ಇ-ಮೇಲ್ ಬಗ್ಗೆ
ಸ್ನೇಹಿತರೇ,
ನಾವು ಇ-ಮೇಲ್ (ಕನ್ನಡ ಪದ ಗೊತ್ತಿಲ್ಲಾ) ಕಳಿಸುವಾಗ 'Regards' ಪದದ ಬದಲಾಗಿ ಯಾವ ಕನ್ನಡ ಪದ ಬಳಸಬಹುದು? ಮತ್ತು ವಿಂಡೋಸ್ ಎಕ್ಸ್ ಪಿ ಯಲ್ಲಿ 'ರ' ಕ್ಕೆ 'ಯ' ಒತ್ತು ಬರಿಸಲು ಯಾವ ಯಾವ ಕೀಲಿ ಅಕ್ಷರಗಳನ್ನು ಬಳಸ ಬೇಕು?
-ಪಂಚಿ.....

- Login or register to post comments
- 430 hits
- Email this forum





RSS:
ಉ: ಇ-ಮೇಲ್ ಬಗ್ಗೆ
ಪಂಚಿಕೆಬಿ,
. ಸಂಪದದಲ್ಲಿಯಂತೂ ಇದರ ಬಗ್ಗೆ ಎಗ್ಗಾಮುಗ್ಗಾ ಜಗ್ಗಾಟಗಳಾಗಿವೆ. ಇಲ್ಲಿ ನೋಡಿ, ನನ್ನಿಯ ಮೂಲ. ನನ್ನಿ ಎಂಬ ಬಳಕೆಯ ಬಗ್ಗೆ ಗೂಗಲ್ ಪುಟ ನೋಡಿ. ಅಚ್ಚರಿಯಾಗುತ್ತದೆ.
೧. ಇ-ಮೇಲ್ ಗೆ ಮಿಂಚೋಲೆ ಎಂಬ ಪದವನ್ನು ಈಗಾಗಲೇ ಸಾಕಷ್ಟು ಜನ ಬಳಸುತ್ತಿದ್ದಾರೆ(ದ್ದೇವೆ).
"ಇ-ಮೇಲ್ ಕಳುಹಿಸಿ" ಎಂಬುದಕ್ಕೆ ಚುಟುಕಾಗಿ "ಮಿಂಚು ಹಾಕಿ" ಅಥವಾ "ಮಿಂಚಿಸಿ"ಎಂಬುದಾಗಿ ಬಳಸುತ್ತಿದ್ದೇವೆ.
೨.೧ regardsಗೆ ಇಂತಿ ಎಂಬ ಬಳಕೆ ಈಗಾಗಲೇ ಇದೆಯಲ್ಲವೇ.
೨.೨ thanksಗೆ "ನನ್ನಿ" ಪದ ಸಾಕಷ್ಟು ಪ್ರಚಾರದಲ್ಲಿದೆ, ಈ ನಡುವೆ
೩. ವಿಂಡೋಸ್ ಎಕ್ಸ್.ಪಿಯಲ್ಲಿ ರ ಕ್ಕೆ ಯಾವತ್ತು ಬರಿಸುವುದಕ್ಕೆ ಸಾಧ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ವಿಸ್ತಾದಲ್ಲಿ ಸರಿಹೋಗಿದೆಯೆಂದು ಈ ಕೊಂಡಿ ತಿಳಿಸುತ್ತದೆ.
ಉ: ಇ-ಮೇಲ್ ಬಗ್ಗೆ
ಮಿಂಚೋಲೆ, ಮಿನ್ನೋಲೆ ಇವೆರಡೂ ಬಳಕೆಗೆ ಬಂದಿವೆ...
ನಾನು ಓಲೆಯನ್ನು ಕೊನೆ ಮಾಡುವುದು
ನನ್ನಿ, ಹದುಳವಿರಲಿ, ಸಿಗುಮ, ನಲುಮೆ, ಸರಿ, ಇಂತಿ..
ಆದ್ರೆ ನನ್ನಿ, ಹದುಳವಿರಲಿ, ನಲುಮೆ, ಚನ್ನಾಗಿರ್ತವೆ.
ಉ: ಇ-ಮೇಲ್ ಬಗ್ಗೆ
ಇ೦ತಿ ಸರಿಯಲ್ಲ. ಇ೦ತು ಎ೦ದಿದ್ದರೆ ಚೆನ್ನ. ಇ೦ತಿ ಎನ್ನುವುದು 'ಇತಿ'ಯ ಅನುಕರಣೆಯಿ೦ದ ಬ೦ದದ್ದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಇ-ಮೇಲ್ ಬಗ್ಗೆ
ಇಂತು + ಈ = ಇಂತೀ( ಇದು ಇಂತಿ ಆಗಿದೆ )
ಇಂತು
ಈ ಮಹೇಶ!
ಉ: ಇ-ಮೇಲ್ ಬಗ್ಗೆ
6-7 ವರ್ಷಗಳ ನಂತರ ಕನ್ನಡ ಬಳಸಲು ಶುರು ಮಾಡಿರುವೆ. ಆದ್ದರಿಂದ ಈ ಗಲಿಬಿಲಿ. ಪ್ರತಿಕ್ರಿಯಿಸಿದ ಎಲ್ಲ ಗೆಳೆಯರಿಗೂ ಧನ್ಯವಾದ.
ವಂದನೆಗಳೊಂದಿಗೆ / ಪಂಚಿ.....
ಉ: ಇ-ಮೇಲ್ ಬಗ್ಗೆ
ಈ-ಮೇಲ್ ಅನ್ನು ಮಿಂಚೆ ಅಂತ ಹೇಳುವುದನ್ನೂ ಕೇಳಿದ್ದೇನೆ.
ಉ: ಇ-ಮೇಲ್ ಬಗ್ಗೆ
veena.
ಅದೇ ರೀತಿ ಮಿಂಚಂಚೆ (ಮಿಂಚು + ಅಂಚೆ)ಎಂದೂ ಬಳಸಬಹುದಲ್ಲವೆ.
ಉ: ಇ-ಮೇಲ್ ಬಗ್ಗೆ
ವಿ-ಪತ್ರ (ವಿದ್ಯುನ್ಮಾನ ಪತ್ರ) ಎಂದಾಗಬಹುದೇ?
ಧನ್ಯವಾದಗಳೂದಿಗೆ
ರಾಘವೇಂದ್ರ
ಉ: ಇ-ಮೇಲ್ ಬಗ್ಗೆ
ರೀಈಈಈಈಈಈ ರಾಘವೇಂದ್ರ
ನಕ್ಕೂ ನಕ್ಕೂ ಸುಸ್ತಾಯಿತು.
೧. ಅದು ಕನ್ನಡವೇ ?
೨. ಮಿಂಚಿನಲ್ಲಿ ಚಿತ್ರವಿದ್ದರೆ, "ವಿದ್ಯುನ್ಮಾನ ಚಿತ್ರಸಹಿತ ಪತ್ರ" ಅನ್ನೋದಕ್ಕಾಗುತ್ತದೆಯೇ ?
ಉ: ಇ-ಮೇಲ್ ಬಗ್ಗೆ
"೨. ಮಿಂಚಿನಲ್ಲಿ ಚಿತ್ರವಿದ್ದರೆ, "ವಿದ್ಯುನ್ಮಾನ ಚಿತ್ರಸಹಿತ ಪತ್ರ" ಅನ್ನೋದಕ್ಕಾಗುತ್ತದೆಯೇ ?"
ಮೊಸ್ಟಲಿ ಚಂನೀಲ ಇದನ್ನು
"ಮಿಂಚೆಯಲ್ಲಿ ಚಿತಿರವಿದ್ರೆ," ಎಂದು ಹೇಳಕ್ಕೆ ಅಚ್ಚುತಪ್ಪು ಮಾಡವ್ನೆ ಅಂತೀನಿ.