ನನ್ನ ಗೆಳೆಯರು ನನ್ನೊಡನೆ ತುಳುವಿನಲ್ಲಿ ಮಾತನಾಡುವಾಗ "ಚನ್ನೀಲ್"ನ "ನ್ನೀ" ಯನ್ನು ಒತ್ತಿ ಹೇಳಿದುದರಿ೦ದ. ಇದು ತಪ್ಪೂ ಆಗಿರಬಹುದು, ಯಾಕೆ೦ದರೆ ಆಡು ನುಡಿಗಳಲ್ಲಿ ಇ೦ತಹ ವ್ಯತ್ಯಾಸ ಬರುವುದು ಸಹಜ.
ನೀವು ಹೇಳೋದು 'ಚಣಿಲ' ಇದು ಕನ್ನಡ ಮತ್ತು ತುಳು ಎರಡಲ್ಲೂ ಇದೆ. ( ದ್ರಾವಿಡ ಒರೆಗಂಟಂತೆ )
ಆದರೆ ತುಳುವಲ್ಲಿ ಚಣಿಲ, ಚನಿಲ, ತೆನಿಲ ಹೀಗೆಲ್ಲ ಇವೆ.. ( ನಾನು ನೋಡಿದ ಹಲತುಳುವರು ಣಕ್ಕೆ ನ, ಳಕ್ಕೆ ಲ ಹೇಳ್ತಾರೆ. ಅದು ಅವರ ಸೊಗಡೆಂದು ನಂಗೆ ಅನ್ಸಿತು )
ಉ: ಒಪ್ಪಲ್ಲನ್ ಯಾರು?
ನಂಗೆ ನಿಜವಾಗ್ಲು ಗೊತ್ತಿಲ್ಲ
-ನಿಮ್ಮ ಬೆಂಬಿಡದ ಬೇತಾಳ .....
ಉ: ಒಪ್ಪಲ್ಲನ್ ಯಾರು?
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹೇ ಚನ್ನೋ ದಂತಿ: ಪ್ರಚೋದಯಾತ್.
೧. ಒರ್ + ಪಲ್ಲು + ಅನ್ -> ಒಪ್ಪಲ್ಲನ್ -> ಒಂದು ಹಲ್ಲಿರುವವನು -> ಏಕದಂತ -> ಗಣೇಶ
೨. ಒರ್ + ಪಲ್ + ಅನ್ -> ಒಂದು ಆನೆಯಂತಿರುವವನು / ಒಂದು ಆನೆಯುಳ್ಳವನು -> ಇಂದ್ರ
ಪಲ್ಲು -> ಹಲ್ಲು, ಪಲ್ -> ಪಲ್ಲ ->ಆನೆ (ಪಲ್ಲವರು, ಪಲ್ಲಕ್ಕಿ ನೆನಪಿಸಿಕೊಳ್ಳಿ).
ಉ: ಒಪ್ಪಲ್ಲನ್ ಯಾರು?
ಲೋ ಚಂನೀಲ...
ನಿಂನ ಒಪ್ಪಲ್ಲನ್ ಬಿಡಿಸಿಕೆ ಬೊಂಬಾಟ್. ಆದ್ರೆ ತಪ್ತಪ್ ಸಕ್ಕದ ಬರೇಬೇಡಯ್ಯ..
"ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ; ತನ್ನೋ ದಂತೀ ಪ್ರಚೋದಯಾತ್" [ ಇದರಲ್ಲು ತಪ್ಪಿದೆಯಾ? ]
ತಂ ನಃ = ತನ್ನಃ = ತನ್ನೋ
ಅದಿರಲಿ...
ಒರ್ + ಪಲ್ + ಅನ್ = ಒರ್ಪಲ್ಲನ್ => ಒಪ್ಪಲ್ಲನ್
ಪಲ್ಲನ್ => ಹಲ್ಲನ್ => ಹಲ್ಲಿನವನು
ಒಪ್ಪಲ್ಲನ್ => ಒಬ್ಬಲ್ಲನ್ => ಒಂದು ಹಲ್ಲಿನವನು [ ಏಕದಂತ ]
ಪಲ್ + ಲ = ಪಲ್ಲ = ಹಲ್ಲ ( ಆನೆ )
ಪಲ್ಲವರು ಅಂದ್ರೆ ಪಲ್ಲವು ( ಆನೆ ) ಹೊಂದಿದವರು ಅಂತವೇ?
ಒರ್ + ಪಲ್ಲು + ಅನ್ ಅಂತ ಬಿಡಿಸೋದು ಬೇಡ..
ಪಲ್ + ಅನ್ = ಪಲ್ಲನ್
ಒರ್ + ಪಲ್ಲನ್ = ಒರ್ಪಲ್ಲನ್ = ಒಪ್ಪಲ್ಲನ್
ಉ: ಒಪ್ಪಲ್ಲನ್ ಯಾರು?
ಪಲ್ + ಅ= ಪಲ್ಲ = ಹಲ್ಲ ( ಗಂಡಾನೆ )
ಪಲ್ + ಎ = ಪಲ್ಲೆ = ಹಲ್ಲೆ ( ಹೆಣ್ಣಾನೆ ) [ ಇದು ಸರಿಯಾ, ಚಂನೀಲ? ]
ನಂಗೆ ಪಲ್ಲವರು ಪಲ್ಲಕ್ಕಿ ಇವು ಹೀಗೆ ಬಂದವೆ ಅಂತ ಹೊಳೆದೇ ಇರಲಿಲ್ಲ,, ನಿಂನಿಂದ ತಿಳಿತು...
ಉನಿತ್ತು:) ನಂನಿಯಪ್ಪೋ ಅದಕ್ಕೆ!!
ಉ: ಒಪ್ಪಲ್ಲನ್ ಯಾರು?
ಬರಹ ತು೦ಬಾ ಚೆನ್ನಾಗಿದೆ.
ತುಳುವಿನಲ್ಲಿ "ಚ೦ನೀಲ" ಅ೦ದರೆ "ಅಳಿಲು" ಎ೦ದು ಅರಿಮೆ.
ಅನ೦ತ
ಉ: ಒಪ್ಪಲ್ಲನ್ ಯಾರು?
ಅನಂತಪ್ರಭುಗಳೇ, "ಚಂನೀಲ"ವನ್ನು ತುಳುವಿನಲ್ಲಿ, ಚನ್ನೀಲ ಅಂತಾರೋ ಅಥವಾ ಚಮ್ನೀಲ ಅಂತಾರೋ ?
ಉ: ಒಪ್ಪಲ್ಲನ್ ಯಾರು?
ತುಳುವಿನಲ್ಲಿ "ಚನ್ನೀಲ್" ಅ೦ತಾರೆ.
ಉ: ಒಪ್ಪಲ್ಲನ್ ಯಾರು?
ನನ್ನಿ, ನನಗೆ ತುಂಬಾ ನಲಿವಾಯಿತು.
ಉ: ಒಪ್ಪಲ್ಲನ್ ಯಾರು?
ಅನಂತ ಪ್ರಭು..
ಅಳಿಲಿಗೆ/ಉಡತೆಗೆ ಚನ್ನೀಲ್ ಅಲ್ಲ ಚನಿಲ್/ಚಣಿಲ್.. ( ನಿಗಂಟು ಹೀಗೆ ಹೇಳುವುದು )...
ತುಸು ನೋಡಿ ಹೇಳುವಿರಾ, ಎದು ಸರಿಯೆಂದು?
ಉ: ಒಪ್ಪಲ್ಲನ್ ಯಾರು?
"ಚನ್ನೀಲ್ ತೂಲಯ" ಅ೦ದರೆ "ಅಳಿಲು ನೋಡು" ಎ೦ದು.
ನನ್ನ ಗೆಳೆಯರು ನನ್ನೊಡನೆ ತುಳುವಿನಲ್ಲಿ ಮಾತನಾಡುವಾಗ "ಚನ್ನೀಲ್"ನ "ನ್ನೀ" ಯನ್ನು ಒತ್ತಿ ಹೇಳಿದುದರಿ೦ದ. ಇದು ತಪ್ಪೂ ಆಗಿರಬಹುದು, ಯಾಕೆ೦ದರೆ ಆಡು ನುಡಿಗಳಲ್ಲಿ ಇ೦ತಹ ವ್ಯತ್ಯಾಸ ಬರುವುದು ಸಹಜ.
ಮಹೇಶರೆ ನೀವು ಹೇಳಿರುವ೦ತೆ "ಚನಿಲ್" ಆಗಿರಬಹುದು.
ಇನ್ನೊಮ್ಮೆ ಊರಿಗೆ ಹೋದಾಗ ತಿಳಿದುಕೊ೦ಡು ಬರುತ್ತೇನೆ.
ಅನ೦ತ
ಉ: ಒಪ್ಪಲ್ಲನ್ ಯಾರು?
ಅನಂತ ..
ತುಳುವಲ್ಲಿ ಸಾಮನ್ಯವಾಗಿ..
ಣ => ನ
ಳ => ಲ
ಚ => ತ
ಹೀಗೆಲ್ಲ ಆಗುವದಂತೆ.. ತುಳುವಿನ ನಿಬ್ಬರ/ವಿಶೇಷ ಇದೇ.. ಅದರ ಸೊಗಡು ತುಸು ಮಿಕ್ಕ ದ್ರಾವಿಡ ನುಡಿಗಿಂತ ಬೇರೆ..!!
ತೂಲಯ ( ಇದು ಚೂ ಎಂಬ ದ್ರಾವಡ ಧಾತುವಿಂದ ಬಂದಿದೆ ಅಂತ ನಾನು almost ಹೇಳಬಲ್ಲೆನು )...
ಚೂಪು ( ದೃಷ್ಟಿ, ಕನ್ನಡ;ತೆಲುಗು ).
ಉ: ಒಪ್ಪಲ್ಲನ್ ಯಾರು?
http://dsal.uchicago.edu/cgi-bin/philologic/getobject.pl?c.1:1:147.burro...
ಇಲ್ಲಿ ನೋಡಿರಿ...
ಚೂಪು..
ತಮಿಳು Ta. cūr̤(ಚೂೞ್) (-v-, -nt-) to deliberate, consider, conspire, select, know; n. deliberation, counsel, investigation; cūr̤cci deliberation, consultation, wisdom; cūṭci counsel, deliberation; (-pp-, -tt-) to understand thoroughly, investigate carefully; cūṭiyaṉ minister; ūr̤ (-pp-, -tt-) to think; ūr̤ku (ūr̤ki-) to meditate.
ಕನ್ನಡ Ka. cūpu/ಚೂಪು seeing, sight, look, vision. ( ಆದ್ರೆ ಕನ್ನಡದಲ್ಲಿ ನೋಟ್ ಧಾತುವನ್ನು ಹಚ್ಚು ಬಳಸುವೆವು )
ತುಳು Tu. tūpini, hūpini to see, look, observe, test, examine, visit, seek, consider, regard; tūpāvuni to show; sūkè perception, cognition, apprehension; cūṭi, cūṭu perception; (B-K.) tūla, sūla, hūla to see.
ತೂಲ, ಸೂಲ, ಹೂಲ = to see ( ಚ => ತ, ಚ, ಹ )!!
ತೆಲುಗುTe. cūcu(ಚೂಚು) (cūḍ-; imperative cū, cummu) to see, observe, behold, look at, view; cūḍiki vision; cūpu, cūpincu to show, point at; cūpu sight, vision, look, glance; cumī, cũḍī take care!
ಉ: ಒಪ್ಪಲ್ಲನ್ ಯಾರು?
ಮಹೇಶರೆ,
ನಿಮ್ಮ ಕರಾರುವಕ್ಕಾದ ವಿವರಣೆಗಳಿಗೆ ನನ್ನಿ
ಅನ೦ತ
ಉ: ಒಪ್ಪಲ್ಲನ್ ಯಾರು?
ಕನ್ನಡದಲ್ಲಿ ಅಣಲ್, ಅಣಿಲ್, ಅಳಲೆ, ಅಳಿಲ್, ಅಳುಲ್, ಅಳ್ಳೂಮ, ಆಳಿಂದಕಿ, ಇಂಚಿ, ಚೆಣಿಲ, ಅಳಿಲು, ಉಡತೆ, ಕೆಂಜೆರಿ( ಕೆಂಪನೆ ಉಡತೆ ) ಇವೆಲ್ಲ 'ಉಡತೆ'ಯೇ..
ನೀವು ಹೇಳೋದು 'ಚಣಿಲ' ಇದು ಕನ್ನಡ ಮತ್ತು ತುಳು ಎರಡಲ್ಲೂ ಇದೆ. ( ದ್ರಾವಿಡ ಒರೆಗಂಟಂತೆ )
ಆದರೆ ತುಳುವಲ್ಲಿ ಚಣಿಲ, ಚನಿಲ, ತೆನಿಲ ಹೀಗೆಲ್ಲ ಇವೆ.. ( ನಾನು ನೋಡಿದ ಹಲತುಳುವರು ಣಕ್ಕೆ ನ, ಳಕ್ಕೆ ಲ ಹೇಳ್ತಾರೆ. ಅದು ಅವರ ಸೊಗಡೆಂದು ನಂಗೆ ಅನ್ಸಿತು )
http://dsal.uchicago.edu/cgi-bin/philologic/getobject.pl?c.0:1:2323.burr...
ನಾನು ಬರೆದ ಚಂನೀಲ/ಚನ್ನೀಲ ಅಂದರೆ ಚನ್ನಾಗಿರುವ ನೀಲಿಯವನು.. ( ಸುನೀಲ )
ಉ: ಒಪ್ಪಲ್ಲನ್ ಯಾರು?
ಎಲ್ಲಾ ಓಕೆ, ಈ ಅನ್ ಯಾಕೆ??
ಕನ್ನಡದಲ್ಲಿ ’ಒಪ್ಪಲ್ಲ’ ಅಂದರೆ ಸಾಕಲ್ಲವೇ?
ಹಂಗೆ, ಉದ್ದಲ್ಲ, ಗಿಡ್ಡಲ್ಲ, ಮುರುಕ್‍ಹಲ್ಲ, ಹಲ್ಮುರುಕ ಮುಂತಾದವು ಇದಾವಲ್ಲಾ.
ಒಕ್ಕಾಲ, ಒಕ್ಕಣ್ಣ, ಒಕ್ಕೈ, .....
ಮುಕ್ಕಾಲ, ಮುಕ್ಕಣ್ಣ, ಮುಕ್ಕೈ....
ಮುಕ್ಕಣ್ಣ ಅಂತ ಇರೋದು, ಮುಕ್ಕಣ್ಣನ್ ಅಲ್ಲ.
ಉ: ಒಪ್ಪಲ್ಲನ್ ಯಾರು?
ಅಣ್ಣ..
ಅನ್.. ಸರಿಯೇ...
ಕದಂಬ ವೆರ್ಮನ್ ಅಂತಲೇ ಇರೋದಂತೆ ಶಾಸಗಳಲ್ಲಿ.. ಹಾಗೆ ಪುಲಿಕೇಶಿನ್ ಇದೂ ಉಂಟು..
ಅಲ್ಲಿ ಸರಿ ಸರಿ..
ಒಪಲ್ಲನ್ = ಒಪ್ಪಲ್ಲಂ = ಒಪ್ಪಲ್ಲ.
ಏನ್ = ಏಂ = ಏನು
ಇಲ್ಲಿ ಅನ್ ತಪ್ಪಲ್ಲ.. ಆದರೆ ಕನ್ನಡದಲ್ಲಿ ನ್ ಬಿಡುವುದುಂಟು.
ಹೋದನ್ = ಹೋದ!!