Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಬ್ರಾಹ್ಮಣತ್ವ ದ ಅರ್ಥವೇನು?

August 5, 2007 - 12:30am — mananthprabhu

ಭೈರಪ್ಪನವರ ದಾಟು ಓದಿ ಮುಗಿಸಿದೆ. ತು೦ಬಾ ಚೆನ್ನಾಗಿ ಜಾತಿ ವ್ಯವಸ್ಥೆಯ ಒಳಿತು, ಕೆಡುಕುಗಳನ್ನು ವಿವರಿಸಿದ್ದಾರೆ.

ಈ ಕಾದ೦ಬರಿಯನ್ನು ಓದಿದ ಮೇಲೆ ಜಾತಿ ಪದ್ದತಿಯ ಬಗ್ಗೆ ಕೆಲವು ಪ್ರಶ್ನೆಗಳೆದ್ದವು.

೧ ಇ೦ದಿನ ಸಮಾಜದಲ್ಲಿ ಒಬ್ಬ ಮಾನವನು ತಾನು ಯಾವ ತ೦ದೆ ತಾಯಿಗೆ ಹುಟ್ಟಿದ್ದಾನೆ ಎ೦ಬ ಆಧಾರದಲ್ಲಿ ಅವನ ಜಾತಿಯ ನಿರ್‍ಣಯವಾಗುತ್ತದೆ. ಇದು ಜಾತಿಯನ್ನು ನಿರ್‍ಣಯಿಸುವ ಸರಿಯಾದ ವಿಧಾನವೆ?

೨ ಬ್ರಾಹ್ಮಣಿಕೆ ಅಥವಾ ಬ್ರಾಹ್ಮಣತ್ವ ದ ಅರ್ಥವೇನು?

೩ ಓಬ್ಬ ಮಾನವನು ಇನ್ನೊಬ್ಬ ಮಾನವನಿಗೆ ಬ್ರಾಹ್ಮಣಿಕೆಯನ್ನು ಕೊಡಲು ಸಾಧ್ಯವೆ?

೪ ಬ್ರಾಹ್ಮಣರಾದವರು "ಯಜ್ನೊಪವೀತ"(ಜನಿವಾರ) ವನ್ನು ಧರಿಸಲೇಬೇಕೆ? ಜನಿವಾರದ ಮಹತ್ವವೇನು?

ಸಹ್ರದಯಿ ಒದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸುವಿರೆ೦ದುಕೊಳ್ಳುತ್ತೇನೆ.

‹ ಕ್ಯಾ೦ಡಲ್ ದೀಪದ ಬೆಳಕು - ಹೆಬ್ಬಾಲ್ ಕೆರೆ
  • ಸಮಾಜ
Ornamental seperator
  • Login or register to post comments
  • 447 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2007 - 8:52am — mahesha

ಉ: ಬ್ರಾಹ್ಮಣತ್ವ ದ ಅರ್ಥವೇನು?

mahesha's picture

೪ಕ್ಕೆ ನಾನು ಉತ್ತರ ಹೇಳಲು ಜತುನಿಸುವೆನು.

ವೀತ/vita [ vî-tá ] pp. 1. &root;1. vî; n. desire (V.); 2. (C.) (of &root;2. vî) trained, quiet; n. guiding an elephant (with feet and hook); 3. -tá, (&root;vyâ) hidden (RV.); girt with (in.; P.);

ವೀತ trained ಅಂತ ತಗೊಂಡ್ರೆ.

ಯಜ್ಞೋಪವೀತ = ಜನ್ನ/ಯಜ್ಞಕ್ಕೆ train ಆದವನು, ಜನ್ನದ ಹತ್ತಿರ ಇರುವವನು ಎಂದು ತಿಳಿವು.

ಇದನ್ನು ಬ್ರಾಹ್ಮಣರಷ್ಟೇ ಅಲ್ಲ ಕ್ಷತ್ರಿಯ, ವೈಶ್ಯರೂ ತೊಡಬೇಕು. ಆದರೆ ಯಾವಾಗಲೂ ಅನ್ನೋದು ಒಂದು ಗೊಂದಲ?

ಜನಿವಾರವನ್ನು ನಾವು ಈಜುವಾಗ, ಸೌದೆ ಕಡಿಯುವಾಗ, ಬವರ/ಯುದ್ಧದ ಹೊತ್ತಲ್ಲಿ, ಇನ್ನು ಮುಂತಾದ ವೇಳೆ ತೆಗೆದಿಡಬಹುದಂತೆ.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 12:36pm — ಶ್ರೀನಿವಾಸ ವೀ. ಬ೦ಗೋಡಿ

ಉ: ಬ್ರಾಹ್ಮಣತ್ವ ದ ಅರ್ಥವೇನು?

ಶ್ರೀನಿವಾಸ ವೀ. ಬ೦ಗೋಡಿ's picture

ಮಹೇಶ wrote:
ಜನಿವಾರವನ್ನು ನಾವು ಈಜುವಾಗ, ಸೌದೆ ಕಡಿಯುವಾಗ, ಬವರ/ಯುದ್ಧದ ಹೊತ್ತಲ್ಲಿ, ಇನ್ನು ಮುಂತಾದ ವೇಳೆ ತೆಗೆದಿಡಬಹುದಂತೆ.

ಅಂದರೆ ನಾವು ಸೌದೆ ಕಡಿಯುವಾಗ ಶೂದ್ರ, ಯುದ್ಧದ ಹೊತ್ತಲ್ಲಿ ಕ್ಷತ್ರಿಯರಾಗಿರುತ್ತೇವೆ ಎನ್ನುವ ಕಾರಣವಿರಬಹುದೆ?

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 1:18pm — mahesha

ಉ: ಬ್ರಾಹ್ಮಣತ್ವ ದ ಅರ್ಥವೇನು?

mahesha's picture

ಅಯ್ಯ

ಕ್ಷತ್ರಿಯ ವೈಶ್ಯ,( ಶೂದ್ರ? ) ಇವರೂ ಜನಿವಾರ ತೊಡಬೇಕು! ಆದರೆ ಇವರಲ್ಲಿ ಹಲವರು ಬಿಟ್ಟು ಬಟ್ಟಿದ್ದಾರೆ. ಹಲ-ಹಾರ್ಬರು ಇನ್ನು ಆ ಸಂಪ್ರದಾಯ ಉಳಿಸಿಕೊಂಡಿದ್ದಾರೆ.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 10:25am — HV SURYANARAYAN...

ಉ: ಬ್ರಾಹ್ಮಣತ್ವ ದ ಅರ್ಥವೇನು?

HV SURYANARAYANA SHARMA's picture

ಬ್ರಾಹ್ಮಣ ಎಂದರೆ ಬ್ರಹ್ಮ ಜ್ಞಾನ ಉಳ್ಳವನು, ಬ್ರಾಹ್ಮಣ ಎಂಬುದು ಜಾತಿಯಲ್ಲ, ಹುಟ್ಟಿನಿಂದ ಬರುವಂಥದ್ದಲ್ಲಾ, ಸಾಧನೆಯಿಂದ ಗಳಿಸಿಕೊಳ್ಳಬಹುದಾದದ್ದು, ಜನಿವಾರ ವೈದಿಕ ಕರ್ಮ ಕಾಂಡದಲ್ಲಿ ಒಂದು ಅಗತ್ಯ ವಾದ ಶಿಸ್ತು, ಅನಿವಾರ್ಯವಲ್ಲದಿದ್ದರೂ ಅಪೇಕ್ಷಣೀಯ. ಬ್ರಹ್ಮಜ್ಞಾನಿಗೆ ಯಾವ ಬಾಹ್ಯ ಚಿನ್ಹೆ ಅಲಂಕಾರಗಳು, ವಸ್ತ್ರ-ಸಂಹಿತೆ, ನಾಮ-ವಿಭೂತಿ-ತಿಲಕ ಇವುಗಳ ಅಗತ್ಯವಿಲ್ಲಾ. ಬ್ರಹ್ಮ ಎಂದರೆ ದೊಡ್ಡದು ಎಂದು ಅರ್ಥ. ಬ್ರಹ್ಮಜ್ಞಾನವೆಂದರೆ ಎಲ್ಲಾ ದ್ವಂದ್ವ ಗಳಿಂದ ಮುಕ್ತನಾಗಿ ಸರ್ವಭ್ಹೂತ ಹಿತ-ರತನಾಗಿ, ತನ್ನ ಆನಂದದಲ್ಲಿ ತಾನಿದ್ದು, ತನ್ನ ಬಳಿ ಬರುವವರಿಗೆ ಈ ಆನಂದದ ಅನುಭೂತಿಯನ್ನುಂಟುಮಾಡಬಲ್ಲವ. ಇದು ಪವಾಡ ಸದೃಶ ವ್ಯಕ್ತಿತ್ವ ಆದರೆ ನಮ್ಮಲ್ಲಿನ ಅನೇಕ ಬಾಬಾಗಳು ಮಾಡುವ ಪವಾಡ-ಪ್ರದರ್ಶನವಲ್ಲ. ಸದ್ಗುರುವಿನ ಆಶ್ರಯದಿಂದ ಬ್ರಾಹ್ಮಣತ್ವಕ್ಕೆ ಯಾರೂ ಏರಬಹುದು. ಆದರೆ ಈ ದಾರಿ ಅತಿ ಕಠಿಣ. ಇಂದು ಸಮಾಜದಲ್ಲಿ ನಾವು ಕಾಣುತ್ತಿರುವ ಬ್ರಾಹ್ಮಣ ರೆಂಬ ಜಾತಿಗೂ ಬ್ರಾಹ್ಮಣತ್ವಕ್ಕೂ ಸಂಬಂಧವಿಲ್ಲ. ಜಾತಿಯತೆ ವೇದಪ್ರಣೀತವಲ್ಲ. ವೇದಾಧ್ಯಯನಕ್ಕೆ ಆ ಶಿಸ್ತಿಗೊಳಪಡಬಲ್ಲ ಎಲ್ಲರೂ ಅರ್ಹರು. ಈ ಮನೋದಾರ್ಢ್ಯ-ಶ್ರದ್ಧೆ-ಶಿಸ್ತಿಗೊಳಪಡಬಲ್ಲ ಯೊಗ್ಯತೆಯೇ ಸಂಸ್ಕಾರ.

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 12:27pm — ಸಂಗನಗೌಡ

ಉ: ಬ್ರಾಹ್ಮಣತ್ವ ದ ಅರ್ಥವೇನು?

ಸಂಗನಗೌಡ's picture

ನಿಮ್ಮ ಮಾತು ಸರಿಯಾಗಿದೆ ಅನಿಸುತ್ತೆ. ವೇದಗಳಲ್ಲಿ ಹೇಳಿರುವ "ವರ್ಣವ್ಯವಸ್ತೆ" ಈ ಬಗೆಯದು ಅಂತ ನನ್ನ ಅನಿಸಿಕೆ.

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 12:32pm — mahesha

ಉ: ಬ್ರಾಹ್ಮಣತ್ವ ದ ಅರ್ಥವೇನು?

mahesha's picture

"ವೇದಗಳಲ್ಲಿ ಹೇಳಿರುವ "ವರ್ಣವ್ಯವಸ್ತೆ" ಈ ಬಗೆಯದು ಅಂತ ನನ್ನ ಅನಿಸಿಕೆ."

ವೇದದಲ್ಲಿ ವರ್ಣವ್ಯವಸ್ಠೆ ಅಂತ ಹೇಳಿದೆಯಾ?

ನಾನು ತಿಳಿದಂತೆ ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ವೈಶ್ಯ ಅಂತ ಒರೆಗಳ ಬಳಕೆಯುಂಟು, ಆದರೆ ಅದೊಂದು ಪದ್ದತಿ, ವ್ಯವಸ್ಥೆ, ಅಂತ ಇದೆ ಅಂತ ತಿಳಿದಿರಲಿಲ್ಲ.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 1:24pm — mananthprabhu

ಉ: ಬ್ರಾಹ್ಮಣತ್ವ ದ ಅರ್ಥವೇನು?

mananthprabhu's picture

ತಮ್ಮ ಪ್ರತಿಕ್ರಿಯೆಗೆ ನನ್ನಿ,

"ಇಂದು ಸಮಾಜದಲ್ಲಿ ನಾವು ಕಾಣುತ್ತಿರುವ ಬ್ರಾಹ್ಮಣ ರೆಂಬ ಜಾತಿಗೂ ಬ್ರಾಹ್ಮಣತ್ವಕ್ಕೂ ಸಂಬಂಧವಿಲ್ಲ."

ಹಾಗಿದ್ದರೆ ನಮ್ಮ ಇ೦ದಿನ ಜಾತಿ ಪದ್ದತಿ ಹೇಗೆ ಹುಟ್ಟಿಕೊ೦ಡಿತು?

- ಅನ೦ತ

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 1:34pm — mahesha

ಉ: ಬ್ರಾಹ್ಮಣತ್ವ ದ ಅರ್ಥವೇನು?

mahesha's picture

ಪ್ರಭು

ಎಲ್ಲ ದೇಸದಲ್ಲೂ ಜಾತಿಗಳಿವೆ, ಪಂಗಡಗಳಿವೆ, ವರ್ಗಗಳಿವೆ.

ಇದು ಎಲ್ಲಡೆ ಮಾಮೂಲಿ.

ಒಂದು ಪಂಗಡ ಬರೀ ಓದಿಕೊಂಡು ಬರೆದುಕೊಂಡು ಅದರಲ್ಲೇ ಬಾೞಿಕೊಂಡು ಬಂದಿತು. ಹೀಗೆ ಪಾರುತ್ತಾ( ನೋಡು, ಉಂಕಿಸು) ಇದ್ದ, ಇರುವ ಪಂಗಡ ಪಾರ್ಪರು, ಹಾರ್ವರು, ಹಾರ್ಬರು( ಬ್ರಾಹ್ಮಣ ಸಂಸ್ಕೃತದಲ್ಲಿ ) ಆಯ್ತು.

ಹೀಗೆ
ಒಕ್ಕಲಿಗ = ಒಕ್ಕಲು ಮಾಡುವವನು, ಬೆಳೆಗಾರ
ಹೊಲೆಯ = ಹೊಲೆಯುವವನು ( ಹಿಂದೆ ಬರೀ ಮೆಟ್ಟು/ಎಕ್ಕಡವನ್ನು ಹೊಲೆಯುತ್ತಿದ್ದು, ಬಟ್ಟೆ ಹೊಲೆತವಿರಲಿಲ್ಲ )

ಅವರವರ ಕೆಲಸದ ಮೇಲೆ ಹುಟ್ಟಿ ಬಂದುವು. ಅಪ್ಪನ ಕೆಲಸವನ್ನೇ ಮಗನೂ, ಮೊಮ್ಮಗನೂ ಮಾಡಿಕೊಂಡು ಬಂದು, ಅದು ಹಾಗೆ ಉಳಿದುಕೊಂಡಿದು. ಬಳಿಕ ಕೆಲಸದಿಂದ ಹೆಸರು, ಹಾಗೇ ಕುಳದ ಹೆಸರಾಗಿ, ಪಂಗಡದ ಹೆಸರಾಗಿ ಉಳಿದುಕೊಂಡಿದೆ.

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 7, 2007 - 1:36pm — mahesha

ಉ: ಬ್ರಾಹ್ಮಣತ್ವ ದ ಅರ್ಥವೇನು?

mahesha's picture

ಈ ಮೇಲಿನ ವಿವರಕ್ಕೆ

ಲಿಂಗಾಯತರು, ಕ್ರಿಸ್ತರು, ಮುಸಲಿಮರು ಮುಂತಾದ ನಂಬಿಕೆಯ ಮೇಲೆ ಆದ ಪಂಗಡಗಳು ಹೊರತು.!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?
  • ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
  • Brahmins for Dummies
  • ತಿರುಕರ ನುಡಿ ಮುತ್ತುಗಳು.
Syndicate content

ಲೇಖಕರು

mananthprabhu's picture

ಪೂರ್ಣ ಹೆಸರು
ಅನ೦ತ ಪ್ರಭು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator