ಮಹೇಶ, ರಾಮಸೇತುನಿನ ಬಗ್ಗೆ ಚರ್ಚೆಸಲು ಹೋಗಿ ರಾಮನನ್ನೇ ಕಳೆದುಕೊಂಡಿತು ನಮ್ಮ ನಾಡು. ಈ ರಾಮಸೇತು ವಿಷಯ, ಆಸ್ತಿಕ ನಾಸ್ತಿಕ ಗಡಿಯನ್ನು ದಾಟಿ, ಕೇವಲ ರಾಜಕೀಯ ಒಣಪ್ರತಿಷ್ಠೆಯ ಕಣವಾಗಿ ನಿಂತಿದೆ.
೧. ರಾಮ ಮತ್ತು ರಾಮಸೇತುವಿನ ಬಗ್ಗೆ ಏನೇ ತಕರಾರು ಇರಬಹುದು ಆದರೆ "There is no historical evidence that Rama existed" ಅಂತ ಭಾರತ ಸರ್ಕಾರ ಫರ್ಮಾನು ಹೊರಡಿಸಿದರೆ, ಒಂದು ಕ್ಷಣ ಯೋಚಿಸು, ಬೇರೆ ದೇಶದವರು ಅದೆಷ್ಟು ನಗೆಚಟಾಕಿಗಳನ್ನು ಹಾರಿಸಬಹುದು ನಮ್ಮ ಮೇಲೆ. ಅಲ್ಲೆಲ್ಲೋ ಭಾರತಕ್ಕೆ ನಂಟೇ ಆಗದ ಸುನೀತಾ ವಿಲಿಯಮ್ಸ್, ಇವಳು ನಮ್ಮವಳೇ ಬಾಮ್ಮ ಅಂತ ಆರತಿ ಬೆಳಗುತ್ತೀವಿ (ಈ ವಿಷಯವಾಗಿ ಇಂಟರ್ನೆಟ್ಟಿನಲ್ಲಿ ಈಗಾಗಲೇ ಹಲವರು ಎದ್ದುಬಿದ್ದು ನಗಾಡಿದ್ದಾರೆ) ಆದರೆ ಇಲ್ಲಿ ರಾಮ "ರಾಮ್, ರಾಮಾ" ಆಗ್ತಾನೆ.
೨. ಅತಿಮುಖ್ಯವಾಗಿ, ನಾವೆಲ್ಲರೂ ಗಮನಿಸಬೇಕಾದ್ದು "ರಾಮ" ಎಂಬ "ಕಾನ್ಸೆಪ್ಟ್" ಕೇವಲ ನಮ್ಮ ದೇಶದಲ್ಲಿ ಇಲ್ಲ. ಬೇರೆ ಬೇರೆ ದೇಶಗಳಲ್ಲಿಯೂ ರಾಮ-ಸೀತೆಗೆ ನಂಟಾದ ಜಾನಪದ ಕತೆಗಳಿವೆ.
೩. ಇಂದಿನ ಟೈಮ್ಸಿನಲ್ಲಿ ವರದಿಯಾದಂತೆ, ASIನವರಿಗೆ ಐತಿಹಾಸಿಕ ಸಾಕ್ಷ್ಯಗಳೇ ಮುಖ್ಯವಾಗುವುದಾದರೆ, ಹೊರಗೆಡವಲಿ ನಮ್ಮ ಭವ್ಯ ಭಾರತ ದೇಶದ ಎಲ್ಲ ಪ್ರದೇಶಗಳ ಚರಿತ್ರೆಯನ್ನು. ಅದೆಷ್ಟು ಊರುಗಳ ಇತಿಹಾಸ ಸುಳ್ಳಿನ ಕಂತೆಗಳಿಂದ ತುಂಬಿ ತುಳುಕುತ್ತಿಲ್ಲವೇ.
ಇಲ್ಲಿ "ರಾಮ ಎಂಬುವನು ಇರಲೇ ಇಲ್ಲ" ಎಂಬುದು ದೊಡ್ಡ ಪ್ರಶ್ನೆ ಆಗಬೇಕಿಲ್ಲ, ಆದರೆ ನಮ್ಮ ದೇಶದ ರಾಜಕೀಯ ಅರಾಜಕತೆಯನ್ನು ಕಂಡು ಕೆಟ್ಟ ನಗು ಬರುತ್ತದೆ.
"""There is no historical evidence that Rama existed" ಅಂತ ಭಾರತ ಸರ್ಕಾರ ಫರ್ಮಾನು ಹೊರಡಿಸಿದರೆ "
ನೋಡಪ್ಪ..
ಮೊದಲು ಕೇಸು ಹಾಕಿದವರು ಯಾಕೆ ಕೇಸು ಹಾಕಿದ್ದು, ಅವರದು ತಪ್ಪಿದೆ ಅಲ್ವಾ?
ಆಮೇಲೆ NASA ಅವರು ಹೇಳಿದ್ದಾರೆ ಅಂತ ಸುಳ್ಳು ಹರಡಿದ್ದು, ಆಮೇಲೆ NASA ನಮಗೂ ಇದಕ್ಕೂ ನಂಟಿಲ್ಲ ಅಂದುದು, ಇದೆಲ್ಲ ಯಾಕೆ ಬೇಕಿತ್ತು...
"ರಾಮಸೇತು" ಇದನ್ನು ಮೊದಲು ಮಾಡಿದ್ದೇ ಬೀ.ಜೇ.ಪಿ ಸರಕಾರವಂತೆ.!! ಈಗ ಅವರೇ ಅದಕ್ಕೆ ಅಡೆ ಹಾಕ್ತಿದ್ದಾರೆ.
ಅದೇ ಕಣೋ ನಾನೂ ಹೇಳ್ತಾ ಇರೋದು. ಈ ಇಡಿ "ರಾಮಸೇತು ಪ್ರಕರಣ", ಆಸ್ತಿಕ-ನಾಸ್ತಕ ಚೌಕಟ್ಟಿನ್ನು ಮೀರಿ, ಗಟ್ಟಿಯಾದ ಆಧಾರಗಳಿಂದ ತೂಗಲಾಗದೆ, ಕೇವಲ ರಾಜಕೀಯ ಬಲಾಬಲ ಪರೀಕ್ಷೆಯ ಆಖಾಡ ಆಯಿತಲ್ಲಾ ಎಂಬ ಬೇಸರವಿದೆ.
ಕೇಸು ಏನೇ ಇರಲಿ..
ಇಲ್ಲಿ ಸರಕಾರ, ’ರಾಮ ಎಂಬ ಒಬ್ಬ ಚಾರಿತ್ರಿಕ ವ್ಯಕ್ತಿ ಇದ್ದ ಎನ್ನಲು ಯಾವ ಪುರಾವೆಯೂ ಇಲ್ಲ’ ಎಂದದ್ದು ಸರ್ರಿಯಾಗೇ ಇದೆ.
ಕಾವ್ಯಗಳನ್ನು ’ಚರಿತ್ರ” ಎನ್ನುವ ನಮಗೆ, ಹಾಗೆನ್ನುವಾಗ ವಾಲ್ಮೀಕಿಯ/ ವ್ಯಾಸರ creative ಯೋಚನೆಗಳಬಗ್ಗೆ ಹಗುರವಾಗಿ ನಾವು ಮಾತಾಡುತ್ತಿದ್ದೇವೆಂಬ ಅರಿವಿರಬೇಕು. ಅವರನ್ನು ಬರಿಯ Historians ಆಗಿ ನೋಡುವುದಕ್ಕಿಂತ ಹೆಚ್ಚಾಗಿ ಕವಿಗಳನ್ನಾಗಿ ನೋಡಬೇಕು.
ಇ೦ತಹುದೇ ವಾದವೊ೦ದು ಕ್ರಿಸ್ತನ ಬಗ್ಗೆ ನಡೆಯುತ್ತಿದ್ದಾಗ 'ಆತ ದೇವದೂತನೋ ಅಲ್ಲವೋ ಎ೦ದು ಚರ್ಚಿಸುವುದಕ್ಕಿ೦ತ ಆತ ನಮಗೇನು ಕಲಿಸಿದನೆನ್ನುವುದೇ ಮುಖ್ಯ' ಎ೦ಬ ಅನ್ನಿಸಿಕೆ ಕೇಳಿಬ೦ದಿತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉದಾಹರಣೆಯಾಗಿ ಕೊಟ್ಟದ್ದು, ಒ೦ದು ಸಲ ಫೋರ೦ ಒ೦ದರಲ್ಲಿ ಕ್ರಿಸ್ತನ ಬಗ್ಗೆ, ಆತ ದೇವದೂತನೋ ಅಲ್ಲವೋ ಎ೦ಬ ಬಗ್ಗೆ, ಚರ್ಚೆ ನಡೆಯುತ್ತಿತ್ತು. ಇಲ್ಲಿ ಅ೦ತಹುದೇ ಚರ್ಚೆ ರಾಮನ ಬಗ್ಗೆ ನಡೆಯುತ್ತಿದೆ.
ಮೇಲಿನ ವಾಕ್ಯದಲ್ಲಿ ಕ್ರಿಸ್ತನನ್ನು ರಾಮನಿ೦ದ ಸಬ್‍ಸ್ಟಿಟ್ಯೂಟ್ ಮಾಡಿಕೊ೦ಡು ಓದಿನೋಡಿ.

ಈ ಚರ್ಚೆ ಕುತೂಹಲಕಾರಿಯಾಗಿದೆ. ಆಸ್ತಿಕರು-ನಾಸ್ತಿಕರ ವಿಚಾರ ಬಿಟ್ಟುಬಿಡಿ. ರಾಜಕೀಯ ಪಕ್ಷಗಳನ್ನೂ ಬದಿಗಿಡೋಣ. ರಾಮ ಸೇತು ಇತ್ತು ಅದನ್ನು ಉಳಿಸಬೇಕು ಎಂದು ಹೋರಾಡುತ್ತಿರುವವರು ಯಾರು ಎಂಬುದನ್ನೊಮ್ಮೆ ನೋಡೋಣ. ರಾಮನಿದ್ದ ಅವನು ನಿರ್ಮಿಸಿದ್ದ ಸೇತುವೆ ಇತ್ತು. ಅದನ್ನು ಉಳಿಸಬೇಕು ಎನ್ನುವ ವಿಶ್ವಹಿಂದೂ ಪರಿಷತ್ತಿಗೆ ನರ್ಮದಾ ಅಣೆಕಟ್ಟೆಯಿಂದಾಗಿ ಮುಳುಗಿಹೋಗುತ್ತಿದ್ದ ಯಾವ ದೇವಸ್ಥಾನದ ಬಗ್ಗೆಯೂ ಕಾಳಜಿ ಇರಲಿಲ್ಲ. ಅಷ್ಟೇಕೆ ಸಮುದ್ರದ ಅಡಿಯಲ್ಲಿರುವ ರಾಮನ ಸೇತುವೆಗೆ ದೇಶವ್ಯಾಪಿಯಾಗಿ ಚಳವಳಿ ಹೂಡುವ ಇವರಿಗೆ ದಲಿತರನ್ನು ಕೊಲ್ಲಬೇಡಿ ಎಂದು ತಮ್ಮ ಹಿಂದೂ ಸೋದರರಿಗೆ ಹೇಳಲು ನಾಲಿಗೆ ಇರುವುದಿಲ್ಲ. ಚಾತುರ್ ವರ್ಣ್ಯವನ್ನು ಜಾರಿಗೆ ತಂದುಬಿಡುವ ಉತ್ಸಾಹದಲ್ಲಿರುವವರಿಂದ ಇಂಥದ್ದನ್ನೆಲ್ಲಾ ನಿರೀಕ್ಷಿಸಬಾರದು ಎಂದುಕೊಂಡು ಯೋಚಿಸೋಣ. ನಂದಗುಡಿ, ಚಾಮಲಾಪುರ, ನಂದಿಕೂರು ಮುಂತಾದ ಕರ್ನಾಟಕದ ಊರುಗಳಲ್ಲಿ ತಥಾಕಥಿತ ಇಂಡಸ್ಟ್ರಿಗಳಿಗೆ ಬಲಿಯಾಗುತ್ತಿರುವ ಪರಿಸರವೂ ರಾಮನಾಳಿದ ದೇಶದ ಪರಿಸರ ಎನಿಸುವುದಿಲ್ಲವೇಕೆ? ಅದು ಬಿಡಿ ಇಲ್ಲಿ ಜಮೀನು ಕಳೆದುಕೊಳ್ಳುತ್ತಿರುವವರೆಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ಹಿಂದೂ ಸೋದರರೇ ಎಂಬುದೇಕೆ ಕಾಣಿಸುವುದಿಲ್ಲ?
ರಾಮಸೇತುವಿನ ವಿಷಯಕ್ಕೆ ಬಂದಾಗ ಮುಖ್ಯವಾಗುವ ಪರಿಸರ, ಸಾಗರದಾಳದ ಸೂಕ್ಷ್ಮ ಜೈವಿಕ ಕ್ರಿಯೆಗಳು ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅನ್ವಯಿಸುವುದಿಲ್ಲ. ಟನ್ ಗಟ್ಟಳೆ ಹಾರುಬೂದಿ ಅರಬಿ ಕಡಲಿನ ಮೇಲೆ ಸುರಿದರೂ ಪರಿಸರ ಹಾನಿಯಾಗುವುದಿಲ್ಲ ಎಂದು ಇವರು ಭಾವಿಸಿದ್ದಾರೆಯೇ?
ರಾಮಸೇತು ಇತ್ತೆಂದು ನಾಸಾ ಹೇಳಿದ್ದು ಮುಖ್ಯವಾಗುತ್ತದೆಯಾದರೆ ಪಶ್ಚಿಮಘಟ್ಟಗಳು ಜಗತ್ತಿನ ಹತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು WWF, WCS ಗಳು ಹೇಳಿದ್ದೂ ಮುಖ್ಯವಾಗಬೇಕಲ್ಲ. ಇವೂ ಅಮೆರಿಕದ ಸಂಸ್ಥೆಗಳೇ. ಪಶ್ಚಿಮಘಟ್ಟವನ್ನು ಹಾಳುಗೆಡವಲು ಟೊಂಕಕಟ್ಟಿರುವವರು ಸದ್ಯಕ್ಕಂತೂ ಹಿಂದೂ ಐಕ್ಯತೆಯನ್ನು ಸದಾ ಜಪಿಸುವ ಪಕ್ಷವಾದ ಬಿಜೆಪಿಯ ಪ್ರಮುಖ ನಾಯಕರಾಗಿರುವ ವಿ.ಎಸ್. ಆಚಾರ್ಯರು. ನಾಗಾರ್ಜುನ ಯೋಜನೆಯಿಂದ ನೆಲೆ ಕಳೆದುಕೊಳ್ಳುವವರು, ತೊಂದರೆ ಅನುಭವಿಸುವ ಮೀನುಗಾರರು ಹಿಂದೂ ಸೋದರರೇ ಎಂಬುದನ್ನು ಅವರು ಸದ್ಯ ಮರೆತಿದ್ದಾರೆಯೇ?
ಅವರೇನೋ ರಾಜಕಾರಣಿ. ಕರ್ನಾಟಕಾದ್ಯಂತ ರಾಮಸೇತುವಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಆರ್ ಎಸ್ ಎಸ್ ನ ನಾಯಕರಾರೂ ರಾಜಕಾರಣಿಗಳೆಲ್ಲವಲ್ಲ. ಇವರಿಗಾದರೂ ಇದರ ವಿರುದ್ಧ ಒಂದು ಪ್ರತಿಭಟನೆ ನಡೆಸಬಹುದಿತ್ತಲ್ಲ. ನರ್ಮದಾ ತಟದ ಜೀವಿಗಳನ್ನೂ, ಈ ಜೀವಿಗಳ ನಂಬಿಕೆಗಳನ್ನೂ ಉಳಿಸಲು ಹೋರಾಡುತ್ತಿರುವ ಮೇಧಾ ಪಾಟ್ಕರ್ ಶೃಂಗೇರಿಗೆ ಬಂದಾಗ ಅವರನ್ನು ವಿರೋಧಿಸಿದವರೇ ರಾಮ ಸೇತುವಿಗಾಗಿ ಕರ್ನಾಟಕದಲ್ಲಿ ಚಳವಳಿ ನಿರತರಾಗಿದ್ದಾರೆ. ಅಂದರೆ ಇವರಾರಿರೂ ಸಜೀವ ಪರಂಪರೆ ಬೇಡ.
ರಮೇಶ್ ಸಮಗಾರ
ರಾಮ + ಈಶ = ರಮೇಶ,
ಬಿ.ಜೆ.ಪಿ ಯವರ ಬಗ್ಗೆ ಸರಿಯಾಗಿ ಹೇಳೀದ್ದೀರಾ. ಆದರೆ ಕೆಲವನ್ನು ಮರೆತಿದ್ದೀರಾ ಅನ್ಸತ್ತೆ,
ರಾಮ ಸೇತು ಹೊಡಿ ಬೇಕಾಗಿರುವ ಮ೦ದಿ ಯಾರು ಅ೦ತಾ ಕೂಡಾ ನೋಡಿ.
ಡಿ. ಎಮ್.ಕೆ. ಅವರು ಹಿ೦ದೆ ರಾಜೀವ್ ಗಾ೦ಧಿ ಹತ್ಯಾ ಖಾ೦ಡದಲ್ಲಿ ದೋಷಿಗಳಾಗಿದ್ದರು.
ಈ ಕಾರಣದಿ೦ದ ಹಿ೦ದೆ ಕಾ೦ಗ್ರೆಸ್ ಸರ್ಕಾರ ಗುಜ್ರಾಲ್ ಪ್ರಧಾನಿ ಯಗಿದ್ದಾಗ ರಗಳೆ ಮಾಡಿ ಉರುಳಿಸಿತು.
ಮತ್ತೆ ಹತ್ಯೆ ಮಾಡಿದವರ ಜೊತೆ ಕೈ ಜೋಡಿಸಿ ಇ೦ದು ಕಾ೦ಗ್ರೆಸ್ ಅದೇನೇನು ಮಾಡ್ತಾಯಿದೆ ನೋಡಿ.
ಬಿ.ಜೆ.ಪಿ ಯಾಗಲಿ /ಕಾ೦ಗ್ರೆಸ್ ಆಗಲಿ ಯವುದಾದರೂ ಡಿ. ಎಮ್.ಕೆ. ಸಪೋರ್ಟ್ ಬೇಕೇ ಬೇಕು.
ಡಿ. ಎಮ್.ಕೆ. ಯವರ ಗುರುಗಳು ಪೆರಿಯಾರ್ ಮಹಾಶಯ.
ಆತ ರಾಮಾಯಣವನ್ನು ಠೀಕಿಸಿ ಕೆಟ್ಟದಾಗಿ ಒ೦ದು ಪುಸ್ತಕ ಬರೆದಿದ್ದಾನೆ. ರಾಮನ ಚಿತ್ರವನ್ನು ಮೆರವಣಿಗೆಯಲ್ಲಿ ಹೊತ್ತು
ಸಾರ್ವಜನಿಕವಾಗಿ ಸುಟ್ಟು ತೋರಿಸಿದ್ದಾನೆ.
ರಾಮ - ಆರ್ಯನ೦ತೆ ಮತ್ತು ರಾವಣ - ದ್ರಾವಿಡನ೦ತೆ.ರಾಮನನ್ನು ಕೆಟ್ಟದಾಗಿ ಚಿತ್ರಿಸಿ ರಾವಣನನ್ನು ಸಾಚನ೦ತೆ ಚಿತ್ರಿಸಿದ್ದಾನೆ.
ಹೀಗೆ ಹುಚ್ಚು ಹುಚ್ಚಾಗಿ ವಾದ ಮಾಡುವ ಜನ ಈ ಡಿ. ಎಮ್.ಕೆ ಮ೦ದಿ.
ರಮೇಶ ಅವರಿಗೆ ರಾಮನು ಬೇಕಿಲ್ಲ ಭೀಮನು ಬೇಕಿಲ್ಲ ಅವರಿಗೆ ಸಂಗಪರಿವಾರದ ಮೇಲೆ ಬಯ್ಯೂಮನಸು. ಆದಕ್ಕೆ ಯೆನಾದರು ಅನ್ನಿ ಅವರು ಧಲಿತರ ಕೊಲೆ, ಗುಜರತ್ ಗಲಭೆ ಅಂತ ಶುರು ಮಾಡ್ತಾರೆ. ಆದರೆ ದಲಿತರೆ ದಲಿತರನ್ನು ಕೆಟ್ಟದಾಗಿ ನದೆಸೊದನ್ನು ಅವರು ನೊಡಿಲ್ಲ ಅನ್ಸುತ್ತೆ. ಯೆಸ್ಟೊ ಕೆಳಜಾತಿಯವರು ಉತ್ತಮ ಮಟ್ಟದ ಅದಿಕಾರಿಗಳಾಗಿದ್ದು ಅವರ ಸಮಾಜಕ್ಕೆ ಯೆನೂ ಉಪಕಾರ ಮಾಡದ ಅವರನ್ನು ಬುದ್ದಿಹೆಳಿ ಸರಿ ಮಾಡಲು ಪ್ರಯತ್ನಿಸಿದರೆ ಒಳ್ಳೆಯದು.
ಸ್ವಾಮೀ ಎಷ್ಟು ಮಂದಿ ದಲಿತ ಅಧಿಕಾರಿಗಳಿದ್ದಾರೆ? ಈಗಲೂ ಬ್ಯಾಕ್ ಲಾಗ್ ಪೋಸ್ಟ್ ಗಳು ಕಾಲಿ ಉಳಿದಿರುವುದೇತಕೆ?
ಸಂಘಪರಿವಾರದವರನ್ನು ಬೈಯ್ಯುತ್ತಿಲ್ಲ. ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಿದೆ ಅಷ್ಟೇ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ವಿ.ಎಸ್ ಆಚಾರ್ಯರು ಬಿಜೆಪಿಯವರು. ಆರ್ ಎಸ್ ಎಸ್ ನ ಸ್ವಯಂ ಸೇವಕರು. ಹಿಂದೆ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಕೊಜೆಂಟ್ರಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದ್ದ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸುತ್ತಿದ್ದವರು. ಈಗ ಅದೇಕೆ ನಾಗಾರ್ಜುನ ವಿದ್ಯುತ್ ಸ್ಥಾವರನ್ನು ಬೆಂಬಲಿಸುತ್ತಿದ್ದಾರೆ?
ಹಿಂದೂ ಮಹಾಸಾಗರದ ಅಡಿಯಲ್ಲಿರುವ ತಥಾಕಥಿತ ಸೇತುವೆ ಮುಖ್ಯವಾಗುವಂತೆಯೇ ಅರಬೀ ಸಮುದ್ರದಲ್ಲಿರುವ ಕೋಟ್ಯಂತರ ಜೀವಿಗಳು ಅದನ್ನು ನಂಬಿಕೊಂಡು ಬದುಕುವ ಲಕ್ಷಾಂತರ ಮೀನುಗಾರರ ಬದುಕೂ ಮುಖ್ಯವಾಗದೇ ಹೋದರೆ ಯಾವ ತತ್ವ ಮಾತನಾಡಿದರೂ ಏನು ಪ್ರಯೋಜನ ಎಂಬುದಷ್ಟೇ ನನ್ನ ಪ್ರಶ್ನೆ. ಕಾಂಗ್ರೆಸ್ಸಿಗರು ಸರಿ ಇಲ್ಲ. ಕಮ್ಯುನಿಸ್ಟರಿಗೆ ಬುದ್ಧಿ ಇಲ್ಲ. ಮುಸ್ಲಿಮರು ದೇಶದ್ರೋಹಿಗಳು ಎಂದು ಹೇಳುವ ಸಂಘ ಪರಿವಾರದ ಬಹುತೇಕ ನಾಯಕರಿಗೆ ಮನುಷ್ಯ ಪ್ರೇಮ ಎಂಬುದಿದೆಯೇ?
ಬದುಕಿನೊಂದಿಗೆ ನೇರ ಸಂಬಂಧವಿರುವ ಯಾವ ವಿಷಯವೂ ಅವರಿಗೆ ಬೇಡ. ಕೇವಲ ಭಾವನೆಗಳನ್ನು ಕೆರಳಿಸಿ ಮತ್ತೊಂದು ಗಲಭೆ ಸೃಷ್ಟಿಸಲು ಒಂದು ಇಶ್ಯೂ ಬೇಕಷ್ಟೇ. ರಾಮಮಂದಿರಕ್ಕಾಗಿ ಸಂಗ್ರಹಿಸಿದ ಇಟ್ಟಿಗೆ ಮತ್ತು ದುಡ್ಡು ಎಲ್ಲಿ ಹೋಯಿತು? ಅದು ಯಾರಿಗೂ ಗೊತ್ತಿಲ್ಲ. ರಾಮ ಮಂದಿರದ ಕುರಿತು ಮಾತನಾಡಿದರೆ ಓಟು ಸಿಗಲಾರದು ಎಂಬುದು ಖಚಿತವಾದ ಮೇಲೆ ರಾಮನ ಸೇತುವೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ.
ರಾಮ ಹುಟ್ಟಿದ್ದು ಗೋಡ್ಸೆಯ ಗುಂಡಿಗೆ ಬಲಿಯಾದ ಗಾಂಧೀಜಿಯ ನಾಲಿಗೆಯಲ್ಲಿ ಎಂಬ ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಲು ಇಚ್ಛಿಸುತ್ತೇನೆ.
ರಮೇಶ್ ಸಮಗಾರ
backlog ಹುದ್ದೆ ಸಂಘಪರಿವಾರದವರಿನ್ದ ತುಂಬಲು ಕಸ್ಟ ಅಗಿದೆಯೆ? ನಮ್ಮನು ೫೦ ವರ್ಷ ಕಿಂತಲು ಹೆಚು ಅಳಿದವರಾರು ಗೊತಿಲ್ಲವೆ? ಮಾಯವತಿ ಅದಿಕಾರದಲ್ಲಿ ಯೆನ್ನೆಲ ಆಗಿದೆ ಕಮುನಿಸ್ಟರ ಆಡಳಿತದಲ್ಲಿ ಯೆನ್ನೆಲ ಆಗಿದೆ ನೆಬಪಿಸಿಕೊಳ್ಳಿ. ಹೈದರಾಬಾದ್,ಮುಂಬೈನಲ್ಲಿ ಆದ ಸ್ಪೊಟ ನಿಮಗೆ ಕಾಣದಾದುವು? ಆಧಿಕಾರಿಗಳ ಸಂಖ್ಯೆ ಜಾಸ್ತಿ ಇದ್ದರೆ ಮಾತ್ರ ಅವರು ದಲಿತರ ಉದ್ದಾರ ಮಡಲು ಮನಸು ಮಾಡುವುದೊ? ನಿಮ್ಮ ರ್‍ಆಮ ಗಾಂಧಿ ಬಾಯಲ್ಲದರು ಹುಟಿದ ಅಲ್ವೆ ಸಂತೊಷ.
ಮುಖ್ಯತ: ಇಲ್ಲಿ ರಾಮನನ್ನು ಕಾಲದ ಟೇಪ್ ಹಿಡಿದು ಹುಡುಕುವ ಪ್ರಯತ್ನ ಮಾಡಲಾಗಿದೆ.
ಕಾಲಾತೀತವಾದದ್ದನ್ನು ಹುಡುಕುವುದಾದರೆ೦ತು ?
ಕಾಲ ಪುರುಷನನ್ನು ಹುಡುಕಬೇಕಾದರೆ, ಕಾಲವನ್ನು ಮೀರಿ ಹುಡುಕಬೇಕು.
ಶ್ರಿ ಕೃಷ್ಣನೊಬ್ಬನಿದ್ದಾ ಅನ್ನುವುದಕ್ಕೆ ಏನು ಸಾಕ್ಷಿ ? ಆ೦ಜನೇಯನಿದ್ದ ಅನ್ನುವುದನ್ನು ನ೦ಬೋಕಾಗುತ್ತೇನು ??
ನಮ್ಗೇ ರಾಮನೊಬ್ಬನಿದ್ದ ಎನ್ನುವುದಕ್ಕೆ ಯಾವುದೇ ಪುರಾವೆಗಳು ಬೇಕಿಲ್ಲಾ.
ತ್ಯಾಗರಾಜರ ಒ೦ದು ಹಾಡು ಈ ಚರ್ಚೆಗೆ ಸೂಕ್ತವಾಗಿದೆ.
"ಕಲಿ ನರುಲಕು ಮಹಿಮಲು ತೆಲಿಪಿ ಏಮಿ ಫಲಮ್ " http://rasikas.org/wiki/kalinarulaku http://www.karnatik.com/co1006.shtml
ವಾಸ್ತವಿಕ ನೆಲೆಯಲ್ಲಿ ಚರ್ಚೆ ನಡೆಯುವುದು ಮಹನಿಯರಲ್ಲಿ ಒಬ್ಬರಿಗೂ ಬೇಕಾಗಿಲ್ಲ. ಸುವರ್ಣ ವಾಹಿನಿಯಲ್ಲಿ ಘನಗ೦ಭೀರ ವಾಗ್ವಾದವನ್ನೇ ನಡೆಸುವ ಶಶಿಧರ ಭಟ್ಟರಿಗಾದರೂ ಅಷ್ಟೇ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮಾಡಿದ ಕೆಲಸ ನಿಮಗೆಲ್ಲಾ ಗೊತ್ತಿದ್ದದ್ದೇ!
ಇಂಥಾ ಕೆಲಸ ಅವರಿಗೆ ಹೊಸದಲ್ಲ ಅನ್ನೋದು ನಿಮಗೆ ಗೊತ್ತೇ? ಕೆಳಗಿರುವ ಬ್ಲಾಗಿನ ಲೇಖನ ಓದಿ ನೋಡಿ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ರಾಮನೇ ಇಲ್ಲ ಅಂದ ಮೇಲೆ, ರಾಮವುಟ್ಟುದಾಣ/ರಾಮಜನುಮಭೂಮಿ ಎಲ್ಲಿರ್ತದೆ ಎಂಬ ಮಾತು ಆರಾಮಾಗಿ ತೆಗಬೋದು!!
ಆದ್ರೆ, ಯಾಕೋ ಇದು ತೀರಾ ಆಯ್ತು...
ಮೊದಲು mythology ಮುಂದೊಡ್ಡಿ ಕೇಸು ಹಾಕಿದ್ದು ಸರಿಕಾಣ್ತಿಲ್ಲ. ಅದಕ್ಕೆ ಕೇಂದ್ರ ಈ ತಿರುಗಂಬು ಹೊಡೆದಿದೆ.!!
"ದೇವರು ದಿಂಡಿರ ಭಜನೆಯಲ್ಲಿ
ಮಂದಿರಮಸೀದಿ ಗದ್ದಲದಲ್ಲಿ
ಎಲ್ಲ ಮಾಯಾ, ನಾಳೆ ನಾವು ಮಾಯಾ, ನಾಳೆ ನೀವು ಮಾಯಾ"
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಮಹೇಶ, ರಾಮಸೇತುನಿನ ಬಗ್ಗೆ ಚರ್ಚೆಸಲು ಹೋಗಿ ರಾಮನನ್ನೇ ಕಳೆದುಕೊಂಡಿತು ನಮ್ಮ ನಾಡು. ಈ ರಾಮಸೇತು ವಿಷಯ, ಆಸ್ತಿಕ ನಾಸ್ತಿಕ ಗಡಿಯನ್ನು ದಾಟಿ, ಕೇವಲ ರಾಜಕೀಯ ಒಣಪ್ರತಿಷ್ಠೆಯ ಕಣವಾಗಿ ನಿಂತಿದೆ.
೧. ರಾಮ ಮತ್ತು ರಾಮಸೇತುವಿನ ಬಗ್ಗೆ ಏನೇ ತಕರಾರು ಇರಬಹುದು ಆದರೆ "There is no historical evidence that Rama existed" ಅಂತ ಭಾರತ ಸರ್ಕಾರ ಫರ್ಮಾನು ಹೊರಡಿಸಿದರೆ, ಒಂದು ಕ್ಷಣ ಯೋಚಿಸು, ಬೇರೆ ದೇಶದವರು ಅದೆಷ್ಟು ನಗೆಚಟಾಕಿಗಳನ್ನು ಹಾರಿಸಬಹುದು ನಮ್ಮ ಮೇಲೆ. ಅಲ್ಲೆಲ್ಲೋ ಭಾರತಕ್ಕೆ ನಂಟೇ ಆಗದ ಸುನೀತಾ ವಿಲಿಯಮ್ಸ್, ಇವಳು ನಮ್ಮವಳೇ ಬಾಮ್ಮ ಅಂತ ಆರತಿ ಬೆಳಗುತ್ತೀವಿ (ಈ ವಿಷಯವಾಗಿ ಇಂಟರ್ನೆಟ್ಟಿನಲ್ಲಿ ಈಗಾಗಲೇ ಹಲವರು ಎದ್ದುಬಿದ್ದು ನಗಾಡಿದ್ದಾರೆ) ಆದರೆ ಇಲ್ಲಿ ರಾಮ "ರಾಮ್, ರಾಮಾ" ಆಗ್ತಾನೆ.
೨. ಅತಿಮುಖ್ಯವಾಗಿ, ನಾವೆಲ್ಲರೂ ಗಮನಿಸಬೇಕಾದ್ದು "ರಾಮ" ಎಂಬ "ಕಾನ್ಸೆಪ್ಟ್" ಕೇವಲ ನಮ್ಮ ದೇಶದಲ್ಲಿ ಇಲ್ಲ. ಬೇರೆ ಬೇರೆ ದೇಶಗಳಲ್ಲಿಯೂ ರಾಮ-ಸೀತೆಗೆ ನಂಟಾದ ಜಾನಪದ ಕತೆಗಳಿವೆ.
೩. ಇಂದಿನ ಟೈಮ್ಸಿನಲ್ಲಿ ವರದಿಯಾದಂತೆ, ASIನವರಿಗೆ ಐತಿಹಾಸಿಕ ಸಾಕ್ಷ್ಯಗಳೇ ಮುಖ್ಯವಾಗುವುದಾದರೆ, ಹೊರಗೆಡವಲಿ ನಮ್ಮ ಭವ್ಯ ಭಾರತ ದೇಶದ ಎಲ್ಲ ಪ್ರದೇಶಗಳ ಚರಿತ್ರೆಯನ್ನು. ಅದೆಷ್ಟು ಊರುಗಳ ಇತಿಹಾಸ ಸುಳ್ಳಿನ ಕಂತೆಗಳಿಂದ ತುಂಬಿ ತುಳುಕುತ್ತಿಲ್ಲವೇ.
ಇಲ್ಲಿ "ರಾಮ ಎಂಬುವನು ಇರಲೇ ಇಲ್ಲ" ಎಂಬುದು ದೊಡ್ಡ ಪ್ರಶ್ನೆ ಆಗಬೇಕಿಲ್ಲ, ಆದರೆ ನಮ್ಮ ದೇಶದ ರಾಜಕೀಯ ಅರಾಜಕತೆಯನ್ನು ಕಂಡು ಕೆಟ್ಟ ನಗು ಬರುತ್ತದೆ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
"""There is no historical evidence that Rama existed" ಅಂತ ಭಾರತ ಸರ್ಕಾರ ಫರ್ಮಾನು ಹೊರಡಿಸಿದರೆ "
ನೋಡಪ್ಪ..
ಮೊದಲು ಕೇಸು ಹಾಕಿದವರು ಯಾಕೆ ಕೇಸು ಹಾಕಿದ್ದು, ಅವರದು ತಪ್ಪಿದೆ ಅಲ್ವಾ?
ಆಮೇಲೆ NASA ಅವರು ಹೇಳಿದ್ದಾರೆ ಅಂತ ಸುಳ್ಳು ಹರಡಿದ್ದು, ಆಮೇಲೆ NASA ನಮಗೂ ಇದಕ್ಕೂ ನಂಟಿಲ್ಲ ಅಂದುದು, ಇದೆಲ್ಲ ಯಾಕೆ ಬೇಕಿತ್ತು...
"ರಾಮಸೇತು" ಇದನ್ನು ಮೊದಲು ಮಾಡಿದ್ದೇ ಬೀ.ಜೇ.ಪಿ ಸರಕಾರವಂತೆ.!! ಈಗ ಅವರೇ ಅದಕ್ಕೆ ಅಡೆ ಹಾಕ್ತಿದ್ದಾರೆ.
ಒಟ್ಟಾರೆ ಇದು ಯಾಕೂ ಕಲಸುಮೇಲೋಗರ, ಗೋಜಲಾಯ್ತು!!
ರಾಮ ರಾಮ!!
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಅದೇ ಕಣೋ ನಾನೂ ಹೇಳ್ತಾ ಇರೋದು. ಈ ಇಡಿ "ರಾಮಸೇತು ಪ್ರಕರಣ", ಆಸ್ತಿಕ-ನಾಸ್ತಕ ಚೌಕಟ್ಟಿನ್ನು ಮೀರಿ, ಗಟ್ಟಿಯಾದ ಆಧಾರಗಳಿಂದ ತೂಗಲಾಗದೆ, ಕೇವಲ ರಾಜಕೀಯ ಬಲಾಬಲ ಪರೀಕ್ಷೆಯ ಆಖಾಡ ಆಯಿತಲ್ಲಾ ಎಂಬ ಬೇಸರವಿದೆ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಅದಕ್ಕೆ ನೀನ್ಯಾಕೆ ಬೇಸರಪಟ್ಟಕೊತೀಯ!!
ಇದು ನಮ್ಮ ದೇಸದಾಗೆ ಇದ್ದುದ್ದೇ!! ಸರಕಾರ ಹಿಂಗೆ ಹೇಳ್ತು ಅಂತ ನಾವು ರಾಮನೊಮಿಯಾಗೆ ಪಾನಕ ಕೊಸಂಬ್ರಿ ಮುಕ್ಕೋದು ಬಿಟ್ಟೇವಾ?
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಕೇಸು ಏನೇ ಇರಲಿ..
ಇಲ್ಲಿ ಸರಕಾರ, ’ರಾಮ ಎಂಬ ಒಬ್ಬ ಚಾರಿತ್ರಿಕ ವ್ಯಕ್ತಿ ಇದ್ದ ಎನ್ನಲು ಯಾವ ಪುರಾವೆಯೂ ಇಲ್ಲ’ ಎಂದದ್ದು ಸರ್ರಿಯಾಗೇ ಇದೆ.
ಕಾವ್ಯಗಳನ್ನು ’ಚರಿತ್ರ” ಎನ್ನುವ ನಮಗೆ, ಹಾಗೆನ್ನುವಾಗ ವಾಲ್ಮೀಕಿಯ/ ವ್ಯಾಸರ creative ಯೋಚನೆಗಳಬಗ್ಗೆ ಹಗುರವಾಗಿ ನಾವು ಮಾತಾಡುತ್ತಿದ್ದೇವೆಂಬ ಅರಿವಿರಬೇಕು. ಅವರನ್ನು ಬರಿಯ Historians ಆಗಿ ನೋಡುವುದಕ್ಕಿಂತ ಹೆಚ್ಚಾಗಿ ಕವಿಗಳನ್ನಾಗಿ ನೋಡಬೇಕು.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಕಿಶೋರ್ ಬುದ್ದಿ...
ನಿಮ್ಮ ಮಾತು ಹದಿರಾಣೆ ಸರಿ!
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ನನ್ನಿ..
ಕಿಶೋರ್ ಸಾಕು.. ಬುದ್ದಿ ಬೇಡ..
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಇ೦ತಹುದೇ ವಾದವೊ೦ದು ಕ್ರಿಸ್ತನ ಬಗ್ಗೆ ನಡೆಯುತ್ತಿದ್ದಾಗ 'ಆತ ದೇವದೂತನೋ ಅಲ್ಲವೋ ಎ೦ದು ಚರ್ಚಿಸುವುದಕ್ಕಿ೦ತ ಆತ ನಮಗೇನು ಕಲಿಸಿದನೆನ್ನುವುದೇ ಮುಖ್ಯ' ಎ೦ಬ ಅನ್ನಿಸಿಕೆ ಕೇಳಿಬ೦ದಿತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಇಲ್ಲಿ ಕ್ರಿಸ್ತನ ಮಾತೇಕೆ?
ಕ್ರಿಸ್ತನ ಸೇತುವೆ ಇದ್ರೆ, ಕೇಸು ಹಾಕಿ
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಉದಾಹರಣೆಯಾಗಿ ಕೊಟ್ಟದ್ದು, ಒ೦ದು ಸಲ ಫೋರ೦ ಒ೦ದರಲ್ಲಿ ಕ್ರಿಸ್ತನ ಬಗ್ಗೆ, ಆತ ದೇವದೂತನೋ ಅಲ್ಲವೋ ಎ೦ಬ ಬಗ್ಗೆ, ಚರ್ಚೆ ನಡೆಯುತ್ತಿತ್ತು. ಇಲ್ಲಿ ಅ೦ತಹುದೇ ಚರ್ಚೆ ರಾಮನ ಬಗ್ಗೆ ನಡೆಯುತ್ತಿದೆ.
ಮೇಲಿನ ವಾಕ್ಯದಲ್ಲಿ ಕ್ರಿಸ್ತನನ್ನು ರಾಮನಿ೦ದ ಸಬ್‍ಸ್ಟಿಟ್ಯೂಟ್ ಮಾಡಿಕೊ೦ಡು ಓದಿನೋಡಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಉದಾಹರಣೆಯಾಗಿ ಕೊಟ್ಟದ್ದು, ಒ೦ದು ಸಲ ಫೋರ೦ ಒ೦ದರಲ್ಲಿ ಕ್ರಿಸ್ತನ ಬಗ್ಗೆ, ಆತ ದೇವದೂತನೋ ಅಲ್ಲವೋ ಎ೦ಬ ಬಗ್ಗೆ, ಚರ್ಚೆ ನಡೆಯುತ್ತಿತ್ತು. ಇಲ್ಲಿ ಅ೦ತಹುದೇ ಚರ್ಚೆ ರಾಮನ ಬಗ್ಗೆ ನಡೆಯುತ್ತಿದೆ.
ಮೇಲಿನ ವಾಕ್ಯದಲ್ಲಿ ಕ್ರಿಸ್ತನನ್ನು ರಾಮನಿ೦ದ ಸಬ್‍ಸ್ಟಿಟ್ಯೂಟ್ ಮಾಡಿಕೊ೦ಡು ಓದಿನೋಡಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಬೇಡ!
ಹೀಗೆ ಗೋಜಲು ಬೇಡ..
ರಾಮನ ಪಾಡಿಗೆ ರಾಮ ಇರಲಿ, ಕ್ರಿಸ್ತನ ಪಾಡಿ ಕ್ರಿಸ್ತ ಇರಲಿ!
ಯಾಕೆ ಗೊತ್ತಾ? ಇನ್ನೂ ಏನೇನೋ ಮಾತುಗಳು ಬಂದು ರಾಡಿದೌಡು ಆಗ್ತದ!
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ನನಗಿರುವ ಕುತೂಹಲವೆಂದರೆ, ಶ್ರೀಲಂಕಾದಲ್ಲಿ ರಾಮಾಯಣದ ಕಥೆಗಳು ಅಥವಾ ಪುರಾವೆಗಳೇನಾದರೂ ಇದ್ಯಾ ಅಂತ.
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಈ ಚರ್ಚೆ ಕುತೂಹಲಕಾರಿಯಾಗಿದೆ. ಆಸ್ತಿಕರು-ನಾಸ್ತಿಕರ ವಿಚಾರ ಬಿಟ್ಟುಬಿಡಿ. ರಾಜಕೀಯ ಪಕ್ಷಗಳನ್ನೂ ಬದಿಗಿಡೋಣ. ರಾಮ ಸೇತು ಇತ್ತು ಅದನ್ನು ಉಳಿಸಬೇಕು ಎಂದು ಹೋರಾಡುತ್ತಿರುವವರು ಯಾರು ಎಂಬುದನ್ನೊಮ್ಮೆ ನೋಡೋಣ. ರಾಮನಿದ್ದ ಅವನು ನಿರ್ಮಿಸಿದ್ದ ಸೇತುವೆ ಇತ್ತು. ಅದನ್ನು ಉಳಿಸಬೇಕು ಎನ್ನುವ ವಿಶ್ವಹಿಂದೂ ಪರಿಷತ್ತಿಗೆ ನರ್ಮದಾ ಅಣೆಕಟ್ಟೆಯಿಂದಾಗಿ ಮುಳುಗಿಹೋಗುತ್ತಿದ್ದ ಯಾವ ದೇವಸ್ಥಾನದ ಬಗ್ಗೆಯೂ ಕಾಳಜಿ ಇರಲಿಲ್ಲ. ಅಷ್ಟೇಕೆ ಸಮುದ್ರದ ಅಡಿಯಲ್ಲಿರುವ ರಾಮನ ಸೇತುವೆಗೆ ದೇಶವ್ಯಾಪಿಯಾಗಿ ಚಳವಳಿ ಹೂಡುವ ಇವರಿಗೆ ದಲಿತರನ್ನು ಕೊಲ್ಲಬೇಡಿ ಎಂದು ತಮ್ಮ ಹಿಂದೂ ಸೋದರರಿಗೆ ಹೇಳಲು ನಾಲಿಗೆ ಇರುವುದಿಲ್ಲ. ಚಾತುರ್ ವರ್ಣ್ಯವನ್ನು ಜಾರಿಗೆ ತಂದುಬಿಡುವ ಉತ್ಸಾಹದಲ್ಲಿರುವವರಿಂದ ಇಂಥದ್ದನ್ನೆಲ್ಲಾ ನಿರೀಕ್ಷಿಸಬಾರದು ಎಂದುಕೊಂಡು ಯೋಚಿಸೋಣ. ನಂದಗುಡಿ, ಚಾಮಲಾಪುರ, ನಂದಿಕೂರು ಮುಂತಾದ ಕರ್ನಾಟಕದ ಊರುಗಳಲ್ಲಿ ತಥಾಕಥಿತ ಇಂಡಸ್ಟ್ರಿಗಳಿಗೆ ಬಲಿಯಾಗುತ್ತಿರುವ ಪರಿಸರವೂ ರಾಮನಾಳಿದ ದೇಶದ ಪರಿಸರ ಎನಿಸುವುದಿಲ್ಲವೇಕೆ? ಅದು ಬಿಡಿ ಇಲ್ಲಿ ಜಮೀನು ಕಳೆದುಕೊಳ್ಳುತ್ತಿರುವವರೆಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ಹಿಂದೂ ಸೋದರರೇ ಎಂಬುದೇಕೆ ಕಾಣಿಸುವುದಿಲ್ಲ?
ರಾಮಸೇತುವಿನ ವಿಷಯಕ್ಕೆ ಬಂದಾಗ ಮುಖ್ಯವಾಗುವ ಪರಿಸರ, ಸಾಗರದಾಳದ ಸೂಕ್ಷ್ಮ ಜೈವಿಕ ಕ್ರಿಯೆಗಳು ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅನ್ವಯಿಸುವುದಿಲ್ಲ. ಟನ್ ಗಟ್ಟಳೆ ಹಾರುಬೂದಿ ಅರಬಿ ಕಡಲಿನ ಮೇಲೆ ಸುರಿದರೂ ಪರಿಸರ ಹಾನಿಯಾಗುವುದಿಲ್ಲ ಎಂದು ಇವರು ಭಾವಿಸಿದ್ದಾರೆಯೇ?
ರಾಮಸೇತು ಇತ್ತೆಂದು ನಾಸಾ ಹೇಳಿದ್ದು ಮುಖ್ಯವಾಗುತ್ತದೆಯಾದರೆ ಪಶ್ಚಿಮಘಟ್ಟಗಳು ಜಗತ್ತಿನ ಹತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು WWF, WCS ಗಳು ಹೇಳಿದ್ದೂ ಮುಖ್ಯವಾಗಬೇಕಲ್ಲ. ಇವೂ ಅಮೆರಿಕದ ಸಂಸ್ಥೆಗಳೇ. ಪಶ್ಚಿಮಘಟ್ಟವನ್ನು ಹಾಳುಗೆಡವಲು ಟೊಂಕಕಟ್ಟಿರುವವರು ಸದ್ಯಕ್ಕಂತೂ ಹಿಂದೂ ಐಕ್ಯತೆಯನ್ನು ಸದಾ ಜಪಿಸುವ ಪಕ್ಷವಾದ ಬಿಜೆಪಿಯ ಪ್ರಮುಖ ನಾಯಕರಾಗಿರುವ ವಿ.ಎಸ್. ಆಚಾರ್ಯರು. ನಾಗಾರ್ಜುನ ಯೋಜನೆಯಿಂದ ನೆಲೆ ಕಳೆದುಕೊಳ್ಳುವವರು, ತೊಂದರೆ ಅನುಭವಿಸುವ ಮೀನುಗಾರರು ಹಿಂದೂ ಸೋದರರೇ ಎಂಬುದನ್ನು ಅವರು ಸದ್ಯ ಮರೆತಿದ್ದಾರೆಯೇ?
ಅವರೇನೋ ರಾಜಕಾರಣಿ. ಕರ್ನಾಟಕಾದ್ಯಂತ ರಾಮಸೇತುವಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಆರ್ ಎಸ್ ಎಸ್ ನ ನಾಯಕರಾರೂ ರಾಜಕಾರಣಿಗಳೆಲ್ಲವಲ್ಲ. ಇವರಿಗಾದರೂ ಇದರ ವಿರುದ್ಧ ಒಂದು ಪ್ರತಿಭಟನೆ ನಡೆಸಬಹುದಿತ್ತಲ್ಲ. ನರ್ಮದಾ ತಟದ ಜೀವಿಗಳನ್ನೂ, ಈ ಜೀವಿಗಳ ನಂಬಿಕೆಗಳನ್ನೂ ಉಳಿಸಲು ಹೋರಾಡುತ್ತಿರುವ ಮೇಧಾ ಪಾಟ್ಕರ್ ಶೃಂಗೇರಿಗೆ ಬಂದಾಗ ಅವರನ್ನು ವಿರೋಧಿಸಿದವರೇ ರಾಮ ಸೇತುವಿಗಾಗಿ ಕರ್ನಾಟಕದಲ್ಲಿ ಚಳವಳಿ ನಿರತರಾಗಿದ್ದಾರೆ. ಅಂದರೆ ಇವರಾರಿರೂ ಸಜೀವ ಪರಂಪರೆ ಬೇಡ.
ರಮೇಶ್ ಸಮಗಾರ
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ರಾಮ + ಈಶ = ರಮೇಶ,
ಬಿ.ಜೆ.ಪಿ ಯವರ ಬಗ್ಗೆ ಸರಿಯಾಗಿ ಹೇಳೀದ್ದೀರಾ. ಆದರೆ ಕೆಲವನ್ನು ಮರೆತಿದ್ದೀರಾ ಅನ್ಸತ್ತೆ,
ರಾಮ ಸೇತು ಹೊಡಿ ಬೇಕಾಗಿರುವ ಮ೦ದಿ ಯಾರು ಅ೦ತಾ ಕೂಡಾ ನೋಡಿ.
ಡಿ. ಎಮ್.ಕೆ. ಅವರು ಹಿ೦ದೆ ರಾಜೀವ್ ಗಾ೦ಧಿ ಹತ್ಯಾ ಖಾ೦ಡದಲ್ಲಿ ದೋಷಿಗಳಾಗಿದ್ದರು.
ಈ ಕಾರಣದಿ೦ದ ಹಿ೦ದೆ ಕಾ೦ಗ್ರೆಸ್ ಸರ್ಕಾರ ಗುಜ್ರಾಲ್ ಪ್ರಧಾನಿ ಯಗಿದ್ದಾಗ ರಗಳೆ ಮಾಡಿ ಉರುಳಿಸಿತು.
ಮತ್ತೆ ಹತ್ಯೆ ಮಾಡಿದವರ ಜೊತೆ ಕೈ ಜೋಡಿಸಿ ಇ೦ದು ಕಾ೦ಗ್ರೆಸ್ ಅದೇನೇನು ಮಾಡ್ತಾಯಿದೆ ನೋಡಿ.
ಬಿ.ಜೆ.ಪಿ ಯಾಗಲಿ /ಕಾ೦ಗ್ರೆಸ್ ಆಗಲಿ ಯವುದಾದರೂ ಡಿ. ಎಮ್.ಕೆ. ಸಪೋರ್ಟ್ ಬೇಕೇ ಬೇಕು.
ಡಿ. ಎಮ್.ಕೆ. ಯವರ ಗುರುಗಳು ಪೆರಿಯಾರ್ ಮಹಾಶಯ.
ಆತ ರಾಮಾಯಣವನ್ನು ಠೀಕಿಸಿ ಕೆಟ್ಟದಾಗಿ ಒ೦ದು ಪುಸ್ತಕ ಬರೆದಿದ್ದಾನೆ. ರಾಮನ ಚಿತ್ರವನ್ನು ಮೆರವಣಿಗೆಯಲ್ಲಿ ಹೊತ್ತು
ಸಾರ್ವಜನಿಕವಾಗಿ ಸುಟ್ಟು ತೋರಿಸಿದ್ದಾನೆ.
ರಾಮ - ಆರ್ಯನ೦ತೆ ಮತ್ತು ರಾವಣ - ದ್ರಾವಿಡನ೦ತೆ.ರಾಮನನ್ನು ಕೆಟ್ಟದಾಗಿ ಚಿತ್ರಿಸಿ ರಾವಣನನ್ನು ಸಾಚನ೦ತೆ ಚಿತ್ರಿಸಿದ್ದಾನೆ.
ಹೀಗೆ ಹುಚ್ಚು ಹುಚ್ಚಾಗಿ ವಾದ ಮಾಡುವ ಜನ ಈ ಡಿ. ಎಮ್.ಕೆ ಮ೦ದಿ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಅಯ್ಯಯ್ಯೋ ಮುರಳಿ, ಬಹುಶಃ ನೀನು ಗೊತ್ತಿದ್ದೇ ಹಾಕಿದ್ದೀಯಾ ಅಂದ್ಕೋತೀನಿ. ಅದು ರಾಮ + ಈಶ ಅಲ್ಲ, ರಮಾ+ಈಶ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ರಮೇಶ ಅವರಿಗೆ ರಾಮನು ಬೇಕಿಲ್ಲ ಭೀಮನು ಬೇಕಿಲ್ಲ ಅವರಿಗೆ ಸಂಗಪರಿವಾರದ ಮೇಲೆ ಬಯ್ಯೂಮನಸು. ಆದಕ್ಕೆ ಯೆನಾದರು ಅನ್ನಿ ಅವರು ಧಲಿತರ ಕೊಲೆ, ಗುಜರತ್ ಗಲಭೆ ಅಂತ ಶುರು ಮಾಡ್ತಾರೆ. ಆದರೆ ದಲಿತರೆ ದಲಿತರನ್ನು ಕೆಟ್ಟದಾಗಿ ನದೆಸೊದನ್ನು ಅವರು ನೊಡಿಲ್ಲ ಅನ್ಸುತ್ತೆ. ಯೆಸ್ಟೊ ಕೆಳಜಾತಿಯವರು ಉತ್ತಮ ಮಟ್ಟದ ಅದಿಕಾರಿಗಳಾಗಿದ್ದು ಅವರ ಸಮಾಜಕ್ಕೆ ಯೆನೂ ಉಪಕಾರ ಮಾಡದ ಅವರನ್ನು ಬುದ್ದಿಹೆಳಿ ಸರಿ ಮಾಡಲು ಪ್ರಯತ್ನಿಸಿದರೆ ಒಳ್ಳೆಯದು.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಸ್ವಾಮೀ ಎಷ್ಟು ಮಂದಿ ದಲಿತ ಅಧಿಕಾರಿಗಳಿದ್ದಾರೆ? ಈಗಲೂ ಬ್ಯಾಕ್ ಲಾಗ್ ಪೋಸ್ಟ್ ಗಳು ಕಾಲಿ ಉಳಿದಿರುವುದೇತಕೆ?
ಸಂಘಪರಿವಾರದವರನ್ನು ಬೈಯ್ಯುತ್ತಿಲ್ಲ. ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಿದೆ ಅಷ್ಟೇ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ವಿ.ಎಸ್ ಆಚಾರ್ಯರು ಬಿಜೆಪಿಯವರು. ಆರ್ ಎಸ್ ಎಸ್ ನ ಸ್ವಯಂ ಸೇವಕರು. ಹಿಂದೆ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಕೊಜೆಂಟ್ರಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದ್ದ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸುತ್ತಿದ್ದವರು. ಈಗ ಅದೇಕೆ ನಾಗಾರ್ಜುನ ವಿದ್ಯುತ್ ಸ್ಥಾವರನ್ನು ಬೆಂಬಲಿಸುತ್ತಿದ್ದಾರೆ?
ಹಿಂದೂ ಮಹಾಸಾಗರದ ಅಡಿಯಲ್ಲಿರುವ ತಥಾಕಥಿತ ಸೇತುವೆ ಮುಖ್ಯವಾಗುವಂತೆಯೇ ಅರಬೀ ಸಮುದ್ರದಲ್ಲಿರುವ ಕೋಟ್ಯಂತರ ಜೀವಿಗಳು ಅದನ್ನು ನಂಬಿಕೊಂಡು ಬದುಕುವ ಲಕ್ಷಾಂತರ ಮೀನುಗಾರರ ಬದುಕೂ ಮುಖ್ಯವಾಗದೇ ಹೋದರೆ ಯಾವ ತತ್ವ ಮಾತನಾಡಿದರೂ ಏನು ಪ್ರಯೋಜನ ಎಂಬುದಷ್ಟೇ ನನ್ನ ಪ್ರಶ್ನೆ. ಕಾಂಗ್ರೆಸ್ಸಿಗರು ಸರಿ ಇಲ್ಲ. ಕಮ್ಯುನಿಸ್ಟರಿಗೆ ಬುದ್ಧಿ ಇಲ್ಲ. ಮುಸ್ಲಿಮರು ದೇಶದ್ರೋಹಿಗಳು ಎಂದು ಹೇಳುವ ಸಂಘ ಪರಿವಾರದ ಬಹುತೇಕ ನಾಯಕರಿಗೆ ಮನುಷ್ಯ ಪ್ರೇಮ ಎಂಬುದಿದೆಯೇ?
ಬದುಕಿನೊಂದಿಗೆ ನೇರ ಸಂಬಂಧವಿರುವ ಯಾವ ವಿಷಯವೂ ಅವರಿಗೆ ಬೇಡ. ಕೇವಲ ಭಾವನೆಗಳನ್ನು ಕೆರಳಿಸಿ ಮತ್ತೊಂದು ಗಲಭೆ ಸೃಷ್ಟಿಸಲು ಒಂದು ಇಶ್ಯೂ ಬೇಕಷ್ಟೇ. ರಾಮಮಂದಿರಕ್ಕಾಗಿ ಸಂಗ್ರಹಿಸಿದ ಇಟ್ಟಿಗೆ ಮತ್ತು ದುಡ್ಡು ಎಲ್ಲಿ ಹೋಯಿತು? ಅದು ಯಾರಿಗೂ ಗೊತ್ತಿಲ್ಲ. ರಾಮ ಮಂದಿರದ ಕುರಿತು ಮಾತನಾಡಿದರೆ ಓಟು ಸಿಗಲಾರದು ಎಂಬುದು ಖಚಿತವಾದ ಮೇಲೆ ರಾಮನ ಸೇತುವೆಯ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ.
ರಾಮ ಹುಟ್ಟಿದ್ದು ಗೋಡ್ಸೆಯ ಗುಂಡಿಗೆ ಬಲಿಯಾದ ಗಾಂಧೀಜಿಯ ನಾಲಿಗೆಯಲ್ಲಿ ಎಂಬ ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಲು ಇಚ್ಛಿಸುತ್ತೇನೆ.
ರಮೇಶ್ ಸಮಗಾರ
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
backlog ಹುದ್ದೆ ಸಂಘಪರಿವಾರದವರಿನ್ದ ತುಂಬಲು ಕಸ್ಟ ಅಗಿದೆಯೆ? ನಮ್ಮನು ೫೦ ವರ್ಷ ಕಿಂತಲು ಹೆಚು ಅಳಿದವರಾರು ಗೊತಿಲ್ಲವೆ? ಮಾಯವತಿ ಅದಿಕಾರದಲ್ಲಿ ಯೆನ್ನೆಲ ಆಗಿದೆ ಕಮುನಿಸ್ಟರ ಆಡಳಿತದಲ್ಲಿ ಯೆನ್ನೆಲ ಆಗಿದೆ ನೆಬಪಿಸಿಕೊಳ್ಳಿ. ಹೈದರಾಬಾದ್,ಮುಂಬೈನಲ್ಲಿ ಆದ ಸ್ಪೊಟ ನಿಮಗೆ ಕಾಣದಾದುವು? ಆಧಿಕಾರಿಗಳ ಸಂಖ್ಯೆ ಜಾಸ್ತಿ ಇದ್ದರೆ ಮಾತ್ರ ಅವರು ದಲಿತರ ಉದ್ದಾರ ಮಡಲು ಮನಸು ಮಾಡುವುದೊ? ನಿಮ್ಮ ರ್‍ಆಮ ಗಾಂಧಿ ಬಾಯಲ್ಲದರು ಹುಟಿದ ಅಲ್ವೆ ಸಂತೊಷ.
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಮುಖ್ಯತ: ಇಲ್ಲಿ ರಾಮನನ್ನು ಕಾಲದ ಟೇಪ್ ಹಿಡಿದು ಹುಡುಕುವ ಪ್ರಯತ್ನ ಮಾಡಲಾಗಿದೆ.
ಕಾಲಾತೀತವಾದದ್ದನ್ನು ಹುಡುಕುವುದಾದರೆ೦ತು ?
ಕಾಲ ಪುರುಷನನ್ನು ಹುಡುಕಬೇಕಾದರೆ, ಕಾಲವನ್ನು ಮೀರಿ ಹುಡುಕಬೇಕು.
ಶ್ರಿ ಕೃಷ್ಣನೊಬ್ಬನಿದ್ದಾ ಅನ್ನುವುದಕ್ಕೆ ಏನು ಸಾಕ್ಷಿ ? ಆ೦ಜನೇಯನಿದ್ದ ಅನ್ನುವುದನ್ನು ನ೦ಬೋಕಾಗುತ್ತೇನು ??
ನಮ್ಗೇ ರಾಮನೊಬ್ಬನಿದ್ದ ಎನ್ನುವುದಕ್ಕೆ ಯಾವುದೇ ಪುರಾವೆಗಳು ಬೇಕಿಲ್ಲಾ.
ತ್ಯಾಗರಾಜರ ಒ೦ದು ಹಾಡು ಈ ಚರ್ಚೆಗೆ ಸೂಕ್ತವಾಗಿದೆ.
"ಕಲಿ ನರುಲಕು ಮಹಿಮಲು ತೆಲಿಪಿ ಏಮಿ ಫಲಮ್ "
http://rasikas.org/wiki/kalinarulaku
http://www.karnatik.com/co1006.shtml
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಜನ ಮರುಳೋ, ಜಾತ್ರೆ ಮರುಳೋ ತಿಳಿಯುತ್ತಿಲ್ಲ, ಕನ್ನಡಪ್ರಭದ ಸುದ್ಧಿ ನೋಡಿ. ಒಂದೇ ದಿನದಲ್ಲಿ ರಾಮ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಗಂಗೆಯಲ್ಲಿ ಮಿಂದೆದ್ದ ಸಾಧ್ವಿಯ ಪರಿಣಾಮವೇ ?
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಮತ್ತಷ್ಟು ಸುದ್ಧಿಗಳು, ಮಜವಾಗಿವೆ. ಒಟ್ಟಿನಲ್ಲಿ ತಿಕ್ಕಲುತನ ಪರಮಾವಧಿ
ಕನ್ನಡಪ್ರಭದ ಸುದ್ಧಿ, ಪ್ರಜಾವಾಣಿ ಸುದ್ಧಿ
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಆಯಿತು, ರಾಮಸೇತು ಇರಲೇ ಇಲ್ಲ ಎ೦ದಿಟ್ಟುಕೊಳ್ಳೋಣ. ಸುಮ್ಮನೆ ಒಮ್ಮೆ ಕಣ್ಣುಹಾಯಿಸಿ ನೋಡಿ....http://manisanga.blogspot.com/2005_05_08_manisanga_archive.html
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ವಾಸ್ತವಿಕ ನೆಲೆಯಲ್ಲಿ ಚರ್ಚೆ ನಡೆಯುವುದು ಮಹನಿಯರಲ್ಲಿ ಒಬ್ಬರಿಗೂ ಬೇಕಾಗಿಲ್ಲ. ಸುವರ್ಣ ವಾಹಿನಿಯಲ್ಲಿ ಘನಗ೦ಭೀರ ವಾಗ್ವಾದವನ್ನೇ ನಡೆಸುವ ಶಶಿಧರ ಭಟ್ಟರಿಗಾದರೂ ಅಷ್ಟೇ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ರಾಮಸೇತುವಿನ ಬಗ್ಗೆ ನನ್ನದೊಂದು ಕಿರುಲೇಖನ ಓದಿ ನೋಡಿ. ಕೆಳಗಿದೆ ಕೊಂಡಿ.
http://thatskannada.oneindia.in/column/humor/280907-Siyaram-Jaihanuman-H...
ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮಾಡಿದ ಕೆಲಸ ನಿಮಗೆಲ್ಲಾ ಗೊತ್ತಿದ್ದದ್ದೇ!
ಇಂಥಾ ಕೆಲಸ ಅವರಿಗೆ ಹೊಸದಲ್ಲ ಅನ್ನೋದು ನಿಮಗೆ ಗೊತ್ತೇ? ಕೆಳಗಿರುವ ಬ್ಲಾಗಿನ ಲೇಖನ ಓದಿ ನೋಡಿ.
http://navarasudhaare.blogspot.com/2007/09/blog-post_9919.html
ಚೆನ್ನಾಗಿದ್ದರೆ ಹೊಗಳಿ ಬರೆಯಿರಿ. ಕೋಪ ಬಂದರೆ ಸುಮ್ಮನಿದ್ದುಬಿಡಿ.
ನಮಸ್ಕಾರ