Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಪಡುವಣ ಪಂಡಿತರನ್ನು ಏಕೆ ನಂಬಬಾರದು?

August 1, 2007 - 8:43am — ವೈಭವ

ಹಲವಾರು ಸಾರಿ ಸಂಪದದಲ್ಲಿ, ಮಂದಿ ಪಡುವಣ ಪಂಡಿತರ ಕೆಲಸವನ್ನ ಮತ್ತು ಅವರು ಬರೆದಿರುವ ಹೊತ್ತಗೆಗಳನ್ನ ನಂಬಲಾಗುವುದಿಲ್ಲ ಅನ್ನುತ್ತಾರೆ.
ಪುರಾವೆ ಮತ್ತು ಲಾಜಿಕ್ ಇದ್ದು ಯಾರಾದರೂ ಹೇಳಲಿ, ಈ ಮೂಡಣ, ಪಡುವಣ ಎಂಬ ಮೇಲು-ಕೀಳು ಮಾಡುವುದೇಕೆ.

ನನ್ನ ಎಂಜಿನಿಯರಿಂಗ್ನಲ್ಲಿ ನಾನು ಓದಿದ ಹೊತ್ತಗೆಗಳೆಲ್ಲವೂ ಪಡುವಣ ಪಂಡಿತರದೇ

೧) Integrated Electronics - Millman and Halkias ( ಎಲೆಕ್ಟ್ರಾನಿಕ್ಸ್ ಓದಿರುವವರಿಗೆ ಇದು ಎಂತ ಹೊತ್ತಗೆ ಎಂಬ ಅರಿವಾಗಿರುತ್ತದೆ)
೨) Electromagnetics - John D Kraus (ಇದು ಆಟೇಯ ಸಕ್ಕತ್ ಒಳ್ಳೆ ಹೊತ್ತಗೆ)
೩) Computer Organisation - William Hamacher ( ಇದರ ಬಗ್ಗೆ ಹೇಳಬೇಕೆ ?)
೪) Computer Networks - Taenabaum

ಈಟೇಲ್ಲ ಪಡುವಣ ಪಂಡಿತರ ಹೊತ್ತಗೆ ಓದ್ಕಂಡು ಈಗ ದುಡಿತಾ ಇರೋ ನಾವು ಈ ಬಡಪಾಯಿ 'ಬರೊ', 'ಎಮನೊ' ಮಾತ್ರ ಯಾಕೇ ಬೇಡ ಅನ್ನೋದು ಯಾಕೆ?.

ಇನ್ನು ಕನ್ನಡ-ಇಂಗ್ಲೀಸ್ ನಿಗಂಟು ಬರೆದವರು ಕಿಟೆಲ್. ಇವರ ಮೂರುತಿ ಇಂದಿಗೂ ಬೆಂಗಳೂರಿನ 'ಮಹಾತ್ಮ ಗಾಂಧಿ' ರಸ್ತೆಯಲ್ಲಿ ಹಾಕವ್ರೆ. ನಮ್ಮ ಸರಕಾರದವರು
ಇವ್ರಿಗೆ ಸ್ಯಾನೆ ಮರ್ವಾದೆ ತೋರ್ಸೋವರೆ.

‹ ಮೈಕ್ರೋಸಾಫ್ಟೀಕರಣ ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು ›
  • ವ್ಯಾಕರಣ
Ornamental seperator
  • Login or register to post comments
  • 592 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 1, 2007 - 10:22am — mahesha

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

mahesha's picture

ಅಯ್ಯಾ..

ನಾವು ಹೊತ್ತು ಹೊತ್ತಿಗೂ ಬಳಸುವ

೧) ಪೆನ್ನು( fountain, ball )
೨) ಕನ್ನಡಕ
೩) ಹಲ್ಲು ಉಚ್ಚೋ, ಉಚ್ಚುಗೆ, ಹಿಟ್ಟು
೪) ಒಳವುಡುಪು
೫) ಮೊಬೈಲು, ಟೀವಿ, ಇಂತವು
೬) allopathy

ಇವೆಲ್ಲ ಅವರೇ ಮಾಡಿರೋದು. ಅದನ್ನು ನಂಬಕೇಲ್ಲ.!!

ಈ ರಾಮೇಸ್ವರದ 'ರಾಮಸೇತುವೆ' ಬಗ್ಗೆ ನಾಸಾ ಅವರ ಅನಿಸಿಕೆ ಕೇಳಿತ್ತು ನಮ್ಮ ಸರಕಾರ. !!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 4:00pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ನಾವು ಹೊತ್ತು ಹೊತ್ತಿಗೂ ಬಳಸುವ...
>>>> ಎಲ್ಲಾದಕ್ಕಿನ್ನಾ ಮುಖ್ಯವಾದದ್ದು ಮರೆತ್ತಿದ್ದೀರಾ - ಕಾ೦ಡಮ್.
http://en.wikipedia.org/wiki/Condom
http://www.webmd.com/content/article/71/81244.htm
George Bernard Shaw called the rubber condom the "greatest invention of the nineteenth century."

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 4:50pm — mahesha

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

mahesha's picture

ರೀ

ಬಸಿರುತಡೆಚೀಲದ ಮಾತು ಯಾಕೆ ಇಲ್ಲಿ? ಸುಮ್ಕಿರಿ ಮಂದಿ ತಪ್ಪಿ ತಿಳಿದುಕೋತಾರೆ.!!

ನೀವ್ ಬರೀ ಇಂಗಲೀಸೋರು ಹೇಳಿದ್ದನ್ನೇ ಎತ್ವೇಳೋದು( ಎತ್ತಿ + ಹೇಳೋದು ).

ಅದೇನೋ ದರಾಬೇಂದ್ರೆ ಹಾಡ್ನ ಬಿಡಿಸ್ತೀನಿ ಅಂದ್ರೆಲ್ಲ ಎಲ್ಲಿ ಬಿಡಿಸಿದ್ರಿ. ನಾವು ಕಾದು ಕಾದು ಕೆಂಪಗಾಗಿ, ಕರ್ರ‍ಗಾಗ್ತಾ ಇದ್ದೀವಿ Smiling, ತುಸು ಬರೀನ್ ಬರೆರೀ ದ್ವಾವರು!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 1:07pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ಒಸ್ಕಾರ್ ವೈಲ್ಡ್ ಒ೦ದು ಮಾತನ್ನು ಹೇಳಿದ್ದಾನೆ, ಈ ನಾಟಕದ ಹೆಸರೂ IDEAL HUSBAND.
ಬೊ೦ಬಾಟ್ ನಾಟಕ್.
************************************************
MRS. CHEVELEY
Ah! the strength of women comes from the fact that psychology cannot explain us. Men can be analysed, women . . . merely adored.

SIR ROBERT CHILTERN
You think science cannot grapple with the problem of women?

MRS. CHEVELEY
Science can never grapple with the irrational. That is why it has no future before it, in this world.

SIR ROBERT CHILTERN
And women represent the irrational.
MRS. CHEVELEY
Well-dressed women do.
********************************************************
ಆಧುನಿಕ ವಿಜ್ಞಾನ ಕ್ಕೆ ಭವಿಷ್ಯವಿಲ್ಲವ೦ತೆ. Smiling
ಅ೦ದರೆ ನಮ್ಮ ಆಧುನಿಕ ವಿಜ್ಞಾನ ಮುಗ್ಗರಿಸಿ ಬೀಳ್ತಾಯಿದೆ. ನೀವು "TAo of Physics" ಓದಿ .
ನಾನು ಓದಿದೆ ಅದರಿ೦ದ ಅಸ್ಟೋ೦ದು ತಿಳಿಯಲಿಲ್ಲವಾದರೂ ಆಧುನಿಕ ವಿಜ್ಞಾನ ಎಷ್ಟೋ ಪ್ರಶ್ನೆಗಳನ್ನು ಉತ್ತರಿಸದೇ ಹೋಗಿದೆ
ಎ೦ಬುದೊ೦ದು ವಾದ. ಈ ವಿಜ್ಞಾನವನ್ನು ನೋಡುವ ಕಣ್ಣುಗಳು ಬಿಡಿ ಬಿಡಿಯಾಗಿ ನೋಡುವ ಕಲ್ಪನೆಯೇ ತಪ್ಪು ಎ೦ಬುವ ಮತ್ತೊ೦ದು ವಾದ. ಉದಾಹರಣೆಗೆ ಒ೦ದು ಮರವನ್ನು ನೋಡುವಾಗ ಅವರು ಅದನ್ನು ಪೂರ್ಣವಾಗಿ ನೋಡುವುದಿಲ್ಲಾ.
ಬಿಡಿ ಬಿಡಿ ಯಾಗಿ ನೋಡಿ ಸತ್ಯವನ್ನು ಅರಿತವರ೦ತೆ ಮಾತಾಡ್ತಾರೆ. ಈ ವಿಷಯವನ್ನು ನಮ್ಮ ನಾಡಿನ ರೈತ "ರೆಡ್ಡಿ " ತನ್ನ ಪುಸ್ತಕದಲ್ಲಿ
ಚೆನ್ನಾಗಿ ಸೆರೆ ಹಿಡಿದಿದ್ದಾನೆ.ಅವನ ತೋಟದ ಹತ್ತಿರ ವಿರುವ ಕೆರೆಯಲ್ಲಿ ವಿಜ್ಞಾನಿಗಳು ಕಪ್ಪೆ ಹಿಡಿದು ಹೋದರ೦ತೆ ಅದರಿ೦ದ
ಕೆಲವು ಕೀಟಗಳು ಹೆಚ್ಚಾಗಿ ಅವನ ಬೆಳೆ ನಾಶವಯ್ತ೦ತೆ. ಹೀಗೆ ಅವನ ಕೆಲ್ಸಕ್ಕೆ ಈ ಆಧುನಿಕ ವಿಜ್ಞಾನ ಹೇಗೆ ಅಡ್ಡಿ ಬ೦ತು
ಮತ್ತು ಅವನು ತನ್ನದೇ ಆದ ವಿಜ್ಞಾನವನ್ನು ಕ೦ಡು ಹಿಡಿದು ಹೇಗೆ ಬೆಳೆಯನ್ನು ಬೆಳೆಯುತ್ತಿದ್ದಾನೆ ಎ೦ದು ಹೇಳಿದ್ಡಾನೆ.
ಅವನ೦ತೆ ಮತ್ತೊಬ್ಬ ಕೃಷಿ ವಿಜ್ಞಾನಿ Masanobu Fukuoka.

http://soilandhealth.org/files/RNrLLEyFxm/010140.fukuoka.one.straw.pdf

ಇದನ್ನು ತೇಜಸ್ವಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

When a decision is made to cope with the symptoms of a problem, it is generally assumed that the corrective measures will solve the problem itself. They seldom do. Engineers cannot seem to get this through their heads. These countermeasures are all based on too narrow a definition of what is wrong. Human measures and countermeasures proceed from limited scientific truth and judgment. A true solution can never come about in this way."
********************************************************
ಇರಲಿ ಮತ್ತೊಬ್ಬ ಮನುಷ್ಯ ಐವಾನ್ ಇಲ್ಲಿಚ್ ಎ೦ಬೋ ಚಿ೦ತಕ, ಭಾಷಾ ತಜ್ಞ.ಈತ ಕನ್ನಡ ನಾಡಿಗೂ ಬ೦ದಿದ್ದನ೦ತೆ.
***The child of the city cannot expect anything which lies outside the possible development of institutional process. Even his fantasy is prompted to produce science fiction.
*** The state of mind of the modern city-dweller appears in the mythical tradition only under the image of Hell:
***The limits of the Earth's resources have become evident. No breakthrough in science or technology could provide every man in the world with the commodities and services which are now available to the poor of rich countries. For instance, it would take the extraction of one hundred times the present amounts of iron, tin, copper, and lead to achieve such a goal, with even the "lightest" alternative technology.
********
The suspicion that something is structurally wrong with the vision of homo faber is common to a growing minority in capitalist, Communist, and "underdeveloped" countries alike. This suspicion is the shared characteristic of a new elite. To it belong people of all classes, incomes, faiths, and civilizations. They have 'become wary of the myths of the majority: of scientific utopias, of ideological diabolism, and of the expectation of the distribution of goods and services with some degree of equality. They share with the majority the sense of being trapped. They share with the majority the awareness that most new policies adopted by broad consensus consistently lead to results which are glaringly opposed to their stated aims.

ಅವನ ದರ್ಶನ ವೇನೆ೦ದರೆ ನಮ್ಮ ಆಧುನಿಕ ಸಮಾಜದ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತ೦ತ್ರ ಜ್ಞಾನ ಉತ್ತರ ಕೊಡುವುದಿಲ್ಲ ವ೦ತೆ.
ಹಾಗಿದ್ದರೇ ಏನು ಓದ ಬೇಕು ಸ್ವಾಮಿ ??

We now need a name for those who value hope above expectations. We need a name for those who love people more than products, those who believe that
No people are uninteresting.
Their fate is like the chronicle of planets.
Nothing in them is not particular,
and planet is dissimilar from planet.
We need a name for those who love the earth on which each can meet the other,

And if a man lived in obscurity making his friends in that obscurity,
obscurity is not uninteresting.
We need a name for those who collaborate with their Promethean brother in the lighting of the fire and the shaping of iron, but who do so to enhance their ability to tend and care and wait upon the other, knowing that to each his world is private,
and in that world one excellent minute.
And in that world one tragic minute.
**************************************************
ಇದು ಅವನ ದರ್ಶನ . ಅ೦ದರೆ ವಿಜ್ಞಾನವೇ ಗುರಿಯಾಗದೇ, ಬಾಳುವುದೆ ಗುರಿಯಾಗಿರುವವನ ಅರಿಕೆ ಈ ಸಾಲುಗಳು.
ಕನ್ನಡದಲ್ಲಿ ಅನುವಾದ ಮಾಡೊದು ಸ್ವಲ್ಪ ಕಷ್ಟಾ, ಇವನ ಇ೦ಗ್ಲೀಷ್ ಚೆನ್ನಾಗಿದೆ.
http://www.preservenet.com/theory/Illich/Deschooling/intro.html

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 1:29pm — ವೈಭವ

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

ವೈಭವ's picture

"....ಆಧುನಿಕ ವಿಜ್ಞಾನ ಕ್ಕೆ ಭವಿಷ್ಯವಿಲ್ಲವ೦ತೆ... "

ಅಂತೆ ಕಂತೆ ತಾನೆ ? ಅನ್ಕೊಳ್ರೀ ಬಿಡಿ.

ಈಗ ಹಾಕಿದ್ದೀರಲ್ಲ ಈ ಕಾಮೇಂಟ್ ಇದು 'ಆಧುನಿಕ ವಿಗ್ನಾನ' ದ ಕೊಡುಗೆ ಅಲ್ವೇನ್ರೀ.... ಇಲ್ಲದಿದ್ದರೆ ಈ ಕಾಮೇಂಟ್ ನಿಮಗೆ ಹಾಕಕ್ಕೆ ಆಗ್ತಾ ಇತ್ತಾ ? Smiling

ನಿಮ್ಮ ಮಾತು ನಿಮಗೆ ಇದಿರಾಗ್ತ ಇದೆ ( you are contradicting yourself) Smiling

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 3:39pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ನೋಡಿ ಸ್ವಾಮಿ ! (ಎಲ್ಲಾ ದ್ವ೦ದ್ವಗಳನ್ನು ಮೀರಿರುವಿರೆ೦ದು ಈ ರೀತಿ ಸ೦ಭೋದನೆ )
ಒಳ್ಳೆ point ಎತ್ತಿದ್ದೀರಾ .Smiling
ನಮ್ಮೂರಿನಲ್ಲಿ ಇರುವವರೆಲ್ಲಾ ಬದುಕುತ್ತಿರುವುದೇ ಈ contradictinಸ್ ನಿ೦ದಾ.
ಹೊಸದಾಗಿ High Speed ಕಾರ್ ತಗೊ೦ಡು ಬೆ೦ಗಳುರಿನ Traffic Jam ನಲ್ಲಿ, ಇಪ್ಪತ್ತು ಕಿಲೋಮಿಟರ್ ಘ೦ಟೆಗೆ ಹೋಗ್ತಿಲ್ಲವೇನು - ಅದೂ ಕೂಡ contradictin ತಾನೇ ??
ಸುಮ್ಮನೇ ನೀವು ಒ೦ದು ವಾಕ್ ಹೋಗಿ ಬನ್ನಿ ಆಗ ನಿಮಗೆ ಅದೆಷ್ಟೋ contradictinಸ್ ಕಾಣಿಸುತ್ತೆ.
1> ಈಗ ನಮ್ಮ ದೇಶದ ನೆಲದಲ್ಲಿ ಸತ್ತ್ವದ ಶಕ್ತಿ ಇಲ್ಲವ೦ತೆ. ಅದು ನಾವು ಪರಿಸರ ಮಾಲಿನ್ಯದಿ೦ದ ಹಾಳು ಮಾಡಿದ್ದೇವ೦ತೆ.
ಅದರೆ ನೆಲದ ಬೆಲೆ ಮಾತ್ರ ಜಾಸ್ತಿ ಆಗ್ತಾಯಿದೆ. ಸತ್ತ್ವ ಕಳೆದುಕ್ಕೊ೦ಡಿರುವ ಭೂಮಿಗೆಕಿಷ್ಟು ಬೆಲೆ ??
2> ಇನ್ನೊ೦ದು contradiction , ಯಾರಿಗೂ ಸಮಾಜದಲ್ಲಿ ಬೆಳೆ ಬೆಳೆಯುವುದು ಬೇಡಾ.
ಅಕಸ್ಮಾತ ಯಾರಾದರೂ ರೈತ ವೃತ್ತಿ ಕೈಗೊ೦ಡರೆ ಆತ ಬಡತನ ದಿ೦ದ ಸಾಯೋದು ಗ್ಯಾರ೦ಟಿ ಅ೦ತಾ ಒಬ್ಬ ಕೃಷಿ ತಜ್ಞ ಹೇಳಿದ್ದಾ.
ಆದರೆ ಊಟ ಮಾತ್ರ ಎಲ್ಲರಿಗೂ ಬೇಕು.
3> ಹೀಗೆ ನೀರಿನ ಬಗ್ಗೆ ಯೋಚಿಸಿದಾಗಲೂ ಅದೇ ಉತ್ತರ ಬರುತ್ತೆ.
4> ಗ್ಲೋಬಲ್ ವಾರ್ಮಿ೦ಗ್ ಸತ್ಯಾ೦ಶ ಮೊನ್ನೆ ತಾನೇ ಪ್ರಕಟವಾಗಿದೆ. ಯಾವ ಜೀವನ ಶೈಲಿ ಯಿ೦ದಾ ಹೀಗಾಯ್ತು ?
ಹಿಮಾಲಯವೇ ಕರಗಿಸಿ , ನೀರು ಮಾಡಿರುವ ಈ ವಿಜ್ಞಾನದ ಮೇಲೆ ಸ್ವಲ್ಪ ಅನುಮಾನ ಬ೦ದಿಲ್ಲಾ ಅ೦ದರೆ ಏನು ಹೇಳೋದು ?
5> ನೀವು Electronics Engineer ಆಗಿರುವುದರಿ೦ದ ಒ೦ದು ಪ್ರಶ್ನೆ, ಈ ಸಕಲ ಸೌಕರ್ಯಗಳು ಮನುಷ್ಯನಿಗೆ
Time ಉಳಿಯಲಿ, Leisure ಸಿಗಲಿ ಅ೦ತಾ ತಾನೇ ಮಾಡಿರುವುದು.ಆದರೆ ಪಾಪ ಇ೦ದು ಮನುಷ್ಯನಿಗೆ
Leisure ಗಾಗಿ ಒ೦ದು ವಾರ ಕಾಯುವ೦ತೆ ಆಗಿದೆಯಲ್ಲಾ.

ಹ೦ಗೆ ನೋಡಿದರೆ ಈ ಆಧುನಿಕ ಯುಗದಲ್ಲಿ ಮನುಷ್ಯ ಬದುಕುತ್ತಿರುವುದೇ contradictin ಗಳನ್ನು ತು೦ಬಿಕೊ೦ಡು.
ಜೀವನದಲ್ಲಿ contradiction ಇಲ್ಲದಿರುವವರು ಯಾರು ಇಲ್ಲಾ.
ಮನೆ ಬೇಕು - ಜನ ಬೇಡಾ.(No Neighbourhood Apartments)
ಊಟ ಬೇಕು - ರೈತ ಬೇಡಾ.
ಗ೦ಡಾ ಬೇಕು - ಅತ್ತೆ ಮಾವ ಬೇಡಾ.
ಮಗು ಬೇಕು - ಹೆರಿಗೆ ಬೇಡಾ.
ಆಯಸ್ಸು ಬೇಕು - ಆರೋಗ್ಯ ಬೇಡಾ.
ನೀವು ಸಿ.ಕೆ .ಮೀನಾ ರವರ ಬರವಣೆಗೆ ಓದಿ - ಗೊತ್ತಗುತ್ತೆ.
http://www.thehindu.com/mp/2007/07/26/stories/2007072650920100.htm

ನನ್ನ ಕೆಲವು ಬರವಣಿಗೆಯಲ್ಲಿ ಇನ್ನಷ್ಟು ತಿಳಿವು ಕಾಣಿಸ ಬಹುದು.

http://www.hinduonnet.com/mp/2007/05/29/stories/2007052950390400.htm

ಬದುಕೇ ಹುಟ್ಟೂ ಸಾವು ಎ೦ಬೋ contradiction ನಿ೦ದಾ ಕೂಡಿರುವಾಗ , ನಾವು ಈ contradiction ಗಳೊ೦ದಿಗೆ ಬಾಳು
ನಡೆಸಬೇಕು. ಬಹುಶ: ನಾವು ಈ contradiction ಗಳನ್ನು ನೋಡಿ ಲೇವಡಿ ಮಾಡಿ ನಗುವ ಬದಲಿ , ಇದ್ಯಾಕೆ ಹೀಗೆ ಅ೦ದಾಗ ಉತ್ತರ ಸಿಗಬಹುದು. ಆದರೆ ಬಹುಶ: ಬ್ಲಾಗ್ ನಲ್ಲಿ "ಹಾ ನೋಡು ಇದು contradiction , ಇದು agreement" ಅನ್ನುವಷ್ಟು ಸುಲಭವಲ್ಲಾ.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 3:48pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ಇವೆಲ್ಲಾ contradiction ಜೊತೆಗೆ ಸ೦ಸಾರದ ದಿನನಿತ್ಯದ contradiction ಗಳನ್ನು ಮೀರಲು ಯಾವ ವಿಜ್ಞಾನ ದಾರಿ ತೋರ್ಸುತ್ತೆ ??

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 4:53pm — ವೈಭವ

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

ವೈಭವ's picture

ಹಾಗಂತ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟದೇ ಹೋಗಿದ್ದರೆ ನಮ್ಗೆಲ್ಲ ಚೆಂಬು ಸಾಮಿ. Smiling
ಇಲ್ಲಿ ಹೇಗೆ 'ಆಧುನಿಕ ವಿಗ್ನಾನ' ರೈತನಿಗೆ ನೆರವಾಯಿತು ತಾವು ಗಮನಿಸಬೇಕು.

ನೋಡಿ ತಿರುಳು ಹೀಗಿದೆ.
"ವಿಗ್ನಾನದಲ್ಲಿ ಒಳ್ಳೇದು ಇದೆ. ಕೆಡುಕು ಇದೆ. ......ಹಾಗಂತ ವಿಗ್ನಾನ ಸಾರಸಗಟಾಗಿ ಕೆಟ್ಟದ್ದು ಅನ್ನುವುದು ತಪ್ಪು. "

ಮತ್ತೊಮ್ಮೆ ಉಂಕಿಸಿ. Smiling

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 10:10pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಿದ್ದು ರೈತರಿಗೆ ಆದರೆ ಬೆ೦ಗಳೂರಿಗೆ ಕಟ್ಟಿದ್ದು , ತಿಪ್ಪ ಗು೦ಡನಹಳ್ಳೀ ಡಾಮ್ ಮಾತ್ರ.
ಆ ಡಾಮ್ ನಿ೦ದ ನೀರು 10 ಲಕ್ಷ ಜನಕ್ಕೆ ಸಾಕಾಗ್ತಿತ೦ತೆ.
http://www.bwssb.org/water_source_schemes_cs_reservoir.html

Water Shortage Could Cause IT Bubble to Burst
http://www.asiawaterwire.net/node/324
ಆದೆರ್ ಈಗ ಬೆ೦ಗಳೂರು 50 ಲಕ್ಷ ಜನಕ್ಕೆ ನೀರು ಒದಗಿಸ ಬೇಕು . ಎಲ್ಲಿ೦ದಾ ತರುವುದು ??
ವಿಜ್ಞಾನ ಸೄಷ್ಠಿ ಮಾಡುತ್ತೇನು ?? ಅದಕ್ಕೆ ನೀರು Privatize ಮಾಡೋದೆ ಒಳ್ಳೆಯದು ಅನ್ನುವ ಚರ್ಚೆಯಾಯ್ತು.
CASUMM + NIAS ಇವೆರೆಡು ಈ Work Shop "Greater Bangalore and Water Challenges"
ಮಾಡಿದ್ರೂ.
ಅದರಲ್ಲಿ ತಿಳಿದಿದ್ದು , ಬೆ೦ಗಳೂರಿನಲ್ಲಿ ಮೊದಲು ತೆರೆದ ಬಾವಿಗಳು 1000 ಕ್ಕೂ ಹೆಚ್ಚು ಬಾವಿಗಳಿದ್ದವು 400 ಕೆರೆಗಳಿದ್ದವು.
ಆಗ ನೀರು ನಮ್ಮ ಜವಬ್ದಾರಿಯಾಗಿತ್ತು. ಅದಾದ ಮೇಲೆ ಆಧುನಿಕ ವಿಜ್ಞಾನ ಬ೦ದ ಮೇಲೆ - ನೀರು ಶೇಕರಣೆಯಾಗಲಿಲ್ಲಾ.
ಈ ಪುಸ್ತಕವನ್ನು ಓದಿ :
http://www.cseindia.org/html/extra/twhs.htm
ಅ೦ದರೆ ನಮ್ಮ ಪೂರ್ವಿಕರು ನೀರಿನ ವ್ಯವಸ್ಥೆಯನ್ನು ನಾಜೂಕಾಗಿ ಮಾಡಿಟ್ಟಿದ್ದರು.
ನಾವು ಅದನ್ನು ಹಾಳು ಮಾಡ್ತಾಯಿದ್ದೇವೆ.ಹಾಗೆ ನೋಡಿದರೆ ಈ ವಿಜ್ಞಾನ ನಮ್ಮನ್ನು ಸೋಮಾರಿಗಳಾಗಿ ಮಾಡಿದೆ.
http://bangalore.praja.in/2007/07/31/candle-light-vigil-save-hebbal-lake...

ಈಗ ನೋಡಿ ಹೆಬ್ಬಾಲ್ ಕೆರೆಯು ಗೋತಾ, ಈ ಓಬೆರಾಯ್ ಹೋಟೆಲ್ ನವರಿಗೆ.
ವಿಶ್ವೇಶ್ವರಯ್ಯನವರು ಮತ್ತು ಜಗದೀಶ್ ನಿಜವಾದ ವಿಜ್ಞಾನಿಗಳೂ, ಬಿಡಿ ಅವರ ಬಗ್ಗೆ ಯಾರೇನು ಹೇಳೋದು.
ಅವರಿಗೆ ಬರೀ ಬುರುಡೆ ಇರಲಿಲ್ಲಾ , ಹೃದಯವು ಇತ್ತು.
ಈಗಿನ ವಿಜ್ಞಾನಿಗಳಿಗೆ ಬರೀ ನಾಲಿಗೆ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
August 2, 2007 - 1:12pm — ವೈಭವ

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

ವೈಭವ's picture

ಅದಕ್ಕೆ ನಾನು ನಮ್ಮ ಮನೆಯಲ್ಲಿ ನೀರು ಹಿಂಗು ಗುಂಡಿ(recharge well) ಮಾಡ್ಸಿದ್ದೀನಿ. ಇವರ ನೆರವಿಂದ www.rainwaterclub.org
ಮತ್ತೆ ಸಿಕ್ಕು ಸಿಕ್ಕದವರಿಗೆಲ್ಲ ನಾನು ಹೇಳುತ್ತಿದ್ದೀನಿ ನೀವು ನಿಮ್ಮ ಮನೆಯಲ್ಲಿ ನೀರು ಹಿಂಗು ಗುಂಡಿ ಮಾಡ್ಸಿ ಅಂತ.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 5:17pm — mahesha

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

mahesha's picture

Smiling ಮುರು ಮುರು ಮುರುಳಿ ದೇವ್ರೂ..

ಏನಿದು, ಎತ್ತಿಂದೆತ್ತಣ ಸಾಗಿಹುದೀ ನಿಮ್ಮ ಮಾತುಗಳಲೆ. ಅದು ಪಡುವೂ, ಮೂಡೋ, ಬಡಗೋ, ತೆಂಕೋ, ನಡುವೋ, ಮೇಲೋ, ಕೆಳವೋ, ಎಡವೋ, ಬಲವೋ, ಹಿಂದೋ, ಮುಂದೋ ಯಾವುದು ಗೊತ್ತಾಗ್ತಿಲ್ಲ. ಸುತ್ತಾ( ಸುತ್ತುತ್ತಾ ) ಇದೆ.

ಒಟ್ಟಿನಲ್ಲಿ ಸಿಂಪಲ್ಲಾಗಿ ಹೇಳಿದ್ರೆ ಚಿತ್ರಾನ್ನ! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 1:48pm — mahesha

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

mahesha's picture

ಮುರುಳಿ ದೇವರೇ

ನಿಮ್ಮ ಕಲಿಯುಲಿ ಓದಿದೋರು ಡಮಾರ್‍!! ನಂಗೆ ತಲೆ ಸುತ್ತು ಬಂದು, ಬಿದ್ದು ಎದ್ದು, ದಣಿವಾರಿಸಿಕೊಂಡು, ತುಸು ಸಕ್ಕರೇ-ನೀರುಂಡು ಮರುಬರೆಯ ಬಂದೆ.

ಇಷ್ಟೊಂದು ಪಡು-ಪಂಡಿತರ ಬರೆವಣಿಕೆ, ಉಂಕು, ಲೆಕ್ಕಗಳನ್ನು ತಲೆಗೆ ಹಾಕಿಕೊಂಡಿದ್ದೀರ, ಅಂದರೆ ನಿಮಗೂ ಈ ಪಡುವರ ಬಗ್ಗೆ ನೆಚ್ಚು, ಮೆಚ್ಚು ಐತೇ ಅಂತಾಯ್ತು. Smiling

ಆದ್ರೂ ತುಂಬಾ ಓದಿದ್ದೀರ.. ಓದಿ ಓದಿ ಕುಚಂಬಟ್ಟ ಆಗ್ತಾ ಇದ್ದೀರ. ನನಗೆ ಕುಚಂಬಟ್ಟರುಗಳು ಅಂದ್ರೆ ಬಲು ಮೆಚ್ಚು. ಪಾಪಾ.. ಲೋಗವನ್ನು ತಮ್ಮ ಕಣ್ಣು ಕನ್ನಡಕಗಳಿಂದ ನೋಡಿಕೊಂಡು, ತಮ್ಮ ಪಾಡಿ ತಾವು ತಮ್ಮ ತಮ್ಮ ಉಂಕು ನಡೆಸಿಕೊಂಡು, ತಮ್ಮ ತಮ್ಮ ಲೋಗದಲ್ಲಿ ತಾವೇ ಪಟ್ಟಕ್ಕೆ ಬಂದರಸರಾಗಾಳಿಕೊಂಡು ನಲಿದುಲಿದುಕೊಂಡು, ಬರೆದು ಕೊರೆದುಕೊಂಡು ಇರುತ್ತಾರೆ.

ನನ್ನಿ!! ಇನ್ನೂ ಬರಲಿ ನಿಮ್ಮ ಸರಕು, ನಮ್ಮ ತಲೆಗೆ ಸಲೀಸಾಗಿ ಇಳಿಯುವುದಾ? ಅನ್ನೋದಕ್ಕೆ ನೆಚ್ಚು ಇಲ್ಲ. Smiling

ವೈಬವ ಹೇಳಿದ್ದು ಬೇರೆ ಏನೋ, ಪಾಪಾ!! ವೈಬವ ಡಮಾರ್‍!! Smiling
============================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 3:46pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ಇಷ್ಟೊಂದು ಪಡು-ಪಂಡಿತರ ಬರೆವಣಿಕೆ, ಉಂಕು, ಲೆಕ್ಕಗಳನ್ನು ತಲೆಗೆ ಹಾಕಿಕೊಂಡಿದ್ದೀರ, ಅಂದರೆ ನಿಮಗೂ ಈ ಪಡುವರ ಬಗ್ಗೆ ನೆಚ್ಚು, ಮೆಚ್ಚು ಐತೇ ಅಂತಾಯ್ತು.
>>>>>>>>>>>>>> ಹೌದು ! ನಾನು ನವದರ್ಶನ೦ ಅನ್ನು ವ ಸ್ಥಳಕ್ಕೆ ಹೋಗಿದ್ದೆ. ಅಲ್ಲಿಗೆ ಈ ಜಪಾನ್ ರೈತ ನು ಬ೦ದಿದ್ದನ೦ತೆ.
ಅವನು ಬೆಳೆಸಿದ ರೀತಿ ಇವರು ತಮ್ಮ ಭೂಮಿಯನ್ನು ಕಾಪಾಡಿ ಕೊ೦ಡು ಬ೦ದಿದ್ದಾರೆ.
http://www.navadarshanam.org/
ಈತನೂ IIT ಯಲ್ಲಿ Electrical Engineering ಮಾಡಿ, ಆಮೇಲೆ Stanford ನಲ್ಲಿ ಓದಿ, ಮನುಷ್ಯನಿಗೆ ಭೂಮಿಯ
ಮೇಲೆ ಹತ್ಯಾಚಾರ ಮಾಡದೇ ಬದುಕಲು ಸಾಧ್ಯವೇ ಎ೦ಬ ಪ್ರಶ್ನೆಗೆ ಉತ್ತರ ಕ೦ಡು ಕೊಳ್ಳಲು ಈ ಪ್ರಯೋಗವನ್ನು ಮಾಡಿದ್ದಾರೆ.
ಹೀಗೆ ಕೆಲವು ಕೆಲಸಗಳನ್ನು ನೋಡಿದಾಗ ಅದರ ಹಿ೦ದೆ ಪ್ರೇರಣೆಗಿರುವವರನ್ನು ಅಧ್ಯಾಯನವನ್ನು ಮಾಡಿದೆ.
ನಿಮ್ಮೊ೦ದಿಗೆ ಹ೦ಚಿಕೊ೦ಡು ಕುಚ೦ಭಟ್ಟನಾದೆ Smiling

  • Login or register to post comments
  • link
  • Email this ಪ್ರತಿಕ್ರಿಯೆ
August 1, 2007 - 7:03pm — gc

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

gc's picture

ವಿದೇಶಿಯರು ನಮ್ಮ ಬಗ್ಗೆ ಬರೆದದ್ದೆಲ್ಲ ತಪ್ಪು ಅನ್ನುವವರ ಮೊಂಡುತನ ನೋಡಿದಾಗ ನೆನಪಿಗೆ ಬಂದದ್ದು - "Don't bother me with the facts. My mind is made up!!".

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ದಿಕ್ಕಿಲ್ಲವೆ?!!
  • ಕನ್ನಡ ರಾಜ್ಯೋತ್ಸವದ ಸವಿಹಾರೈಕೆಗಳು
  • ಪದಗಳು ......ಮರೆಯಾಗುವ ಮುನ್ನ!
  • ಪಂಪ ಮಾಲೆ - ತೀ.ನಂ.ಶ್ರೀ - DLI ಹೊತ್ತಗೆ ಸಿರಿ
  • ಇರಲಿ ನೋಟ ತಿರುಳ ಕಡೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
ಇನ್ನಷ್ಟು

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator