ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

"ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

September 6, 2007 - 11:22pm — mananthprabhu

"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ."
ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?

‹ ಕಾಟು ಎಂದರೇನು? ಕನ್ನಡದೊಂದು ಆಟ ಆಡೋಣ ಬನ್ನಿ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 597 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 7, 2007 - 10:39am — kpbolumbu

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

kpbolumbu's picture

೧.ಗದ್ದೆ - ಹೆಚ್ಚಾಗಿ ನೀರನ್ನು ಬೇಡುವ೦ತಹುದು.ಉದಾ: ನೆಲ್ಲು ಬೆಳೆಯುವ ಗದ್ದೆ.
೨.ಹೊಲ - ಹೆಚ್ಚಾಗಿ ನೀರನ್ನು ಬೇಡದಿರುವ೦ತಹುದು.ಉದಾ: ನೆಲಗಡಲೆ ಬೆಳೆಯುವ ಹೊಲ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 10:43am — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ರಾಗಿ ಹೊಲ
ಬತ್ತದ ಗದ್ದೆ, ಕಬ್ಬಿನ ಗದ್ದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 2:55pm — mananthprabhu

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mananthprabhu's picture

ಮಾಯ್ಸ
ರಾಗಿ ಗದ್ದೆ, ಬತ್ತದ ಹೊಲ ಯಾಕಾಗಬಾರದು?
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 3:39pm — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ಯಾಕೆ ಅಂದ್ರೆ!

ಹೊಲಕ್ಕೆ ಹೆಚ್ಚು ನೀರಾವರಿ ಇರಲ್ಲ. ನೀರು ಹಾಯಿಸುವುದು, ನೀರು ಕಟ್ಟೋದು, ಇವೆಲ್ಲ ಕಡೆಮ.
ಆದ್ರೆ ಗದ್ದೆಯಲ್ಲಿ ಯಾವಾಗಲೂ ನಿಂತನೀರು ಬೇಕು( ಕಟಾವು ಹೊತ್ತು ಬಿಟ್ಟು).

ಅದಕ್ಕೆ.. ಬತ್ತ, ಕಬ್ಬನ್ನು ಹೊಲದಲ್ಲಿ ಬೆಳೆಯಲು ಆಗಲ್ಲ. ಅವಕ್ಕೆ ಹೆಚ್ಚು ನೀರಾವರಿ ಬೇಕು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 2:57pm — mananthprabhu

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mananthprabhu's picture

ಅ೦ದರೆ ಕೇವಲ ನೀರಿನ ಬಳಕೆಯ ಆಧಾರದ ಮೇಲೆ, ಈ ಎರಡು ಪದಗಳನ್ನು ಬಳಸುತ್ತಾರೆ೦ದಾಯ್ತು.
ನನ್ನಿ
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 6:49pm — Khavi

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

Khavi's picture

ನಮ್ಮ ಕಡೆ ಗದೆ ಅನ್ನಲ್ಲ... ತೋಟ ಅಂತನೇ ಹೇಳತಾರೆ...
ತೋಟದಲ್ಲಿ ಹಣ್ಣಿನ ಗಿಡಗಳು, ಕಬ್ಬು, ತೆಂಗು, ಅಡಿಕೆ ಬೆಳಿತಾರೆ
ಹೊಲದಲ್ಲಿ ಜೋಳ, ಗೋಧಿ, ಕಡಲೆ, ತೊಗರಿ, ಶೇಂಗಾ, ಹೆಸರು.. ಹೀಗೆ ಬೇರೆ ಬೇರೆ ಕಾಳುಗಳನ್ನ ಬೆಳಿಬಹುದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 7:27pm — savithru

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

savithru's picture

ತೋಟ .. ಇದು ಗದ್ದೆ ಮತ್ತು ಹೊಲಕ್ಕಿನ್ತ ಭಿನ್ನ..
ಅಡಕೆ ತೋಟ , ತೆಂಗಿನ ತೋಟ, ದ್ರಾಕ್ಷಿ ತೋಟ ಸರಿ.
ಭತ್ತದ ಗದ್ದೆ ಸರಿ.
ರಾಗಿ ಹೊಲ, ಶೇನ್ಗ ಹೊಲ ಸರಿ.

ನಮ್ಮೂರ ಕಡೆ "ಗದ್ದೆ" ಪದ ಉಪಯೋಗ ಬಹಳ ಕಡಿಮೆ. ಏಕೆಂದರೆ ನೀರಾವರಿ ಜಮೀನು ನಮ್ಮಲ್ಲಿ ಹೆಚ್ಚಿಲ್ಲ!.
ನಮಗೆ ತೋಟ ಅಂದ್ರೆ ಅದ್ರ ಅರ್ಥ ತೆಂಗಿನ ತೋಟ ಅಂತಾನೆ!
ಎಲ್ಲ ಕಡೆಯಂತೆ ಹೊಲ ಅಂದ್ರೆ ರಾಗಿ, ಷೇನ್ಗ, ನೀರುಳ್ಳಿ ಇತ್ಯಾದಿ ಬೆಳೆಯುವ ಹೊಲಗಳು.

ಅಂದ ಹಾಗೆ "ರಾಗಿ ಹೊಲದಾಗೆ ಒಂದು ಗುಡಿಸಲೋ.. " ಹಾಡು ಹೆಂಗಿದೆ?.. ಬೊಮ್ಬಾಟ್!.. ನೀವೇನ್ ಹೇಳ್ತೀರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 8:59pm — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ತೋಟದಲ್ಲಿ ಗಿಡಮರಗಳನ್ನು ಬೆಳೆತೀವಿ.

ಮಾದರಿ.. ಅಡಕೆ ಮರದ ತೋಟ, ತೆಂಗಿನ ಮರದ ತೋಟ, ಮಾವಿನ ಮರದ ತೋಟ/ತೋಪು, ಹೂವಿನ ಗಿಡ/ಮರದ ತೋಟ ಹೀಗೆ

ಆದ್ರೆ ಹೊಲ ಮತ್ತು ಗದ್ದೆಯಲ್ಲಿ ಸಣ್ಣಸಣ್ಣದಾಗಿ ತೆನೆ ಬಿಡುವಂತ ಬೆಳೆ ಬೆಳೆಯೋದು.

ಆದ್ರೆ ಕಾಯಿಪಲ್ಲೆ(ತರಕಾರಿ)ಯ ಗದ್ದೆಯೂ ಇರಬೋದು, ಹೊಲವೂ ಇರಬೋದು.

ಆದ್ರೆ ಹಣ್ಣಿನ ತೋಟಕ್ಕೆ ತೋಪು ಅಂತಾರೆ ನಮ್ಮ ಕಡೆ, ಮಾವಿನ ತೋಪು, ದಾಳಿಂಬೆ ತೋಪು, ಹೀಗೆ.

.
.
.

ತೋಂಟ = ತೋಟ
ತೋಂಡು/ತೋಡು... ತೋಡಿ ಮಾಡಿದ್ದು ತೋಟ.... !!( ಇಲ್ಲಿ ಉತ್ತಿರಲ್ಲ, ಅಂದ್ರೆ ನೇಗಿಲ ಉಳುಮೆ ಇರಲ್ಲ, ಪಾತಿ ತೋಡಿ, ಗಿಡ ನೆಡೋದು. )

Ka. tōḍu to take water out of a large vessel with a small one, bail out water, put rice from one vessel into another one or another place, wind thread from one spool upon another one, remove as ear-wax, etc., dig, excavate a hole, burrow, bury (as an arrow in a victim), penetrate (as the breast);
tōṭa, tōṇṭa garden;
tōṭagāṟa, tōṭiga, tōṇṭiga gardener.

Ka. pola a plough-field; place, direction.
ಪೊಲ/ಹೊಲ ಉತ್ತನೆಲ, ಉಳುಮೆಯಾದ ನೆಲ

Ka. gaṇṇa a division of paddy-land, a paddyfield; gar̤de (inscr.), garde, gadde field, esp. paddyfield; (Hav.) gedde field.
ಗಣ್ಣ = ಗದ್ದೆ/ಹೊಲ ಒಂದು ಪಾಲು
ಗಱ್ದೆ/ಗರ್ದೆ/ಗದ್ದೆ/ಗೆದ್ದೆ = ಬತ್ತದ ನೆಲ; ಬೆಳೆನೆಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 9:38pm — ವೈಭವ

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

ವೈಭವ's picture

ಯಾಕೆ ? ಬೆಳಗಾವಿಯಲ್ಲಿ ಕಬ್ಬಿನ ಗದ್ದೆಗಳಿಲ್ಲವೆ?

ನಾನು ತಿಳಿದಿರುವ ಮಟ್ಟಿಗೆ ಅಲ್ಲಿ ಕಬ್ಬು ಹೆಚ್ಚು ಬೆಳೆಯುತ್ತಾರೆ. ಅಲ್ಲವೆ?
-----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2007 - 9:43pm — ವೈಭವ

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

ವೈಭವ's picture

ನಮ್ಮ ಊರಲ್ಲಿ ಹಲವು ಬಗೆಯ ಗದ್ದೆಗಳಿವೆ
೧) ಮಣ್ಣೇರಿ ಗದ್ದೆ
೨) ಎರಗದ್ದೆ
೩) ಏರಿ ಕೆಳಗಲ್ ಗದ್ದೆ.

ನಮ್ಮಲ್ಲಿ ಗದ್ದೆಯಲ್ಲಿ ಬೆಳೆಯೋದು ಎರಡೆ ನೆಲ್ಲು(ಬತ್ತ), ಕಬ್ಬು

ಹೊಲಗಳು
೧) ಹಿಪ್ಪನೇರಳೆ ಹೊಲ ( ಇದು ರೇಶಿಮೆ ಹುಳುವಿಗೆ )
೨) ರಾಗಿಹೊಲ
೩) ಜೋಳದ ಹೊಲ
೪) ಸೂರ್ಯಕಾಂತಿ ಹೊಲ
೫) ಆಲೆಮನೆಹೊಲ (ಹಿಂದೆ ಆಲೆಮನೆಯಾಗಿತ್ತು. ಈಗ ಹೊಲವಾಗಿದೆ Smiling )

---ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 8:06am — savithru

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

savithru's picture

ಮರ್ತೇ ಬಿಟ್ಟಿದ್ದೆ!

ಹೊಲಗಳನ್ನ ಆ ಹೊಲದಲ್ಲಿನ ಮಣ್ಣಿನ ವಿಧವನ್ನು ಅನುಸರಿಸಿ ಕೂಡ ಬೇರೆ ಬೇರೆ ಹಸರುಗಳಿನ್ದ ಕರೀತಾರೆ.

ನಮ್ಮೂರಲ್ಲಿ ಯರೆ ಹೊಲ, ಕರಲು ಮತ್ತು ಮಳ್ಳು ಹೊಲ ಅಂತ 3 ರೀತಿ ಇದ್ದಾವೆ.

ಮಾವಿನ ತೋಪು .. ....ಹೌದು ತೋಟ , ಗದ್ದೆ, ಹೊಲ, ಇವಿಗಳಿಗಿಂತ ಭಿನ್ನ. ತುಮ್ಬಾ ಹಿಂದೆ ನಾವು ಇದನ್ನ ಬಳಸ್ತಾ ಇದ್ವು. ಆದ್ರೆ ಈ ಪದ ಈಗ ನಮ್ಮೊರಿಂದ ಆಲ್‌ಮೋಸ್ಟ್ ಕಾಣೆಯಾಗಿದೆ. ( ತೋಪುಗಳು ಉಳುದ್ರೆ ತಾನೇ ಪದಗಳು ಉಳಿಯೋದು?!)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 11:14am — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ರಾಮನಗರದಲ್ಲಿ ನೋಡ್ರಿ, ಕಣ್ಣು ತುಂಬಾ ಮಾವುತೋಪುಗಳಿವೆ...

ಒಂಚರತಿ ಮೈಸೂರಿಂದ ಬೆಂಗಳೂರಿಗೆ ಬಸ್ಸಲ್ಲಿ ಬಂದ್ರೆ ಮದ್ದೂರಿಂದ ಬಿಡದಿ ವರೆಗೂ ಮಾವಿನ ತೋಪು, ತೆಂಗಿನ ತೋಟಗಳೇ. ಮದ್ದೂರಿಗೆ ಮುನ್ನ ಬತ್ತಕಬ್ಬಿನ ಗದ್ದೆಗಳು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 11:14am — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ರಾಮನಗರದಲ್ಲಿ ನೋಡ್ರಿ, ಕಣ್ಣು ತುಂಬಾ ಮಾವುತೋಪುಗಳಿವೆ...

ಒಂಚರತಿ ಮೈಸೂರಿಂದ ಬೆಂಗಳೂರಿಗೆ ಬಸ್ಸಲ್ಲಿ ಬಂದ್ರೆ ಮದ್ದೂರಿಂದ ಬಿಡದಿ ವರೆಗೂ ಮಾವಿನ ತೋಪು, ತೆಂಗಿನ ತೋಟಗಳೇ. ಮದ್ದೂರಿಗೆ ಮುನ್ನ ಬತ್ತಕಬ್ಬಿನ ಗದ್ದೆಗಳು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 12:34pm — savithru

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

savithru's picture

ನಮ್ಮೂರಲ್ಲಿ ಹಿಂದೆ ಒಂದೇ ಒಂದು ಮಾವಿನ ತೋಪು ಇತ್ತು. ಈಗ ಅದು ಇಲ್ಲ.
ಇತರೆಡೆ ತೋಪು ಗಳು ಇನ್ನೂ ಉಳಿದಿರುವುದು ಸಮಾಧಾನಕರ ಸಂಗತಿ!...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 12:15pm — anivaasi

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

anivaasi's picture

ಗದ್ದೆಗೆ ಬದು, ಹೊಲಕ್ಕೆ ಬೇಲಿ ಅಲ್ವ?
ನಮ್ಮೂರ ಕಡೆ ಮಾತಿನಲ್ಲಿ ಅದು "ಗೆದ್ದಿ - ಗದ್ದಿ" ಆಗತ್ತೆ.
ಇನ್ನು ಹೊಲ ಅಂತ ಬಳಕೆ ದ.ಕ ದಲ್ಲಿ ಇದ್ದ ಹಾಗಿಲ್ಲ.
ಆದರೆ - "ಹಾಡಿ" ಅಂದರೆ ಮನೆ ಪಕ್ಕದಲ್ಲೋ, ಹಿತ್ತಲಲ್ಲೋ ಇರುವ - mini-forest!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2007 - 12:31pm — savithru

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

savithru's picture

ಗದ್ದೆಗೆ ಬದು, ಹೊಲಕ್ಕೆ ಬೇಲಿ ಅಲ್ವ?....

ಬದು, ಎರಡು ಹೊಲಗಳನ್ನು ಪ್ರತ್ಯೇಕಿಸಲು, ( ಅಲ್ಲದೇ ನೀರು ಹೊರಗೆ ಹರಿದು ಹೋಗದಂತಿರಲು) ಬಳಸ್ತೀವಿ! ಈ ಪದ ತೋಟಕ್ಕೆ ಹೊಲಕ್ಕೆ ಗದ್ಡೆಗೆ ಈಕ್ವಲ್ ಆಗಿ ಬಳಸ್ತಾರೆ ಅಂತ ನಂಗೆ ಅನಿಸುತ್ತೆ.

ತೋಪುಗಳಲ್ಲಿ ಬಳಸಲ್ಲ.. ಕಾರಣ ಅಲ್ಲಿ ನೀರು ಸಂಗ್ರಹ ಮಾಡುವ ವಿಶೇಷ ವ್ಯವಸ್ಥೆ ಬೇಕಿಲ್ಲ, ಹೊಲ ಗದ್ದೆಗಳಲ್ಲಿ ಬದ / ಬದು ಬೇಕೇ ಬೇಕು. ತೊಟಗಳಲ್ಲಿ ಕೆಲವೊಮ್ಮೆ ಬದು ಮಾಡ್ತಾರೆ .. ಕೆಲವೊಮ್ಮೆ ಇಲ್ಲ!

ಇನ್ನೂ ಬೇಲಿ ವಿಷಯಕ್ಕೆ ಬಂದ್ರೆ ... ಇದು ಬೇಕಿರುವುದು ಹಿತ್ತಲು.. ಸಂಪ ಲುಗಳಿಗೆ!. ಹೊಲಕ್ಕೆ ಬೇಲಿ ಹಾಕಲ್ಲ ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2007 - 6:10pm — hene

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

hene's picture

ನೀರು ಬೇಡುವುದು ಗದ್ದೆ, ನೀರು ಬೇಡದ್ದು ಹೊಲ ಎಂಬುದು broadly ಸರಿ. ಇದನ್ನೇ ಮುಂದುವರೆಸುತ್ತಾ...

೧) ಸಮತಟ್ಟಾಗಿರದೆ ಏರುತಗ್ಗಿನಿಂದ ಕೂಡಿದ ಪ್ರದೇಶದಲ್ಲಿ ಹೊಲಗಳು ಏರಿನಲ್ಲಿ, ಗದ್ದೆಗಳು ತಗ್ಗಿನಲ್ಲಿ ಇರುತ್ತವೆ. ನೀರಿನ ಹರಿವು ಇಳಿಜಾರಿನೆಡೆಗೆ ಇರುವುದರಿಂದ ಅದು ಹರಿದು ಹೋಗಿ ನಿಲ್ಲುವ ಜಾಗ ಗದ್ದೆಯಾಗುತ್ತದೆ. ಸದಾ ನೀರು ಬೇಡುವ ಬೆಳೆಯನ್ನು (ಭತ್ತ) ಅಲ್ಲಿ ಬೆಳೆಯುವುದು. ಏರಿನ ಹೊಲ ರಾಗಿ, ಅವರೆ, ಹುಚ್ಚೆಳ್ಳು ಇತ್ಯಾದಿಗೆ ಹೇಳಿ ಮಾಡಿಸಿದ್ದು. ಬೆಂಗಳೂರಿನ ಸುತ್ತಮುತ್ತಲು ಇದ್ದ ಹಳ್ಳಿಗಳಲ್ಲಿ ಒಂದು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಹೀಗಿತ್ತು. ಈಗ ಬೆಂಗಳೂರು ಅವನ್ನೆಲ್ಲ ನುಂಗಿ ನೀರು ಕುಡಿದಿದೆ ಬಿಡಿ.

೨) ದಕ್ಷಿಣ ಕನ್ನಡ ಕರಾವಳಿಯಾದ್ದರಿಂದ ಅಲ್ಲಿ ಮಳೆ, ತೇವಾಂಶ ಹೆಚ್ಚು. ಸಮುದ್ರಕ್ಕೂ, ಪಶ್ಚಿಮ ಘಟ್ಟಗಳಿಗೂ ಮಧ್ಯೆ ಇರುವುದರಿಂದ ನೆಲದಲ್ಲಿ ನೀರಿನ ಪಸೆ ಹೆಚ್ಚು. ಹಾಗಾಗಿ ಮಳೆಗಾಲದಲ್ಲಿ ಭತ್ತದ ಗೆದ್ದಿ. ಮಳೆಗಾಲ ಕಳೆದು ಭತ್ತದ ಕೊಯ್ಲು ಮುಗಿದ ಮೇಲೆ ಒಣಗದ್ದೆಗೇ ಧಾನ್ಯ (ಉದ್ದು, ಹೆಸರು, ಹುರುಳಿ, ಅವಡೆ ಹೀಗೆ) ಹಾಕುತ್ತಾರೆ. ಇವು ಯಾವಕ್ಕೂ ನೀರು ಹೆಚ್ಚು ಬೇಡ. ನೀರು ಬೇಡದ್ದನ್ನು ಬೆಳೆವ ಜಮೀನು ಹೊಲವಾದರೆ ಇಲ್ಲಿ ಗೆದ್ದಿಯೇ ಹೊಲವಾಯಿತಲ್ಲವೆ!

೩) ದಕ್ಷಿಣ ಕನ್ನಡದಲ್ಲಿ ಮನೆಯ ಸುತ್ತಮುತ್ತಲಿರುವ ಗೆದ್ದಿಗಳಿಗೆ ಸಾಮಾನ್ಯವಾಗಿ ದೆರೆ/ದೆರಿ (ಬೇಲಿ) ಇರುತ್ತದೆ. ಮಣ್ಣನ್ನೇ ಏರಿಸಿ ಅದರ ಮೇಲೆ ಕಳ್ಳಿಯಂತಹ ಗಿಡಗಳನ್ನು ನೆಟ್ಟು ಮಾಡಿದ್ದು ಇದು. ಮನೆಯಿಂದ ದೂರ ಎಲ್ಲೋ ಬಯಲಿನಲ್ಲಿರುವ ಗೆದ್ದಿಗಳಿಗೆ ಬರೀ ಅಂಚುಕಟ್ಟುಗಳಿರುತ್ತವೆ, ಮೇಲೆ ನಡೆದುಹೋಗಲು, ಒಬ್ಬರ ಗೆದ್ದಿಯನ್ನು ಮತ್ತೊಬ್ಬರದರಿಂದ ಬೇರೆ ಮಾಡಲು, ನೀರು ನಿಲ್ಲುವಂತೆ ಮಾಡಲು.

ಹೆಣೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2007 - 7:02pm — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

"ನೀರು ಬೇಡದ್ದು"

ಹೆಣೆ...

ಇಲ್ಲಿ "ಬೇಡವಾದ್ದು" ಅಂತ ಇರ್ಬೇಕು.

ಬೇಡುವುದು X ಬೇಡದ್ದು
ಬೇಕಾದುದು X ಬೇಡವಾದುದು!!

'ಮುಂದುವರೆ' ಅಲ್ಲ 'ಮುಂದುವರಿ'( ಮುಂದು + ಹರಿ ) ಅಂತ ನನ್ನನಿಸಿಕೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2007 - 9:40pm — hene

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

hene's picture

ನಾನು ಬಳಸಿದ್ದು 'ಬೇಡುವುದು' ಪದದ ವಿರುದ್ಧಾರ್ಥಕವಾಗಿಯೇ: ನೀರು ಬೇಡುವ ಭತ್ತ, ನೀರು (ನೀರನ್ನು) ಬೇಡದ ನೆಲಗಡಲೆ.

ನಮ್ಮ ಕಡೆ ಮಕ್ಕಳ ಚೇಷ್ಟೆ ತಡೆಯಲಾರದ ಅಮ್ಮ 'ಬೆನ್ನ್ ಬೇಡತ್ತಾ!' ಅಂತ ಬೆದರಿಸುತ್ತಾಳೆ. ಅಂದರೆ 'ಬೆನ್ನು ಹೊಡೆತ ಬೇಡುತ್ತಿದೆಯಾ? ನಾಲ್ಕು ಬಾರಿಸಲಾ?' ಅಂತ.

ಹಾಗೆಯೇ ನಮ್ಮ ಕಡೆ ನಡೆ (ಹೊರಡು/walk), ಬರೆ (write) ಎನ್ನುವಂತೆಯೇ 'ಮುಂದುವರೆ'ಯೂ ಹೇಳುತ್ತಾರೆ. (ಮುಂದು ಹರಿ - ಇಂದಲೇ ಈ ಪದ ಹುಟ್ಟಿರಬಹುದು, ಯಾರಿಗ್ಗೊತ್ತು. ಈ ವಿಷಯ ಇಲ್ಲಿ 'ಬೇಡದ್ದು, ಬೇಡವಾದುದು' ಅಂತ ನನ್ನ ಅನಿಸಿಕೆ!)

ಹೆಣೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2007 - 10:52pm — mahesha

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

mahesha's picture

ನಿಮ್ಮ ’ಕಡೆ’ಯ ಬಳಕೆಯಾದ್ರೆ ಓಕೆ...

ನಮ್ಮ ಕಡೆ ಇದು ಇಲ್ಲ!! ನಾವು ಬೇಡವಾದ/ಬೇಕಾದ ಇದನ್ನೇ ಬಳಸೋದು.!!

ಆಡುನುಡಿಯಲ್ಲಿ ಏನೇ ಇದ್ರು.. ಮುಂದುವರಿ ಇದು ಸರಿ ಇರಬಹುದು ಅಂತ ನನ್ನ ಅನಿಸಿಕೆ.

ಮುಂದುವರಿ, ಹೆಚ್ಚುವರಿ, ಒತ್ತುವರಿ, ಮುತ್ತುವರಿ, ಸುತ್ತುವರಿ... ಇವೆಲ್ಲ ’ಹರಿ’ಯನ್ನು ಹಿಂದೆ ಸೇರಿಸಿ ಆಗಿರವ ಒರೆಗಳು!!

ನಿಮಗೆ ನುಡಿಯ ಬಗ್ಗೆ ಆಸಕ್ತಿ ಇದೆ ಅಂತ ಹೇಳಿದೆ!! ತಪ್ಪುಹುಡುಕಿಲ್ಲ! Sad ( ನೀವು ಹಿಂದೆ ಕನ್ನಡದ ಸೊಗಡು ಬಗ್ಗೆ ಮಾತಾಡಿದ್ರೆ ನೆನೆಪಿದೆ ನಂಗೆ )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 3:43pm — kannadakanda

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

kannadakanda's picture

ಗದ್ದೆ(ಗೞ್ದೆ), ಹೊಲ ಒಂದೇ. ಮರಗಳು ವಿರಳವಾಗಿದ್ದರೆ ಹೊಲ ಅಥವಾ ಗದ್ದೆ. ಮರಗಳಿಂದ ತುಂಬಿದ್ದರೆ ತೋಟ. ಹೊಲಗದ್ದೆಗಳಿಗಿಂತ ತೋಟದಲ್ಲಿ ವೈವಿಧ್ಯತೆ ಹೆಚ್ಚು. ಬತ್ತದ ಗದ್ದೆ, ಕಬ್ಬಿನ ಗದ್ದೆ, ರಾಗಿ ಹೊಲ. ಆದರೆ ಅಡಿಕೆ ತೋಟ, ಕಾಪಿ಼ ತೋಟ, ತೆಂಗಿನ ತೋಟ. ಮಧ್ಯದಲ್ಲಿ ಏಲಕ್ಕಿ, ಮೆಣಸು, ಸಿಲ್ವರ್ ಓಕ್ ಇತ್ಯಾದಿ ಮರಗಳಿರಬಹುದು ತೋಟಗಳಲ್ಲಿ. ಹೊಲಗದ್ದೆಗಳಲ್ಲಿ ಮರಗಳಿಗೆ ಬಱ. ಇದ್ದರೂ ಅಲ್ಲೊಂದು ಇಲ್ಲೊಂದು ಇರಬಹುದಷ್ಟೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 10:06am — kannadakanda

ಉ: "ಗದ್ದೆ" ಮತ್ತು "ಹೊಲ" ಏನು ವ್ಯತ್ಯಾಸ?

kannadakanda's picture

ಮೇಲೆ ಕೆಲವರು ಹೇೞಿದಂತೆ ಗದ್ದೆ ಮತ್ತು ಹೊಲಗಳಿಗೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಗದ್ದೆ ಯಾವಾಗಲೂ ಒದ್ದೆ(ತೇವದಿಂದಿರುವುದು). ಹೊಲಕ್ಕೆ ಅಷ್ಟಾಗಿ ನೀರು ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಂಗಾವತಿಯ ಭತ್ತದ ಗದ್ದೆ
  • ಬರಿ ಸುಳ್ಳು, ಸ್ವಲ್ಪ ಮಳ್ಳು-೨
  • ಬರಿ ಸುಳ್ಳು, ಸ್ವಲ್ಪ ಮಳ್ಳು-೨
  • Eco-system services - ಒಂದು ಉದಾಹರಣೆ
  • ನವರಸದ ನಗೆ - ಶೃಂಗಾರ
Syndicate content

ಲೇಖಕರು

mananthprabhu's picture

ಪೂರ್ಣ ಹೆಸರು
ಅನ೦ತ ಪ್ರಭು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator