ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಚಿಬ್ಲು , ಮುಗ್ಲು .....

September 19, 2007 - 3:56am — ವೈಭವ

ಇವುಗಳ ತಿಳಿವೇನು?

ಚಿಬ್ಲು (ಚಿಬ್ಬುಲು)
ಮುಗ್ಗುಲು( ಮುಗ್ಲು)
ಮೊಗ್ಗಲು( ಮೊಗ್ಲು)
ಎಕ್ಕತ್ತು
ಎಡೊತ್ತು
ಉನಿ(ವುನಿ)

ಮೊಗಳು

‹ ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ಕನ್ನಡಕ್ಕೆ ದಿಕ್ಕಿಲ್ಲವೆ?!! ›
  • ಸಾಹಿತ್ಯ, ಭಾಷೆ
~.~
  • Login or register to post comments
  • 452 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2007 - 1:01pm — mahesha

ಉ: ಚಿಬ್ಲು , ಮುಗ್ಲು .....

mahesha's picture

ಚಿಬ್ಲು = ಇದಕ್ಕೆ ತೊನೆರೋಗ ಅಂತ ಕೂಡ ಅಂತಾರೆ. ಮೈಮೇಲೆ ಬಿಳಿ ಕಲೆಗಳು ಏಳ್ತಾವೆ.

ಮುಗ್ಲು = ಅಂದ್ರೆ, ಹಳೆಯದಾಗಿ ನಾರುವ, ಮುಗ್ಲು ಹಿಟ್ಟು.

ಉನಿ = ಅಂದ್ರೆ ನೆನೆಹಾಕು, keep it rinsed.

ಮಿಕ್ಕವು ನಾ ಕೇಳಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 1:39pm — benaka

ಉ: ಚಿಬ್ಲು , ಮುಗ್ಲು .....

benaka's picture

ನನಗೆ ತಿಳಿದಂತೆ,

ಚಿಬಲು, ಚಿಬುಲು, ಚಿಬ್ಲು, ಚಿಬ್ಬಲು, ಚಿಬ್ಬುಲು = ದೋಸೆ ಬೇಯಿಸುವಾಗ ಅದನ್ನು ಮುಚ್ಚಲು ಉಪಯೋಗಿಸುವ ಮುಚ್ಚಳ!
ಮುಗ್ಗಲು = ಹಳಸಿದ, ಹಳೆಯ ವಾಸನೆ ಬರುವ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 2:40pm — ಶ್ರೀನಿವಾಸ ವೀ. ಬ೦ಗೋಡಿ

ಉ: ಚಿಬ್ಲು , ಮುಗ್ಲು .....

ಶ್ರೀನಿವಾಸ ವೀ. ಬ೦ಗೋಡಿ's picture

ನಾ ಕೇಳಿದಂಗ,
ಚಿಬ್ಲು - ಬುಟ್ಟಿ ಮುಚ್ಚಲು ಬಳಸುವ ಮುಚ್ಚಳ

ಚಿ(ಛಿ)ಬ್ಬು - ಮೈಮೇಲಿನ ತಾತ್ಕಾಲಿಕ ಬಿಳಿ ಕಲೆಗಳು. ಇದು ತೊನ್ನು ರೋಗಕ್ಕಿಂತ ಬೇರೆ.
ಹುಣಸೆ ಕಾಯಿ ಸಣ್ಣದಿರುವಾಗ (ಇದನ್ನು ನಮ್ಮ ಕಡೆ ಹುಣಸೆಕಟ್ಟ ಎನ್ನುತ್ತಾರೆ), ನಾಗರ ಪಂಚಮಿಗಿಂತ ಮುಂಚೆ ತಿನ್ನಬಾರದಂತೆ. ತಿಂದರೆ ಚಿಬ್ಬು ಆಗುತ್ತೆ ಅಂತ ನಂಬಿಕೆ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 4:48pm — Sunil Jayaprakash

ಉ: ಚಿಬ್ಲು , ಮುಗ್ಲು .....

Sunil Jayaprakash's picture

ಚಿಬ್ಲು - ನಮ್ಮಮ್ಮ ಈ ರೀತಿ ಮಾತಾಡುವುದನ್ನು ಕೇಳಿದ್ದೇನೆ. "ಚಿರೋಟಿ ಹಾಕಿಡಕ್ಕೆ ಒಂದು ಗೂಡೆ ಮತ್ತು ಚಿಬ್ಲು ಬೇಕು". ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಮತ್ತು ಬೆನಕ ಅವರು ಹೇಳಿದ ಮುಚ್ಚಳ ಎನ್ನುವ ಬಗೆ ಸರಿಹೊಂದುತ್ತದೆ ಅನ್ಸತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2007 - 10:43am — ಶ್ರೀನಿವಾಸ ವೀ. ಬ೦ಗೋಡಿ

ಉ: ಚಿಬ್ಲು , ಮುಗ್ಲು .....

ಶ್ರೀನಿವಾಸ ವೀ. ಬ೦ಗೋಡಿ's picture

Quote:
ಇದನ್ನು ನಮ್ಮ ಕಡೆ ಹುಣಸೆಕಟ್ಟ ಎನ್ನುತ್ತಾರೆ

ಹುಣಸೆಕಟ್ಟ - ಕ್ಷಮ್ಸಿ, ಇದನ್ನು ನಾಗರಕಟ್ಟ ಎಂದು ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 9:33pm — ವೈಭವ

ಉ: ಚಿಬ್ಲು , ಮುಗ್ಲು .....

ವೈಭವ's picture

ಬೆನಕ, ಸಿರಿನಿವಾಸ, ಸುನಿಲ, ಮಾಯ್ಸ ನನ್ನಿ, ತಮ್ಮ ಮರುಲಿಗಳಿಗಾಗಿ
ಬೇರೆ ಬೇರೆ ತಿಳಿವುಗಳು ಸಿಕ್ಕವು.

ನನಗೆ ಗೊತ್ತಿರುವುದು/ ನಾನು ಬಳಸುವುದು ಈ ಅರ್ತಗಳಲ್ಲಿ:-

ಚಿಬ್ಲು ಅಂದಾಗ ನನಗೆ ನೆನಪು ಬರುವುದು ಚಿಬ್ಲಿಡ್ಲಿ . ನಾವು ಈಗಲೂ ಇಡ್ಲಿ ಬೇಯಿಸಲು ಈ ತೆಳ್ಳಗಿನ ಬಿದುರಿನಲ್ಲಿ ಮಾಡಿದ ಚಿಬ್ಲುಗಳನ್ನೆ ಬಳಸೋದು.

ಮುಗ್ಲು = ಹಳಸಾಗಿರುವುದು. ಕೊಳೆತು ಹೋಗಿರುವುದು

ಮೊಗ್ಲು = ಮಗ್ಗುಲು. ಆದರೆ ಆಡುನುಡಿಯಲ್ಲಿ ಮೊಗ್ಲು ಆಗಿದೆ. ಮಾದರಿ: ಬಲ್ ಮೊಗ್ಲಲ್ಲಿ ಏಳಪ್ಪ , ಎಡ್ ಮೊಗ್ಲಲ್ಲಿ ಏಳಬೇಡಪ್ಪೊ Smiling
ಉನಿ = ಒದ್ದೆ ಮಾಡು, ನೆನೆ ಹಾಕು . ಇನ್ನೊಮ್ದು ಅರ್ತದಲ್ಲಿ ಇದು ಕೆಲಸಗಳನ್ನು pending ನಲ್ಲಿ ಇಡು ಅಂತ ಆಗುತ್ತೆ.
ಉದಾ: ಅವತ್ತಿನ ಕೆಲಸ ಅವತ್ತೇ ಮಾಡ್ದೆ ಏನ್ ಉನಿಯಾಕಂಡಿದಿಯಪ್ಪ Smiling

ಎಕ್ಕತ್ತು = ಇದು ಕತ್ತಿನ ಹಿಂಬಾಗ. ಹೇಗೆ ಬಿಡಿಸುವುದು ಗೊತ್ತಿಲ್ಲ
ಎಡೊತ್ತು = ಎಡ + ಹೊತ್ತು , ಅಂದ್ರೆ ನಮ್ಮಲ್ಲಿ 'ಬಲ'ಕ್ಕೆ ಸರಿ ಮತ್ತು 'ಎಡ' ತಪ್ಪು ಎಮ್ಬ ಅನಿಸು ಇದೆ. ಇಲ್ಲಿ ಎಡ= ಸರಿಯಲ್ಲದ ಎಂಬ ತಿಳಿವು
ಎಡೊತ್ತು = ಸರಿಯಲ್ಲದ ಹೊತ್ತು. ಹೊತ್ತಲ್ಲದ ಹೊತ್ತು
ಮಾದರಿ: ಏನಪ್ಪ ನೀನು ಎಡೊತ್ತಿನಲ್ಲಿ ತಿಂತಾ ಇದಿಯ. ಉಂಡಿದ್ ಮೈಗೆ ಇಡಿತದಾ? Smiling

ಮೊಗಳು = ಮುಚ್ಚಳ. ಇದನ್ನು ನಾವು ಎಳನೀರು ಬುಂಡೆ ಕೊಚ್ಚಬೇಕಾದರೆ ಹೇಳದು. ಮೇಲಿನ ಪದರವನ್ನು ಅರ್ದ ಕೊಚ್ಚಿ ಆಮೇಲೆ 'ಮೊಗಳು' ತೆಗೆದು ಎಳನೀರು ಕುಡಿಯದು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2007 - 11:32pm — hamsanandi

ಉ: ಚಿಬ್ಲು , ಮುಗ್ಲು .....

hamsanandi's picture

ಚಿಬ್ಬಲು ಎನ್ನುವುದಕ್ಕೆ ನನಗೆ ಗೊತ್ತಿರುವ ಅರ್ಥವೂ ಸುಮಾರು ಮಹೇಶರು ಹೇಳಿದ್ದೇ - ಆದರೆ ಇದು ತೊನ್ನು ರೋಗವಲ್ಲದೆ, ಸುಮ್ಮನೆ ಚರ್ಮದ ಮೇಲಾಗುವ ಕಲೆಗಳನ್ನು ಸೂಚಿಸುತ್ತೆ/

Quote:
ಎಕ್ಕತ್ತು = ಇದು ಕತ್ತಿನ ಹಿಂಬಾಗ. ಹೇಗೆ ಬಿಡಿಸುವುದು ಗೊತ್ತಿಲ್ಲ

ಇದು ಹೆಕ್ಕತ್ತು ಇರಬಹುದು - ಕತ್ತಿನ ಹಿಂದು -> ಹೆಕ್ಕತ್ತು ಈ ರೀತಿ ಬಿಡಿಸಬಹುದೇ?
ಅಥವ ಹಿರಿದು ಕತ್ತು -> ಹೆಕ್ಕತ್ತು ಇರಬಹುದೆ?

ಈ ಪದವನ್ನು ಸಾಧಾರಣವಾಗಿ ಎತ್ತುಗಳ ಕತ್ತಿನ ಹಿಂಭಾಗದ ಡುಬ್ಬಕ್ಕೆ ಉಪಯೋಗಿಸುವುದನ್ನು ಕೇಳಿದ್ದೇನೆ. ಆಗ ಹಿರಿದು ಕತ್ತು ಎನ್ನುವುದು, ಮತ್ತೆ, ಅದು ಕತ್ತಿನ ಹಿಂದೆ ಇರುವುದು ಎರಡೂ ಸರಿಹೋಗುತ್ತದೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2007 - 12:06am — ವೈಭವ

ಉ: ಚಿಬ್ಲು , ಮುಗ್ಲು .....

ವೈಭವ's picture

ನನ್ನಿ ಹಂಸಾನಂದಿಗಳೆ,

ಅದು ಹಿನ್+ಕತ್ತು ಅತ್ವ ಹಿಂ+ಕತ್ತು ಆಗಿರಬಹುದು. ಆಡುನುಡಿಯಲ್ಲಿ ಹಿಕ್ಕತ್ತು -> ಎಕ್ಕತ್ತಾಗಿದೆ.

ಇಂದಿಗೂ ನಾವು ಶರ್ಟಿನ 'ಕಾಲರ್' ನನ್ನು 'ಎಕ್ಕತ್ತಿನ ಪಟ್ಟಿ' ಅಂತಾನೆ ಹೇಳದು. Smiling

ಮಾದರಿ: ಒಹ್, ಎಕ್ಕತ್ತಿನ ಪಟ್ಟೀಲಿ ಕೊಳೇನೆ ಹೋಗಿಲ್ಲ. ಏನ್ ಒಗಿದಿದಿಯಾ?

ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2007 - 12:59pm — karthik

ಉ: ಚಿಬ್ಲು , ಮುಗ್ಲು .....

karthik's picture

ಎಕ್ಕತ್ತಿಗೆ ಇನ್ನೊಂದು ಮಾದರಿ
ಜಾಸ್ತಿ ನಿಗರ್ತಾ ಅವ್ನೆ, ಎಕ್ಕತ್ತಿನ ಮ್ಯಾಗೆ ಒಂದು ಕೊಡ್ಲಾ ಅವಂಗೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2007 - 6:31am — mahesha

ಉ: ಚಿಬ್ಲು , ಮುಗ್ಲು .....

mahesha's picture

ಎರ್‍ + ಕತ್ತು = ಎರ್ಕತ್ತು = ಎಕ್ಕತ್ತು ಇದು ಆಗಿರಬೋದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವುಗಳ ತಿಳಿವು/ಅರ್ತ ಏನು?
  • ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
  • ಇವುಗಳ ಕೂಡುಒರೆ/ಸಮಾಸದ ಬಗೆ/ವಿಧ ತಿಳಿಸಿ ?
  • ಈ ಬಾಳು...
  • ದೆಹಲಿಯ ಸ೦ಚಾರ ವ್ಯವಸ್ಥೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator