"ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ?
ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ?
ನಾವು-ನಮ್ಮದು ಎನ್ನುವ ಭಾವನೆ ಸ್ವಲ್ಪವೂ ಇರಬೇಡವೆ?
Harry Potter ಕೊಳ್ಳಲು ರಾತ್ರಿಯಿಡೀ ಜನ ಕ್ಯೂ ನಿಂತಿದ್ದ್ರಂತೆ.
ನಾವು ಚಂದಮಾಮ ಓದ್ಲಿಕ್ಕೆ -- ಪ್ರತೀ ಸಂಚಿಕೆ ಯಾವಾಗ ಬರತದ ಅಂತ ಕಾಯ್ತಿದ್ವಿ!!!
ನಾವು "ಹನುಮಂತ ಹಾರಿದ್ದು", "ವಾನರರು ಸೇತುವೆ ಕಟ್ಟಿದ್ದು", "ವಿಕ್ರಮ-ಬೇತಾಳ", ತೆನಾಲಿ ರಾಮ","ಅಕ್ಬರ-ಬೀರಬಲ್ಲ","ಏಕಲವ್ಯನ ಬಿಲ್ವಿದ್ಯೆ",ಇತ್ಯಾದಿ ಕಥೆ ಹೇಳಿದ್ರ ಸುಳ್ಳು ಎಂದು ಹೇಳೋ ಜನ ಆ Harry Potterನಲ್ಲಿ ಯಾವ ಸತ್ಯವನ್ನು ಕಾಣ್ತಾರೋ?

- Login or register to post comments
- 570 hits
- Email this forum





RSS:
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ನೀವು ಬರೆದಿರುವುದರಲ್ಲಿ ಸಾಕಷ್ಟು presumptions ಇವೆ. ಹ್ಯಾರಿ ಪಾಟರ್ ಪುಸ್ತಕಗಳನ್ನ "ಪ್ರೆಸ್ಟೀಜ್"ಗಾಗಿ ಜನ ತಗೊಳ್ತಾರೆ ಅಂತ ನಿಮಗೆ ಯಾರು ಹೇಳಿದ್ದು?
ಎರಡನೆಯದಾಗಿ ಹ್ಯಾರಿ ಪಾಟರ್ ಪುಸ್ತಕ ಓದಿದವರು ಚಂದಮಾಮ, ಅಮರಚಿತ್ರ ಕಥೆ ತೆಗೆದುಕೊಳ್ಳುತ್ತಿಲ್ಲ ಎಂದು ನೀವೇ ನಿರ್ಧಾರಕ್ಕೆ ಹೇಗೆ ಬಂದಿರಿ?
ಮೂರನೆಯದಾಗಿ ಚಂದಮಾಮ ಪ್ರತಿ ತಿಂಗಳು ಬರುತ್ತದೆ, ಹ್ಯಾರಿ ಪಾಟರ್ ಪುಸ್ತಕ ೭ ಕಂತು ಮಾತ್ರ ಹೊರಬಂದದ್ದು ಹಾಗೂ ಪ್ರತಿ ಸಾರಿ ಹೊರಬರುವ ಮುನ್ನ ಅದಕ್ಕೆ ಮೀಡಿಯದಿಂದ ಹಾಗು ಓದುಗರ ಕುತೂಹಲದಿಂದಾಗಿ ಸಾಕಷ್ಟು "ಎದುರು ನೋಡುವ" ವಾತಾವರಣ ನಿರ್ಮಾಣವಾಗಿತ್ತು ಎನ್ನುವುದನ್ನ ಮರೆಯದಿರಿ.
ಇದ್ಯಾಕೆ ಬಂತು ಇಲ್ಲಿ?
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
HPN,
ಮಾತಿಗೆ ನನ್ನ ದನಿ ಸೇರಿಸುವೆನು.
ಬಾಲಮಂಗಳ ಓದುವುದೂ ಇತ್ತು, ಜೊತೆಗೆ spider man ನೋಡೋದು ಇತ್ತು.
ಸನಿವಾರ "ಸತ್ಯವಾನ್ ಸಾವಿತ್ತಿ", "ಮೀರಾ ಮಾಧವ ರಾಘವ" ನೋಡ್ದೆ( ಸಾಕ್ಷಿಗೆ ಜೊತೆಗೆ ಸಂಗನ ಇದ್ರು
)
ಬಾನುವಾರ ರಂಗಶಂಕರದಲ್ಲಿ "ಸಂಕ್ರಮಣ" ನಾಟಕ ನೋಡ್ದೆ ( ಸಾಕ್ಷಿಗೆ ಮುರುಳಿ ದೇವರು ಇದ್ರು )
ಇವೊತ್ತು "HARRY POTTER and order of pheonix" ನೋಡ್ದೆ!
ಈ ತಿಂಗಳು ನನಗೆ ಸಿನಿಮ-ಮಹೋತ್ಸವ... ಸಿಕ್ಕಸಿಕ್ಕ ಸಿನಿಮ ನೋಡಿ, ಜಾಗ ಖಾಲಿ ಮಾಡೋಣ ಅಂತ!
ನಮಗೆಲ್ಲ ""ಹನುಮಂತ ಹಾರಿದ್ದು", "ವಾನರರು ಸೇತುವೆ ಕಟ್ಟಿದ್ದು", "ವಿಕ್ರಮ-ಬೇತಾಳ", ತೆನಾಲಿ ರಾಮ","ಅಕ್ಬರ-ಬೀರಬಲ್ಲ","ಏಕಲವ್ಯನ ಬಿಲ್ವಿದ್ಯೆ" ಈ ಎಲ್ಲ ಕತೆಗಳು ಗೊತ್ತಲ್ಲ. Harry Potter ಅಲ್ಲಿ ಏನಿದೆ, ಅಂತ ನಮ್ಮಜ್ಜಿ ಹೇಳಲ್ವಲ್ಲ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಹಾಗೇ, ಹನುಮಂತನ ಕಥೆ ಓದಿದವರು ಹ್ಯಾರಿ ಪಾಟರ್ ಓದಲ್ಲ ಅಂತಲೂ, ಹ್ಯಾರಿಪಾಟರ್ ಓದುವವರಿಗೆ ಹನುಮಂತ ಹಾರಿದ್ದ ಕಥೆ ಗೊತ್ತಿಲ್ಲ ಎಂತಲೂ ಇಲ್ವಲ್ರಿ?
ಹ್ಯಾರಿ ಪಾಟರ್ ಆಗಲಿ, ಹನುಮಂತನ ಕಥೆ ಆಗಲಿ, ಒಟ್ಟಿನಲ್ಲಿ ಓದಿ ಕೆಟ್ಟವರಿಲ್ಲ ಅಂತ ನನ್ನ ಎಣಿಕೆ.
-ಹಂಸಾನಂದಿ
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಇದಕ್ಕೆ ನೀವು ಯಾವ ಸಾಕ್ಷಿನೂ ಕೊಟ್ಟಿಲ್ಲ! ಇದು ಖರೆ ಅಂತ ನಾವು ಹೆಂಗ ನಂಬಬೇಕು?
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಅಯ್ಯೋ ಹೌದಲ್ಲ!!
ಸರಿ ಬಂಗೋಡಿ ಸಾಹೇಬ್ರ ಬನ್ರಿ, ನಾವಿಬ್ರೂ ಹೋಗಿ ಬರೋಣಂತ್ರಲಾ PVRನಾಗಾ!! ರೊಕ್ಕ ನಿಮ್ದು!
ನಾನ್ ಇನ್ನೊಂದು ಸಲ ನೋಡಕ್ಕಾ ರೆಡಿ!! 
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಅದೆನೋ ಅಂತಾರಲ್ಲಾ, "ನಮಾಜ ಮಾಡಕ ಹೋಗಿ ಮಸೀದಿ ಕೊರಳಿಗಿ ಬಿತ್ತಂತ".
ಹೋಗ್ಲಿ ಬಿಡ್ರಿ ಮಹೇಶ, ಯಾವ ಸಾಕ್ಷಿ ಇಲ್ದ ನಿಮ್ಮನ್ನ ನಂಬತೇನಿ.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ನಾನೇ ರೊಕ್ಕ ಹಾಕ್ಕೊಂಡ್ DIE HARD 4.0 ಹೋಗ್ತೀನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಈ ಕೆಳಗಿನ ಎರಡು ಮಾತಗಳು ನನಗೆ ಒಂದು ಹಾಡನ್ನು ನೆನಪಿಸಿತು.
ತಾಯಿಯ ಆಣೆ ಇಟ್ಟರೆ ನ್ಯಾಯ ಮುಗಿತಾ ಇತ್ತಾ ಕಾಲ. ಗೋಣಿ ರೊಕ್ಕ ಕೊಟ್ಟರೂ ಕೂಡ ನ್ಯಾಯ ಬರದೀ ಕಾಲ............
ಆ ಕಾಲ ಅಸಲಿ, ಈ ಕಾಲ ನಕಲಿ, ಆ ಕಾಲ ಅಸಲಿ, ಈ ಕಾಲ ನಕಲಿ. ಅದಲೀ ಬದಲೀ ಆಗೋದ್ರೆ ಕಲ್ಲಿನ ಕೋಳಿ ಕೂಗುತೈತೋ, ಲೋಕಕೆ ಪ್ರಳಯ ಆಗುತೈತೋ.
ನವಿಲೇನೊ ಕುಣಿಬೇಕು, ಕೋಗಿಲೆಯೋ ಹಾಡಬೇಕು.
ಅಪ್ಪಾನೋ ದುಡಿಬೇಕು, ಅವ್ವಾನೋ ಹಡಿಬೇಕು.
ಅದಲೀ ಬದಲೀ ಆಗೋದ್ರೆ ಕಲ್ಲಿನ ಕೋಳಿ ಕೂಗುತೈತೋ, ಲೋಕಕೆ ಪ್ರಳಯ ಆಗುತೈತೋ.
ಇತ್ತೀಚೆಗೆ, ಎಂಥಾ ಪುರಾವೆ ಅಂತ ಒಂದು ಆಡ್ ಕೂಡ ಬರ್ತಾ ಇದೆ.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
phmd - ಪುರಾವೆ ಇಲ್ಲದೆ(p) ಹೇರಳ(h) ಮಾತಾಡುವ(m) ದೊಡ್ಡಮಾನಿಸರು(d)
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಹ್ಯಾರಿಪಾಟರ್ ಸರಣಿಯ ಕೃತಿಗಳು ಲೋಕೋತ್ತರವಾದ ಕೃತಿಗಳೆಂಬ ನಂಬಿಕೆಯೇನೂ ನನಗಿಲ್ಲ. ಈ ಸರಣಿಯ ಒಂದು ಪುಸ್ತಕವನ್ನು ಓದಲು ಪ್ರಯತ್ನಿಸಿ ಸಾಧ್ಯವಾಗದೆ ಸುಮ್ಮನಾದೆ. ಇದಕ್ಕೆ ವಿಶೇಷ ಕಾರಣಗಳೇನೂ ಇಲ್ಲ. ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಕೂಡಾ ನನಗೆ 40 ಪುಟಕ್ಕಿಂತ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಹಾಗೆಂದು ನನಗೆ ಓದಲು ಸಾಧ್ಯವಾಗದ್ದನ್ನೆಲ್ಲಾ ಕೆಟ್ಟ ಕೃತಿಗಳೆಂದು ಹೇಳುವ ಧೈರ್ಯ ನನಗಿಲ್ಲ.
ಆದರೆ ಹ್ಯಾರಿಪಾಟರ್ ಓದುವುದನ್ನು ನೆಗೆಟಿವ್ ಆಗಿ ನೋಡುವುದು ಸರಿಯಲ್ಲ. ಹ್ಯಾರಿಪಾಟರ್ ಸಿನಿಮಾಗಳನ್ನು ನೋಡಿದ್ದೇನೆ. ಅದರ ಮೂಲಕ ನಾನು ಗ್ರಹಿಸಿದಂತೆ ಈ ಕತೆಗಳಿಗೆ ವರ್ತಮಾನದ ಟಚ್ ಇದೆ. ಅಂದರೆ ನಮಗೆ ಈ ಕತೆಗಳ ಜತೆಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಹ್ಯಾರಿ ಪಾಟರ್ ತರಹವೇ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮತ್ತೊಂದು ಸರಣಿ ಲಾರ್ಡ್ ಆಫ್ ದ ರಿಂಗ್ಸ್ ಜತೆಗೆ ಹೋಲಿಸಿ ನೋಡಿದರೆ ಇದು ಅರ್ಥವಾಗುತ್ತದೆ. ಲಾರ್ಡ್ ಆಫ್ ದಿ ರಿಂಗ್ಸ್ ಪ್ರಕಟವಾಗುವ ಹೊತ್ತಿಗೆ ಮಾಂತ್ರಿಕ ಲೋಕದಲ್ಲಿ ಯಕ್ಷರು, ಕಿನ್ನರರು, ಕಿಂಪುರುಷರೆಲ್ಲಾ ಇದ್ದರು. ಅಂದರೆ ಆ ಕಾಲದ ಮಕ್ಕಳಿಗೂ ದೊಡ್ಡವರಿಗೂ ಈ ಲೋಕದ ಪರಿಚಯವಿತ್ತು.
ವರ್ತಮಾನದ ತಲೆಮಾರಿಗೆ ಈ ಯಕ್ಷ, ಕಿನ್ನರ, ಕಿಂಪುರುಷರ ಲೋಕದ ಪರಿಚಯವಿಲ್ಲ. ನಮಗೆಲ್ಲಾ ಈ ಲೋಕ ಪರಿಚಯವಾದದ್ದಕ್ಕೆ ಸಾಮಾಜಿಕ ಕಾರಣಗಳೂ ಇದ್ದವು. ಚಂದಮಾಮ ಮತ್ತು ಅದರಲ್ಲಿ ಬರುವ ಕಥೆಗಳು ನಮಗಿಷ್ಟವಾಗುತ್ತಿದುದು ಅದಕ್ಕೆ. ನನ್ನದೇ ಅನುಭವವನ್ನು ಹೇಳುವುದಾದರೆ ನಾನು ಚಂದಮಾಮದ ಮೂಲಕವೇ ಓದಿಗೆ ತೆರೆದುಕೊಂಡೆ. ಆದರೆ ಆಗ ನನಗೆ ನಿಜಕ್ಕೂ ಇಷ್ಟವಾಗುತ್ತಿದ್ದುದು 'ಪುಟಾಣಿ'ಮತ್ತು 'ಬಾಲಮಿತ್ರ'ಗಳಲ್ಲಿ ಬರುತ್ತಿದ್ದ ಕತೆಗಳು. ಏಕೆಂದರೆ ಇವುಗಳ ಜತೆಗೆ ನನಗೆ ರಿಲೇಟ್ ಮಾಡಿಕೊಳ್ಳಬಹುದಿತ್ತು. ಮಾನವನು ಸೃಷ್ಟಿಸಿದ ಮಾನ್ ಸಿಂಗ್ ಹೆಚ್ಚು ಇಷ್ಟವಾಗುತ್ತಿದ್ದ. ಅಂದರೆ ನಮ್ಮ ತಲೆಮಾರಿನ ಹೊತ್ತಿಗೇ ಅಜ್ಜಿಯೋ ಅಜ್ಜನೋ ಸೃಷ್ಟಿಸಿ ಕೊಡುತ್ತಿದ್ದ ಕಿನ್ನರ ಕತೆಗಳ ಲೋಕ ಇಲ್ಲವಾಗಿತ್ತು.
ಈಗಿನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ತಮ್ಮದೇ ಶಾಲೆಯಂತಿರುವ ಶಾಲೆಯಲ್ಲಿ ಮಂತ್ರವಾದ ಕಲಿಯುವ ಹ್ಯಾರಿ ಪಾಟರ್ ಇಷ್ಟವಾದರೆ ಅದನ್ನು ತಪ್ಪೆನ್ನುವುದು ಹೇಗೆ? ಆರ್ಡರ್ ಆಫ್ ಫೀನಿಕ್ಸ್ ನಲ್ಲಿ ಕಾಣಸಿಗುವ ಶಾಲೆಯ ವಾತಾವರಣದಲ್ಲಿ ನಡೆಯುವ 'ರಾಜಕಾರಣ' ನಮ್ಮ ಈಗಿನ ಶಾಲೆಗಳ ರಾಜಕಾರಣವನ್ನು ಎಷ್ಟು ಚೆನ್ನಾಗಿ ಹೋಲುತ್ತದೆ. ಅಂದರೆ ವರ್ತಮಾನದ ವಾತಾವರಣದಲ್ಲಿ ಅತಿಶಯವಾದುದನ್ನು ಇಡುವ ಮೂಲಕ ರೌಲಿಂಗ್ ವರ್ತಮಾನದ ತಲೆಮಾರನ್ನು ಗೆದ್ದುಕೊಂಡಿದ್ದಾರೆ ಅನ್ನಿಸುತ್ತದೆ.
ಇನ್ನು ರಾಮಾಯಣ, ಮಹಾಭಾರತ, ಪುರಾಣದಲ್ಲಿ ಸಿಗುವ ಅತಿಶಯದ ಕತೆಗಳೂ ಜನಪ್ರಿಯವಾಗಬಹುದು. ಇವುಗಳನ್ನು ಹ್ಯಾರಿ ಪಾಟರ್ ಪುಸ್ತಕಗಳಂತೆಯೇ ಪ್ಯಾಕ್ ಮಾಡಬೇಕು ಅಷ್ಟೇ. ನಮಗೆ ಅಂದರೆ ಭಾರತೀಯರಿಗೆ ಈ ಕತೆಗಳೆಲ್ಲವೂ ಸಾಮಾನ್ಯ ಜ್ಞಾನದ ಅವಿಭಾಜ್ಯ ಅಂಗ. ಹಿಂದೊಮ್ಮೆ ಅನಂತಮೂರ್ತಿಯವರು ಬರೆದಂತೆ ಭಾರತದಲ್ಲಿ ಯಾರೂ ರಾಮಾಯಣವನ್ನೋ ಮಹಾಭಾರತವನ್ನೋ ಮೊಟ್ಟ ಮೊದಲಬಾರಿಗೆ ಓದುವುದಿಲ್ಲ. ಇದು ನಾವು ಬೆಳೆಯುತ್ತಾ ಬರುವ ವಾತಾವರಣದಲ್ಲಿಯೇ ಈ ಕತೆಗಳನ್ನೋ ಹೇಗೋ ತಿಳಿದುಕೊಂಡುಬಿಟ್ಟಿರುತ್ತೇವೆ. ಈಗ ಆ ವಾತಾವರಣ ಇಲ್ಲದಾಗುತ್ತಿದೆ ಎಂಬುದಂತೂ ನಿಜ. ಅನಂತಮೂರ್ತಿಯವರ ಮಾತುಗಳನ್ನೇ ಎರವಲು ಪಡೆಯುವುದಾದರೆ 'ಇನ್ನು ಮುಂದೆ ಭಾರತದಲ್ಲಿಯೂ ರಾಮಾಯಣ ಮತ್ತು ಮಹಾಭಾರತಗಳನ್ನು ಮೊಟ್ಟ ಮೊದಲಬಾರಿಗೆ ಅದರ ಇಂಗ್ಲಿಷ್ ಆವೃತ್ತಿಯಲ್ಲಿ ಓದಲಾಗುತ್ತದೆ'. ನಮ್ಮ ಚರ್ಚೆ ಹ್ಯಾರಿಪಾಟರ್ ಓದುವುದನ್ನು ನೆಗೆಟಿವ್ ಆಗಿ ನೋಡುವುದಕ್ಕಿಂತ ರಾಮಾಯಣ, ಮಹಾಭಾರತಗಳನ್ನು ಮೊಟ್ಟ ಮೊದಲ ಬಾರಿಗೆ ಓದಬೇಕಾದ ಸಂದರ್ಭವೊಂದು ಎದುರಾಗುತ್ತಿರುವುದರ ಕುರಿತಾಗಿದ್ದರೆ ಚೆನ್ನ ಎನಿಸುತ್ತದೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ನೀವು ನಂಬುತ್ತಿರೋ ಇಲ್ಲವೋ, ಈಗಲೂ ಒಮ್ಮೊಮ್ಮೆ ’ಬಾಲಮಂಗಳ’ ಯಾವುದಾದರೂ ಅಂಗಡಿಯಲ್ಲಿ ಜೋತು ಬಿದ್ದಿರುವದು ಕಂಡರೆ, ಓದುವ ಆಸೆಯಾಗಿ ತಂದು ಓದುತ್ತೇನೆ. ಎಳೆತನದಲ್ಲಿ ನನಗೆ ’ಬಾಲಮಂಗಳ’ ತುಂಬ ಹಿಡಿಸಿತು. ಡಿಂಗ ಮತ್ತು ಶಕ್ತಿಮದ್ದು ಬಲು ಮಜಾ ಓದೋಕೆ.
ಹ್ಯಾರಿ ಪಾಟರ್ ಯಾಕೇ ಮಂದಿಗೆ ಹಿಡಿಸುತ್ತೆ ಅನ್ನೋದಕ್ಕೆ ನಿಮ್ಮ ಮಾತು ಸರಿ.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ನಾನೂ 'ಬಾಲಮಂಗಳ' ತುಂಬಾ ಓದುತ್ತಿದ್ದೆ ಸ್ಕೂಲಿನಲ್ಲಿದ್ದಾಗ. ಬಾಲಮಂಗಳ ಕೊಟ್ಟಾಯಂನಿಂದ ಪ್ರಕಟವಾಗುತ್ತಿತ್ತು. ಈಗ ಬಹುಶಃ ಬೆಂಗಳೂರಿನಿಂದಲೆ ಬರುತ್ತಿರಬಹುದು. ನನ್ನ "ನಾರ್ಥ್ ಇಂಡಿಯಾ" ಸ್ನೇಹಿತರು ಬಾಲಮಂಗಳಕ್ಕಿಂತ ಚಂಪಕ ಇಷ್ಟಪಡುತ್ತಿದ್ದರು. ನಾವುಗಳು ಮಾತ್ರ ಡಿಂಗನಿಗೆ ಏನಾಯ್ತು ಎಂಬೋದನ್ನ ಕಂಡುಹಿಡಿಯೋದಕ್ಕೇ ಬಾಲಮಂಗಳದ ಹೊಸ ಸಂಚಿಕೆಯ ಬರುವಿಕೆಗೆ ಕಾಯುತ್ತಿದ್ವು.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ismail
ನಿಮ್ಮದಿದು ಚೊಕ್ಕವಾದ ಕೆಮೆಂಟು. ಚನ್ನಾಗಿದೆ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಇಸ್ಮಾಯಿಲ್
ಒಂದು ಒಳ್ಳೆಯ ಬರಹ!
ನಿಮ್ಮನ್ನು ಕಾಣದೆ ಕೆಲವು ದಿನಗಳಾಗಿದ್ದುವು.
_________________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಹ್ಯಾರಿ ಪಾಟರ್ ಕಥೆಗಳಲ್ಲಿ ವರ್ತಮಾನತೆಯ ಟಚ್ ಜೊತೆಗೆ ಓದಿಸಿಕೊಂಡು ಹೋಗುವ ಗುಣವಿದೆ. ಇತ್ತೀಚಿನ ಹ್ಯಾರಿ ಪಾಟರ್ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದಿದ್ದೆ. ಟಾಲ್ಕಿನರ ಕೃತಿಗಳಲ್ಲಿರುವ ಡೆಪ್ತ್ ಇದರಲ್ಲಿಲ್ಲ - ಟಾಲ್ಕಿನರ ಕೃತಿಗಳೊಂದಿಗೆ ಹೋಲಿಸಿ ನೋಡುವುದೂ ಸರಿಯಾಗದು ಬಹುಶಃ.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಹ್ಯಾರಿ ಪಾಟರ್ ನಮ್ಮ ಮೀಡಿಯ ಹುಟ್ಟುಹಾಕಿರುವ ಭ್ಹೂತ. ಪುಸ್ತಕದ ಜೊತೆಗೆ ಸಿನೆಮಾ ಕೂಡ ನಮ್ಮನ್ನು ಸೆಳೆಯ ಬಹುದು. ಆದರೆ ನ್ನನ್ನ ಅನಿಸಿಕೆ ಪ್ರಕಾರ ನನ್ನ ಮಗಳಿಗೆ (೩ ವರುಶ) ನಮ್ಮ ಜನಪದದ ಕಥೆಗಳೆ ಇನ್ದಿಗೂ ರೋಮಾಂಚಕ. ನಮ್ಮ ಟೀವೀ ಚಾನಲ್ಗಳು ಹ್ಯ್ಹಾರೀ ಪಾಟರ್ ಗೆ ಕೊಡೊ ಮಹತ್ವ ಕಡಿಮೆ ಮಾಡಿದರೆ ಎಲ್ಲಾ ಸರಿ ಹೋಗತ್ತೆ.
ಉ: "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
ಹ್ಯಾರಿ ಪಾಟರ್ ಖಂಡಿತ ಭೂತವಲ್ಲ. ನಿಮ್ಮ ಮಗಳು ದೊಡ್ಡವಳಾದ ಮೇಲೆ ಹ್ಯಾರಿ ಪಾಟರ್ ಓದ್ತೀನಿ ಅಂದ್ರೆ ಅದನ್ನ ಬಚ್ಚಿಡಬೇಕಾದ್ದಿಲ್ಲ. ಜೊತೆಗೆ ಅಮರಚಿತ್ರಕಥೆ, ಅನುಪಮಾ ನಿರಂಜನರ ದಿನಕ್ಕೊಂದು ಕಥೆ - ಪುಸ್ತಕಗಳನ್ನೂ ತಂದಿಟ್ಟರೆ ಕನ್ನಡ ಇಂಗ್ಲೀಷ್ ಎರಡರಲ್ಲೂ ಓದುವ ಆಸಕ್ತಿ ಬೆಳೆಯುತ್ತದೆ. ಚ್ಯಾನಲ್ಲುಗಳನ್ನ, popular cultureನ್ನ ದೂರುವುದರಿಂದ ಪ್ರಯೋಜನವಿಲ್ಲ.