ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಅಂತರಜಾಲದ ಕನ್ನಡ ಪುಟಗಳು

ಇದೆಂಥಾ ಸಂಸ್ಕೃತಿ

August 2, 2007 - 4:50pm — ramesh-m

ಏನ್ಗುರು ಎಂಬ ಬ್ಲಾಗ್ ಒಂದನ್ನು ಯಾರೋ ಉತ್ಸಾಹಿಗಳು ಆರಂಭಿಸಿದ್ದಾರೆ. ಅಂತರ್ಜಾಲದಲ್ಲಿ ಹೀಗೆ ಕನ್ನಡ ಕಾಣಿಸಿಕೊಳ್ಳುವುದು ಸಂತೋಷದ ಸಂಗತಿ. ಆದರೆ ಇದನ್ನು ಸಂದರ್ಶಿಸುವವರ ಸಂಖ್ಯೆ ಹೆಚ್ಚಲಿ ಎಂಬ ಉದ್ದೇಶದಿಂದ ಸಿಕ್ಕ ಸಿಕ್ಕ ಬ್ಲಾಗ್ ಗಳಲ್ಲಿ ಕಂಡ ಲೇಖನಗಳ ಅಡಿಯಲ್ಲಿ ಲೇಖನದ ಬಗ್ಗೆ ಅಭಿಪ್ರಾಯ ಬರೆಯದೆ ಏನ್ಗುರು ಓದಿ ಎಂಬ ಒಂದು ಸಂದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಬಗೆಯ ಸ್ಪ್ಯಾಮಿಂಗ್ ನನಗೇನೋ ಅಶ್ಲೀಲ ಅನ್ನಿಸುತ್ತದೆ. ಕನ್ನಡದಲ್ಲಿರುವ ಯಾವ ಬ್ಲಾಗಿಗರೂ ಈ ಬಗೆಯ ಸ್ಪ್ಯಾಮಿಂಗ್ ನಲ್ಲಿ ತೊಡಗಿಲ್ಲ. ಏನ್ಗುರು ಬಳಗ ಇನ್ನಾದರೂ ಇದರಿಂದ ದೂರವಿರಲಿ.

‹ ಶ್ರೀ ಮಧ್ಭಗವದ್ಗೀತೆ ಕನ್ನಡ ಲಿಪಿಯಲ್ಲಿ ಫಯರ್ ಫ್ಯಾಕ್ಸ್ ನಲ್ಲಿ ಉದಯವಾಣಿ.. ಎಂತು? ›
  • ಅಂತರಜಾಲದ ಕನ್ನಡ ಪುಟಗಳು
~.~
  • Login or register to post comments
  • 435 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 2, 2007 - 7:32pm — uniquesupri

ಉ: ಇದೆಂಥಾ ಸಂಸ್ಕೃತಿ

uniquesupri's picture

ನಿಮ್ಮ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಏನ್ ಗುರು ನಿಮ್ಮ ಪ್ರಚಾರದ ಲಾಲಸೆ ಅತಿಯಾಯ್ತು... ನನ್ನ ಕೆಲವು ಬ್ಲಾಗ್ ಪ್ರತಿಕ್ರಿಯೆಗಳಲ್ಲಿ ಇವರ ಈ ಪ್ರಚಾರದ ಲಿಂಕುಗಳು ಸೇರಿ ತೊಂದರೆಯಾಯ್ತು... ಡಿಲಿಟ್ ಮಾಡಿ ಸಾಕಾಯ್ತು... ಹಾಗೆ ಪ್ರಚಾರ ಮಾಡುವ ಮೊದಲು ಆ ಬ್ಲಾಗ್ ಬರೆಯುವವರಿಗೆ ಸೌಜನ್ಯಕ್ಕಾದರೂ ಒಂದು ಮಾತು ಕೇಳಬೇಕು ಅನ್ನಿಸೊಲ್ಲವಾ? ಏನು ಗುರು ಉತ್ತರಿಸಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 9:49pm — shreedn

ಉ: ಇದೆಂಥಾ ಸಂಸ್ಕೃತಿ

shreedn's picture

ನನ್ನದೂ ಸಂಪೂರ್ಣ ಸಹಮತಿ ಇದೆ... ನನ್ನ ಬ್ಲಾಗ್-ನಲ್ಲಿ ಹಾಕಿದರೆ ಅದನ್ನು ಡಿಲೀಟ್ ಮಾಡದೆ ಉಳಿಸಿಕೊಳ್ಳುವ ತಾಳ್ಮೆನನಗಿದೆ. ಆದರೆ, ಒಂದು ಸಾಂಘಿಕ ಉದ್ದೇಶದಿಂದ ಕಟ್ಟಿಕೊಂಡ ಗ್ರೂಪ್ ಬ್ಲಾಗ್ ಚಿತ್ರಕವನಕ್ಕೆ ಕೂಡಾ ಈ ಹಾವಳಿ ದಾಳಿಯಿಡುತ್ತದೆ... ಕಮೆಂಟ್ ವಿಭಾಗವನ್ನು ಕವನ ಅಥವಾ ಬರಹಗಳನ್ನು ಪೋಸ್ಟ್ ಮಾಡಲೆಂದು ನಾವಿಟ್ಟಿದ್ದರೆ ಅಲ್ಲಿ ಜಾಹೀರಾತುಗಳು ಪ್ರತ್ಯಕ್ಷವಾಗುತ್ತವೆ... ಏನ್ಗುರೂ, ನಾವ್ಯಾರೂ ಕನ್ನಡ ದ್ವೇಷಿಗಳಲ್ಲ, ಕನ್ನಡದ ಬ್ಲಾಗುಗಳು ಹೆಚ್ಚಿದಷ್ಟು ನಮಗೆಲ್ಲ ಖುಷಿ. ಆದರೆ, ನೀವು ಯಾರು ಅಂತ ಹೇಳಿಕೊಳ್ಳದೇ, ಸಿಕ್ಕಸಿಕ್ಕಂಗೆ ಬಂದು ಜಾಹೀರಾತು ಹಾಕಿದರೆ ಸಹಿಸಿಕೊಳ್ಳೋದು ಕಷ್ಟ ಆಗುತ್ತದೆ... ನಿಂಗೆ ಬೇಗ ಒಳ್ಳೆ ಬುದ್ಧಿ ಬರ್ಲಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 4:31pm — ismail

ಉ: ಇದೆಂಥಾ ಸಂಸ್ಕೃತಿ

ismail's picture

ಶ್ರೀ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನಾನು ನಿರ್ವಹಿಸುತ್ತಿರುವ ಒಂದು ಬ್ಲಾಗ್ ಗೂ ಏನ್ಗುರು ಜಾಹೀರಾತು ಬಂದಿತ್ತು. ತಣ್ಣಗೆ ಡಿಲಿಟ್ ಮಾಡಿ ಬಿಟ್ಟೆ. ಪದೇ ಪದೇ ಇಂಥದ್ದು ಬಂದರೆ ಏನು ಮಾಡುವುದು. ಅವಧಿ ಎಂಬ ಬ್ಲಾಗಿಗರೂ ಇದೇ ಕೆಲಸ ಮಾಡುತ್ತಿರುವಂತೆ ಇದೆ. ಪ್ರತಿಯೊಬ್ಬರೂ ತಮ್ಮ ಬ್ಲಾಗನ್ನು ಹೆಚ್ಚು ಜನ ಓದಲಿ ಎಂದು ಬಯಸುವುದು ಸಹಜ. ಈ ಹೆಚ್ಚು ಜನರನ್ನು ಸೆಳೆಯುವ ಆಸೆ ಉಳಿದವರಿಗೆ ತೊಂದರೆ ಉಂಟು ಮಾಡಬಾರದಲ್ಲವೇ? ಈ ಬಗೆಯ ಸ್ಪ್ಯಾಮಿಂಗ್ ಅನ್ನು ಎಲ್ಲರೂ ಖಂಡಿಸಬೇಕು. 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 4:35pm — Yamini

ಉ: ಇದೆಂಥಾ ಸಂಸ್ಕೃತಿ

Yamini's picture

ನಾನು ನಿಯಮಿತವಾಗಿ ಓದುವ ಎಲ್ಲಾ ಕನ್ನಡ ಬ್ಲಾಗ್ ಗಳಲ್ಲೂ 'ಏನ್ಗುರು' ಹಾವಳಿ ಇತ್ತು. ಶ್ರೀ ಅವರು ಸರಿಯಾಗಿಯೇ ಬರೆದಿದ್ದಾರೆ. ಈ ವರ್ತನೆ ಅನಪೇಕ್ಷಣೀಯ. ಯಾರಿದನ್ನು ಮಾಡುತ್ತಿದ್ದಾರೋ ಅವರು ಬೇಗ ತಿದ್ದಿಕೊಳ್ಳುವುದು ಉತ್ತಮ. ಇದು ಕನ್ನಡದ ಅಂತರ್ಜಾಲ ಸಮುದಾಯದ ಬಗ್ಗೆಯೇ ಕೆಟ್ಟ ಅಭಿಪ್ರಾಯ ಮೂಡಿಸುವ ವರ್ತನೆ. ಇದು ಏನ್ಗುರು ನಿರ್ವಾಹಕರಿಗೆ, ಅಭಿಮಾನಿಗಳಿಗೆ ಅರ್ಥವಾಗಲಿ.
-ಯಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ ಏನ್ಗುರು ಸಕ್ಕತ್ ಉತ್ತರ...
  • ಏನ್ ಗುರು ಮತ್ತು ದೆಲ್ಲಿಯ ದರ್ಬಾರು
  • ಮರಾಟಿಗಳ ದಮ್ ನಾವ್ ಕನ್ನಡಿಗ್ರಿಗೆ ಇದ್ಯ?
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ನಮಸ್ಕಾರ
Syndicate content

ಲೇಖಕರು

ramesh-m's picture

ಪರಿಚಯ

ಊರು ಗಡಿನಾಡಿನ ಅಥವಾ ಈಗ ಕಾಸರಗೋಡು ಜಿಲ್ಲೆಯಲ್ಲಿರುವ ದೈಗೋಳಿ ಗ್ರಾಮ. ನಾನೊಂದು ತಿರುವನಂತಪುರಂನಲ್ಲಿ ಇರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕನ್ನಡದಲ್ಲಿ ಬರೆಯುವುದು ನನ್ನ ಹವ್ಯಾಸ. ಅಂಬೇಡ್ಕರ್ ಮತ್ತು ಗಾಂಧಿ ನನ್ನ ಮೆಚ್ಚಿನ ಚಿಂತಕರು. ಗೋಪಾಲಕೃಷ್ಣ ಅಡಿಗರು ನನಗೆ ಇಷ್ಟವಾಗುವ ಕವಿ. ಲಂಕೇಶರ ಗದ್ಯ ನನಗಿಷ್ಟ. ಗೋವಿಂದ ಪೈಗಳು ನಾನು ಪ್ರೀತಿಸುವ ಸಂಶೋಧಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:35pm
ಇನ್ನಷ್ಟು


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator