ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?

October 10, 2005 - 11:23am — prakashaka

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.

ಕರಾವಳಿಯಲ್ಲಿರುವ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ತುಳು ವಿಭಾಗವಿದೆ.. ಹಾಗೂ ನಾನು ನೋಡಿದಂತೆ.. ಮುಂಬಯಿಯ ಜನಪ್ರಿಯ ಪತ್ರಿಕೆ 'ಕರ್ನಾಟಕ ಮಲ್ಲ' ದಲ್ಲಿಯೂ ತುಳುವಿಗೆ ವಿಷೇಶ ಸ್ಥಾನವಿದೆ.

ನನ್ನ ಪ್ರಶ್ನೆಯೇನೆಂದರೆ.. ಒಂದು ವೇಳೆ ತುಳು ಬರಹಗಾರರಿದ್ದಲ್ಲಿ.. ಅವರಿಗಾಗಿ ಸಂಪದದಲ್ಲಿ ಜಾಗವಿದೆಯೇ? ಸಂಪದ ಓದುಗರು ಇದನ್ನ ಸ್ವೀಕರಿಸುವಿರಾ?

ತುಳುವಿಗೆ 'ಮಲಯಾಳ' ಸ್ವರೂಪದ ಲಿಪಿಯಿದ್ದರೂ ಆಧುನಿಕ ಸಾಹಿತ್ಯದಲ್ಲಿ ನಾನೆಲ್ಲಿಯೂ ಈ ತುಳು ಲಿಪಿಯ ಬರವಣಿಗೆ ನೋಡಿಲ್ಲ ಎಲ್ಲರೂ ಕನ್ನಡ ಲಿಪಿಯಲ್ಲೇ ಬರೆಯುತ್ತಿದ್ದಾರೆ...

ಓದುಗರೇ ನಿಮ್ಮ ಅಭಿಪ್ರಾಯವೇನು.. ಸಂಪದದಲ್ಲಿ ತುಳುವಿಗೆ ಸ್ಥಾನದ ಬಗ್ಗೆ..

ಧನ್ಯವಾದಗಳೊಂದಿಗೆ
ಪ್ರಕಾಶ್ ಶೆಟ್ಟಿ ಉಳೆಪಾಡಿ
ಒಬ್ಬ ತುಳುವ Eye-wink

‹ Dash Board ಗೆ ಕನ್ನಡದಾಗ ಏನ೦ತಾರ? ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1502 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2005 - 4:48pm — hpn

ನಮಗೂ ಕಲಿಸಿ ಉಪಯೋಗಿಸಿ ;)

hpn's picture

ತುಳು ಉಪಯೋಗಿಸಲು ಅಭ್ಯಂತರವೇನೂ ಇಲ್ಲ, ಆದರೆ ನಮಗದು ಅರ್ಥವಾಗಲ್ವಲ್ಲ!
--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 13, 2005 - 12:45pm — chidananda_b

ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ.

chidananda_b's picture

ಪ್ರಕಾಶಕ, ಈರ್ ಪ0ಡ್ ಣ ಸರಿ. (ಪ್ರಕಾಶಕ, ನೀವು ಹೇಳಿರುವುದು ಸರಿಯಾಗಿದೆ). ತುಳುವಿನೊ0ದಿಗೆ ಇತರ ಪ್ರಾದೇಶಿಕ ಭಾಷೆಗಳಾದ ಕೊಡವ, ಕೊ0ಕಣಿ ಭಾಷೆಗಳನ್ನೂ ಸೇರಿಸಿದರೆ ಇನ್ನೂ ಉಪಯುಕ್ತ. ಯಾಕೆ0ದರೆ ಇತರ ಕನ್ನಡಿಗರು ಈ ಭಾಷೆಗಳನ್ನು ಕಲಿಯಬಹುದು.

ಧನ್ಯವಾದಗಳೊ0ದಿಗೆ,
-ಚಿದಾನ0ದ ಬಿ, ಪುಣೆ. (13/10/2005)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 21, 2005 - 2:46pm — Rohit

ಪ್ರತ್ಯೇಕ ತುಳುನಾಡು

Rohit's picture

ಓದಿ ಆಶ್ಚರ್ಯ ಪಟ್ರ ? ಈವೊತ್ತು ಯಾಹೂ ಗ್ರೂಪ್ಸ್ನಲ್ಲಿ 'ಕನ್ನಡ' ಪದವನ್ನು ಸರ್ಚ್ ಮಾಡಿದಾಗ ತುಳುನಾಡು ಅನ್ನೋ ಒಂದು ಗ್ರೂಪ್ ನೋಡಿದೆ. ಅದರ ಉದ್ದೇಶಗಳು, ತುಳು ಭಾಷೆಯನ್ನು ಕನ್ನಡದಿಂದ ರಕ್ಷಿಸುವುದು, ತುಳು ಲಿಪಿಯನ್ನು ಮಾತ್ರವೇ ಬಳಸುವುದು, ಉಡುಪಿ, ಕೊಡಗು, ದಕ್ಷಿಣ ಕನ್ನಡ, ಕಾಸರಗೋಡುಗಳನ್ನೊಳಗೊಂಡ ಪ್ರತ್ಯೇಕ ತುಳುನಾಡು ರಾಜ್ಯ ಸ್ಥಾಪನೆಗೆ ಶ್ರಮಿಸುವುದು.

ಇನ್ನೇನ್ರಪ್ಪ, ಇಲ್ಲಿವರೆಗೂ ನಾವು ಯಾರನ್ನು ನಮ್ಮ ಸೋದರರೆಂದು ಕೊಂಡಿದ್ದೆವೋ, ಈಗ ಅವರೇ ನಮ್ಮ ಬೆನ್ನಿಗೆ ಇರಿಯಲು ತಯಾರಿ ನಡೆಸಿದ್ದಾರೆ. ಈಗ ಸದ್ಯ ಈ ಗುಂಪಿನ ಸದಸ್ಯ ಸಂಖ್ಯೆ ೯೯. ಇನ್ನು ಇದೇ ರೀತಿ, ಕೊಂಕಣಿಗರು, ತೆಲುಗರು ಎದ್ದು ನಿಂತರೆ ಈಗಿರುವ ಕನ್ಡ ನಾಡು ಒಡೆದು ಛಿದ್ರವಾಗಿ ಅರ್ಧ ಗಾತ್ರಕ್ಕೆ ಇಳಿಯುತ್ತೆ.

ಆದ್ರೆ, ಅವರು ಹೇಳುವ ಹಾಗೇ, ನಿಜವಾಗಲೂ ಕನ್ನಡ ಭಾಷೆಯನ್ನು ಅವರ ಮೇಲೆ ಅನವಶ್ಯಕವಾಗಿ ಹೇರುತ್ತಿದ್ದೇವೆಯೇ...? ನನ್ನಲ್ಲೇ ಪ್ರಶ್ನೆ ಹುಟ್ಟಿಕೊಂಡಿದೆ.

ಪವನಜರವರು ತಿಳಿಸಿದಂತೆ, ತುಳು ಲಿಪಿಯಿಂದ ಮಲಯಾಳ ಲಿಪಿ ಹುಟ್ಟಿದೆಯೆಂಬುದು ಅಷ್ಟು ಸಮಂಜಸವಲ್ಲ. ಬದಲಿಗೆ ಮಲಯಾಳ ಲಿಪಿಯಿಂದ ತುಳು ಲಿಪಿ ಹುಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ, ಮಲಯಾಳ ಲಿಪಿಯು, ಗ್ರಂಥ ಲಿಪಿಯಿಂದ ಬೆಳೆದು ಬಂದದ್ದಾಗಿದೆ. ತಮಿಳು, ಮಲಯಾಳ, ಹಾಗೂ ಸಿಂಹಳ ಭಾಷೆಯ ಲಿಪಿಗಳು ಈ ಪ್ರಾಚೀನ ಗ್ರಂಥ ಲಿಪಿಯಿಂದ ಹುಟ್ಟಿದಂಥವು. ಮಲಯಾಳ ಲಿಪಿಯಲ್ಲಿರುವ ಅನೇಕ ಅಕ್ಷರಗಳು ತಮಿಳು ಅಕ್ಷರಗಳನ್ನೇ ಹೋಲುತ್ತವೆ. ಉದಾ: ಉ,ಊ,ಕ,ಜ,ಣ,ನ,ಥ,ವ,ಯ,ರ ಇತ್ಯಾದಿ.

ಹೀಗಿರುವಾಗ ಮಲಯಾಳ ಲಿಪಿ ತುಳು ಲಿಪಿಯಿಂದ ಬಂದಿದೆ ಎಂಬುದು ಅಷ್ಟು ಸೂಕ್ತವಲ್ಲ. ಇದರ ಬಗ್ಗೆ ಕೆಲವು ವರ್ಷಗಳ ಹಿಂದೆ ತುಳುನಾಡು ಹಾಗೂ ಮಲಯಾಳದ ಕೆಲವು ವಿದ್ವಾಂಸರಿಗೂ ವಾಗ್ವಾದ ನಡೆದದ್ದು, ಅದು ಪತ್ರಿಕೆಯಲ್ಲೂ ಪ್ರಕಟವಾದದ್ದೂ ನೆನಪಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 21, 2005 - 8:37pm — pavanaja

ಪ್ರತ್ಯೇಕ ರಾಜ್ಯದ ಬೇಡಿಕೆ

pavanaja's picture

ಪ್ರತ್ಯೇಕ ರಾಜ್ಯದ ಬೇಡಿಕೆ ಹೊಸದೇನಲ್ಲ. ಇದು ಎಲ್ಲ ಕಡೆ ನಡೆಯುತ್ತಿದೆ. ಯಾವುದೇ ಒಂದು ಪ್ರಾಂತದ ಅಭಿವೃದ್ಧಿ, ಇತರೆ ಭಾಗಗಳಿಗೆ ಹೋಲಿಸಿದಾಗ, ಹಿಂದೆ ಉಳಿದರೆ ಈ ಬೇಡಿಕೆ ಬರುತ್ತದೆ. ಇದು ತುಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ, ಕೊಡಗು, ಭಾಗಗಳಿಂದಲೂ ಈ ಬೇಡಿಕೆ ಬಂದಿತ್ತು. ಈ ರೀತಿ ಕೆಲವು ಪ್ರಾಂತಗಳನ್ನು ಕಡೆಗಣಿಸುವುದು ನಮ್ಮ ರಾಜಕಾರಣಿಗಳ ಒಂದು ದೊಡ್ಡ ದುರಾಭ್ಯಾಸ. ಮುಖ್ಯವಾಗಿ ರಾಜ್ಯದ ಒಂದು ಮೂಲೆಯಲ್ಲಿರುವ ಬೆಂಗಳೂರನ್ನು ರಾಜಧಾನಿಯಾಗಿ ಮಾಡಿದ್ದೇ ದೊಡ್ಡ ತಪ್ಪು. ಕನ್ನಡದ ಮೇಲೆ ತಮಿಳಿನ ಅತಿಯಾದ ಹೇರಿಕೆಗೂ ಇದೇ ಕಾರಣ.

ತುಳು ಲಿಪಿಯಿಂದ ಮಲಯಾಳ ಲಿಪಿ ಹುಟ್ಟಿತು ಎಂದು ನಾನು ಹೇಳಿಲ್ಲ. ಮಲಯಾಳಂ ಲಿಪಿಗಿಂತ ತುಳು ಲಿಪಿ ಹಳೆಯದು ಎಂದು ಮಾತ್ರ ನಾನು ಹೇಳಿದ್ದು. ಅದೂ ನಾನು ಇತರರು ಹೇಳಿದ್ದನ್ನು ಪುನರುಚ್ಚರಿಸಿದ್ದು ಮಾತ್ರ. ದಕ್ಷಿಣ ಭಾರತದ ಭಾಷೆಗಳಲ್ಲಿ ಅತಿ ಹಳೆಯದು ತಮಿಳು. ಎಲ್ಲಕ್ಕಿಂತ ಕಡಿಮೆ ಪ್ರಾಯದ್ದು ಮಲಯಾಳಂ ಎಂದು ಭಾಷಾ ಸಂಶೋಧಕರು ಹೇಳಿರುವುದನ್ನು ಓದಿದ ನೆನಪು. ದಾಖಲೆಗಳನ್ನು ಕೇಳಬೇಡಿ. ಮಲಯಾಳಂ, ತುಳು ಲಿಪಿಗಳು ತಮಿಳಿನಿಂದ ಕವಲೊಡೆದು ಬಂದಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 21, 2005 - 11:54pm — ಶ್ಯಾಮ ಕಶ್ಯಪ

ತುಂಬಾ ಆತಂಕಕಾರಿಯೇನಲ್ಲ

ಶ್ಯಾಮ ಕಶ್ಯಪ's picture

ಪ್ರತ್ಯೇಕ ರಾಜ್ಯಗಳ ಬೇಡಿಕೆ ಹಲವು ಬಾರಿ ಪ್ರಾದೇಶಿಕ ಆಡಳಿತದ ದಕ್ಷತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗೆಯೇ ಯಾವುದೇ ಪ್ರಾಂತ್ಯಕ್ಕೆ ವಿಕೇಂದ್ರೀಕೃತ ಆಡಳಿತ (ಉದಾಹರಣೆಗೆ ತುಳು ಪ್ರಾಂತ್ಯದ ಆಡಳಿತ ಅಲ್ಲಿಯೇ ನೆಲೆಸಿರುವ ಜನರ ಅಧಿಕಾರದಲ್ಲಿರುವಂತಹದ್ದು) ಸಹಾಯಕಾರಿಯೇ. ನಮ್ಮ ಸರ್ಕಾರಗಳಲ್ಲಿ ಈ ರೀತಿಯ ವಿಕೇಂದ್ರೀಕರಣಕ್ಕೆ ಸಹಜವಾದ ವಿರೋಧವಿರುವುದರಿಂದ (ಇದರಿಂದ ಅವರ ಬಲ ಕಡಿಮೆಯಾಗುವುದೆಂದು ಅವರ ಚಿಂತೆ) ಹತಾಶಗೊಂಡ ಪ್ರಾಂತ್ಯಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆ ತರುವುದು ಒಂದು ನಿಟ್ಟಿನಲ್ಲಿ ಒಳ್ಳೆಯ ವಿಚಾರವೇ.. ಆದರೆ ಇದರಿಂದಾಗಿ ಸಮಾಜ ಮತ್ತು ಸಂಸ್ಕೃತಿ ಕೂಡ ಒಡೆದರೆ ಮಾತ್ರ ಪರಿಸ್ತಿತಿ ಬಿಗಡಾಯಿಸುತ್ತದೆ. ಪ್ರತ್ಯೇಕ ತುಳುನಾಡಾಗಲೀ ಪ್ರತ್ಯೇಕ ಕೊಡಗು ರಾಜ್ಯವಾಗಲೀ ಈ ನಿಟ್ಟಿನಲ್ಲಿ ಅಂತಹ ಆತಂಕಕಾರಿಯೇನಲ್ಲ.

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2005 - 5:06pm — Rohit

ಎಡ್ಡೆ ವಿಚಾರ

Rohit's picture

ಗೆಳೆಯ ಪ್ರಕಾಶ್ರವರೆ,

ಈರೆನ ವಿಚಾರ ಎಡ್ಡೆ ಉಂಡು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2005 - 5:30pm — prakashaka

ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ)

prakashaka's picture

ರೋಹಿತೆರೆ, ಈರ್ಲಾ ತುಳುತಾರ್ ಪಂದ್ ತೆರಿದ್ ಎಂಕ್ ಮಸ್ತ್ ಖುಷಿ ಆಂಡ್.. ಆಂಡ ಮುಲ್ತ ಮಸ್ತ್ ಜನೊಕುಲೆಗ್ ತುಳು ಬರ್ಪುಜಿ.. ಐಕಾತ್ರ ಒಂಜಿ ಬೇರ ಮಲ್ಪುಗ. ನಮ ಬರೆಯಿನ ತುಳುನು ಅಂಚೆನೆ ಕನ್ನಡೊಡುಲಾ ಕೊರುಂಡ ಅಕಲೆಗ್ಲಾ ಅರ್ಥ ಆವತ್ತೆ ದಾನೆ ಪನ್ಪರ್?
(ರೋಹಿತ್ ಅವರೆ, ನೀವೂ ತುಳುವಿನವರೆಂದು ತಿಳಿದು ನನಗೆ ತುಂಬಾ ಖುಷಿ ಆಯ್ತು.. ಆದರೆ ಇಲ್ಲಿನ ಹಲವಾರು ಮಂದಿಗೆ ತುಳು ಬರುವುಇಲ್ಲ... ಆದ್ದರಿಂದ ನಾವು ಹೀಗೆ ಮಾಡುವ. ನಾವು ಬರೆದ ತುಳುವನ್ನು ಕನ್ನಡದಲ್ಲೂ ಕೊಟ್ಟರೆ ಅವರಿಗೂ ಅರ್ಥ ಆಗಬಹುದು ಏನಂತೀರಾ?)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2005 - 6:08pm — Rohit

ಸಮ

Rohit's picture

ಈರ್ ಸಮ ಪಂತೆರ್. ಆಂಡ ಎನ್ನತ್ ಮಾತೃಭಾಷೆ ಕನ್ನಡ. ಒಂತೆ ತುಳು ಬರ್ಪುನು ! (ನೀವು ಹೇಳಿದ್ದು ಸರಿ. ಆದ್ರೆ ನನ್ನ ಮಾತೃಭಾಷೆ ಕನ್ನಡ. ಸ್ವಲ್ಪ ತುಳು ಬರುವುದು.)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 4:09pm — pavanaja

ಎನ್ನಲಾ ಅಂಚನೆ (ನನ್ನದೂ ಹಾಗೆನೇ)

pavanaja's picture

ಎನ್ನಲಾ ಮಾತೃಭಾಷೆ ಕನ್ನಡ. ಆಂಟ ತುಳು ಬರ್ಪುಂಡು. ದಾಯೆ ಪಂಡ ಎನ್ನ ಊರು ಸುಳ್ಯ-ಪುತ್ತೂರು ಮಧ್ಯೆ ಉಂಡು. (ನನ್ನ ಮಾತೃಬಾಷೆ ಕನ್ನಡ. ಆದರೆ ತುಳು ಬರ್ತದೆ. ಯಾಕೆಂದರೆ ನನ್ನ ಊರು ಸುಳ್ಯ-ಪುತ್ತೂರು ಮಧ್ಯೆ ಇದೆ).

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 9:34am — ಶ್ಯಾಮ ಕಶ್ಯಪ

ಅಷ್ಟೇ ಶಿವ..

ಶ್ಯಾಮ ಕಶ್ಯಪ's picture

ಅಷ್ಟೇ ಶಿವ.. ತುಳುನಲ್ಲೇ ಬರೀರಿ.. ಕನ್ನಡ ಭಾಷಾಂತರ (ಸಣ್ಣದಾಗಿಯಾದರೂ) ಕೊಟ್ಟರೆ ನಾವು ಸ್ವಲ್ಪ ತುಳು ಕಲ್ತ್ಕತೀವಿ! ಸಧ್ಯಕ್ಕೆ ತುಳು ಬರ್ಪುಜ್ಜಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2005 - 6:29pm — olnswamy

ಸಂಪದದಲ್ಲಿ ಖಂಡಿತ ಸ್ಥಳವಿರಬೇಕು

olnswamy's picture

ತುಳು ಮಾತ್ರವಲ್ಲ, ಕೊಂಕಣಿ, ಕೊಡವ ಮೊದಲಾದ ಕನ್ನಡ ಲಿಪಿಯನ್ನು ಬಳಸುವ ಎಲ್ಲ ಸ್ಥಳೀಯ ಭಾಷೆಗಳಿಗೂ ಸಂಪದದಲ್ಲಿ ಸ್ಥಳವಿರಬೇಕು. ಕನ್ನಡದ ಬಳಗದ ಭಾಷೆಗಳು ಇವೆಲ್ಲ. ಕನ್ನಡದ ಉಗ್ರಹೋರಾಟಗಾರರ ಪಂಥಕ್ಕೆ ಸಂಪದ ಸೇರಿಲ್ಲ ಎಂದು ಭಾವಿಸಿದ್ದೇನೆ. ತುಳು ಗೆಳೆಯರು ತುಳುವಿನ ಪಾಠವನ್ನು ನಮಗೂ ಕಲಿಸಿದರೆ ಚೆನ್ನಾಗಿರುತ್ತದೆ. ಕಾದಿರುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 12:28pm — pavanaja

ತುಳು ತೆರಿಲೆ (ತುಳು ಕಲಿಯಿರಿ)

pavanaja's picture

ತುಳು ಕಲಿಸುವ ತಾಣ ಇಲ್ಲಿದೆ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 6:30pm — olnswamy

ತುಳು ತಾಣ ನೋಡಿದೆ

olnswamy's picture

ಪ್ರಿಯ ಪವನಜ,
ನೀವು ಸೂಚಿಸಿದ ತುಳು ಕಲಿಕೆ ತಾಣ ನೋಡಿದೆ. ಉಪಯುಕ್ತವಾಗಿದೆ. ಅಭ್ಯಾಸ ಮಾಡಬಹುದು. ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2005 - 11:42pm — pnag1003

ಧಾನೆ ಶೆಟ್ಟರೆ

pnag1003's picture

ಯನ್ನ ತುಳು ಬರ್ಪುಜಿ . ಅರ್ಥ ಅಪುಂಡು ..

ಪ್ರಾರಂಭಿಸಿ... ತುಳು ಕೂಡ ಕನ್ನಡದ ಅಂಗ ಭಾಷೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 9:24am — tvsrinivas41

ಎಂಚಿನ ಮಾರಾಯ

tvsrinivas41's picture

ಎಂಚಿನ ಮಾರಾಯ.

ವಣಸ್ ಆಂಡ

ನನಗಿಷ್ಟೇ ಬರೋದು. ತುಳುವಿನಲ್ಲಿ ಹಳೆಗನ್ನಡ ಛಾಪಿದೆ ಅಲ್ಲವೇ? ನನಗೆ ತುಳುವಿನ ಪದಗಳನ್ನು ಕಲಿಸಿಕೊಡಿ

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 12:10pm — pavanaja

ತುಳು ಲಿಪಿ

pavanaja's picture

ಪ್ರಕಾಶ್ ಶೆಟ್ರೆ,

ಈರ್ ಪಣ್ಣ ಸರಿ. ಆಂಟ ತುಳು ಲಿಪಿ ಮಲಯಾಳಂ ಲಿಪಿತ್ತ ರೀತಿ ಅತ್ತು. ಮಲಯಾಳಂ ಲಿಪಿ ತುಳು ಲಿಪಿತ್ತ ಲೆಕ್ಕ ಉಂಡು. ಇತ್ತೆ ಕನ್ನಡೊಟ್ಟು ಬರೆಪ್ಪೆ.

ನೀವು ಹೇಳೀದ್ದು ಸರಿ. ಆದರೆ ತುಳು ಲಿಪಿ ಮಲಯಾಳಂ ಲಿಪಿ ರೀತಿ ಅಲ್ಲ. ಮಲಯಾಳಂ ಲಿಪಿ ತುಳು ಲಿಪಿ ರೀತಿ. ಯಾಕೆಂದರೆ ತುಳು ಬಾಷೆ, ಲಿಪಿ, ಮಲಯಾಳಂಗಿಂತ ಹಳೆಯದು. ಈಗಿನ ಪರಿಸ್ಥಿತಿ ಏನೆಂದರೆ, ಹಳೆ ತುಳು ಲಿಪಿಯನ್ನು ಯಾರೂ ಬಳಸುತ್ತಿಲ್ಲ. ತುಳು ಸಾಹಿತಿಗಳು ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳು ಭಾಷೆಯಲ್ಲಿ ಕನ್ನಡ ಭಾಷೆಗಿಂತ ನಾಲ್ಕು ಅಕ್ಷರಗಳು ಜಾಸ್ತಿ ಇವೆ. ಕನ್ನಡ ಲಿಪಿಯಲ್ಲಿ ಈ ನಾಲ್ಕು ಅಕ್ಷರಗಳನ್ನು ಸೇರಿಸಬೇಕೆಂದು ನಾನು ಯುನಿಕೋಡ್ ಕನ್ಸೋರ್ಟಿಯಂಗೆ ತಿಳಿಸಿದ್ದೆ. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸಲು ತುಳು ಭಾಷಿಗರು ಹೋರಾಡಬೇಕು. ನಾನು ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಸ್ವಲ್ಪ ಕೆಲಸ ಮಾಡಿದ್ದೆ. ಮಂಗಳೂರಿನಲ್ಲಿ ಆಗಿನ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ವಾಮನ ನಂದಾವರ ಅವರನ್ನು ಭೇಟಿ ಮಾಡಿ ಅವರು ಏನು ಮಾಡಬೇಕೆಂದು ವಿವರಿಸಿದ್ದೆ. ಅವರ ಅವಧಿ ಮುಗಿಯಲು ಎರಡು ತಿಂಗಳು ಮಾತ್ರವಿದ್ದ ಕಾರಣ ಅವರು ಯಾವ ಹೆಜ್ಜೆಯನ್ನೂ ಇಡಲಿಲ್ಲ. ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಈಗಿನ ಅಧ್ಯಕ್ಷರಾಗಿರುವ ಸೀತಾರಾಮ ಕುಲಾಲರನ್ನು ಭೇಟಿ ಮಾಡಿ ಎಲ್ಲ ವಿವರಿಸಿದೆ. ಅವರು ಎರಡು ತಿಂಗಳ ನಂತರ ಈ ಬಗ್ಗೆ ಯೋಚಿಸೋಣ ಎಂದಿದ್ದಾರೆ.

ಮಾಡಬೇಕಾಗಿರುವುದು: ತುಳು ಸಾಹಿತಿಗಳು ಒಂದೆಡೆ ಸೇರಿ ತುಳು ಭಾಷೆಯನ್ನು ಬಳಸಲು ಕನ್ನಡ ಲಿಪಿಗೆ ಸೇರಿಸಬೇಕಾಗಿರುವ ಅಕ್ಷರಗಳ ಪಟ್ಟಿ ತಯಾರಿಸುವುದು. ತುಳು ಭಾಷೆಯ ಅಕಾರಾದಿ ವಿಂಗಡಣೆ ಹೇಗಿರಬೇಕು ಎಂದು ತೀರ್ಮಾನ ಮಾಡುವದು. ಒಂದು document ತಯಾರಿಸಿ ಅದನ್ನು ಕರ್ನಾಟಕ ಸರಕಾರ > ಭಾರತ ಸರಕಾರ ಮೂಲಕ ಯುನಿಕೋಡ್ ಕನ್ಸೋರ್ಟಿಯಂಗೆ ಕಳುಹಿಸುವುದು. ಈ ಎಲ್ಲ ಕೆಲಸಗಳಲ್ಲಿ ತಾಂತ್ರಿಕ ಸಹಾಯ ನಾನು ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ತುಳಿ ಭಾಷಿಗರು ಕ್ರಿಯಾಶೀಲರಾಗಬೇಕು. ನಾನು YahooGroupsನಲ್ಲಿ tulucomputing ಎಂಬ ಪಂಗಡವನ್ನೂ ಹುಟ್ಟುಹಾಕಿದ್ದೆ. ಯಾವ ಚಟುವಟಿಕೆಯೂ ಇಲ್ಲದೆ ಅದು ಸತ್ತುಹೋಯಿತು.
ಕೆಲವು ಲಿಂಕ್‌ಗಳು-
1. ಹಳೆ ತುಳು ಲಿಪಿ.
2. ಉಡುಪಿಯ ಪ್ರಾದೇಶಿಕ ಸಂಶೋಧನಾ ಕೇಂದ್ರದವರು ತಯಾರಿಸಿದ ತುಳು ನಿಘಂಟಿನ ಮೂರು ಪುಟಗಳು. ಇವು ತುಳು ವರ್ಣಮಾಲೆ ಮತ್ತು ಅವುಗಳ ಅಕಾರಾದಿ ವಿಂಗಡಣೆಯನ್ನು ತೋರಿಸುತ್ತವೆ - ಪುಟ -1, ಪುಟ -2, ಪುಟ -3.
3. ತುಳು ಭಾಷೆ ಬಗ್ಗೆ ನಾನು ಕೊಟ್ಟ ಮಾಹಿತಿ ಪ್ರಕಾರ ಯುನಿಕೋಡ್ ಕನ್ಸೋರ್ಟಿಯಂ ಸದಸ್ಯರಾದ ಮೈಕೇಲ್ ಎವರ್‌ಸನ್ ಅವರು ತಯಾರಿಸಿರುವ ತುಳು draft proposal.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 1:35pm — Rohit

ಕನ್ನಡಕ್ಕೂ ಬೇಕು

Rohit's picture

ಪಬನಜರವರೆ,

ತಾವು ತುಳುವಿಗಾಗಿ ಈಗಿರುವ ಕನ್ನಡ ಲಿಪಿಗೆ ಸೇರಿಸಬೇಕಾದ ಅಕ್ಷರಗಳ ಪಟ್ಟಿ ಮಾಡಿದ್ದೀರಿ. ಆದರೆ ಇದು ತುಳುವಿಗೆ ಮಾತ್ರ ಸೀಮಿತವಾಗಿರಬೇಕೆಂದೇನೂ ಇಲ್ಲ. ಕನ್ನಡ ಭಾಷೆಯ ಬಳಕೆಯಲ್ಲೂ ಈಗ ಕೆಲವು ಹೊಸ ವ್ಯಂಜನಗಳು, ಸ್ವರಗಳು ಸೇರಿಕೊಂಡಿವೆ. ಈಗ ಅವುಗಳಿಗಾಗಿ ಚಿಹ್ನೆಗಳನ್ನು ರೂಪಿಸಬೇಕಿದೆ. ಉದಾ: mat ನಲ್ಲಿರುವ ಸ್ವರಕ್ಕೆ ಕನ್ನಡದಲ್ಲಿ ಯಾವುದೇ ಚಿಹ್ನೆಯಿಲ್ಲ. ಮ್ಯಾಟ್ ಎಂದು ಸಾಮಾನ್ಯವಾಗಿ ಬರೆದು ಬಿಡುತ್ತೇವೆ. ಆದರಿದು ಸರಿಯಾದ ಉಚ್ಚಾರಣೆಯನ್ನು ಸೂಚಿಸುವುದಿಲ್ಲ. ಹಾಗೆಯೇ, fat ನಲ್ಲಿರುವ ವ್ಯಂಜನ f ಗೆ ಕೂಡ ಕನ್ನಡದಲ್ಲಿ ಚಿಹ್ನೆಯಿಲ್ಲ. ಫ ಬಳಸುತ್ತೇವಾದರೂ ಅದು ಸರಿಯಾದದ್ದಲ್ಲ. ಹಾಗೇ z ಕೂಡ. ಇವುಗಳಿಗೆ ಕನ್ನಡದಲ್ಲಿ ಆದಷ್ಟು ಬೇಗ ಚಿಹ್ನೆಗಳನ್ನು ಸೇರಿಸುವುದೊಳಿತು ಎಂಬುದು ನನ್ನ ಮತ. ಈಗ ಹೆಚ್ಚು ಹೆಚ್ಚು ಎರವಲು ಪದಗಳು ಕನ್ನಡದಲ್ಲಿ ಬಳಕೆಯಾಗುತ್ತಿರುವಾಗ, ಕನ್ನಡ ಲಿಪಿ ಈ ಹೊಸ ಸ್ವರ ವ್ಯಂಜನಗಳನ್ನೊಳಗೊಂಡು ಬೆಳೆದರೊಳಿತು.

ಯುನಿಕೋಡ್ ಚಾರ್ಟ್ ನೋಡಿದಾಗ ಈ ಕೆಲವು ಚಿಹ್ನೆಗಳು ಕಣ್ಣಿಗೆ ಬಿದ್ದವು. ಅವುಗಳ ಕೋಡ್, 0CE1, 0C8C. ಇವುಗಳ ಬಳಕೆ ಎಲ್ಲಿದೆ. ನನ್ನ ಗಮನಕ್ಕಂತೂ ಇವು ಬಂದಿಲ್ಲ. ಹಾಗೇ, ಈಗಿರುವ ಯುನಿಕೋಡ್ ಕೀಲಿಮಣೆಗಳಲ್ಲಿ 0CB1 ಇರುವುದಿಲ್ಲ. ಇದು ಒಂದು ಕೊರತೆಯೇ ಅಲ್ಲವೇ. ಕಗಪ ಕೀಲಿಮಣೆ ರೂಪಿಸಿದವರೂ ಇದರತ್ತ ಗಮನ ಹರಿಸದಿರುವುದು ಆಶ್ಚರ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 4:03pm — pavanaja

ಕನ್ನಡಕ್ಕೂ ಬೇಕು, ಒಪ್ಪಿದೆ

pavanaja's picture

ನೀವು ಹೇಳುವುದು ಸರಿ. ಕೆಲವು ಆಮದು ಪದಗಳನ್ನು ಬರೆಯಬೇಕಾದರೆ ಕನ್ನಡ ಲಿಪಿಗೆ ಹೆಚ್ಚಿನ ಅಕ್ಷರಗಳನ್ನು ಸೇರಿಸಬೇಕು. ಈಗಾಗಲೇ ನುಕ್ತ (0CBC) ಮತ್ತು ಅವಗ್ರಹಗಳನ್ನು (0CBD) ಸೇರಿಸಲಾಗಿದೆ. ಆದರೆ ಈಗಿರುವ Inscript ಕೀಲಿಮಣೆಗಳಲ್ಲಿ ಇವುಗಳನ್ನು ಸೇರಿಸಬೇಕಾಗಿದೆ. 0CE1 ಮತ್ತು 0C8C ಗಳು ಸಂಸ್ಕೃತದಿಂದ ಆಮದಾದವು. ಆಮದಾದವು ಎನ್ನುವುದಕ್ಕಿಂತಲೂ ಸಂಸ್ಕೃತಕ್ಕೆ ಮಾತ್ರ ಬೇಕಾದವು ಎನ್ನಬಹುದು. ಅವುಗಳು ಕನ್ನಡಕ್ಕೆ ಅಗತ್ಯವಿಲ್ಲ. ಈಗಿರುವ ಕೀಲಿಮಣೆಯಲ್ಲಿ 0CB1 (ಱ) ಇದೆ. ಅದು Inscript ಕೀಲಿಮಣೆಯಲ್ಲಿ Shift+J. ಕರ್ನಾಟಕ ಸರಕಾರದ ಕೀಲಿಮಣೆಯಲ್ಲಿ r followed by shift+x. ಅದೇ ರೀತಿ ಹಳೆಗನ್ನಡದ ೞ ಬೇಕಿದ್ದಲ್ಲಿ L followed by shift+x.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 11, 2005 - 4:29pm — Rohit

ನುಕ್ತ ಏಕರೂಪತೆಯಿದ್ದಂತಿಲ್ಲ

Rohit's picture

ನುಕ್ತದ ಬಳಕೆಯಲ್ಲಿ ಏಕರೂಪತೆಯಿದ್ದಂತಿಲ್ಲ. ಅಂದರೆ ಕೆಲವರು f ಅನ್ನು ಫ ಎಂದು ಬರೆದರೆ ಕೆಲವರು ಇದಕ್ಕೆ ನುಕ್ತವನ್ನು ಸೇರಿಸಿ ಬರೆಯುತ್ತಾರೆ. ಹಾಗೆಯೇ z ಗೂ ಸಹ. ನನಗೆ ತಿಳಿದಿರುವಂತೆ ದಕ್ಷಿಣ ಏಷ್ಯಾದ ಭಾಷೆಗಳಲ್ಲಿ, ಸಿಂಹಳವನ್ನು ಹೊರತುಪಡಿಸಿ ಮತ್ಯಾವ ಭಾಷೆಯಲ್ಲಿಯೂ fat ನಲ್ಲಿರುವ ಸ್ವರಕ್ಕೆ ಚಿಹ್ನೆಯಿಲ್ಲ. ಯಾರಾದ್ರೂ ವಿದ್ವಾಂಸರುಗಳು ಇದ್ರ ಕಡೆ ಗಮನ ಹರಿಸಿದ್ರೆ ಕನ್ನಡದಲ್ಲೂ ಇವುಗಳನ್ನು ಸೇರಿಸಬಹುದು. ಮರಾಠಿಯಲ್ಲಿ ಇದರ ಬಳಕೆಯಿದೆ. ಆದರೆ, ಅಲ್ಲಿ ಈ ಸ್ವರ ಪದದ ಕೊನೆಯಲ್ಲಿ ಮಾತ್ರ ಬಳಕೆಯಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2007 - 9:41pm — Aram

ಉ: ನುಕ್ತ ಏಕರೂಪತೆಯಿದ್ದಂತಿಲ್ಲ

Aram's picture

ತುಳು, ಕೊಡವ , ಬ್ಯಾರಿ, ಹವ್ಯಕ, ಕೋಟ, ಕೊಂಕಣಿ ಇವೆಲ್ಲವುಗಳನ್ನೂ ಸಂಪದದಲ್ಲಿ ನೋಡುವ ದಿನಗಳು ದೂರವಿಲ್ಲ ಹಾಗಾದರೆ.
ವೈವಿಧ್ಯತೆಯಲ್ಲಿ ಏಕತೆ?

ಒಂದು ಸಣ್ಣ ಸಂಶಯ ಪ್ರಕಾಶರೆ:

ಕನ್ನಡದ ಶ್ರೇಷ್ಟ ಕವಿ ಬೇಂದ್ರೆಯವರ ಮನೆಮಾತು ಮರಾಟಿ, ಆದರೆ ಅವರೆಂದೂ ಮರಾಟಿಯಲ್ಲಿ ಬರೆಯಲಿಲ್ಲ, ಮಾತ್ರವಲ್ಲ, ಅಪ್ಪಟಕನ್ನಡಿಗ, ರಾಷ್ಟ್ರಕವಿ ಕುವೆಂಪು ಅವರಂತೆ ತುಂಬಾ ಸಂಸ್ಕ್ರತ ಪದಗಳನ್ನೂ ತಮ್ಮ ಪದ್ಯಗಳಲ್ಲಿ ಉಪಯೋಗಿಸಲಿಲ್ಲ.

ನಿಮ್ಮೂರವರೇ ಆದ ಮುದ್ದಣ, ಪಂಜೆ ಮಂಗೇಶರಾಯ, ಮಂಜೇಶ್ವರ ಗೋವಿಂದ ಪೈ, ನಾ. ಡಿಸೋಜ, ಕನ್ನಡದ ಆಸ್ತಿ ಮಾಸ್ತಿ, ಗೊರೂರು ಅಯ್ಯಂಗಾರ್ , DVG, ಮಲಯಾಳಿ ನಾ.ಕಸ್ತೂರಿ, ಗಿರೀಶ ಕಾರ್ನಾಡ, BGL ಸ್ವಾಮಿ, ಇವರಲ್ಲಿ ಯಾರ ಮನೆಮಾತು ಕೂಡಾ ಕನ್ನಡವಲ್ಲ. ಅಷ್ಟು ಮಾತ್ರವಲ್ಲ ಅವರೆಂದೂ ತಂತಮ್ಮ ಮಾತ್ರ ಭಾಷೆಯಲ್ಲಿ ಬರೆಯುವ ಆಲೋಚನೆ ಕೂಡಾ ಮಾಡಲಿಲ್ಲ. ಯಾಕಿರಬಹುದು ?

ಹೀಗಿರಲು, ಇವರೆಲ್ಲರ legacy, ಪರಂಪರೆಯನ್ನು ಮುಂದುವರಿಸುವ ಜವಾಬ್ ದಾರಿ ನಮ್ಮನಿಮ್ಮಂಥಹ ಉದಯೋನ್ಮುಖ ಬರಹಗಾರರ ಮೇಲಿರುವಾಗ ನಾವು ನಮ್ಮ ನಮ್ಮ ಮನೆಮಾತಿನಲ್ಲೇ ಬರೆಯಲು ಪ್ರಾರಂಭಿಸಿದರೆ, ಕನ್ನಡ ಅಂದರೆ ಎನ್ನಡ ಎನ್ನುವ ಪರಿಸ್ಥಿತಿ ಬರಬಹುದೇ?

ನಿಮ್ಮಂತೆಯೇ ನನ್ನ ಮನೆಮಾತು ಕೂಡಾ ಕನ್ನಡವಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 4:04pm — kannadakanda

ಉ: 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?

kannadakanda's picture

ಕನ್ನಡ ಮತ್ತು ತುಳುಗಳ ತುಲನಾತ್ಮಕ ಅಧ್ಯಯನ ಮಾಡೋಣ. ನನ್ನ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ ಬೞಕೆ ಲೇಖನವನ್ನು ಓದಿ. ಆಮೇಲೆ ಚರ್ಚೆ ಮಾಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
  • ತುಳುಕ್ಲಾ ಒಂತೆ ಜಾಗೆ ಕೊರ್ಲೆ
  • ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
  • ಮಂಗಳೂರಿನಲ್ಲಿ ತುಳು
Syndicate content

ಲೇಖಕರು

prakashaka's picture

ಪರಿಚಯ

www.prakashaka.com ಅಂತರ್ಜಾಲ ತಾಣದ ಸಂಪಾದಕನಾಗಿರುವ ನಾನು, ಮೂಡಬಿದ್ರೆಯ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.
ನನ್ನ ಸ್ವಂತ ಊರು, ಮಂಗಳೂರು ತಾಲೂಕಿನ ಉಳೆಪಾಡಿ ಎಂಬ ಚಿಕ್ಕ ಹಳ್ಳಿ.
ಅಂತರ್ಜಾಲದಲ್ಲಿ ಕನ್ನಡ ಪತಾಕೆಯು ಸದಾ ಹಾರುತ್ತಿರಬೇಕೆಂಬುದೇ ನನ್ನ ಆಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
ಇನ್ನಷ್ಟು


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator