ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಆ ಪಟ್ಟವನ್ನು ಎಲ್ಲರೂ ಸೇರಿ ಭೀಷ್ಮನಿಗೆ ವಹಿಸಿದಾಗ ಅವನಿಗೆ ತೀವ್ರ ಅಸಮಾಧಾನವಾಯಿತು. ಮುದುಕನಾಗಿರುವ ಭೀಷ್ಮ ಚುರುಕಾಗಿ ಕೆಲಸ ಮಾಡಲಾರ, ಪಾಂಡವರಿಗೆ ಆತ ಪರೋಕ್ಷವಾಗಿ ಸಹಾಯ ಮಾಡಲೂಬಹುದು, ತನ್ನಂತಹ ಯುವಕರಿಗೆ ಪಟ್ಟ ಕಟ್ಟಿದರೆ ಏನು ಬೇಕಾದರೂ ಸಾಧಿಸಬಲ್ಲೆವು ಎಂಬುದು ಆತನ ಅಭಿಪ್ರಾಯ.
ಆದರೆ ಭೀಷ್ಮ ನೀಡುವ ಮಾರ್ಮಿಕ ಉತ್ತರ ಇಂದಿನ ಜಗತ್ತಿಗೂ ಅನ್ವಯಿಸುತ್ತದೆ. ಪಾಂಡವರು ಅತಿರಥ ಮಹಾರಥರು. ಸಾತ್ವಿಕ ಮನೋಭಾವ ಹೊಂದಿದ ಅವರಿಗೆ ದೈವಬಲವೂ ಇದೆ. ಅವರೆದುರು ಯಾರೊಬ್ಬನೂ ಸತತವಾಗಿ ನಿಂತು ಯುದ್ಧ ಮಾಡಲಾಗದು.
ಜೀವನ ಎನ್ನುವ ರಣರಂಗದಲ್ಲಿ ಎಲ್ಲರಿಗೂ ತಮ್ಮ ಸರದಿ ಬಂದೇ ಬರುತ್ತದೆ. ಆ ಚಾನ್ಸ್ಗಾಗಿ ಕಾಯಬೇಕು.

- Login or register to post comments
- 505 hits
- Email this forum





RSS:
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪ್ರಿಯ ಜೋಸೆಫ್
"ಸರದಿ ನಿನಗೂ ಬರ್ತದೆ " ಅಂತ ಹೇಳೋವಾಗ ’ನೀನೂ ಗೆಲ್ಲೋನಲ್ಲ’ ಅಂತ ಅಭಿಪ್ರಾಯ ಇದೆ ಅಂತ ಎಲ್ಲೋ ಓದಿದ್ದೆ .
ನಿಮ್ಮ ಎಲ್ಲ ಲೇಖನಗಳೂ ತುಂಬ ಚೆನ್ನಾಗಿವೆ . ಹೇಗೆ ಹೊಗಳಬೇಕು ಎಂದು ಶಬ್ದಗಳು ತೋಚುತ್ತಿಲ್ಲ .
ಭಾಳಾ ಭಾಳಾ ಧನ್ಯವಾದಗಳು !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪ್ರಿಯ ಶ್ರೀಕಾಂತ್ ಅವರೇ,
ಪಾಂಡವರು ಅತಿರಥ ಮಹಾರಥರು. ಸಾತ್ವಿಕ ಮನೋಭಾವ ಹೊಂದಿದ ಅವರಿಗೆ ದೈವಬಲವೂ ಇದೆ. ಅವರೆದುರು ಯಾರೊಬ್ಬನೂ ಸತತವಾಗಿ ನಿಂತು ಯುದ್ಧ ಮಾಡಲಾಗದು ಎನ್ನುವುದನ್ನು ’ನೀನೂ ಗೆಲ್ಲೋನಲ್ಲ’ ಎಂತಲೂ ಹೇಳಬಹುದೇನೋ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಸಿಮೇರಿಜೋಸೇಫ್, ಈ ಪಂಪನಿಗೂ ಸಂಪದಕ್ಕೂ ಗಟ್ಟಿಯಾದ ನಂಟಿರಬೇಕು. ಸರಿಸುಮಾರು ೧.೮ ವರ್ಷದ ಹಿಂದೆ, ಓ.ಎಲ್.ಎನ್.ಸ್ವಾಮಿಯವರು, "ಸೂಳ್ಪಡೆಯಲ್ಲುದು ಕಾಣಾ ಮಹಾಜಿರಂಗದೊಳ್" ವಿಚಾರವಾಗಿ ಮತ್ತಷ್ಟು ಬೆಳಕು ಚೆಲ್ಲಿದ್ದರು. ನೋಡಿ ಆ ಲಿಂಕ್, ಈ ಎಳೆಯನ್ನು ಇಷ್ಟಪಟ್ಟವರೆಲ್ಲರಿಗೂ ಅದೂ ಕೂಡ ಇಷ್ಟವಾಗಬಹುದು.
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಆ ಸಮಯ ಸಂಪದದಲ್ಲಿ ನಡೆಯುತ್ತಿದ್ದ ಚರ್ಚೆಯ ಬಗ್ಗೆ ಉದಯವಾಣಿಯಲ್ಲೊಮ್ಮೆ ಗಟ್ಟಿ ನಾರಾಯಣ್ ರವರು ಲೇಖನ ಕೂಡ ಬರೆದಿದ್ದರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಪ೦ಪ ಭಯ೦ಕರ ಡಯಲಾಗ್ಸ್ ಮನುಷ್ಯ...ನ೦ಗೇ ಅವನ ಕಾವ್ಯ ಓದಿದಾಗಲೆಲ್ಲಾ ಅವನನ್ನು ನೋಡಬೇಕು ಅನ್ಸತ್ತೆ.
ಉ: ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಭೀಷ್ಮನನ್ನು ಬಿಟ್ಟರೆ ಕೌರವ ಸೈನ್ಯದಲ್ಲಿ ಪಾಂಡವರನ್ನು ಎದುರಿಸಬಲ್ಲವರು ಯಾರೂ ಇದಲಿಲ್ಲ. ಕರ್ಣನಲ್ಲಿ ಪರಾಕ್ರಮ ಇತ್ತು ಆದರೆ ಅವನು ತನ್ನ ತಾಯಿ ಕುಂತಿಗೆ ಮಾತು ಕೊಟ್ಟಿದ್ದ ಯಾವುದೋ ಅಸ್ತ್ರ (ಅದು ಯಾವುದು ಅಂತ ನೆನಪಿಗೆ ಬರುತ್ತಾಯಿಲ್ಲ) ಪ್ರಯೋಗಿಸೋದಿಲ್ಲ ಅಂತ. ಮತ್ತು ಅವನಿಗೆ ಸಾಮಥ್ರ್ಯ ಇರಲಿಲ್ಲ.