Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

August 16, 2007 - 7:06am — savithru

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!!
ಇದು ಕಾರಣ ಕೂಡಲ ಚೆನ್ನ ಸಂಗಣ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು

ಇಲ್ಲಿ

"ಬೆಂದ ನುಲಿಯಾ ಸಂ ಧಿಸಬಹುದೆ?" ಎಂದರೆ ಏನು?
"ಸಂದೇಹ" ಎಂದರೆ ಏನು?
ಹಾಗೂ ಪೂರ್ಣ ವಚನದ ವಿಷಯವನ್ನು ವಿಷಾದ ಪಡಿಸಿ.

ಧನ್ಯವಾದಾಗಲೊಂದಿಗೆ
ಸವಿತೃ

‹ ಶಂಕರ ಮತ್ತು ಅಲ್ಲಮ ಪ್ರಭು ಅರ್ಧಸತ್ಯದ 'ಆವರಣ' ›
  • ತತ್ವಜ್ಞಾನ
Ornamental seperator
  • Login or register to post comments
  • 832 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 16, 2007 - 11:57pm — ಸಂಗನಗೌಡ

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಸಂಗನಗೌಡ's picture

’ನುಲಿ’ ಎಂದರೆ ತಿರುಚಿದ, ಹಿಂಡಿದ ಮುಂತಾದ ತಿಳಿವಿದೆ. ಹೊಟ್ಟೆ ಹಿಂಡಿದಂತಾದ ನೋವು ಅನ್ನುವ ಅರಿಮೆಯೂ ಇದೆ. ಅದರಂತೆ ಬೆಂದ ನುಲಿಯಾ ಸಂದಿಸಬಹುದೇ? ಅಂದರೆ ಒಮ್ಮೆ ಪಟ್ಟ ನೋವನ್ನು ಮತ್ತೆ ಮತ್ತೆ ಪಡಲಾರೆವು, ಅದರಲ್ಲಿ ನೋವಿದೆ ಅಂತ ತಿಳಿದಾಗ ಅದರಿಂದ ದೂರವಾಗುತ್ತೇವೆ.

ಪಂಚಾಕ್ಷರಿಯಲ್ಲಿ ದಗ್ಧವಾದ( ಅದು ಧಗ್ದ/ಧಗ್ಧ ಅಲ್ಲಾ, ದಗ್ಧ) ನಿರ್ದೇಹಿಗೆ ಸಂದೇಹವುಂಟೆ?
ಅಂದರೆ ಪಂಚಾಕ್ಷರ(ಓಂ ನಮಃ ಶಿವಾಯ)ದಲ್ಲಿ ನಿಶ್ಯಂಕಿತರಾದ, ನಿರ್ದೇಹಿಗೆ(ಮೈಇಲ್ಲದ ಅಂದರೆ ಆತ್ಮಕ್ಕೆ) ಸಂದೇಹ, ಸಂಶಯಗಳು ಕಾಡವು.

ದಗ್ಧ ಅಂದರೆ ಸುಟ್ಟು ಹೋದ, ನಿಶ್ಯಂಕಿತವಾದ ಎಂಬ ತಿಳಿವುಗಳಿವೆ. http://baraha.com/nighantu

ಈ ವಚನದ ಒಟ್ಟಾರೆ ತಿಳಿವು,

ಅಟ್ಟುದನಡುವರೇ?, ಒಮ್ಮೆ ಅಟ್ಟುದನ್ನು ಮತ್ತೆ ಒಲೆಯ ಮೇಲಿಟ್ಟು ಅಡುವದಿಲ್ಲ, ಸುಟ್ಟುದ ಸುಡುವರೆ? ಇಲ್ಲ, ಸುಟ್ಟು ಬೂದಿಯಾದುದನ್ನು ಮತ್ತೆ ಸುಡಲಾಗದು, ಬೆಂದ ನುಲಿಯಾ ಸಂಧಿಸಬಹುದೇ? ಪಟ್ಟ ನೋವನ್ನು ಯಾರೂ ಮತ್ತೆ ಬಯಸಲಾರರು, ಪಂಚಾಕ್ಷರಿಯಲ್ಲಿ ದಗ್ಧವಾದ ನಿರ್ದೇಹಿಗೆ ಸಂದೇಹವುಂಟೆ? ಓಂ ನಮಃ ಶಿವಾಯ ಮಂತ್ರದಿಂದ ನಿಶ್ಯಂಕಿತರಾದವರು ಮತ್ತೆ ಸಂದೇಹಪಡಲಾರರು. ಇದು ಕಾರಣ ಕೂಡಲ ಸಂಗನ ಶರಣರು ಭ್ರಾಂತು ಸೂತಕ ಕ್ರೀಯಾವಿಹಿತರು, ಹೀಗೆ ಕೂಡಲ ಸಂಗನ ಶರಣರು ಭ್ರಾಂತಿಗಳಿಂದ ಕೂಡಿದ ಕರ್ಮಗಳಿಂದ ವಿಹಿತರು/ಮುಕ್ತರು.

  • Login or register to post comments
  • link
  • Email this ಪ್ರತಿಕ್ರಿಯೆ
August 17, 2007 - 12:00pm — Khavi

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

Khavi's picture

ಇದರ ಒಳ ಅರಿವು ನನಗೂ ಗೊತ್ತಿರಲಿಲ್ಲ ..
ಸಂಗನರೆ ತಿಳಿಸಿದ್ದಕ್ಕೆ ನನ್ನಿ..

  • Login or register to post comments
  • link
  • Email this ಪ್ರತಿಕ್ರಿಯೆ
August 17, 2007 - 8:14pm — savithru

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

savithru's picture

ಸಂಗನ ಗೌ ಡರಿಗೆ ದನ್ಯವಾದಗಳು.

ನಿಮ್ಮ ವಿವರಣೆ ನನಗೆ ಈ ವಚನವನ್ನು ಅರ್ಥ ಮಾಡಿಕೊಳ್ಳಲು ತುಂಬಾ ನೆರವಾಯಿತು.

ಇಲ್ಲಿ ಇನ್ನೊಂದು ಪದವಿದೆ..."ಸಂದೇಹ".. ಎಂಬುದು... ಇದರ ಮೇಲೆ ಬಲ್ಲವರು ಇನ್ನೂ ಹೆಚ್ಚು ಬೆಳಕಣ್ನ್ನ್ ಚೆಲ್ಲಬೆಕೆಮ್ದು ನನ್ನ ಬಯಕೆ.
ಈ ಪದವು ಅಧ್ಯಾತ್ಮಕ್ಕೆ ..ದೈವಕ್ಕೆ..ಪರತತ್ವಕ್ಕೆ ಸಂಬಧ ಪಟ್ಟೆದ್ದೆಮ್ದು ನನ್ನ ತಿಳುವಳಿಕೆ.

ನನ್ನ ಪ್ರಕಾರ "ಅಧ್ಯಾತ್ಮದಲ್ಲಿ "ಸಂದೇಹ" ದ ವಿರುದ್ಧ ಪದ "ಅರಿವು" ಆಗಬಹುದು.

ಇಲ್ಲಿ ಸಂದೇಹ ಯಾವುದರ ಬಗ್ಗೆ.. ಎಂತಹ ಸಂದೇಹ?.. ಅರಿವು ಎಂದರೆ ಯಾವುದರ ಅರಿವು? ಅರಿವು ಎಂದರೆ ಏನು?

ಶರಣರಲ್ಲಿ "ಅರಿವು" ಎಂದರೆ ಏನಾಗಿತ್ತು ಎಂಬ ಜಿಜ್ಞಾಸೆ ನನ್ನಲ್ಲಿ..

ತಿಳಿದವರು ಅರಿವಿನ ಬಗ್ಗೆ ಬೆಳಕ ಚೆಳ್ಳಬೇಕೆಂದು ನನ್ನ ಕೋರಿಕೆ.

ಸವಿತೃ
ಆರಿವೇ ಗುರು!

  • Login or register to post comments
  • link
  • Email this ಪ್ರತಿಕ್ರಿಯೆ
August 18, 2007 - 3:13pm — gc

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

gc's picture

ಸಂದೇಹ ಅರಿವಿನ ವಿರುದ್ಧ ಪದವಲ್ಲ. ಸಂದೇಹ ನಂಬಿಕೆಯ ವಿರುದ್ಧದ ಪದ, ಅದರಲ್ಲೂ ಅಂಧಶ್ರದ್ಧೆಗೆ ವಿರುದ್ಧವಾದದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
August 18, 2007 - 4:06pm — savithru

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

savithru's picture

gc ಯವರೇ ತಮ್ಮ ಉತ್ತರಕ್ಕೆ ವಂದನೆಗಳು.

ನಾನು ಏಕೆ ಅರಿವನ್ನು ಸಂದೇಹಕ್ಕೆ ವಿರುಧ್ಧ ಪದವಾಗಿ ಬಳಸಿದೆ ಎಂದರೆ "ಅರಿತಾಗ ಸಂದೇಹ ಇರುವುದಿಲ್ಲ".

ಅರಿವುಡಕ್ಕಿಂತ ಮುಂಚೆ ನಮಗೆ ಸಂದೇಹ!! "ಅದು" ಇದೆಯೋ ಇಲ್ಲವೋ? "ಅದು ಒಂದೋ ..ಎರಡೋ? "ಅದು" ಸಾಕಾರವೋ ನಿರಾಕಾರೊವೋ? "ಅದು" ಸಗುಣವೋ ನಿರ್ಗುಣವೋ?.. ಈಗೇ...

ಅರಿತ ನಂತರ ನಂಬಿಕೆ!!! ಅಲ್ಲದಿದ್ಧರೆ ಅದೊಂದು ಮೂಡ ನಂಬಿಕೆ? !

ಈಗ ವಚನಕ್ಕೆ ಬರೋಣ..

ವಚನದಲ್ಲಿ ಹೀಗಿದೆ..." ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ? " ...

ನನ್ನ ಪ್ರಶ್ನೆ ಏನೆಂದರೆ ಪಂಚಾಕ್ಷರಿಗೂ ಸಂದೇಹಕ್ಕೂ ಏನು ಸಂಬಂಧ? ಇಲ್ಲಿ ಸಂದೇಹ ಯಾವುದರ ಬಗ್ಗೆ ?ಎಂಬುದು..ಎಂತ ಸಂದೇಹ ಎಂಬುದು//

ನನ್ನ ಈ ಪ್ರಶ್ನೆಗಳು ನಿಮಗೆ ಸಿಲ್ಲಿ ಅನ್ನಿಸಬಹುದು.. ದಯವಿಟ್ಟು ಕ್ಷಮಿಸಿ... ಆದರೆ ಅರಿತವರು ದಯವಿಟ್ಟು ಅರುಹಿ ..

ನಿಮ್ಮ ಉತ್ತರಕ್ಕೆ ಧನ್ಯವಾದಗಳು!!
ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
August 18, 2007 - 4:33pm — savithru

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

savithru's picture

ಹೀಗೆ ಒಂದು ಯೋಚನೆ ಬಂತು. ಏಷ್ಟ್ರ ಮಟ್ಟಿಗೆ ಸರಿನೊ ಗೊತಿಲ್ಲ..

ಅರಿಯುವ ವರೆಗಸ್ಟೇ ಅದು "ನಂಬಿಕೆ".
ಅರಿತ ಬಳಿಕ ಅದು "ಅರಿವು" , "ಜ್ಞಾನ", "ತಿಳಿವು" ?

ಹೌದಾ.. ಹಾಗದರೆ ನಂಬಿಕೆಗಳೆಲ್ಲವೂ ಮೂಡ ನಂಬಿಕೆಗಳ?

ಏನೋ ತಿಳಿದವರು ಹೇಳ್‌ಬೇಕು!!

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
August 18, 2007 - 5:02pm — HV SURYANARAYAN...

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

HV SURYANARAYANA SHARMA's picture

ಅಹುದು ಅಹುದು ನಂಬಿಕೆಗಳೆಲ್ಲವೂ ಮೂಢನಂಬಿಕೆಗಳೆ, ನಾವು ಅರಿವಿಲ್ಲದೆ ಒಪ್ಪುವುದೇ ನಂಬಿಕೆ, ಅರಿತೊಡನೆ ನಂಬಿಕೆಯಜಾಗದಲ್ಲಿ ಜ್ಞಾನ ಕೂತಿರುತ್ತದೆ ಎಂದಿದ್ದಾರೆ ಶ್ರೀ ರಾಮಕೃಷ್ಣ ಪರಮಹಂಸರು.

  • Login or register to post comments
  • link
  • Email this ಪ್ರತಿಕ್ರಿಯೆ
August 19, 2007 - 6:42pm — ಸಂಗನಗೌಡ

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಸಂಗನಗೌಡ's picture

ನನ್ನ ಪ್ರಶ್ನೆ ಏನೆಂದರೆ ಪಂಚಾಕ್ಷರಿಗೂ ಸಂದೇಹಕ್ಕೂ ಏನು ಸಂಬಂಧ?

ನಿಮ್ಮ ಕೇಳಿಕೆ ಸರಿಯಾಗಿದೆ ಸವಿತ್ರುಗಳೇ. ಇಲ್ಲಿ ಪಂಚಾಕ್ಸರಿಗೂ ಸಂದೇಹಕ್ಕೂ ಏನು ನಂಟು? ಅನುಮಾನ ಅಂದರೆ ಯಾವುದರ ಬಗ್ಗೆಯೇ ಆಗಲಿ ನನ್ನಿ(ಸತ್ಯ)ವನ್ನು ತಿಳಿಯುವ ಹಂಬಲ. ಅಂದರೆ ಅನುಮಾನದಲ್ಲಿರುವವ ತಾನು ತನ್ನದು ಎಂಬ ಹಂಗಿನಲ್ಲಿರುವದಿಲ್ಲ. ನನ್ನಿ ತನ್ನಂತೆ ಇರಲಿ, ಇನ್ನಾವುದೇ ಇರಲಿ ಅದನ್ನು ತಿಳಿದುಕೊಳ್ಳಲು ಸಿದ್ದನಿರುತ್ತಾನೆ. ಅವನು ಹಾಗೆ ಸಿದ್ದನಾಗದೇ ಇದ್ದಲ್ಲಿ ನಂಬಿಕೆಯೊಂದನ್ನು ಅಪ್ಪಬೇಕಾಗುತ್ತದೆ. ಅನುಮಾನ ಪಡಲು ಎದೆಗಾರಿಕೆ ಬೇಕು.

ಅನುಮಾನ(ಇಲ್ಲವೇ ಸಂದೇಹ) ಎಂಬುದು ನನ್ನಿಯನ್ನು ತಿಳಿಯುವ ಮುನ್ನ ಇರುವ ದೆಸೆ, ಅದು ತಿಳಿದ ಮೇಲೆ ಅನುಮಾನ ಇರುವದಿಲ್ಲ, ಅದು ನಂಬಿಕೆಯೂ ಅಲ್ಲ, ಅದು ತಿಳಿವು, ಜ್ಞಾನ. ನಂಬಿಕೆಗೂ ತಿಳಿವಿಗೂ ಕೂದಲೆಳೆ ದೂರ, ತಿಳಿವು ಹೊತ್ತು ಹೊತ್ತಿಗೆ ಬದಲಾಗುತ್ತಿರುತ್ತದೆ, ಹೊಸ ತಿಳಿವು ಹಳೆಯ ತಿಳಿವನ್ನು ಸುಳ್ಳು ಮಾಡಿ, ತಿಳಿವನ್ನು ನಂಬಿಕೆಯಾಗಿಸುತ್ತಲೇ ಇರುತ್ತದೆ.

ನಂಬಿಕೆಗೆ ಒಂದು ಬಲ ಇದೆ. ನಾವು ಏನನ್ನು ಬಲವಾಗಿ ನಂಬುತ್ತೇವೆಯೋ ಅದು ಕೆಲ ಸಲ ನನ್ನಿಯಾಗುತ್ತದಂತೆ. ಮುನಿ-ಪುಂಗವರ ನಂಬಿಕೆಗಳಿಗೆ ಅಂತ ಬಲ ಇರುತ್ತದೆ.

ಪಂಚಾಕ್ಸರಿಯು ಸಂದೇಹವನ್ನು ಸುಡುತ್ತದೆ ಅಂಬುದನ್ನು ಎರಡು ಬಗೆಯಲ್ಲಿ ನೋಡಬಹುದು. ೧) ಪಂಚಾಕ್ಸರಿಯು ನನ್ನಿಯನ್ನು ತೋರುವದು ೨) ಪಂಚಾಕ್ಸರಿಯು ನಂಬಿಕೆ ಮೂಡಿಸುವದು

ಈ ಎರಡೂ ತಿಳಿವು ಒಂದು ರೀತಿ ಸರಿಯಾಗಿಯೇ ಇವೆ.

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 2:52pm — benaka

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

benaka's picture

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?

"ಬೆಂದ ನುಲಿಯಾ ಸಂಧಿಸಬಹುದೆ?" ಎಂದರೆ ಏನು?
"ಸಂದೇಹ" ಎಂದರೆ ಏನು?

-> ನುಲಿ ಎಂದರೆ ಇಲ್ಲಿ ಹಗ್ಗ, ನೂಲು, ತಿರುಚಿ ಮಾಡಲ್ಪಟ್ಟ ವಸ್ತು ಎಂದರ್ಥ. ಹಗ್ಗವನ್ನು ಬೇಯಿಸಿದರೆ, ಅದರ ತಿರುಚುಗಳೆಲ್ಲ ಮೆತ್ತಗಾಗಿ, ಬಿಡಿಬಿಡಿಯಾಗಿ ಎಳೆಗಳೆಲ್ಲ ಕಡಿದುಹೋಗಿ ಬಲವಿಲ್ಲದೆ ತುಂಡಾಗಿಬಿಡುತ್ತದೆ. ಅಂತಹ ಬೆಂದ ಹಗ್ಗವನ್ನು ಮತ್ತೆ ಸೇರಿಸಲು ಅಸಾಧ್ಯ; ಆದ್ದರಿಂದಲೇ "ಸಾಧ್ಯವಿಲ್ಲ" ಎಂಬರ್ಥದಲ್ಲಿ ಬೆಂದ ನುಲಿಯ ಸಂಧಿಸಬಹುದೇ? ಎನ್ನುತ್ತಾನೆ ಕವಿ.

-> ಸಂದೇಹ ಎಂಬುದನ್ನು ಇಲ್ಲಿ ಬಹಳ ಬುದ್ಧಿವಂತಿಕೆಯಿಂದ ಬಳಸಲಾಗಿದೆ. ಸಂಸ್ಕೃತದ "ದೇಹ"ಕ್ಕೆ "ಶರೀರ" ಎಂದು ಮಾತ್ರವಲ್ಲದೆ "ಅಂಟಿಕೊಂಡ" ಎಂಬರ್ಥವೂ ಇದೆ. ಪಂಚಾಕ್ಷರೀ ಮಂತ್ರದ ಜಪತಪಾದಿಗಳಿಂದ ಸುಡಲ್ಪಟ್ಟು "ದೇಹವೆಂಬ ಅಂಟನ್ನು" ಕಳೆದುಕೊಂಡವನು ಆತ್ಮಸ್ವರೂಪ!
೧.ಅವನಿಗೆ ಸಂ-ದೇಹ(ಇಹಲೋಕದ ಶರೀರ)ವುಂಟೇ? = ಅವನಿಗೆ ಪುನರ್ಜನ್ಮವುಂಟೇ(ಮಹೇಶರು ಹೇಳಿದ್ದು ಸರಿ)
೨.ಅವನಿಗೆ ಸಂದೇಹ(ಶಂಕೆ, ಅನುಮಾನ) ಉಂಟೇ? = ಅವನಿಗೆ ತಾನೇ ಆತ್ಮನೆಂಬುದರ ಬಗ್ಗೆ ಸಂದೇಹವುಂಟೇ(ಸಂಗನಗೌಡರು ಹೇಳಿದ್ದೂ ಸರಿ)

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 3:05pm — mahesha

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

mahesha's picture

ನಂನಿ

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 5:30pm — ಸಂಗನಗೌಡ

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಸಂಗನಗೌಡ's picture

ಒಳ್ಳೆಯ ಬಿಡಿಕೆ.

  • Login or register to post comments
  • link
  • Email this ಪ್ರತಿಕ್ರಿಯೆ
August 22, 2007 - 6:49pm — savithru

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

savithru's picture

ಶರಣು ಶರಣಯ್ಯ ಬೆನ ನಾಯಕ!!

ಬೆನಕರೆ .. ನಿಮ್ಮ ಉತ್ತರ ನನಗೆ ಒಪ್ಪಿಗೆಯಾಯಿತು!!

ವಂದನೆಗಳು
ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 1:06pm — mahesha

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

mahesha's picture

ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯತಾ!
ಜ್ಞಾನಾಗ್ನಿದಗ್ಧದೇಹಸ್ಯ ನ ಪುನರ್ದಹನಕ್ರಿಯಂ!!

ಇದನ್ನೂ ಯಾರು ಬರೆದುದು? ಚನ್ನಬಸವಣ್ಣರೇ?

ಇಲ್ಲಿ ಪುನರ್ದಹನ ಅಂದ್ರೆ ಮರುಜನುಮ ಅಂತ ನನ್ನ ಅನ್ನಿಸು.

ಯಾರು ಅರಿವಿನ ಬೆಂಕಿಯಲ್ಲಿ ಇಡಿಯಾಗಿ ಬೆಯ್ಯವರೋ ಅವರಿಗೆ ಮರುಹುಟ್ಟು ಇಲ್ಲ. ಅಂದ್ರೆ ಹುಟ್ಟು-ಸಾವುಗಳ ತಿಗುರಿ/ಚಕ್ರದಿಂದ ಬಿಡುಗಡೆ( ಮೋಕ್ಷ )

ನನಗೆ ವಚನದಲ್ಲಿ ಸಂದೇಹವುಂಟೇ ಅಂದ್ರೆ ಈ ಬಿಡುಗಡೆ ಸಿಗುವುದರಲ್ಲಿ ಸಂದೇಹಬೇಡ, ಅದು ನಿಕ್ಕುವ ಎಂದಂತೆ ಅನ್ನಿಸಿತು.!!

ಸಂಗನರು ಚನ್ನಾಗಿ ಬಿಡಿಸಿದ್ದಾರೆ. ಈ ಎಳೆಯನ್ನು ಎಳೆದ ಸವಿತಾಗೆ ನನ್ನಿ!

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 2:07pm — Khavi

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

Khavi's picture

ಮಹೇಶ

ಇದನ್ನು ಚನ್ನಬಸವಣ್ಣನವರು ಬರೆದಿರಲಿಕ್ಕಿಲ್ಲ.

ವೀರಶೈವ ಶರಣರು ಪುರಾಣ, ಭಗವದ್ಗೀತೆ, ಸಂಸ್ಕೃತ ವೇದಾಭ್ಜಾಸಗಳನ್ನು ಮಾಡಿದವರು (ಈಗಲೂ ಕೂಡ ಮಾಡ್ತಾರೆ... ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ, ಅದರ ಮೇಲೆ ಅವರಿಗೆ ತುಂಬ ನಂಬುಗೆ ಮತ್ತು ವಚನಗಳ ಜೊತೆಗೆ ಇವುಗಳ ಮೇಲೂ ಆದರ ಕೂಡ )
ಹೀಗಾಗಿ ತಮ್ಮ ವಚನಗಳಲ್ಲಿ ಆಗಾಗ ಸಕ್ಕದದ ಶ್ಲೋಕಗಳನ್ನು ಬಳಸುವುದು ರೂಢಿ.

  • Login or register to post comments
  • link
  • Email this ಪ್ರತಿಕ್ರಿಯೆ
August 21, 2007 - 2:39pm — mahesha

ಉ: ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

mahesha's picture

ನನ್ನಿ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಸಂದೇಹ.......
  • ಮಳೆ ಎಂದರೆ...
  • ದುಡ್ಡು.
  • ಜಗ ಮೆಚ್ಚು
  • 'ಶಿಲೆಯೊಳಗಣ ಪಾವಕನಂತೆ'
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು

ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator