Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಶುದ್ಧ ಕನ್ನಡ?

July 28, 2005 - 5:04pm — olnswamy

ಕನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?
ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ?
ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ ಮಡಿವಂತಿಕೆ ಏಕೆ?
ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್‌ಮಾಡಲು ಹೆಸಿಟೇಟ್ ಮಾಡುವುದೇಕೆ? ಆಡುಮಾತಿಗೆ ಇಲ್ಲದ ಮಡಿವಂತಿಕೆ ಬರವಣಿಗೆಗಷ್ಟೇ ಏಕೆ?
ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್‌ನೆಸೆಸರಿ ಕಟ್ಟುಪಾಡು?
ನಿಮಗೆ ಏನನ್ನಿಸುತ್ತದೆ? ಕಾರಣ ಏನಿರಬಹುದು? ಬರವಣಿಗೆ ಕೂಡ ಫ್ರೀಯಾಗಿ ಇರಬೇಕಲ್ಲವಾ?
ಓ.ಎಲ್.ಎನ್

‹ ರಾಮನೂ ಇಲ್ಲ, ರಾಮಾಯಣವೂ ಇಲ್ಲ ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು? ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 4103 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 28, 2005 - 9:23pm — tvsrinivas41

ನಿಮ್ಮ

tvsrinivas41's picture

ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಸಾರ್,

ಭಾಷೆ ಬೆಳೆಯಬೇಕೆಂದರೆ ಅದು ಬೇರೆಯ ಭಾಷೆಗಳ ಪದಗಳನ್ನು ಅಳವಡಿಸಿಕೊಳ್ಳಲೇಬೇಕು. ಮಡಿವಂತಿಕೆ ತೋರಿಸುವುದರಿಂದ ಭಾಷೆ ಬೆಳೆಯುವುದಿಲ್ಲ. ಇಂಗ್ಲೀಷ್ ಬೆಳೆದದ್ದೇ ಹಾಗೆ. ಒಂದು ಕೋನದಿಂದ ನೋಡಿದರೆ ಇಂಗ್ಲೀಷ ಸ್ವಂತ ಭಾಷೆ ಅಲ್ಲವೇ ಅಲ್ಲ. ಅದೊಂದು ಖಿಚಡಿ ಭಾಷೆ.
ಭಾರತ ಸರಕಾರದವರು ಹಿಂದಿಯನ್ನು ಸರಕಾರೀ ಕೆಲಸ ಕಾರ್ಯಗಳಲ್ಲಿ ಬೆಳೆಸಲು ರಾಜಭಾಷೆ ಅಂತ ೧೯೬೩ರಲ್ಲಿ ಪ್ರಾರಂಭಿಸಿದರು. ಅದರಲ್ಲಿ ಹೇಳಿಕೊಡುವ ಮೊದಲ ಪಾಠವೇ ಇದು. ಲಿಪಿ ಮಾತ್ರ ದೇವನಾಗರಿ ಇರಲಿ. ಇನ್ನು ಬರವನಣಿಗೆಯಲ್ಲಿ ಹಿಂದಿ ಉಪಯೋಗಿಸಿ, ತಕ್ಕ ಪದ ಗೊತ್ತಾಗದಿದ್ದರೆ ಇಂಗ್ಲೀಷೆನ್ನೇ ದೇವನಾಗರಿ ಲಿಪಿಯಲ್ಲಿ ಬರೆಯಿರಿ.
ಹಾಗೆ ನೋಡಿದರೆ ಕನ್ನಡ ಭಾಷೆಯಲ್ಲಿ ಸಂಸ್ಕೃತದ ಸಂಬಂಧ ಇರುವುದರಿಂದ ಬಹಳ ಸುಲಭವಾಗಿ ಬೆಳೆಯಬಹುದು.

ನನ್ನ ಅನಿಸಿಕೆ ಸರಿಯೇ ಸರ್!

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:24am — Vinay

Growth of Language

Vinay's picture

Sir,

I dont think that a Language will grow if it accepts other language words.
I am SURE IT WILL DIE if it accepts other langauge words. Though the name of the language remains but without its own words.
There are many languages in this world which dont have a lipi but which can only be spoken. if a language goes on accepting words then... that Language will be the first language which has only lipi and cannot be spoken.

I dont think accepting and using other language words will guide us towards Globalisation. Knowing English is enough to guide us towards Globalisation.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:36am — hpn

ಹೊಸ

hpn's picture

ಹೊಸ ಪದಗಳನ್ನು ಆತ್ಮೀಯತೆಯಿಂದ ಸ್ವೀಕರಿಸುವ ದೊಡ್ಡತನವಿರಬೇಕು, ವಿನಯ್. ಇಂಗ್ಲಿಷ್ ವಿಶ್ವದಾದ್ಯಂತ ಹರಡಿಕೊಂಡು ಠೀವಿಯಿಂದ ಇಂದು ನಮ್ಮಲ್ಲಿ ನಿಮ್ಮಲ್ಲಿ ವಿಶ್ವದೆಲ್ಲೆಡೆ 'ಪ್ರೆಸ್ಟೀಜಿಯಸ್' ಭಾಷೆಯಾಗಿ ಮನೆಮಾಡಿಲ್ಲವೆ? (ನೀವೇ ನೋಡಿ, ಈಗ ನಡೆಯುತ್ತಿರುವಂತೆ ನಡೆದರೆ, ಕನ್ನಡ ಭಾಷೆ ಖಂಡಿತ ಸಾಯುತ್ತದೆಯೆಂದು ತಿಳಿಸುವುದಕ್ಕೆ ಸ್ವತಃ ಇಂಗ್ಲಿಷಿನಲ್ಲಿ ಮಾರುದ್ದ ಕಾಮೆಂಟ್ ಹಾಕಿದ್ದೀರ) ಇದಕ್ಕೆ ಕಾರಣ ಏನೆಂದು ನೀವೆಂದಾದರೂ ಆಲೋಚನೆ ಮಾಡಿದ್ದೀರಾ? ಆಂಗ್ಲ ಭಾಷೆಯಲ್ಲಿ, ಫ್ರೆಂಚ್, ಲ್ಯಾಟಿನ್, ಕೊನೆಗೆ ಸಂಸ್ಕೃತ ಮೂಲದ ಪದಗಳೂ ಇವೆ!

ನಮ್ಮ ಭಾಷೆಯು 'ಪ್ಯೂರ್' ಆಗಿರಬೇಕು, ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ 'ಶುದ್ಧ ಕನ್ನಡ'ದ ಆನಂದ ಪಡೆಯಬೇಕು ಎನ್ನುವುದು ಭಾಷೆಯ ಬೆಳವಣಿಗೆಗೆ ಕಡಿವಾಣ ಹಾಕುವಂತದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 10:01am — Vinay

ಸ್ಪಷ್ಟನೆ

Vinay's picture

ನಾನು ಹೇಳಿದ್ದು... ಕನ್ನಡದಲ್ಲಿ ಅನ್ಯ ಭಾಷೆಯ ಪದಗಳನ್ನು ಬಲವಂತವಾಗಿ ಸೇರಿಸುವುದಕ್ಕೆ. ಅನ್ಯ ಭಾಷೆಯನ್ನು ಉಪಯೋಗಿಸಬೇಡಿ ಎಂದಲ್ಲ. ಹೌದು ಇಂಗ್ಲೀಷ್ ವಿಶ್ವ ಭಾಷೆ. ಆದರೆ ಅದು ಯಾರ ಸ್ವಂತ ಭಾಷೆ ಆಗಿ ಉಳಿದಿಲ್ಲ. ಅದಕ್ಕೆ ನೋಡಿ.. ಇಂಗ್ಲೀಷ್ ತನ್ನ ಮೂಲ ಸ್ವರೂಪವನ್ನೆ ಕಳೆದುಕೊಳ್ಳುತ್ತಿದೆ. American English, Australian English, UK English ಅಂತ ಆಗಿರೋದು. ಹೆಸರಿಗೆ English, ಅಷ್ಟೆ.

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 9:49pm — Jagadish

ಎಲ್ಲಾ ಓದಿದ ಮೇಲೆ

Jagadish's picture

"ಎಲ್ಲರೂ ಕನ್ನಡ ಪದಗಳ್ನ ಉಪಯೋಗ್ಸಕ್ಕೆ ಸ್ಟಾರ್ಟ್ (ಆರಂಭ ನ ಬಿಟ್ಟು ಜನ ಶುರು ಅಂತಾರೆ) ಮಾಡಿದ್ರೆ....."

ಮೇಲೆ ಹೇಳಿದಂತೆ ನಾವು ಕನ್ನಡ ಪದನ (ನಾನು ವರ್ಡ್ ಅನ್ನೋ ಪದನ ಉಪಯೋಗ್ಸೋದು ನಿಲ್ಸಿದ್ದು, ಪದ ಉಪಯೋಗಿಸಿ ಮಾತಾಡಕ್ಕೆ ಪ್ರಾರಂಭಿಸಿದ ಮೇಲೆ) ಉಪಯೋಗಿಸಿ ಮಾತಾಡಕ್ಕೆ ಆರಂಭಿಸಿದರೆ ಹಂಗೆ ಜನ ಮತ್ತೆ ನಮ್ಮ ಭಾಷೆನ ಉಪಯೋಗಿಸ್ತಾರೆ.... ಜಾಗತೀಕರಣ/ಗ್ಲೋಬಲೀಕರಣ ಅನ್ನೋ ಹೆಸ್ರಲ್ಲಿ ಸುಮಾರು ಕನ್ನಡ ಪದಗಳು ಕಳೆದು ಹೋಗ್ತಿವೆ...ಪ್ರೆಸ್ಟೀಜ್ (ಪ್ರತಿಷ್ಠೆ) ವಿಷಯ ಅಂದ್ಕೊಂಡು ಜನ ಆಂಗ್ಲ ಪದಗಳ ಬಳಕೆ ಪ್ರಾರಂಭಿಸಿದಾರೆ...ಅದನ್ನ ಕಮ್ಮಿ ಮಾಡ್ಬೇಕು....

ಹೊಸ ಆವಿಷ್ಕಾರ ಆದಾಗ, ಹೊಸ ಪದಗಳು (science(vignaana bariyoke ಬರಹ help nodilla) / technology) ಬಂದಾಗ ಅದನ್ನ ಒಪ್ಕೊಬಹುದು, ನಮ್ಮ ಭಾಷೆಗೆ ಸೇರ್ಸ್ಕೊಬಹುದು....ಇರೋ ಪದಗಳ್ನ ನುಂಗ್ತಾ ಹೋದ್ರೆ, ಕನ್ನಡ ಪದಗಳು ಹಾಗೆ ಆಡು ಭಾಷೆಯಿಂದ ಕಣ್ಮರೆ ಆಗಿ ಬರಿ ನಿಘಂಟಿನಲ್ಲಿ ಮಾತ್ರ ಉಳ್ಕೊಳ್ಳುತ್ತೆ ಅನ್ಸುತ್ತೆ....

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

  • Login or register to post comments
  • link
  • Email this ಪ್ರತಿಕ್ರಿಯೆ
November 24, 2005 - 10:24am — tvsrinivas41

ವಿಜ್ಞಾನ

tvsrinivas41's picture

ನಮಸ್ಕಾರ ಜಗದೀಶರೇ,

ನಿಮ್ಮ ಬರಹ ಚೆನ್ನಾಗಿದೆ. ಒಂದೇ ಒಂದು ಸರಿಪಡಿಕೆ ಸೂಚಿಸಬೇಕೆಂದಿರುವೆ. ತಪ್ಪು ತಿಳಿಯಬೇಡಿ. ವಿಜ್ಞಾನ ಎಂದು ಕನ್ನಡದಲ್ಲಿ ಕಾಣಿಸಲು ಇಂಗ್ಲೀಷಿನಲ್ಲಿ - vij~JAna ಎಂದು ಬರೆಯಬೇಕು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
November 24, 2005 - 11:58am — Jagadish

ಧನ್ಯವಾದ ತವಿಶ್ರೀ...

Jagadish's picture

ನಿನ್ನೆ ರಾತ್ರಿ ಮಳೆಯಿದ್ದ ಕಾರಣ, ಕಛೇರಿಯಲ್ಲಿ ಕೂತಿದ್ದೆ, ಆಗ ನನಗೆ ಬರಹ ಹೆಲ್ಪ್ (ಅದು ಇರೋದೆ ಹಾಗೆ, ಸಹಾಯ ಅನ್ನೋ ಪದ ಬಳಸಿಲ್ಲ) ನೋಡೊ ಅಷ್ಟು ತಾಳ್ಮೆ (ಕಣ್ಣು ನಿದ್ದೆ ಮಾಡಲು ಹಂಬಲಿಸುತ್ತಿತ್ತು) ಇರಲಿಲ್ಲ. ಅದಕ್ಕೆ ಹಾಗೆ ಬರೆದೆ (ಯಾರಾದರು ಅದನ್ನು ತಿಳಿಸುತ್ತಾರೆ ಎಂಬ ಯೋಚನೆಯಲ್ಲಿ, ಇಲ್ಲವಾದಲ್ಲಿ ಇವತ್ತು ನೋಡೋಣ ಅಂದುಕೊಂಡಿದ್ದೆ)...
ತುಂಬ ಧನ್ಯವಾದಗಳು...

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

  • Login or register to post comments
  • link
  • Email this ಪ್ರತಿಕ್ರಿಯೆ
August 4, 2005 - 7:10pm — nilagriva

ಅದೇ ವಿಷಯ

nilagriva's picture

ಮೊದಲಿಗೆ ಸಂಪದದ ನಿರ್ಮಾತೃಗಳಿಗೆ ನನ್ನ ವಂದನೆಗಳು, ಅಭಿನಂದನೆಗಳು. ಕನ್ನಡದಲ್ಲಿ ಈ ರೀತಿಯ ಒಂದು ತಾಣವೂ ಇರಲಿಲ್ಲ. ಈಗ ಬಂದಿದೆ. ನೋಡಿ ಆನಂದವಾಯ್ತು.

ಈಗ ವಿಷಯಕ್ಕೆ ಬರೋಣ.

ನನಗೆ ಕನ್ನಡದಲ್ಲೇ ಅಲ್ಲ, ಬೇರೆ ಯಾವ ವಿಷಯದಲ್ಲಿಯೂ ಮಡಿವಂತಿಕೆ ಇಷ್ಟವಿಲ್ಲ. ಒಂದು ಭಾಷೆ ಬೆಳೆಯುವುದು ಬೇರೆ ಭಾಷೆಗಳ ಸಂಪರ್ಕದಿಂದ. ಸಂಪರ್ಕವೆಂದ ಮಾತ್ರಕ್ಕೆ ಅದನ್ನು ಸಾರಾಸಗಟಾಗಿ ಆಮದು ಮಾಡುವುದೆಂದಲ್ಲ. ಬೇರೆ ಭಾಷೆಗಳು ನಮ್ಮ ಭಾಷೆಯ ಮೇಲೆ ಮೂಡಿಸುವ ಪ್ರಭಾವ ಹೆಚ್ಚು ಎಂದು ಹೇಳಿದೆ. ಆದರೆ ಎತನ್ಮಧ್ಯೆ ಭಾಷೆಯೊಂದಕ್ಕೆ ತನ್ನತನವೆಂಬುದು ಇರುತ್ತದೆ. ಆ ತನ್ನತನವನ್ನು ಕಳೆದುಕೊಳ್ಳದೆ ಏನು ಮಾಡಿದರೂ ಒಳ್ಳೆಯದೇ!

ಈಗ ನನ್ನ father, ನಮ್ಮ mother ಎಂದು ಹೇಳುವಾಗ - ಕನ್ನಡದಲ್ಲಿ ಅಪ್ಪ, ಅಮ್ಮ ಪದಗಳು ಇರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ಆಂಗ್ಲಪದದ ಉಪಯೋಗ ಅಷ್ಟು ಸರಿಕಾಣುವುದಿಲ್ಲ. ಆದರೆ ಕಾರಿಗೆ ನಾಲ್ಕುಚಕ್ರದವಾಹನ ಎಂದೋ ಚತುಶ್ಚಕ್ರಿಕೆಯೆಂದೋ ಕರೆದರೆ ಅದು ಹಾಸ್ಯಾಸ್ಪದವಾಗುತ್ತದೆ. ಇವೆರಡರ ಮಧ್ಯೆಯಲ್ಲಿದ್ದರೆ ಕನ್ನಡ ಭಾಷೆ ತನ್ನ ಸೊಗಡನ್ನೂ ಸೊಗಸನ್ನೂ ಉಳಿಸಿಕೊಳ್ಳುತ್ತದೆ. ಈ ಮಧ್ಯೆಯ ಗೆರೆ ಯಾವುದು ಎಂದು ಹೇಳುವರು ನಮ್ಮಲ್ಲಿರುವ ಸಾಹಿತಿಗಳು ಮತ್ತು ತಿಳಿದವರು. ಭಾಷೆಯ ಸರಿಯಾದ ಹದವೇನೆಂಬುದನ್ನು ನೋಡಿದಾಗ ನಮಗೇ ಗೊತ್ತಾಗುತ್ತದೆ.

ಹೀಗೆ ನೋಡಿದಾಗ ನಿಸಾರ್ ಅಹಮದ್ ಅವರ ಭಾಷಾಪ್ರಯೋಗ ನಮಗೆ ಮಾದರಿಯಾಗಬಹುದು. ಹಿಂದೊಮ್ಮೆ ಒಂದು ಭಾಷಣದಲ್ಲಿ ಅವರು ಯಾರೋ "ಐಕ್ಯತೆ" ಎಂಬ ಪದವನ್ನುಪಯೋಗಿಸಿ ಪ್ರಶ್ನೆ ಬರೆದಿದ್ದರು. ಇವರು ಎಲ್ಲರ ಮುಂದೆಯೇ "ಇದೇನು ಐಕ್ಯತೆಯೇ? ಎಂಥ ತಪ್ಪು ಪ್ರಯೋಗ ಮಾಡಿದ್ದಾರೆ! ಕನ್ನಡ ಬರದವರ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ" ಎಂದು ಮುಂದಿನ ಪ್ರಶ್ನೆಗೆ ಹೋದರು. (ಏಕತೆ ಅಥವಾ ಐಕ್ಯ ಸರಿಯಾದ ಪ್ರಯೋಗ). ಆದರೆ ಅದೇ ಭಾಷಣದಲ್ಲಿ - shaving brush - ಎಂಬ ಪದಕ್ಕೆ ಹಿಂದಿಯಲ್ಲಿ "ಮುಖಮಂಡನ ಝಾಡು" ಎಂಬ ಅನುವಾದ ಎಷ್ಟು ಹಾಸ್ಯಾಸ್ಪದವಾದುದು ಎಂದು ಸಭಿಕರನ್ನು ನಗಿಸಿದರು.

ಸಂಸ್ಕೃತದ ಅತಿರೇಕದ ಪ್ರಯೋಗ ಕೂಡ ಒಳ್ಳೆಯದಲ್ಲ. ಕೆ.ಎಸ್.ನ ಅವರು ತಮ್ಮ ಒಂದು ಸುಂದರ ಕವನದಲ್ಲಿ ಇದೇ ಹೇಳಿದ್ದಾರೆ. "ಕನ್ನಡ ಮಾಧ್ಯಮವಾದರೆ ಸಾಲದು ಕೇವಲ ಮಕ್ಕಳಿಗೆ. ಮೊದಲಾಗಲಿ ಕವಿಗಳಿಗೆ" (ಸರಿಯಾದ ಸಾಲು ನೆನಪಿಲ್ಲ). ಅದೇ ಕವನದಲ್ಲಿ - "ಸಂಸ್ಕೃತ ಹಿತವಾಗಿ ಮಿತವಾಗಿ ಬೆರೆಯಲಿ" ಎಂದು ಹೇಳಿದ್ದಾರೆ.

ಆದರೆ ಆಂಗ್ಲಭಾಷೆಯಷ್ಟು ಸಂಸ್ಕೃತಭಾಷೆ ನಮಗೆ ಪರಕೀಯವಲ್ಲ. ಆದ್ದರಿಂದ ಸಂಸ್ಕೃತವನ್ನು ಮಿತವಾಗಿ ಹಿತವಾಗಿ ಬೆರೆಸಿದರೆ ಒಳ್ಲೆಯದು. ಆದರೆ ತೀರ mummy daddy sister ಎಂದು ಅರಚುವುದು ನನ್ನ ಪ್ರಕಾರ ಕನ್ನಡಕ್ಕೆ ಮಾಡುವ ದ್ರೋಹವೇ ಸರಿ.

ನನ್ನೆರಡು ಪೈಸೆ.

  • Login or register to post comments
  • link
  • Email this ಪ್ರತಿಕ್ರಿಯೆ
August 5, 2005 - 12:19pm — pavanaja

ನಿಸಾರ್ ಅಹಮದ್ ಮತ್ತು ಪ್ರಯ

pavanaja's picture

ನೀವು ನಿಸಾರ್ ಬಗ್ಗೆ ಬರೆದುದರಲ್ಲಿ ನನಗೆ ಸ್ವಲ್ಪ ಅನುಮಾನವಿದೆ. ಅವರ "ಸ್ವಯಂಸೇವೆಯ ಗಿಳಿಗಳು" ಕವನದಲ್ಲಿ "ಕುಚಾಯಿಸುವ" ಎಂಬ ಪದ ಇದೆ (ಕಿಚಾಯಿಸುವ ಅಲ್ಲ). ಇಲ್ಲಿ ಅವರು ಸಂಸ್ಕೃತದ ಕುಚ ಪದವನ್ನು ಕ್ರಿಯಾಪದವನ್ನಾಗಿಸಿ ಹೊಸ ಪ್ರಯೋಗ ಮಾಡಿದ್ದಾರೆ. ಈ ರೀತಿಯ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ.

ಆದರೆ ಐಕ್ಯತೆ ತಪ್ಪು ಎಂಬುದನ್ನು ನಾನೂ ಒಪ್ಪುತ್ತೇನೆ. ಈ "ತೆ" ಯ ರೋಗ ಹಲವರಿಗೆ ಇದೆ. ಸಂಸ್ಕೃತದ ಪದಗಳಿಗೆ ವಿಶೇಷಣ ರೂಪ ಬೇಕಾದಾಗ ಈ "ತೆ" ಸೇರಿಸುತ್ತಾರೆ. ಆದರೆ ಅವರು ತಪ್ಪು ಮಾಡುವುದು ಈಗಾಗಲೇ ವಿಶೇಷಣದ ರೂಪದಲ್ಲಿರುವ ಪದಕ್ಕೆ ಮತ್ತೆ ಹೆಚ್ಚಿನ "ತೆ" ಸೇರಿಸುವ ಮೂಲಕ. ಕೆಲವು ಉದಾಹರಣೆಗಳು-

ತಪ್ಪು ಒಪ್ಪು ಮೂಲ ರೂಪ
ಪಾವಿತ್ರ್ಯತೆ ಪಾವಿತ್ರ್ಯ ಪವಿತ್ರ
ಪ್ರಾಮುಖ್ಯತೆ ಪ್ರಾಮುಖ್ಯ ಪ್ರಮುಖ
ಪ್ರಾವೀಣ್ಯತೆ ಪ್ರಾವೀಣ್ಯ ಪ್ರವೀಣ

ಈ ಪದಗಳಿಗೆ "ತೆ" ಸೇರಿಸಲೇ ಬೇಕೆಂದುಕೊಂಡಿರುವವರು ಈ ರೀತಿ ಬರೆಯಬಹುದು-
ಪವಿತ್ರತೆ
ಪ್ರಮುಖತೆ
ಪ್ರವೀಣತೆ

ನನಗಂತೂ ಈ ಬಳಕೆ ಇಷ್ಟವಿಲ್ಲ.

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
August 5, 2005 - 3:39pm — nilagriva

ನಿಸಾರರ ಭಾಷಣ

nilagriva's picture

ನಾನು ನಿಸಾರರ ಕೆಲವು ಕವನಗಳನ್ನು ಮಾತ್ರ ಓದಿದ್ದೇನೆ. ಆದ್ದರಿಂದ ಅಲ್ಲಲ್ಲಿ ಅವರು "ತಪ್ಪು" ಮಾಡಿದ್ದರೆ ನನಗೆ ಗೊತ್ತಿಲ್ಲ.

ನಾನು ಹೇಳಲು ಹೊರಟಿದ್ದು ಭಾಷೆಯಲ್ಲಿರಬೇಕಾದಂಥ ಹದದ ಬಗ್ಗೆ. ತೀರಾ ಸಂಸ್ಕೃತಭೂಯಿಷ್ಠವೂ ಆಗದೆ, ತೀರಾ ಆಂಗ್ಲಮಯವೂ ಆಗದೆ ಸರಿಯಾಗಿ ಸುಲಭವಾಗಿ ಮೂಡಿಬರುವ ಭಾಷೆಯ ಬಗ್ಗೆ ಹೇಳುತ್ತ ಅವರು ಮಾಡಿದ್ದ ಭಾಷಣ ನನಗೆ ನೆನಪಿಗೆ ಬಂದಿತ್ತು. ಅದನ್ನೇ ಇಲ್ಲಿ ಜ್ಞಾಪಿಸಿಕೊಂಡೆ. ಭಾಷಣದಲ್ಲಿ ಮೂಡಿಬಂದ ಈ ಅಂಶ ಅನುಕರಣೀಯವಲ್ಲವೇ?

ಹೌದು, ಈ ತಪ್ಪು "ತೆ" ಪ್ರಯೋಗವೆಂಬ ರೋಗ ಕನ್ನಡದಲ್ಲಿ ಈ ನಡುವ ಹೆಚ್ಚು ಕಾಣಿಸುತ್ತಿದೆ. ನೀವು ಸೂಚಿಸಿರುವ ಉದಾಹರಣೆಗಳು ಸೂಕ್ತವಾಗಿವೆ.

ನನ್ನ ಪ್ರಕಾರ ಹೊಸ ಪ್ರಯೋಗಗಳು ಲಘು ಬರವಣಿಗೆಗಳಲ್ಲಿ ಚೆನ್ನಾಗಿ ಕಾಣುತ್ತವೆ. ಗಂಭೀರ ಲೇಖನವೊಂದರಲ್ಲಿ ಈ ರೀತಿ "ಕುಚೇ"ಷ್ಟೆ ಮಾಡಿದರೆ ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಆ ರೀತಿ ತಮಾಷೆಯ ಪ್ರಯೋಗಗಳು ಕೆಲವು ಸಂಸ್ಕೃತಪದ್ಯಗಳಲ್ಲಿಯೂ ಕಾಣಸಿಗುತ್ತವೆ. ಆದರೆ ಈ ಪದ್ಯಗಳು ಚಾಟು ಅಥವಾ ಹಾಸ್ಯಪದ್ಯಗಳು ಎಂದು ಗಮನಿಸಬೇಕಾಗಿದೆ. ಈಗ ಡಿ.ವಿ.ಜಿ ಯವರು ತಮಾಷೆಗೆಂದು ಆಶುವಾಗಿ ರಚಿಸಿದ "ವಯಂ ತು ಶ್ರೀಮದ್-ಬ್ಯಾಳೀಹುಳಿ-ಪಳದ್ಯ-ಕೋಸಂಬ್ರಿ-ರಸಿಕಾಃ" (ಸುಮಾರಾಗಿ) ಎಂಬ ಹಾಸ್ಯಶ್ಲೋಕದ ಪಾದವಿದೆ. ಇಲ್ಲಿ ಬ್ಯಾಳೀಹುಳಿ-ಪಳದ್ಯಗಳೆಲ್ಲವೂ ಕನ್ನಡಪದಗಳೇ. ಸುಮ್ಮನೆ ಸಂಸ್ಕೃತ ಛಂದಸ್ಸಿನಲ್ಲಿ ಸೇರಿಸಿದ್ದಾರೆ. ಇಲ್ಲಿ ಚೆನ್ನಾಗಿ ಕಂಡರೂ ತಮ್ಮ ಜೀವನಧರ್ಮಯೋಗದಲ್ಲಿ ಈ ರೀತಿಯ ಮಿಶ್ರಭಾಷೆಯ ಪದ್ಯ ಸೇರಿಸಿದ್ದರೆ ಸ್ವಲ್ಪವೂ ಚೆನ್ನಾಗಿರುತ್ತಿರಲಿಲ್ಲ. ಹಾಗೆಯೇ ನಿಸಾರರೂ ಮಾಡಿರಬಹುದಲ್ಲವೇ? ಅಂದ ಹಾಗೆ, "ಸ್ವಯಂಸೇವೆಯ ಗಿಳಿಗಳು" ಹಾಸ್ಯಪ್ರೇರಕ ಅಥವಾ ವಿಡಂಬನಾತ್ಮಕ ಪದ್ಯವೇ? ಹೆಸರು ನೋಡಿದರೆ ಹಾಗೆಯೇ ಕಾಣುತ್ತದೆ.

ನೀವೇನಂತೀರಿ ?

-ನೀಲಗ್ರೀವ

  • Login or register to post comments
  • link
  • Email this ಪ್ರತಿಕ್ರಿಯೆ
August 8, 2005 - 12:42pm — pavanaja

ಸ್ವಯಂಸೇವೆಯ ಗಿಳಿಗಳು

pavanaja's picture

"ಸ್ವಯಂಸೇವೆಯ ಗಿಳಿಗಳು" ವಿಡಂಬನಾತ್ಮಕ ಕವನ. ಕಾಲೇಜುಗಳಲ್ಲಿ ಸ್ವಯಂಸೇವಿಕೆಯರಾಗಿ ದುಡಿಯುವ ಯುವತಿಯರ ಇತರೆ ಹವ್ಯಾಸಗಳನ್ನು ಅವರು ಇಲ್ಲಿ ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ.

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
November 24, 2005 - 1:05pm — Gopinath Rao

ಪ್ರಾವಿಣ್ಯತೆ - ಐಕ್ಯತೆ

Gopinath Rao's picture

ಹಾಗೆ ಬರೆದಿದ್ದರೂ ಮಾರ್ಕು ಕೊಡಿ ಸಾರ್..

ಪ್ರಾವಿಣ್ಯತೆ - ಐಕ್ಯತೆ ತರಹದ ಪದಗಳು ತಪ್ಪು ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಗೊತ್ತಿದ್ದೂ ಬಳಸುವವರು ಕೂಡ ಇದ್ದಾರೆ! ನಮ್ಮ ಶಿಕ್ಷಕ ಮಿತ್ರರೊಬ್ಬರ ಪ್ರಕಾರ ಎಸ್ ಎಸ್ ಎಲ್ ಸಿ ಕನ್ನಡ ಉತ್ತರ ಪತ್ರಿಕೆ ತಿದ್ದುವಾಗ ಇಂತಹ ತಪ್ಪುಗಳಿಗೆ ಏನು ಮಾಡಬೇಕು ಎಂದು ತಮ್ಮ ಸೂಪರ್ ವೈಸರ್ ರನ್ನು ಕೇಳಿದಾಗ ಅವರು ಹೇಳಿದ್ದು ಹೀಗೆ "ಹಾಗೆ ಬರೆದಿದ್ದರೂ ಮಾರ್ಕು ಕೊಡಿ ಸಾರ್.. ನಮ್ಮಲ್ಲಿ ಹೀಗೆ ಕೂಡಾ ಬರೆದು ಪ್ರಚಲಿತದಲ್ಲಿದೆ ತಾನೆ .."
ಪ್ರಚಲಿತ ಅನ್ನುವುದು ಅಸಾಧಾರಣ ಬಲವುಳ್ಳದ್ದು.. ಭಾಷೆಯನ್ನೇ ಬದಲಿಸಿ ಬಿಡುತ್ತೆ..
"ಡೋಂಟ್ ವರಿ ಮಾಡ್ಕೋಬೇಡಿ ಸಾರ್.." ಪ್ರಚಲಿತದಲ್ಲಿ don't worry sir ಅನ್ನುವುದರ ಶುದ್ಧ ಕನ್ನಡ ಭಾಷಾಂತರ ತಾನೆ!! ನನಗಂತೂ ತಪ್ಪು ಅಂತ ಗೊತ್ತಿದ್ದೂ ಹೀಗೆಯೇ ಬಳಸೋಣ ಅನ್ನಿಸುವಷ್ಟು ಹಿಡಿಸಿದೆ ಈ "ಡೋಂಟ್ ವರಿ ಮಾಡ್ಕೋಬೇಡಿ ಸಾರ್.." ಅನ್ನೋ Phrase!!!

- ಗೋಪೀನಾಥ ರಾವ್

  • Login or register to post comments
  • link
  • Email this ಪ್ರತಿಕ್ರಿಯೆ
November 24, 2005 - 8:24pm — pavanaja

ಪ್ರಚಲಿತವೇ ಅಂತಿಮ

pavanaja's picture

ನೀವು ಹೇಳಿದ್ದು ಸರಿ. ಪ್ರಚಲಿತವೇ ಅಂತಿಮ. ಅದಕ್ಕೇ ಹೇಳುವುದು -ಸರಿ ಯಾವುದೆಂದು ಗೊತ್ತಿರುವವರು ಸರಿಯಾದುದನ್ನೇ ಬಳಸಿ ಮತ್ತು ಇತರರಿಗೆ ತಿಳಿಸಿ ಎಂದು. ಈಗಾಗಲೇ ಭಾಷೆ ತುಂಬ ಕುಲಗೆಟ್ಟು ಹೋಗಿದೆ. ಇರುವುದನ್ನಾದರೂ ಉಳಿಸಲು ಪ್ರಯತ್ನಿಸೋಣ.

ಕೆಲವು ತಪ್ಪು ಒಪ್ಪುಗಳನ್ನು ತಿಳಿಯೋಣ

ತಪ್ಪು ಒಪ್ಪು
ತಿಳುವಳಿಕೆ ತಿಳಿವಳಿಕೆ
ಜಿಗುಪ್ಸೆ ಜುಗುಪ್ಸೆ
ನಾಗರೀಕ ನಾಗರಿಕ
ರಸಾಯನಿಕ ರಾಸಾಯನಿಕ
ಜಾತ್ಯಾತೀತ ಜಾತ್ಯತೀತ
ಪೂರ್ವಾಗ್ರಹ ಪೂರ್ವಗ್ರಹ

ಭಾಷೆಯಲ್ಲಿ ಮಡಿವಂತಿಕೆ ಬೇಡ ಎಂಬುದನ್ನು ಒಪ್ಪೋಣ. ಹಾಗೆಂದು ಹೇಳಿ ಸರಿಯಾಗಿ ಗೊತ್ತಿರುವ ನಾವು ಸರಿಯಾಗಿ ಬಳಸುವುದನ್ನು ಮಾತ್ರ ನಿಲ್ಲಿಸುವುದು ಬೇಡ. ಕನಿಷ್ಠ ನಮ್ಮ ಕಾಲಕ್ಕಾದರೂ ಅದು ಸರಿಯಾಗಿರಲಿ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
July 29, 2005 - 8:52pm — hpn

ಭಾಷೆ ಬೆಳೆಯುವುದು

hpn's picture

ಪುಟ್ಟದಾಗುತ್ತಿರುವ ಜಗತ್ತಿನಲ್ಲಿ ದಿನೇ ದಿನೇ ಉಳಿದವರೊಂದೆಗೆ, ಇತರ ಭಾಷೆಯವರೊಂದಿಗೆ interaction ಹೆಚ್ಚಾಗುತ್ತಿದ್ದಂತೆ, ಕನ್ನಡದಲ್ಲಿಲ್ಲದ ಪದಗಳು ಬಹುಶಃ ಬೇರೆ ಭಾಷೆಗಳಿಂದ ಬಂದೇ ಬರುತ್ತವೆ.
ಹೊರಗಿನಿಂದ ಹೀಗೆ ಬಂದ ಪದಗಳ ಬಳಕೆ ಕನ್ನಡಕ್ಕೆ ದಕ್ಕೆಯೇನೂ ಉಂಟುಮಾಡುವುದಿಲ್ಲವೆಂಬುದು ನನ್ನ ಅಭಿಪ್ರಾಯ.

ಇಂಗ್ಲಿಷ್ ಈಗ ಬೆಳೆದು ನಿಂತಿರುವುದೇ ಇತರ ಭಾಷೆಗಳ ಪದಗಳನ್ನು ಆತ್ಮೀಯತೆಯಿಂದ ಸ್ವೀಕರಿಸಿದ್ದಕ್ಕಾಗಿ. 'ಗುರು' ಎಂಬುವುದು ಈಗ ಇಂಗ್ಲಿಷಿನಲ್ಲಿ ಅಡಕವಾಗಿಯೇ ಹೋಗಿದೆ!
ನನಗೆ ತಿಳಿದಂತೆ ನೀವು ಪ್ರಸ್ತಾಪಿಸಿರುವ ಅಭಿಪ್ರಾಯ ನಮ್ಮ ನಿಮ್ಮೆಲ್ಲರದಷ್ಟೆ ಅಲ್ಲ, ಹಿಂದಿದ್ದ ಹಲವು ಪ್ರಮುಖ ಸಾಹಿತಗಳದ್ದೂ ಕೂಡ. (ಬಿ ಜಿ ಎಲ್ ಸ್ವಾಮಿಯವರು ಅವರ 'ಮೈಸೂರು ಡೈರಿ'ಯಲ್ಲಿ ಕೂಡ ಇದೇ ವಿಷಯದ ಬಗ್ಗೆ ಪ್ರಸ್ತಾಪಸಿದ್ದದಿದೆ)

ಸುತ್ತಮುತ್ತಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ಭಾಷೆ ದೊಡ್ಡದಾಗಲೇಬೇಕು, ಹೊಸ ಪದಗಳು ಅಡಕವಾಗಲೇಬೇಕು - ಮಾತಿನಲ್ಲಿ ಮಾತ್ರವಲ್ಲ, ಸಾಹಿತ್ಯದಲ್ಲಿ ಕೂಡ Smiling

  • Login or register to post comments
  • link
  • Email this ಪ್ರತಿಕ್ರಿಯೆ
July 30, 2005 - 12:20pm — Vinay

ಕನ್ನಡದಲ್ಲಿ ಪರಭಾಷೆಯ ಪದಗ

Vinay's picture

ಕನ್ನಡದಲ್ಲಿ ಪರಭಾಷೆಯ ಪದಗಳು ಬೇಕಾದಷ್ಟಿವೆ. ಅವುಗಳಲ್ಲಿ ಸಂಸ್ಕೃತದ ಪದಗಳೆ ಹೆಚ್ಚು. ಆಂಗ್ಲ ಭಾಷೆಯ ಪದಗಳೂ ಇವೆ. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ, ಕನ್ನಡದಲ್ಲಿ ಸರಿಯಾದ ಪದಗಳಿದ್ದರೂ ನಾವು ಸಂಸ್ಕೃತದ ಪದಗಳನ್ನೇಕೆ ಬಳಸಬೇಕು? ಉದಾಹರಣೆಗೆ, ನೇತ್ರಾಲಯ.... ಕನ್ನಡದಲ್ಲಿ ಕಣ್ಣಾಸ್ಪತ್ರೆ ಎಂದರೆ ಉತ್ತಮ ವಲ್ಲವೆ. ಇನ್ನೊಂದು.. ಮುಖ್ಯ ರಸ್ತೆ.. ಇದರ ಬದಲಿಗೆ.. ದೊಡ್ಡ ಬೀದಿ.. ಎಂದರೆ ಸರಿ. ನಾವು ಸಂಸ್ಕೃತ, ಉರ್ದು ಭಾಷೆಯ ಪದಗಳನ್ನು ಉಪಯೋಗಿಸಿದರೆ ಹೆಚ್ಚು ಘನತೆ ಎಂದುಕೊಂಡಿದ್ದೇವೆ. ಇದೇ ಕಾರಣದಿಂದ ಕನ್ನಡದಲ್ಲಿ ಇನ್ನೂ ಬೇರೆ ಭಾಷೆಯ ಪದಗಳು ನುಸುಳುತ್ತಿವೆ.

ಆದರೆ ಆಂಗ್ಲ ಭಾಷೆಯ ವಿಚಾರದಲ್ಲಿ, ಆಧುನಿಕ ಯುಗದಲ್ಲಿ ಏಷ್ಟೋ ಪದಗಳು ಹುಟಿಕೊಂದಿವೆ. ಅವುಗಳ ಕನ್ನಡ ಸಮಾನಾಂತರ ಪದಗಳನ್ನು ರಚಿಸುವುದು ಅನಗತ್ಯ.

ನಾವು ಕನ್ನಡದಲ್ಲಿ ಇರುವ ಪದಗಳನ್ನು ಬಳಸಿದರೆ ಕನ್ನಡದ ಜ್ಞಾನ ಹೆಚ್ಚುತ್ತದೆ

  • Login or register to post comments
  • link
  • Email this ಪ್ರತಿಕ್ರಿಯೆ
July 30, 2005 - 6:49pm — olnswamy

ಕನ್ನಡದಲ್ಲಿ ಬಳಕೆಯಾಗುತ್ತ

olnswamy's picture

ನಿಮ್ಮ ಮಾತು ಸರಿ. ಆದರೆ ಎಲ್ಲ ಎಡೆಗಳಲ್ಲೂ ಕನ್ನಡ ಮಾತುಗಳನ್ನು ಹೊಸದಾಗಿ ರಚಿಸಿಕೊಳ್ಳುವುದು ಅನಗತ್ಯ. ನಮ್ಮ ದೃಷ್ಟಿಯಲ್ಲಿ ಆಗಬೇಕಾದ ಬದಲಾವಣೆ ಎಂದರೆ ಕನ್ನಡದಲ್ಲಿ ನಾವು ಬಳಸುತ್ತಿರುವ ಎಲ್ಲ ಪದಗಳೂ ಕನ್ನಡವೇ ಎಂಬ ತಿಳಿವಳಿಕೆ.

ಇದು ಇನ್ನೂ ನಮ್ಮಲ್ಲಿ ಮೂಡಿಲ್ಲ. ಕನ್ನಡಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟಿನ ಶೇ ೬೦ ಭಾಗ ಸಂಸ್ಕೃತಪದಗಳೇ ಇವೆ. ಕನ್ನಡದ ಜನ ಮಾಮೂಲಾಗಿ ಬಳಸುತ್ತಿರುವ ಪಾಯಿಂಟು, ಕನ್ಸಿಡರು, ಅರ್ಜೆಂಟು, ಫೀಲಿಂಗು ಇಂಥ ಪದಗಳು ಕನ್ನಡ ಕನ್ನಡ ನಿಘಂಟುಗಳಲ್ಲಿ ಜಾಗ ಪಡೆದಿಲ್ಲ.

ಇಂಗ್ಲಿಷ್ ಮತ್ತು ಅರಾಬಿಕ್ ಮೂಲದ ಪದಗಳನ್ನು ಮಾತ್ರವೇ ಅನ್ಯಭಾಷೆಯ ಪದಗಳು ಎಂದು ಎಣಿಸುವುದೇಕೆ? ನಮ್ಮ ಭಾಷಾ ಮಡಿವಂತಿಕೆಗೆ ಅರ್ಥವಿಲ್ಲ. ಕನ್ನಡದ ಜನ ಬಳಸುತ್ತಿರುವ ಎಲ್ಲ ಪದಗಳೂ ಕನ್ನಡವೇ ಎಂದು ತಿಳಿದು ಬರವಣಿಗೆಯಲ್ಲೂ ಅವನ್ನು ಕನ್ನಡ ಲಿಪಿಯಲ್ಲಿ ಬಳಸೋಣ.

ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ
July 31, 2005 - 9:34am — pavanaja

ಎರವಲು ಪದಕೋಶ

pavanaja's picture

ಮಾರುಕಟ್ಟೆಯಲ್ಲಿ ಎರವಲು ಪದಕೋಶ ಎಂಬ ಹೆಸರಿನ ಪುಸ್ತಕ ಲಭ್ಯವಿದೆ. ನಾನು ಅದನ್ನು ಕೊಂಡುಕೊಂಡಿಲ್ಲ. ಆದುದರಿಂದ ಅದರಲ್ಲಿ ಇಂಗ್ಲೀಶ್ ಪದಗಳು ಸೇರಿಕೊಂಡಿವೆಯೇ ಎಂದು ತಿಳಿಸಲು ನನಗೆ ಸಾಧ್ಯವಿಲ್ಲ.

ಸಿಗೋಣ,
- ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 6:04am — olnswamy

ಎರವಲು ಪದಗಳು ಕನ್ನಡ ಪದಗಳೇ

olnswamy's picture

ಎರವಲು ಪದಕೋಶದಲ್ಲಿ ಸಂಸ್ಕೃತವನ್ನು ಹೊರತುಪಡಿಸಿ ಕನ್ನಡದಲ್ಲಿ ಬಳಕೆಯಾಗುತ್ತಿರುವ ಅನ್ಯಭಾಷಾ ಪದಗಳು ಇವೆ. ಇವನ್ನು ಎರವಲು ಪದಗಳು ಎಂದು ಕರೆದಿರುವ ಮನೋಧರ್ಮವನ್ನೇ ನಾನು ಪ್ರಶ್ನಿಸುತ್ತಿರುವುದು. ಕನ್ನಡದ ಜನ ಬಳಸುವ ಎಲ್ಲ ಪದಗಳು ಕನ್ನಡದ ಪದಗಳೇ ಎಂಬ ತಿಳಿವಳಿಕೆ ಮೂಡಬೇಕಲ್ಲವೆ? ಮನೆಗೆ ಬಂದ ಸೊಸೆ ಮನೆಯವಳೇ ಆಗುವುದಕ್ಕೆ ಎಷ್ಟು ಶತಮಾನ ಕಳೆಯಬೇಕು? ಕನ್ನಡವಲ್ಲದ ಸಂಸ್ಕೃತ ಮಿಶ್ರಿತ ಭಾಷೆ ಪ್ಯೂರ್ ಎಂದೂ ಇತರ ಭಾಷೆಯ ಪದಗಳ ಬಳಕೆಯಾದಾಗ ಶುದ್ಧತೆ ಇಲ್ಲವಾಯಿತೆಂದೂ ತಿಳಿಯುವುದು ಯಾಕೆ? ಅದೂ, ಈ ಸಂಗತಿ ಬರವಣಿಗೆಗೆ ಮಾತ್ರ ಅನ್ವಯಿಸುತ್ತದೆ, ಮಾತಿಗೆ ಅಲ್ಲ. ಇಂದು ಕನ್ನಡದ ಜನ ಬಳಸುತ್ತಿರುವ ಭಾಷೆಯ ಸ್ವರೂಪವನ್ನು ಕುರಿತು ಹೊಸ ವ್ಯಾಕರಣ, ಹೊಸ ವಿವರಣೆಗಳು ಅಗತ್ಯ ಅನ್ನಿಸುವುದಿಲ್ಲವೇ?
ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 7:31am — tvsrinivas41

ಹೌದು, ಈಗ

tvsrinivas41's picture

ಹೌದು, ಈಗ ಹೊಸ ವ್ಯಾಕರಣ, ಹೊಸ ವಿವರಣೆಗಳ ಅಗತ್ಯವಿದೆ. ಈಗಿನ ವಿದ್ಯಾಭ್ಯಾಸ ಕ್ರಮ, ಚಿಂತನೆಗಳ ವೈಖರಿಗೆ ತಕ್ಕ ಹಾಗೆ ಆಡು ಭಾಷೆಯೂ ಬದಲಾಗುತ್ತಿದೆ. ಬರವಣಿಗೆಯೂ ಇದೇ ನಿಟ್ಟಿನಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ವಿಶ್ವದಲ್ಲಿ ನಮಗೆ ಸ್ಥಾನ ಮಾನ ಸಿಗಲಾರದು. ಬಾವಿಯೊಳಗಿನ ಕಪ್ಪೆಯಂತಾಗದೆ, ಪ್ರಪಂಚದಲ್ಲಿ ನಾವೂ ಒಂದಾಗಬೇಕು. ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಅರಿತು ಗ್ಲೋಬಲೀಕರಣವನ್ನು ಸ್ವಾಗತಿಸುವವರು, ಎರವಲು ಪದಗಳನ್ನು ಕನ್ನಡ ಪದಗಳೇ ಎಂದು ಸ್ವೀಕರಿಸಬೇಕು. ಹಾಗೇ ಸುಲಭವಾಗಿ ಅರ್ಥವಾಗುವ ಯಾವುದೇ ಭಾಷೆಯ ಪದಗಳನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಮಸೂರ ಎನ್ನುವ ಪದ ತಲೆಯೊಳಗ ಸುಲಭವಾಗಿ ಸೇರುವುದಿಲ್ಲ. ಆದರೆ ಲೆನ್ಸ್ ಅಂದರೆ ಓದು ಬರದವನಿಗೂ ಅರ್ಥವಾಗುವ ಸನ್ನಿವೇಶದಲ್ಲಿ, ಲೆನ್ಸೇ ಕನ್ನಡ ಪದವೆಂದು ಸ್ವೀಕರಿಸುವ ಅವಶ್ಯಕತೆ ಇದೆ.

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:16am — Vinay

Acceptance of Other Language Words

Vinay's picture

Sir,
I totally oppose to the view of accepting other language words as Kannada Words. One example is the word used in your article 'Globalikarana'. Why should we use that word when there is kannada word 'Jagatikarana'.
I accept that there are lot of words in Kannada which are from Sanskrit.
But why should we use those when we have such a large number of words. many of us dont know even 25% of the words in Kannada ... why ? because we never mind to use kannada words. When ever we we want we use English, or Hindi. As I told in my previous article.. we think it is matter of prestige if we use English words. For example.. People say 'Nanna Brother..Nanna Sister' Why.. Cant we say Nanna tagi.. Nanna Anna.. Is it not nice to say like these.
If we go on accepting other language words like this... I think Kannada will lose its Identity one day and will be called a 'Khichdi' Language with no own words and which only has a lipi.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:26am — hpn

ಕನ್ನಡದಲ್ಲಿ ಬರೆಯಿರಿ

hpn's picture

ವಿನಯ್ ರವರೆ, ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯಿರಿ. ತಂತ್ರಜ್ಞಾನ ಇದ್ದೂ, ಕನ್ನಡವು ಗೊತ್ತಿದ್ದೂ, ಕನ್ನಡದಲ್ಲಿ ನಡೆಯುತ್ತಿರೋ ಮಾತುಕಥೆಯಲ್ಲಿ ಇಂಗ್ಲಿಷ್ ಏತಕ್ಕೆ?

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:39am — Vinay

ಕ್ಷಮಿಸಿ

Vinay's picture

ದಯವಿಟ್ಟು ಕ್ಷ್ಮಮಿಸಿ. ನಾನು ಲಿನಕ್ಸ್ ನಲ್ಲಿ ಇದ್ದೆ. ನನಗೆ ಬರಹ ಉಪಯೊಗಿಸುವುದಕ್ಕೆ ಗೊತ್ತು. ಕ ಗ ಪ ಕೀಲಿ ಮಣೆ ಗೊತ್ತಿಲ್ಲ. ತಕ್ಷಣ ಉತ್ತರಿಸಬೇಕೆಂದು ಇಂಗ್ಲೀಷ್ ನಲ್ಲಿ ಬರೆದೆ.

ವಿಂಡೋಸ್ ನಲ್ಲಿ ಬಂದೇ ಉತ್ತರಿಸುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:59am — hpn

ನಾನೂ

hpn's picture

ನಾನೂ ಲಿನಕ್ಸ್ ನಲ್ಲೇ ಇರುವುದು, ಸ್ವಾಮಿ. ೨೪ ಘಂಟೆಗಳ ಕಾಲ ಲಿನಕ್ಸೇ ಉಪಯೋಗಿಸುವುದು. ಲಿನಕ್ಸಿನಲ್ಲೆ ಕನ್ನಡ ಸಪೋರ್ಟ್ ಸೇರಿಸಿಕೊಳ್ಳಿ. ಕಷ್ಟವಾದ ಕೆಲಸವೇನಲ್ಲ.
ಮಾಹಿತಿಗೆ: http://kn.wikipedia.org/wiki/Wikipedia:Kannada_Support ನೋಡಿ.

ಲಿನಕ್ಸಿನಲ್ಲಿದ್ದೇನೆ, ಕನ್ನಡ ಬರೆಯುವುದಕ್ಕೆ ಆಗುವುದಿಲ್ಲವೆಂದು ಮಾತ್ರ ಕನ್ನಡದವರಿಗೆ ತಪ್ಪು ಮಾಹಿತಿ ನೀಡಬೇಡಿ Sticking out tongue

  • Login or register to post comments
  • link
  • Email this ಪ್ರತಿಕ್ರಿಯೆ
August 1, 2005 - 9:48am — olnswamy

ಪದಗಳನ್ನು ಒಪ್ಪಿಕೊಳ್ಳುವುದು

olnswamy's picture

ಪ್ರಿಯ ವಿನಯ್,
ನಿಮ್ಮ ಆತಂಕ ಅರ್ಥವಾಗುತ್ತದೆ. ಆದರೆ ನೋಡಿ ಯಾವುದೇ ಭಾಷೆ ದಿನ ನಿತ್ಯವೂ ಬಳಸುವ ಪದಗಳಲ್ಲಿ ಶೇ. ೭೦ ಅನ್ಯ ಭಾಷೆಯ ಪದಗಳೇ ಇರುತ್ತವೆ. ಈ ನಿಯಮಕ್ಕೆ ಯಾವ ಭಾಷೆಯೂ ಹೊರತಲ್ಲ.
ಅನಕ್ಷರಸ್ಥರ ಮಾತಿನಲ್ಲೂ ಎಷ್ಟು ಇಂಗ್ಲಿಷ್ ಪದಗಳು ಬೆರೆತಿವೆ ಸ್ವಲ್ಪ ಗಮನಿಸಿ ನೋಡಿ. ಪದಗಳ ಸ್ವೀಕಾರ ಅಥವ ತಿರಸ್ಕಾರ ಕೇವಲ ಒಬ್ಬಿಬ್ಬರ ಅಥವ ಕೇವಲ ಅಭಿಮಾನದ ಧೋರಣೆಯಿಂದ ನಿರ್ಧಾರವಾಗುವುದಿಲ್ಲ.
ಜೊತೆಗೇ ಭಾಷೆಯೊಡನೆ ಬೆರೆತಿರುವ ಸಾಮಾಜಿಕ ಧೋರಣೆಗಳೂ ಇರುತ್ತವೆ. ನಮ್ಮ ಬದುಕಿನಲ್ಲಿ ಇಂಗ್ಲಿಷ್ ಮೂಲದಿಂದ ಬಂದ ತಂತ್ರಜ್ಞಾನ, ಇಂಗ್ಲಿಷ್ ಮೂಲದಿಂದ ಬಂದ ತಿಳಿವಳಿಕೆ ಇವೆಲ್ಲ ಬೇರ್ಪಡಿಸಲಾಗದಂತೆ ಬೆರೆತಿವೆ.
ನನ್ನ ಪ್ರಶ್ನೆ ಇಷ್ಟೇ-ಮಾತಿನಲ್ಲಿ ಇರದ ಮಡಿವಂತಿಕೆ ಬರಹದಲ್ಲಿ ಏಕಿರಬೇಕು?
ಇನ್ನೊಂದು ಕುತೂಹಲದ ಸಂಗತಿ. ಕನ್ನಡವೂ ಸೇರಿದಂತೆ ಯಾವ ಭಾಷೆಯೂ ಕ್ರಿಯಾಪದಗಳನ್ನು ಎರವಲು ಪಡೆಯುವುದೇ ಇಲ್ಲ. ಹಾಗೆಯೇ ಪ್ರತ್ಯಯಗಳು, ಇಂಗ್ಲಿಷಿನಲ್ಲಿ ಸಫಿಕ್ಸ್ ಅನ್ನುತ್ತಾರಲ್ಲ ಅದೂ ಕೂಡ ಆಯಾ ಭಾಷೆಯ ಸ್ವಂತದ್ದೇ. ಜೊತೆಗೇ ಅರ್ಥ ನಿರ್ಮಾಣದ ನಿಯಮಗಳೂ ಆಯಾ ಭಾಷೆಗೇ ವಿಶಿಷ್ಟವಾದವು. ಇಂಗ್ಲಿಷಿನ ಕ್ರಿಯಾಪದಗಳು ಕನ್ನಡಕ್ಕೆ ಬಂದಾಗ ನಾಮಪದಗಳಾಗಿ ಬದಲಾಗುತ್ತವೆ. ಕ್ಯಾಚ್ ಇಂಗ್ಲಿಷಿನ ಕ್ರಿಯಾಪದ, ಕನ್ನಡದಲ್ಲಿ ಅದು ನಾಮಪದವಾಗಿ ಹಿಡಿ ಎಂಬ ಕ್ರಿಯಾಪದ ಸೇರಿದರೇ ಅರ್ಥಪೂಣF. ಈಕರಣ ಅನ್ನುವುದು ಕನ್ನಡ ಇತ್ತೀಚೆಗೆ ಬಳಸುತ್ತಿರುವ ಪ್ರತ್ಯಯ. ನೀವು ಉದಾಹರಿಸಿರುವ ಗ್ಲೋಬೀಕರಣ ಅನ್ನುವುದು ಗ್ಲೋಬ್ ಎಂಬ ಪದವನ್ನು ಕನ್ನಡವಾಗಿಸಿಕೊಳ್ಳುವ ಒಂದು ಉದಾಹರಣೆ.
ಈ ಬಗ್ಗೆ ಮತ್ತೆ ಯಾವಾಗಲಾದರೂ ಬರೆಯುವೆ.

ನಾಗಭೂಷಣ

  • Login or register to post comments
  • link
  • Email this ಪ್ರತಿಕ್ರಿಯೆ
March 23, 2006 - 12:10pm — shreekant.mishrikoti

ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ

shreekant.mishrikoti's picture

ಲೆನ್ಸ್ ಗೆ ಕನ್ನಡದಲ್ಲಿ ನಾವು ರಾವುಗಾಜು ಎಂದು ಹೇಳುತ್ತೇವೆ. (ಧಾರವಾಡದಲ್ಲಿ) . ರಾವಾಗಿ ( ದೊಡ್ಡದಾಗಿ) ತೋರಿಸುವ ಗಾಜು . ಅದಕ್ಕೆ ನಾವು ಮಸೂರಕ್ಕಾಗಲೀ ಲೆನ್ಸ್‍ಗಾಗಲೀ ಮೊರೆ ಹೋಗಬೇಕಿಲ್ಲ. ಇಂಗ್ಲೀಷಿಗೆ ಕನ್ನಡಪದ ತೋಚದಿದ್ದಾಗ ನಮಗೆ ಒಂದು ಸುಲಭ ಉಪಾಯ ಇದೆ . ಏನೆಂದರೆ - ಆ ಶಬ್ದಕ್ಕೆ ಹಿಂದೆ ನಾವು ಏನನ್ನುತ್ತಿದ್ದಿವಿ, ನಮ್ಮ ಅಪ್ಪ ಅಮ್ಮ /ಅಜ್ಜ ಮುತ್ತಜ್ಜ ಏನನ್ನುತ್ತಿದ್ದರು? ಹಾಗೂ ಒಂದು ವೇಳೆ ಇಲ್ಲದಿದ್ದರೆ ಇಂಗ್ಲೀಷ್ ಅರಿಯದವ ಆ ವಸ್ತುವಿಗೆ ಯಾವ ಶಬ್ದ ಉಪಯೋಗಿಸಬಹುದು? - ಈ ಪ್ರಕ್ರಿಯೆಯಲ್ಲಿ ಮರೆತು ಹೋದ ಹಳೆಯ ಮಾತು ನೆನಪಾಗುವದು , ಅಥವಾ ಅಪ್ಪಟ ಕನ್ನಡದ್ದೇ ಶಬ್ದ ದೊರಕುವದು. ನಾವು ಈಗ news ಕೇಳಿದರೆ ಹಿಂದಿನವರು ವಾರ್ತೆ/ ಸುದ್ದಿ ಕೇಳುತ್ತಿದ್ದರು . ನಮ್ಮ morning , evening ಅವರಿಗೆ ಮುಂಜಾನೆ/ಬೆಳಿಗ್ಗೆ , ಸಂಜೆ/ಸಾಯಂಕಾಲ ಆಗಿದ್ದವಲ್ವೇ? ಇತ್ಯಾದಿ -ಪ್ರಾದೇಶಿಕ ವ್ಯತ್ಯಾಸಗಳಿರಬಹುದು ಅಷ್ಟೆ. ದಯವಿಟ್ಟು ನಾನು ಹಿಂದೆ ಬರೆದ ಈ ಲೇಖನ ನೋಡಿರಿ http://www.ourkarnataka.com/Articles/speak_kannada.htm ಇದು ಮೂರು-ನಾಲ್ಕು ವರ್ಷಗಳ ಹಿಂದೆ ಬರೆದಿದ್ದರೂ ಅದರ ಲಿಂಕ್ ಇನ್ನೂ www.ourkarnaTaka.com ಮುಖಪುಟದಲ್ಲೇ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
July 29, 2005 - 10:46pm — raghavendraks

shudda kannada

raghavendraks's picture

Kannada pada adu bhasheyalli sweet agi kelisutte anno matu nurrakke nuru sari.

Baravanigeyelli kannadada chanda irode adu bhase balasadiruvudu.

  • Login or register to post comments
  • link
  • Email this ಪ್ರತಿಕ್ರಿಯೆ
July 31, 2005 - 9:42am — pavanaja

ಪ್ಯೂರ್ ಕನ್ನಡ

pavanaja's picture

ಈಗ ಕನ್ನಡಿಗರಿಗೆ ಇಂಗ್ಲೀಶ್ ಭಾಷೆಯ ಪಿತ್ತ ಸ್ವಲ್ಪ ಜಾಸ್ತಿಯೇ ಇದೆ. ಕನ್ನಡ ಭಾಷೆಯಲ್ಲಿ ಲಭ್ಯವಿರುವ ಪದಗಳಿಗೂ ಇಂಗ್ಲೀಶ್ ಬಳಸುತ್ತಿದ್ದಾರೆ. ಉದಾಹರಣೆಗೆ ಅಪ್ಪ, ಅಮ್ಮ, ತಮ್ಮ, ಅಕ್ಕ, ಮಾವ, ಚಿಕ್ಕಮ್ಮ ಇತ್ಯಾದಿಗಳಿಗೆ ಬದಲಾಗಿ ಡ್ಯಾಡಿ, ಮಮ್ಮಿ, ಬ್ರದರ್, ಸಿಸ್ಟರ್, ಅಂಕಲ್, ಆಂಟಿ, ಇತ್ಯಾದಿ. ಬೆಂಗಳೂರಿನಲ್ಲಿ ಜನ ಬಳಸುವ ಕನ್ನಡ (?) ಭಾಷೆಯ ಒಂದು ಉದಾಹರಣೆ ನೋಡಿ -"ನಾನು ಸಂಡೇ ಇವ್‌ನಿಂಗ್ ಸಿಕ್ಸ್ ಥರ್ಟೀಗೆ ಬರುತ್ತೀನಿ". ಇದನ್ನು ಕನ್ನಡ ಮಿಶ್ರಿತ ಇಂಗ್ಲೀಶ್ ಎನ್ನಬೇಕೋ, ಇಂಗ್ಲೀಶ್ ಮಿಶ್ರಿತ ಕನ್ನಡ ಎನ್ನಬೇಕೋ ಅಥವಾ ಕಂಗ್ಲಿಶ್ ಎನ್ನಬೇಕೋ ನೀವೇ ಹೇಳಿ.

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
September 14, 2005 - 2:31pm — beluru

ಆಡುಭಾಷೆಯಾಗಿ ಕನ್ನಡ

beluru's picture

ಪ್ರಿಯರೆ,
ನೀವು ಒಳ್ಳೆಯ ಚರ್ಚೆಯನ್ನು ಆರಂಭಿಸಿದ್ದೀರಿ.ಆದರೆ ಕನ್ನಡದ ಆಡುಭಾಷೆಯ ಹಾಗೇ ಲಿಖಿತ ಸಾಹಿತ್ಯವೂ ಇರಲೇಬೇಕು ಎಂಬ ನಿಯಮವೇನಿಲ್ಲ ತಾನೆ? ಅಥವಾ ಹಾಗೆ ಕನ್ನಡ ಮಾತಾಡುವವರೆಲ್ಲರೂ ಗ್ರಾಂಥಿಕ ಭಾಷೆಯನ್ನು ಬಿಟ್ಟೇ ಬಿಟ್ಟಿದ್ದಾರೆ ಎಂದೂ ಹೇಳಲಾಗುವುದಿಲ್ಲ. ಎರಡೂ ಬಗೆಯ ಪ್ರವಾಹಗಳು ಕನ್ನಡವೇನು, ಎಲ್ಲ ಭಾಷೆಯಲ್ಲಿಯೂ ಇರಲೇಬೇಕು. ಈ ಚರ್ಚೆಯನ್ನು ಇನ್ನಷ್ಟು ಬೆಳೆಸುವುದಾದರೆ, ನೋಡಿ: ಸರ್ದಾರ್ಜಿ ಬಗ್ಗೆ ಎಷ್ಟೆಲ್ಲ ಜೋಕ್‌ಗಳಿವೆ. ಹಾಗೆಂದು ಅವನ್ನೆಲ್ಲ ಪತ್ರಿಕಾ ಮಾಧ್ಯಮದಲ್ಲಿ ತಂದು, ಸಿಖ್ಖರೆಂದರೆ ಹೀಗೆ ಎಂದು ಲೇವಡಿ ಮಾಡುವುದು ಎಷ್ಟು ಸರಿ? (ಹಾಗೆ ಮುದ್ರಣ ಮಾಡುತ್ತಿರುವವರ ಜಾತಿಯ ಆಧಾರದಲ್ಲಿ ಸಾಕಷ್ಟು ಜೋಕ್‌ಗಳು ನನಗೆ ಗೊತ್ತಿದೆ. ಹಾಗೆಂದು ಅವನ್ನೂ ಮುದ್ರಣ ಮಾಡಲು ಸದರಿ ಲೇಖಕರು (?) ಒಪ್ಪುವರೆ? ) ಜೋಕ್‌ಗಳು ಸಾಮಾನ್ಯವಾಗಿ ಇರುವುದೇ ಆಡುಭಾಷೆಯಲ್ಲಿ ಪ್ರವಹಿಸಲು ಎಂಬುದು ನನ್ನ ಅನಿಸಿಕೆ. ಅಶ್ಲೀಲ ಜೋಕ್‌ಗಳನ್ನು ಎಲ್ಲಾ ಸಲವೂ ಮುದ್ರಿಸಲು ಬರುವುದಿಲ್ಲ. ಹಾಗಂತ ಅವು ಚಾಲ್ತಿಯಲ್ಲಿ ಇರಲು ಯಾವುದೇ ಅಡ್ಡಿ ಇಲ್ಲವಲ್ಲ?
ನನ್ನ ಮಾತಿನ ಜಾಡು ಇಷ್ಟೆ: ಕನ್ನಡದಲ್ಲಿ ಆಡುಭಾಷೆಯ ಹಾಗೆಯೇ ಶಿಷ್ಟ, ಪ್ಯೂರ್ ಕನ್ನಡಕ್ಕೂ ಬೆಲೆ, ಮಾನ್ಯತೆ ಇದ್ದೇ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 23, 2006 - 6:40am — venkatesh

ಒ. ಎಲ್. ಎನ್ ಸ್ವಾಮಿಯವರಿಗೆ

venkatesh's picture

ಒ. ಎಲ್. ಎನ್ ಸ್ವಾಮಿಯವರಿಗೆ ನಮಸ್ಕಾರ.
ನೀವು ಹೆಳುವುದು ಅಕ್ಶರ ಶಹ ನಿಜ. ಏಕೆ ಈ ಮಡಿವಂತಿಕೆ ? ನೋದಿ ನಮ್ಮ ಅನಂತಮೂರ್ಥಿಗಳು ಹೇಳಿದಂತೆ ಎಲ್ಲ ಜಗತ್ತಿನ ಭಾಶೆಗಳನ್ನೂ ನಾವು ಕನ್ನಡಿಕರಿಸ ಬಹದು. ಉದಾ ; ಕಾರು, ಪೆನ್ನು, ಕಪ್ಪು, ಪೇಪರ್ರು ಇತ್ಯಾದಿ.
ನೀವು ನೆನೆಪಿಸಿಕೊಳ್ಳಿ, ಕೈಲಸಂ ರವರ ಎಲ್ಲ ನಾಟಕದಲೂ ಈ ಮಡಿವಂತಿಕೆ ಯಿಂದ ಹೊರತಾದವುಗಳೆ ಅಲ್ಲವೆ ! ಉದಾ: 'ತಾಳಿ ಕಟ್ಟೋದ್ ಕೂಲಿನೇ ? ಹೋಮ್ ರೂಲು, ಇತ್ಯಾದಿ.
ನಾನು ನ್ಯಾಶನಲ್ ಕಾಲೇಜಿ ಹೋಗುತ್ತಿದ್ದಗ ಅವರ ಮ್ಯಾಗಜೈನ್ ನಲ್ಲಿ ಒಂದು ಪದ್ಯ ನೋದಿದ್ದೆ. ಅದು ಹೀಗೆ ಪ್ರರಂಭ ವಾಗುತ್ತೆ ನೋದಿ. " ಮಿದ್ ನೈಟ್ ಗಾಳಿ ಜೋರಗಿತ್ತು ರೂಮ್ ನಲಿ ಡಾರ್ಕ್ನೆಸ್ ತುಂಬಿತ್ತು.....ಇತ್ಯಾದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಬಳಸಿ, ಉಳಿಸಿ, ಕಲಿಸಿ
  • ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು
  • ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
  • ಕನ್ನಡ ಉಳಿಸುವಿಕೆ: ಭಿನ್ನ ನಿಲುವು
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
ಇನ್ನಷ್ಟು

ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator