ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಕನ್ನಡವನ್ನು ಸಂಗೀತಕ್ಕೆ ಅಳವಡಿಸುವುದು (ಹಿಂದಿ ನುಡಿಗೆ ಹೋಲಿಸಿದಾಗ) ತುಸು ಕಷ್ಟ ಎಂಬುದು ನನ್ನ ಒಂದು hypothesis.
ಕನ್ನಡದಲ್ಲಿ ಸಂಗೀತಕ್ಕೆ ಬೇಕಾಗುವ flexibility ಕಡಿಮೆ. ಅದಕ್ಕೇ ಕನ್ನಡದ ಸಿನಿಮಾ ಹಾಡುಗಳು ಗಮನವಿಟ್ಟು ಕೇಳುವವರಿಗೆ ತುಸು ಕಿರಿಕಿರಿ ಮಾಡುತ್ತವೆ. (ಎಲ್ಲವೂ ಅಲ್ಲ; ಆದರೆ ಹೆಚ್ಚಿನವು).
ಹಿಂದಿಯಲ್ಲಿ ಸಂಗೀತಕ್ಕೆ ಬೇಕಾದ flexibility ಇದೆ.
ಹಿಂದಿ ನುಡಿಯ ಪದವೊಂದರಲ್ಲಿನ ಹೆಚ್ಚಿನ (ಎಲ್ಲ ಅಲ್ಲ) ಅಕ್ಕರಗಳು ಒಂದೋ ದೀರ್ಘ ಅಲ್ಲವಾದರೆ ವ್ಯಂಜನಗಳು.
(ಬರೆಯುವಾಗ ಸ್ವರಗಳಾದರೂ ನುಡಿಯುವಾಗ ಅವು ವ್ಯಂಜನಗಳು.)
ಹ್ರಸ್ವ ಅಕ್ಕರಗಳು ಹಿಂದಿಯಲ್ಲಿ ಕಡಿಮೆ. (ಇದು ನನ್ನ observation. ಯಾವುದೇ ಪುರಾವೆ ಇಲ್ಲ.)
ಆದ್ದರಿಂದ ರಾಗಸಂಯೋಜನೆಗೆ ಈ ಹಿಂದಿ ಪದಗಳು ಒಗ್ಗುತ್ತವೆ.
ಆದರೆ ಕನ್ನಡ ಹಾಗಲ್ಲ. ಹ್ರಸ್ವ ಅಕ್ಕರಗಳು ತುಂಬ ಇವೆ. ಅವು ಸಂಗೀತಕ್ಕೆ ಅಡ್ಡಿ. ಅವುಗಳನ್ನು ರಾಗಕ್ಕೆ ಬೇಕಾದಂತೆ ಎಳೆಯುವಂತಿಲ್ಲ.
ಅದಕ್ಕೇ ಹಿಂದಿ ಹಾಡುಗಳು ಕೇಳುವುದಕ್ಕೆ ಇಂಪು. ಕನ್ನಡದಲ್ಲಿ ಆ ತರಹ ಇಂಪು ಇರುವಂತೆ ಬರೆಯುವುದು ಕಷ್ಟ.
ಇದು ನನ್ನ ಅನಿಸಿಕೆ. ಗೊತ್ತಿದ್ದವರು ಈ ಬಗ್ಗೆ ಹೇಳಿ.

- Login or register to post comments
- 567 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ನನಗೆ ಹಾಗೆ ಅನ್ನಿಸುವುದಿಲ್ಲ. ಅದಕ್ಕೆ ನಾನು ಕೇಳಿದ ಕನ್ನಡದ 'ಜೊತೆಯಲಿ ಜೊತೆ ಜೊತೆಯಲಿ" (ಗೀತ ಸಿನಿಮಾದು) ಮತ್ತು "ಜಾನೆದೋನ"(ಚೀನಿ ಕಮ್ ಸಿನಿಮಾದು)... ಎರಡಕ್ಕೂ ಒಂದೇ ಸಂಗೀತ (ರಾಗ, ತಾಳ)
ಇಲ್ಲಿ 'ಜಾನೇದೋನ' ಪೇಲವವಾಗಿದೆ. ಆದರೆ ಜೊತೆಯಲಿ ಜೊತೆಯಲಿ ತುಂಬ ಹಿಟ್ ಆದ ಹಾಡು. ಸಕ್ಕತ್ ಇಂಪಾಗೂ ಇದೆ.
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಹಾಗೇನಿಲ್ಲ. ಹಾಡನ್ನು ಬರೆದವರ ಮೇಲೆ ಹೋಗುತ್ತೆ ಅಷ್ಟೇ
ಸಾಧಾರಣವಾಗಿ ಹಾಡು ಬರೆಯುವವರು ಕರ್ಕಶ ಶಬ್ದಗಳನ್ನು (ಕರ್ಕಶ ಅನ್ನುವ ಪದವೇ ಒಳ್ಳೆಯ ಉದಾಹರಣೆ - ಹಾಡಿನಲ್ಲಿ ಇದು ಬಂದರೆ ಎಷ್ಟು ಕೆಟ್ಟದಾಗಿರಬಹುದು ಎಂದು ನೀವೇ ಊಹಿಸಿ) ಉಪಯೋಗಿಸದೇ ಬರೆದರೆ ಯಾವ ಭಾಷೆಯಾದರೂ ಪರವಾಗಿಲ್ಲ. ಒತ್ತಕ್ಷರಗಳು ಕಡಿಮೆ ಇದ್ದರೆ ಒಳಿತು - ಆದರೆ ಹಾಗಿರಲೇಬೇಕೆಂದಿಲ್ಲ - ಉದಾಹರಣೆ - ಮುತ್ತುಸ್ವಾಮಿ ದೀಕ್ಷಿತರ ಎಲ್ಲ ಕೃತಿಗಳು ಸಂಸ್ಕೃತದಲ್ಲಿದ್ದ್ದು, ಕ್ಲಿಷ್ಟವಾದ ಪದಪ್ರಯೋಗಗಳಿಂದಲೇ ಕೂಡಿರುತ್ತ್ದ್ವೆ. ಒಟ್ಟಿನಲ್ಲಿ ವಾಗ್ಗೇಯಕಾರನ ಜಾಣ್ಮೆ ಎಲ್ಲಕ್ಕಿಂತಲೂ ಮುಖ್ಯ.
-ಹಂಸಾನಂದಿ
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಸಾರ್
ಕನ್ನಡವು ಸಂಗೀತಕ್ಕೆ ಹೇಳಿಮಾಡಿಸಿದ ನುಡಿ.
ನೋಡಿ ಕರ್ನಾಟಕ ಮತ್ತು ಹಿಂದುಸ್ತಾನಿ ಇವೆರಡು ಬಗೆಗಳನ್ನು ಹುಟ್ಟಿಸಿದವರು ಕನ್ನಡಿಗರು. ಆದರೆ ಹಿಂದುಸ್ತಾನಿಗೆ ಕನ್ನಡ ಹೊಂದದರಿರಬಹುದು( ನನಗೆ ಸರಿಗೊತ್ತಿಲ್ಲ )
ಆದರೆ ಕರ್ನಾಟಕ ಶೈಲಿಗೆ ಇದು ಸಕ್ಕತ್. ಕನ್ನಡಕ್ಕಾಗಿ ಕರ್ನಾಟಕ ಸಂಗೀತವೂ, ಕರ್ನಾಟಕ ಸಂಗೀತಕ್ಕ ಕನ್ಡಡವೂ ಅಷ್ಟು ಹೊಂದುವುದು.
ಸಂಗೀತಕ್ಕಾಗೇ ಕನ್ನಡದಲ್ಲಿ ಹೇರಳ ಹಾಡುಗಳು, ಕೀರ್ತನೆಗಳು ಬಂದಿವೆ.
ಬಹುಶ ನೀವು ತುಂಬಾ ಹಿಂದುಸ್ತಾನಿ ಕೇಳ್ತೀರ ಅನ್ನಿಸುತ್ತಾ, ಯಾರೋ ಕಷ್ಟಪಟ್ಟು ಹಿಂದುಸ್ತಾನಿಗೆ ಕನ್ನಡವನ್ನು ಹೊಂದಿಸಿ, ಕೆಡಿಸಿದನ್ನು ಕೇಳಿ ಹೀಗೆ ಹೇಳಿದಿರ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಹಂಗೇನಿಲ್ಲಾ, ಹಿಂದಿಸ್ತಾನಿಗೂ ಕನ್ನಡ ಹೊಂದುತ್ತೆ. ಭಿಮಸೇನ ಜೋಸಿಯವರ ದಾಸರ ಹಾಡುಗಳನ್ನು ಕೇಳಿ.
ಸಿ.ಅಸ್ವತ್‍ರ ಭಾವಗೀತೆಗಳು ತಿಳಿ ಹಿಂದುಸ್ತಾನಿ ಬಗೆಯವು. ಪಟವರ್ದನರು ಬರಹದ ಕನ್ನಡಕ್ಕೆ ಒಗ್ಗಿದ್ದಿರಬೇಕು, ಅವರು ಇರುವ ಊರು ಅಂತಾ ಕಡೆ ಇದೆ. ಕನ್ನಡ ಹಾಡುಗಳ ಕೆಸೆಟ್ ಅತವಾ ಸಿಡಿ ಸಿಕ್ಕುವದು ತುಂಬಾ ಕಡಿಮೆ.
ಬರಹದ ಕನ್ನಡದಲ್ಲಿ ಸಕ್ಕದ ಪದಗಳು ತುಂಬಾ ಇಣುಕುತ್ತವೆ. ಒಂದೇ ಜಾತಿಯ ಒತ್ತಕ್ಕರಗಳು ಬರುವದು ಕನ್ನಡದ ಗುಣವಾದರೆ, ಬೇರೆ ಬೇರೆ ಜಾತಿಯ ಒತ್ತಕ್ಕರಗಳು ಬರುವದು ಸಕ್ಕದದ ಗುಣ (ಇದನ್ನು ಓದಿ), ಒಂದೇ ಜಾತಿಯ ಒತ್ತಕ್ಕರಗಳು, ಹಿಂದಿಯದು ಕೂಡಾ ಇದೆ ಗುಣ. ಸಕ್ಕದದ ಒರೆಗಳು ಹಿಂದಿ ಬರವಣಿಗೆಯಲ್ಲಿ ತುಂಬಿ ತುಳುಕಿದರೂ ಮಾತಿನಲ್ಲಿ ತದ್ಬವಗಳಾಗಿ ಮಾರುಪಾಡಾಗಿರುವಂತವು. ಬೇರೆ ಬೇರೆ ಜಾತಿಯ ಒತ್ತಕ್ಕರಗಳ ತೊಡಕಿನ ಬಗ್ಗೆ ಇಲ್ಲಿ ಓದಿ.
ಯಾವುದೇ ಬೇರೆ ನುಡಿಯ ಒರೆ, ಕನ್ನಡ ಹಾಡುಗಳಲ್ಲಿ ಕುಳಿತುಕೊಳ್ಳುತ್ತಾ ಅಂತಾ ನೋಡಬೇಕು, ಅದು ಕುಳಿತರೆ ಅದು ಕನ್ನಡಕ್ಕೆ ಒಗ್ಗುತ್ತದೆಯಂತವೇ.
ನನಗನ್ನಿಸುವ ಮಟ್ಟಿಗೆ ಬೆರಕೆಯಿಲ್ಲದ ಕನ್ನಡ, ಹಾಡುಗಳಿಗೆ ಇಂಡಿಯಾದಲ್ಲೇ ಯಾಕೆ, ಜಗತ್ತಿನಲ್ಲೇ ಹೇಳಿ ಮಾಡಿಸಿದ ನುಡಿ. ಇದನ್ನು ಕುರುಡು ಹೆಮ್ಮೆಯಿಂದ ನಾ ಹೇಳುತ್ತಿಲ್ಲ.
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಹಿಂದೂಸ್ತಾನಿ ಸಂಗೀತದ ವಿಷಯಕ್ಕೆ ಬಂದರೆ, ಅಲ್ಲಿ ಸಾಹಿತ್ಯವೇ ಗೌಣ ; ಖ್ಯಾಲ್ ಗಾಯನ (ಒಂದು ಕಚೇರಿಗೆ ನೀವು ಹೋದರೆ, ಮುಕ್ಕಾಲುಪಾಲು ನೀವು ಕೇಳುವುದು ಖ್ಯಾಲ್, ಮತ್ತು ಅದಕ್ಕೆ ಸಂಬಂಧಿಸಿದ ಮನೋಧರ್ಮ ಸಂಗೀತ. ಇವುಗಳಲ್ಲಿ ೨-೩ ಸಾಲು ಸಾಹಿತ್ಯವಿರುತ್ತೆ ಅಷ್ಟೆ. ಅದರ ಅರ್ಥಕ್ಕೆ ಅಂತಹ ಪ್ರಾಮುಖ್ಯತೆ ಇಲ್ಲ.
ಇನ್ನು ಸಾಹಿತ್ಯದ ಅರ್ಥ ಮುಖ್ಯವಾದ ದೇವರನಾಮ-ಭಜನ್-ಅಥವಾ ಅಭಂಗಗಳಿಗೆ ಹಿಂದೂಸ್ತಾನಿಯಲ್ಲಿ minor ಸ್ಥಾನ ಕೊಡಲಾಗುತ್ತೆ.
ಕರ್ನಾಟಕ ಸಂಗೀತದಲ್ಲಿ ಹಾಗಲ್ಲ - ಸಾಹಿತ್ಯಕ್ಕೆ,, ಹಾಡುಗಳಿಗೆ ಹೆಚ್ಚಿನ ಮಹತ್ವ ಇದೆ.
-ಹಂಸಾನಂದಿ
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ನನಗೆ ಭೀಮಸೇನರ ಹಾಡುಗಳು ಹಿಡಿಸುತ್ತವೆ, ಅವರ "ಯಾದವ ನೀ ಬಾ" ಹಾಡು.
ಕನ್ನಡ ಕ್ಲಾಸಿಕಲ್ ಹಾಡುಗಳು.
http://www.kannadaaudio.com/Songs/Classical/home/
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಅಸ್ವತ್‍ರ ಮತದಾನದ ಹಾಡುಗಳನ್ನು ಕೇಳಿ, ದಿಲ್ಲಿಯ ನನ್ನ ಗೆಳೆಯನೊಬ್ಬ ತುಂಬಾ ಇಸ್ಟಪಟ್ಟ.
http://www.udbhava.com/udbhava/songs.jsp?id=30
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಕನ್ನಡದಲ್ಲೂ ಹಿಂದಿಯಲ್ಲೂ ಅದೇ ಧಾಟಿಯಲ್ಲಿ , ಕೆಲವೊಮ್ಮೆ ಅದೇ ಅರ್ಥದಲ್ಲಿ ಇರುವ ಹಾಡುಗಳು ...
೧) ಸಂಜೆಗೆಂಪು ಮೂಡಿತು , ಇರುಳು ಸೆರಗು ಹಾಸಿತು - ಎಸ್ , ಪಿ, ಬಾಲಸುಬ್ರಹ್ಮಣ್ಯಂ - ತಂದೆ ಮಕ್ಕಳು ,
...................... , ದಿನ್ ಹುವಾ ತಮಾಮ್ , ತೂ ಭೀ ಸೋಜಾ ಸೋಗಯೀ - ಮಹಮ್ಮದ್ ರಫಿ - ಬೇಟೀ ಬೇಟೇ
೨) ರಾಧಿಕೆ ನಿನ್ನ ಸರಸವಿದೇನೆ , ಇದೇನೆ - ತಂದೆ ಮಕ್ಕಳು - ರಫಿ
ರಾಧಿಕೆ ತುನೆ ಬನ್ಸಿರೆ ಚುರಾಯೀ - ಮಹಮ್ಮದ್ ರಫಿ - ಬೇಟೀ ಬೇಟೇ
೩) ಲೇಕಿನ್ ಮೇರಾ ದಿಲ್ , ಮೇರಾ ದಿಲ್ ರೋ ರಹಾ ಹೈ - ನಾಝಿಯ ಹಸನ್- ಡಿಸ್ಕೋ ದಿವಾನೆ ;
ಏನೋ ಮೋಹಾ , ಏಕೋ ದಾಹಾ , ಸುಡುತಿದೆ ವಿರಹಾ - ರಾಜ್ - ಕೆರಳಿದ ಸಿಂಹ
೪) ಹರುಷ ದೂರದ ಮೇರು , ಏರದೆನ್ನ ಬಾಳ ತೇರು ಪಯಣ ಏರು ಪೇರು
ಹಿಂದಿಯಲ್ಲಿ ಇದೆ .... ನೆನಪಾಗುತ್ತಿಲ್ಲ
೫) ಈಗ ... ಜತೆಯಲಿ ಜತೆಯಲಿ - ಗೀತಾ
.... ಹಿಂದಿಯಲ್ಲಿ ಈಗ ಚೀನೀ ಕಂ ದಲ್ಲಿ ಇದೆಯಂತೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಹೌದು .. ಇವುಗಳನ್ನೇ ನೋಡಿ ನಾನು ಹೀಗಂದದ್ದು.
ದಾಹಾ.. ಮೋಹಾ .. ವಿರಹಾ .. ಇವಾವುವೂ ಸರಿಯಲ್ಲ. ಇವನ್ನು ದೀರ್ಘ ಮಾಡುವುದು ಅನಿವಾರ್ಯವೇ?
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ದೀರ್ಘ ಮಾಡುವದು ಅಗತ್ಯವಿಲ್ಲ ; ಗಾಯಕರು ಹಾಗೆ ಮಾಡುತ್ತಾರೆ ,
ಹಾಗೆ ಮಾಡದ ಹಾಡು ಕೇಳಬೇಕಿದ್ದರೆ - ದೇವರ ಕಣ್ಣು ಚಿತ್ರದಲ್ಲಿ ಕೆ.ಜೆ.ಏಸುದಾಸ ಹಾಡಿರುವ ’ನಗುವಿನ ಅಳುವಿನ ಸಂಕೋಲೆ’ ಗಮನ ಇಟ್ಟು ಕೇಳಿ ,
ಸೋಲೋ ಗೆಲುವೋ ಎಲ್ಲ ವಿಚಿತ್ರ
ಎಲ್ಲರು ಇಲ್ಲಿ ನೆಪ ಮಾತ್ರ
ಈ ಸಾಲುಗಳನ್ನು ಗಮನಿಸಿ
ಹಾಡು ಬಿಡಿ ಬೆಂಗಳೂರು ಕಡೆ ಅಕಾರವನ್ನು ಆ ಎಂದೇ ಉಚ್ಚರಿಸುವಾಗ ( ಅಲ್ಲಿ ಅ ಆ ಇ ಈ ಅನ್ನು ಆ ಆs ಇ ಈ ಎಂದೇ ಎಲ್ಲ ಕಲಿಯುವದು ಕಲಿಸುವದು- ಯಾಕೋ ಈ ಬಗ್ಗೆ ಸಂಪದದಲ್ಲಿ ಈ ವರೆಗೂ ಚರ್ಚೆ ಆಗಿಲ್ಲ ! )
ಒಬ್ಬ ಗಾಯಕ ಹಾಡುವಾಗಲೂ ಅಕಾರಾಂತ ಪದವನ್ನು ಅಕಾರಾಂತವಾಗಿಯೇ ಹಾಡಿರುವದು ಗಮನಿಸತಕ್ಕದ್ದೂ ಹೊಗಳತಕ್ಕದ್ದೂ ಆಗಿದೆ!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಗಾಯಕರು ಹಾಗೇಕೆ ಮಾಡುತ್ತಾರೆ? ಸಂಗೀತಕ್ಕೆ / ರಾಗಕ್ಕೆ ಹೊಂದಿಕೊಳ್ಳಬೇಕು ಅಂತಲ್ಲವೆ?
ನೀವು ಮತ್ತೆ ಚರ್ಚೆಯನ್ನು back to square one ಗೆ ತಂದಿದ್ದೀರಿ.
ಹಿಂದಿಯಲ್ಲಿ ಹೀಗಿಲ್ಲ ಅಲ್ಲವೆ?
ಇನ್ನು ಏಸುದಾಸರ ’ಗುರುವಿನ ಗುಲಾಮನಾಗುವ ತನಕ’ ಕೇಳಿದ್ದೀರಾ? ಇಲ್ಲವಾದರೆ ದಯವಿಟ್ಟು ಕೇಳಬೇಡಿ!
ಅವರಮೇಲಿನ ನಿಮ್ಮ ಶ್ರದ್ಧೆ ಹೊರಟು ಹೋಗುವುದು.
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಹೌದು, ಈ ಬಗ್ಗೆ ನಾನು ನನ್ನ ಮಂಡ್ಯ, ಹಾಸನದ ಗೆಳೆಯರನ್ನು ಗೇಲಿ ಮಾಡಿದ್ದಿದೆ. ಆಡುವಾಗ ಅವರು ಹಾಗೇನೂ ಅನ್ನಲ್ಲಾ, ’ಅಂಗಡಿ’ಯನ್ನು ಅಂಗಡಿನೇ ಅನ್ನುತ್ತಾರೆ, ಕಲಿಸುವಾಗ ಯಾಕೆ ಹಾಗೆ? ಗೊತ್ತಿಲ್ಲಾ.... ಯಾರಾದರು ಮಾತುಕತೆ ತಗಿತಾರಾ ನೋಡೋಣು.......
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ಇದನ್ನ ಹೊಸ ಎಳೆಯಲ್ಲಿ ಬರೆಯಬಹುದಾಗಿತ್ತು - ಸಧ್ಯಕೆ ಇಲ್ಲಿರಲಿ ಎಂದು ಬರೆಯುತ್ತಿದ್ದೇನೆ.
ಮಿಶ್ರಿಕೋಟಿಯವರೂ, ಸಂಗನಗೌಡರು ಹೇಳುತ್ತಿರುವ ಅ-ಆ-ಇ-ಈ ವಿಷಯದ ಬಗ್ಗೆ ನನ್ನ ಅನಿಸಿಕೆ ಹೀಗೆ:
೧. ಮೊದಲಿಗೆ ದಕ್ಷಿಣ ಕರ್ನಾಟಕದವರು (ನೀವು ವಿಶೇಷವಾಗಿ ಹಾಸನ ಮಂಡ್ಯದವರನ್ನು ಹೆಸರಿಸಿದ್ದಕ್ಕೆ ನಾನು ಬರೆಯಲೇಬೇಕಾಯಿತು) ನೀವು ಹೇಳುವ ಹಾಗೆ ಆ ಆ.. ಎಂದು ಹೇಳುತ್ತಾರೆ ಎಂಬುದು ಸರಿಯಲ್ಲ.
೨. ಹೇಗೆ ಈ ಎನ್ನುವುದು ಇ ಯ ಎರಡರಷ್ಟು ಉದ್ದ ಇದೆಯೋ, ಊ ಅನ್ನುವುದು ಉ ರ ಎರಡರಷ್ಟು ಉದ್ದ ಇದೆಯೋ ಹಾಗೇ ಆ ಎನ್ನುವುದನ್ನು ಅ ಎಂಬುದರ ಎರಡರಷ್ಟು ಉದ್ದ ಹೇಳುತ್ತೇವೆ ನಾವು. ಈ ಮತ್ತು ಇ ಯಲ್ಲಿ ಹೇಗೆ ಶಬ್ದವ್ಯತ್ಯಾಸವಿಲ್ಲದೇ ಬರೀ ಅದನ್ನು ಎಷ್ಟು ಹೊತ್ತು ಉಚ್ಚರಿಸುತ್ತೇವೆ ಎನ್ನೋದರಿಂದಲೇ ಅಕ್ಷರಗಳನ್ನು ಗುರುತಿಸ್ತೇವೋ, ಹಾಗೇ ಆ ಮತ್ತು ಆ ಗಳು ಕೂಡ.
೩. ಇದು ತಪ್ಪು ಅಂತ ಹೇಳೋ ಮೊದಲು ಮುಂದೆ ಓದಿ
೪. ಆದರೆ, ಕನ್ನಡದಲ್ಲಿ ಎರಡು ಅ ಉಚ್ಚಾರಗಳು ಬಳಕೆಯಲ್ಲಿರುವ ಪದಗಳಿವೆ - ಆದರೆ, ಅವೆರಡಕ್ಕೂ ಒಂದೇ visual representation. ಇದಕ್ಕೆ technical term ಏನೆಂಬುದು ಮರೆತಿದ್ದೇನೆ (half rounded vowel?)
ಈಗ ಈ ಸಾಲುಗಳನ್ನು ಓದಿ - ಇಲ್ಲಿ ಎರಡೂ ಬಗೆಯ ಉಚ್ಚಾರಗಳಿಗೆ ಉದಾಹರಣೆಗಳಿವೆ - ಮನದಟ್ಟಾಗದಿದ್ದರೆ, ವಿವರ ಅಡಿಯಲ್ಲಿ;
* ಅವರು ನನ್ನ ಅಮ್ಮ;
* ಅಕ್ಕ, ಮೂರು ಪಾವು ಅಕ್ಕಿ ಹಾಕೇ! ಅನ್ನ ಉದುರಾಗಿರಲಿ
* ಕತ್ತೆ ಹಾಗೆ ಕುಣೀಬೇಡ ; ಕತ್ತು ಮುರಿದುಬಿಡತ್ತೆ!
* ಅಡವಿಯಲ್ಲೊಂದು ಅಡುಗೂಲಜ್ಜಿ ಮನೆ ಇತ್ತಂತೆ
* ನಾನು ಒಳಗೆ ಬಂದಾಗಲೇ, ನಮ್ಮ ತಂದೆ ಹೊರಗೆ ಹೋದರು
*ಅರಿವಿದ್ದವನಿಗೆ ಜಗಳವಿಲ್ಲ
ಅವರು, ಅಮ್ಮ, ಅಕ್ಕ, ಅನ್ನ, ಕತ್ತೆ, ಅಡವಿ, ತಂದೆ,ಜಗಳ -> ಇಲ್ಲಿ ಬರುವ ಅಕಾರ ಆ ಕಾರದ ಅರ್ಧ; ಬೇರೇನೂ ವ್ಯತ್ಯಾಸವಿಲ್ಲ
ಅಕ್ಶರಮಾಲೆ ಹೇಳಿಕೊಡೋ ರೀತಿ)
(ಇದು ಹಾಸನ, ಮಂಡ್ಯದವರು
ಇದೇನಪ್ಪ, ಜಗಳ, ಕತ್ತೆಗಳಲ್ಲಿ ಅಕಾರ ಎಲ್ಲಿ ಎನ್ನಬೇಡಿ. ಜ್ + ಅ = ಜ ಅಲ್ಲವೆ?
ಅಕ್ಕಿ, ಅರಿವು, ಕತ್ತು, ಅಡುಗೂಲಜ್ಜಿ -> ಇಲ್ಲಿ ಬರುವ ಅ ಕಾರ, ದೀರ್ಘ ಆ ದ ಅರೆಭಾಗ ಮಾತ್ರವಲ್ಲ, ಬಾಯಿಯ ಬೇರೆ ಸ್ಥಳದಲ್ಲೇ ಹೊರಡತ್ತೆ. ಇದೇ ಉತ್ತರ ಕರ್ನಾಟಕದಲ್ಲಿ ಅಕ್ಷರಮಾಲೆಯಲ್ಲಿ ಹೇಳಿಕೊಡುವ ರೀತಿ)
ಈಗ ಕಂಡಿತಲ್ಲ? ಎರಡು ಶಬ್ದಗಳಿಗೆ ಒಂದೇ ಅಕ್ಷರ ಇರುವುದರಿಂದ ಹೀಗಿದೆ ಅಷ್ಟೆ. ಹಾಗಾಗಿ, ಎರಡೂ ಕಡೆಯವರೂ ಸರಿ ಅನ್ನಬಹುದು. ಮುಖ್ಯವಾಗಿ, ಹಾಸನ ಮಂಡ್ಯ್ರದವರು ಧಾರವಾಡ ಬಿಜಾಪುರದ ಕಡೆಯವರಿಗಿಂತ ಹೆಚ್ಚಿನ ತಪ್ಪೇನೂ ಮಾಡ್ತಿಲ್ಲ ಈ ವಿಷಯದಲ್ಲಿ
ಒಂದು ಉಚ್ಚಾರವನ್ನು, ಇನ್ನೊಂದು ಉಚ್ಚಾರ ಬಳಸುವ ಪದದಲ್ಲ್ಲಿ ಬಳಸಿದರೆ ಅದು ಸರಿ ಕೇಳದು:
ನಮ್ಮ ತಂದೆ ಊರಿಗೆ ಹೋಗುವ ಮೊದಲೇ ಪುಸ್ಕಕ ತಂದಿಟ್ಟಿದ್ದರು -> ಇಲ್ಲಿ ಎರಡು ತಂದೆಗಳಲ್ಲಿ, ಅ ಕಾರವನ್ನು ಬದಲಾಯಿಸಿ, ಹೇಗೆ ಕೇಳುತ್ತೆ ನೋಡಿ
-ಹಂಸಾನಂದಿ
ಉ: ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
ನನಗೆ ಈ ಎರಡು ತೆರನಾದ ಅಕಾರಗಳು ಅರ್ಥ ಆಗಿಲ್ಲ.
ಬಹುಶಃ ನಮ್ಮಕಡೆ (ದ. ಕ.) ಆ ಭೇದ ಇಲ್ಲವೇ ಇಲ್ಲ.