ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ಹಳೆಯ ಸಂಗೀತ ನಿರ್ದೇಶಕರು/ರಾಗ ಸಂಯೋಜಕರು/ರಚನೆಮಾಡಿದವರು ಶಾಸ್ತ್ರೋಕ್ತವಾದ ರಾಗಸಂಯೋಜನೆಗೆ ಒತ್ತು ಕೊಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ೯೦% ಹಾಡುಗಳು ಅತಿ ಮಧುರವಾದ ಅನುರಾಗವೇ ಆಗಿವೆ. ಇಂದಿನ ಸಂಗೀತ ನಿರ್ದೇಶಕರಲ್ಲಿ ರಾಗವು ಶಾಸ್ತ್ರೀಯವೇ ಆಗಿರಬೇಕೆನ್ನುವ ಒತ್ತಡವೇನೂ ಇಲ್ಲ. ಅರಿವಿಲ್ಲದ ಮಕ್ಕಳಂತೆ ಏನು ಮಾತನಾಡಿದರೂ ಅದನ್ನು ಹಾಡಿಗಿಳಿಸುವ ಅರ್ಜೆಂಟು. ಯಾಕೆಂದು ಗೊತ್ತಿಲ್ಲ. ಹೀಗಾಗಿ ಹಾಡು ಹಳೆಯದಾಗುವುದಕ್ಕಿಂತ ಮುನ್ನವೇ ಮರೆತು ಹೋಗುವುದು. ಇರಲಿ, ತಿಳಿದವರ್ಯಾರಾರಾದರೂ ’ಮಂಗಳದ ಈ ಸುದಿನ ನಂದಾದೀಪವಾಗಲಿ’ ಎನ್ನುವ ಹಾಡು ಯಾವ ಚಿತ್ರದ್ದು ಮತ್ತು ಇದು ಕೇಳಲು ಎಲ್ಲಿ ಸಿಗುವುದು ಎಂದು ತಿಳಿಸುವಿರಾ? ಇದು ಕಲ್ಯಾಣ ವಸಂತವೆನ್ನುವ ರಾಗದಲ್ಲಿದೆ ಎಂದು ನನ್ನ ಅನಿಸಿಕೆ. ದಯೆಯಿಟ್ಟು ಬಲ್ಲವರು ಮಾಹಿತಿ ಕೊಡಿ.
ರಘುನಂದನ

- Login or register to post comments
- 561 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ಇದು 'ನಾ ಮೆಚ್ಚಿದ ಹುಡುಗಿ' ಚಿತ್ರದ ಹಾಡು. mp3ಗಾಗಿ ಸ್ವಲ್ಪ ಹುಡುಕಬೇಕು.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ಸಿಗದಿದ್ದರೆ ಕ್ಯಾಸೆಟ್ಟಿನಿಂದ ರೆಕಾರ್ಡ್ ಮಾಡಬಹುದು. ಕ್ಯಾಸೆಟ್ ನನ್ನ ಬಳಿಯಿದೆ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ಕ್ಯಾಸೆಟ್ಟು ಪ್ರಾಯಶಃ ಕಳುಹಿಸಲು ಕಷ್ಟವಾಗಬಹುದೇನೋ. ದಟ್ಸ್ ಕನ್ನಡದಲ್ಲಿ ಒಂದು ಹೊಸ ಜ್ಯೂಕ್ ಬಾಕ್ಸ್ ಇದೆ. ಅದರ ಲಿಸ್ಟಿನಲ್ಲಿ ಈ ಹಾಡೂ ಇದೆ ಆದ್ರೆ ಹಾಡು ಕೇಳಿಸ್ತಾ ಇಲ್ಲ. ನೀವೂ ಪ್ರಯತ್ನಿಸಿ ನೋಡಿ ಸ್ವಲ್
ಪhttp://thatskannada.oneindia.in/cine/music/index.html
ರಘುನಂದನ
ಎನಗಿಂತ ಕಿರಿಯರಿಲ್ಲ
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ನೀವು ಬಯಸಿದ ಹಾಡನ್ನು ಇಲ್ಲಿಂದ ಇಳಿಸಿಕೊಳ್ಳಬಹುದು
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
ವ್ಹಾ! ನೀವು ಒಳ್ಳೇ ಕೆಲಸ ಮಾಡಿದಿರಿ. ನಾನು ಬಹಳ ದಿನಗಳಿಂದ ಈ ತಂಪುಕಪ್ಪೆಯ ಬಳಗದವನು ಆದರೂ ನನಗಿದು ತಿಳಿದಿರಲಿಲ್ಲ. ಹಾಡನ್ನು ಇಳಿಸಿಕೊಂಡ ನಂತರ ಒಂದೆರಡು ತಪ್ಪುಗಳನ್ನೂ ತಿದ್ದಿಕೊಂಡೆ. ಮಂಗಳದ ಈ ಸುದಿನ ಮಧುರವಾಗಲಿ ಎಂದು ಪ್ರಾರಂಭವಾಗುತ್ತದೆ ಈ ಹಾಡು. ನನ್ನ ತಿಳುವಳಿಕೆಯ ಮಟ್ಟಿಗೆ ಇದು ಕಲ್ಯಾಣ ವಸಂತ ರಾಗವೇ!
ಈ ರಾಗದ ಸುಪ್ರಸಿದ್ಧ ಹಾಡುಗಳು
ರಾಗಿ ತಂದೀರಾ - ಶ್ರೀಪುರಂದರದಾಸರು
ಇನ್ನು ದಯ ಬಾರದೆ - ಶ್ರೀಪುರಂದರ ದಾಸರು
ನಾದಲೋಲುಡೈ ಬ್ರಹ್ಮಾನಂದ ರೂಪಮೆ - ಶ್ರೀತ್ಯಾಗರಾಜರು ಇತ್ಯಾದಿ
ಒಳ್ಳೆಯ ಸಂತಸ ತರುವ ರಾಗವಿದು.
ಎನಗಿಂತ ಕಿರಿಯರಿಲ್ಲ
ಉ: ಈ ಹಾಡು ಯಾವ ಚಿತ್ರದಲ್ಲಿದೆ? ಮತ್ತು ಕೇಳೋಕೆ ಎಲ್ಲಿ ಸಿಗುವುದು?
"ಅರಿವಿಲ್ಲದ ಮಕ್ಕಳಂತೆ ಏನು ಮಾತನಾಡಿದರೂ ಅದನ್ನು ಹಾಡಿಗಿಳಿಸುವ ಅರ್ಜೆಂಟು. ಯಾಕೆಂದು ಗೊತ್ತಿಲ್ಲ. ಹೀಗಾಗಿ ಹಾಡು ಹಳೆಯದಾಗುವುದಕ್ಕಿಂತ ಮುನ್ನವೇ ಮರೆತು ಹೋಗುವುದು. "
ಶ್ರೀಮಾನ್ ರಘನಂದನ ಅವರ ಅಭಿಪ್ರಾಯಗಳು ಬಹುಸೂಕ್ತವಾಗಿವೆ.
ಶಾಸ್ತೋಕ್ತವಾದ ಸುಸಂಸ್ಕತವಾದ ರಾಗಸಂಯೋಜನೆ, ಪದಸಂಯೋಜನೆ, ಗೀತಸಂಯೋಜನೆಯ ಶ್ರೇಷ್ಠತೆ, ಮಾಧುರ್ಯಕ್ಕೆ ಸಮಾನವುಂಟೇ!!
ನಮ್ಮ ಶಾಸ್ತ್ರೀಯ ಸಂಗೀತವೇ ಸಂಗೀತ, ಮಿಕ್ಕವು ಗಾರ್ದಭಗಾನ, ಕರ್ಣಕಠೋರ, ವಿಕಾರ!
ಇನ್ನು ಸಾಹಿತ್ಯವಂತು ಲಘುವಾದ ಸಂಭಾಷಣೆಯಿಂದ ಭರ್ತಿಯಾಗಿ, ಕೇವಲ ಅಶ್ಲಿಳ ಅಸಹ್ಯಾರ್ಥಗಳಿಗೆ ಸೀಮಿತವಾಗಿ ತುಚ್ಛವಾಗಿದೆ.
ನಮ್ಮ ಸಾಹಿತ್ಯ-ಸಂಗೀತ ಪುನರುತ್ಥಾನಕ್ಕೆ ನಾವೆಲ್ಲ ಶ್ರಮಿಸಬೇಕು.
ಈ ವಿಷಯವನ್ನು ಉದ್ದೇಶಿಸಿ ನಿಮ್ಮ ಅಭಿಪ್ರಾಯ ಸುಸೂಕ್ತ!
ಶುಭಮಸ್ತು!