ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಮೊನ್ನೆ ನಡೆದ ಸೂರ್ಯಗ್ರಹಣ ನನ್ನಲಿ ರಾಹು ಮತ್ತು ಕೇತುಗಳ ಬಗ್ಗೆ ಕುತೂಹಲ ಮೂಡಿಸಿತು. ರಾಹು ಮತ್ತು ಕೇತುಗಳೆಂದರೇನು? ಅವುಗಳು ಎಲ್ಲಿ ಇರುತ್ತವೆ? ಈ ಗ್ರಹಗಳು ಏಕೆ ಪ್ರಾಮುಖ್ಯತೆ ಪಡೆದವು? ಈ ಪ್ರಶ್ನೆಗಳಿಗೆ ನನಗೆ ಈ ವೆಬ್-ಪುಟ ಉತ್ತರ ಕೊಟ್ಟಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

- Login or register to post comments
- 925 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ರಾಹು ಕೇತು...
ಮತ್ತೆ ನಾಳೆನೋ ನಾಳಿದ್ದೋ ಚಂದ್ರಗ್ರಹಣವಿರುವುದೆಂದು ಓದಿದ ನೆನಪು.
'metaphor' ಎಂದು ನಾವುಗಳು ಹೇಳಿಕೊಳ್ಳಬಹುದು. ಆದರೆ ನಮ್ಮ ಹಲವು ಪೌರಾಣಿಕ ಕಥೆಗಳಿಗೆ ಪ್ರಸ್ತುತ ವೈಜ್ಞಾನಿಕ ಮಟ್ಟದಲ್ಲಿ ಎಷ್ಟೋ ರೀತಿಯಲ್ಲಿ ಹೈಪಾಥೀಸಿಸ್ ಹಾಕಿ ನೋಡಿದರೂ ಏನೂ ಅರ್ಥ ಮೂಡುವುದಿಲ್ಲ. ಅವರಿಗೆ ಗ್ರಹಣದ ಹಿಂದಿನ ನಿಜವಾದ ಜ್ಞಾನವಿತ್ತೆಂಬುದು ನಿಜವಿರಬಹುದು. ಆದರೆ ಈ ರಾಹು ಕೇತು ಮೆಟಫರ್ ಅದನ್ನು ಪ್ರೂವ್ ಮಾಡುತ್ತದೆ ಎಂಬ ವಿಷಯ ಸರಿಯಲ್ಲವೆಂಬುದು ನನ್ನ ಅನಿಸಿಕೆ.
--
"ಹೊಸ ಚಿಗುರು, ಹಳೆ ಬೇರು"
idu prove madokke alla
rAhu kEtu metaphor grahana vannu janarige ondu concept artha madalu baLasalagittu ashte. edu hindina talemarinavara gynana prove madokke alla.
innondu vishaya.....chiniyara khagoLashastrada prakara north mattu south lunar nodes gaLannu "Dragon head" mattu "Dragon Tail"endu ello odidahage nenapu.
ಯಾವ ರೀತಿಯ metaphor ಇದೆ
ನೀವು ಹೇಳುತ್ತಿರುವ ಈ ಕತೆಯಲ್ಲಿ ಯಾವ ರೀತಿಯ metaphor ಕೂಡ ಕಾಣುತ್ತಿಲ್ಲ. metaphor ಅಂದರೆ ಒಂದು ಘಟನೆಯನ್ನೋ , ಸಂದರ್ಭವನ್ನೋ ಮತ್ತೊಂದಕ್ಕೆ ಹೋಲಿಸಿ ಹೇಳುವುದು. ಆದರೆ ಇಲ್ಲಿ ಅಂತಹದ್ದೇನೂ ಇಲ್ಲ. ಒಂದು ಕತೆ ಅಷ್ಟೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಹಚ್ಚಬೇಕಾಗಿಲ್ಲ. ಈಗಂತೂ ನಮ್ಮ ಪುರಾಣ ಕತೆಗಳಲ್ಲಿ ಹೊಸ ಸತ್ಯಗಳನ್ನು ಹುಡುಕುವ trend ಬಹಳ ಜನಪ್ರಿಯವಾಗಿದೆ!
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಅದೃಶ್ಯ ಗ್ರಹ ಅಂದರೇನು?
ಅವು ಛಾಯಾಗ್ರಹ ಅಲ್ವಾ? ಅಂದ್ರೆ ಬರಿ ನೆರಳುಗಳು!
======================================
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ರಾಹು ಮತ್ತು ಕೇತು ಇವೆರಡಕ್ಕೂ ಖಗೋಳಶಾಸ್ತ್ರದ ಪರಿಭಾಷೆಯಲ್ಲಿ nodes ಎಂದು ಹೆಸರು.
ಭೂಮಿ ಸೂರ್ಯನ ಸುತ್ತ ಸುತ್ತುವ ಕಕ್ಷೆಯ ಸಮಪಾತಳಿ (plane) ಮತ್ತು ಚಂದ್ರ ಭೂಮಿಯ ಸುತ್ತ ಸುತ್ತುವ ಕಕ್ಷೆಯ ಸಮಪಾತಳಿ, ಎರಡೂ ಒಂದೇ ಅಲ್ಲ. ಹಾಗಾಗಿ, ಚಂದ್ರನ ಪಥದ ಪಾತಳಿ ಭೂಮಿಯ ಕಕ್ಷೆಯ ಪಾತಳಿಯನ್ನು ಎರಡು ಕಡೆ ಸಂಧಿಸುತ್ತದೆ. ಈ ಎರಡೂ ಬಿಂದುಗಳೇ node ಗಳು. ಒಂದಕ್ಕೆ acending node ಎಂತಲೂ, ಇನ್ನೊಂದಕ್ಕೆ descending node ಎಂತಲೂ ಹೆಸರು. ಇವುಗಳೇ ನಮ್ಮ ರಾಹು-ಕೇತುಗಳು.
ಅವನ್ನು ಛಾಯಾಗ್ರಹಗಳೆನ್ನಲು ಇದೇ ಕಾರಣ. ಏಕೆಂದರೆ ಅಲ್ಲಿ ಕಾಣಿಸಲು ಏನೂ ಇರುವುದಿಲ್ಲ. ಒಂದು ವೇಳೆ ಅಲ್ಲಿ ಚಂದ್ರನೋ, ಸೂರ್ಯನೋ ಬಂದರೆ, ಅಲ್ಲಿ ಭೂಮಿಯ, ಅಥವಾ ಚಂದ್ರನ ನೆರಳು ಮಾತ್ರ ಕಾಣುತ್ತದೆ (ಅದೇ ಗ್ರಹಣ). ಅದಕ್ಕೆ ಅವು ನೆರಳಿನ ಗ್ರಹಗಳು.
-ಹಂಸಾನಂದಿ
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಹಂಸಾನಂದಿ
ಬಿಡಿ ಬಿಡಿಯಾಗಿ ತಿಳಿಸಿದ್ದಕ್ಕೆ ನನ್ನಿ!
======================================
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಗ್ರಹ ಎಂದರೆ ಸೂರ್ಯನಂಥ ನಕ್ಷತ್ರದ ಸುತ್ತುವ ಕಾಯ. ಹಾಗಿರುವಾಗ ರಾಹು-ಕೇತುಗಳು ಹೇಗೆ ಗ್ರಹಗಳೆಂದು ಪರಿಗಣಿಸಲ್ಪಟ್ಟವು? ಪಾತಳಿಗಳ ಸಂಧಿ ಸುತ್ತುವುದಿಲ್ಲ ಅಲ್ಲವೆ? ಚಂದ್ರನನ್ನು ಗ್ರಹ ಎಂದು ಹೇಗೆ ಪರಿಗಣಿಸಿದರು?
ಏಕೆ ಕೇಳುತ್ತಿದ್ದೇನೆಂದರೆ
೧) ಇವೆಲ್ಲಾ ಏಕೆ ನಮ್ಮ ಪೂರ್ವಿಕರಿಗೆ ಗೊತ್ತಾಗಲಿಲ್ಲ?
೨) ಖಗೋಳ ವಿಜ್ಙಾನ ಬೆಳದಂತೆಲ್ಲಾ ನಮ್ಮ ಪೂರ್ವಿಕರ ವಿಚಾರಗಳು ತಿದ್ದುಪಡಿಗೆ ಒಳಗೊಳ್ಳಬೇಕಾಗಿತ್ತಲ್ಲವೆ?
೩) ಧರ್ಮಾಚರಣೆಗೆ ತುಂಬಾ ಬಿಗಿಯಾಗಿ ಬೆಸೆದುಕೊಂಡದ್ದರಿಂದ ತಿದ್ದುಪಡಿಗಳು ಆಗಲಿಲ್ಲವೆ? ಧರ್ಮದ ಕೊಂಡಿಯೇ ವಿಜ್ಙಾನ ತನ್ನ ಹಾದಿ ಹಿಡಿದು ಬೆಳೆಯಲು ಮುಳುವಾಯಿತೆ?
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಅನಿವಾಸಿ ಅವರು ಕೇಳಿದ್ದು:
ಅದು ಈಗಿನ definition. ಹಿಂದೆ, ಭಾರತೀಯ ಖಗೋಳಶಾಸ್ತ್ರದ ಪ್ರಕಾರ, ಆಕಾಶದಲ್ಲಿ ಓಡಾಡುವ ಕಾಯಗಳೆಲ್ಲ ಗ್ರಹಗಳು. ನಿಂತ ಕಾಯಗಳೆಲ್ಲ ತಾರೆಗಳು. ಹಾಗಾಗಿ, ಸೂರ್ಯ ಮತ್ತು ಚಂದ್ರ ಎರಡೂ ಗ್ರಹಗಳಾದವು. ಅಷ್ಟೆ.
ಸುತ್ತುವುದನ್ನು ನಿರ್ಧರಿಸುವುದು ಹೇಗೆ? ನಿಂತಿರುವ ಯಾವುದಾದರೂ ವಸ್ತುವಿಗೆ ಹೋಲಿಸಬೇಕು ಅಲ್ಲವೆ? ಪಾತಳಿಗಳ ಸಂಧಿ ಅಲ್ಲೇ ಇದ್ದರೂ, ಭೂಮಿ ಸುತ್ತುತ್ತಿರುವುದರಿಂದ, ಈ ಸಂಧಿ ಬಿಂದು, ನಕ್ಸ್ಷತ್ರಗಳ ಹಿನ್ನಲೆಯಲ್ಲಿ ಚಲಿಸುವಂತೆಯೇ ಭಾಸವಾಗುತ್ತದೆ.
ಅಷ್ಟೇ ಅಲ್ಲದೆ, prescision ಕಾರಣದಿಂದ, ಭೂಮಿಯ ಕಕ್ಷೆಯ ಪಾತಳಿಯೇ ನಿಧಾನವಾಗಿ ಬದಲಾಹುತ್ತದೆ. (ಇದು ೨೬೦೦೦ ಸಾವಿರವರ್ಷಗಳ ಚಕ್ರ)
ಏಕೆ ಕೇಳುತ್ತಿದ್ದೇನೆಂದರೆ
೧) ಇವೆಲ್ಲಾ ಏಕೆ ನಮ್ಮ ಪೂರ್ವಿಕರಿಗೆ ಗೊತ್ತಾಗಲಿಲ್ಲ?
೨) ಖಗೋಳ ವಿಜ್ಙಾನ ಬೆಳದಂತೆಲ್ಲಾ ನಮ್ಮ ಪೂರ್ವಿಕರ ವಿಚಾರಗಳು ತಿದ್ದುಪಡಿಗೆ ಒಳಗೊಳ್ಳಬೇಕಾಗಿತ್ತಲ್ಲವೆ?
೩) ಧರ್ಮಾಚರಣೆಗೆ ತುಂಬಾ ಬಿಗಿಯಾಗಿ ಬೆಸೆದುಕೊಂಡದ್ದರಿಂದ ತಿದ್ದುಪಡಿಗಳು ಆಗಲಿಲ್ಲವೆ? ಧರ್ಮದ ಕೊಂಡಿಯೇ ವಿಜ್ಙಾನ ತನ್ನ ಹಾದಿ ಹಿಡಿದು ಬೆಳೆಯಲು ಮುಳುವಾಯಿತೆ?
ಇವು ನಮ್ಮ ಪೂರ್ವಜರಿಗೂ ಗೊತ್ತಿತ್ತು. - ತಿಳಿಯುವ ಹಂಬಲವಿದ್ದವರಿಗೆ.
ಗ್ರಹಣಗಳು ಹೇಗೆ ಆಗುತ್ತವೆ ಎಂದು ಮೊದಲಿಗೆ ವಿವರಿಸಿದವನು ನಮ್ಮ ಆರ್ಯಭಟನೇ!
ಇನ್ನು ಗ್ರಹಣ-ಅದರ ಆಚರಣೆ-ಉಪವಾಸ ಇತ್ಯಾದಿಗಳನ್ನು ಮಾಡಿದವರು ಯಾರೋ ಕಾಣೆ; ಆದರೆ ಆರ್ಯಭಟನ ದಾರಿ ಮಸುಕಾಗಿ, ಇನ್ನೊಂದು ದಾರಿಯೇ ಮೆರೆದದ್ದು ನಮ್ಮ ದುರಾದೃಷ್ಟ ಅಷ್ಟೆ.
-ಹಂಸಾನಂದಿ
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ನನ್ನ ಸಂದೇಹಕ್ಕೆ ಉತ್ತರಿಸಿದ್ದಕ್ಕೆ ವಂದನೆಗಳು.
"ಹಿಂದಿನ" definition ತುಂಬಾ ಸಡಿಲವಾಗಿತ್ತು ಎಂಬುದನ್ನು ನಿಮ್ಮ ಮಾತು ಸ್ಪಷ್ಟಪಡಿಸಿತು. ಈಗಿನಂತಯೇ ಅವರ definition ಇರಬೇಕಿತ್ತು ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಖಗೋಳ ವಿಜ್ಙಾನದ ಪ್ರಗತಿಗೆ ಗಣಿತ ವಿಜ್ಙಾನ, ಭೌತವಿಜ್ಙಾನಗಳೂ ಪೂರಕವಾಗಿ ನಿಲ್ಲಬೇಕಾಗುತ್ತದೆ.
ಇಲ್ಲ. ಇನ್ನೊಂದು ಬಿಂದುವಿಗೆ ಹೋಲಿಸಬೇಕು. ಆ ಬಿಂದುವೂ ಚಲಿಸುತ್ತಿರಬಹುದು. ಅದು ಸಾಪೇಕ್ಷ ಚಲನೆಯಾಗುತ್ತದೆ. ಖಗೋಳ ವಿಜ್ಙಾನದ ಪ್ರಗತಿ "ಭಾಸವಾಗು"ವುದಕ್ಕೆ ನಿಲ್ಲಬಾರದಲ್ಲವೆ? ಎಲ್ಲವೂ ಸುತ್ತುತ್ತಿದೆ ಎನ್ನುವ ಮಾತು ಗ್ರಹ, ನಕ್ಷತ್ರಗಳ ಚಲನೆಯ ವಿಷಯದಲ್ಲಿ ಸರಿಯಲ್ಲ ಅನಿಸುತ್ತದೆ. ಯಾಕೆಂದರೆ, ವಿಶ್ವವೇ ಹಿಗ್ಗುತ್ತಿದೆ/ಕುಗ್ಗುತ್ತಿದೆ ಎಂಬುದು ಸತ್ಯವಾದರೂ ಚಲಿಸುವ/ಚಲಿಸದಿರುವ ಕಾಯಗಳ ವಿಚಾರದಲ್ಲಿ ಆ ಸತ್ಯ ಸಹಾಯ ಮಾಡುವುದಿಲ್ಲ.
ಆರ್ಯಭಟನ ವಿಷಯ ಪ್ರಸ್ತಾಪಿಸಿದ್ದೀರಿ. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ, ಚರಕ, ಶೂಶ್ರುತ ಇವರೆಲ್ಲರ ಕೊಡುಗೆಯನ್ನು ವಸ್ತುನಿಷ್ಥವಾಗಿ, ಜಾಗತಿಕ ವಿಜ್ಙಾನದ ಸನ್ನಿವೇಶದಲ್ಲಿ ವಿವೇಚಿಸುವ ಯಾವುದಾದರು ಪುಸ್ತಕವಿದ್ದರೆ ತಿಳಿಸಿ, ಓದುವ ಇಷ್ಟವಿದೆ.
ಕಡೆಯದಾಗಿ, ದುರಾದೃಷ್ಟ ಎಂದು ಕೈಚೆಲ್ಲುವುದಕ್ಕಿಂತ, ಈವತ್ತೂ ಕೂಡ ಧರ್ಮ ಮತ್ತು ವಿಜ್ಙಾನದ ನಡುವಿನ ಸಂಬಂಧವನ್ನು ಅವಲೋಕಿಸುವುದು ಹೆಚ್ಚು ಪಾಸಿಟಿವ್ ಅಲ್ಲವೆ? ಪ್ರಗತಿಯ ಮುಖ್ಯ ಅಂಗವಾದ ತಪ್ಪೊಪ್ಪಿಗೆ ಮತ್ತು ತಿದ್ದುಪಡಿಯನ್ನು ಈವತ್ತೂ ಮಾಡಿಕೊಳ್ಳದೆ ಬೇರೆ ಬೇರೆ ಭಾಷೆ ಬಳಸಿ ಸಮರ್ಥಿಸುತ್ತಾ ಹೋದರೆ ನಮಗೇ ನಷ್ಟವಲ್ಲವೆ?
"ಆರ್ಯಭಟನ ದಾರಿ" ಮಸುಕಾಗದ ಹಾಗೆ ನೋಡಿಕೊಳ್ಳುವ ಜವಾಬ್ಬಾರಿ ನಮ್ಮೆಲ್ಲರದೂ.
ಉ: ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
ಚರಕ -ಸುಶ್ರುತರ ಕೊಡುಗೆಗಳ ಬಗ್ಗೆ ಕೇಳಿದ್ದೀರಿ.
ಎರಡು ವರ್ಷಗಳ ಹಿಂದೆ ನಾನೊಂದು ಪುಸ್ತಕ ಬರೆದಿದ್ದೇನೆ. ಅದು ಇಂಗ್ಲಿಷ್ ನಲ್ಲಿದೆ. ಆಯುರ್ವೇದದಲ್ಲಿ ಮಾನವ ಶರೀರ ಕ್ರಿಯಾ ವಿಜ್ಞಾನ (Human Physiology) ದ ಬಗ್ಗೆ ಸಿಗುವ ವಿವರಣೆಗಳನ್ನು ಪ್ರಸ್ತುತ ವೈದ್ಯಕೀಯ ವಿಜ್ಞಾನದ ಮೂಲಕ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.
ಪುಸ್ತಕದ ಹೆಸರು:’Human Physiology in Ayurveda’
ಪ್ರಕಾಶಕರು: Chaukhambha Orientalia, Varanasi.