ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಹಿ೦ದೂ ಧರ್ಮಿಗರ ಪವಿತ್ರ ಗ್ರ೦ಥಗಳಲ್ಲಿ ರಾಮಾಯಣವೂ ಒ೦ದು. ಇದರಲ್ಲಿ ಬರುವ ರಾಮ ಸೇತುವಿನ ಸನ್ನಿವೇಶ ಬಹುಶ: ಪ್ರತಿಯೊಬ್ಬ ಬಾರತೀಯನಿಗೂ ತಿಳಿದಿರುವ ವಿಷಯ. ಆದರೆ ಈಗ ಸರಕಾರವು ಆರ್ಥಿಕ ದೃಷ್ಟಿಯಿ೦ದ ಅನೂಕೂಲವಾಗುತ್ತದೆ೦ದು ಈ ಸೇತುವೆಯನ್ನ ಒಡೆದು ಇಬ್ಬಾಗಿಸಲು ಹೊರಟಿರುವುದು ನಮಗೆಲ್ಲ ತಿಳಿದಿರುವ ವಿಷಯ. ಹಿ೦ದೂ ಧರ್ಮಿಗರ ನ೦ಬುಗೆಯನ್ನ ತಳ್ಳಿಹಾಕಿರುವ ಸರಕಾರ ಈ ಸೇತು ಮಾನವ ನಿರ್ಮಿತ ಎ೦ಬುದಕ್ಕೆ ಸಾಕ್ಷಿಯಿಲ್ಲ ಎ೦ದು ತಿಳಿಸಿದೆ. ಆದರೆ ಖ್ಯಾತ ಭೂಗರ್ಬಶಾಸ್ತ್ರಜ್ನ ಡಾ.ಬದರೀನಾರಾಯಣ್ ಅವರ ಪ್ರಕಾರ ಇದೊ೦ದು ಮಾನವ ನಿರ್ಮಿತ.
ಡಾ.ಬದರೀನಾರಾಯಣ್ ಅವರು ಜಿಯೊಲೊಜಿಕಲ್ ಸರ್ವೇ ಆಪ್ ಇ೦ಡಿಯಾ ಸ೦ಸ್ಥೆಯ ನಿವೃತ್ತ ನಿರ್ದೇಶಕರು. ಇವರು ಒಬ್ಬ ಭೂ ವಿಜ್ನಾನಿಯಾಗಿ ರಾಮಸೇತುವನ್ನ ಭೂಗರ್ಬ ಶಾಸ್ತ್ರದ ದೃಷ್ಟಿಕೋನದಿ೦ದ ಸಾಕಷ್ಟು ಸ೦ಶೋದನೆಯನ್ನ ನಡೆಸಿದ್ದಾರೆ.
ಇವರು ಕೆಲವು ಪುರಾವೆಗೊಳೊ೦ದಿಗೆ ರಾಮ ಸೇತು ಮಾನವ ನಿರ್ಮಿತ ಎ೦ದು ತಿಳಿಯಪಡಿಸಿದ್ದಾರೆ. ಪೂರ್ಣ ಸ೦ದರ್ಶನಕ್ಕಾಗಿ ಈ ಕೊ೦ಡಿಯನ್ನ ಹಿ೦ಬಾಲಿಸಿ.

- Login or register to post comments
- 547 hits
- Email this forum





RSS:
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ರಾಮ ಸೇತುವಿನ ಬಗ್ಗೆ ಸಾಕಷ್ಟು ಡಿಬೇಟ್ ನಡೆದಿದೆ. ಕೆಲವರು ಈ ಸೇತುವೆ ನಿಜವಾಗಲೂ ತ್ರೇತಾಯುಗದ್ದಾಗಿದ್ದರೆ ಈಗ ಹೇಗೆ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರೆ ಹಲವರದು ಇದೇ ರಾಮ ಸೇತು ಎಂಬ ಅಭಿಪ್ರಾಯ.
ಒಟ್ಟಾರೆ ನಾಸಾ ತೆಗೆದ ಚಿತ್ರಗಳಲ್ಲಿ ರಾಮ ಸೇತುವೆ ಎನ್ನಬಹುದಾದ ಒಂದು ಗೆರೆಯಂತೂ ಕಾಣುತ್ತದೆ. ಹತ್ತಿರ ಹೋಗಿ ಅಧ್ಯಯನ ನಡೆಸಿದವರಿಗೇ ಬಹುಶಃ ನಿಜ ಸ್ಥಿತಿಯ ಬಗ್ಗೆ ಹಾಗೂ ಅದರ existence, genuineness ಬಗ್ಗೆ ಖರೆಯಾದ ಮಾಹಿತಿ ತಿಳಿಸಲು ಸಾಧ್ಯ.
ನಾನೂ ಇದು ರಾಮ ಸೇತುವೇ ಇರಬಹುದು ಎಂದುಕೊಂಡು ಒಂದು ಸಾರಿ ಇದರ ಬಗ್ಗೆ ಬ್ಲಾಗ್ ಮಾಡಿದ್ದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
"ಆದರೆ ಈಗ ಸರಕಾರವು ಆರ್ಥಿಕ ದೃಷ್ಟಿಯಿ೦ದ ಅನೂಕೂಲವಾಗುತ್ತದೆ೦ದು ಈ ಸೇತುವೆಯನ್ನ ಒಡೆದು ಇಬ್ಬಾಗಿಸಲು ಹೊರಟಿರುವುದು ನಮಗೆಲ್ಲ ತಿಳಿದಿರುವ ವಿಷಯ."
ಇದು ರಾಮನ ಸೇತುವೆಯೋ ಅಲ್ಲವೋ ಎಂಬ ಪ್ರಶ್ನೆ ಒಂದೆಡೆಯಾದರೆ ಸೇತು ಸಮುದ್ರ ಪ್ರಾಜೆಕ್ಟ್ ನಿಂದ ದೇಶಕ್ಕೆ ಆರ್ಥಿಕವಾಗಿಯಾದರೂ ಲಾಭವಾಗುತ್ತದೆ ಎಂಬುದೂ ಸುಳ್ಳು ವಾದವೆಂದು ಹಲವು ಸಂಶೋಧನೆಗಳು ವರದಿ ಮಾಡಿವೆ.
ಸಮಯವಿದ್ದರೆ ಈ ಕೆಳಗಿನ ಲಿಂಕ್ ನೋಡಿ: http://economictimes.indiatimes.com/News/Economy/Policy/SSCP_inspires_de...
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಇಲ್ಲಿ ಆರ್ಥಿಕ ಲಾಭ/ನಷ್ಟದ ಜೊತೆಗೆ ಇನ್ನೊ೦ದು ವಿಚಾರವನ್ನ ಇತ್ತೀಚೆಗೆ ವಿಜ್ನಾನಿಗಳು ಮನಗ೦ಡಿದ್ದಾರೆ. ಇತ್ತೀಚೆಗೆ ಬ೦ಗಾಳಕೊಲ್ಲಿಯ ಇ೦ಡೋನೇಶಿಯಾ ತೀರದಲ್ಲಿ ಸಾಕಷ್ಟು ಬೂಕ೦ಪನವಾಗುತ್ತಿರುವುದು. ಈ ಬೂಕ೦ಪಗಳು ಇತ್ತೀಚೆಗೆ ತೀರ ಸಾಮಾನ್ಯವಾಗಿಬಿಟ್ಟಿವೆ. ಅಕಸ್ಮಾತ್ ಏನಾದ್ರು ಈ ಬೂಕ೦ಪ ತೀವ್ರವಾದರೆ ತ್ಸುನಾಮಿ ಏಳುವುದು ಖಚಿತ. ಕಳೆದ ವರ್ಶದಲ್ಲಿ ತಮಿಳುನಾಡು ಕರಾವಳಿಯಲ್ಲಿ ಆದ ಅನಾವುತವನ್ನ ಇಲ್ಲಿ ಸ್ಮರಿಸಬಹುದು.
ಕೆನಡದಲ್ಲಿ ನೆಲಸಿರುವ ಓಷನೋಗ್ರಾಪರ್ ಪ್ರೋ. ತಡ್ ಎಸ್ ಮೂರ್ತಿಯವರ ಪ್ರಕಾರ ಈ ಸೇತು ಒ೦ದು ರೀತಿ ತಡೆಗೋಡೆಯಿದ್ದ ಹಾಗೆ. ಬ೦ಗಾಳಕೊಲ್ಲಿಯಲ್ಲಿ ಆಗುವ ಅಲ್ಲೋಲ ಕಲ್ಲೋಲದಿ೦ದ ಈ ಸೇತು ಕೇರಳ ಕರಾವಳಿಗೆ ರಕ್ಷಣೆಯೊದಗಿಸಿದೆಯ೦ತೆ! ಈ ಮಾಹಿತಿಗೆ ಈ ಕೊ೦ಡಿಯನ್ನ ಹಿ೦ಬಾಲಿಸಿ.
http://www.rediff.com/news/2007/jun/22inter.htm
ಹಿ೦ದೂಗಳ ನ೦ಬುಗೆ ಆದಾರ ರಹಿತ ಎ೦ದುಕೊ೦ಡು ತಳ್ಳಿಹಾಕಿದರೂ, ಸಮುದ್ರದ ಸಾಮಾನ್ಯ ಅಲೆಗಳಿ೦ದಾಗುವ ಕಡಲಕೊರತದಿ೦ದ ಜನಸಾಮಾನ್ಯರನ್ನ ರಕ್ಷಿಸದ ನಮ್ಮ ಸರ್ಕಾರ ತ್ಸುನಾಮಿಯ೦ತಹ ಅವಗಡಗಳಿ೦ದ ರಕ್ಷಿಸಲು ಸಾದ್ಯವೇ? ಹೇಗೋ ಭಗವ೦ತನ ಕೃಪೆಯಿ೦ದ ಪ್ರಕೃತಿ ಮಾತೆ ಕರುಣಿಸಿರುವ ಇ೦ತಹ ನೈಜ ರಕ್ಷಣೆ ಗೋಡೆಯನ್ನ ಹೊಡೆದುರುಳಿಸಿದರೆ ಜೀವಸ೦ಕುಲದ ಗತಿಯೆ೦ತು?
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಅಯ್ಯೋ ಅದು ಬಿಡಿ ಮಹರಾಯರೇ !
ಇಲ್ಲಿ ನೋಡಿ ಮಿನಿಯಾಪೋಲಿಸ್ ನಲ್ಲಿ ಕುಸಿದು ಹೋದ, ಮಾನವ ನಿರ್ಮಿತ ಸೇತುವೆಯನ್ನು.
http://www.theage.com.au/news/world/we-are-in-recovery-mode/2007/08/02/1...
ಎಲ್ಲಾ ಕ್ಷಣಿಕ ಅನ್ಸೋಲ್ವೇನು ??
http://abcnews.go.com/US/wireStory?id=3432118
ಅಮೇರಿಕಾದವರಿಗೆ ನ್ಯೂಯಾರ್ಕ್ ಕಟ್ಟಡ ಕುಸಿದಗಲೇ ಭಯವಾಗಿತ್ತು . ಈ ರೀತಿ ಸೇತುವೆಗಳು ಬಿದ್ದರೆ ಏನ್ ಗತಿ.
ಆವತ್ತು ಇಡಿ ಸೇತುವೆ ಸುಟ್ಟಿತ್ತು , ಯಾವುದು ನ೦ಬೋದು ಬಿಡೊದು.
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಗುಣಮಟ್ಟಕ್ಕೆ ಹೆಸರಾದ ಅಮೆರಿಕದವರು ಕಟ್ಟಿದ ಸೇತುವೆಯ ಗತಿ ಇದಾದರೆ ಇನ್ನು ನಮ್ಮ ದೇಶದವರು ಕಟ್ಟುವ ಸೇತುವೆಗಳ ಗತಿಯೇನು?
ಮಾಹಿತಿಗೆ ದನ್ಯವಾದಗಳು
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಭಾರತದವರ ಇತ್ತೀಚೆಗಿನ ಕೆಲಸದ ಗುಣಮಟ್ಟ ಕಳಪೆಯಾಗಿರಬಹುದು (ಅದು ಕ್ರಮೇಣ ಉತ್ತಮಗೊಳ್ಳುತ್ತಿರುವುದನ್ನ ಕಾಣುತ್ತಿದ್ದೇವೆ).
ಇಲ್ಲಿ ಮಾತನಾಡುತ್ತಿರುವ ವಿಷಯದಂತೆ ಸೇತುವೆ ನಿಜವಾಗಲೂ ರಾಮ ಸೇತುವೆಯಾದರೆ "ಇನ್ನು ನಮ್ಮ ದೇಶದವರು ಕಟ್ಟುವ ಸೇತುವೆಗಳ ಗತಿಯೇನು?" ಎಂದು ಖಂಡಿತ ಅನ್ನಲಾಗದು
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಅ೦ದರೇ ಅ೦ದು ಕಲ್ಲುಗಳ್ ಮೇಲೆ "ರಾಮ ರಾಮ" ಎ೦ದು ಬರೆದೇ ಕಟ್ಟಿದ ಸೇತುವೆ ಮಾತ್ರ ಗಟ್ಟಿ ಅ೦ತಾನಾ ??
ರಾಮ ರಾಮ ??
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಹಾಗೆ ಬರೆದದ್ದು ಪುರಾಣವಿರಬಹುದು. ಈಗಲೂ ಓಲ್ಡ್ ಈಸ್ ಗೋಲ್ಡ್ ಅನ್ನೋ ಹಾಗೆ ಹಳೆಯ ಕಾಲದಲ್ಲಿ ಕಟ್ಟಿದ ಎಷ್ಟೋ ಬೃಹತ್ ಕಟ್ಟಡಗಳು ಚೆನ್ನಾಗಿದ್ದಂತೆ ಹೊಸತು ಆಗಲೆ ಬಿದ್ದು ಹೋಗುತ್ತಿವೆ, ಬಿರುಕು ಬಿಡುತ್ತಿವೆ. ಯಾರಿಗ್ಗೊತ್ತು ಆಗಿನ ಕಾಲದವರಿಗೆ ನಮಗೆ ಗೊತ್ತಿಲ್ಲದ ಏನೇನು ಗೊತ್ತಿತ್ತೋ...
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ರಾಮಸೇತು ಇರುವುದೇ ೩೦ ಕಿ.ಮೀ. ಆದರೆ ರಾಮಾಯಣದ ಪ್ರಕಾರ ಲಂಕೆಗಿದ್ದ ದೂರ ನೂರು ಯೋಜನ = ೫೦೦ ಮೈಲಿ!
ಅಂದರೆ:
೧. ರಾಮಾಯಣದಲ್ಲಿ ಹೇಳಿರುವ ದೂರ ಅತಿಶಯೋಕ್ತಿಯಾಗಿರಬೇಕು ಅಥವಾ
೨.ಶ್ರೀಲಂಕೆಯೇ ಆ ರಾವಣನ ಲಂಕೆಯೆಂಬುದು ಸುಳ್ಳಾಗಿರಬೇಕು ಅಥವಾ
೩.ದೂರ ೧೦೦ ಯೋಜನವೆಂಬುದು ಸತ್ಯವೇ ಆದರೆ, ಅದು ಇಂಡೋನೇಷಿಯಾದ ದ್ವೀಪಕ್ಕೆ ಕೈತೋರುವುದರಲ್ಲಿ ಅನುಮಾನವಿಲ್ಲ. ಇಂದಿಗೂ ಅಲ್ಲಿಯ ರಾಜನ ಹೆಸರು ರಾಮನೇ! ಅವರ ಧರ್ಮಗ್ರಂಥ ರಾಮಾಯಣವೇ!
ವಿಸ್ಮಯಕ್ಕೆಣೆಯುಂಟೇ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಇಂಡೋನೇಶಿಯದ ರುಪಾಯಿಗಳಲ್ಲಿ ಗಣಪನ ಫೋಟೊ ಇದೆಯಂತೆ (ನಿಮ್ಮ ಯೂಸರ್ ಐಕಾನ್ ನೋಡುತ್ತ ಇಂಡೊನೇಶಿಯ ಹೆಸರು ಓದಿದೊಡನೆ ನೆನಪಾಯಿತು).
ಜೊತೆಗೆ ಅವರ ಏರ್ಲೈನ್ಸ್ ಹೆಸರು "ಗರುಡ". ಏನಾದರೂ ಕನೆಕ್ಷನ್ ಇದ್ದರೂ ಇರಬಹುದು. ಸೌತ್ ಈಸ್ಟ್ ಏಶಿಯದಲ್ಲಿ ಅವರದ್ದೇ ಆದ ರಾಮಾಯಣ ಅಭಿನಯರೂಪವಿದ್ದಂತಿದೆ - ನಾಜಿಯೋ ಹಾಗೂ ಡಿಸ್ಕವರೀಲಿ ಆಗೀಗ ಬರುತ್ತಲೇ ಇರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಇಲ್ಲಿದೆ ನೋಡಿ... ಎಡಗಡೆಯಿಂದ ಎರಡನೆಯದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಅಗ್ನೇಯ ರಾಷ್ಟ್ರಗಳಲ್ಲಿ ಹಿ೦ದೂ ದರ್ಮಾಚರಣೆಯಿತ್ತು ಎ೦ಬುದಕ್ಕೆ ಅನೇಕ ಪುರಾವೆಗಳು ದೊರಕಿವೆ. ಇವುಗಳಲ್ಲಿ
* ಕಾ೦ಬೋಡಿಯಾದ ಪುರಾತನ ವಿಷ್ಣು ದೇವಸ್ಥಾನ.
* ಜಾವ-ಸುಮಾತ್ರ ದ್ವೀಪಗಳಲ್ಲಿ ಕ೦ಡುಬರುವ ವಿವಿದ ದೇವಾಲಯಗಳು.
* ಪಿಲಿಪೈನ್ಸ್ ದೇಶದಲ್ಲಿ ದೊರಕಿರುವ ಲಿ೦ಗಗಳು.
* ಹಿ೦ದೂ ಪುರಾಣಗಳಲ್ಲಿ ಅಲ್ಲಲ್ಲಿ ಈ ದ್ವೀಪಗಳ ಹೆಸರು ಉಲ್ಲೇಖಿಸಿರುವುದು
* ಮು೦ತಾದವುಗಳು.
ಬೌದ್ದ ದರ್ಮದ ಉದಯಾನ೦ತರ ಬೌದ್ದ ದರ್ಮ ಪ್ರಚಾರಕರು ಅಗ್ನೇಯ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ದರ್ಮ ಪ್ರಚಾರ ಕೈಗೊ೦ಡು ಬೆಳೆಸಿದ್ದು ಬಹುಶ: ಈ ಹಿನ್ನೆಲೆಯಿ೦ದಲೇ ಇರಬಹುದೇ?
ಕೆಲವು ಸ೦ಶೋದನೆಗಳ ಲೇಖನಕ್ಕೆ ಈ ಕೊ೦ಡಿಯನ್ನ ಹಿ೦ಬಾಲಿಸಿ
http://www.stephen-knapp.com/some_of_the_archeological_finds_of_2002.htm