ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು
ಬಾನ್ನವಿರ
ನಿಬ್ಬರ
ಸಯ್ಪು
ಸೀಯಾದುದು
ಹೊಂಬೊನಲು
ಪಾಲ್ಗಡಲ/ಹಾಲ್ಗಡಲ
ಮಣಿವು
ಬಿಡುಗಣ್ಣ
ಬಿಡುಗಣ್ಣರೂರು
ಬಾಂದೊರೆ
ಹಳುವು
ಪೊಗರು
ಮಬ್ಬಿಗ
ಬೋಳೆರು
ಬರ್ದಿಲು/ಬರ್ದಿಲ್ಲು

- Login or register to post comments
- 336 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹೊಳಲು
ಬಾನ್ನವಿರ
ನಿಬ್ಬರ
ಸಯ್ಪು
ಸೀಯಾದುದು
ಹೊಂಬೊನಲು
ಪಾಲ್ಗಡಲ/ಹಾಲ್ಗಡಲ
ಮಣಿವು
ಬಿಡುಗಣ್ಣ
ಬಿಡುಗಣ್ಣರೂರು
ಬಾಂದೊರೆ
ಹಳುವು
ಪೊಗರು
ಮಬ್ಬಿಗ
ಬೋಳೆರು
ಬರ್ದಿಲು/ಬರ್ದಿಲ್ಲು




ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು = ಹೊಳೆಯುವಿಕೆ(?)
ಸೀಯಾದುದು = ಸಿಹಿಯಾದುದು
ಹೊಂಬೊನಲು = ಹೊನ್ನಿನ ಹೊನಲು (ಹರಿಯುತ್ತಿರುವ ಬಂಗಾರ)
ಹಾಲ್ಗಡಲು = ಹಾಲಿನ ಕಡಲು
ಮಣಿವು = ಬಾಗುವಿಕೆ
ಬಿಡುಗಣ್ಣ = ಕಣ್ಣು ತೆರೆದುಕೊಂಡೇ ಇರುವವ (ದೇವರು)
ಬಿಡುಗಣ್ಣರೂರು(ಸ್ವರ್ಗ)
ಬಾಂದೊರೆ = king of sky = ಇಂದ್ರ(?)
ಹಳಿವು ಅಂದರೆ ಬೈಗುಳ, ಹಳುವು ಗೊತ್ತಿಲ್ಲಾ.
ಪೊಗರು = ಸೊಕ್ಕು
ಬರ್ದಿಲು = ಸಾವಿಲ್ಲದಿರುವಿಕೆ?
ನಾನೊಂದು ಹೇಳ್ತೀನಿ, ಬಿಡಿಸಿ ನೋಡುನು,
’ಹೆದ್ದಂಗು’
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೆದ್ದಂಗು = ಹಿರಿದಾದ ದಂಗು. ಸಿಕ್ಕಾಪಟ್ಟೆ ದಂಗಾಗೋದು.
ಸರಿಗಳು.
ಸೀಯಾದುದು = ಸಿಹಿಯಾದುದು
ಹೊಂಬೊನಲು = ಹೊನ್ನಿನ ಹೊನಲು (ಹರಿಯುತ್ತಿರುವ ಬಂಗಾರ)( ಹೊನ್ನಿನ ಹೊಳೆ, ತೊರೆ )
ಮಣಿವು = ಬಾಗುವಿಕೆ
ಬಿಡುಗಣ್ಣ = ಕಣ್ಣು ತೆರೆದುಕೊಂಡೇ ಇರುವವ (ದೇವರು)
ಬಿಡುಗಣ್ಣರೂರು(ಸ್ವರ್ಗ)
ಸಂಗನ
ಹಾಲ್ಗಡಲ ಅಂತ ಬರೆದಿರುವುದು, ಹಾಲ್ಗಡಲು ಅಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೂಂ ಹೂಂ!! ಹೆದ್ದಂಗು, ಇದೇ ಬಗೆಯ ಇನ್ನೊಂದು ಮಾದರಿ, ಹೆರ್ + ಪಾವು = ಹೆಬ್ಬಾವು.
ಈಗ ಬಿಡಿಸಿ ನೋಡುಮಾ.
ಹಾಲ್ಗಡಲ = ’ಹಾಲ್ ಕಡಲಪ್ಪಾ’ ನಾ?
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹಾಲ್ಗಡಲಪ್ಪ ಯಾರು
ಹೆರ್ + ತಂಗು = ಹೆದ್ದಂಗು/ ದೊಡ್ಡ ತಂಗುದಾಣ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ರವಿ ಶಂಕರರ ಆರ್ಟ್ ಆಫ್ ಲಿವಿಂಗ್‍ನ ’ಬೃಹತ್ ಶಿಬಿರ’ ನೋಡಿದೆ, ಅದಕ್ಕೆ ಈ ಒರೆ ಹೊಳೆಯಿತು.
ಹೆದ್ದಂಗು = ಬೃಹತ್ ಶಿಬಿರ.
ಹಾಲ್ಗಡಲ ಅಂದರೆ ಏನು? ನೀವೇ ಹೇಳಿ ಬಿಡಿ.
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹಾಲ್ಗಡಲಪ್ಪ ಯಾರು ...ವಿಶ್ಣು....ಕ್ಶೀರಸಾಗರದಲ್ಲಿರುವವನು
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು = ಪೊೞಲ್ = ನಗರ ( ಮಾದರಿ: ಬಾಮ್ಬೊಳಲ್ = ಆಕಾಶನಗರಿ, ಮಬ್ಬೊಳಲ್ = ಅಂಧೇರನಗರಿ)
ನಿಬ್ಬರ = ವಿಶೇಶ
ಸಯ್ಪು = ನ್ಯಾಯ = justice
ಪಾಲ್ಗಡಲ/ಹಾಲ್ಗಡಲ = ವಿಶ್ಣು = ಹಾಲಿನ ಕಡಲಿನಲ್ಲಿರುವವನು
ಬಾಂದೊರೆ = ಬಾನ್+ತೊರೆ = ಆಕಾಶಗಂಗೇ ??? = ಆಕಾಶನದಿ
ಪೊಗರು = ಸೊಕ್ಕು
ಮಬ್ಬಿಗ = ರಕ್ಕಸ = ಮಬ್+ಇಗ= ಮಸುಕು ಬಣ್ಣ ಉಳ್ಳವವ
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಇವೆಲ್ಲ ಸರಿ!!
ಹೊಳಲು = ಪೊೞಲ್ = ನಗರ ( ಮಾದರಿ: ಬಾಮ್ಬೊಳಲ್ = ಆಕಾಶನಗರಿ, ಮಬ್ಬೊಳಲ್ = ಅಂಧೇರನಗರಿ)
ನಿಬ್ಬರ = ವಿಶೇಶ
ಸಯ್ಪು = ನ್ಯಾಯ = justice
ಪಾಲ್ಗಡಲ/ಹಾಲ್ಗಡಲ = ವಿಶ್ಣು = ಹಾಲಿನ ಕಡಲಿನಲ್ಲಿರುವವನು
ಬಾಂದೊರೆ = ಬಾನ್+ತೊರೆ = ಆಕಾಶಗಂಗೇ
ಪೊಗರು = ಸೊಕ್ಕು
ಮಬ್ಬಿಗ = ರಕ್ಕಸ = ಮಬ್+ಇಗ= ಮಸುಕು ಬಣ್ಣ ಉಳ್ಳವವ = ನಿಶಾಚರ
ಬಿಟ್ಟು ಹೋದವನ್ನು ಹೇಳಿರಿ. ಹಳುವು, ಬರ್ದಿಲು, ಪೊಗರು, ಬಾನ್ನವಿರ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು = ಪೊೞಲ್ = ನಗರ ( ಮಾದರಿ: ಬಾಮ್ಬೊಳಲ್ = ಆಕಾಶನಗರಿ, ಮಬ್ಬೊಳಲ್ = ಅಂಧೇರನಗರಿ)
ಇಲ್ಲಿ
ಬಾಮ್ಬೊಳ್/ಬಾಂಬೊಳಲ್ = ಆಕಾಶನಗರಿ = ಸ್ವರ್ಗ
ಹೆಬ್ಬೊಳಲ್ = ಮಹಾನಗರ
ಕಿಸುವೊೞಲ್ = ಕೆಂಪುನಗರ
ಹಾವ್ವೊೞಲ್ = ನಾಗಪಟ್ಟಣ
ಚಂಬೊೞಲ್ = ಚನ್ನಪಟ್ಟಣ
ಹೊಸವೊಳಲ್ = ಹೊಸನಗರ [ ಹೊಸವೊೞಲ್ ಪಾಂಡವಪುರದ ಹತ್ರ ಒಂದು ಊರು ]
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಮಹೇಶ,
ಇದಕ್ಕೆ ಇನ್ನೊಂದು ಕೂಡಿಸಿ.
ಮಾಕಬ್ಬಿಗ ರನ್ನ ಪುಟ್ಟಿದವೊಳಲ್ : ಮುದುವೊಳಲು (ಈಗಿನ ಮುಧೋಳ)
ಎನ್ವೊಳಲಿನ ಪಕ್ಕದ್ದು.. ನಿಕ್ಕುವವಾಗಿ ೧೮ ಕಿ.ಮೀ
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಮಹೇಶ,
ಇದಕ್ಕೆ ಇನ್ನೊಂದು ಕೂಡಿಸಿ.
ಮಾಕಬ್ಬಿಗ ರನ್ನ ಪುಟ್ಟಿದವೊಳಲ್ : ಮುದುವೊಳಲು (ಈಗಿನ ಮುಧೋಳ)
ಎನ್ವೊಳಲಿನ (ಬನಹಟ್ಟಿ : ಬನಗಳ ಹಟ್ಟಿ) ಪಕ್ಕದ್ದು.. ನಿಕ್ಕುವವಾಗಿ ೧೮ ಕಿ.ಮೀ
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ನಂನಿ
ನಿಂವೊಳಲ್ ಮುದುವೊಳಲ್ ಹತ್ತಿರವೇಂ!! ರನ್ನನೂರೊರ್.
ಏ ಕಂಪಣಂ? ( ಯಾವ ಜಿಲ್ಲೆ? ) ಗದುಗು?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಕಂನಡದೊಳ್ ಉನ್ವೊಳಲ್( ನಿಮ್ಮ ಹೊಳಲು ) ಸರಿಯಕ್ಕಾ?
ಹಂಸಾನಂದಿಗಳ್ ಕೊಂಚ ಇತ್ತ ಪೇಳವೇೞ್ಕುಂ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಬಾಗಲಕೋಟೆಯಕ್ಕುಂ. (ಇದು ಸರಿಯೇ)
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಅಕ್ಕುಂ = ಆಗುವುದು.
ನಿಂವೊಳಲ್ ಬಾಗಲಕೋಟೆಕಂಪಣದೊಳ್ ಇರ್ಪುದು.
ನಂಗೆ ಹೞಗನ್ನಡ ಚಂನಾಗಿ ಬರಲ್ಲ. ಸುಮ್ನೆ ಹಿಂಗೆ ಬಿಡ್ತಾ ಇದ್ದೀನಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಬರ್ದಿಲು= ಬರ್ದು+ಇಲು = ಪ್ರೌಡ(ಜಾಣ)+ಮನೆ = ಕಾಲೇಜು, ವಿಶ್ವವಿದ್ಯಾಲಯ ???
ಉ: ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೪
ಹೊಳಲು = ಪೊೞಲು = ಪಟ್ಟಣ/ನಗರ/ಪುರ/city
ಬಾನ್ನವಿರ = ಬಾನ್ + ನವಿರ( ಕೂದಲ ) = ಬಾನೇ ನವಿರಾಗಿರುವವನು = ವ್ಯೋಮಕೇಶೀ = ಶಿವ
ನಿಬ್ಬರ = ವಿಶೇಷ
ಸಯ್ಪು = ನ್ಯಾಯ/justice ( ಸೈತ = ನ್ಯಾಯಾಧೀಯ _
ಸೀಯಾದುದು = ಸಿಹಿಯಾದುದು
ಹೊಂಬೊನಲು = ಹೊನ್ನ ಹೊನಲು/ಹೊಳೆ/ನದ
ಪಾಲ್ಗಡಲ/ಹಾಲ್ಗಡಲ = ಹಾಲ ಕಡಲವನು = ಕ್ಷೀರಸಾಗರದವನು = ವಿಷ್ಟು
ಮಣಿವು = ಮಣಿವುದು = ನಮಸ್ಕಾರ/ಬಾಗುವುದು/ತುಳಿಸು/ಸೋಲುವುದು
ಬಿಡುಗಣ್ಣ = ಕಣ್ಣು ಬಿಟ್ಟುಕೊಂಡಿರುವವರು = ದೇವತೆಗಳು/ಬೋಳೆರು
ಬಿಡುಗಣ್ಣರೂರು = ಬಿಡುಗಣ್ಣರ ಊರು = ಸ್ವರ್ಗ
ಬಾಂದೊರೆ = ಬಾನೆಂಬ ತೊರೆ = ಆಕಾಶಗಂಗೆ
ಹಳುವ/ಹೞುವ = ಕಾಡು http://dsal.uchicago.edu/cgi-bin/philologic/getobject.pl?c.1:1:1422.burr...
( ಕೊಳಂಬೆ ಅವರ ತಿಳಿವಣಿಯಲ್ಲಿ ಬಂದಿದೆ )
ಪೊಗರು = ಬೆಳಕು
Ka. pogar shine, brightness, lustre, colour. DED(S) 3475.
ತೆಲುಗಲ್ಲಿ ಸೊಕ್ಕು ಅಂನುವುದು ಈ ಒರೆಗಂಟು
4234 Ta. pukalvu pride, arrogance. Ka. puggu, purgu id. Te. pogaru id. Kuwi (S.) pōkh'nai, (Isr.) pōk- (-h-) to swagger. DED (S) 3477.
ಮಬ್ಬಿಗ = ಕಪ್ಪಿರುವವನು/ಕಪ್ಪ = ಮಬ್ಬಿನಲ್ಲಿ ನಡೆದಾಯುವವನು = ರಕ್ಕಸ/ರಾಕ್ಷಸ
ಬೋಳೆರು = ದೇವತೆಗಳು
ಬರ್ದಿಲು/ಬರ್ದಿಲ್ಲು = ಬರ್ದು/ಸಾವು ಅದರ ಮನೆ = ಸ್ವರ್ಗ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !