ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನೀವು ಪುಸ್ತಕದ ಅಂಗಡಿಗೆ ಹೋದಾಗ, ಹೊಸ ಪುಸ್ತಕ ಬಂದಿರುತ್ತೆ, ಅದರ ವಿಮರ್ಶೆ ಎಲ್ಲ ಬಂದಿರೊಲ್ಲ ಅಂತ ತಿಳ್ಕೊಳ್ಳಿ .
ಆ ಪುಸ್ತಕ ತಗೊಬೇಕೊ , ಬೇಡವೋ ಅಂತ ಹೇಗೆ ನಿರ್ಧಾರ ಮಾಡ್ತಿರಾ !?!
- ಪುಸ್ತಕದ ಮುಖಪುಟ ?
- ಪುಸ್ತಕದ ಪೀಠಿಕೆ ?
- ಲೇಖಕರನ್ನು ?
![]()

- Login or register to post comments
- 541 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನಾನು ಹೊತ್ತಗೆಯನ್ನು ಸೆಲೆಕ್ಸನ್ ಮಾಡಲ್ಲ, ಆಯ್ತೀನಿ.
( ಹಗೂರ )
ನಂಗೆ ಬರಹಗಾರ + ಅದರ ತಿರುಳು, ಎದರ ಬಗ್ಗೆ ಅನ್ನೋದು ತಲೆಮೆ. ಅದರ ಕೂಟೇ ಗೊಡವೆಗಳಿದ್ದರೆ ಇನ್ನೂ ಚನ್ನು!
ನನಗೆ ಹಿಡಿಸುವ, ಹುರುಪಿರುವ ಸರಕು ಬೈರಪ್ಪನವರ ಪರ್ವ ಸಾರ್ಥದಂತವು, ಇಲ್ವೇ, ಸಂಕರಬಟ್ಟರ ಹೊತ್ತಗೆಗಳು ( ವ್ಯಾಕರಣ ), ಹಳಗನ್ನಡ
ಇಂನು ಇಂಗಲೀಸಲ್ಲಿ ನನಗೆ Not a penny more, not a penny less ಅಂತ ಕಂತ್ರಿತನದ ಹೊತ್ತಗೆ ಹಿಡಿಸುತ್ತದೆ. ಇಂಗಲೀಸ fanatsy ನೋಡಕ್ಕೆ ಚಂದ, ಓದಕ್ಕೆ ನಂನ ತಲೆಗೆ ಹಿಡಿಯಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನಾನು ಪುಸ್ತಕ ಆರಿಸ್ತೇನೆ ! ( ಆಯೋದೂ ಇಲ್ಲ ; ಸಿಲೆಕ್ಟ್ ಮಾಡೋದೂ ಇಲ್ಲ )
ಮುಖಪುಟ ; ಲೇಖಕರು ; ಯಾವುದರ ಬಗ್ಗೆ ಇದೆ ಅನ್ನೋದು ; ಬರಹ ಶೈಲಿ ಮತ್ತು ಮುದ್ರಣ ( ಓ.ಎಲ್.ಎನ್ ಅವರ ಲೋಕಾಂತ-ಏಕಾಂತ ದ ಅಕ್ಶರಗಳು ಮುದ್ದಾಗಿವೆ)
ಬೆಲೆ ಬಹಳ ಮಹತ್ವದ್ದು .
೧೦೦ ರೂ ವರೆಗೆ ಇದ್ರೆ ಹೆಚ್ಚು ಯೋಚಿಸೋದಿಲ್ಲ ;
೧೦೦-೨೦೦ ರ ನಡುವೆ ಇದ್ರೆ ಸ್ವಲ್ಪ ಯೋಚಿಸ್ತೀನಿ .
೨೦೦ ರ ಮೇಲಿದ್ರೆ ಬಹಳ ಯೋಚಿಸ್ತೀನಿ !
ಅದೇಕೋ ಕನ್ನಡದ ಹೊಸ ಪುಸ್ತಕಗಳು ಬಹಳ ತುಟ್ಟಿ ; ಪ್ರತಿ ಪುಟಕ್ಕೆ ೫೦ ಪೈಸೆಯಿಂದ ಒಂದು ರೂಪಾಯಿವರೆಗೆ ಇರುತ್ತದೆ .
ಓದುಗರು ಕಡಿಮೆ ಇರೋದು ಒಂದು ಕಾರಣ ಇರ್ಬಹುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ಪುಸ್ತಕಗಳನ್ನೋದುವ ಸ್ನೇಹಿತರಿದ್ದರೆ ಹೊಸ ಪುಸ್ತಕಗಳ ಬಗ್ಗೆ ವಿಮರ್ಶೆ ಓದಬೇಕಿಲ್ಲ. ಪುಸ್ತಕ ತೀರ ಹೊಸತಾದರೆ ಅದನ್ನು ತೆಗೆದು ಒಂದೆರಡು ಪುಟ ಓದಿ ನೋಡಬಹುದು. ಯಾವ ವಿಷಯದ ಬಗ್ಗೆ (ನಿಮಗಿಷ್ಟವಾದ ವಿಷಯವೋ ಅದು?), ಪುಸ್ತಕ ಓದುವಂತಿದೆಯೋ, ನಿಮ್ಮ ಕೈಗೆ ಎಟುಕುತ್ತದೊ ಎಂಬುದನ್ನೆಲ್ಲ ನೋಡಿ ತೆಗೆದುಕೊಂಡರಾಯ್ತು.
ನಿಮಗೆ ಪರಿಚಯವಿಲ್ಲದ ಲೇಖಕರ ಹೊಸ ಪುಸ್ತಕ ಅಥವ ನಿಮಗೆ ತಿಳಿಯದಿರುವ ವಿಷಯದ ಬಗೆಗಿನ ಹೊಸ ಪುಸ್ತಕ ಹೊಸತೊಂದು ಖಾದ್ಯದ ರುಚಿ ನೋಡಿದಂತೆ. ಹೇಗಿದೆಯೆಂದು ಓದಿಯೇ ಅನುಭವಿಸಬೇಕು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ಭೀಚಿ,
ಪುಸ್ತಕದ ಬೆಲೆ ನೋಡಲ್ವಾ?
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ವಿಕ್ರಮಾದಿತ್ಯನಿಗೆ ನಿರಂತರವಾಗಿ ಕಥೆ ಹೇಳುತ್ತಾ ಹೋದ ಬೇತಾಳನಿಗೇಕೆ ಪುಸ್ತಕ ಖರೀದಿಸುವ, ಆಯುವ ಚಿಂತೆ? ತಾನು ಹೇಳಿದ ಕಥೆಗಳನ್ನೆಲ್ಲಾ ಪುಸ್ತಕವಾಗಿಸುವುದು ಹೇಗೆ ಎಂದು ಕೇಳಿದ್ದರೆ ಲೈಬ್ರರಿಗೆ ಹಿಡಿದ ಗೆದ್ದಲುಗಳಂಥ ಪ್ರಕಾಶಕರೇ ಹೇಳಿಕೊಡುತ್ತಿದ್ದರು. ವಿಷಯಾಂತರ ಬೇಡ ಎಂಬ ಕಾರಣಕ್ಕೆ ಬೇತಾಳನ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರಯತ್ನಿಸುತ್ತೇನೆ. ಈ ಪ್ರಶ್ನೆಗಳನ್ನು ಬೇತಾಳ ನನಗೆ ನೇರವಾಗಿ ಕೇಳದೇ ಇರುವುದರಿಂದ ತಪ್ಪು ಉತ್ತರ ಹೇಳಿದರೂ ತಲೆ ಒಡೆದು ಸಾವಿರ ಹೋಳಾಗಲಾರದು ಎಂಬ ಧೈರ್ಯವಿದೆ.
1.ಪುಸ್ತಕದ ಕವರ್ ಪೇಜ್, ಟೈಟಲ್ ಅದಕ್ಕಿರುವ ಟ್ಯಾಗ್ ಲೈನ್ ಎಲ್ಲವನ್ನೂ ನೋಡಿದ ನಂತರವೇ ನಾನು ಪುಸ್ತಕ ಖರೀದಿಸುವುದು. ಎಷ್ಟೋ ಬಾರಿ ಟೈಟಲ್ ಚೆನ್ನಾಗಿದೆ ಎಂಬ ಕಾರಣಕ್ಕೆ ಪುಸ್ತಕ ಖರೀದಿಸಿ ಖುಷಿಯಾದುದೂ ಇದೆ. ನಾನು ಮಾರ್ಕ್ವೆಜ್ ನ ಕ್ರಾನಿಕಲ್ ಆಫ್ ಡೆತ್ ಪೋರ್ ಟೋಲ್ಡ್ ಖರೀದಿಸಿದಾಗ ಮಾರ್ಕ್ವೆಜ್ ಯಾರೂ ಎಂದೇ ಗೊತ್ತಿರಲಿಲ್ಲ. ಬರೇ ಟೈಟಲ್ ನೋಡಿ ಆಕರ್ಷಿತನಾಗದೇ ಹೋಗಿದ್ದರೆ ನನಗೆ ಆ ಲೇಖಕನ ಬಗ್ಗೆ ತಿಳಿಯಲು ಹಲವಾರು ವರ್ಷಗಳು ಬೇಕಾಗುತ್ತಿತ್ತು. ಉಂಬರ್ಟೋ ಇಕೋನ ಪುಸ್ತಕಗಳನ್ನು ಅವನ ಹೆಸರನ್ನು ನೋಡಿ ಖರೀದಿಸಿದ್ದೇನೆ. ಇವತ್ತಿನವರೆಗೂ ಅವನು ನನಗೆ ನಿರಾಶೆ ಹುಟ್ಟಿಸಲಿಲ್ಲ.
2.ಪುಸ್ತಕದ ಪೀಠಿಕೆಯನ್ನು ಓದುವುದು ಅನುಕೂಲಕರವೇನೋ ಹೌದು. ಆದರೆ ಇದು ಯಾವಾಗಲೂ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಪ್ರಖ್ಯಾತರು ಮುನ್ನುಡಿ ಬರೆದ ಅನೇಕ ಪುಸ್ತಕಗಳನ್ನು ಖರೀದಿಸಿ ಇಂಗು ತಿಂದ ಮಂಗನಂತಾಗಿದ್ದೇನೆ.
3.ಲೇಖಕರ ಹೆಸರು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಬೇರೊಬ್ಬರು ಲೇಖಕರು ಉಲ್ಲೇಖಿಸಿದ್ದರೆ, ಇಲ್ಲವೇ ನಾವೇ ಅವರ ಇತರ ಕೃತಿಗಳನ್ನು ಓದಿದ್ದರೆ ಉಪಕಾರಕ್ಕೆ ಬರುತ್ತದೆ. ಪಾವ್ಲೋ ಕೊಯೆಲ್ಹೋನ ವೆರೋನಿಕಾ ಡಿಸೈಡ್ಸ್ ಟು ಡೈ ಓದಿ ಅವನ ಇತರ ಪುಸ್ತಕಗಳನ್ನೆಲ್ಲಾ ಖರೀದಿಸಿ ಮಂಗನಾದ ಕಥೆ ಬಹಳ ದೊಡ್ಡದು. ಅದನ್ನು ಇಲ್ಲಿ ಹೇಳುವುದಿಲ್ಲ.
ವಾಸ್ತವದಲ್ಲಿ ನಾನು ಪುಸ್ತಕ ಆರಿಸಲು ಈ ಎಲ್ಲಾ ತಂತ್ರಗಳನ್ನೂ ಒಟ್ಟಿಗೇ ಬಳಸುತ್ತೇನೆ. ಇಷ್ಟರ ಮೇಲೆ ಇನ್ಟೂಷನ್ ಕೂಡಾ ಕೆಲಸ ಮಾಡುತ್ತದೆ. ಬ್ಲರ್ಬ್ ಓದಿ, ಮಧ್ಯೆ ಯಾವುದೋ ಪುಟ ಓದಿ ಖರೀದಿಸಿದ ಅನೇಕ ಪುಸ್ತಕಗಳು ಹೊಸತೊಂದು ಜಗತ್ತನ್ನೇ ತೋರಿಸಿಕೊಟ್ಟಿವೆ. ವಿಮರ್ಶೆಗಳನ್ನು ಓದಿ ಖರೀದಿಸುವುದೂ ಇದೆ. ಇದರಲ್ಲಿಯೂ ರಿಸಲ್ಟ್ 50-50 ಮಾತ್ರ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
೧. ಪುಸ್ತಕದ ಪೀಠಿಕೆ. ೨. ಲೇಖಕರು ಯಾರು? ೩. ಯಾವುದೇ ಒಂದೆರಡು ಪುಟಗಳನ್ನು ಓದಿ ನೋಡುವುದುದು.
೪. ನಾನು ಎಲ್ಲ ಕನ್ನಡ ಪುಸ್ತಕಗಳನ್ನು ಹುಬ್ಬಳ್ಳಿಯ ಸಾಹಿತ್ಯ ಭಂಡಾರದಲ್ಲಿ ಕೊಳ್ಳುತ್ತೇನೆ. ಅದರ ಮಾಲೀಕರಾದ ಎಮ್ ಎ ಸುಬ್ರಹ್ಮಣ್ಯರವರು ಈ ವಿಷಯದಲ್ಲಿ ನನಗೆ ಸಹಾಯ ಮಾಡುತ್ತಾರೆ. ಅವರು ಸಾಕಷ್ಟು ಪುಸ್ತಕಗಳನ್ನು ಓದಿದವರೂ ಮತ್ತು ಸ್ವತಃ ಪ್ರಕಾಶಕರೂ ಆಗಿರುವದರಿಂದ ಅವರ ಅಭಿಪ್ರಾಯವನ್ನು ಕೇಳುತ್ತೇನೆ. ಇವೆಲ್ಲದರ ನಂತರ ಪುಸ್ತಕದ ಬೆಲೆ.
ಉ: ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ಇಲ್ಲಿ ನನಗೆ ಲಂಕೇಶರು ಕಾವ್ಯದ ಬಗ್ಗೆ ಹೇಳಿದ್ದು ನೆನಪಾಗುತ್ತದೆ:
ನಿಜವಾದ ಕಾವ್ಯ ತನ್ನ ಸಹಜತೆಯಿಂದ ಆಕರ್ಷಿಸುತ್ತದೆ. ಪದೆ ಪದೆ ಓದಿಸುವ ಗುಣ ಹೊಂದಿರುತ್ತದೆ. ಅದಕ್ಕೆ ಕಾಲದ ಹಂಗಿರುವುದಿಲ್ಲ. ಓದಿದಾಗೊಮ್ಮೆ ಹೊಸ ಹೊಳಹು ನೀಡುತ್ತದೆ.
ಪುಸ್ತಕ ಕೊಳ್ಳುವಾಗಲೂ ಅಷ್ಟೇ. ನೋಡಿದ ತಕ್ಷಣ ಅದು ಬೇಕೆನಿಸುತ್ತದೆ. ಏಕೆ ಎಂಬುದನ್ನು ಎಲ್ಲ ಸಂದರ್ಭದಲ್ಲಿ ವಿವರಿಸುವುದು ಕಷ್ಟ. ನೆಚ್ಚಿನ ಲೇಖಕರೋ, ವಿಷಯವೋ ಇದ್ದರೆ ಇಷ್ಟವಾಗುವುದು ಸಹಜ. ಇಲ್ಲವೇ ಕೆಟ್ಟ ಕುತೂಹಲ ತಣಿಸಿಕೊಳ್ಳಲೂ ಇದ್ದೀತು.
ಬೆಲೆ ನಂತರದ ವಿಚಾರ.
ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...