ರಾಮಾಗ್ನಿಯಲ್ಲಿ ಎರಡು ಜೀವಾಗ್ನಿ ನಂದಿಸಿ, ರಾಮನ ಹೆಸರ ಮೆರೆಸಿದವ್ರು
ನಾನು ದೇವರು ನಂಬ್ತೀನೋ ಬಿಡ್ತೀನೋ ಅದು ಇಲ್ಲಿ ಬೇಕಾಗಿಲ್ಲ.
ರಾಮನು ಒಬ್ಬ ಇಲ್ಲದ ಸಂಗತಿ ಎಂದು ಕರುಣಾನಿದಿ ಹೇಳಿದ್ರು. ಇದನ್ನು ಏನು ಇಂದು ಹೊಸತಾಗಿ ಹೇಳಿದ್ರೆ, ಇವರ ಈ ಸಂಕ ಮುವ್ವತ್ತು ಏಡುಗಳಿಂದ ಮೊಳಗ್ತಾನೇ ಇದೆ. ಇಲ್ಲಿ ಕರುಣಾನಿದಿ ಹೇಳಿದ್ರಲ್ಲಿ ತಪ್ಪೇನು ಇಲ್ಲ. ಅವನಿಗೆ ನಂಬಿಕೆ ಇಲ್ಲ, ಆ ನಂಬಿಕೆ ಇರದಿರುವಿಕೆಯನ್ನು ಹೇಳಿದ್ದಾನೆ.
ಅದಕ್ಕೆ ಸೇಡು ಅಂತ ಪಾಪಾ ಬಸ್ಸಲ್ಲಿ ಮಲಗಿದ್ದೆ ಇಬ್ರನ್ನು ತೀರಿಸಿದ್ದು ಯಾವ ಸೈಪು?
ಈಗ ನಮ್ಮ ಕನ್ನಡನಾಡಲ್ಲಿ ನಾವೆಲ್ಲ ಆರಾಮಾಗಿ ಇದ್ದೀವಿ. ನಮಗೆ ನಮ್ಮ ಅನಿಸಿಕೆ ಇಡುವ ತಾವು ಇದೆ. ಆದ್ರೆ ಹಿಂಗೆ ಕೊಂದು-ಗಿಂದು ನೆತ್ತರುಕ್ಕಿಸಿದೋದು ನಮ್ಮ ಮೆದುತನದ ನಡೆಯಲ್ಲ.
ಒಟ್ನಲ್ಲಿ ಕರುಣಾನಿದಿ ಎದುರು ಏನಾರ ಮಾಡಬೇಕು ಅಂತಿದ್ರೆ ಹೋಗಿ ಅವರ ನಾಡಲ್ಲಿ ಮಾಡ್ಲಿ, ನಮ್ಮ ಕನ್ನಡನೆಲವನ್ನು ಯಾಕೆ ಕಂಪುಮಾಡಿ, ನಮ್ಮ ನೆಲದ ಹೆಸರೇಕೆ ಕೆಡಿಸಬೇಕು?

- Login or register to post comments
- 397 hits
- Email this forum





RSS:
ಉ: ರಾಮಾಗ್ನಿಯಲ್ಲಿ ಎರಡು ಜೀವಾಗ್ನಿ ನಂದಿಸಿ, ರಾಮನ ಹೆಸರ ಮೆರೆಸಿದವ್ರು
ಮೊದಲು ಇದನ್ನ ಮಾಡಿದ್ದು ಕನ್ನಡದೋರೋ ಇಲ್ಲ ತಮಿಳರೋ ಅನ್ನೋದನ್ನ ಪತ್ತೆ ಹಚ್ಚಬೇಕು..
ಏಕೆಂದರೆ.. ಇದರಲ್ಲಿ ಎರಡು ಹುನ್ನಾರ ಅಡಗಿರೋ ಹಾಗಿದೆ..
ಇದನ್ನ ಕರುಣಾನಿಧಿಯ opposite party ಕಡೆಯವರು ಮಾಡಿರಬಹುದು ಎಂದಿಟ್ಟುಕ್ಕೊಳ್ಳೊಣ .. ಆಗ
ಮೊದಲನೆಯದು ಅಂದರೆ ಕರುಣಾನಿಧಿಯ ಹೆಸರು ಕೆಡಿಸೋದು.. ಇದನ್ನ ಅಲ್ಲಿದ್ದು ಮಾಡ್ಲಿಕ್ಕೆ ತುಂಬಾ ತೊಂದರೆ ಅಲ್ಲವೆ.. ಅದಕ್ಕೆ ಇಲ್ಲಿಯೇ ಮಾಡಿರಬಹುದು..
ಎರಡನೆಯದು ಅಂದರೆ ಜೊತೆಗೆನೆ ಕನ್ನಡಿಗರ ಹೆಸರು ಕೆಡಿಸೋದು. ಇದರಿಂದ ಎರಡೂ ಜನರ ನಡುವೆ ಕಿಚ್ಚು ಹಚ್ಚುವದು..
ಅದಕ್ಕೆ ಇದರಲ್ಲಿ ಕನ್ನಡಿಗರು ತುಸು ಎಚ್ಚರದಿಂದ ಚೆನ್ನಾದ ರೀತಿಯಲ್ಲಿ ನಡೆದು ಕೆಟ್ಟ ಹೆಸರು ಬರದೇ ಇರೋ ಹಾಗೆ, ನಿಜವನ್ನ ಬಯಲಿಗೆ ಎಳೀಬೇಕು...