ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

August 21, 2007 - 11:11am — mahesha

ಮುನ್ನರಿಕೆ: ಇಲ್ಲಿ ಸಕ್ಕದದ ಹಗೆಯಲ್ಲ. ಸಕ್ಕದ ಹರಡಿಕೆಗೆ ನನ್ನ ಬೆಂಬಲವಿದೆ. ಹುರುಪಿರುವವರೆಲ್ಲರೂ ಸಕ್ಕದವನ್ನು ಕಲಿಯಲು ಅನುವಿರಬೇಕು. ಕನ್ನಡದಂತೆ ಸಕ್ಕದದಲ್ಲಿರುವ ಹೇರಳ ಅರಿವನ್ನು ಪಡೆಯಬೇಕು. ಈ ಕಾಣ್ಪಿನಲ್ಲಿ ಸಕ್ಕದವು ಕನ್ನಡದಂತೇ ಒಂದು ಮೇಲ್ಮಟ್ಟದ ನುಡಿಯೇ...

ಮೊನ್ನೆ ನಮ್ಮೂರಲ್ಲಿ ಒಂದು ಕೂಟವಿತ್ತು, ಬೆಂಗಳೂರಿನ ಒಂದು ಸಂಸ್ಕೃತವನ್ನು ಹರಡಿಸಲು ನಿಂತಿರುವ ಗುಂಪಿನವರು ನಡೆಸಿದ್ದು. ಅವರ ಹೆಸರು ಹೇಳಿದರೆ ಮತಾಂಧರಂತೆ, ಇರುವ ಕೆಲವು ಸಂಸ್ಥಾಂಧ, ಭಾಷಾಂಧರು ಸುಮ್ನೆ ಉರಿದುಕೊಂಡು ಎಗರಾಡ್ತಾರೆ. ಅದು ನಮ್ಮ ತಿರುಳಿನಿಂದ ಮಾತನ್ನು ಎತ್ತೆತ್ತಲೋ ಒಯ್ತದೆ.

ಇವರೆಲ್ಲ ಎಲ್ಲವನ್ನೂ ಸಕ್ಕದದಲ್ಲೇ ಹೇಳೋದಂತೆ. ನಾನೂ ಕೊಂಚ ಸಕ್ಕದವಾಡಿದ್ದು ದಿಟ ಅಲ್ಲಿ. ಆದ್ರೇ ಈ ಮಾಪುರುಸರು ಎನಿತ್ತು ತಪ್ಪು ತಪ್ಪು ಸಕ್ಕದ ಆಡ್ತಿದ್ರು ಅಂದ್ರೆ, ನಾನು ನನ್ನ ಕಸಿನ್ನ ನಕ್ಕು ನಕ್ಕು ದಣಿದೆವು. ಇವರಾಡುವ ಸಕ್ಕದದ ಕೆಲವು ತುಣುಕುಗಳು

"ಆಗಮನಂ ಕರೋತು, ಬೋಜನಂ ಕರೋತು, ಜಲಪಾನಂ ಕರೋತು, ದೂಮಪಾನ ನ ಕರೋತು, ಸರ್ವಾಹ ಆಸನಗ್ರಹಣಂ ಕರೋತು" Smiling, ಇದು ಯಾವ ಸೀಮೆ ಸಕ್ಕದವೋ.. ಎಲ್ಲದಕ್ಕೂ ಕರೋತು, ಕರೋತು. Smiling

"ಆಗಚ್ಛತು, ಭೋಜನಂ ಖಾದತು, ಜಲಂ ಪಿಬತು, ಧೂಮಂ ಮಾ ಪಿಬತು, ಸರ್ವೇ ಉಪವಿಶಂತು" ಹೀಗಲ್ವಾ ಹೇಳಬೇಕು ( ಇಷ್ಟ ಮಟ್ಟಿರಾದ್ರು ಇರಬೇಡ್ವಾ?). ಇಲ್ಲೇ ಗೊತ್ತಾಗ್ತಿತ್ತು, ಇವರಿಗೆ ಎಷ್ಟು ಸಕ್ಕದ ಗೊತ್ತು ಅಂತ. ಇವರು ಇನ್ಜು ದೇವರಾಣೆ ಕಾಳಿದಾಸ, ಭಾಸ ಮುಂತಾದವರನ್ನು ಓದಿರುವುದು ಐಬೇ!!

ಸರಿ, ಇನ್ನೇನು ಮಾಡೋದು ಹೋಗಿದ್ದಕ್ಕೆ ಇವರ ಕರೋತು-ಸಕ್ಕದದಲ್ಲಿ ಕೊರೆತ ಹೇಳಬೇಕಲ್ಲ, ಅಂತ ಕುಳಿತೆವು. ಅವನ್ಯಾವೋನು ಸುರು ಹಚ್ದ.( ಏಕವಚನ ಏಕೆ ಅಂದ್ರೆ ಅರಿಯದೇ ನುಡಿದು ಇವರು ತಮ್ಮ ಮರ್ಯಾದೆಯನ್ನು ಕಳೆದುಕೊಂಡಿದ್ದಾರೆ) ಬರೀ ಸುಳ್ಳು ಪೊಳ್ಳುಗಳ ಕಂತೆಯ ನುಡಿಯಾಟ. ಇದನ್ನೇ ಇಲ್ಲ ಅಂದ್ರು ಸಾವಿರ ಸರತಿ ಕೇಳಿದ್ದೀನಿ. ಒಳ್ಳೇ taperecorder ತರ ಹೇಳಿದ್ದನ್ನೇ ಹೇಳೋದು..

ಕೆಲವು ಸುಳ್ಳುಗಳು ಹೀಗಿವೆ.. ( ಇದನ್ನು ಯಾವ ಪಂಡಿತನಿಂದ ಬರೆಸಿಕೊಂಡು ಉರು ಹೊಡೆದಿದ್ದರೋ ಕಾಣೆ )

೧) ಸಂಸ್ಕೃತಂ ದೇವಭಾಷಾ, ತತಃ ತತ್ ಸರ್ವೋತ್ತಮಂ, ಪೂಜನೀಯಂ. ಸಕ್ಕದವು ದೇವರು ನುಡಿ, ಅದಕ್ಕೆ ಅದು ಎಲ್ಲದಕ್ಕಿಂತ ಮೇಲು, ಮತ್ತು ಅದನ್ನು ಪೂಜೆ ಮಾಡಬೇಕು.
೨) ಸಂಸ್ಕತಂ ಸರ್ವಭಾಷಾ ಜನನೀ| ಸಕ್ಕದವು ಎಲ್ಲ ನುಡಿಗಳ ತಾಯಿ
೩) ಸಂಸ್ಕೃತಂ ಪಠಣಾತ್ ಸರ್ವಾಃ ಭಾಷಾಃ ಸುಲಭಾಃ. ಸಕ್ಕದವನ್ನು ಓದುವುದರಿಂದ ಎಲ್ಲ ನುಡಿಗಳು ಸುಲಭ(ವಾಗಿ ತಿಳಿಯುವುದು )
೪) ಸಂಸ್ಕೃತಂ ವಿನಾ ಕನ್ನಡಭಾಷಾsಪಿ ಸತ್ವಹೀನಾ, ಕನ್ನಡಭಾಷಾ ಸಂಸ್ಕೃತಭಾಷಾಮೇವ ಅವಲಂಬಿತಾ| ಸಕ್ಕದವಿಲ್ಲದಿದ್ದರೆ ಕನ್ನಡವೂ ಜಾಳು. ಕನ್ನಡನುಡಿಯು ಸಕ್ಕದವನ್ನೇ ಒರಿಗೊಂಡಿದೆ, ಸಕ್ಕದದ ಬೆಂಬಲದಿಂದಲೇ ಬದುಕಿದೆ.
..

...
..

ಇಲ್ಲಿ ಮೇಲೆ ಹೇಳಿರುವ ನಾಲ್ಕು ಸಂಗತಿಗಳನ್ನು ಈ ಗುಂಪಿನ ಎಲ್ಲ ಕೂಟದಲ್ಲಿ, ಈ ಗುಂಪಿನ ಎಲ್ಲ ಮಂದಿ ಎಲ್ಲೆಡೆ ಹೇಳಿಕೊಂಡು ತಿರುಗ್ತಿರ್ತಾರೆ. ಈ ಮೇಲಿನವಲ್ಲಿ ಒಂದೂ ದಿಟವಲ್ಲ. ಅದೂ ಹೋಗಲಿ, ನಮ್ಮ ಮಣ್ಣಿನ ನುಡಿಯಾದ, ಬದುಕಿ ಬಾಳುತ್ತಿರುವ ಕನ್ನಡಕ್ಕೆ ಸಕ್ಕದದ ಹೋಲಿಕೆಯಾಕೇ? ಕನ್ನಡಕ್ಕೆ ಏನು ಈ ಸಕ್ಕದದಂತೆ ಊರೂರು ತಿರುಗಿ ಸಕ್ಕದವಾಡಿ ಸಕ್ಕದ ಮಾತಾಡಿ ಎಂಬ ಗತಿ ಬಂದಿದೆಯೇ?

ಇಂದು ಮಂದಿಗೆ ಸಕ್ಕದ ಕಲಿಯುವುದರಿಂದ ಅಂತಾ ಯಾವ ಬಾಳಿಕೆಯಿಲ್ಲ. ಆದ್ರೂ ಇವರು ಹೋಗಿ ಹೀಗೆ ಸುಳ್ಳು ಸುಳ್ಳನ್ನೇ ಹೇಳ್ತಾ ಇರ್ತಾರೆ.

ಸಂಸ್ಕೃತ ಪ್ರಚಾರಕ್ಕೆ ಕನ್ನಡವನ್ನು ಕೀಳಾಗಿ ಬಣ್ಣಿಸುವುದು, ಸುಳ್ಳುಗಳನ್ನು ಹೇಳುವುದು ಸರಿಯೇ?

ಸಂಸ್ಕೃತದಲ್ಲಿ ಚನ್ನಾಗಿರುವ ಬರವಣಿಗೆ ಇದೆ, ಒಳ್ಳೆಯ ಅರಿವಿದೆ, ಅದಕ್ಕೆ ಓದಿರಿ ಅಂದ್ರೆ ಸಾಲದೇ? ಯಾಕೆ ಬೇಕೀ ಡೋಂಗಿ ಬುದ್ದಿ? ಸುಳ್ಳು ಹೇಳಾದ್ರು ಮಂದಿಗೆ ಸಕ್ಕದ ಕಲಿಸಬೇಕು? ಈ ಬಗೆಯ ಕಪಟದಿಂದ ಯಾವ ಘನಸಮಾಜ ಕಲ್ಯಾಣ ಮಾಡುತ್ತಿದ್ದಾರೆ ಇವರು?

====

ಹಿನ್ನರಿಕೆ: ಸಕ್ಕದ ಹರಡಲಿ ಬೆಳಿಯಲಿ ಎಂಬದಕ್ಕೆ ನನ್ನ ಬೆಂಬಲವಿದೆ, ಆದರೆ ಅದು ಕನ್ನಡವನ್ನು ಸುಳ್ಳು ಸುಳ್ಳೇ ತೆಗಳಿ ಪೊಳ್ಳು ಮರೆವುದು ತಪ್ಪು!!

‹ ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ? ರಾಮನೂ ಇಲ್ಲ, ರಾಮಾಯಣವೂ ಇಲ್ಲ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 759 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 21, 2007 - 11:46am — ಸಂಗನಗೌಡ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ಸಂಗನಗೌಡ's picture

ಸಕ್ಕದವನ್ನು ಉಳಿಸಬೇಕೆನ್ನುವ ಹುಮ್ಮಸ್ಸಿನವರು, ಅವರ ನುಡಿ ಸಕ್ಕದದಿಂದ ಬಂದುದೆಂದು ಹೇಳುವ ಇಲ್ಲಾ ಯಾವುದಾದರೂ ಹಿಂದಿ ನಾಡನ್ನು ದೊನ್ನಾಡ ಆಡಳಿತದವರು ತೆಗೆದುಕೊಂಡು, ಅಲ್ಲಿನ ಮಂದಿ, ಉಣ್ಣುವದು, ತಿನ್ನುವದು, ಕಲಿಯುವದು, ಕೂಡುವದು, ಮಲಗುವದು, ಕುಡಿಯುವದು ಎಲ್ಲವನ್ನೂ ಸಕ್ಕದದಲ್ಲೇ ಮಾಡುವಂತೆ ಮಾಡಲಿ, ನಮ್ಮ ಕನ್ನಡಕ್ಕೇಕೆ ಮೆಟ್ಟಿಕೊಂಡಿದ್ದಾರಿವರು? Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 11:49am — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ತಿದ್ದು!

ಒರಿಗೊಂಡಿದೆ = ಇದು ಒರಗಿಕೊಂಡಿದೆ ಎಂದು ಇರಬೇಕಿತ್ತು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 1:55pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ಇಂತವರಿಗೆ ಮಾಡಕ್ಕೇನು ಕೆಲಸ ಇಲ್ವ.. ದುಡಿದು ತಿನ್ನಲಿ ಗೊತ್ತಾಗುತ್ತೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2007 - 2:49pm — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ಈ ತರ ಬರೋರಲ್ಲಿ ಹಲವರಿಗೆ ಕೆಲಸ ಇರಲ್ಲ.. ಅವರಿಗೆ ನಾಳಿಗೊಬ್ಬರ ಮನೆಯೂಟ! ಇದಕ್ಕೆ ಅವರು ದೇಶಸೇವೆ ಅನ್ನೋ ದೊಡ್ಡ ಹೆಸರು ಕೊಡ್ತಾರೆ. ಅದು ಹೇಗೆ ಇದು ದೇಸಸೇವೆಯೋ ನನಗೆ ಇನ್ನೂ ಅರಿತವಾಗಿಲ್ಲ!!

ಅದೂ ಇಲ್ದೇ ಹಲವರಿವರು ನಾವು ಇಂಗಲೀಸು ಕಲಿತೊರ ಮೇಲೆ ಕೆಂಗಣ್ಣು ಬೀರೊದು ಬೇರೆ. ಇನ್ನು ಕನ್ನಡಕ್ಕೆ ಹೋರಾಡೊರನ್ನು ರೌಡಿಗಳು, ವಡ್ಡರು ಅನ್ನೊದು ಬೇರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 2:14am — hamsanandi

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

hamsanandi's picture

Quote:
"ಆಗಮನಂ ಕರೋತು, ಬೋಜನಂ ಕರೋತು, ಜಲಪಾನಂ ಕರೋತು, ದೂಮಪಾನ ನ ಕರೋತು, ಸರ್ವಾಹ ಆಸನಗ್ರಹಣಂ ಕರೋತು" , ಇದು ಯಾವ ಸೀಮೆ ಸಕ್ಕದವೋ.. ಎಲ್ಲದಕ್ಕೂ ಕರೋತು, ಕರೋತು.

"ಆಗಚ್ಛತು, ಭೋಜನಂ ಖಾದತು, ಜಲಂ ಪಿಬತು, ಧೂಮಂ ಮಾ ಪಿಬತು, ಸರ್ವೇ ಉಪವಿಶಂತು" ಹೀಗಲ್ವಾ ಹೇಳಬೇಕು ( ಇಷ್ಟ ಮಟ್ಟಿರಾದ್ರು ಇರಬೇಡ್ವಾ?). ಇಲ್ಲೇ ಗೊತ್ತಾಗ್ತಿತ್ತು, ಇವರಿಗೆ ಎಷ್ಟು ಸಕ್ಕದ ಗೊತ್ತು ಅಂತ. ಇವರು ಇನ್ಜು ದೇವರಾಣೆ ಕಾಳಿದಾಸ, ಭಾಸ ಮುಂತಾದವರನ್ನು ಓದಿರುವುದು ಐಬೇ!!

ಪಾಪ, ಅವರ ಉದ್ದೇಶ ಭಾಸ ಕಾಳಿದಾಸರ ಸಂಸ್ಕೃತ ಹೇಳಿಕೊಡೋದು ಅಲ್ಲಾರೀ Eye-wink ಅವರು ಹೇಳಿಕೊಡೋ ಸಂಸ್ಕೃತ ಬೆಂಗಳೂರು ಕನ್ನಡದ ಹಾಗೆ ( ಎಲ್ಲರೂ ಹಾಸನದ ಕನ್ನಡವನ್ನು ಹೀಗಳೆಯುವಾಗ, ನನಗೆ ಸಿಕ್ಕ ಅವಕಾಶ ನಾನ್ಯಾಕೆ ಕಳೆದು ಕೊಳ್ಳಲಿ Eye-wink ? ) ಉದಾಹರಣೆಗೆ "7th cross ನಲ್ಲಿ straight ಹೋಗಿ, 9th main ನಲ್ಲಿ left turn ಮಾಡಿದ್ರೆ 3rd building ground floor ನಮ್ಮನೆ. ಬನ್ನಿ, walk ಮಾಡಿ ಹೋಗ್ಬಹುದು. lunch ಮಾಡಿ 2 o'clock ಮೇಲೆ return ಆಗ್ಬಹುದು" ಅನ್ನಲ್ವಾ - ಹಾಗೇ ಇದೂವೆ ಅಂದ್ಕೋಬೇಕು.

ಅಲ್ಲಿ ಸಂಸ್ಕೃತದಲ್ಲಿ ಮಾತಾಡೋದು ಕಲಿಸ್ತಾರಂತೆ. (ಯಾಕೆ ಬೇಕು ಅನ್ನೋದು ಬೇರೆ ವಿಷಯ!). ಮಾತಾಡೋಕೂ, ಅರ್ಥ ಮಾಡ್ಕೊಂಡು ಸಾಹಿತ್ಯ ಓದೋಕೂ ವ್ಯತ್ಯಾಸ ಇದೆ ಅಂತ ಎಲ್ಲರಿಗೂ ಗೊತ್ತಲ್ಲ.

ಮಾತಾಡೋಕೆ ಬರಬೇಕಾದ್ದು ನಾವಿರೋ ಸಮಾಜದಲ್ಲಿ ಇನ್ನೊಬ್ಬರಿಗೆ ನಮ್ಮ ಮಾತನ್ನು ಅರ್ಥ ಮಾಡಿಸೋಕೆ ಮಾತ್ರ. (ಬರೀ ಅರ್ಥ ಮಾಡಿಕೊಳ್ಳೋಕೆ, ಮಾತಾಡೋಕೆ ಬರದಿದ್ದ್ರೂ ನಡೆಯತ್ತೆ). ಆ ದೃಷ್ಟಿಯಲ್ಲಿ ನೋಡಿದರೆ, ಸಂಸ್ಕೃತದಲ್ಲಿ ಮಾತನಾಡುವುದು ಕಲಿತು ಯಾರಿಗೂ ಏನೂ ಅನುಕೂಲ ಆಗೋದಿಲ್ಲ. ಅದರ practical utility ಸೊನ್ನೆಯ ಹತ್ತಿರವೇ.ಕಲಿಯುವ ಬಯಕೆಯಿದ್ದವರು ಕಲಿತರೆ ಅವರರವರ ಇಷ್ಟ ಅಷ್ಟೆ.

ಆದರೆ, ನಿಜವಾಗಿ ಸಂಸ್ಕೃತವನ್ನು ಕಲಿಯುವ ಉದ್ದೇಶವಿದ್ದವರು, ಈ ಲೇಖನದಿಂದಾಗಲೀ, ಈ ಟಿಪ್ಪಣಿಯಿಂದಾಗಲೀ ಹಿಂದೆಗೆಯಬೇಡಿ. ಯಾವುದೇ ಬೇರೆ ಭಾಷೆಯನ್ನು ಕಲಿತಮಾತ್ರದಿಂದ, ನಮ್ಮ ಭಾಷೆ ಚಿಕ್ಕದಾಗುವುದಿಲ್ಲ, ನಮ್ಮ ಅರಿವೂ ಚಿಕ್ಕದಾಗುವುದಿಲ್ಲ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2007 - 9:10am — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ಹಂಸಾನಂದಿಗಳೇ,

ಅವರು ಯಾವ ಸಂಸ್ಕೃತದಲ್ಲಾದ್ರೂ, ಪಾರಸಿಯಲ್ಲಾದ್ರು ಮಾತಾಡ್ಲಿ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್‍ಯ....

ಆದರೆ, ಬರೀ ಸುಳ್ಳು ಪೊಳ್ಳುಗಳನ್ನೇ ಹೇಳಿಕೊಂಡು ಊರೂರು ತಿರುಗೋದು, ಕೆಲಸ ಇಲ್ದೇ ನಾಳಿಗೊಬ್ರ ಮನೇಲಿ ಉಣ್ಣೋದು, ಅದನ್ನೇ ದೇಶಸೇವೆ ಅನ್ನೋದು, ನಮ್ಮ ಕನ್ನಡ-ತಮಿಳು-ತೆಲುಗುಗಳನ್ನ ಹಳಿಯೋದು.. ಈ ಸೋಗಲ್ಲೇ ಬದುಕು ಮುಗಿಸಿ ತಾವೇ ಏನೋ ಘನಕಾರ್ಯ ಮಾಡಿದ್ದು ಅಂದು ಸಾರೋದು, ಇವೆಲ್ಲ ಏನು ಚಂದ? ಹಿಂಗೆ ಎಲ್ರೂ ಕೆಲಸ-ಗಿಲಸ ಮಾಡ್ದೇ ಉಂಡಾಡಿ ಗುಂಡರಾಗಿ, ಸುಳ್ಳು ಸಾರ್ಕೊಂಡು ದೇಶಸೇವೆ ಅಂತಾ ಇದ್ರೆ ನಮ್ಮ ಸಮಾಜದ ಕತೆ ಗೋವಿಂದಾ ಗೋವಿಂದಾ!!

ಇವರಿಗೆ ಮಾಡಕ್ಕೆ ಕೆಲಸ ಇಲ್ಲ, ಅಂತ ಬೇರೆಯೊರೆ ತಲೆಯನ್ನು ಹಾಳಮಾಡೋದೇಕೋ!?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 4:40pm — HV SURYANARAYAN...

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

HV SURYANARAYANA SHARMA's picture

ಬುದ್ದೀ ಗೋವಿಂದಾ ಗೋವಿಂದಾ ಅನ್ಬ್ಯಾಡೀ ಅದು, ಸಂಕುತ ಆಯ್ತದೆ, ಕನ್ನಡ್ದಾಗೆ ಗೋಯಿಂದಾ ಗೋಯಿಂದಾ ಅನ್ನಿ ಇಲ್ಲಾಂದ್ರೆ ತಮಿಳ್ನೋರು ನಾರಾಯಣ ಅನ್ನಕ್ಬದ್ಲಾಗಿ ನೆಡುಂಚೆಳಿಯನ್ ಅಂತಾ ಮಾಡ್ಕಂಡವ್ರಂತೆ. ಅಂಗೇನಾರಮಾಡಿ ಸಿವಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 4:51pm — Sunil Jayaprakash

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Sunil Jayaprakash's picture

ಕೃಷ್ಣಯ್ಯನನ್ನು ಕರಿಯ ಅಂದ್ರೆ, ಯಾರಿಗಾದರೂ ಬೇಸರ ಆಗತ್ತಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 5:03pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ಯಾಕೆ ಬೇಜಾರು?

ಕೃಷ್ಣ = ಕರಿಯ ಅಲ್ವ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 5:03pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ಯಾಕೆ ಬೇಜಾರು?

ಕೃಷ್ಣ = ಕರಿಯ ಅಲ್ವ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 5:28pm — ಸಂಗನಗೌಡ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ಸಂಗನಗೌಡ's picture

ಬೆಳ್ಳಗಿದ್ದರೆ ನೋಡೋಕೆ ಚೆನ್ನ ಅಂತ, ಕುರುಡು ನಂಬಿಕೆಯವರಿದ್ದಾರೆ, ಕ್ರಿಸ್ನ ಅಂದರೆ ತಿಳಿಯಲ್ಲಾ, ಎನೋ ಸಕತ್ತಾಗಿ ಸಕ್ಕದದಲ್ಲಿ ಕರಿತಾರಂತ ಕುಸ್ ಆಕ್ಕಾರ. ಅದೇ ಕನ್ನಡದಲ್ಲಿ ಕರಿಯ ಅಂದರೆ ತಿಳಿದು ಬಿಡುತ್ತಲ್ಲಾ, ಅದಕ್ಕೇ ಬೇಜಾರು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 6:46pm — Khavi

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Khavi's picture

ನಮ್ಮ ಹಳ್ಳಿಕಡೆ ಕಿಟ್ಟಪ್ಪ (ಕೃಷ್ಣಪ್ಪ) ಅಂತಾರೀ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 7:34pm — Aram

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Aram's picture

ಸಂಪದದಲ್ಲಿ ಆಗಾಗ ಬರುತ್ತಿರುವ ಈ ಕನ್ನಡ-ಸಕ್ಕದ ಜಗಳದಲ್ಲಿ ಮೂಗು ತೂರಿಸಬಾರದೆಂದುಕೊಂಡಿದ್ದೆ -- ಹೋದ ತಿಂಗಳು ಮುಕ್ಕಣ್ಣ ಮಹೇಶಣ್ಣನವರ ಸುಟ್ಟುಬಿಡುವ ಉರಿಯಂತ ಬಿಸಿಯ ಕಾಮೆಂಟಿನ ಬಳಿಕ ನನ್ನ ತೊಡೆಗಣಕ Toshibaದ RAM ಕೆಟ್ಟು ಹೋಗಿ ಸುಮಾರು ನಾಲ್ಕು ಸಾವಿರ ನಷ್ಟವಾದ ಮೇಲೆ.

ನಡುರಾತ್ರಿಯ ಅವರ ಸುಡುಕಾಮೆಂಟಿಗೆ ಮರುದಿನ ಬೆಳಿಗ್ಗೆ ಉತ್ತರಿಸೋಣವೆಂದುಕೊಂಡು ಹಾಗೆಯೇ ನಿದ್ದೆಹೋದೆ. ಮಾರನೇದಿನ ನೋಡಿದರೆ Toshiba ಓಗೊಡುತ್ತಿಲ್ಲ - ಎಷ್ಟೋ ದಿನ, ಎಷ್ಟೋ ರೊಕ್ಕ ಕಳೆದ ಬಳಿಕ ತೆನಾಲಿರಾಮನ ಬೆಕ್ಕಿನಂತೆ ಮಹೇಶಣ್ಣರ ಹೆಸರು ನೋಡಿಯೇ ಸಂಪದ ಮುಚ್ಚಿಬಿಡುತ್ತಿದ್ದೆ.

ಆದರೂ, ಸಂಪದದ ಓದಿನಿಂದಾಗಿ ಸಕ್ಕದ, ನನ್ನಿ ಎಂಬ ಎರಡು ಪದ ಕಲಿತಿದ್ದೇನೆ. ಇನ್ನೂ ಹೆಚ್ಚು ಕಲಿಯ ಬಲ್ಲೆನೋ ಏನೋ.
ತಕ್ಕಮಟ್ಟಿಗೆ ಸಕ್ಕದ ಪದಗಳ ಬಳಕೆ ಇಲ್ಲಿ ತಪ್ಪಿಸಲು ನೋಡಿದ್ದೇನೆ.

ಈ ಕೆಳಗಿನ ಕೆಲವು ಪದಗಳಿಗೆ ಕನ್ನಡದಲ್ಲೇನನ್ನುತ್ತಾರೆ ಎಂದು ತಿಳಿದವರು ಹೇಳಿದರೆ ತುಂಬಾ ನನ್ನಿಗಳು.

ಗಣಕ, ನಿದ್ರೆ , ಉತ್ತರ, ಕಾಮೆಂಟು, Dictionary

ಕನ್ನಡವನ್ನಿನ್ನಷ್ಟು ಕಲಿಯೋಣವೆಂದು ಕ.ಸಾ.ಪ. ದವರ Dictionary ಯಲ್ಲಿ ಕಣ್ಣಾಡಿಸಿದರೆ ಅಲ್ಲೂ ಸಕ್ಕದಪದಗಳೇ ಕಾಣಿಸಬೇಕೆ?

ಈ ಸಕ್ಕದವೆಂಬ ಪದದ ಬಳಕೆ ಹಳತೇ, ಹೊಸತೇ?

-- ಆರಾಮ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 7:52pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ನಿಮ್ಮ ಹುರುಪು ನೋಡಿ ನಲಿವಾಯ್ತು.

ನೀವು ಕೊಳಂಬೆ ಪುಟ್ಟಣ್ಣಗೌಡರ 'ಅಚ್ಚಗನ್ನಡ ನುಡಿಕೋಶ' ಓದಿರಿ.

ನಿಮಗೆ ಇದರ PDF ಬೇಕಿದ್ದರೆ ನನಗೆ ಮಿಂಚಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 9:08pm — Aram

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Aram's picture

ನನ್ನಿಗಳು (thanks?)

Yಭವ ರವರೇ:

ಮಿಂಚಿಸಿ = email?

ತಮ್ಮ ಬಲಾಗನ್ನು ನೋಡಿದೆ. ತುಂಬಾ ಚೆನ್ನಾಗಿದೆ.

ಅಲ್ಲಿನ DictionarY ಯಲ್ಲಿ ನನ್ನಿ ಪದದ ಅರ್ಥ ದಿಟ, ಮುಂತಾಗಿ ಇದೆ.

ನಾನು ಅಂದುಕೊಂಡಿದ್ದು Thanks ಎಂಬುದಾಗಿ.

ಹಾಗಾದರೆ Thanks ಗೆ ಧನ್ಯವಾದ ಹೊರತಾಗಿ ಬೇರಾವ ಪದವಿದೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 10:16pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ಈ ನನ್ನಿಯ ಬಗ್ಗೆ ಸಿಕ್ಕಾಪಟ್ಟೆ ಮಾತಾಗಿದೆ. ಸಂಪದದಲ್ಲಿ ಹುಡುಕಿ.

ಒಸಿ ಸಂಪದಿಗರು(ಮಾಯ್ಸ, ಸುನೀಲ) ನನ್ನಿಯನ್ನು thanks ಗೆ ಬಳಸಬಹುದು ಎಂದು ತೋರಿಸಿ ಹೇಳಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 10:20pm — ವೈಭವ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ವೈಭವ's picture

ಕೊಳಂಬೆಯವರ ನಿಗಂಟಿನಲ್ಲಿ
ನನ್ನಿ = ನಲ್ಮೆ, ನಚ್ಚು(ನೆಚ್ಚು), ನಂಟು ಎಂಬ ತಿಳಿವನ್ನೂ ಕೊಟ್ಟಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 11:39pm — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ನಿಮ್ಮ Toshiba RAM ಸುಟ್ಟುದಿಕ್ಕೆ ನಾನು ಹೊಣೆಯೇ! Smiling

ಗಣಕ ಇದೇನು ಸಕ್ಕದದ ಒರೆಯೇ? ಇಲ್ಲೇ ನಮ್ಮ ಕರ್ನಾಟಕದೊರು ಹುಟ್ಟಿಸಿರುವುದು.

ಗಣಕಕ್ಕೆ ಎಣಿ ಅಂತ ನಾವು ಹುಟ್ಟಿಸಿದ್ದೇವೆ!

ಗಣಿಕಾ ಅಂದ್ರೆ ಸೂಳೆ ಅಂತ ಸಕ್ಕದದಲ್ಲಿ
ಗಣಕ ಅಂದರೆ ಗಂಡು ಸೂಳೆಯೂ ಆಗಬೋದೇನೋ! ( ನಾಯಕ- ನಾಯಿಕಾ, ಬಾಲಕ-ಬಾಲಿಕಾ, ಪುಸ್ತಕ-ಪುಸ್ತಿಕಾ ನೋಡ್ರಿ) (

ನಿದ್ರೆ = ಮಲಗು, ಮಲಂಗು, ಒರಗು, ಜಂಪು
to lie down = ಬೀಳು,
ಉತ್ತರ ( ಕಡೆ ) = ಬಡಗಡೆ, ಬಡಗಣ, ಬಡಗು
ಉತ್ತರ ( ಮಾತು ) = ಮರುಮಾತು, ಮರುಹೇಳು, ಸುಂಡು, ತಾಚಿ,
ಕಾಮೆಂಟು = ಅನಿಸಿಕೆ
Dictionary = ನುಡಿಗಂಟು, ಒರೆಗಂಟು,

ಸಕ್ಕದದ ಒರೆಗಳು ೭೦% ಇವೆ ಕನ್ನಡದ ನುಡಿಗಂಟುಗಳಲ್ಲಿ, ಕನ್ನಡದ್ದೇ ಒರೆಗಳು ಬರಿ ೩೦% ( ಇದನ್ನು ನನಗೆ ಯಾರೋ ಹೇಳಿದ್ದು, ಸರಿಯಾದ ಲೆಕ್ಕ ಗೊತ್ತಿರೋರು ಹೇಳ್ರಿ )

ಶಬ್ದಮಣಿದರ್ಪಣ ಓದಿ, ಬೇಕಾದಸ್ಟು ಸಿಕ್ತಾವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 11:41pm — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ಸುಂಡು, ತಾಚಿ = ಮಲಗು!

ತಪ್ಪಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 1:43am — Aram

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Aram's picture

"ನಿಮ್ಮ Toshiba RAM ಸುಟ್ಟುದಿಕ್ಕೆ ನಾನು ಹೊಣೆಯೇ! "

ಸುಟ್ಟದ್ದಲ್ಲ, ಕೆಟ್ಟದ್ದು !

ತಾವು ಹೊಣೆ ಎಂದು ಹೇಳಿದ ಹಾಗಿಲ್ಲವಲ್ಲ - ತಮ್ಮ ಕಾಗೆಯ ಕಾ ಕಾ ಕಾಮೆಂಟು ನನ್ನ ತೋಶಿಬಾದಲ್ಲಿ ಬಂದು ಕೂರುವುದಕ್ಕೂ RAM ಕೆಡುವುದಕ್ಕೂ ಸರಿಯಾಯಿತು, ಅಷ್ಟೇ!

ಕಾಮೆಂಟಿನ ಬಿಸಿಯಂತೂ ಹೆಚ್ಚಿದ್ದದ್ದು ಹೌದಲ್ಲ !

ಇರಲಿ, ಇಷ್ಟೊಂದು ಆಳವಾದ ನೀರಲ್ಲಿ ಈಜೇಬಾರದ ನಾನು ಇಳಿದದ್ದು ತಪ್ಪು ಅಂದ ಮೇಲೆ ತಪ್ಪು ದಂಡ ಸಲ್ಲಿಸಿಯಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 9:31am — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

"ತಮ್ಮ ಕಾಗೆಯ ಕಾ ಕಾ ಕಾಮೆಂಟು ನನ್ನ ತೋಶಿಬಾದಲ್ಲಿ ಬಂದು ಕೂರುವುದಕ್ಕೂ RAM ಕೆಡುವುದಕ್ಕೂ ಸರಿಯಾಯಿತು, ಅಷ್ಟೇ!"

ರೀ ಮಾರಾಯ್ರೇ, ಏನಿದು..

ನೋಡ್ರಿ. ನೀವೇ ಅಲ್ಲಿ ಹೇಳಿಕೊಂಡ್ರಿ, ನೀವೇನೋ ಇನ್ನು ಅಂಬೇಗಾಲು ಇಡೋರು ಅಂತ. ಗೊತ್ತಿಲ್ದೇ ಬರೆದೆ ಅಂತ. ಅದು ನಿಮ್ಮ ತಪ್ಪಲ್ವಾ!!

ನೀವು ಇಲ್ಲಿ ತಮಾಸೆ ಮಾಡಿದ್ರೂ, ಇದು ನನಗೆ ಹಿಡಿಸಿಲ್ಲ.!! ನನಗೆ ನೀವು ನನ್ನ ಕಾಲು ಕೆರೆಯುತ್ತಿದ್ದೀರಿ ಅನ್ನಿಸ್ತಿದೆ.

ನಿಮಗೆ ಏನು ತಲೆಗಿಳಿದಿಲ್ಲ ಅಂದ್ರೇ, ನೀವು ಅಚ್ಚ-ಕನ್ನಡದ ಕಬ್ಬಿಗ ಆಂಡಯ್ಯನ ಬಗ್ಗೆ ಹಗೂರವಾಗಿ ಬರೆದುದು ನಮಗೆ ಎಸ್ಟು ಬೇಜಾರು ಮಾಡಿತು ಅಂತ. ಬರೀ ನಿಮ್ಮ RAM ಸುಟ್ಟ ಬೇಜಾರೇ ಹೇಳ್ತೀರಲ್ಲ. ನೀವು ಆಂಡಯ್ಯನ ಕಬ್ಬ ಓದಿದ್ದೀರ? ಸುಮ್ನೆ ಕನ್ನಡದ ಬಗ್ಗೆ ಹಗೂರವಾಗೀ ಯಾಕೆ ಬರೆಯೋದು? ಅದೂ ಅಲ್ದೇ ನಮ್ಮ ಮನೇಲಿ ನಾವು ಕನ್ನಡ ಅಲ್ಲ ಮಾತಾಡೋದು ಅಂತ ಬೇರೆ ಹೇಳ್ತೀರ.

ನಾನು ಇವೆಲ್ಲಕ್ಕೂ ಅಲ್ಲೇ ನೇರವಾಗಿ ಹೇಳಾಗಿದೆ. ಇಲ್ಲಿ ಯಾಕೆ ಮತ್ತೇ ಅದನ್ನು ಎತ್ತುತ್ತಿದ್ದೀರಿ?

"ಇಷ್ಟೊಂದು ಆಳವಾದ ನೀರಲ್ಲಿ ಈಜೇಬಾರದ ನಾನು ಇಳಿದದ್ದು ತಪ್ಪು ಅಂದ ಮೇಲೆ ತಪ್ಪು ದಂಡ ಸಲ್ಲಿಸಿಯಾಯಿತು."
ಏನ್ರಿ ಇದು. ನಿಮ್ಮ Toshiba ಸುಟ್ಟಿದಕ್ಕೆ ಯಾಕೆ ನನ್ನ ಹೆಸರು ತಂದ್ರಿ? ಇಳಿಯಲ್ಲ ಅಂತೀರ, ಬೇರೆ!

ಇಲ್ವೇ ಇದು ಯಾವ ಅರಿತದಲ್ಲಿ ಬರೆದಿರುವುದೋ!! ಒಟ್ನಿಲ್ಲಿ ಇವರು ನನ್ನ Toshiba RAM ಸುಟ್ಟೋಯ್ತು, ಅದಕ್ಕೆ ಮಹೇಶ ಬರೆದ ಕಮೆಂಟೇ ಕಾರಣ ಅನ್ನೋ ಹಾಗಿದೆ.

ಮಾರಾಯ!!

ನಿಮಗೆ ಏನು ಹೇಳಬೇಕಿತ್ತೋ ಹೇಳಿ, ಆಗಿದೆ. ಅದಕ್ಕೆ ನೀವು "ನಾನು ಅಂಬೇಗಾಲು, ನಂಗೆ ಏನು ಗೊತ್ತಿಲ್ಲ, ಅರಿಯದೇ ಬರೆದೆ, ನಾನು ಮನೆಯಲ್ಲಿ ಕನ್ನಡ ಮಾತಾಡಲ್ಲ" ಅಂತೆಲ್ಲ ಹೇಳಿ excuse ಕೇಳಿದ್ರಿ!

ಇನ್ನು ಇಲ್ಲಿ ನಾನು ಮಾತು ಬೆಳೆಸಲ್ಲ. ನಿಮ್ಮ ಬಗ್ಗೆ ನಾನು ಎಲ್ಲೂ ವೈಯಕ್ತಿಕವಾಗಿ ಬರೆದಿಲ್ಲ. ನೀವು ಬರೆದ ಬರಹ ವಿಷಯಕ್ಕೆ ಉತ್ತರ ಹೇಳಿದ್ದೀನಿ. ನಿಮಗೆ ಯಾಕೆ ನೀವು ಬರೆದುದು "ಕನ್ನಡದ ಬಗ್ಗೆ ಹಗೂರವಾದ ಮಾತು, ಓದದೇ ನೀವು ಹಳೆಗನ್ನಡ ಕಲಿಯುವುದು ಅರ್ಥಹೀನ ಅನ್ನೋದು ಯಾಕೆ ಸರಿಯಿಲ್ಲ" ಅಂತ ಹೇಳಿದೆಯಲ್ಲ.

ಒಂದು ಸರತಿ ನೀವು ಬರೆದವಗಳನ್ನು ನೀವೇ ಓದಿರಿ!

ಇನ್ನು ನನ್ನ ಮೇಲೇ ವೈಯಕ್ತಿಕ ಹಲ್ಲೇ ಮಾಡ್ತೀನಿ, ಎಲ್ಲೆಲ್ಲೋ ನನ್ನ ಹೆಸರು ತಗೆದು ಕಾಲ್ ಕೆರೆತೀನಿ, ಅಂದ್ರೆ ದಾರಾಳವಾಗಿ ಮಾಡಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 12:50pm — ಸಂಗನಗೌಡ

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

ಸಂಗನಗೌಡ's picture

Quote:
ತಮ್ಮ ಕಾಗೆಯ ಕಾ ಕಾ ಕಾಮೆಂಟು

ಯಾಕೋ ವಯಕ್ತಿಕ ಕಿತ್ತಾಟದ ನಾತ ಬರುತ್ತಿದೆಯಲ್ಲ. ನೀವು ಏನ್ ಹೇಳಲು ಉಂಕಿಸುತ್ತಿದ್ದೀರಿ ಅನ್ನುವದು ನಿಚ್ಚಳವಾಗಿಲ್ಲ. ನಿಮ್ಮಲ್ಲಿ ತೋಶಿಬ ತೊಡೆ‍ಎಣಿ ಇದೆ ಅಂತಲೋ, ನಿಮ್ಮ RAM ಸುಟ್ಟ ಅಳಲೋ, ಸಕ್ಕದ ಎದುರು ಹಾಕೊಂಡೋರು ಅನ್ನುವ ಒಳ ಸಿಟ್ಟೋ, ಸರಿಯಾಗಿ ಬಿಡಿಸಿ ಹೇಳಿ.

ಯಾರದೇ ಕಮೆಂಟಿನ ಬಗ್ಗೆ ಹೀಗೆ ಹೀಗಳೆದು ಮಾತಾಡುವದು ಸರಿ ಅಲ್ಲ, ಮತ್ತು ಸಂಪದದ ನಿಯಮಗಳನ್ನು ಮೀರಿದ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 1:14pm — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

nanni!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 10:48pm — Aram

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

Aram's picture

ಸಂಗನಗೌಡರವರೇ ಹಾಗೂ ಮಹೇಶರವರೇ:

ಮನ್ನಿಸಿ, ಬೀಳ್ಕೊಡಿ

ನಮಸ್ಕಾರಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2007 - 9:46am — mahesha

ಉ: ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?

mahesha's picture

ನನ್ನ ಗೆಳೆಯ ಹೇಳಿದ್ದಿದು

ಒಂದು ಸರತಿ ಒಂದು ಸಕ್ಕದ ಪಾಟ ನಡೆದಿತ್ತಂತೆ. ಸಣ್ಣ ಮಕ್ಕಳಿಗೆ ಸಕ್ಕದ ಹೇಳಿಕೊಡ್ತಿದ್ತಂತೆ. ಮೊದಲಿ ಪ್ರಾಣಿ-ಹಕ್ಕಿಗಳು ಹೆಸರು ಹೇಳಿಕೊಟ್ಟಾಗಿತ್ತಂತೆ. ಆಮೇಲೆ ಅದೇನೋ ಕಲಿಸ್ತಿದ್ರಂತೆ.

ಆಗ ಒಂದು ಜಿರಳೆ ಬಂತಂತೆ, ಇದನ್ನು ನೋಡಿ ಒಬ್ಬಳು ಪುಟ್ಟಿ ಜೋರಾಗಿ "ಜಿರಳೆ, ಜಿರಳೆ" ಅಂತ ಕೀರಿಚಿದಳಂತೆ, ಆಗ ಅಲ್ಲಿದ್ದ ಸಕ್ಕದದ ಮೇಸ್ಟ ಸಿಟ್ಟಿ ಮಾಡಿಕೊಂಡು"ಲೇ ಗಾರ್ಧಬ ವಿಧವೇ, ಸಂಸ್ಕೃತೇ ವದತು, ಸಂಸ್ಕೃತದಲ್ಲಿ ಹೇಳಿ" ಅಂದ್ರಂತೆ.

ಅದಕ್ಕೆ ಆ ಹುಡುಗಿ ಅಮ್ಮ ಹೇಳಿದ್ರು, ಅವಯ್ಯನ ಹಿಡಿಸು ನಾಲ್ಕು ಮಂದಿ ಹೊಡೆದ್ರೇ ಆವಯ್ಯ "ಅಯ್ಯೋ ಅಮ್ಮ, ಅಪ್ಪ, ಬೇಡ" ಅಂತಾನೋ "ಹಂತ ಭೋ| ಮಾತಾ ಪಿತಾ ಮಾ ನಹಿ" ಅಂತಾನೋ ನೋಡಬೇಕು ಅಂತ.

ಇದು ನನಗೆ ಗೆಳೆಯ ಹೇಳಿದ್ದು. ಅವರ ನೆಂಟರ ಹುಡುಗಿ ಸಕ್ಕದ ಕಲಿಯಕ್ಕೆ ಬೇಸಿಗೆ ಸಿಬಿರಕ್ಕೆ ಹೋಗಿತ್ತಂತೆ. ಈಗ ಹೋಗ್ತಿಲ್ಲ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!
  • ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?
  • ಕವನ ಸಂಕಲನ
  • ಕೊಳ್ ಮತ್ತು (ಉ)ತ್ತಾ ಏನು ಎಂತು
  • ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator