ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
http://www.kannadaprabha.com/NewsItems.asp?ID=KPH20070820220514&Title=He...
ಸೆಂಟ್ರಲ್ ಗೊರ್ಮೆಂಟ್ ನಮಗೆ ಈ ಇಚಾರದಲ್ಲಿ ಅಣ್ಣೆ ಮಾಡುತ್ತಿದೆ. ಇದು ಸರಿನಾ? ನಮ್ಮ ಕಡೆ ನಾವು ಕನ್ನಡಿಗರು ಬೆಳಗಾವಿಯನ್ನು ಬೆಳಗಾವಿ ಅಂತನೇ ಕರಿತೀವಿ. ನಮ್ಮ ನಾಡಿನ ಪಟ್ಟಣವನ್ನು ನಮ್ಮದೇ ಹೆಸರಿಟ್ಟು ಕರೆಯಲು ಈ ದೊಣ್ಣೇ ನಾಯಕರ ಅಪ್ಪಣೆ ಬೇಕಾ?
ಬೆಳಗಾವಿ ನಮ್ಮದೇ ನಾಡು. ಅಪ್ಪಟ ಕನ್ನಡ ನೆಲ. ತುಂಬಾ ಸಂಕಟವಾಗುತ್ತದೆ ಈ ಇಚಾರ ನೆನೆದು, ಮರಾಟಿಗರು ನಮ್ಮದೇ ನೆಲೆಗಳಾದ ಸೊಲ್ಲಾಪುರ, ಕೊಲ್ಲಾಪುರ ಇನ್ನೂ ಎಸ್ಟೋ ಊರುಗಳನ್ನು ಕಿತ್ತುಕೊಂಡು ಅಲ್ಲಿನ ಕನ್ನಡಿಗರ ಬಾಯಲ್ಲಿ ಮರಾಟಿಯನ್ನು ತುರುಕುತ್ತಿರುವದು ಸಾಲದೇ, ನಮ್ಮ ಅಳಿದುಳಿದ ನೆಲೆಗಳನ್ನೂ ಕಿತ್ತುಕೊಳ್ಳಲು ಹವಣಿಸುತ್ತಿದ್ದಾರೆ. ಈ ಅಣ್ಣೆಗಳನ್ನು ತಾಳಿಕೊಂಡಿರಬೇಕೇ ನಾವು?
ನಾವು ಮೂಗರಂತೆ ಸುಮ್ಮನಿದ್ದರೆ ಆಗದು. ನಮ್ಮ ಸರಕಾರ ಸರಕಾರಿ ವೆವಹಾರಗಳಲ್ಲಿ ಬೆಳಗಾವಿ ಅಂತವೇ ಬಳಸಲು ಮೊದಲು ಮಾಡಬೇಕು. ಅದ್ಯಾವನು ಬಂದು ತಡಿತಾನೆ?

- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
ಸೈಪಲ್ಲ/ಅನ್ಯಾಯವೇ!!
ಮೋಸಕ್ಕೆ ಹೋರಾಟದ ದಾರಿ ಇದೆ. ನೋಡುಮ ನಮ್ಮ ಕನ್ನಡದ ಕೂಟಗಳು ಏನ್ ಮಾಡ್ತವೆ ಅಂತ!!
ಇದೊಂದು ಒಳ್ಳೆಯ ಅವಕಾಸ ಕೂಡ, ಇದರ ಸರಿಬಳಕೆ ಮಾಡಿಕೊಬೇಕು
ಉ: ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?
ಕೇಂದ್ರ ಗೃಹಮಂತ್ರಿ ಶಿವರಾಜ ಪಾಟೀಲರ ಕೈವಾಡ?