ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

August 2, 2007 - 10:30am — mahesha

ಕುಳಿಕೆ / ಕುೞಿಕೆ )

ಗಿಳಿಗೈಯಮ್ಮ

ಗುಡ್ಡು

ಪಾರ್ವತಿ/ಹಾರ್ಬತಿ

ಬಿಂಕು

ಬಸಡು/ಬಸಿಡು

ಅವುಡು-ತವುಡು

ಮೀಸಲು

ಹೆಮ್ಮಾರಿ

ಚೆಮ್ಮಾರ

ಹಸುಗೂಸು/ಪಸುಗೊಸು

‹ ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು? ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 525 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 2, 2007 - 11:29am — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ಕುಳಿಕೆ(ಕುಣಿಕೆ) ಬಿಗಿಯುವುದು ಅಂತ ಬಳಕೆ ಇದೆ. ಅಂದರೆ ಗಂಟುಹಾಕುವುದು(??)
ಗಿಳಿಗೈಯಮ್ಮ - ಬೇಲೂರಿನಲ್ಲಿರುವ ಒಂದು ಶಿಲಾಬಾಲಿಕೆಯ ಅಮ್ಮ Sticking out tongue
ಗುಡ್ಡು - ಗುಲ್ಡು->ಗುಡ್ಡು (??), ಕಣ್ಣುಗುಡ್ಡು
ಪಾರ್ವತಿ/ಹಾರ್ಬತಿ - ಅದು ಪಾರ್ವಿತಿ ಎಂದುಕೊಳ್ಳುತ್ತೇನೆ. ಬ್ರಾಹ್ಮಣ ಹೆಂಗಸು
ಬಿಂಕು - ಹೆಮ್ಮೆಯಿಂದ ತಂತಾನೇ ಉಂಟಾಗುವ ಹಾವಭಾವ
ಅವುಡು-ತವುಡು - ಇದು ಹೆಚ್ಚಾಗಿ ಎರಡು ರೀತಿ ಇದೆ.
೧. ಅವುಡು - ಹಲ್ಲುಗಳಿಗೆ ಸಂಬಂಧಪಟ್ಟ ಜಾಗ(??) - ಅವುಡುಗಚ್ಚು
೨. ಆಡಿಕೊಳ್ಳುವ ಪದ. ಕಿವುಡು ಕಿವುಡು ಅಂದರೆ ತವುಡು ತವುಡು.
ತವುಡು - ಹೊಟ್ಟು

ಮೀಸಲು - ಈ ಜೀವ ಅವಳಿಗೆ ಮೀಸಲು Eye-wink ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ..
ಹೆಮ್ಮಾರಿ - ದೊಡ್ಡ ಮಾರಿ. ಮಾರ(ಇನಿಯ, ಪ್ರಿಯತಮ)-ಮಾರಿ(ಪ್ರಿಯತಮೆ Laughing out loud) ಅಚ್ಚುಮೆಚ್ಚಿನ ಪ್ರಿಯತಮೆ
ಚೆಮ್ಮಾರ - ಚರ್ಮದ ಕೆಲಸ ಮಾಡುವವನು, ಹೆಚ್ಚಾಗಿ ಚಪ್ಪಲಿ ಹೊಲಿಯುವವನು
ಹಸುಗೂಸು/ಪಸುಗೊಸು - ಎಳೆಯದಾದ ಮಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 11:36am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಸರಿಗಳು
ಕುಳಿಕೆ(ಕುಣಿಕೆ) = ಬಿಗಿಯುವುದು, ಗಂಟು
ಪಾರ್ವತಿ/ಹಾರ್ಬತಿ - ಬ್ರಾಹ್ಮಣ ಹೆಂಗಸು, ಬ್ರಾಹ್ಮಣಗಿತ್ತಿ
ಹೆಮ್ಮಾರಿ - ದೊಡ್ಡ ಮಾರಿ. ಮಾರ(ಇನಿಯ, ಪ್ರಿಯತಮ)-ಮಾರಿ(ಪ್ರಿಯತಮೆ) ಅಚ್ಚುಮೆಚ್ಚಿನ ಪ್ರಿಯತಮೆ

ಮಿಕ್ಕವಲ್ಲಿ ತಪ್ಪಿದೆ. ಕುೞಿಕೆಗೆ ಇನ್ನೊಂದು ತಿಳಿವು ಕೊಡಬಹುದು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 11:44am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಪಾರ್ವತಿ ಮತ್ತು ಪಾರ್ವಿತಿ ಎರಡು ಸರಿ

ಗೌಡತಿ/ಗೌಡಿತಿ

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 11:45am — ವೈಭವ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

ವೈಭವ's picture

ಗಿಳಿಗೈಯಮ್ಮ - ಗಿಳಿ+ಕೈ+ಅಮ್ಮ = ಕೈಯಲ್ಲಿ ಗಿಳಿ ಹಿಡಿದವಳು ??

ಗುಡ್ಡು ??

ಬಿಂಕು = ಬಿಗುಮಾನ = ತೋರಿಕೆಯ ಜಂಬ

ಬಸಡು/ಬಸಿಡು ??

ಅವುಡು-ತವುಡು ??

ಮೀಸಲು = ಇದು ಕನ್ನಡದ ಒರೆಯೇ (ಅರೇಬಿಕ್ ಇರಭೌದು) , ಇದಕೆ ಕನ್ನಡದ ಒರೆ ಮುಡಿಪು

ಹೆಮ್ಮಾರಿ = ಹಿರಿ+ಮಾರಿ= ದೊಡ್ಡ ರತಿ ( ಮಾರ=ಮನ್ಮಥ, ಮಾರಿ= ರತಿ Smiling ) = ರೂಪವತಿ ಅಂತಲೇ???

ಚೆಮ್ಮಾರ = ಚೆನ್+ಮಾರ = ಚೆಂದದ ಮಾರ = ಅಂದವಾಗಿರುವ ಮನ್ಮಥ = ತುಂಬ ಚೆನ್ನಾಗಿರುವವ ??

ಹಸುಗೂಸು/ಪಸುಗೊಸು= ಹಸಿ+ಕೂಸು = ಆಗತಾನೆ ಹುಟ್ಟಿದ ಮಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 12:16pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಸರಿಗಳು

ಮೀಸಲು = ಮುಡಿಪು, ( ಮೀಸಲು ಕನ್ನಡವೇ http://dsal.uchicago.edu/cgi-bin/philologic/getobject.pl?c.1:1:2259.burr... )

ಹೆಮ್ಮಾರಿ = ಹಿರಿಮಾರಿ
ಚೆಮ್ಮಾರ = ಚೆನ್ನಾಗಿರುವ ಮಾರ, ಚಂದ ಮಾರ. ( ಚಮ್ಮಾರ = ಚಮ್ಮದ ಕೆಲಸದವನು, ತೊಗಲ ಕೆಲಸದವನು )

ಹಸುಗೂಸು = ಹಸಿ + ಕೂಸು = ಹಸಿ(fresh) ಕೂಸು(ಮಗು) = ಆಗತಾನೆ ಹುಟ್ಟಿದ ಮಗು

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 12:55pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

Ka. pasi, pasu, pasir, pasur, pacce, pace, pacca, paccu, paccane greenness, yellowish colour, golden colour; young sprouts or new leaves, growing corn, freshness, unripeness, rawness, youngness;

ಹಸಿ ತರಕಾರಿ ಎನ್ನವಲ್ಲಿಯ ಭಾವಕ್ಕೂ ಹಸಿ ಮೈ ಎನ್ನುವಲ್ಲಿಯ ಭಾವಕ್ಕೂ ತುಸು ವ್ಯತ್ಯಾಸವಿದೆ. ಹಸಿ ಮೈ ಎಂದರೆ ಇನ್ನೂ ಒಡ್ಡಾಗದ/ಪಕ್ಕಾಗದ ಮೈ. ಹಸುಗೂಸು ಎನ್ನುವ ಹಾಗೆ ಹಸುಕಂದ ಎಂಬ ಬಳಕೆಯೂ ಇದೆ. ಇದನ್ನು ಆಗತಾನೇ ಹುಟ್ಟಿದ ಕಂದ ಎನ್ನಲಾಗುವುದಿಲ್ಲ. ಆಗತಾನೇ ಹುಟ್ಟಿದ ಕೂಸು ಖಂಡಿತವಾಗಿಯೂ ಹಸುಗೂಸೇ. ಆದರೆ ಹಸುಗೂಸುಗಳೆಲ್ಲವೂ ಆಗತಾನೇ ಹುಟ್ಟಿದ ಮಕ್ಕಳಲ್ಲ.

ಕೊಳಂಬೆ ಪುಟ್ಟಣ್ಣಗೌಡರ ನಿಘಂಟು ಹೀಗೆ ಹೇಳುತ್ತದೆ. ಪಸುಳೆತನ - ಎಳವೆ - ಬಾಲ್ಯ. ಬೇಕಿದ್ದವರು ನೋಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 1:03pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಸರಿ.. ಎಳೆದುದಾದ ಅಂದ್ರೆ ?

ಎಳೆತಾದ ಸರಿ ಅಲ್ವಾ?

ಎಳೆದು, ಎಳೆತು ಇದಕ್ಕೆ ಬೇರೆತನವುಂಟಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 1:05pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಎಳೆದುದಾದ ಇದು ಎಳೆಯದಾದ ಅಂತ ಇರಬೇಕು
ಎಳೆಯದು = ಎಳೆತು ಸರಿ... !!

ಆದರೆ ಹಸಿ = ಎಳೆ ಬೇರೆ ಬೇರೆ.

ಹಸಿ = fresh/
ಎಳೆ(ಎೞೆ) = young.

ಈ ಬೇರೆತನಕ್ಕಾಗಿ ಹೇಳಿದ್ದು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 1:46pm — kpbolumbu

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

kpbolumbu's picture

ಮಹೇಶ,
'ಎಳೆ'ಯೇ ಸರಿಯಾದ ರೂಪವಿರಬೇಕು. ಸಹೋದರ ಭಾಷೆಗಳಲ್ಲೂ ಇರುವುದು 'ಇಳೆಯ' ಎಂದೇ. 'ಇೞೆಯ' ಎಂದಲ್ಲ.
ಉದಾ: ೧.ಇಳೆಯ ರಾಜಾ[ತ]
೨.ಇಳೆಯ ಮಗನ್[ಮ]
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 2:04pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಬೊಳುಂಬು ನನ್ನಿ

ನೀವು ಹೇಳಿದುದು ಸರಿ. ಎೞಿ ಅಲ್ಲ
http://dsal.uchicago.edu/cgi-bin/philologic/getobject.pl?c.0:1:516.burro...

ಆದರೆ ಹಸಿ ಮತ್ತು ಎಳೆ ಗಳಿಗೆ ಕೊಂಚ ಬೇರ್ಪುಂಟು ( ಬೇರ್ಪು = ವ್ಯತ್ಯಾಸ, ಬೇರೆತನ )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 2:11pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ಇಳೆ ಎಂಬುದಕ್ಕೆ ಕನ್ನಡದಲ್ಲಿ ಪೃಥ್ವಿ, ಭೂಮಿ ಎಂಬ ಅರ್ಥವೂ ಇದೆಯಲ್ಲವೇ, ಕೃಷ್ಣಪ್ರಕಾಶರೇ ? ಇಳೆಯ ರಾಜ=ಪೃಥ್ವಿರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 2:48pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಇಳೆ/ಇಡಾ = ಭೂಮಿ ಸಂಸ್ಕೃತದಲ್ಲಂತೂ ಇದೆ.

ಇಳೆಯರಾಜ = ಯುವರಾಜ ( ಇದಂತು ನಿಕ್ಕುವ ).

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 2:56pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ida ida, ila ila, ila (p. 043) [ ilâ ] f. libation; prayer; goddess of devotion; earth; -vat, a. refresh ing, quickening.

-pracitcal Sanskrit Dictionary macdonell

http://dsal.uchicago.edu/cgi-bin/romadict.pl?query=earth&display=simple&...

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 2:25pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ನಾನು ಬರೆದದ್ದನ್ನು ಯಾರಾದರೂ ಗಮನಿಸಿಲ್ಲದಿದ್ದರೆ ಮತ್ತೊಮ್ಮೆ ಎಲ್ಲರೂ ಗಮನಿಸಿ.

ಹಸಿ ತರಕಾರಿ ಎನ್ನವಲ್ಲಿಯ ಭಾವಕ್ಕೂ ಹಸಿ ಮೈ ಎನ್ನುವಲ್ಲಿಯ ಭಾವಕ್ಕೂ ತುಸು ವ್ಯತ್ಯಾಸವಿದೆ. ಹಸಿ ಮೈ ಎಂದರೆ ಇನ್ನೂ ಒಡ್ಡಾಗದ/ಪಕ್ಕಾಗದ ಮೈ

೧. ಹಸಿ ತರಕಾರಿ - fresh ತರಕಾರಿ
೨. ಮುಂಜಿ ಅಥವಾ ಮದುವೆ ಆಗುವಾಗ ಹಸಿಮೈ ಎಂಬ ಬಳಕೆಯಾಗುವುದನ್ನು ಕಾಣುತ್ತೇವೆ. ಅದು ಫ್ರೆಶ್ ಮೈ ಅಲ್ಲ. ಬದಲಾಗಿ ಇನ್ನೂ ಆಯಾ ಚಟುವಟಿಕೆಗೆ ಒಡ್ಡಿಕೊಳ್ಳದ ಮೈ.

ಆದರೆ ಹಸಿ = ಎಳೆ ಬೇರೆ ಬೇರೆ.

ಹೌದು. ಹಸಿ ಮತ್ತು ಎಳೆ ಬೇರೆ ಬೇರೆ. ಹೇಗೆಂದರೆ, ಹಸಿ ಎಂಬುದು ಎಳೆಯದಾದ ಎಂಬುದನ್ನೂ ಒಳಗೊಂಡಂತಹ ಪದ. ಆದರೆ "ಎಳೆ" ಸೀಮಿತ ಅರ್ಥವನ್ನು ಹೊಂದಿದೆ. ಹಸಿ ಪದದ ಹರಿವು(ವ್ಯಾಪ್ತಿ) ಹೆಚ್ಚು. ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ಹಾಳಾಗಿ ಹೋಗಲಿ, ಕಡೇಪಕ್ಷ, ಪುಟ್ಟಣ್ಣಗೌಡರ ಕಸ್ತೂರಿ ಕೋಶ ಅಥವಾ ಡ್ರಾವಿಡಿಯನ್ ಎಟಿಮಾಲಜಿಕಲ್ ಡಿಕ್ಷನರಿಯನ್ನಾದರೂ ನಂಬಬಹುದಲ್ಲ. ನಮ್ಮ ಕಡೆಯಂತೂ ಹಸುಗೂಸು ಅಂದರೆ ಎಳೆ ಮಗು ಅಂತಲೇ ತಿಳಿವು. ಆಗ ತಾನೇ ಹುಟ್ಟಿದ ಮಗುವಿಗೆ ಅಥವಾ ತುಂಬಾ ತುಂಬಾ ಎಳೆಯದಾದ ಮಗುವಿಗೆ ಹಾಲುಗೂಸು/ಹಾಲುಕಂದ ಅಂತಾರೆ.

ಪಸು - rawness, youngness. "ಪಸು" ಎಂಬುದನ್ನು ಗುಣವಾಚಕವಾಗಿ ಬಳಸಿದಾಗ ಫ್ರೆಶ್ ಅಲ್ಲದೆ ಬೇರೆ ಅರ್ಥಗಳೂ ಬರುತ್ತದೆ.

Ka. pasu, pasir, pasur, pacce, pace, pacca, paccu, paccane greenness, yellowish colour, golden colour; young sprouts or new leaves, growing corn, freshness, unripeness, rawness, youngness.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 4:03pm — kpbolumbu

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

kpbolumbu's picture

ಸುನಿಲ್,
ಹೌದು, 'ಇಳೆಯ ರಾಜ' ಎಂದು ಕನ್ನಡದಲ್ಲಿ ಹೇಳುತ್ತೇವೆ. ಆದರೆ ತಮಿಳಿನ 'ಇಳೆಯ ರಾಜ' ಮಹೇಶ ಹೇಳಿದಂತೆ 'ಯುವರಾಜ' ಎಂದು ಸೂಚಿಸುತ್ತದೆ. 'ಇಳಾ' ಸಂಸ್ಕೃತ ಮೂಲದ್ದು.
'ಪಚ್ಚ್ರೆ' ಕನ್ನಡ ಪದವೇ, ಸಹೋದರ ಭಾಷೆಗಳಲ್ಲೂ ಇದೆ.(ನೀವು ಕೊಟ್ಟ ಕೊಂಡಿಯೂ 'ಪಸು'ವಿಗೆ 'ಪಚ್ಚ್ರೆ' ಎಂಬ ಅರ್ಥವನ್ನು ಸೂಚಿಸುತ್ತದೆ)
ಹವ್ಯಕದಲ್ಲಿ 'ಹಸಿನೀರು' ಎಂದರೆ ಕಾಯಿಸದ ನೀರು, ತಣ್ಣೀರು ಎಂಬ ಅರ್ಥಗಳಿವೆ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 4:13pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಬೊಳುಂಬು ಅಬ್ಯಾಆ

ನಮ್ಮಲ್ಲಿ ( ನಮ್ಮ ಕನ್ನಡಕ್ಕೆ ಹೆಸರಿಲ್ಲ, ಆದರೂ ಅದು ಸಾಮನ್ಯವಾಗಿ ಓದುವ, ಬರೆಯುವ ಕನ್ನಡಕ್ಕಿಂತ ಬಲು ಬೇರೆ ) ಹಸಿಹಸಿ ಅಂದ್ರೆ ಒದ್ದೆಯಾದ, ತೊಯ್ದ ಅಂತ ತಿಳಿವೂ ಇದೆ.

ಹಸಿಹಸಿ ಬಟ್ಟೆ = ಒಣಗದ ಬಟ್ಟೆ

ನೀವು ಹೇಳಿದ ಹಸಿನೀರು ಕೂಡ ಚಲುವಾದ ಬಳಕೆ!! ಹಸಿನೀರು = fresh water
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 4:37pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ನನ್ನಿ ಕೃಷ್ಣಪ್ರಕಾಶ ಬೊಳಂಬು, ಈ ರೀತಿಯ ಪ್ರಯೋಗಗಳು ಹೆಚ್ಚು ಹೆಚ್ಚು ತಿಳಿದಷ್ಟೂ ನಮಗೇ ಒಳ್ಳೆಯದು. ನಮ್ಮಕಡೆ "ಹಸಿನೀರಿಗಿಂತ" "ಹಸಿಹಾಲು" ಎಂಬ ಬಳಕೆ ಹೆಚ್ಚಾಗಿ ಇದೆ. ಕಾಯಿಸದ ಹಾಲು. ಈ "ಹಸಿಹಾಲು", "ಹಸಿನೀರು" ಎನ್ನುವಲ್ಲಿಯ "ಹಸಿ" ಎಂಬುದು ಫ್ರೆಶ್(fresh) ಅಷ್ಟೇ ಅಲ್ಲದೆ ಮುಖ್ಯವಾಗಿ rawness ಅನ್ನು ಸೂಚಿಸುತ್ತದೆ ಎಂಬುದಾಗಿ ತಿಳಿಯುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 9:38pm — hamsanandi

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

hamsanandi's picture

ಇನ್ನೊಂದು ಹಸಿಯನ್ನು ಎಲ್ಲರೂ ಮರೆತಂತೆ ಕಾಣುತ್ತೆ - ಬಾಣಂತಿ ಯರಿಗೆ ಹಸಿಮೈಯವಳು ಅಂತಾರೆ - ಒಂದು ಹಸುಗೂಸಿನ ತಾಯಿ ಅಂತ ಇರಬಹ್ಸುದು. ಅದಕ್ಕಿಂತ ಹೆಚ್ಚಾಗಿ delicate ಅನ್ನುವ ಅರ್ಥ ಮುಖ್ಯವಾಗಿ ತೋರುತ್ತದೆ ಇದರಲ್ಲಿ. (ಹಸಿಮೈಗೆ ನಂಜಾಗುತ್ತೆ ಇತ್ಯಾದಿ). ಹಸಿ ಪದಾರ್ಥಗಳು (ತರಕಾರಿಯೇ ಇರಬಹುದು, ಅಥವಾ ಮಡಿಕೆಯೇ ಇರಬಹುದು) - ಸುಲಭವಾಗಿ ಹಾಳಾಗಬಹುದು ಅನ್ನುವ ಕಾರಣದಿಂದ ಬಂದವೇ ಇವು? ನನಗೆ ಗೊತ್ತಿಲ್ಲ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 6:48pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಕುಳಿಕೆ / ಕುೞಿಕೆ = ಗಂಟು,
೨)ಕುೞಿ = sit. ಕುೞಿಕೆ ಕುಳಿಯಲು ಬಳಸುವುದು.

ಗಿಳಿಗೈಯಮ್ಮ = ಶುಕಪಾಣಿನಿ

ಗುಡ್ಡು = ಗುಂಡು, ದುಂಡಗೆ ಇರುವುದು. ಕಣ್ಣುಗುಡ್ಡು, ಗುಡ್ಲು

ಪಾರ್ವತಿ/ಹಾರ್ಬತಿ = ಹಾರ್ಬ/ಪಾರ್ವ( ಬ್ರಾಹ್ಮಣ ) => ಹಾರ್ಬತಿ/ಪಾರ್ವತಿ = ಬ್ರಾಹ್ಮಣಗಿತ್ತಿ

ಬಿಂಕು = ಮೋಸ, crookedness, dishonesty, guile.

ಬಸಡು/ಬಸಿಡು = that which is pointed, sharp, keen; ಮೊನೆ

ಅವುಡು-ತವುಡು = grain-husk = ಕಾಳು-ಹೊಟ್ಟು

ಮೀಸಲು = ಕಾಯ್ದಿರಿಸಿದ/reserved

ಹೆಮ್ಮಾರಿ = ಹಿರಿಮಾರಿ

ಚೆಮ್ಮಾರ = ಚೆನ್ನಾದ ಮಾರ

ಹಸುಗೂಸು/ಪಸುಗೊಸು = ಹಸಿಯಾದ ಕೂಸು = newborn

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 7:07pm — ಸಂಗನಗೌಡ

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

ಸಂಗನಗೌಡ's picture

ತವುಡು - ಹೊಟ್ಟು , ನಾವು ತವುಡು ಬಳಸುತ್ತೇವೆ.

ಚೆಮ್ಮಾರ - ಇದು ಚರ್ಮಗಾರದಿಂದ ಬಂದಿದ್ದೀತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 7:13pm — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

"ಚೆಮ್ಮಾರ - ಇದು ಚರ್ಮಗಾರದಿಂದ ಬಂದಿದ್ದೀತು."

ಸಂಗನ

ಚಮ್ಮಾರ = ಚರ್ಮಗಾರ.

ಇದು ಚೆಮ್ಮಾರ!! ಚೆಚೆ!! Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 11:53pm — mananthprabhu

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mananthprabhu's picture

ಅಕ್ಕಿ ಮಾಡುವಾಗ ಭತ್ತದ ಹೊಟ್ತನ್ನು ಬೆರ್ಪಡಿಸಲಾಗುತ್ತದೆ. ಈ ಭತ್ತದ ಹೊಟ್ಟನ್ನು ತುಳುವಿನಲ್ಲಿ ತೌಡು (ತವುಡು) ಎನ್ನುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 1:46am — hamsanandi

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

hamsanandi's picture

ಕಿವುಡು ಕಿವುಡು ಅಂದರೆ, ತವುಡು ತವುಡು ಅಂದರಂತೆ

ಅನ್ನೋ ಗಾದೆಯೇ ಇದೆ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 9:08pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ಯಪ್ಪಾ ಮಹೇಶ, ನಿನಗೆ ಅದು ಹೇಗೆ ಹೇಳಬೇಕೋ ಗೊತ್ತಿಲ್ಲ, ಹಸುಗೂಸು newborn ಅಲ್ಲ ಅಂತ ಬಿಡಿಸಿ ಬಿಡಿಸಿ ಹೇಳಿದರೂ, ನಿನ್ನ ಹಟಕ್ಕೆ ಬಿದ್ದು ಮೊಂಡುತನ ಮಾಡಿ, ನಿನ್ನ ಪೂರ್ವಾಗ್ರಹ ನಂಬಿಕೆಗಳಿಂದ ಮುಕ್ತನಾಗದೆ ತಪ್ಪು ತಪ್ಪು ಮಾಹಿತಿಯನ್ನು ಎಲ್ಲರಿಗೂ ಹರಡುತ್ತಿದ್ದೀಯಾ. ನೀನು ಪದೇ ಪದೇ ಬಳಸುವ ಡ್ರಾವಿಡಿಯನ್ ಎಟಿಮಾಲಜಿಯೇ ಪಸು ಎಂದರೇನು ಅಂತ ವಿವರವಾಗಿ ಹೇಳಿದೆ. ಹಾಗಾದರೆ, ನೀನು ಬೇರೆಯವರ ಅಭಿಪ್ರಾಯಗಳಿಗೆ ಇಷ್ಟೇನಾ ಮನ್ನಣೆ ಕೊಡುವುದು.

ಇದು ಸಾಲದೆಂಬಂತೆ, ನಾನು ಬರೆದುದರಲ್ಲಿ ದೊಡ್ಡ ಜಡ್ಜ್‌ಮೆಂಟ್ ಕೊಡುವ ಹಾಗೆ...

ಮಹೇಶ wrote:
ಕುಳಿಕೆ(ಕುಣಿಕೆ), ಪಾರ್ವತಿ/ಹಾರ್ಬತಿ, ಹೆಮ್ಮಾರಿ - ದೊಡ್ಡ ಮಾರಿ..ಮಿಕ್ಕವಲ್ಲಿ ತಪ್ಪಿದೆ.
ಎಂದು ಹೇಳಿದೆಯಲ್ಲಾ ಈಗ ನೋಡಿದರೆ, ಗುಡ್ಡು = ಗುಂಡು, ದುಂಡಗೆ ಇರುವುದು. ಕಣ್ಣುಗುಡ್ಡು, ಗುಡ್ಲು, ಅವುಡು-ತವುಡು = grain-husk = ಕಾಳು-ಹೊಟ್ಟು. ಇವುಗಳಿಗೆ ಸಂಬಂಧಿಸಿದ ಹಾಗೆಯೇ ಅಲ್ಲವೇ ನಾನು ಹೇಳಿದ್ದು. ನಿನಗೆ ಏನಾದರೂ ಗೊತ್ತಿಲ್ಲದಿದ್ದರೆ ಬೇರೆಯವರನ್ನು ತಪ್ಪು ಎಂದು ಅವರ ಮೇಲೆ ಗೂಬೆ ಕೂರಿಸಬೇಡ ಅಥವಾ ಹೇಳಬೇಕಿರುವುದನ್ನು ಸರಿಯಾಗಿ ಹೇಳು. ಜಡ್ಜ್‌ಮೆಂಟ್ ಕೊಡುವ ಹಾಗೆ ಅಧಿಕಾರಯುತವಾಗಿ ವರ್ತಿಸಬೇಡ.

ಅಂದಹಾಗೆ, ಅದು ನೀನು ಹೇಳಿದ ಹಾಗೆ ಬಸಡು/ಬಸಿಡು ಅಲ್ಲ, ಅದು ಬಸದು/ಬಸಿದು.
Ka. basi to be pointed, sharpened; point, sharpen; n. tongue of a balance; basadu, basidu that which is pointed, sharp, keen; base small pointed object that sticks in the ground.

ಸುಮ್ಮನೆ ಪೂರ್ವಾಗ್ರಹ ಪೀಡಿತನಾಗಿ ಓದುಗರಿಗೆ ತಪ್ಪು ತಪ್ಪು ಮಾಹಿತಿ ಹರಡಬೇಡ. ನೀನೇ ಅಲ್ಲವೇ ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ! ಎಂಬ ಚೊಕ್ಕವಾದ ಬರಹವನ್ನು ಸಂಪದಿಗರಿಗೆ ನೀಡಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 9:27am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಸರಿಯಪ್ಪ ಸುನಿಲ Smiling!!

ನಿನಗೆ ಏನಾರ ಹೇಳಿದ್ರೆ ನೀನು ವೈಯುಕ್ತಿಕ ವಿಷಯ ಏತ್ತುತ್ತೀಯ ಅಂದುಬಿಡ್ತೀಯ, ಅದ್ಯಾವ ಗ್ರಾಚಾರ ನಂಗೆ!!

ನಿಂಗೆ ಏನು ಹೇಳಲ್ಲ ಬಿಡು!! ಕುಳಿರಾಗಿರಿ tension ಬೇಡ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 9:48pm — Sunil Jayaprakash

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

Sunil Jayaprakash's picture

ಗೆಳೆಯರೆ,
ಗಿಳಿಗೈಯಮ್ಮ - ಬೇಲೂರಿನಲ್ಲಿರುವ ಒಂದು ಶಿಲಾಬಾಲಿಕೆಯ ಅಮ್ಮ ಅಂತ ನಾನು ಏಕೆ ಹೇಳಿದ್ದೆ ಗೊತ್ತೇ ? ಇಲ್ಲಿ ನೋಡಿ. ಇವಳು ಬೇಲೂರಿನಲ್ಲಿ ಇದ್ದಾಳೆ. ಇವಳನ್ನು ಅಮ್ಮ ಅಂತ ಹೇಗೆ ಹೇಳಲಿ Laughing out loud ಅದಕ್ಕೆ ನಾನು ಗಿಳಿಗೈಯಮ್ಮ = ಬೇಲೂರಿನಲ್ಲಿರುವ ಶಿಲಾಬಾಲಿಕೆಯ "ಅಮ್ಮ" ಅಂತ ಹೇಳಿದ್ದು Eye-wink :ಗಪ್ ಚುಪ್: ಇವಳು ಗಿಳಿಗೈಯವಳು, ಇವಳ ಅಮ್ಮ ಗಿಳಿಗೈಯಮ್ಮ Smiling ಅವಳು ಹೇಗಿದ್ದಾಳೋ ನನಗೆ ಗೊತ್ತಿಲ್ಲ.

ಕೃಪೆ - ಈ ಪಾಪೆಯನ್ನು ಇಲ್ಲೊಬ್ಬರ ಬ್ಲಾಗಿಗೆ ಲಿಂಕ್ ನೀಡಿದ್ದರಿಂದ ಬಂದಿದೆ. ಆದಾಗ ನಾನೇ ಬೇಲೂರಿನಲ್ಲಿರುವ ಎಲ್ಲ ಬಾಲಿಕೆಯರನ್ನೂ ಕರೆದುಕೊಂಡು ಬರ್ತೀನಿ Sticking out tongue ನಮ್ಮ ಕನ್ನಡ ನಾಡು ಅದೆಷ್ಟು ಸುಂದರ ಅಲ್ಲವೇ. ನಾವುಗಳೇ ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 3:21am — keshav

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

keshav's picture

ಉತ್ತರ ಕರ್ನಾಟಕದ ಕಡೆ, ಯಾರಾದರೂ ಉಪಯೋಗವಿಲ್ಲದ ಕೆಲಸ ಮಾಡುತ್ತಿದ್ದರೆ, "ಯಾಕೋ, ತೌಡು ಕುಟ್ಟಾಕತ್ತೀಯೇನ್?" ಅಂತ ಹೇಳುತ್ತಾರೆ.

Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 1:18pm — hamsanandi

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

hamsanandi's picture

Quote:

ದೋಭಿರ್ಯುಕ್ತಾ ಚರ್ತುಭಿಃ ಸ್ಫಟಿಕಮಣಿಮಯೀಮಕ್ಷಮಾಲಾಂದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ
ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾsಸಮಾನ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನ.

ನಾಲ್ತೊಳೊಳು ಪಟಿಕವಣಿಯ ಜಪಸರವೊಂದುಗೈಯೊಳು
ಬೆಳ್ತಾವರೆ ಗಿಳಿ ಹೊತ್ತಗೆಗಳ ಮಿಕ್ಕ ಮುಗ್ಗೈಯೊಳು ಹಿಡಿದು
ಮಲ್ಲೇ ಚಂದಿರ ಸಂಕ ಪಟಿಕದ ಹೊಳಪಿಂದ ಮಿನುಗಿ ನಗುತಾ
ಆ ಮಾತೊಡತಿ ನೆಲೆಸಲಿ ನನ್ನ ನಾಲಗೆಯೊಳು ಎಂದೂ

ಅನುವಾದ ಚೆನ್ನಾಗಿದೆ ಮಹೇಶರೆ!

ಕೊನೆಯ ಸಾಲನ್ನು

ನೆಲೆಸಲೆನ್ನ ನಾಲಗೆಯಲಿ ಆ ಮಾತಿನೊಡತಿ ಎಂದೆಂದೂ

ಎಂದು ಮಾರಿಸಿದರೆ, ದ್ವಿತೀಯಾಕ್ಷರ ಪ್ರಾಸವೂ ಕೂಡಿಬರುತ್ತೆ (ಳ, ಲ ಗಳಲ್ಲಿ ವ್ಯತ್ಯಾಸವಿಲ್ಲ ಎಂದು ಎಲ್ಲ ಕವಿಗಳೂ ತೋರಿಸಿಕೊಟ್ಟಿದ್ದಾರಲ್ಲ ಹೇಗಿದ್ದರೂ!)

-ಹಂಸಾನಂದಿ

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 10:21am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

ಗಿಳಿಗೈಯಮ್ಮ

ಗಿಳಿಯನ್ನು ಕೈಯಲ್ಲಿ ಹಿಡಿದವಳು ಅಮ್ಮ = ಶುಕಪಾಣಿ

"ನಮ್ಮ ಶೃಂಗೇರಿ ಶಾರದೆಯೇ ಈ ಗಿಳಿಗೈಯಮ್ಮ"

ಇಲ್ಲಿದೆ ನೋಡಿ ಶ್ಲೋಕ

ದೋಭಿರ್ಯುಕ್ತಾ ಚರ್ತುಭಿಃ ಸ್ಫಟಿಕಮಣಿಮಯೀಮಕ್ಷಮಾಲಾಂದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ
ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾsಸಮಾನ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನ.

ನಾಲ್ತೊಳೊಳು ಪಟಿಕವಣಿಯ ಜಪಸರವೊಂದುಗೈಯೊಳು
ಬೆಳ್ತಾವರೆ ಗಿಳಿ ಹೊತ್ತಗೆಗಳ ಮಿಕ್ಕ ಮುಗ್ಗೈಯೊಳು ಹಿಡಿದು
ಮಲ್ಲೇ ಚಂದಿರ ಸಂಕ ಪಟಿಕದ ಹೊಳಪಿಂದ ಮಿನುಗಿ ನಗುತಾ
ಆ ಮಾತೊಡತಿ ನೆಲೆಸಲಿ ನನ್ನ ನಾಲಗೆಯೊಳು ಎಂದೂ

( ಕನ್ನಡಯಿಸು ಸರಿ ಇಲ್ಲದಿದ್ದರೆ ಮನ್ನಿಸಿರಿ )

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 10:24am — mahesha

ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - 2

mahesha's picture

font ಅಲ್ಲಿ ಎಡವಟ್ಟು.


====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೫
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩
  • ಇವು ಏನು ಹೇಳಿರಿ ( ಕನ್ನಡದ ಒರೆಗಳು )
  • ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
  • ಇದೂ ಕನ್ನಡ ಒರೆಗಂಟು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator