ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.
ಉ: ಅರಿಷಡ್ವರ್ಗಗಳು ಅಂದರೇನು ?
ಅರಿಷಡ್ವರ್ಗ = ಆರು ಹಗೆಗಳ ಗುಂಪು, ( ಆರ್ವಗೆಗಳ್
)
"ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ"
ಕನ್ನಡದಾಗೇ, ಬೇಟ, ಸಿಟ್ಟು, ಬಯಕೆ, ತೆವಲು, ಸೊಕ್ಕು, ಹೊಟ್ಟೆಕಿಚ್ಚು/ಹೊಟ್ಟೆಯುರಿ/ಅೞ್ಕಜ/ಅಕ್ಕಜ
ಕವಿರಾಜಮಾರ್ಗದಾಗೆ ಇದಕ್ಕೆ ಬೇಸರ/ವಿಷಾದವನ್ನೂ ಸೇರಿಸಿ ಸಪ್ತರಿಪುವರ್ಗ ( ಏಳ್ವಗೆಗಳ್ ) ಅಂತ ಹೇಳವ್ರಂತೆ ( ಸುನಿಲ, ನೋಡಿಲ್ಲಿ )
ಆರ್ವಗೆಗಳ್ = ಬೇಟ-ಸಿಟ್ಟು-ಬಯಕೆ-ತೆವಲು-ಸೊಕ್ಕು-ಅಕ್ಕಜ
ಏಳ್ವಗೆಗಳ್ = ಆರ್ವಗೆಗಳ್ + ಬೇಸರ!
ಉ: ಅರಿಷಡ್ವರ್ಗಗಳು ಅಂದರೇನು ?
ಮಹೇಶ್ ಸರ್, ನೀವು ಸೂಪರ್
-ನಿಮ್ಮ ಬೆಂಬಿಡದ ಬೇತಾಳ .....
ಉ: ಅರಿಷಡ್ವರ್ಗಗಳು ಅಂದರೇನು ?
ಬೇತಾಳಯ್ಯ...
ನಂನ ಕನ್ನಡದಲ್ಲಿ ಕರೆಯಪ್ಪ.. 'ಸರ್' ಅಂತ ಇಂಗಲೀಸಲ್ಲಿ ಅಂದ್ರೆ ನಂಗೆ ಕಂನಡದಲ್ಲಿ ಹೇಳಿದಂಗೆ ಹತ್ರ ಅಂನಿಸಲ್ಲ.!!
ಮಾಯ್ಯ.. ಲೋ ಮಾಯ್ಸ, ಲೇ ಮಾಯ್ಸ, ಹಿಂಗಂದ್ರೆ ಇಂನೂ ಹೆಂನಲಿವೇ( ಹಿರಿದಾದ ನಲಿವು, ಆದ್ರೆ 'ಹೆಣ್ಣಲಿವು' ಅಂದ್ರೆ ಹೆಣ್ಣಿನ ನಲಿವ ಆಗುವುದು
)!!
ಉ: ಅರಿಷಡ್ವರ್ಗಗಳು ಅಂದರೇನು ?
ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರ
ವಾಸನೆ, ಸಿಟ್ಟು, ಸೊಕ್ಕು, ದುರಾಸೆ, ಪ್ರೀತಿ, ಹೊಟ್ಟೆಕಿಚ್ಚು
Visit my blog:
http://kannada-nudi.blogspot.com