ಕಾಗುಣಿತದಲ್ಲಿ ಅನುಮಾನ
ನ೦ಗೇ ಮೊನ್ನೆ ಗೂಗಲ್ನವರ ಸೈಟ್ ನಲ್ಲಿ ರುವ ಕೀಬೋರ್ಡ್ ನಲ್ಲಿ ಈ ಅಕ್ಷರಗಳು ಕ೦ಡು ಬ೦ದವು.
"ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞ"
ಇವು ವಿಕಿಪೀಡಿಯಾದಲ್ಲಿ ಕೂಡ ಇದೆಯ೦ತಾ ಗೊತಾಯ್ತು.
ಈ ಗುಣಿತಾಕ್ಷರಗಳು ಕನ್ನಡ ವ್ಯಾಕರಣದಲ್ಲು೦ಟೋ ಎ೦ಬುದೇ ನನ್ನ ಅನುಮಾನ..

- Login or register to post comments
- 609 hits
- Email this forum





RSS:
ಉ: ಕಾಗುಣಿತದಲ್ಲಿ ಅನುಮಾನ
ಞ ಮತ್ತು ಙ ಗಳಿಗೆ ಕನ್ನಡದಲ್ಲಿ ಗುಣಿತಾಕ್ಕರಗಳು ಬೇಡ.
ಇವೆರಡು ಅಕ್ಕರಗಳೂ ನಾವು ಕನ್ನಡದಲ್ಲಿ ಬಳಸಲ್ಲ. ಇದರ ಜಾಗದಲ್ಲಿ ೦ ಬಳಕೆ
ಅಞ್ಚು = ಅಂಚು
ಅಙ್ಕೆ = ಅಂಕೆ
ಜ್ಞ ಇದು ಕನ್ನಡದಲ್ಲಿಲ್ಲ. ಇದನ್ನು ಜ್ನ ಎಂದು ಬರೆಯಿರಿ ಎಂದು ಶಂಕರಭಟ್ರು ಹೇಳಿದ್ದಾರೆ. ನೀವು ಅವರ ಹೊತ್ತಗೆಗಳನ್ನು ಓದ್ರಿ
ಉ: ಕಾಗುಣಿತದಲ್ಲಿ ಅನುಮಾನ
ಏಕೆ ಸ್ವಾಮಿ,
ನಾವಾಡುವ ಭಾಷೆಯನ್ನು ಅಧ್ಯಯನವಸ್ತುವನ್ನಾಗಿ ಮಾಡಿಕೊಳ್ಳಿ. ಆಗ ಅಂಗದ ಎನ್ನುವಾಗ ನಿಜವಾಗಿ ಸರಾಗವಾಗಿ ಅಙ್ಗದ ಎಂದೇ ಉಚ್ಚರಿಸುತ್ತೀರಿ. ಈಗ ಙ್ ಅಕ್ಷರವನ್ನು ಉಚ್ಚರಿಸುವುದನ್ನು ಗಮನಿಸಿ. ಅದಕ್ಕೆ ಸ್ವರಗಳನ್ನು ಸೇರಿಸಿ. ಸರಾಗವಾಗಿ ಙ, ಙಾ, ಙಿ ಇತ್ಯಾದಿ ಅಕ್ಷರಗಳನ್ನು ನೀವೇ ಸರಾಗವಾಗಿ ಉಚ್ಚರಿಸಬಲ್ಲಿರಿ. ನಿಜವಾಗಿ ದ್ರಾವಿಡ ಭಾಷೆಯಲ್ಲಿ ಅನುಸ್ವಾರವೇ ಇಲ್ಲ. ಪಕ್ಕದ ತಮಿೞಿನಲ್ಲಿ ಅಂಗದ ಅಲ್ಲ. ಅಙ್ಗದ. ಮಞ್ಜಳ್ (ಮಂಜಳ್ ಅಲ್ಲ.) ಹಾಗಾಗಿ ಕನ್ನಡಕ್ಕೆ ಙ, ಞ ಸಹಜ.
ಉ: ಕಾಗುಣಿತದಲ್ಲಿ ಅನುಮಾನ
ಕನ್ನಡ ಞ, ಮತ್ತು ಙ ಈ ಎರಡು ಅಕ್ಕರಗಳು ಬೇಡ.. ಇದಕ್ಕೆ ಓಸುಗರಗಳನ್ನೂ ಹಲವೆಡೆ ಚರ್ಚೆಗಯ್ದಿದ್ದೀವಿ...
ದಯವಿಟ್ಟು ಅದನ್ನು ಆರಯಿರಿ.
=====================================
ಮಾಯ್ಸ!
ಉ: ಕಾಗುಣಿತದಲ್ಲಿ ಅನುಮಾನ
ಕನ್ನಡದಲ್ಲಿ ಆ sounds ಇವೆ - ಆದರೆ ಅದಕ್ಕೆ representation ಅನುಸ್ವಾರದಿಂದ, ಅಷ್ಟೇ. - ಅನುಕೂಲಕ್ಕೋಸ್ಕರ ಮಾಡಿಕೊಂಡಿರುವುದಿದು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಕಾಗುಣಿತದಲ್ಲಿ ಅನುಮಾನ
ಹಂಸಾನಂದಿಯವರು ಸರಿಯಾಗಿ ಹೇಳಿದ್ದಾರೆ. ಬರಹದಲ್ಲಿ ಞ್, ಙ್ ಇವೆಲ್ಲ '೦' ನೇ.
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಾಗುಣಿತದಲ್ಲಿ ಅನುಮಾನ
ನಾನು ಇದನ್ನು ಒಪ್ಪುವುದಿಲ್ಲ. ಅನುಸ್ವಾರ ದ್ರಾವಿಡ ಭಾಷೆಗಳಲ್ಲಿಲ್ಲ. ಅನುಸ್ವಾರಕ್ಕೆ ಯಾವಾಗಲೂ ವರ್ಗೀಯ ವ್ಯಂಜನಗಳ ಧ್ವನಿಯಿಲ್ಲ. ಆದ್ದರಿಂದ ಇದನ್ನು ನಾನು ಒಪ್ಪುವುದೇ ಇಲ್ಲ.
ಉ: ಕಾಗುಣಿತದಲ್ಲಿ ಅನುಮಾನ
ಇದು ನಿಮ್ಮ ಒಪ್ಪಿಗೆ ಪ್ರೆಶ್ನೆ ಅಲ್ಲವೇ ಅಲ್ಲ..!! ನೀವು ಒಪ್ಪುವುದೂ ಬೇಡ! ಅದು ನಮಗೂ ಹಲವರಿಗೂ ಬೇಕಾಗಿಲ್ಲ.
ಕನ್ನಡದಲ್ಲಿ ಯಾರೂ
ಅಂಚೆ = ಅಞ್ಚೆ
ಅಂಕೆ = ಅಙ್ಕೆ
ಎಂದು ಬರೆಯಲ್ಲ.. ನೀವು ಬರೆದು ಸಂತಸಪಡಬೋದು.. ಹೆಚ್ಚಿನವರಿಗೆ ಬೇಕಿಲ್ಲ..!
ಅದಕ್ಕೆ ಶಂಕರ ಬಟ್ರ ಹೊತ್ತಗೆ ಓದಿ!
ಅನುಸ್ವರ ಎಂಬುದು ಕನ್ನಡದಲ್ಲೂ ಇಲ್ಲ..
ಮಾದರಿ
ಹಂಸ ಇಲ್ಲಿ ೦ ಅನುಸ್ವರ, ಅನುನಾಸಿಕವಲ್ಲ.
ಸಂಯಮ ಇಲ್ಲಿ ೦ ಅನುಸ್ವರ ಅನುನಾಸಿಕವಲ್ಲ
ಕನ್ನಡ ನುಡಿಯಲ್ಲಿ ಅವರ್ಗೀಯ ವೆಂಜನಗಳ ಮುಂದೆ ೦ ಬರೋದೇ ಇಲ್ಲ.. ೦ ಬರೋದು ಏನಿದ್ರೂ ವರ್ಗೀಯಗಳ ಮುಂದೆ....
ಕನ್ನಡದ ೦ ಅನುಸ್ವರವೇ ಅಲ್ಲ... ಎಂದು ಹೇಳಿದರೂ ಸರಿ..
ಓಸುಗರ
ಸಕ್ಕದಲ್ಲಿ ಅಂಕ ಎಂದು ಬರೆದರೆ ತಪ್ಪು ಎಂದು ಹೇಳಬೋದು.. ಅಙ್ಕ ಎಂದೇ ಬರೆಯಬೇಕು...
ಆದರೆ ಕನ್ನಡದಲ್ಲಿ ಯಾವ ರಾಯನ ಕಾಲದಿಂದಲೂ ಅಂಕ ಎಂದೇ ಬರೆಯೋದು..
ಹಾಗೆ ಹಿನ್ದಿ = ಹಿಂದಿ, ಕಣ್ಠ = ಕಂಠ....
ಅರೆ ಮೂಗಿಲಿಗಳ ಬದಲು ೦ ಬರೆಯೋದು ಕನ್ನಡದ ಗುಣ.. ಇದು ಸಕ್ಕದದ ಎರವಲೂ ಅಲ್ಲ, ತಮಿಳಲ್ಲಿ ೦ ಇಲ್ಲವೇ ಇಲ್ಲ.! ಆದ್ರೆ ಮಳಯಾಳಂ ಅಲ್ಲಿ ಇದೆ. ಅದು ಕನ್ನಡದಿಂದೇ ಹೋಗಿರೋದು.
=====================================
ಮಾಯ್ಸ!
ಉ: ಕಾಗುಣಿತದಲ್ಲಿ ಅನುಮಾನ
"0 ಮಲೆಯಾಳದಲ್ಲಿ ಇದೆ. ಅದು ಕನ್ನಡದಿಂದೇ ಹೋಗಿರೋದು."
ಮಲೆಯಾಳದಲ್ಲಿ ಹಿನ್ದಿ, ಕಣ್ಠ ಇತ್ಯಾದಿಯಾಗಿ ಬರೆಯುತ್ತಾರಲ್ಲದೆ ಹಿಂದಿ, ಕಂಠ ಅಂತ ಅಲ್ಲ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಕಾಗುಣಿತದಲ್ಲಿ ಅನುಮಾನ
മലയാളം
ಕೊನೆಯಲ್ಲಿ ೦ ಏನು?
ತಮಿಳಲ್ಲಿ மலயாளம் 0 ಇಲ್ಲ...
ಮಲಯಾಳಿ ಕನ್ನಡ ಮತ್ತು ತಮಿೞು ಲಿಪಿಗಳ ಬೆಱೆಕೆ!
=====================================
ಮಾಯ್ಸ!
ಉ: ಕಾಗುಣಿತದಲ್ಲಿ ಅನುಮಾನ
ಕನ್ನಡಕಂದರೆ,
ತಾವು ದಯವಿಟ್ಟು ಶಂಕರ ಬಟ್ಟರ ಹೊತ್ತಿಗೆಗಳನ್ನ ಓದಿ
ಅವರ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'. ನಾವು ಎಲ್ಲನೂ ಉಲಿದಂತೆ ಬರೆಯುವುದಿಲ್ಲ
ಇಲ್ಲಿ ಅಙ್ಕ, ಅಞ್ಚೆ, ಚನ್ದ, ಸೊಮ್ಪು ಅಂತ ಬರೆದರೆ ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಇವೆಲ್ಲವನ್ನು ಅನುಸ್ವರದಿಂದ ಸರಳವಾಗಿ ಬರೆಯುವ ರೂಡಿ ಕನ್ನಡದಲ್ಲಿದೆ. ಈ ಸರಳಿಸುವಿಕೆ ನಾವು ಉಳಿಸಿಕೊಳ್ಳುವುದರಲ್ಲಿ ನಮಗೆ ಬರೆಯುವುದಕ್ಕೆ/ಟಯ್ಪುವುದಕ್ಕೂ ಸಲೀಸು. ಈ ತರದ ಉಲಿದಂತೆ ಬರೆಯದಿರುವ ರೂಡಿ ಇಂಗಲೀಸ್ ಸೇರಿದಂತೆ ಬೇರೆ ನುಡಿಗಳಲ್ಲಿ ಇದೆ.
ಇಂಗಲೀಸ್ ಮಾದರಿ ನೋಡಿ
೧. talk ನ ಉಲಿಯುವುದು 'ಟಾಕ್' ಅಂತಾನೆ ಹೊರತು 'ಟಾಲ್ಕ್' ಅಲ್ಲ
೨. pseudo ನ ಉಲಿಯುವುದು 'ಸೂಡೊ' ಅಂತಾನೆ ಹೊರತು 'ಪ್ಸೂಡೊ' ಅಲ್ಲ.
ಇದು ಇಂಗಲೀಸ್ ನಲ್ಲಿ ನಡೆದು ಬಂದಿರುವ ಕಟ್ಟಳೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಾಗುಣಿತದಲ್ಲಿ ಅನುಮಾನ
ವ್ಯಾಕರಣವೆಂದರೆ ಭಾಷೆಯ ಕುಱಿತಾದ ತಿಳುವಳಿಕೆ ಮೂಡಿಸಿಕೊಳ್ಳುವುದು. ಆಗ ಗಣಿತದಲ್ಲಿರುವ ಎಲ್ಲಾ permutation ಹಾಗೂ combinationಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ’ಅಂಗದ’ (ಇದು ನಿಜವಾಗಿ ಅಙ್ಗದ) ಉಚ್ಚರಿಸುವಾಗ ಕಂಠ್ಯದಿಂದ (ಗಂಟಲಿನಿಂದ ಹೊಱಟ ಉಸಿರು ಸ್ವಲ್ಪಮಟ್ಟಿಗೆ ಮೂಗಿನಲ್ಲಿ ಬಿಡಲ್ಪಡುತ್ತದೆ.) ಈ ಙ್ ಗೆ ಸ್ವರ ಸೇರಿಸಿದಾಗ ಙ, ಙಾ ಙಿ ಙೀ ಇತ್ಯಾದಿ ಅಕ್ಷರ ನಾನೂ ಉಚ್ಚರಿಸಬಲ್ಲೆ. ನೀವು ಕೂಡ. ಹಾಗೆಯೇ ಅಂಚು(ನಿಜವಾಗಿ ಅಞ್ಚು) ಈ ಞ್ ಕೂಡಾ ಇದೇ ತರ್ಕ ಅನ್ವಯಿಸಿದಾಗ ಞ, ಞಾ, ಞಿ, ಞೀ, ಞು, ಞೂ ಇತ್ಯಾದಿಗಳನ್ನು ನಾನೂ ಉಚ್ಚರಿಸಬಲ್ಲೆ. ನೀವು ಕೂಡ.
ಉ: ಕಾಗುಣಿತದಲ್ಲಿ ಅನುಮಾನ
ಸರಿಯಾಗಿ ಓದಿಕೊಳ್ಳಿ. ಗಣಿತದಲ್ಲಿರುವಂತೆ ಎಲ್ಲಾ permutation ಹಾಗೂ combinationಗಳೆಂದು ಸೇರಿಸಿಕೊಳ್ಳಿ. ಆದ ಪ್ರಮಾದಕ್ಕೆ ವಿಷಾದಿಸುತ್ತೇನೆ.