Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ನಮ್ಮಲ್ಲಿಲ್ಲದ ’ನಮ್ಮದು’

July 30, 2007 - 10:42pm — hamsanandi

ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ. ಮೂಲವಾಗಿ ತಮಿಳಿನಿಂದ ಬಂದರೂ, ಶತಮಾನಗಳಿಂದ ಕನ್ನಡನಾಡಿನಲ್ಲಿರುವುದರಿಂದ ನಮ್ಮ ಮಾತು ಕನ್ನಡಿಗರಿಗೆ ಸ್ವಲ್ಪ ತಮಿಳಿನಂತೆಯೂ, ತಮಿಳಿನವರಿಗಂತೂ ತೀರಾ ಕನ್ನಡದಂತೆಯೂ ತೋರುತ್ತೆ.

ನನಗೆ ತಿಳಿದಂತೆ ಕನ್ನಡದಲ್ಲಿಲ್ಲದ inclusive we ಮತ್ತು exclusive we ನನ್ನ ತಾಯ್ನುಡಿಯಲ್ಲಿದೆ.

ಎಂಗಡೆ, ಎಂಗ್ಳುಕ್ಕು -> ನಮ್ಮ,ನಮಗೆ : ಆದರೆ ನಾನು ಯಾರಿಗೆ ಈ ಮಾತನ್ನು ಹೇಳುತ್ತಿದ್ದೇನೋ ಅವರನ್ನು ಬಿಟ್ಟು ; ಉದಾಹರಣೆಗೆ ಹೇಳುವುದಾದರೆ ಬೇರೆ ಊರಿನವರೊಬ್ಬರೊಡನೆ ನಾನು ಮಾತಾಡುವಾಗ, ನನ್ನ ಊರಿನ ವಿಷಯ ಹೇಳಬೇಕು ಅಂತಿಟ್ಕೊಳ್ಳಿ; ಆವಾಗ ನಾನು ’ಎಂಗಡೆ ಊರು’ -> ನಮ್ಮ ಊರು ಅನ್ನೋ ಬಳಕೆ ಮಾಡ್ತೀನಿ.

ನಂಬ, ನಂಬಡೆ , ನಂಬ್ಳುಕ್ಕು-> ನಮ್ಮ, ನಮಗೆ : ಈವಾಗ, ನಾನು ನಾನು ಯಾರಿಗೆ ಈ ಮಾತನ್ನು ಹೇಳುತ್ತಿದ್ದೇನೋ ಅವರನ್ನೂ ಸೇರಿಸ್ಲೊಂಡು  ಈ ಪದವನ್ನು ಉಪಯೋಗಿಸ್ತೇನೆ. ಉದಾಹರಣೆಗೆ ಪರದೇಶದಲ್ಲಿರುವ ನಾನು, ಮತ್ತು ನನ್ನದೇ ಭಾಷೆಮಾತಾಡುವ ಗೆಳೆಯರೊಬ್ಬರು ಭಾರತದ ಬಗ್ಗೆ ಮಾತಾಡ್ತಿದ್ದೀವಿ ಅಂತಿಟ್ಕೊಳ್ಳಿ - ಆಗ ’ನಂಬ್ಡೆ ದೇಶೊ’ -> ನಮ್ಮ ದೇಶ ಅನ್ನೋ ಮಾತನ್ನು ಬಳಸ್ತೀವಿ.

ಈ ರೀತಿ ಬಳಕೆ ನನ್ಗೆ ತಿಳಿದಂತೆ ತಮಿಳಿನಲ್ಲಿದೆ. ತುಳುವಿನಲ್ಲೂ ಇರಬಹುದು. ಕನ್ನಡದಲ್ಲಿ ಹಿಂದೆ ಈ ಪ್ರಯೋಗವಿತ್ತೇ? ಈಗ ಸ್ವಲ್ಪ ಹಳೆಗನ್ನಡದ ಪದಗಳನ್ನು ಉಳಿಸಿಕೊಂಡಿರುವ ಹವ್ಯಕ ಕನ್ನಡದಲ್ಲೋ, ಅಥವ ಇನ್ನಾವುದಾದರೂ ಕನ್ನಡದ ಉಪಭಾಷೆಯಲ್ಲಿ ಇದು ಉಳಿದಿದೆಯೇ? ಹಳೆಯ ಕಾವ್ಯಕೃತಿಗಳಲ್ಲೇನಾದರೂ ಇದರ ಹೊಳಹಿದೆಯೇ?

ಗೊತ್ತಿದ್ದವರು ತಿಳಿಸಿ.

-ಹಂಸಾನಂದಿ

‹ ಕಾಗುಣಿತದಲ್ಲಿ ಅನುಮಾನ ದೂಳ್ವೆಣ್ಣು ಯಾರು? ›
  • ವ್ಯಾಕರಣ
Ornamental seperator
  • Login or register to post comments
  • 711 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2007 - 2:09am — mahesha

ಉ: ನಮ್ಮಲ್ಲಿಲ್ಲದ ’ನಮ್ಮದು’

mahesha's picture

ಎನ್ ಮತ್ತು ನನ್ ಕನ್ನಡದಲ್ಲೂ ಇತ್ತಲ್ಲ!!

ಎನಗೆ, ನನಗೆ! ನಿಕ್ಕುವ ಗೊತ್ತಿಲ್ಲ.

ಇದೂ ಉದು, ಉವು, ಉವನು ಹಾಗೆ ಕಣ್ಮರೆ ಆಗಿರಬೇಕು.

ಆದರೆ ನಾನು ಬಂದು ನಿಮ್ಮ ಬಳಿ "ನಮ್ಮ ಊರು ಬೆಂಗಳೂರು" ಅನ್ನುವಾಗ ಆ "ನಮ್ಮ"ದರಲ್ಲಿ ನೀವು ಸೇರಲ್ಲ ಅಂತ ನನ್ನ ಅನಿಸಿಕೆ.
ನಮ್ಮ ಮತ್ತು ನಿಮ್ಮ ಇಬ್ಬರ ಊರ ಬಗ್ಗೆ ಹೇಳುವಾಗ ಕನ್ನಡದಲ್ಲಿ "ನಮ್ಮಿಬ್ಬರ ಊರು, ನಮ್ಮೆಲ್ಲರ ಊರು" ಹೀಗೆ ಬಳಕೆ ಅಲ್ವಾ?

ತಮಿಳಲ್ಲಿ ಹಲವು ಮೂಲ ದ್ರಾವಿಡ ಗುಣಗಳು ಉಳಿದು ಹೋಗಿವೆ ದಿಟ. ಆದರೆ.. ಹಾಗೆ ಅದರಲ್ಲಿ ಕನ್ನಡದಲ್ಲಿ ಇರುವ ಹಲವು ಇಲ್ಲವಂತೆ
ಮಾದರಿ: ಇಲ್ಲ ಮತ್ತು ಅಲ್ಲ, ಹೀಗೆ ಎರಡು ನಿಷೇಧಾರ್ಥಕಗಳಿಲ್ಲವಂತೆ ಈಗಿನ ತಮಿಳಲ್ಲಿ. ಆದರೆ ಇದು ಕನ್ನಡ, ತೆಲುಗು ಮತ್ತು ಮಳಯಾಳಗಳಲ್ಲಿವೆಯಂತೆ.

ಅದಿರಲಿ! ನೀವು ಹೇಳಿದಂತೆ ಕನ್ನಡದಲ್ಲಿ ಎನ್ ಮತ್ತು ನನ್ ಆ ಅರ್ಥದಲ್ಲಿ ಬಳಕೆ ತಪ್ಪಿದೆ ಅಂತ ಹೇಳಬಹುದು!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 2:39am — hamsanandi

ಉ: ನಮ್ಮಲ್ಲಿಲ್ಲದ ’ನಮ್ಮದು’

hamsanandi's picture

ಎನಗೆ, ನನಗೆ ಎನ್ನುವಾಗ, ಅದು ಬರೀ ನನ್ನ ಬಗ್ಗೆ ಹೇಳುತ್ತೆ. ನಾನು ಹೇಳಿದ ಪದಗಳು, ಅದರ ಅರ್ಥಗಳು ಬಹುವಚನದಲ್ಲಿ ಮಾತ್ರ ತೋರುತ್ತವೆ.

ಎಮಗೆ, ನಮಗೆ ಎಂಬುದಕ್ಕೆ ಸಮಾಂತರ ಎಂದಿಟ್ಟುಕೊಂಡರೂ, ಅವುಗಳಿಗೆ ನಾನು ಹೇಳಿದ ಪದಗಳ ಅರ್ಥ ಬಾರದು ಎನಿಸುತ್ತೆ.

ಉದಾಹರಣೆಗೆ ಲಕ್ಷ್ಮೀಶ ಕವಿಯ ಶ್ರೀಪತಿಯು ಎಮಗೆ ಮಂಗಳವೀಯಲಿ ಎನ್ನುವ ಮಾತನ್ನು ತೊಗೊಳ್ಳಿ. ಕವಿಯ ಆಶಯ ಶ್ರೀಪತಿ ಅವನು, ಅವನ ಮನೆಯವರಿಗೆ ಮಂಗಳವೀಯಬೇಕೆಂದೋ? ಅಥವ ಎಲ್ಲರಿಗೂ ಎಂದೋ? ಎಲ್ಲರಿಗೂ, ಅಂದರೆ ಆ ಪದ್ಯವನ್ನು ಹೇಳುವವನಿಗೂ, ಕೇಳುತ್ತಿರುವವರಿಗೂ ಸೇರಿಸಿಯೇ ಅಂತ ನನಗನಿಸುತ್ತೆ.

ನಮ್ಮ ಊರು ಬೆಂಗಳೂರು ಅಂತ ನೀವು ಹೇಳಿದರೆ, ನನ್ನನ್ನು ಸೇರಿಸಿಕೊಳ್ಳದೇ ಇರಬಹುದು. ಆದರೆ ನಮ್ಮ ಊರು ದಕ್ಷಿಣ ಕರ್ನಾಟಕದಲ್ಲಿದೆ ಅಂತ ನೀವು ಹೇಳಿದರೆ, ಅದರಲ್ಲಿ ನಾನು ಸೇರಿದ್ದೀನೋ ಇಲ್ಲವೋ ತಿಳಿಯುವುದಿಲ್ಲ. ಅಲ್ಲವೇ? (ನನ್ನ ಊರೂ ದಕ್ಷಿಣಕರ್ನಾಟಕದಲ್ಲಿದೆ ಅಂತ ನಿಮಗೆ ಗೊತ್ತಿದ್ದರೆ, ನೀವು ಹಾಗೆ ಹೇಳಿದಾಗ ನನ್ನನ್ನು ಸೇರಿಸಿ ಮಾತಾಡ್ತೀರಾ ಇಲ್ಲವಾ ಅನ್ನೋದು ಗೊತ್ತಾಗಲ್ಲ ಅಲ್ವಾ?) ನೀವು ಹೇಳಿದಂತೆ ನಮ್ಮೆಲ್ಲರ ಪದವನ್ನು ಬಳಸಬಹುದು - ಅದು ಬೇರೆ ಮಾತು.

ವಿಕಿಪಿಡಿಯದಲ್ಲಿ ಈ ವಿಷಯ ನೋಡಿದಾಗ ಮಲಯ ಭಾಷೆಯ ಒಂದು ಉದಾಹರಣೆ ಕೊಟ್ಟಿತ್ತು. ಅದನ್ನೆ ಇಲ್ಲಿ ಹೇಳುವೆ.

ನನ್ನ ತಾಯ್ನುಡಿಯ ಒಂದು ವಾಕ್ಯವನ್ನು ಇಲ್ಲಿ ಕೊಡುವೆ:

ಎಂಗಡೆ ಕಾರ್ಯೊ ಆನ್ಮೇಲೆ, ನಂಗ ಚೂಡಮ್ಮೊ.

ನಮ್ಮ ಕೆಲಸ ಆದಮೇಲೆ, ನಾವು ಊಟ ಮಾಡೋಣ ಎಂಬ ಅರ್ಥ ಇದಕ್ಕೆ; ಆದರೆ ಈ ಮಾತನ್ನು ನಾನು ಯಾರಿಗೆ ಹೇಳ್ತಿದೀನೋ, ಅವರು ನಾನು ಹೇಳುತಿರುವ (ಊಟದ ಮುಂಚೆ ಮುಗಿಸುವ) ಕೆಲಸದಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದು ಆ ಮಾತಿನಲ್ಲೇ ತಿಳಿದುಹೋಗುತ್ತೆ. ಅದು ಕನ್ನಡದಲ್ಲಿ ಅಷ್ಟು ನೇರವಾಗಿ ತಿಳಿಯುವುದಿಲ್ಲ ಅಂತ ನನ್ನ ಭಾವನೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 12:34pm — mahesha

ಉ: ನಮ್ಮಲ್ಲಿಲ್ಲದ ’ನಮ್ಮದು’

mahesha's picture

ನಿಮ್ಮೀ ತರ್ಕ ಸರಿಯಾಗಿದೆ.

ಇದರ ಕುರಿತು ಇನ್ನೂ ಕೊಂಚ ಆರಯ್ಯು ಮಾಡಿ ಹೇಳುವೆನು. ಸದ್ಯಕ್ಕೆ ನಿಮ್ಮ ಮಾತಲ್ಲೆ ಯಾವ ಕುಂದು ಕಾಣಲಿಲ್ಲ.
ಒಳ್ಳೆಯ ಗಮನ!!

ನನ್ನಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 3:21am — hamsanandi

ಉ: ನಮ್ಮಲ್ಲಿಲ್ಲದ ’ನಮ್ಮದು’

hamsanandi's picture

Quote:

ತಮಿಳಲ್ಲಿ ಹಲವು ಮೂಲ ದ್ರಾವಿಡ ಗುಣಗಳು ಉಳಿದು ಹೋಗಿವೆ ದಿಟ. ಆದರೆ.. ಹಾಗೆ ಅದರಲ್ಲಿ ಕನ್ನಡದಲ್ಲಿ ಇರುವ ಹಲವು ಇಲ್ಲವಂತೆ
ಮಾದರಿ: ಇಲ್ಲ ಮತ್ತು ಅಲ್ಲ, ಹೀಗೆ ಎರಡು ನಿಷೇಧಾರ್ಥಕಗಳಿಲ್ಲವಂತೆ ಈಗಿನ ತಮಿಳಲ್ಲಿ. ಆದರೆ ಇದು ಕನ್ನಡ, ತೆಲುಗು ಮತ್ತು ಮಳಯಾಳಗಳಲ್ಲಿವೆಯಂತೆ.

ಹೌದು, ಈಗಿನ ತಮಿಳಲ್ಲಿ ಅಲ್ಲ - ಇಲ್ಲ ಎಂಬ ಎರಡು ಪದಗಳಿಲ್ಲ; ಎರಡಕ್ಕೂ ಇಲ್ಲೈ ಎಂದೇ ಹೇಳಬೇಕಾಗುತ್ತೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 3:20pm — kpbolumbu

ಉ: ನಮ್ಮಲ್ಲಿಲ್ಲದ ’ನಮ್ಮದು’

kpbolumbu's picture

inclusive we ಮತ್ತು exclusive weಗಳ ನಡುವಣ ವ್ಯತ್ಯಾಸ ಹವ್ಯಕದಲ್ಲಿ ಸ್ಪಷ್ಟವಾಗಿದೆ.
ಉದಾ:
೧.ಇದು ಎಂಗಳ ಮನೆ.--ಇದು ನಮ್ಮ ಮನೆ.(inclusive)
೨.ಇದು ನಮ್ಮ ಊರು.--ಇದು ನಮ್ಮ ಊರು.(exclusive)
_________________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 3:22pm — kpbolumbu

ಉ: ನಮ್ಮಲ್ಲಿಲ್ಲದ ’ನಮ್ಮದು’

kpbolumbu's picture

ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ inclusive ಮತ್ತು exclusive ಅದಲು ಬದಲಾಗಬೇಕು.
_______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
July 31, 2007 - 3:39pm — mahesha

ಉ: ನಮ್ಮಲ್ಲಿಲ್ಲದ ’ನಮ್ಮದು’

mahesha's picture

ಹವ್ಯಕದಲ್ಲಿ ಇದ್ದ ಮೇಲೆ ಕನ್ನಡದಲ್ಲೂ ಇದ್ದಂತೆ, ಏಕೆಂದರೆ ಹವ್ಯಕವೂ ಕನ್ನಡವೇ!!

Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 2:57am — hamsanandi

ಉ: ನಮ್ಮಲ್ಲಿಲ್ಲದ ’ನಮ್ಮದು’

hamsanandi's picture

ಕೃಷ್ಣಪ್ರಕಾಶರೆ,

ನೀವು ತಿಳಿಸಿದ್ದು ಒಳಿತಾಯಿತು, ಹೊಸ ವಿಷಯವೊಂದನ್ನು ಅರಿತಂತಾಯಿತು.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 4:44pm — kannadakanda

ಉ: ನಮ್ಮಲ್ಲಿಲ್ಲದ ’ನಮ್ಮದು’

kannadakanda's picture

ಹೇೞುವುದು ಕಷ್ಟ. ಆದರೆ ಕೊಡಗಿನ ಭಾಷೆ ಹೞಗನ್ನಡಕ್ಕೆ ಹತ್ತಿರವಾಗಿದೆ. ಹಾಗೆಯೇ ಸೋಲಿಗರ (ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಆದಿವಾಸಿಗಳು) ಕನ್ನಡದಲ್ಲಿ ನಿಮಗೇ ಆಶ್ಚರ್ಯವಾಗುವಂತೆ ಹೞಗನ್ನಡದ ಶಬ್ದಗಳಿವೆ. ಅವರು ಚಂದ್ರನಿಗೆ ಹೆಱೆ ಎನ್ನುತ್ತಾರೆ. ಈ ಹೆಱೆ->ಪೆಱೆ ಅಂದರೆ ಹೞಗನ್ನಡದಲ್ಲಿ ಚಂದ್ರ. ಇನ್ನು ಎಷ್ಟೆಷ್ಟೊ ಉದಾಹರಣೆಗಳಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 4:44pm — kannadakanda

ಉ: ನಮ್ಮಲ್ಲಿಲ್ಲದ ’ನಮ್ಮದು’

kannadakanda's picture

ಹೇೞುವುದು ಕಷ್ಟ. ಆದರೆ ಕೊಡಗಿನ ಭಾಷೆ ಹೞಗನ್ನಡಕ್ಕೆ ಹತ್ತಿರವಾಗಿದೆ. ಹಾಗೆಯೇ ಸೋಲಿಗರ (ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಆದಿವಾಸಿಗಳು) ಕನ್ನಡದಲ್ಲಿ ನಿಮಗೇ ಆಶ್ಚರ್ಯವಾಗುವಂತೆ ಹೞಗನ್ನಡದ ಶಬ್ದಗಳಿವೆ. ಅವರು ಚಂದ್ರನಿಗೆ ಹೆಱೆ ಎನ್ನುತ್ತಾರೆ. ಈ ಹೆಱೆ->ಪೆಱೆ ಅಂದರೆ ಹೞಗನ್ನಡದಲ್ಲಿ ಚಂದ್ರ. ಇನ್ನು ಎಷ್ಟೆಷ್ಟೊ ಉದಾಹರಣೆಗಳಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 4:54pm — savithru

ಉ: ನಮ್ಮಲ್ಲಿಲ್ಲದ ’ನಮ್ಮದು’

savithru's picture

>ನನ್ನ ತಾಯಿನುಡಿ ಕನ್ನಡಕ್ಕೂ, ತಮಿಳಿಗೂ ನಡುವಿನ ಒಂದು ಭಾಷೆ.

ಸಂಕೇತಿ ಭಾಷೆ ಬಗ್ಗೆನ ನೀವು ಬರೆದಿದ್ದು?

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 10:15pm — hamsanandi

ಉ: ನಮ್ಮಲ್ಲಿಲ್ಲದ ’ನಮ್ಮದು’

hamsanandi's picture

ಹೌದು ಸವಿತೃ ಅವರೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 10:46pm — Narayana

ಉ: ನಮ್ಮಲ್ಲಿಲ್ಲದ ’ನಮ್ಮದು’

Narayana's picture

ಮರಾಠಿಯಲ್ಲಿ ಈ ಎರಡು ಪ್ರಯೋಗಳಿವೆ

आमची (ಅಂಚೀ) - (ನಮ್ಮ )
ರಾಜ್ ಠಾಕರೆ ನಮ್ಮ ಮುಂಬಯಿ ( ನಿಮ್ಮದಲ್ಲ ಎಂಬ ಅರ್ಥದಲ್ಲಿ ) ಎಂದು ಹೇಳುವಾಗ ಈ ಶಬ್ದ ಬಳಕೆಯಾಗುತ್ತದೆ

आपली ( ಆಪಲೀ) - (ನಮ್ಮ )
ನಮ್ಮೆಲ್ಲರ ಭಾರತ ( ನಿಮ್ಮದೂ ಸೇರಿ ಎಂಬ ಅರ್ಥದಲ್ಲಿ) ಎಂದು ಹೇಳುವಾಗ ಈ ಶಬ್ದ ಬಳಕೆಯಾಗುತ್ತದೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನಾನು ಯಾವ ಆತ್ಮ
  • ನನ್ನ ಕಾವ್ಯ
  • ರಾಜಕೀಯ
  • ಸರಿಯಾದ ಪದ ಯಾವುದು?
Syndicate content

ಲೇಖಕರು

hamsanandi's picture

ಪೂರ್ಣ ಹೆಸರು
ಹಂಸಾನಂದಿ

ಪರಿಚಯ

ನಿಮ್ಮೆಲ್ಲರಂತೆ ಒಬ್ಬ ಕನ್ನಡಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಯಥೇಚ್ಛವೋ ಯಥೇಷ್ಟವೋ?
  • ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.
  • ನಮ್ಮಲ್ಲಿಲ್ಲದ ’ನಮ್ಮದು’
  • ಸರಿಯಾಗಿ ಯಾಕೆ ಬರುತ್ತಿಲ್ಲಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು

ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator