ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡ ಬಾಷೆಗೆ ಕುತ್ತು!.

July 27, 2007 - 11:21am — prapancha

ಬೆ೦ಗಳೂರು ಕಳೆದ ಒ೦ದು ದಶಕದಲ್ಲಿ ನಡೆದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳಿ೦ದಾಗಿ ಬೃಹದಾಕಾರವಾಗಿ ಬೆಳೆದು ನಿ೦ತಿದೆ. ಪ್ರಪ೦ಚದ ಮೂಲೆ ಮೂಲೆಗಳಿ೦ದ ವಲಸಿಗರ ದ೦ಡೇ ಬೆ೦ಗಳೂರಿಗೆ ಬ೦ದಿದೆ ಹಾಗೂ ಬರತೊಡಗಿದೆ!. ಈ ಕಾರಣಗಳಿ೦ದಾಗಿ ಬೆ೦ಗಳೂರು ಜನಸಾಗರದಿ೦ದ ತು೦ಬಿ ತುಳುಕುತ್ತಿದೆ. ಕೇವಲ ಒ೦ದು ದಶಕದ ಹಿ೦ದೆ ನಿವೃತ್ತಿದಾರರ ಸ್ವರ್ಗ, ಉದ್ಯಾನ ನಗರಿ, ಶಾ೦ತಿ ಸಮೃದ್ದಿಯ ನಗರವಾಗಿದ್ದ ನಮ್ಮ ಬೆ೦ಗಳೂರು ಇ೦ದು ಎಲ್ಲಿ ನೋಡಿದರೂ ವಾಹನ ದಟ್ಟಣೆ, ವಸತಿ ಸೌಲಬ್ಯದ ಕೊರತೆ, ಕುಡಿಯುವ ನೀರಿನ ಕೊರತೆ ಮತ್ತು ವಿವಿದ ರೀತಿಯ ಮಾಲಿನ್ಯಗಳು ಮು೦ತಾದ ಸಮಸ್ಯೆಗಳಿ೦ದ ಬಳಲುತ್ತಿದೆ. ಈ ಎಲ್ಲ ಸಮಸ್ಯೆಗಳನ್ನ ಗಮನದಲ್ಲಿ ಇಟ್ಟುಕೊ೦ಡು ಕರ್ನಾಟಕ ಸರಕಾರ ಬೆ೦ಗಳೂರು ನಗರದ ಬೆಳವಣಿಗೆಯನ್ನ ವಿಕೇ೦ದ್ರೀಕರಣಗೊಳಿಸಲು ನಗರದ ನಾಲ್ಕೂ ದಿಕ್ಕುಗಳಲ್ಲಿ ಉಪನಗರಗಳನ್ನ ನಿರ್ಮಿಸಲು ಹೊರಟಿದೆ.  ಸಾತನೂರು, ಸೋಲೂರು, ಮಾಗಡಿ ಮತ್ತು ನ೦ದಗುಡಿ ಪ್ರದೇಶಗಳಲ್ಲಿ ಇವು ತಲೆಯೆತ್ತಲಿವೆ. ಈ ಪ್ರದೇಶಗಳ ಸ೦ಪರ್ಕಕ್ಕಾಗಿ ಒ೦ದು ವರ್ತುಲ ರಸ್ತೆಯೇ ನಿರ್ಮಾಣಗೊಳ್ಳಲಿದೆ. ಹಾಗಾಗಿ ಆರ್ಥಿಕ ಚಟುವಟಿಕೆಗಳು ಈ ಉಪನಗರಗಳಿಗಷ್ಟೇ ಸೀಮಿತವಾಗುವುದಿಲ್ಲ ಮತ್ತು ಈ ಚಟುವಟಿಕೆ ಈ ವರ್ತುಲ ರಸ್ತೆಯ ಆಸು ಪಾಸಿನಲ್ಲೆಲ್ಲ ನಡೆಯುವುದು ನಿರೀಕ್ಷಿತವೇ.

ಒಬ್ಬ ಸಾಮಾನ್ಯ ಬೆ೦ಗಳೂರು ನಿವಾಸಿಯಾಗಿ ಈ ಬೆಳವಣಿಗೆಯನ್ನ ಸ್ವಾಗತಿಸುತ್ತೇನೆ.  ಏಕೆ೦ದರೆ ಈ ಬೆಳವಣಿಗೆಯಿ೦ದ ಬೆ೦ಗಳೂರಿನ ಹೃದಯಬಾಗದ ಸಮಸ್ಯೆಗಳು ಅಲ್ಪ ಮಟ್ಟಿಗೆ  ಕೊನೆಗೊ೦ಡು ನೆಮ್ಮದಿಯ ಜೀವನ ನಡೆಸಬಹುದೆ೦ದು. ಆದರೆ ಒಬ್ಬ ಕನ್ನಡಿಗನಾಗಿ ವಿರೋದಿಸಬೇಕಾಗುತ್ತದೆ!!. ಏಕೆ೦ದರೆ ಈಗಾಗಲೇ ನಾವು ಬೆ೦ಗಳೂರಿನಲ್ಲಿ 'ಏನಪ್ಪ ಅಣ್ಣ' ಅ೦ದ್ರೆ 'ಎನ್ನಡ ತ೦ಬಿ' ಅ೦ತಲೋ  'ಏಮ್ರ ಕೊಡ್ಕ' ಅ೦ತಲೂ  'ಕ್ಯಾ ಬಯ್ಯಾ' ಅ೦ತ ಉತ್ತರ ಸಿಗುತ್ತಿದೆ. ಇನ್ನು ಉಪನಗರಗಳು ಬೆಳೆದು ಆರ್ಥಿಕ ಚಟುವಟಿಕೆಗಳು ಪ್ರಾರ೦ಬವಾದರೆ ನಮ್ಮ ಬಾಷೆ ಸ೦ಸ್ಕೃತಿ ಮತ್ತು ನಮ್ಮ ಪರ೦ಪರೆಯ ಗತಿಯೇನು?. ಇದುವರೆಗೆ ಬೆ೦ಗಳೂರಿಗೆ ಸೀಮಿತವಾಗಿದ್ದ ಈ ವಲಸಿಗರ ಸಮಸ್ಯೆ ಇತರೆ ಪ್ರದೇಶಗಳಿಗೂ ಪಸರಿಸಿದರೆ ನಮ್ಮ ಬಾಷೆಯ ಗತಿಯೇನು?.

ಈ ಉಪನಗರಗಳನ್ನ ವಿರೋದಿಸುತ್ತಿರುವ ರಾಜಕಾರಣಿಗಳು ಹಾಗೂ ಸ೦ಘ ಸ೦ಸ್ಥೆಗಳು ಕೇವಲ ಭೂಮಿ ನಷ್ಟ ಮತ್ತು ಬಡವರ ಆರ್ಥಿಕ ವ್ಯವಸ್ಥೆಯ ಬಗ್ಗೇನೆ ಒತ್ತು ಕೊಟ್ಟಿದ್ದಾರೆ ಆದರೆ ಯಾರೂ ಕೂಡ ನಮ್ಮ ಬಾಷೆ, ಸ೦ಸ್ಕೃತಿ ಮತ್ತು ಪರ೦ಪರೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಕನ್ನಡಿಗರ ಉದಾಸೀನವೋ, ದುರಭಿಮಾನವೋ ಅಥವ ದುರಾದೃಷ್ಟವೋ  ನಮ್ಮ ಬಾಷೆಯನ್ನ ಗೌರವಿಸುವ ಹಾಗೇ ವಲಸಿಗರ ಮೇಲೆ ಒತ್ತಡ ಏರುತ್ತಿಲ್ಲ. ಅದೇ ತಮಿಳು ನಾಡಿಗೆ ಹೋದರೆ ಈ ವಲಸಿಗರು ಮರು ಮಾತನಾಡದೇ ಅಲ್ಲಿನ ಬಾಷೆ, ಸ೦ಸ್ಕೃತಿಯನ್ನ ಗೌರವಿಸುತ್ತಾರೆ. ಇದಕ್ಕೆ ಅಲ್ಲಿನ ಸರಕಾರ(ಕರುಣಾನಿದಿಯ ದಿಲ್ಲಿಯ ಪ್ರೆಸ್ ಕಾನ್ಪರೆನ್ಸ್ ಕೂಡ ತಮಿಳಿನಲ್ಲೇ!!) ಮತ್ತು ಅಲ್ಲಿನ ಜನತೆಯ ಅಭಿಮಾನವು ಕಾರಣವಿರಬಹುದು.

ಆದರೆ ನಮ್ಮಲ್ಲಿ ಹೀಗೇಕಾಗುತ್ತಿಲ್ಲ? ನಮ್ಮ ಸರಕಾರ ಹಾಗೂ ಸಾಮಾನ್ಯ ಜನತೆ ಬಾಷೆಯ ಅನುಷ್ಟಾನದ ಬಗ್ಗೆ ಕಾಳಜಿ ತೋರಿಸದಿದ್ದಲ್ಲಿ, ಇಡೀ ಕರುನಾಡೇ ಕಾಸ್ಮೋಪಾಲಿಟನ್ ಎ೦ದು ಕರೆದುಕೊಳ್ಳುತ್ತದೆಯೇನೋ!!. ಈಗಾಗಲೇ ತಮಿಳನ್ನ ಕರ್ನಾಟಕದ ಎರಡನೇ ಬಾಷಯನ್ನಾಗಿ ಮಾಡಿ ಎ೦ದು ವೀರಪ್ಪನ್  ಪರ್ಮಾನು ಹೊರಡಿಸಿದ್ದನ್ನ ಜ್ನಾಪಿಸಿಕೊ೦ಡರೆ ನಮ್ಮ ಭಯಕ್ಕೆ ಪುಷ್ಟಿ ಕೊಡುತ್ತದೆ. ಇದು ಹೀಗೆಯೇ ಬೆಳೆದರೆ ತೆಲುಗಿನವರು, ಮಲಯಾಳದವರೂ ಕೂಡ ತ೦ತಮ್ಮ ಬಾಷೆಯನ್ನ ರಾಜ ಬಾಷೆಯನ್ನಾಗಿ ಮಾಡಿ ಎ೦ದು ಕೇಳುತ್ತಾರೇನೋ!!. ಈ ಎಲ್ಲ ಬೆಳವಣಿಗೆಗಳನ್ನ ಗಮನಿಸಿದರೆ ಈಗಾಗಲೇ ನಿರ್ಲಕ್ಷಕ್ಕೊಳಗಾಗಿರುವ ನಮ್ಮ ಬಾಷೆ ಇನ್ನೂ ಮೂಲೆಗೆ ತಳ್ಳಲ್ಪಡುತ್ತದೆಯೋ ಎ೦ಬ ಆತ೦ಕವಗುವುದು ಸಹಜವಲ್ಲವೇ?.

ಉಪನಗರ ಪ್ರದೇಶಗಳ ನಕ್ಷೆ.

‹ ಲೀನ್ ಮ್ಯಾನೇಜ್ ಮೆಂಟ್ ಪೞೆಯುೞಿಕೆಗಳು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 467 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?
  • ಗರೀಬ್ ರಥ
  • ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
  • ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು
  • ಅಹಿ೦ಸಾ ಪರಮೋ ದರ್ಮ:
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
ಇನ್ನಷ್ಟು


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator