ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಸಕ್ಕದದಲ್ಲಿ ಇರಬಹುದೇ?
ಮಾದರಿ: ಖ್ಖ, ಘ್ಘ, ಛ್ಛ, ಝ್ಝ, ಠ್ಠ, ಢ್ಢ, ಥ್ಥ, ಧ್ಧ, ಫ್ಫ, ಭ್ಭ,
ಅಬ್ಬಾ, ಸಿಕ್ಕಾಪಟ್ಟೆ ಉಲಿಯಲು ತುಂಬಾ ಎಡರು-ತೊಡರು ![]()

- Login or register to post comments
- 544 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವಯ್ಬವ!
ಕನ್ನಡದಲ್ಲಿ ಇಲ್ಲವೇ ಇಲ್ಲ ಸರಿ.
ಸಕ್ಕದದಲ್ಲೂ ಮಾಪ್ರಾಣಕ್ಕೆ ಮಾಪ್ರಾಣ ಒತ್ತು ಬರಲ್ಲ. ಬಂದರು ಸಂದಿಯಿಂದ ಬರಬಹುದು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಸಂಸ್ಜ್ಕೃತದಲ್ಲೂ ಇದು ಕಡಿಮೆಯೇ - ಅಥವಾ ಇಲ್ಲವೇ ಇಲ್ಲವೆಂದೇ ಹೇಳಬಹುದು.
ಪ್ರಾಕೃತದಲ್ಲಿ ಕೆಲವು ಇಂತಹ ಪ್ರಯೋಗಗಳಿವೆ.
ಉದಾಹರಣೆಗೆ : ಉವಝ್ಝಾಯ (ಉಪಾಧ್ಯಾಯ)
ಅರ್ಹಂತನ ಸ್ತೋತ್ರವೊಂದರಲ್ಲಿ ಬರುತ್ತೆ
ಣಮೋ ಅರಿಹಂತಾಣಂ ...ಣಮೋ ಉವಝ್ಝ್ಹಾಯಾಣಂ ಣಮೋ ಲೋಏ ಸವ್ವ ಸಾಊಣಂ ಎಂದು.
-ಹಂಸಾನಂದಿ
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವಿಠ್ಠಲ ....ಇಲ್ಲಿ ಠ್ಠ ಒತ್ತಿದೆ ಅಲ್ಲವೆ ?
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವಿಠ್ಠಲ ಮತ್ತು ವೆಂಕಟ ಇವೆರಡು ಸಕ್ಕದೊರೆಗಳಲ್ಲ ಅಂತ ಕೇಳಿದ್ದೇನೆ.
ಹಾಗೆ ’ಭಜ’ ಇದು ಸಕ್ಕದವಲ್ಲವಂತೆ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವಿಠಲ ಅನ್ನುವುದು ಈಠ್ (ಇಟ್ಟಿಗೆ) ಎಂಬ ಪದದಿಂದ ಬಂದಿದೆ ಎಂದು ಕೇಳಿದ್ದೇನೆ;
ಪಾಂಡುರಂಗ (ರವಿಚಂದ್ರನ್ ಅಲ್ಲ ಸ್ವಾಮೀ
) ಇಟ್ಟಿಗೆಯ ಮೇಲೆ ನಿಂತಿದ್ದರಿಂದ, ಅವನಿಗೆ ವಿಠಲ ಅನ್ನೋ ಹೆಸರು ಅಂತ ಕಥೆ ಇದೆ.
ವೆಂಕಟ ಎನ್ನುವುದು ತಮಿಳಿನ ವೇಂಗಡದ ಸಂಸ್ಕೃತ ರೂಪ
ತಿರುಪತಿಗೆ ತಮಿಳಿನ ಹೆಸರು ವೇಂಗಡಂ.
ಹಿಂದಿನಿಂದಲೂ, ತಮಿಳುನಾಡಿನವರು ತಮ್ಮ ನೆಲ ಉತ್ತರದಲ್ಲಿ ವೇಂಗಡದಿಂದ, ದಕ್ಷಿಣದಲ್ಲಿ ಕುಮರಿಯವರೆಗೆ (ಕನ್ಯಾ ಕುಮಾರಿ) ಎಂದೇ ಹೇಳುತ್ತಾ ಬಂದಿರುವುದು.
-ಹಂಸಾನಂದಿ
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವಿಠ್ಠಲ ಅನ್ನೋದು ಕನ್ನಡದ ಇಟ್ಟಿಗೆಯಿಂದ ಅಂತ ಹೇಳ್ತಾರೆ. ಈ ವಿಟ್ಟಲನೋ ಕಾನಡೀದೇವ(ಕನ್ನಡ ದೇವ)
ಇಟ್ಟಿಗೆ ಸಕ್ಕದ ಇಷ್ಟಿಕಾದಿಂದ ಬಂದಿದೆ ಎಂಬೋದು ನಂಬೋದಕ್ಕೆ ತುಸು ಆಗಲ್ಲ.
ಇಟ್ಟಿಗೆ = brick
ಪಿಟ್ಟೆ(lump) = ಪಿಟ್ಟಿಗೆ => ಹಿಟ್ಟಿಗೆ => ಇಟ್ಟಿಗೆ. ( ಹಿಟ್ಟಿಗೆ ಅಂದರೆ ಇಟ್ಟಿಗೆಯೇ )
ಪಿಟ್ಚೆ/ಪಿಟಿಚೆ/ಪಿಡಿಚೆ/ಪಿಟ್ಟೆ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ನನ್ನ ಗೆಳೆಯನೊಬ್ಬನಿಗೆ ನಾನು ಯಾವಾಗಲು ಕರೆಯುವುದು "ಇಟ್ಟಲ" ಅಂತ
ಇದು ಹೀಗೆಯೆ ಅನಿಸುತ್ತೆ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
what about ಮುಠ್ಠಾಳ?
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಮುಟ್ಟಾಳ ಸಾರ್ ಅದು
ಮುಟ್ಟು+ಹಾಳ!
ಮುಠ್ಠಾಳ ಇದು ತುಂಬ ಏರಿಸಿ ಹೇಳಿದಂತೆ.!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಸಕ್ಕದದ ’ ಫುಫ್ಫುಸ ’ - ಇದು lung (ಶ್ವಾಸ ಕೋಶ) ಗೆ ಇರುವ ಸಮಾನಾರ್ಥಕ ಪದ.
ಕೆಲವು ಕಡೆ ಫುಪ್ಫುಸ ಅಂತಲೂ ಬರೆಯುತ್ತಾರೆ.
ಈ ಕೊಂಡಿ ’ ಫುಫ್ಫುಸ ’ ಮರಾಠಿ ಮತ್ತು ಸಕ್ಕದದಲ್ಲಿಇರುವುದಾಗಿ ಹೇಳುತ್ತದೆ:
http://www.logosdictionary.org/pls/dictionary/new_dictionary.gdic.st?phr...
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಷರ ಸಾಧ್ಯವಿಲ್ಲ. ಹಾಗಿದ್ದರೂ ಉಚ್ಚರಿಸಲಾಗದು ಉಚ್ಚಾರ ಅಲ್ಪ+ಮಹಾಪ್ರಾಣ ಅಷ್ಟೆ.
ವಿಠ್ಠಲ ಎಂದು ಬರೆದರೂ ಉಚ್ಚರಿಸಲು ಸಾಧ್ಯವಿರುವುದು ವಿಟ್ಠಲ ಎಂದೇ.
ಹಾಗೆಯೇ ಕ್ಗ, ಚ್ಜ ಟ್ಡ, ತ್ದ, ಪ್ಬ ಸಾಧ್ಯವಿಲ್ಲ. ಅದೂ ಗ್ಗ, ಜ್ಜ, ಡ್ಡ, ದ್ದ, ಬ್ಬ ಎಂದಷ್ಟೇ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಸಾರ್..
ತುಸು ಹಂಸಾನಂದಿಯವರ ಕಮೆಂಟು ಓದಿ.. ವಿಠ್ಠಲ ಪಾಗದ. ಸಕ್ಕದ, ಕನ್ನಡ ಅಲ್ಲ..!!
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ನಿಮ್ಮ ಮಾತಿನಲ್ಲಿ ಹೇೞುವುದಾದರೆ ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಕರವಾದಾಗ ಉಚ್ಚಾರಣೆಯಲ್ಲಿ ಆರ್ಪಿಲ್ಲ (ಸಾಧ್ಯತೆ). ನಾವು ಹಾಗೆ ಉಚ್ಚರಿಸಲಾಱೆವೆಂದಷ್ಟೇ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಸಾಧ್ಯತೆ ಬಗ್ಗೆ ಹೇೞಿದ್ದು. ಸಕ್ಕದವೋ, ಪಾಗದವೋ, ಕನ್ನಡವೋ ಪ್ರಸ್ತುತವಲ್ಲ. ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಕರ ಉಚ್ಚರಿಸಲಾಗದೆಂದೇ ನನ್ನ ಅಭಿಪ್ರಾಯ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಅಯ್ಯೋ..!!! ಪಾಗದದಲ್ಲಿ ಇದೆ ಅಂತ ಹಂಸಾನಂದಿ ತೋರಿಸಿದರಾಲ್ಲ..
ಪಾಗದ ಮಾತಾಡೋರು ಹೇಳಬೋದು..!!
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಗೊತ್ತಿಲ್ಲ. ಪಾಗದದ ರೂಪಗಳಾದ ಹಿಂದಿ, ಮರಾಠಿ ಇತ್ಯಾದಿ ಮಾತನಾಡುವ ಜನರನ್ನೇ ಕೇಳಬೇಕಷ್ಟೇ?! ಪರಾಂಬರಿಸಬೇಕಷ್ಟೇ?!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಮೇಲಿನ ಸಾಲು
"ಸಾಧ್ಯತೆ ಬಗ್ಗೆ ಹೇೞಿದ್ದು. ಸಕ್ಕದವೋ, ಪಾಗದವೋ, ಕನ್ನಡವೋ ಪ್ರಸ್ತುತವಲ್ಲ. ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಕರ ಉಚ್ಚರಿಸಲಾಗದೆಂದೇ ನನ್ನ ಅಭಿಪ್ರಾಯ."
ಈ ಸಾಲಿಗೆ ವಿರೋದವಾಗಿದೆ... ಪಾಗದವನ್ನು ನೀವು ಪರಾಂಬರಿಸಿಲ್ಲ ಅಂತ ಆಯ್ತಲ್ಲ!
ಸಾರ್.. ತುಸು ವಿಶಯ ಏನೂ ನೋಡಿ
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಬರೆಯಲಿಕ್ಕೆ ಏನು ಸ್ವಾಮಿ? ಉಚ್ಚರಿಸಲಿಕ್ಕೆ ಬರಬೇಕಲ್ಲ. ಮಹಾಪ್ರಾಣದ ಮೇಲೆ ಮಹಾಪ್ರಾಣ (ಶ್, ಷ್, ಸ್‍ಗಳನ್ನು ಬಿಟ್ಟು. ಕನ್ನಡದಲ್ಲಿರುವ ಒಂದೆ ಸ್+ಸ್=ಚ್ಚ್ ಕೇಶಿರಾಜನೇ ಹೇೞಿದ್ದಾನೆ. ಹಾಗಾಗಿ ಮುಸ್ಸಂಜೆ ತಪ್ಪು. ಮುಚ್ಚಂಜೆ ಸರಿ. ಹಾಗಾಗಿ ಕನ್ನಡದಲ್ಲೂ ಸ್ಸ್ ಇಲ್ಲ.) ಒತ್ತಿ ಉಚ್ಚರಿಸಲಾಗದು. ಆಮೇಲೆ ಯಾವಾಗಲೂ ಪರದ ಅಕ್ಷರವೇ ಮಹಾಪ್ರಾಣ. ಹಾಗೆಯೇ ರ್+ರ್, ಱ್+ಱ್, ಹ್+ಹ್ ಕೂಡ ಇಲ್ಲ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ನಿಮ್ಮ ಮುಸ್ಸಂಜೆ ಮಾತನ್ನು ಒಪ್ಪುವೆನು..
ಮುನ್ + ಸಂಜೆ = ಮುಂಜಂಚೆ. ( ಮಚ್ಚಂಚೆ? )
ತಣ್ + ಸೊಡರು = ತಂಜೊಡರು ( ಶಬ್ದಮಣಿದರ್ಪಣದಲ್ಲಿ ಇದೆ )
ಆದರೆ ಇದು ಮಹಾಪ್ರಾಣದಿಂದ ಅಲ್ಲ.. ಸಕಾರ ದಿಂದ
ನನ್ನಿ!
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ವರ್ಗದ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳು (ಖ, ಘ, ಇತ್ಯಾದಿ) ಹಾಗೂ ಶ, ಷ, ಸ, ಹಗಳು ಮಹಾಪ್ರಾಣಗಳು. ಯಾಕೆಂದರೆ ಇಲ್ಲೆಲ್ಲ ಉಸಿರನ್ನು (puff) ಹೊಱಹೋಗುವುದಱಿಂದ ಅವು ಮಹಾಪ್ರಾಣಗಳು. ಪಾಣಿನಿಯ ಅಷ್ಟಾಧ್ಯಾಯೀ ನೋಡಿ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಗೊತ್ತು...
ಆದರೆ ವರ್ಗದಲ್ಲಿ ಅಕ್ಕರಗಳು ಜೋಡಿಸುವುದರ ಮೇಲೇ ಹೋಗತ್ತೆ.. ಅದಕ್ಕೆ ಎರಡನೇ, ನಾಲಕ್ಕನೇ ಅಂತ ಹೇಳಬಾರದು...
ಪಾಣಿನಿ ಬರೆದುದು ಸಂಸ್ಕೃತಕ್ಕೆ ವ್ಯಾಕರಣ ಕನ್ನಡಕ್ಕಲ್ಲ
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಕೇಶಿರಾಜನೂ ಶ ಷ ಸ ಹ ಮಹಾಪ್ರಾಣವೆನ್ನುತ್ತಾನೆ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಅನ್ನಲ್ಲಿ ಅವನೂ ತಪ್ಪು ಮಾಡಿದ್ದಾರೆ...
ಇಚ್ಛಾಸಿರ ಎಂದು ಅರಿಸಮಾಸದ ಮಾದರಿ ಇತ್ತು ಮಹಾಪ್ರಾಣಗಳಿವೆ ಎಂದು ಹುಸಿತರ್ಕ ಮಾಡಿದ್ದಾನೆ...!! ಯಾವ ಕನ್ನಡಿಗರೂ ಎರಡು ಸಾವಿರವನ್ನು ಇಚ್ಛಾಸಿರ ಅನ್ನಲ್ಲ...
ಸಾವಿರದ ಮೂಲ ದ್ರಾವಿಡ ಆವಿರ..!!
ವಿಶಯ ಎಲ್ಲೋ ಹೋಯಿತು...!!
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ನಾನೆಣಿಸಿದಂತೆ ನಿಮ್ಮ ವಾದ ತಪ್ಪು. ತಮಿೞರಿಗೆ ಸಕಾರವಿಲ್ಲ. ಸಂಸ್ಕೃತದ ಸಹಸ್ರಂ. ಸಾಸ್ರಂ->ಸಾಸಿರಂ->ಸ್ ನುಂಗಿ ->ಆಸಿರಂ-> ಸ್ ಇಲ್ಲದ್ದರಿಂದ ಆಯಿರಂ ಆಯ್ತು.
ಹಾಗೆಯೆ ಶ್ರಮಣನಿಗೆ ಅಮಣ ಎಂದರು. ಸಭೆಗೆ->ಅಬೈ->ಅವೈ ಎಂದರು. ನೂಱಱ ಮೇಲೆ ತೆನ್ನುಡಿಗರಿಗೆ ಸಂಖ್ಯಾವಾಚಕ ಶಬ್ದಗಳಿಲ್ಲ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಹಿಂದಿಯ/ಫಾರಸಿಯ ಹಜಾರ್ ಕೂಡ ಸಂಸ್ಕೃತದ ಸಹಸ್ರವೇ. ಸಪ್ತ ->ಹಪ್ತ. ಸ್->ಹ್ ಹ್-ಜ್, ಸ್-ಹ್ ಆದಾಗ ಸಹಸ್ರ ಹಜಹ್ರ--> ಹಜಾರ-> ಹಜಾರ್. ಸಿಂಧುವೇ ಹಿಂದುವಾಯ್ತೆಂಬುದಱ ಮೇಲೆ.
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಸಂಸ್ಕೃತದ ಸಹಸ್ರ->ಸಾಸ್ರ->ಸಾಸಿರ(ಹೞಗನ್ನಡದಲ್ಲಿ ಉಲ್ಲೇಖವಿದೆ)->ಸಾಯಿರ (ಹೞಗನ್ನಡದಲ್ಲಿ ಉಲ್ಲೇಖವಿದೆ)->ಸಾವಿರ
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಇಲ್ಲಿ ಚರ್ಚೆ ಬೇರೆ
=====================================
ಮಾಯ್ಸ!
ಉ: ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?
ಅಲ್ಲ//
ಉಯಿರು => ಉಸಿರು
ವಯಿರು => ಬಸಿರು
ಆಯಿರ => ಆಸಿರ => ಸಾವಿರ ( ಅಸಗ => ಅಗಸ; ನಡುವೆ ಸ ನಿಲ್ಲಲ್ಲ )
ನೀವು ಎಣಿಸುವುದು ಬೇಕಿಲ್ಲ!
ಈ ಚರ್ಚೆಯ ವಿಶಯ ಬೇರೆ..
ದ್ರಾವಿಡ ಎಟಿಮೊಲಜಿ ಒರೆಗಂಟು
http://dsal.uchicago.edu/cgi-bin/philologic/getobject.pl?c.2:1:319.burro...
=====================================
ಮಾಯ್ಸ!