ಎಲ್ಲರಿಗು ದೀಪಕ್ ಮಾಡುವ ನಮನಗಳು
ನನ್ನ ಹೆಸರು ದೀಪಕ್. ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆದರೆ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ.
ನಾನು ಸಾಫ್ಟ್ ವೇರ್ ಎಂಜಿನೀಯರಾಗಿದ್ದು, ಇತ್ತೀಚಿಗೆ ನ್ಯೂ ಯಾರ್ಕಿನಲ್ಲಿ ಇದ್ದೇನೆ.
ಎಲ್ಲರಿಗು ಸ್ವಾತಂತ್ರೋತ್ಸವದ ಶುಭಾಶಯಗಳು!!

- Login or register to post comments
- 516 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಸ್ವಾಗತ ...ಸುಸ್ವಾಗತ ...
-ನಿಮ್ಮ ಬೆಂಬಿಡದ ಬೇತಾಳ .....
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ನಿಮಗೆ ಅಂಜಿಯೇ ನ್ಯು-ಯಾರ್ಕಿಗೆ ಹೋಗಿದಾರೇನೋ? ಅಲ್ಲೂ ಬಿಡಲ್ವಾ?
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಸಾರ್ ... [strong]ಅಂಜಿಯೇ[/strong] ಅಂದರೇನು ??
-ನಿಮ್ಮ ಬೆಂಬಿಡದ ಬೇತಾಳ .....
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಅವರ ಮಾತಿನ ಅರ್ಥ ನನಗೆ ಗೊತ್ತಾಯಿತು.
"ಅಂಜಿಕೆ" ಅಂದರೆ "ಹೆದರುವುದು". ನಿಮ್ಮಿಂದ ಹೆದರುಕೊಂಡೆನೇ, ನಾನು ನ್ಯೂ ಯಾರ್ಕ್ ಗೆ ಬಂದೆ ಅಂತ...
ಅದರೆ ಹಾಗೆನಿಲ್ಲ ಸರ್.. ಸಾಧ್ಯವಿದ್ದಿದ್ದರೆ.. ನಾನು ಬೆಂಗಳೂರಿನಲ್ಲೇ ಇರ್ತಿದ್ದೆ
ನನ್ನ ಚರ್ಚೆಯ "ದಾರ"ಕ್ಕೆ ಉತ್ತರ ನೀಡಿದ ನಿಮಗೆ ವಂದನೆಗಳು.
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
threadಗೆ ನಾವು ಇಲ್ಲಿ ಸಾಮಾನ್ಯವಾಗಿ ’ಎಳೆ’ ಎಂದು ಬಳಸಿಕೊಳ್ಳುತ್ತಿದ್ದೀವಿ...
ಇದು ಜಾವ ತ್ರೆಡ್ಗೂ ಹೊಂದುವುದು..
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಹೌದು.. "ದಾರ"ಕ್ಕಿಂತ "ಎಳೆ" ಅನ್ನೋದೆ ಪ್ರಾಪ್ತ ಅನಿಸುತ್ತೆ.
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಏನು ಪ್ರಾಪ್ತ ಅಂದ್ರೆ ಇಲ್ಲಿ?
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಪ್ರಾಪ್ತ ಅಂದರೆ ಉಚಿತ ಎಂದಲ್ಲವೆ? "ಸಂದರ್ಭಕ್ಕೆ ಹೊಂದುವ" ಅಲ್ಲವೆ? ಇಂಗ್ಲಿಷಿನಲ್ಲಿ appropriate
ತಪ್ಪಿದ್ದರೆ ತಿಳಿಸಿ... ಹಾಗೆಯೇ .. ನನ್ನ ಇನ್ನೊಂದು ಉತ್ತರದಲ್ಲೂ ಈ ಪದ ಬಳಸಿದ್ದಕ್ಕೆ ಕ್ಷಮಿಸಿ
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಪದಕೋಶ ಹುಡುಕಿ ನೋಡಿದೆ... ಪ್ರಾಪ್ತ ಅಂದರೆ "ದೊರಕುವುದು" ಎಂದರ್ಥ!
ನಾನು "ಅಪ್ರಾಪ್ತ"(inappropriate) ಎಂಬ ಪದವಿನ ವಿರುದ್ಧಾರ್ಥ "ಪ್ರಾಪ್ತ" ಎಂದು ತಪ್ಪು ತಿಳಿದಿದ್ದೆ.
ಮಹೇಶ್, ಇದೇ ರೀತಿ ನನ್ನ ಕನ್ನಡ ಸುಧಾರಿಸಲು ಸಹಾಯ ಮಾಡಿ
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ನೀವು ಸಹಜವಾಗೇ(natural) ಬರೆಯಿರಿ, ಆಗ ನೀವು ಒರೆಗಂಟು/ನಿಗಂಟು ನೋಡದೇ ಬರೆಯುಂತೇ ಆಗುವುದು...
ಅಂದ್ರೆ, ಆರಾಮಾಗಿ, ಮಾತಾಡುವಂತೇ ಬರೇರಿ.
ನಿಮ್ಮ ಕನ್ನಡದ ಮೇಲ್ ಆಗಲು ನಾನು ನೆರವಾದ್ರೆ, ನನ್ನ ಪುಣಿಯ(ಪುಣ್ಯ)
ಅಮೆರಿಕ ಇಂಗಲೀಸು ಏಕೆ ನಂಗೆ ಇಸ್ಟ ಗೊತ್ತಾ? ಅದು ನಾವು ಕಲಿತ ಬ್ರಿಟೀಸ್ ಇಂಗಲೀಸಂತೆ ಗಿಲೀಟಲ್ಲ/ಕೃತಕವಲ್ಲ.
ಹಾಗೆ ನಮ್ಮ ಕನ್ನಡವೂ ಗಿಲೀಟಾದ್ರೆ, ಚನ್ನಾಗಿರಲ್ಲ, ಮತ್ತೇ ಬರೆಯೊರ್ಗೂ, ಓದೊರ್ಗೂ ತುಂಬಾ ಕಸ್ಟ.!!
( ನುಡಿವಲ್ಮೆ/ಭಾಷಾಪಂಡಿತ್ಯ ತೋರಿಸಿಕೊಳ್ಳಕ್ಕೆ ಹಲವ ಸರತಿ ಹೀಗೆ ಗಿಲೀಟು ತುಂಬಬೇಕು
)
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಬೇತಾಳಯ್ಯ ಕೇಳೇದು ಒಂದು ಕಡೆಯಿಂದ ಸರಿ..
ಅಂಜಿಯೇ ಅಲ್ಲ ಅಂಜೇ ಅಂತ ಹೇಳೋದು ಸರಿ...
ಮಾಡಿ + ಏ = ಮಾಡೇ
ಕೇಳಿ + ಏ = ಕೇಳೇ
ಅಂಜಿ + ಏ = ಅಂಜೇ...
ಕೊಟ್ಟು + ಏ = ಕೊಟ್ಟೇ..
ಈ ಬಗೆಯಲ್ಲಿ ಮಾಡಿಯೇ, ಕೊಟ್ಟಿಯೇ, ನೋಡಿಯೇ ಅನ್ನೋದು ಒಂದು ಕಡೆಯ ಆಡುನುಡಿ ಇರಬಹುದು!!
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ನಿಮ್ಮ ತರ್ಕದ ಪ್ರಕಾರ ನೀವು ಹೇಳೋದು ಸರಿಯೇ..
ಆದರೆ ನನ್ಗೆ ತಿಳಿದ ಹಾಗೆ, ಕೆಲವು ಕಡೆ "ಯೇ" ಸೇರಿಸಬೇಕು, ಕೆಲವು ಕಡೆ "ಏ" ಸ್ವರ ಜೋಡಿಸಬೇಕು. (ನನ್ನ ತಿಳುವಳಿಕೆ ತಪ್ಪಾಗಿರಲೂಬಹುದು)
ಇವೆರೆಡರಲ್ಲಿ, ಯಾವುದು ಹೆಚ್ಚು ಕೇಳಪಟ್ಟಿದ್ದೀವಿ?
"ಈ ಕೆಲಸ ಮಾಡಿಯೇ ಮನೆಗೆ ಹೋಗ್ತೀನಿ"
"ಈ ಕೆಲಸ ಮಾಡೇ ಮನೆಗೆ ಹೋಗ್ತೀನಿ"
ಅಡುಭಾಷೆಯಲ್ಲಿ, "ಯೇ" ಪ್ರಾಪ್ತ ಅನಿಸುವ ಇನ್ನು ಕೆಲವು ಉದಾಹರಣೆಗಳು: ನೋಡಿಯೇ, ಹೋಗಿಯೇ, ಮುಗಿಸಿಯೇ
ಯಾವ ಪದಗಳು "ಉ" ಸ್ವರದಿಂದ ಮುಗಿತಾವೊ, ಅಂಥ ಪದಗಳಿಗೆ, ನೀವು ಹೇಳಿದ ಹಾಗೆ, "ಏ" ಸೇರಿಸಲೇ ಬೇಕು.
ಕೊಟ್ಟು + ಏ = ಕೊಟ್ಟೇ
ಕೊಂದು + ಏ = ಕೊಂದೇ
ಬರೆದು + ಏ = ಬರೆದೇ
ಇದು ಆಡು ಭಾಷೆಯ ಮೇಲೂ ಅವಲಂಭಿಸಿರುತ್ತದೆ. ಏನಂತೀರ?
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
ಹಾಗಲ್ಲ!!
ಕನ್ನಡದ ಸಂಧಿ-ನೇಮಗಳಂತೆ..
ಕೊಟ್ಟು + ಏ = ಕೊಟ್ಟೇ ( ಉ+ಏ = ಏ )
ಮಾಡಿ + ಏ = ಮಾಡೇ, ಮಾಡಿಯೇ ಅಲ್ಲ ( ಇ + ಏ = ಏ )
ಹಾಗೇ ಅಲ್ಲಿ + ಏನು = ಅಲ್ಲೇನು, ಅಲ್ಲಿಯೇನು ಅಲ್ಲ!!
ಆದುದರಿಂದ ಮಾಡೇ, ನೋಡೇ ಇವೇ ಸರಿಯಾದ ರೂಪಗಳು ಎನ್ನಬಹುದು. ಮಾಡಿಯೇ, ಕೇಳಿಯೇ ಇವಕ್ಕೆ ಯಾವ ಬಿಯಗರಣ/ವ್ಯಾಕರಣ ನಿಯಮವಿದೆ ಹೇಳಿರಿ?( ನೀವು ಹೇಳಿದ ನೇಮ ಇಲ್ಲ) ನನಗೆ ಯಾವ ನೇಮ ದೊರೆಯದ ಓಸುಗರ/ಕಾರಣ ಇವು ಬರೀ ಆಡುನುಡಿಯವು ಅಂದೆ.
ನೀವು ಬಳಸು ಪ್ರಾಪ್ತ ಎನ್ನು ಸಂಸ್ಕೃತ ಪದದಿಂದ ಬಲು ಗೋಜಲಾಗುತ್ತಿದೆ!! ಪ್ರಾಪ್ತ ಅಂದರೆ ದೊರಕಿದ ಅಂತವೇ ಹೆಚ್ಚುಹರಡಿದ ಹುರುಳು ಇರುವುದು. ಅದಕ್ಕೆ appropriate ಅನ್ನೋದಕ್ಕೆ ಕನ್ನಡದಲ್ಲಿ ’ತಕ್ಕ’ ಅಂತ ಒರೆ/ಪದವುಂಟು.
ಉ: ಎಲ್ಲರಿಗು ದೀಪಕ್ ಮಾಡುವ ನಮನಗಳು
" ಹೋದ್ಯ ಬೇತಾಳ ಅಂದ್ರೆ, ಬಂದೆ ಗವಾಕ್ಷಿಲಿ " - ಅನ್ನೊ ಹಾಗೆ
-ನಿಮ್ಮ ಬೆಂಬಿಡದ ಬೇತಾಳ .....