture

@ ಮಹೇಶ್, ರೋಶನ್, ಮತ್ತು GC ಸರ್:

ತಮ್ಮ ಪ್ರತಿಕ್ರಿಯೆಗಳಿಗೆ ನನ್ನಿಗಳು.

ನಡೆದ ಎರಡು ಪ್ರಸಂಗಗಳು ನೆನಪಾಗುತ್ತಿವೆ.

ನಾನು ಮೈಸೂರು ವಿಶ್ವವಿದ್ಯಾಲಯದ ಕೆಳಗೆ ವಾಣಿಜ್ಯವಿಷಯದಲ್ಲಿ ಮೊದಲ ವರುಷದ ಪದವಿಗಾಗಿ ಓದುತ್ತಿದ್ದಾಗ ನಮ್ಮ ಮುಂದೆ ಎರಡು second language ಆಯ್ಕೆಗಳನ್ನು ಇಕ್ಕಿದ್ದರು:- ಕನ್ನಡ ಅಥವಾ ಹಿಂದಿ. ಹಿಂದಿ ತೆಗೆದುಕೊಂಡವರೆಲ್ಲ ಅ, ಆ, ಇ, ಈ ಯಿಂದ ಪಾಠ ಶುರು ಮಾಡಿ ಎಲ್ಲರೂ ಮೊದಲದರ್ಜೆಯಲ್ಲಿ ಮತ್ತು ಎಂಟು ಮಂದಿ rank ಗಳಿಸಿ ಉತ್ತೀರ್ಣರಾದರು.

ಕನ್ನಡವನ್ನು ಆಯ್ದವರಲ್ಲಿ ಸುಮಾರು ಐದಾರು ಮಂದಿ ನಾಪಾಸಾಗಿ ಮುಂದೆ october ನಲ್ಲಿ supplementary exam ನಲ್ಲಿ ಪಾಸಾಗಬೇಕಾಯಿತು. ಅವರಲ್ಲಿ ನಾನೂ ಒಬ್ಬನೆಂದು ನಾಚಿಕೆ ಬಿಟ್ಟು ಒಪ್ಪಿಕೊಳ್ಳುತ್ತಿದ್ದೇನೆ.

ವರುಷಗಳುರುಳಿದಂತೆ ಪರಿಸ್ಠಿತಿ ಸುಧಾರಿಸಿರುತ್ತದೆ ಎಂದಂದುಕೊಂಡಿದ್ದರೆ ಅದು ನಮ್ಮ ಮೂರ್ಖತನ. ಇತ್ತೀಚೆಗೆ ನನ್ನ ಹುಡುಗ ಎಂಟನೇ ತರಗತಿಗೆ ಸೇರಲೆಂದು ಅವನ ತಾಯಿಯ ಊರಿಂದ ನಮ್ಮ ಹಳ್ಳಿಗೆ ಬಂದ. ಕನ್ನಡ ಚೆನ್ನಾಗಿ ಬರುತ್ತಿದ್ದರೂ ಹಳೆಗನ್ನಡ ಪಾಠಗಳನ್ನಿಟ್ಟ ಉದ್ದೇಶ ಅರ್ಥವಾಗದೆ, ಮರುವರುಷ ಒಂಬತ್ತನೇ ತರಗತಿಗೆ ಮೂವತ್ತು ಕಿಲೋಮೀಟರ್ ದೂರದೂರಿಗೆ ಕನ್ನಡದ ಬದಲಿಗೆ ಸಂಸ್ಕೃತ ಇರುವ ಶಾಲೆಗೆ ಹೋಗಿ ಸೇರಿಕೊಂಡ - IIT ಗೆ ಸೇರುವುದಕ್ಕಾಗಿ ಗಣಿತ, ವಿಗ್ನಾನ ವಿಷಯಗಳಲ್ಲಿ ಹೆಚ್ಚಿನ ಸಮಯ ವ್ಯಯ ಮಾಡಬೇಕಾದ್ದರಿಂದ ಕಷ್ಟದ ಹಳೆಗನ್ನಡ ಕಲಿಯುವದರಲ್ಲಿ ಹೆಚ್ಚಿನ ಶ್ರಮ ತೆಗೆದುಕೊಳ್ಳುವುದು ಅರ್ಥಹೀನ ಎಂಬುದಕ್ಕಾಗಿ.

ಹಳೆಗನ್ನಡವನ್ನು ಸಾಹಿತ್ಯದ ವಿದ್ಯಾರ್ಥಿಗಳು ಕಲಿಯುವುದರಲ್ಲಿ ಅರ್ಥವಿದೆ. ಆದರೆ ಒಲ್ಲದ, ವಿಗ್ನಾನ, ವಾಣಿಜ್ಯ ವಿದ್ಯಾರ್ಥಿಗಳಿಗೆ "ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವ" ಕಾಯಕವನ್ನು ಮಾಡುವ ನಮ್ಮ ಸರಕಾರೀ ವಿಶ್ವವಿದ್ಯಾಲಯಗಳು ವಿದ್ಯೆಯ ಲಯವನ್ನೇಕೆ ಮಾಡುತ್ತಾರೆ ಎಂಬುದು ನನಗರ್ಥವಾಗದ ವಿಷಯ.

ಕನ್ನಡದ ಮೇಲಿನ ಪಿರೀತಿಯಿಂದ ಕನ್ನಡವನ್ನಾಯ್ಕೆಮಾಡಿದರೆ ಈ ತೆರನ ಶಿಕ್ಷೆಯೇ ?

ಬದುಕು ಮಾಡುವ, ಬದುಕಿಗೊಂದು ಅರ್ಥ ತರುವ, ಅರ್ಥಸಂಪಾದನೆಯ ಮಾರ್ಗಗಳನ್ನು ಕಲಿಸುವ ವಿದ್ಯೆಗಳನ್ನು ಮೊದಲು ಕಲಿಸಿದರೆ ಒಳ್ಳೆಯದಲ್ಲವೇ?
<>

  • Login or register to post comments
  • link
  • Email this ಪ್ರತಿಕ್ರಿಯೆ
July 29, 2007 - 2:17am — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

ವರುಷಗಳುರುಳಿದಂತೆ ಪರಿಸ್ಠಿತಿ ಸುಧಾರಿಸಿರುತ್ತದೆ ಎಂದಂದುಕೊಂಡಿದ್ದರೆ ಅದು ನಮ್ಮ ಮೂರ್ಖತನ. ಇತ್ತೀಚೆಗೆ ನನ್ನ ಹುಡುಗ ಎಂಟನೇ ತರಗತಿಗೆ ಸೇರಲೆಂದು ಅವನ ತಾಯಿಯ ಊರಿಂದ ನಮ್ಮ ಹಳ್ಳಿಗೆ ಬಂದ. ಕನ್ನಡ ಚೆನ್ನಾಗಿ ಬರುತ್ತಿದ್ದರೂ ಹಳೆಗನ್ನಡ ಪಾಠಗಳನ್ನಿಟ್ಟ ಉದ್ದೇಶ ಅರ್ಥವಾಗದೆ, ಮರುವರುಷ ಒಂಬತ್ತನೇ ತರಗತಿಗೆ ಮೂವತ್ತು ಕಿಲೋಮೀಟರ್ ದೂರದೂರಿಗೆ ಕನ್ನಡದ ಬದಲಿಗೆ ಸಂಸ್ಕೃತ ಇರುವ ಶಾಲೆಗೆ ಹೋಗಿ ಸೇರಿಕೊಂಡ - IIT ಗೆ ಸೇರುವುದಕ್ಕಾಗಿ ಗಣಿತ, ವಿಗ್ನಾನ ವಿಷಯಗಳಲ್ಲಿ ಹೆಚ್ಚಿನ ಸಮಯ ವ್ಯಯ ಮಾಡಬೇಕಾದ್ದರಿಂದ ಕಷ್ಟದ ಹಳೆಗನ್ನಡ ಕಲಿಯುವದರಲ್ಲಿ ಹೆಚ್ಚಿನ ಶ್ರಮ ತೆಗೆದುಕೊಳ್ಳುವುದು ಅರ್ಥಹೀನ ಎಂಬುದಕ್ಕಾಗಿ.

ನೋಡಿ ಇಲ್ಲಿ ಮತ್ತೆ ಹಳೆಗನ್ನಡ vs ಸಂಸ್ಕೃತ.

ಸಂಸ್ಕತ ತಕ್ಕೊಂಡಿದ್ದರಿಂದ ಅವನು IITಗೆ ಸೇರೋದಕ್ಕೆ, ಗಣಿತ, ವಿಗ್ನಾನ ( ಇದು ಇಂಗಲೀಸ ಮೀಡಿಯಮ್ಮಲೇ ಕಲಿಬೇಕು, IIT ಪರೀಕಸೇ ಕನ್ನಡದಲ್ಲಿ ಇರಲ್ಲ ) ಕಲಿಯಕ್ಕೆ ಯಾವ ಬಳಕೆ? ( ನಮ್ಮ ಹಳಗನ್ನಡ, ಕನ್ನಡ ಹಾಳಾದ್ರಾಯ್ತು, ಇವರ ಹುಡುಗ IITಗೆ ಸೇರಿಬಿಡಬೇಕು)

ಅರೇ!! ನಾವೆಲ್ಲ ಸಾಲೆಯಲ್ಲಿ ಹಳೆಗನ್ನಡ ಓದಿಕೊಂಡು maths, science ತೇರ್ಗಡೆ ಆದೆವಲ್ಲ, ನಮ್ಮ ಕರ್ನಾಡಲ್ಲಿ ಕನ್ನಡ ಮೊದಲ ನುಡಿಯಾಗಿ ಓದೋರೆ ಹೆಚ್ಚು!
ನಿಮಗೆ ’ಹಳೆಗನ್ನಡ’ ಓದೋದು "ಅರ್ಥಹೀನ ಶ್ರಮವೋ"? ಮತ್ತೆ ಹಳೆಗನ್ನಡದ ಬಗ್ಗೆ ಹಗೂರವಾದ ಮಾತು! ಸಂಸ್ಕೃತ ಓದಿದರೇ ಏನು ಸಿಕ್ಕತ್ತೆ ವಿಜ್ಞಾನದೋರಿಗೆ?

ನಿಮ್ಮ ಹುಡುಗನಿಗೆ ಹಳೆಗನ್ನಡ ದಕ್ಕಲಿಲ್ಲ ಅಂತ, ಅದಕ್ಕೆ ಹಳೆಗನ್ನಡ ಓದೋದೇ ವಿಜ್ನಾನ ಓದೋರಿಗೆ "ಅರ್ಥಹೀನ ಶ್ರಮ"ವಾ?

ನೀವು ಇಲ್ಲಿ ಬರೀ "ನನ್ನ ಹುಡುಗನಿಗೆ ಏಸು ಅಂಕ ಬರುತ್ತೆ" ಅಂತ ತಲೆ ಓಡಿಸುತ್ತಿದ್ದೀರಿ, ಆದರೆ ಹಳೆಗನ್ನಡ ಅನ್ನೋದು ನಮ್ಮ ಹೆಮ್ಮೆ ಅಂತ ನಿಮಗೆ ಅನ್ನಿಸುತ್ತಿಲ್ಲ!! Sad
ನಿಮ್ಮ ಹುಡುಗನಿಗೆ ಅಂಕ ಪಡೆಯಲು ನಮ್ಮ "ಹಳಗನ್ನಡ" ತೊಂದರೆ ಅದನ್ನು ಕಿತ್ತು ಹಾಕಬೇಕು, ನಿಮಗೋಸ್ಕರ, ಇಲ್ಲ ಅಂದರೆ "ಹಳಗನ್ನಡ ಅರ್ಥಹೀನ" ಅಂತ ಬೊಬ್ಬೆ!

ಒಟ್ಟಿನಲ್ಲಿ ನೀವು ಬಯಸುವ "ಶಿಕ್ಷಣ ಸುಧಾರಣೆ" ನಮ್ಮ ಹುಡುಗ IIT ಸೇರಿಕೋ ಬೇಕು ಅದಕ್ಕೆ ಹಳಗನ್ನಡ ಕಿತ್ತುಹಾಕಿ. ನಿಮ್ಮ ಹಳಗನ್ನಡ ಕಟ್ಟಿಕೊಂಡು ನಮ್ಮ ಹುಡುಗನಿಗೇನು, ದಂಡ! ಸುಮ್ಮನೆ "ಅರ್ಥಹೀನ ಶ್ರಮ". ಇವರ ಅರ್ಥಸಂಪಾದನೆಯ ಮಾರ್ಗ ಹಳಗನ್ನಡ ಓದದೇ ಆರಾಮಾಗಿ ಇಂಗಲೀಸಲ್ಲಿ ಬರೆದು ಸಂಸ್ಕೃತದಲ್ಲಿ ಅಂಕ ಗೋರೋದು.

ಸದ್ಯ, ನಮ್ಮ ಸರಕಾರ ನಿಮ್ಮ ಮಾತು ಕೇಳಲ್ಲ, ಇಲ್ಲ ಅಂದ್ರೆ ಕನ್ನಡವೇ ಕಷ್ಟ, ಬರೀ ಸಂಸ್ಕೃತ ಮಡಗಿ ಅಂತ ಅಂದ್ರೂ ಅನ್ನಬೋದು. Smiling

ಈ ಸರತಿ ಹತ್ತನೇ ತರಗತಿಯ ’ಒಂದನೇ ನುಡಿ’ ಕನ್ನಡದ ಹೊತ್ತಗೆ ಓದಿದರೆ ನಲಿವು, ಹಳೆಗನ್ನಡ, ಜನಪದ ಹೆಚ್ಚಿಸಿದ್ದಾರೆ!
=================================================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 29, 2007 - 10:02pm — gc

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

gc's picture

ಅರಾಮರೆ, ನಾನು ಶಾಲೆಯಲ್ಲಿದ್ದಾಗ ಹಳಗನ್ನಡ ಓದಿದ್ದೇನೆ ಆದರೆ ಪರೀಕ್ಷೆಗಳಲ್ಲಿ ಹಳಗನ್ನಡ ನನ್ನನ್ನು ಕಾಡಿದ ನೆನಪಿಲ್ಲ. ಹಳಗನ್ನಡ ಪಠ್ಯದಲ್ಲಿರಲಿ ಆದರೆ ನೀವು ಹೇಳಿದಂತೆ ನಮ್ಮ ಮಕ್ಕಳ ಗಂಟಲಲ್ಲಿ ತುರುಕುವುದು ಬೇಡ. ಹಳಗನ್ನಡದ ಬಗ್ಗೆ ವಿನಾಕಾರಣ ಹೆದರಿಕೆ ಇಲ್ಲವೇ ಇದೇ ನೆಪದಿಂದ ಬೇರೆ ಭಾಷೆಯನ್ನು ಓದುವುದು ನಿಲ್ಲಬೇಕು.

ನನ್ನ ಕೆಲ ಗೆಳೆಯರು ಅಂಕಗಳ ಆಸೆಗಾಗಿ ಸಂಸ್ಕೃತವನ್ನು ಓದಿದರು (ನಮ್ಮ ಸಮಾಜದಲ್ಲಿ ಅಂಕಗಳು = ನಮ್ಮ ಆರ್ಹತೆ = ನಮ್ಮ ಭವಿಷ್ಯ!!). ಸರಳ ಸಂಸ್ಕೃತ ಓದುತ್ತಾ ಸಣ್ಣ ಪ್ರಶ್ನೆಗಳಿಗೂ ಕನ್ನಡ ಅಥವಾ ಇಂಗ್ಲಿಷಿನಲ್ಲಿ ಉತ್ತರ ಬರೀತಿದ್ರು!! ಇಂಗ್ಲಿಷ ಅಥವಾ French ಭಾಷೆಗಳನ್ನು ಕಲಿಯುವಾಗ ಆಯಾ ಭಾಷೆಗಳಲ್ಲಿ ಉತ್ತರ ಬರೆಯುವುದು ಸಹಜ. ಸಂಸ್ಕೃತಕ್ಕೆಕೆ ಈ ರೀತಿಯ exception ಎಂಬುದು ಆಗ ಗೊತ್ತಾಗಿರಲಿಲ್ಲ. ಪುಟಗಟ್ಟಲೆ ಕನ್ನಡದಲ್ಲಿ ಉತ್ತರ ಬರೆಯುತ್ತಿದ್ದ ನಾವು ಸಂಸ್ಕೃತ ವಿದ್ಯಾರ್ಥಿಗಳಿಗೆ ಕನಿಷ್ಟ ಒಂದು ಪುಟದಷ್ಟಾದರೂ ಶುದ್ದ ಸಂಸ್ಕೃತದಲ್ಲಿ ಬರೆದು ತೋರಿಸಿ ಎಂದು ಹಂಗಿಸುತ್ತಿದ್ದ ನೆನಪಿದೆ. ಈಗಿನ ಪಠ್ಯಕ್ರಮದಲ್ಲಿ ಹೇಗೆ ಸಂಸ್ಕೃತ ಕಲಿಸುತ್ತಾರೆಂದು ಗೊತ್ತಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
July 29, 2007 - 11:58pm — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

ಸಂಸ್ಕೃತಕ್ಕೆಕೆ ಈ ರೀತಿಯ exception ಎಂಬುದು ಆಗ ಗೊತ್ತಾಗಿರಲಿಲ್ಲ.

ನನ್ನನಿಸಿಕೆಯಲ್ಲಿ ಸಕ್ಕದಕ್ಕೆ ಈ ಹೊರತು ಬೇಕು, ಮತ್ತು ಸರಿ.( ಆದರೆ ಇದನ್ನು ಬರೀ ಅಂಕ ಗೋರುವ ಒಂದು ಕಳ್ಳದಾರಿ ಎಂದು ನೋಡಬಾರದು. ಅದು ಸಕ್ಕದ ಕಲಿಕೆಯನ್ನು ಕೀಳುರುಚಿಯಲ್ಲಿ ಕಂಡಂತೆ )

ಸಕ್ಕದಕ್ಕೇ ಹೊರತು ಯಾಕೆಂದರೆ.

೧) ಸಕ್ಕದ ಒಂದು ಆಡು ನುಡಿಯಲ್ಲ. ಈಗ ಆದೊಂದು ಬರೀ ಹೊತ್ತಗೆಯಲ್ಲಿ ಇರುವ ನುಡಿ (ಗ್ರಾಂಥಿಕ/ಶಾಸ್ತ್ರೀಯ)
೨)ಸರಕಾರಿ ಸಕ್ಕದದ ಪರೀಕಸೆಯಲ್ಲಿ ಸಕ್ಕದದಕ್ಕಿ ಪ್ರಬಂಧದಂತ ಉತ್ತರ ಇರಲ್ಲ. ಸಕ್ಕದದಲ್ಲೇ ಉತ್ತರ ಬರೆಯುವುವು ಹೆಚ್ಚೆಂದರೆ ನಾಲ್ಕು ಸಾಲಿನವು.
೩) ನಮ್ಮ ಸಕ್ಕದ ಕಲಿಯುವುದಕ್ಕೂ, ಕನ್ನಡ ಕಲಿಯುವುದಕ್ಕೂ ಹಲವು ಬೇರೆ ಬೇರೆ ಗುರಿಗಳಿವೆ.

ಸಕ್ಕದದ ಕಲಿಕೆಯ ಮುಕಿಯ ಗುರಿಗಳು ( ನನ್ನಂತೆ )
೧) ಸಕ್ಕದದ ಕಬ್ಬಗಳನ್ನು ಓದುವುದು. ಓದಿ ನಮ್ಮ ನಮ್ಮ ನುಡಿಗಳಲ್ಲಿ ಹೇಳುವುದು. ಸಕ್ಕದದಲ್ಲಿ ಮಾತಾಡುವುದು ಅಲ್ಲ.
೨) ಸಕ್ಕದದಲ್ಲಿ ಹೊಸ ಹೊಸ ನೆಗಳ್ಚಿಗೆ/ರಚನೆಗೆ( ಹಲವು ಸರತಿ ಹಳೆಯದನ್ನು ಅರಿಯಲೂ ಕೂಡ), ನಾವು ಕಲಿಯುವ ಸರಕಾರಿ ಸಕ್ಕದ ಏನೆಂದರೇನು ಸಾಲದು. ಅದಕ್ಕೆ ಅದರ ಗುರಿ ನಮ್ಮನ್ನು ಸಕ್ಕದದಲ್ಲಿ ಹೊಸ ನೆಗಳ್ಚಿಗೆ ಅಣಿಯಲ್ಲ. ಇರುವ ಹಳೆಯ ಸಕ್ಕದದ ಕಬ್ಬಗಳನ್ನು ಅರಿಯುವುದು.
೩) ಸರಕಾರಿ ಸಕ್ಕದದಲ್ಲಿ, ವೇದ-ನುಡಿಯ ವ್ಯಾಕರಣವಿಲ್ಲ.
೪)ಸಕ್ಕದವನ್ನು ಒಂದು ಹೊರನುಡಿ( ಹೊಸನುಡಿ ) ಅಂತೆ ನಮಗೆ ಕಲಿಯಲು ಇಟ್ಟಿರುವುದು.( ಕನ್ನಡವು ನೆಲನುಡಿ, ಹೊರನುಡಿಯಲ್ಲ)
೫) ಸಕ್ಕದವು ಆಡುನುಡಿಯಲ್ಲದೇ ಇರುವುದರಿಂದ ಅದನ್ನು ಹರಡಲು, ಹೆಚ್ಚು ಮಂದಿ ಓದುವಂತೆ ಮಾಡಲು, ಕೊಂಚ ಹೆಚ್ಚು ಇಂಬು, ಸಲಿಗೆ ಬೇಕು. ಸಕ್ಕದದಲ್ಲೇ ೧೨೫ ಅಂಕಗಳಿಗೂ ಬರೆಯಿರಿ ಅಂದರೆ, ಹೆಚ್ಚಿನವರು ಹೆದರಿ ಸಕ್ಕದ ಓದುವುದೇ ಇಲ್ಲ, ಏಕೆಂದರೆ ಸಕ್ಕದದಲ್ಲೇ ಉತ್ತರಗಳನ್ನು ಬರೆಯಲು ತಕ್ಕ ತಕ್ಕುಮೆಯನ್ನು ನಾವು ನಮ್ಮ ಸರಕಾರಿ ಸಕ್ಕದ ಕಲಿಕೆಯಲ್ಲಿ ಪಡೆಯುವುದೇ ಇಲ್ಲ. ( ಶೃಂಗೇರಿ ಮಠದ(ಇಂತಹ) ಪರೀಕಸೇ ಮಾಡಿಕೊಂಡವರಿಗೆ, ಸಕ್ಕದದಲ್ಲೇ ಉತ್ತರ ಬರೆಯುವಲ್ಲಿರುವ ಎಡರು ಚನ್ನಾಗಿ ಗೊತ್ತಿರುವುದು. )

ಇನ್ನು ಕನ್ನಡದ ಕಲಿಕೆಯ ಗುರಿ( ನನ್ನಂತೆ )
೧) ಕನ್ನಡ ಈ ನಾಡಿನ ನೆಲದ ನುಡಿ. ಈ ನಾಡಿನ ಮಂದಿಯ ಆಡುನುಡಿ, ಅದಕ್ಕೆ ಇದನ್ನು ಸಕ್ಕದದ ಮಟ್ಟದಲ್ಲಿ ಬರೀ ಓದಿಕೊಂಡು ತಿಳಿಯುವಂತೆ ಹೇಳಿಕೊಡಕ್ಕೆ ಆಗಲ್ಲ.
೨) ಹಳೆಗನ್ನಡ ಕನ್ನಡದ ಇತಿಹಾಸ, ನಮ್ಮ ಕನ್ನಡದ ಬೆಳೆವಣಿಗೆಯಲ್ಲಿ ಹಳೆಗನ್ನಡ, ನಡುಗನ್ನಡಗಳು ಒಂದು ಮುಕಿಯ ಹಂತಗಳು, ಇದರ ಪರಿಚಯ ನಮಗೆ ಬೇಕೇ ಬೇಕು. ಇಲ್ಲದೇ ಹೋದರೆ ಪಂಪ, ರನ್ನ, ಕುಮಾರವ್ಯಾಸ, ಬಸವಣ್ನ ಇವರ ಪರಿಚಯವೇ ಇರಲ್ಲ.
೩) ಕನ್ನಡವನ್ನು ೧೦-೧೨ ತರಗತಿಯ ಹುಡುಗ ಕನ್ನಡ ನೆಲದಲ್ಲಿ ಆಗಲೇ ಮಾತಾಡುತ್ತಿರುತ್ತಾನೆ. ಅವನಿಗೆ ಕನ್ನಡ ಒಂದು ಹೊರನುಡಿಯಲ್ಲ( ವಲಸೆ ಬಂದವರನ್ನು ಲೆಕ್ಕಕ್ಕೆ ತಗೆದುಕೊಳ್ಳಕ್ಕೆ ಇಲ್ಲ ಬರಲ್ಲ ). ಅವನಿಗೆ ಕನ್ನಡದಲ್ಲಿ ಹೆಚ್ಚಿನ ಮಟ್ಟದ ಕಲಿಸಿಕೆ ಬೇಕು. ಅವನು ಕನ್ನಡವನ್ನು ಅರಿತರೇ ಸಾಲದು, ಅದರ ಇತಿಹಾಸ( ಹಳೆಗನ್ನಡ ) ಮತ್ತು ಅದರಲ್ಲೇ ಹೊಸ ಹೊಸ ನೆಗಳ್ವು ಮಾಡ-ತಕ್ಕವನಾಗಬೇಕು. ಅದಕ್ಕೆ ಕನ್ನಡದ ಹಲವು ಕಬ್ಬ ಬಗೆಗಳ ಪರಿಚಯಬೇಕು.

ಸಕ್ಕದಕ್ಕೆ ಕೊಟ್ಟ ಸಡಿಲಿಕೆಗಳನ್ನು ಮಂದಿ ಕೆಟ್ಟಬಳಕೆ ಮಾಡಿದರೆ, ಅದು ಹೆಮ್ಮೆಯೇ? ಸಕ್ಕದದಲ್ಲಿ ಆಸಕ್ತಿಯಿಲ್ಲದ ಹುಡುಗನಿಗೆ, "ಅಂಕ ಗೋರೋ" ಎಂದು ಸಕ್ಕದ ತುರುಕಿದಂತಲ್ಲವೇ?( ಇದನ್ನೇ ಪಟ್ಟಣದ ಹಲವು ಮಂದಿ ಮಾಡೋದು )

ಏನೇ ಆದರು ಹಳಗನ್ನಡವನ್ನು ಸರಕಾರ ಇಟ್ಟಿರುವುದು "ಗಂಟಲಿಗೆ ತುರುಕಿದಂತಲ್ಲ"( ವಲಸಿಗ/ಬೇರೆ ನುಡಿಯವರ ಅನಿಸಿಕೆ ಬಿಡಿ, ಅವರಿಗೆ ಕನ್ನಡ ಕಲಿಯೋದೇ ದೊಡ್ಡ ಎಡರು ).

ಒಂದು ಸುದ್ದಿ, ನಮ್ಮ ಊರಲ್ಲಿ ಹೈಸ್ಕೂಲಲ್ಲಿ ಸಕ್ಕದ ಹೇಳಿಕೊಡುತ್ತಿದ್ದ ಒಂದೇ ಒಂದು ಸಾಲೆಯೂ, ಹುಡುಗರು ಸಕ್ಕದ ಕಲಿಯುತ್ತಿಲ್ಲ ಎಂದು ಈಗ ಸಕ್ಕದದ ಗುರುಗಳನ್ನು ಹಿಂದಿ ಕಲಿಸಲು ಹಾಕಿ, ಸಕ್ಕದವನ್ನು ಕೊಡುವುದನ್ನು ನಿಲ್ಲಿಸಿಬಿಟ್ಟಿದೆ Sad. ಆದರೆ ಹುಡುಗರೇ ಸಕ್ಕದ ಕಲಿಯುವುದಕ್ಕೆ ಹಿಂಜರಿಯುತ್ತಿದ್ದಾರಂತೆ.

ಸಕ್ಕದಕ್ಕೆ ಕೊಟ್ಟಿರುವ ಸಡಿಲಿಕೆಯನ್ನು ತೆಗೆದು, ೧೨೫ ಅಂಕಗಳಿಗೂ "ತಪ್ಪಿಲ್ಲದ ಶುದ್ಧ ಸಂಸ್ಕೃತ"ದಲ್ಲೇ ಬರೆಯಿರಿ, ಅಂದ್ರೆ ಈ "ಅಂಕಕ್ಕಾಗಿ ಹಲುಬೋ" ಮಂದಿಗಳೇ ಮೊದಲು ಅದರಿಂದ ದೂರ ಓಡೋದು, ದಿಟವಾದ ಆಸಕ್ತಿ ಇರೋರು ಓದೇ ಓದ್ತಾರೆ!

=========================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 30, 2007 - 3:53pm — ವೈಭವ

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

ವೈಭವ's picture

"....ಸಕ್ಕದವು ಆಡುನುಡಿಯಲ್ಲದೇ ಇರುವುದರಿಂದ ಅದನ್ನು ಹರಡಲು, ಹೆಚ್ಚು ಮಂದಿ ಓದುವಂತೆ ಮಾಡಲು, ಕೊಂಚ ಹೆಚ್ಚು ಇಂಬು, ಸಲಿಗೆ ಬೇಕು. ಸಕ್ಕದದಲ್ಲೇ ೧೨೫ ಅಂಕಗಳಿಗೂ ಬರೆಯಿರಿ ಅಂದರೆ, ಹೆಚ್ಚಿನವರು ಹೆದರಿ ಸಕ್ಕದ ಓದುವುದೇ ಇಲ್ಲ, ಏಕೆಂದರೆ ಸಕ್ಕದದಲ್ಲೇ ಉತ್ತರಗಳನ್ನು ಬರೆಯಲು ತಕ್ಕ ತಕ್ಕುಮೆಯನ್ನು ನಾವು ನಮ್ಮ ಸರಕಾರಿ ಸಕ್ಕದ ಕಲಿಕೆಯಲ್ಲಿ ಪಡೆಯುವುದೇ ಇಲ್ಲ. ( ಶೃಂಗೇರಿ ಮಠದ(ಇಂತಹ) ಪರೀಕಸೇ ಮಾಡಿಕೊಂಡವರಿಗೆ, ಸಕ್ಕದದಲ್ಲೇ ಉತ್ತರ ಬರೆಯುವಲ್ಲಿರುವ ಎಡರು ಚನ್ನಾಗಿ ಗೊತ್ತಿರುವುದು. ) ..."

ಯಾಕೆ ಸಲಿಗೆ,ಇಂಬು ನಾವು ಕೊಡಬೇಕು? ಅದು ನಮ್ಮ ನುಡಿಯೇ? ಅತ್ವ ಸಕ್ಕದ ಕಲಿಯುವುದರಿಂದ ಅನ್ನ ಸಿಗುವುದೇ. ಸಕ್ಕದಕ್ಕೆ ಇಮ್ಬು ಕೊಡುವವರು ಬಾರತದಲ್ಲಿ ಬಹಳ ಮಂದಿ ಇದ್ದಾರೆ. ಕನ್ನಡದ ಹಣ, ದುಡಿಮೆ ಸಕ್ಕದಕ್ಕೆ ಯಾಕೆ ಹೋಗಬೇಕು? ಇದು ಸೈಪಲ್ಲ/ನ್ಯಾಯವಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
July 30, 2007 - 4:24pm — mahesha

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

mahesha's picture

ಕನ್ನಡದ ಹಣ, ದುಡಿಮೆ ಸಕ್ಕದಕ್ಕೆ ಯಾಕೆ ಹೋಗಬೇಕು? ಇದು ಸೈಪಲ್ಲ/ನ್ಯಾಯವಲ್ಲ.

ನಾನು ಅದು ಸೈಪೆಂದಿಲ್ಲ. ಆದರೆ ಸಕ್ಕದದ ಕಲಿಕೆಗೂ ಕನ್ನಡದ ಕಲಿಕೆಗೂ ಗುರಿಗಳಲ್ಲಿ, ಒತ್ತಿನಲ್ಲಿ, ಬಲು ಬೇರೆತನವಿದೆ ಅಂದೆ ಆಟೇ!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 30, 2007 - 4:33pm — ವೈಭವ

ಉ: ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?

ವೈಭವ's picture

ಹಾಗಾದರೆ ಸರಿ...ನಲ್ಮೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
  • ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?
  • ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಬೇಕೆ ಬೇಡವೆ?
  • ಆತ್ಮಹತ್ಯೆ
  • ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’
Syndicate content

ಲೇಖಕರು

Aram's picture

ಪರಿಚಯ

I am a simple person with tastes in hindustani classical music, reading Kannada and English books, current affairs, politics, etc.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator