ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?
ನಿಮಗೆ ಗೊತ್ತೆ ?? :)
- Login or register to post comments
- 901 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |
— ಡಿ. ವಿ. ಜಿ
ನಿಮಗೆ ಗೊತ್ತೆ ?? :)
ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ
ಪರಿಚಯ
ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಉ: ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?
ಚಕ್ಕಂಬಕ್ಕಳ - ಅನ್ನೋದು ಪದ ಎಲ್ಲಿಂದ ಬಂತು ?
ಉತ್ತರ;- ಚಕ್ಕಂಬಕ್ಕಳ, ಚಕಲ್ ಬಕಳ, ಚಕ್ಕಲ್ ಪಟ್ಟೇ, ಚಕಲ್ಪಟ್ಟೆ,ಚಕಮುಕಳಿ, ಚಪ್ಪಳಗಾಲು, ಚಿಪ್ಪಳಗಾಲು, ಕತ್ತರಿಗಾಲು ಕತ್ತರಿಕಾಲು ಇತ್ಯಾದಿ ಸ್ಥಾನಿಕ ಪರ್ಯಾಯ ಪದ ಹೊಂದಿದ ಈ ಪದವು ಯೋಗಾಸನದಲ್ಲಿ ಹೇಳುವ ಪದ್ಮಾಸನ ಕ್ರಿಯೆಗೆ ಸನಿಹವಾದ ವೈದಿಕರು ಹೇಳುವ ಸುಖಾಸನ ವನ್ನು ಪ್ರತಿನಿಧಿಸುತ್ತದೆ.
ನನ್ನ ಅನಿಸಿಕೆಯ ಪ್ರಕಾರ ಇದರ ಮೂಲವು ಚಿಪ್ಪಳಗಾಲು ಆಗಿದೆ. ಚಿಪ್ಪಳವು ನಾವು ಉಪಯೋಗಿಸುವ ಇಕ್ಕಳದ ಪರ್ಯಾಯ ಪದವಾಗಿರುತ್ತದೆ. ಇಕ್ಕಳ ಎಂದರೆ , ಇಂಗ್ಲೀಷಿನಲ್ಲಿ ಹೇಳುವ ಫೋರ್ ಸ್ವೆಪ್ಸ್ ಆಗಿದೆ. ಇಕ್ಕಳ ಹಾಗು ಕತ್ತರಿಯ ಆಕಾರವು ಒಂದೇ ತೆರನಾಗಿ ಇರುತ್ತದೆ. ಕತ್ತರಿ ಕತ್ತರಿಸುತ್ತದೆ, ಆದರೆ ಚಿಪ್ಪಳವು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
ಚಕ್ಕಂಬಕ್ಕಳ ಕುಳಿತು ಕೊಳ್ಳುವಾಗ ಒಂದು ಕಾಲಿಗೆ ಇನ್ನೊಂದನ್ನು ಕತ್ತರಿಯಂತೆ ಸೇರಿಸಿ ಚಿಪ್ಪಳ ಹಾಕಿಕೊಳ್ಳುತ್ತೇವೆ. ಆದ್ದರಿಂದ ಇದರ ಮೂಲವು ಚಿಪ್ಪಳಗಾಲು ಪದವಾಗಿರುತ್ತದೆ.