ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

July 28, 2007 - 7:13pm — Aram

ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?).

ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ.

ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ.

RSS ನಲ್ಲಿ ಒಂದು ಕಾಲದಲ್ಲಿದ್ದ ನನ್ನ ಸೋದರಮಾವ ಕಟ್ಟಾ ಕನ್ನಡ ಹಾಗೂ ಹಿಂದಿ ಅಭಿಮಾನಿ. ತಮ್ಮ ದಸ್ಕತ್ತನ್ನು ಕೂಡಾ ಹಿಂದಿಯಲ್ಲಿ ಮಾಡುವವರು. ತಮ್ಮ ನಾಲ್ಕೂ ಮಕ್ಕಳನ್ನು ಹಟ ಹಿಡಿದು ಕನ್ನಡಶಾಲೆಗೇ ಕಳಿಸಿ, ಅವರ ಭವಿಷ್ಯದ ಜೊತೆ ಆಟ ಆಡಿದವರು.

ನಮ್ಮ ಮನೆಮಾತಿನಲ್ಲಿ English, ಕನ್ನಡದ ಅನೇಕ ಶಬ್ದಗಳನ್ನು ಉಪಯೋಗಿಸುತ್ತೇವೆ, ನಮ್ಮದೇ ಭಾಷೆಯ ಶಬ್ದಗಳಿದ್ದರೂ ಕೂಡಾ. ಉದಾ: ಎಡ, ಬಲ ಅಥವಾ left, right ಎನ್ನುವುದೇ ರೂಢಿ ಹೊರತು ನಮ್ಮ ಮನೆಮಾತಿನ ಶಬ್ದಗಳಲ್ಲ.

ಒಮ್ಮೆ ಅವರನ್ನೆಲ್ಲೋ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರಲು ಅವರು backseat driving ಮಾಡುತ್ತ directions ಕೊಡಲು ಶುರು ಮಾಡಿದರು. ನನಗೆ ದಾರಿ ಸರಿಯಾಗಿ ಗೊತ್ತಿರಲಿಲ್ಲ.

ಪುಣ್ಯಾತ್ಮರು ಎಡ ಬಲ ವೆಂದು ಕನ್ನಡದಲ್ಲಾಗಲಿ, left, right ಎಂದು ಇಂಗ್ಲೀಷಲ್ಲಾಗಲಿ ಹೇಳದೇ, दांये, बांये ಎಂದು ನಮ್ಮ ಮನೆಮಾತಿನಲ್ಲಿ ಹೇಳಿ ನನಗೆ ಗೊಂದಲವಾಗಿ ತಪ್ಪು ತಪ್ಪು ತಿರುಗಿ ಎಲ್ಲೋ ಗುದ್ದಿಬಿಟ್ಟೆ.

ನೀತಿ: ಅಭಿಮಾನ ಇರಬೇಕು, ಆದರೆ ದುರಭಿಮಾನ ಇದ್ದರೆ ಅದು ಅಪಘಾತ, ಅನ್ - ಅರ್ಥ, ಅಪಾರ್ಥಗಳಿಗೆ ಕಾರಣವಾಗುತ್ತದೆ.

communication skills ನ ಮೊದಲ ಪಾಠವೆಂದರೆ: ಕೇಳುಗರಿಗೆ ಸಂದೇಶವನ್ನು (message) ಅವರಿಗೆ ಅರ್ಥವಾಗುವ ಹಾಗೆ ಬಳಕೆಯಲ್ಲಿರುವ ಶಬ್ದಗಳನ್ನೇ ಉಪಯೋಗಿಸಿ ಹೇಳುವುದು. ನಾವು ಹೇಳಿದ್ದು ನಮ್ಮ target audience ಗೆ ಅರ್ಥವಾಗದಿದ್ದರೆ ನಾವು ಹೇಳಿದ್ದೆಲ್ಲ ವ್ಯರ್ಥ. ಏನೂ ಪ್ರಯೋಜನವಿಲ್ಲ.

ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ.

ಅದನ್ನು ಎಷ್ಟು ಮಂದಿ ಕನ್ನಡಪ್ರೇಮಿಗಳು ಅರ್ಥ ಮಾಡಿಕೊಳ್ಳಬಲ್ಲರು?

ಎಷ್ಟು ಮಂದಿ ನಿಜವಾಗಿಯೂ ಓದಿ ಖುಷಿ ಪಟ್ಟಿದ್ದಾರೆ?

ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?

ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ. ಉದಾಹರಣೆಗಾಗಿ: ಒಂದು ಪ್ರದೇಶದ ಜನರೆಲ್ಲರ ಉದ್ಯೋಗ, leisure ಗಳೆಲ್ಲವೂ ಯಾವುದಾದರೂ ಒಂದೇ ಚಟುವಟಿಕೆ (ಉದಾ: ಕೃಷಿ ಎಂದುಕೊಳ್ಳೋಣ) ಗೆ ಸೀಮಿತವಾಗಿದ್ದರೆ, ಅವರ ಭಾಷೆಯಲ್ಲಿ ಕೃಷಿಸಂಬಂಧ ಬಿಟ್ಟು ಬೇರೆ ಪದಗಳು ಸಿಗುವುದು ಕಷ್ಟ. GCಯವರೆಂದಂತೆ Englishನ ಅದ್ಭುತ ಬೆಳವಣಿಗೆ ಇದಕ್ಕೆ ಒಳ್ಳೆಯ ಉದಾಹರಣೆ.
<>

‹ ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ... ಕನ್ನಡದ ಚರ್ಚೆ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 373 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 28, 2007 - 8:55pm — ವೈಭವ

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

ವೈಭವ's picture

"...ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ..."

ಅಲ್ಲ. ಕೊಳಂಬೆ ಪುಟ್ಟಣೇಗೌಡರು(ಕಾಲೂರ ಚೆಲುವೆ, ತಿಳಿಗನ್ನಡ ನುಡಿವಣಿಗಳು, ಅಚ್ಚಗನ್ನಡ ನುಡಿಗಂಟು) , ಮುಳಿಯ ತಿಮ್ಮಪ್ಪಯ್ಯನವ್ರು(ಸೊಬಗಿನ ಬಳ್ಳಿ) ಅಚ್ಚ-ಕನ್ನಡದಲ್ಲಿ ಬರೆದಿದ್ದಾರೆ. ಕನ್ನಡದ ಹಲವು ಗಾದೆಗಳು, ವಚನಗಳು, ದಾಸರಪದಗಳು ಇವುಗಳಲ್ಲಿ ಅಚ್ಚ-ಕನ್ನಡ ಪದಗಳು ಅತ್ವ ಕನ್ನಡ ಸೊಗಡಿಗೆ ಹೊಂದುವ ಒರೆ/ಪದಗಳು ಹೆಚ್ಚು. ಅದರಿಂದಲೇ ಇಂದಿಗೂ ಕೂಡ ಇವು ಮಂದಿ ನಾಲಿಗೆಯಲ್ಲಿ ನಲಿಯುತ್ತಿವೆ.

ಇನ್ನು ಏಟೋಂದು ಮಂದಿ ಬರೆದಿರಬಹುದು. ಹುಡುಕಬೇಕು.

"....ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ...."

"....ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?...."

ಹೌದು ನಾಡಕಬ್ಬಿಗ ಅನ್ನಬೇಕು ಅದೇ ಸರಿ. ಕನ್ನಡಿಗರ ಅತೀ ಸಕ್ಕದ ಬಗೆಗಿನ ಒಲವಿಂದ ಹೀಗಾಗಿದೆ. ಇದರಿಂದ ಕನ್ನಡ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ಮಾತು ಹಲವು ಮಂದಿಗೆ ಕನ್ನಡ ಕಬ್ಬಿಣದ ಕಡಲೆಯಾಗುತ್ತದೆ.

ದಿಟ. ಆದರೆ ಬೇರೆ ನುಡಿಗಳಿಂದ ಒರೆಗಳನ್ನು/ಪದಗಳನ್ನು ತೆಗೆದುಕೊಳ್ಳುವಾಗ ನಮ್ಮ ನಾಲಿಗೆಗೆ, ಬುಡಕಟ್ಟಿಗೆ/nativity ಹೊಂದಿಕೊಳ್ಳುವಂತೆ ಮಾರ್ಪಾಟು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ನುಡಿ ಅಳಿಯುವುದು ನಿಜ.
ಮಾದರಿ : bus - ಬಸ್ಸು, car- ಕಾರು, ಬ್ರಹ್ಮ-ಬೊಮ್ಮ, ಪಶು-ಹಸು .....ಹೀಗೆ

ಇನ್ನೊಂದು ದಿಟವಾದ ಮಾತು:- ನಮ್ಮ ನಾಡಿನ ೯೦% ಮಂದಿ ಮಾತಾಡುವಾಗ ಆಯ ಬುಡಕಟ್ಟಿನ ಮಾತೇ(ಅಚ್ಚ-ಕನ್ನಡ) ಹೆಚ್ಚಿರುತ್ತದೆ. ಮಾತಿನ ಕನ್ನಡದಲ್ಲಿ ಸಕ್ಕದ(ಸಂಸ್ಕ್ರುತ) ಕಡಿಮೆ. ಬರಹ ಕನ್ನಡದಲ್ಲಿ ಸಕ್ಕದ ಹೆಚ್ಚು.

ಹೆಚ್ಚಿನ ಅರಿವಿಗೆ ಡಿ.ಎನ್.ಶಂಕರಬಟ್ಟರ ಹೊತ್ತಿಗೆಗಳನ್ನು ಓದಿರಿ.

ಕೊಸರು : ಮುಳಿಯ ತಿಮ್ಮಪ್ಪಯ್ಯನವರು ಹೇಳಿದಹಾಗೆ 'ರಟ್ಟ' 'ರಾಷ್ಟ್ರ' ವಾಗಿದಿಯಂತೆ.
ಮಾದರಿ: ರಾಷ್ಟ್ರಕೂಟರು ಮೊದಲು 'ರಟ್ಟಕೂಟ', 'ರಟ್ಟಕೂಡಲ್' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 28, 2007 - 10:14pm — mahesha

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

mahesha's picture

Smiling

ಇಲ್ಲಿ ಹೆಚ್ಚಿಗೆ ಬರೆಯಬೇಕಾಗಿಲ್ಲ. ಇದು ಮತ್ತೊಂದು ಅರಿಮೆಯ ಕೊರತೆಯ ಬರಹ. ( ಯಾಕೆ ಅಂತ ಮುಂದೆ ತಾಳ್ಮೆ ಇಂದ ನೋಡಿರಿ ) ಅರಿಮೆಯ ಕೊರತೆಯಿಂದ ಬರುವುವು, ತಪ್ಪರಿವುಗಳೇ!!

ಕೊರೆತೆಗಳು
೧) ಪಿರುತಿ ಅಂದರೆ? ಪಿರೀತಿ ಅಂತ ಕೇಳಿದ್ದೀನಿ. ಇದು ಹಳ್ಳಿ-ಕನ್ನಡದ ಅರಿವಿನ ಕೊರತೆ ತೋರುವುದು. ಪಿರುತಿ ಯಾಕೆ ಆಗಲ್ಲ, ಅಂದರೆ ಪ್ರೀತಿ = ಪಿರೀತಿ, ಇಲ್ಲ ಪೀತಿ ಆಗುವುದು ( ಹಿಂದಿಯಲ್ಲಿ ಪ್ರಿಯಾ = ಪಿಯಾ ). ಇನ್ನು ಕನ್ನಡದಲ್ಲಿ ಪ್ರೀತಿಗೆ ಎಲ್ಲರಿಗೂ ಗೊತ್ತಿರುವ ಒಲುವು, ಒಲುಮೆ, ಮತ್ತು ಹೆಚ್ಚು ಗೊತ್ತಿರದ ಕೂರ್ಮೆ, ಕಾದಲ್/ಕಾದಲ್ಮೆ ಇವು ಇದೆ.
೨) Practicalಗೆ ಕನ್ನಡದಲ್ಲಿ ಒರೆ ಇಲ್ವಾ? "ಆಗೋ ಹಾಗಿರೋದು", "ಅಕ್ಕು", "ನಡೆಯುವಂತಹ", ಇರಲಿ.
೩) "ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ." Smiling, ನಿಮ್ಮ ಮನೆಯಲ್ಲಿ ಕನ್ನಡ ಮಾತಾಡಲ್ಲ ಅಂದ ಮೇಲೆ ನಿಮಗೆ ಬರೀ ಹೊರಗಡೆ ಕನ್ನಡ ಗೊತ್ತಿರುತ್ತದೆ. ಮನೆಮಾತು ಕನ್ನಡದವರ ಒರೆಗಳು ನಿಮಗೆ ಅನಿತ್ತು ತಿಳಿದಿರಲ್ಲ. ಇನ್ನು ನೀವು ಬೆಂಗಳೂರಲ್ಲಿ ಇದ್ದರೆ, ಕತೆ ಮುಗಿಯಿತು!! Smiling

೪)

ನಮ್ಮ ಮನೆಮಾತಿನಲ್ಲಿ English, ಕನ್ನಡದ ಅನೇಕ ಶಬ್ದಗಳನ್ನು ಉಪಯೋಗಿಸುತ್ತೇವೆ, ನಮ್ಮದೇ ಭಾಷೆಯ ಶಬ್ದಗಳಿದ್ದರೂ ಕೂಡಾ. ಉದಾ: ಎಡ, ಬಲ ಅಥವಾ left, right ಎನ್ನುವುದೇ ರೂಢಿ ಹೊರತು ನಮ್ಮ ಮನೆಮಾತಿನ ಶಬ್ದಗಳಲ್ಲ.

ಒಮ್ಮೆ ಅವರನ್ನೆಲ್ಲೋ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರಲು ಅವರು backseat driving ಮಾಡುತ್ತ directions ಕೊಡಲು ಶುರು ಮಾಡಿದರು. ನನಗೆ ದಾರಿ ಸರಿಯಾಗಿ ಗೊತ್ತಿರಲಿಲ್ಲ.

ಪುಣ್ಯಾತ್ಮರು ಎಡ ಬಲ ವೆಂದು ಕನ್ನಡದಲ್ಲಾಗಲಿ, left, right ಎಂದು ಇಂಗ್ಲೀಷಲ್ಲಾಗಲಿ ಹೇಳದೇ, दांये, बांये ಎಂದು ನಮ್ಮ ಮನೆಮಾತಿನಲ್ಲಿ ಹೇಳಿ ನನಗೆ ಗೊಂದಲವಾಗಿ ತಪ್ಪು ತಪ್ಪು ತಿರುಗಿ ಎಲ್ಲೋ ಗುದ್ದಿಬಿಟ್ಟೆ.

ನೀತಿ: ಅಭಿಮಾನ ಇರಬೇಕು, ಆದರೆ ದುರಭಿಮಾನ ಇದ್ದರೆ ಅದು ಅಪಘಾತ, ಅನ್ - ಅರ್ಥ, ಅಪಾರ್ಥಗಳಿಗೆ ಕಾರಣವಾಗುತ್ತದೆ

Smiling ಮೊದಲು ನಮ್ಮ ತಾಯ್ನುಡಿ ಸರಿಯಾಗಿ ಕಲಿತು, ಆಮೇಲೆ ಬೇರೆಯವರ ತಾಯ್ನುಡಿಯ ಬಗ್ಗೆ!!. ಇದು ಮಾದರಿಯೇ? ನಮಗೆ ಎಡ, ಬಲ ಗೊತ್ತಾಗುವುದು, ನಮ್ಮ ಮನೆಮಾತು, ತಾಯಿಮಾತು, ತಂದೆಮಾತು, ಅಜ್ಜನ ಮಾತು ಅಜ್ಜಿಯ ಮಾತು, ಗೆಳೆಯರ ಮಾತು ಇವೆಲ್ಲ ಕನ್ನಡವೇ. ಮನೆಮಾತು ಕನ್ನಡವಲ್ಲದ ನಿಮಗೆ ಕನ್ನಡದ ಮೇಲಿರುವ ಅನಿಸು/ಭಾವನೆ ನಮಗಿಂತ ಬೇರೆ/ಭಿನ್ನವಾಗಿ ಇದ್ದೇ ಇರುವುದು. ಈ ನೆಲದಲ್ಲಿ ಇದ್ದೀವಿ ಅಂತ ನೀವು ಕನ್ನಡ ಕಲಿತಿರ ಬಹುದು. ಒಂದು ವೇಳೆ ನೀವು ಡೆಲ್ಲಿಯಲ್ಲಿದ್ದರೆ ಮೇಲು ಬಿದ್ದ ಕನ್ನಡ ಕಲಿಯುತ್ತಿದ್ರ?

ಆ ನೀತಿ, ಕನ್ನಡ ಮನೆಮಾತಲ್ಲದ ಎಲ್ಲರಿಗೂ ಸರಿಯೇ, ಏಕಂದರೆ ಅವರಿಗೆ pratical ಆಗಿ ಕನ್ನಡ ಮಾತಾಡೋದು ಹೀಗೆ, ಅವರಿಗೆ ದಿಟವಾಗಲೂ ಕನ್ನಡ ಕಲಿಯಕ್ಕೆ ಹುರುಪಿದ್ರೆ ನಮ್ಮ ಬೆಂಗಳೂರು ಹಿಂಗೆ ಆಗುತ್ತಿತ್ತಾ?

೫)

ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ.
ಅದನ್ನು ಎಷ್ಟು ಮಂದಿ ಕನ್ನಡಪ್ರೇಮಿಗಳು ಅರ್ಥ ಮಾಡಿಕೊಳ್ಳಬಲ್ಲರು

ಅಯ್ಯಾ!! ತಮಗೆ ತಮ್ಮ ತಾಯ್ನುಡಿಯೇ ಸರಿಯಾಗಿ ಬರಲ್ಲ. ನೀವು ನಮ್ಮ ಅಂಡಯ್ಯನ ಅಚ್ಚ(ಅಚ್ಹ ಅಲ್ಲ Smiling)ಕನ್ನಡದ "ಕಬ್ಬಿಗರ ಕಾವ/ಸೊಗಸಿನ ಸುಗ್ಗಿ" ಬಗ್ಗೆ ಮಾತಾಡ್ತೀರ? ಹೀಗೆ ಹೇಳ್ತಾ ಹೋದ್ರೆ ಕರ್ನಾಡಿನಲ್ಲಿ ಏಸು ಮಂದಿ ಕವಿರಾಜಮಾರ್ಗ ತಿಳಿಯುವುದು, ಕುವೆಂಪು ರಾಮಾಯಣದರ್ಶನಂ ಸಲೀಸಾಗಿ ತಲೆಗಿಳಿಯುವುದು, ಇನ್ನು ರನ್ನ, ಪಂಪ ಇವರದು?

ಅಂಡಯ್ಯನ "ಕಬ್ಬಿಗರ ಕಾವ"ದ ಮೇಲುತನ ನಿಮಗೆ ತಿಳಿಯಲ್ಲ. ಒಮ್ಮೆ ಅದನ್ನು ಕಲೆ ಹಾಕಿರುವವರ ಮುನ್ನುಡಿ ಓದಿರಿ. ಅದೊಂದು ಕನ್ನಡ ಕಬ್ಬಗಳಲ್ಲಿ ಮೇಲ್ಮಣಿ!! ಇನ್ನು ಇದು ತಿಳಿಯಲ್ಲ, ಯಾಕೆ ನಮಗೆ ಅದನ್ನು ತಿಳಿಯುವ ತಕ್ಕುಮೆ ಇಲ್ಲ. ಅದಕ್ಕೆ ಕನ್ನಡ ಕಲಿಯಬೇಕು. ನಿಮಗೆ ಹುಟ್ಟುತ್ತಾ "ಕಾಳಿದಾಸ, ರಾಘವಾಂಕ"ರ ನೆಗಳ್ಚುಗಳು ತಿಳಿದುಹೋದವೇ? ಅದಕ್ಕಾಗಿ ನೀವು ಏನನ್ನು ಕಲಿಯಲಿಲ್ಲವೇ, ಹೇಳಿಸಿಕೊಂಡಿಲ್ಲವೇ?

ಇದೆಂತ ತರ್ಕ? ಅಂಡಯ್ಯನ ಮೆಚ್ಚುವ ನಮಗೆ ಹಿಡಿಸುವುದು. ತಿಳಿಯುವುದು, ತಿಳಿಯದಿದ್ದರೆ ನಾವು ಕೇಳಿ ತಿಳಿದುಕೊಳ್ಳುವುವೆ. ನಮ್ಮ ಕನ್ನಡದ ಒಂದು ಮೇರು-ಕಬ್ಬದ ಬಗ್ಗೆ ಹೀಗೆ ಹಗೂರವಾದ ಮಾತು ತಕ್ಕುದಲ್ಲ!!

ಇನ್ಹು ಮಿಕ್ಕ ಅಚ್ಚಗನ್ನಡ ಕಬ್ಬಗಳು, ವೈಬವ ಒಂದು ಪಟ್ಟಿಕೊಟ್ಟಿದ್ದಾರೆ. ಕೊಳಂಬೆ ಪುಟ್ಟಣ್ಣಗೌಡರ ಬಗ್ಗೆ ಸುನಿಲ ಬರಹಗಳನ್ನು ಬರೆದಿದ್ದಾನೆ. ಇವೆಲ್ಲ ಓದಿರುವಿರೋ? ಅಚ್ಚ-ಕನ್ನಡ ಕಬ್ಬರ ತಲೆಮಾರುಗಳ ಬಗ್ಗೆ
"ಕನ್ನಡ ಸಾಹಿತ್ಯದ ಗೆಜ್ಜೆ ನಾದ" ಎಂಬ ಹೊತ್ತಗೆಯಲ್ಲಿ ಬಿಡಿಸಿ ಬಿಡಿಸಿ ಒಂದು ಪಂಗಡವೇ ಇದೆ. ನಿಮಗೆ ಇವೆಲ್ಲ ತಿಳಿದಿಲ್ಲ. ಏಕೆಂದರೆ ಅಚ್ಚ-ಕನ್ನಡದ ಕಬ್ಬ ಅಂಡಯ್ಯನ "ಕಬ್ಬಿಗರ ಕಾವನ್" ಇದೊಂದೇ ಎಂಬ ಅರಯಮಿಕೆ/ignorance/ಅಜ್ಞಾನದಿಂದಲೇ ಮಾತಾಡಿ, ಅದೇ ಕೊನೆ ಎಂದು ಐಬು/ಅನುಮಾನ ತೋರಿಸಿದ್ದೀರಿ.

೬)
Smiling

ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?

ಇದಕ್ಕೆ ಕನ್ನಡದ ಮೊದಲ ರಾಷ್ಟ್ರಕವಿ ಯಾರು? ಆ ಬಿರುದನ್ನು ಯಾರು ಮೊದಲು ಕೊಟ್ಟರು ಅಂತ ನೋಡಿರಿ?

೭)

ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ. ಉದಾಹರಣೆಗಾಗಿ: ಒಂದು ಪ್ರದೇಶದ ಜನರೆಲ್ಲರ ಉದ್ಯೋಗ, leisure ಗಳೆಲ್ಲವೂ ಯಾವುದಾದರೂ ಒಂದೇ ಚಟುವಟಿಕೆ (ಉದಾ: ಕೃಷಿ ಎಂದುಕೊಳ್ಳೋಣ) ಗೆ ಸೀಮಿತವಾಗಿದ್ದರೆ, ಅವರ ಭಾಷೆಯಲ್ಲಿ ಕೃಷಿಸಂಬಂಧ ಬಿಟ್ಟು ಬೇರೆ ಪದಗಳು ಸಿಗುವುದು ಕಷ್ಟ. GCಯವರೆಂದಂತೆ Englishನ ಅದ್ಭುತ ಬೆಳವಣಿಗೆ ಇದಕ್ಕೆ ಒಳ್ಳೆಯ ಉದಾಹರಣೆ.

ನೋಡಿ ಮೇಲಿನ ಆರು ಕೊರತೆಗಳು ನಿಮ್ಮ ಈ ಮಾತು ಲೆಕ್ಕಕ್ಕೆ ಬಾರದಂತೆ ಮಾಡುವುದು. ಕನ್ನಡದಲ್ಲಿ ಒರೆಗಳು ಇದೆಯಲ್ಲ. ತಮಗೆ ಗೊತ್ತಿಲ್ಲದಿದ್ದರೆ ಅದು ತಮ್ಮ ಅರಯಮಿಕೆ.

ನೀವು ಬೇಸರಪಟ್ಟುಕೊಂಡರೆ ಅದು ನಮ್ಮ ಹೊಣೆಯಲ್ಲ. ನೀವು ನಿಮ್ಮ ತಾಯ್ನುಡಿಯಲ್ಲದ, ನಮ್ಮ ತಾಯ್ನುಡಿಯಾದ ಕನ್ನಡದ ಬಗ್ಗೆ ಸರಿಯಾದ ಅರಿವಿಲ್ಲದೇ ಏನೇನೋ ಮಾತಾಡಿದ್ದು ನಮಗೆ ಬೇಸರ ತಂದಿದೆ.
ಅದೂ ಅಲ್ಲದೇ ನಮ್ಮ ಹೆಮ್ಮೆಯ ಅಂಡಯ್ಯನ "ಕಬ್ಬಿಗರ ಕಾವನ್" ಅನ್ನೋ ಕನ್ನಡ ಕಬ್ಬದ ಬಗ್ಗೆ, ಅದರಲ್ಲೂ ಅಚ್ಚ-ಕನ್ನಡ(ಅಚ್ಹ ಅಲ್ಲ ಅಣ್ಣ)ದ ಕಬ್ಬಗಳ ಬಗ್ಗೆ ಹಗೂರವಾಗಿ, ತಕ್ಕದಲ್ಲದ ಮಾತು ಹೇಳಿದ್ದೀರಿ. ಇದು ಕೂಡ ಸರಿಯಿಲ್ಲ/ಆಕ್ಷೇಪಾರ್ಹ.

ನೀವು ಇದಕ್ಕೆ ಸಟೆದುಕೊಂಡು ಮಾತನ್ನು ಎಲ್ಲೆಲ್ಲಿಗೋ ಒಯ್ದರೆ ಅದಕ್ಕೆ ನಾವು ಮರುನುಡಿಯಲ್ಲ!! ನಿಮ್ಮ ಈ ಬರಹ ಬಲು ಟೊಳ್ಳು ಮಾತು ಅನ್ನಿಸಿದೆ!! ಅದಕ್ಕೆ ಓಸುಗರ ಹೇಳಾಗಿದೆ.

ನಿಮ್ಮ ಬರಹ ನನಗೆ ಹಿಡಿಸಲಿಲ್ಲ. ನನ್ನ ಅನಿಸು "ಇದರಲ್ಲಿ ಬರೀ ಟೊಳ್ಳು ಮಾತಿದೆ ಹೊರತು, ಯಾವ ಆಳದ ಅರಿವು ಕೊಂಚವೂ ಇಲ್ಲ."
======================================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 28, 2007 - 11:15pm — mahesha

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

mahesha's picture

"ಇಲ್ಲಿ ಹೆಚ್ಚಿಗೆ ಬರೆಯಬೇಕಾಗಿಲ್ಲ."

ಅಂತ ಹೇಳಿ, ಈಟೊಂದು ಬರೆದಿದ್ದೀನಿ!! Smiling ನನಗೇ ನಗೆ ಬತ್ತಾದೆ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 29, 2007 - 12:27am — Aram

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

Aram's picture

ವೈಭವ್ ಅವರೇ:

ತಮ್ಮ ಪ್ರತಿಕ್ರಿಯೆ, ಹಾಗೂ ಉಪಯುಕ್ತ ಮಾಹಿತಿಗಾಗಿ ನನ್ನಿಗಳು.

<>

ಮಹೇಶ್ ರವರೇ:

ತಮ್ಮ ಕಟುವಾದ, ಸಾಕಷ್ಟು ಉದ್ದವಾದ ಪ್ರತಿಕ್ರಿಯೆಗೆ, ಅಷ್ಟೆಲ್ಲ ಬರೆಯುವ ಕಷ್ಟ ತೆಗೆದುಕೊಂಡದ್ದಕ್ಕಾಗಿ ಬಹಳ, ಬಹಳ ನನ್ನಿಗಳು.

ಟೊಳ್ಳುಗಟ್ಟಿಎನ್ನುವಲ್ಲೂ ಟೊಳ್ಳೇ ಮೊದಲು.

ಟೊಳ್ಳು ಇರುವದರಿಂದ ಮಾತ್ರ ಗಟ್ಟಿಗೆ ತನ್ನ ಮಹತ್ತು ಸಿಗುತ್ತದೆ ಹಾಗೂ ತಮ್ಮಂತಹವರಿಗೆ ಟೊಳ್ಳನ್ನು expose ಮಾಡಿ ನಗುವ, ನಗಿಸುವ ಅವಕಾಶ ಸಿಗುತ್ತದೆ. ಅಷ್ಟರಮಟ್ಟಿಗಾದರೂ ನನ್ನ ಸೇವೆಯಾಗಿದೆ ಎಂಬುದೇ ಸಮಾಧಾನ.

ನನ್ನ ನಂಬಿಕೆಗಳು, ಅಭಿಪ್ರಾಯಗಳು ಪೂರಾ ಗಟ್ಟಿ, ನಾನು ಹೇಳಿದುದೇ ಸರಿ, ಎನ್ನುವ ಭ್ರಮೆ ನನಗಿಲ್ಲ -- ಈ ಸಂಪದದಲ್ಲಿ ನಾನು ಭಾಗವಹಿಸುತ್ತಿರುವ ಕಾರಣವೇ ವಿಚಾರವಿನಿಮಯ ಹಾಗೂ ಸಾಧ್ಯವಾದಲ್ಲಿ ನನ್ನ ಗ್ರಹಿಕೆಗಳಲ್ಲಿ ತಿದ್ದುಪಡಿ.

ಇಂತಹ ಟೊಳ್ಳಿಗೇ ತಾವು ಇಷ್ಟೊಂದು ಬರೆದಿರುವುದನ್ನು ನೋಡಿದರೆ, ನಾನು ಗಟ್ಟಿಯಾಗಿ ಆದರೆ ತಮ್ಮ ಅಭಿಪ್ರಾಯಗಳಿಗೆ ಬದ್ಧವಿರುದ್ಧವಾಗಿ ಬರೆದಿದ್ದರೆ, ಎಷ್ಟೊಂದು ಬರೆಯುತ್ತಿದ್ದಿರೋ ಏನೋ ! ಕನ್ನಡ ಬರವಣಿಗೆಯಲ್ಲಿ, ನಂಬಿಕೆಗಳನ್ನು ಪ್ರಕಟಿಸುವುದರಲ್ಲಿ, ಹಾಗೂ ಯಾವುದೇ ವಿಷಯದ ಮೇಲೆ ಪಾಂಡಿತ್ಯವನ್ನು ಸಂಪಾದಿಸುವಲ್ಲಿ/analyze ಮಾಡುವಲ್ಲಿ ನಾನು ಇನ್ನೂ ಅಂಬೆಗಾಲಿಡುತ್ತಿರುವವನು ಕೇವಲ ಕೆಲವೇ ವಾರಗಳಷ್ಟು ಚಿಕ್ಕವನು.

ತಾವು ಬರೆದ್ದಿದ್ದರಲ್ಲಿ ನನಗೆ ತಿಳಿಯದ ಬಹಳಷ್ತು ವಿಷಯಗಳಿವೆ, ಅವುಗಳನ್ನು ನಿಧಾನವಾಗಿ ತಮ್ಮಲ್ಲಿ clarify ಮಾಡಲು ಅಪ್ಪಣೆ ಕೋರುತ್ತೇನೆ.

ತಮ್ಮ, ನಮ್ಮೆಲ್ಲರ ಹೆಮ್ಮೆಯ ಆಂಡಯ್ಯನ ಹೆಸರು ತಮ್ಮ ಪ್ರತಿಕ್ರಿಯೆಯಲ್ಲಿ ಮೂರುಬಾರಿ ಅಂಡಯ್ಯ ಎಂದು ಬಂದಿರುವುದು ಕೇವಲ ಮುದ್ರಾರಾಕ್ಷಸನ ಹಾವಳಿ ಎಂದು ತಿಳಿಯುತ್ತೇನೆ - ನಾನು Accha ವನ್ನು ಅಚ್ಹ ಎಂದು ಟಂಕಿಸಿದಂತೆ.

ಅಥವಾ ಇದು ನಿಜವಾಗಿಯೂ ಅಂಡಯ್ಯ ಎಂಬುದೇ ಸರಿಯೋ?

ನನ್ನ ಒಂದು ಗಟ್ಟಿಯಾದ ನಂಬಿಕೆ ಎಂದರೆ ನಮ್ಮನ್ನು, ನಮ್ಮ ಕ್ರಿಯೆಗಳನ್ನು ಖಂಡಿಸಿ ತೆಗಳುವವರೇ ನಮ್ಮ ನಿಜವಾದ ಹಿತೈಷಿ ಮಿತ್ರರು.

-- ಆರಾಮ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 29, 2007 - 1:51am — mahesha

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

mahesha's picture

ನೀವು ಹೇಳಿದ್ದರಲ್ಲಿ ಹೆಚ್ಚಿನವು ಈ ಸಂಗತಿಗೆ ಯಾವ ಕೊಡುಗೆ ನೀಡಲ್ಲ. ಅದಕ್ಕೆ ಅವನ್ನು ಕೆದಕಿದರೇ ಎಲ್ಲೆಲ್ಲೋ ಮಾತು ಹೋಗುವುದು.

ನನ್ನ ಒಂದು ಗಟ್ಟಿಯಾದ ನಂಬಿಕೆ ಎಂದರೆ ನಮ್ಮನ್ನು, ನಮ್ಮ ಕ್ರಿಯೆಗಳನ್ನು ಖಂಡಿಸಿ ತೆಗಳುವವರೇ ನಮ್ಮ ನಿಜವಾದ ಹಿತೈಷಿ ಮಿತ್ರರು.

ಇಲ್ಲಿ ಯಾರೂ ( ನಾನು+ವೈಬವ) ತೆಗಳಿಲ್ಲ.! Smiling ಆದರೆ ಖಂಡನೆ ಇದೆ, ಅದಕ್ಕೆ ಓಸುಗರಗಳು ಹೇಳಾಗಿದೆ.

ಆಂಡಯ್ಯ/ಅಂಡಯ್ಯ ಹೆಸರು ಬಗ್ಗೆ ಅರಿಮೆಗೆ -> http://dli.iiit.ac.in/cgi-bin/Browse/scripts/use_scripts/advnew/aui/book... ಹೊತ್ತಗೆಯಲ್ಲಿ ಪುಟ ೧೯/೨೦. DLI ಅಲ್ಲಿ 23/24.

ಗಮನಿಸಿರಿ ನಾನು "ಆಂಡಯ್ಯ" ಇದು ತಪ್ಪು ಎಂದಿಲ್ಲ!! Smiling

"ಕೇವಲ ಮುದ್ರಾರಾಕ್ಷಸನ ಹಾವಳಿ ಎಂದು ತಿಳಿಯುತ್ತೇನೆ "

ಇಲ್ಲಿ "ಮುದ್ರಾರಾಕ್ಷಸ"ದ ಒತ್ತು ಬರೀ ಸಂಸ್ಕೃತ ಓದಿದವರಿಗೆ ಅರಿಯುವುದು. ಇದೂ ಕೂಡ ಒಂದು ಬಗೆಯ sanskritized ಕನ್ನಡ. ಮಾದರಿ ಕೊಟ್ಟರೂ, ಹೋಲಿಕೆ ಕೊಟ್ಟರೂ, ಇಲ್ಲವೇ ಒರೆಗಳ ಕೂಟೇ ಆಟವಾಡಿದರೂ ಅದು ಸಂಸ್ಕೃತಕ್ಕೆ ಒಯ್ಯಬೇಕು.
ಇಲ್ವೇ ನಿಮಗೆ ’ಮುದ್ರಾರಾಕ್ಷಸ’ ಏನೆಂದು ಗೊತ್ತಿಲ್ಲದೇ, ಯಾರೋ ಹೇಳಿದನ್ನ ಇಲ್ಲಿ ಹೇಳಿರುವಿರಿ.!!

ಇದಕ್ಕೆ ಇನ್ನು ಕೆಲವು ಮಾದರಿಗಳು ಕನ್ನಡದಲ್ಲಿ,
=>"ಆಹಾ ಕಾಳಿದಾಸನಂತಹ ಬರಹ"( ಅಂದರೆ ಕಾಳಿದಾಸನೆಂಬವನು ಮೇಲ್ಮಟ್ಟದ ಕಬ್ಬಿಗ, ಆದರೆ ಅವನು ಸಂಸ್ಕೃತದ ಕಬ್ಬಿಗ ). ಗಮನಿಸಿರಿ, ನಾವು ಹೆಚ್ಚೆಚ್ಚು ಸಂಸ್ಕೃತದ ಕಬ್ಬಗಳ ಹೆಸರನ್ನು, ಸಂಸ್ಕೃತದ ಕಬ್ಬಿಗ ಹೆಸರನ್ನು ಹೇಳಿ ಸಂಸ್ಕೃತಬಲ್ಲೆವಂತು ತೋರಿಸಿಕೊಳ್ಳೋದು!

ತಮ್ಮ ಕಟುವಾದ, ಸಾಕಷ್ಟು ಉದ್ದವಾದ ಪ್ರತಿಕ್ರಿಯೆಗೆ, ಅಷ್ಟೆಲ್ಲ ಬರೆಯುವ ಕಷ್ಟ ತೆಗೆದುಕೊಂಡದ್ದಕ್ಕಾಗಿ ಬಹಳ, ಬಹಳ ನನ್ನಿಗಳು.

ಅಲ್ಲಿ ಕಟು ಏನು? ನಾನು ನೇರವಾಗಿ ಹೇಳಿದ್ದೀನಿ! ನನಗೆ ಕಸ್ಟ ಆಯಿತು ಎಂದು ನಿಮಗೆ ಹೇಗೆ ತಿಳಿಯಿತು? Smiling
ಒಂದು ಗೊತ್ತು "ಕಷ್ಟ ತೆಗೆದುಕೋ" ಎಂದು ಹೀಗೆ ಹೇಳೋದು ಕನ್ನಡದೋರಲ್ಲ, ಹಿಂದಿಯವರು.( ಇದು ನಿಮಗೆ ಗೊತ್ತಿದ ಅಂತ ಅಂದುಕೊಳ್ಳೋಣ )

ಬರೀ ಸಂಸ್ಕೃತದ ಪದಗಳನ್ನು ಬಳಸಿದಕ್ಕೆ ಅದರಲ್ಲಿ ಗಟ್ಟಿತನ ಬರಲ್ಲ. ನನಗೆ ಅನ್ನಿಸಿದ್ದು ನೀವು ಏಸೋ ಸಂಸ್ಕೃತ ಪದಗಳನ್ನ ಬರೀ ಸಿಂಗಾರಕ್ಕೆ ಬಳಸಿದ್ದೀರಿ ಅಂತ ನನ್ನ ಅನಿಸಿಕೆ. ಈ ಮಾತು ನಿಮ್ಮ

ತಾವು ಬರೆದ್ದಿದ್ದರಲ್ಲಿ ನನಗೆ ತಿಳಿಯದ ಬಹಳಷ್ತು ವಿಷಯಗಳಿವೆ, ಅವುಗಳನ್ನು ನಿಧಾನವಾಗಿ ತಮ್ಮಲ್ಲಿ clarify ಮಾಡಲು ಅಪ್ಪಣೆ ಕೋರುತ್ತೇನೆ

ಈ ಮಾತಿನ ಹಿಂದೆ ದಿಟವಾದ ಅನಿಸಿದೆ ಎಂದು ಸಲಿಗೆಯಿಂದ ಹೇಳಿದ್ದು. ಇಲ್ಲಿ ಅಪ್ಪಣೆಯನ್ನು ಕೇಳವುದು ಬೇಕಿರಲಿಲ್ಲ.

ಕನ್ನಡ ಬರವಣಿಗೆಯಲ್ಲಿ, ನಂಬಿಕೆಗಳನ್ನು ಪ್ರಕಟಿಸುವುದರಲ್ಲಿ, ಹಾಗೂ ಯಾವುದೇ ವಿಷಯದ ಮೇಲೆ ಪಾಂಡಿತ್ಯವನ್ನು ಸಂಪಾದಿಸುವಲ್ಲಿ/analyze ಮಾಡುವಲ್ಲಿ ನಾನು ಇನ್ನೂ ಅಂಬೆಗಾಲಿಡುತ್ತಿರುವವನು ಕೇವಲ ಕೆಲವೇ ವಾರಗಳಷ್ಟು ಚಿಕ್ಕವನು.

ಒಹೋ, ಹಾಗೋ, ಸರಿ, ಹಾಗಾದರೆ ಇಂತಹ ಇಕ್ಕಟಿನ ಸಂಗತಿಗಳ ಬಗ್ಗೆ ತುಸು ಉಂಕು ನಡೆಸಿ ಬರೆಯಬೇಕು. ಸುಮ್ನೆ ತೇಲಿಸಿ ಬಿಡಲು ಇವೆಲ್ಲ ಹಗೂರವಾದವಲ್ಲ. ನಮ್ಮಂತೆ ಹಲವರ ತಾಯ್ನುಡಿ ಮಾತು. ನಮ್ಮ ತಾಯ್ನುಡಿಯ ಯಾವ ಸಂಗತಿಯೂ ಹಗೂರವಲ್ಲ.

ಹಿಡಿತಕ್ಕೆ ಬರೆಯಲು ಬೇಕಾದ ಅನಿತ್ತು ಸರಕಿದೆ.

ನಾನು ನಿಮ್ಮ ಮೇಲೆ ದಾಳಿಯಿಟ್ಟಂತೆ ಎರಗಿದ್ದೇನೆ ಎಂದು ಅನ್ನಿಸಿದರೆ, ಹಾಗೆ ಅಂದುಕೊಳ್ಳಬೇಡಿರಿ. ನನಗೆ ಸುಮ್ಮಸುಮ್ಮನೇ ಟೊಳ್ಳುಟೊಳ್ಳಾಗಿ "ಹೀಗೆ ಕನ್ನಡದಲ್ಲಿ ಒರೆಗಳೇ ಇಲ್ಲ, ಕನ್ನಡ practical ಅಲ್ಲ. ಅದಕ್ಕೆ ನಮ್ಮ ಕನ್ನಡದ ’ಸಮೃದ್ಧಿ’ಗೆ, ಬೇರೆ ಯಾವುದೋ ನುಡಿಯ ಬಳಿ ತಿರುಪೆ ಎತ್ತಬೇಕು, ಅದರಿಂದ ಒರೆ ಎರವಲು ಪಡೆಯಬೇಕು" ಅನ್ನೋದು, ನಮ್ಮ ಗಟ್ಟಿ ಮತ್ತು ಒರೆಸಿರಿ, ಕಬ್ಬಸಿರಿಯಿಂದ ತುಂಬಿ ತುಳುಕುತ್ತಿರುವ ಕನ್ನಡದ ಕಳೆಗುಂದಿಸುವ ಕೆಲಸವೆನಿಸುವುದು. ಮೊದಲೇ ಹೇಳಿದಂತೆ ಇದು ನಮ್ಮ ತಾಯ್ನುಡಿಯ ಹೆಮ್ಮೆಯ ಸಂಗತಿ, ಇದು ನಯ/ಸೂಕ್ಷ.

ಮತ್ತೆ ಹೇಳುವೆನು, ನಾವು ನಿಮ್ಮನ್ನು ತೆಗಳಿಲ್ಲ!
ಆದರೆ ನೀವು ಅಂಡಯ್ಯನ ’ಕಬ್ಬಿಗರ ಕಾವ’ವನ್ನು ಮತ್ತು ಬೇರೆ ಅಚ್ಚ-ಕನ್ನಡ ಕಬ್ಬಗಳನ್ನು ಹಗೂರವಾಗಿ ಕಂಡು, ಕೀಳುಗಾಣಿಸಿದಂತೆ ಮಾಡಿದ್ದೀರಿ ಎಂದು ನಮಗೆ ಅನ್ನಿಸಿದಂತೂ ದಿಟ.!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಕಂನಡ ಸಂಗಗಳು ಯಾಕೆ ಇಷ್ಟೊಂದು?
  • ಭಾಷೆ ಒಂದು means of communication ಅಷ್ಟೆ
  • ಕನ್ನಡದ ಚರ್ಚೆ
  • ಕನ್ನಡ ಎಲ್ಲಿದೆ... ?
Syndicate content

ಲೇಖಕರು

Aram's picture

ಪರಿಚಯ

I am a simple person with tastes in hindustani classical music, reading Kannada and English books, current affairs, politics, etc.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator