ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?
ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ.
"ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!
ಈ ತರದ ಸಲಹೆಗಳು ನಿಂಗೆ ಪಿ.ಯು.ಸಿ ಮುಗಿಸಿದಾಗ, ಓದು ಮುಗಿಸಿ ಕೆಲ್ಸ ಹುಡುಕೊಕೆ ಶುರು ಮಾಡಿದಾಗ, ಹಾಗು ವಧು ವರಾನ್ವೇಷಣೆಲಿ ಇದ್ದಾಗ, ನಮಗ ಗೊತ್ತಿಲ್ಲದೆ ಇರೊರೆಲ್ಲ ಕೊಡ್ತ ಇರ್ತಾರೆ. ನೀವು ಅಪ್ಪಿ-ತಪ್ಪಿ ಕೇಳಿದ್ರೆ , Centimental Torture
ನಿಂಗೆ ಯಾರಾದ್ರು ಇಂತೊರು ಸಿಕ್ಕಿದ್ರಾ ? ಅಥ್ವ ಯಾರಿಗಾದ್ರು ಬಿಟ್ಟಿ ಸಲಹೆ ಕೊಟ್ಟಿದ್ರಾ !?!

- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?
ಹೌದು ನಾನು ಹಲವು ಬಾರಿ ಹೀಗೆ "ಬಿಟ್ಟಿ ಸಲಹೆ" ಪಡೆದಿದ್ದೀನಿ.
ಅವರು ಕೊಡುವ ಸಲಹೆಯನ್ನು ಕಡೆಗಣಿಸುವ ಹಾಗೂ ಇಲ್ಲ.. ಒಪ್ಪಿಕೊಳ್ಳುವ ಹಾಗೂ ಇಲ್ಲ.
ಆದರೆ ಆ ಸಲಹೆ ನೀಡಿದವರ ಬಗ್ಗೆ ಯಾವ ತರಹದ ಅಭಿಪ್ರಾಯವು ನನದಿಲ್ಲ.
ಅವರು ಜೀವನವನ್ನು ನೊಡುವ ಬಗೆ ಮತ್ತು ಅವರ ಅನುಭವದ ಪ್ರಕಾರ ಅವರು ಹೇಳುವುದು ಸರಿಯೇ ಆಗಿರಬಹುದು.
ಹಾಂ.. ತಮಗೆ ಗೊತ್ತೆ ಇಲ್ಲದ ವಿಶಯದ ಬಗ್ಗೆ ಹೇಳ ಬಂದಾಗೆ ಸ್ವಲ್ಪ ಮಂಡೆ ಬಿಸಿಯಾಗುವುದುಂಟು.
ಹಾಗೆಯೆ ಅವರು ನಮಗೆ ಹತ್ತಿರದವರು ಆಗಿದ್ದರೆ (ನಮ್ಮ ಅಜ್ಜಿ, ತಾತ, ಮಾವ, ಗೆಳಯ, ಒಡ ಹುಟ್ಟಿದವರು, ಹೀಗೆ)... ಆ ಸಂದರ್ಭದಲ್ಲಿ ನೀವು ಹೇಳಿದಾಗೆ... Sentimental Torture... ಆಗುವುದುಂಟು.
ಕೆಲವೊಮ್ಮೆ, ಕಷ್ಟದಲ್ಲಿ ಇದ್ದಂತಹ ನನ್ನ ಗೆಳೆಯರಿಗೆ .. ನಾನು ಕೂಡ, ನನಗೇ ಗೊತ್ತಿಲ್ಲದ ಹಾಗೆ, "ಬಿಟ್ಟಿ ಸಲಹೆ" ನೀಡಿರುವ ಸಂದರ್ಭಗಳೂ ಇವೆ.
ಸಲಹೆ ನೀಡುವಾಗ ಸುಮ್ಮನಿದ್ದು, ಎಲ್ಲದಕ್ಕು ತಲೆ ಆಡಿಸಿಕೊಂಡಿದ್ದು .. ಆಮೇಲೆ ಇನ್ನೊಬ್ಬರ ಬಳಿ .. "ಅವನು ನನಗೆ ಬಿಟ್ಟಿ ಸಲಹೆ ಕೊಟ್ಟ" ಎಂದು ಹೇಳಿರುವ ನಮೂನೆಗಳು ಇವೆ.
ಒಟ್ಟಾಗಿ ಹೇಳಬೇಕೆಂದರೆ, ನಾವು ಯಾವಗಲು ನಮಗೆ ಹೊಂದುವ ಹಾಗೆ ನಿರ್ಣಯ ತೆಗೆದುಕೊಳ್ಳಬೇಕು. ನಮಗೆ ಸಲಹೆ ನೀಡಿದವರ ಬಗ್ಗೆ ಯೋಚಿಸಿ ಮಾತನಾಡಬೇಕು. ಅವರಲ್ಲಿ ಕೆಲವರು ನಿಜವಾಗಲು ನಮ್ಮ ಹಿತೈಶಿಗಳಾಗಿರಬಹುದು. ಸಲಹೆ ಇಷ್ಟವಾಗಲಿಲ್ಲವೇ.. ಮರೆತು ಬಿಡಿ (ಸುಮ್ನೆ ಯಾಕೆ ಅಂತ ನೀವು ಹಲ್ಲು ಕಿರಿದು ಸುಮ್ಮನಾಗಿದ್ರಲ್ಲ.. ಹಾಗೆ)