ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಈಗೀಗ Dell, HP ಎಲ್ಲ ಲಿನಕ್ಸ್ ಅನುಷ್ಟಾಪಿತವಾದ ಲ್ಯಾಪ್ ಟಾಪ್ ಗಳನ್ನು ಮಾರುತ್ತಿದ್ದಾರಂತೆ.
ಇದರ ವಿಚಾರ ಗೊತ್ತಿದ್ದರೆ ಹೇಳಿ. ಬೆಂಗಳೂರಿನಲ್ಲಿ ಇಂತಹ ಲ್ಯಾಪ್ ಟಾಪ್ ಗಳು ಲಭ್ಯ ಇದೆಯೇ? ಎಲ್ಲಿ ಕೊಳ್ಳಬೇಕು ಎನ್ನುವ ಮಾಹಿತಿ ಇದ್ದರೆ ತಿಳಿಸಿ.
ಧನ್ಯವಾದಗಳೊಂದಿಗೆ
ಅರವಿಂದ

- Login or register to post comments
- 1046 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಅಮೇರಿಕದಲ್ಲಿ ಡೆಲ್ ಉಬುಂಟು ಹಾಕಿ ಲ್ಯಾಪ್ಟಾಪ್ ಮಾರುತ್ತಿದೆ. ಭಾರತದಲ್ಲಿ ಹೊರತಂದಿದೆಯೋ ಇಲ್ಲವೋ ಗೊತ್ತಿಲ್ಲ. HP ಬಹುಶಃ ಯಾವುದಾದರೊಂದು ಮಿನಿಮಲ್ ಲಿನಕ್ಸ್ ವಿತರಣೆಯನ್ನ ಹಾಕಿಕೊಡುತ್ತದೆ ಅನ್ಸತ್ತೆ ವಿಂಡೋಸ್ ಬದಲು.
ಅದು ಹೇಗೇ ಆದರೂ ನಿಮಗೆ ಲಿನಕ್ಸ್ ಅನುಭವ ಇದ್ದರೆ ಮೈಕ್ರೊಸಾಫ್ಟ್ ವಿಂಡೋಸ್ ಇಲ್ಲದ ಲ್ಯಾಪ್ಟಾಪ್ ಕೊಂಡು ಅದರಲ್ಲಿ ಲಿನಕ್ಸ್ ನೀವೇ ಹಾಕಿಕೊಳ್ಳಿ. ಯಾವುದೇ ಕಂಪೆನಿಯವರು ಜೊತೆಗೆ ಕೊಡುವ ಹೆಚ್ಚಿನ ಸಾಫ್ಟ್ವೇರ್ ಅಷ್ಟೇನೂ ಉಪಯೋಗವಾಗುವುದಿಲ್ಲ. ಜೊತೆಗೆ ವಿಂಡೋಸ್ ಎಕ್ಸ್ ಪಿ ಅಥವ ವಿಸ್ಟಾಗೆ ನೀವು ಖರ್ಚು ಮಾಡಬೇಕಾದ ದುಡ್ಡು ಉಳಿಯುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಧನ್ಯವಾದಗಳು.
ನಾನು Dell ಕಂಪನಿಯನ್ನು ಸಂಪರ್ಕಿಸಿದೆ. ಲಿನಕ್ಸ್ ನ ಯಾವುದೇ ಲ್ಯಾಪ್ ಟಾಪ್ ಭಾರತದಲ್ಲಿ ಲಭ್ಯವಿಲ್ಲವಂತೆ. HP freeDos OS ಇರುವ ಲ್ಯಾಪ್ ಟಾಪ್ ಇದ್ಯಂತೆ.
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಹಾಗಿದ್ರೆ ಆ HP ಲ್ಯಾಪ್ ಟಾಪ್ನ ಕೊಂಡು ಅದರೊಳಗೆ ಉಬಂಟು Linux ಕೂರಿಸಿ. ಉಬಂಟು live cd ತನ್ನಂತಾನೆ ಆರಾಮಾಗಿ install ಆಗತ್ತೆ.
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಏನಾಯಿತು? ಲಿನಕ್ಷ್ ಹಾಕಿದ್ರಾ? Ubunutu/Kubuntu ೭.೧೦ ಹೊಸ ಆವೃತ್ತಿ ಬಂದಿದೆ. ಹೇಗಿದೆ ತಿಳಿಸಿ.
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
Ubuntu/Kubuntu 7.10 ಬಹಳ ಚೆನ್ನಾಗಿದೆ. ನಿನ್ನೆ ತಾರೆ ನನ್ನ ಎಲ್ಲ ಸಿಸ್ಟಮುಗಳನ್ನು ಅದಕ್ಕೆ ಅಪ್ಗ್ರೇಡ್ ಮಾಡಿದೆ.
ಸವಿವರವಾಗಿ ಲೇಖನ ಸದ್ಯದಲ್ಲೇ ಬರೆಯುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಮೇಲಿನ ಕಾಮೆಂಟಿನಲ್ಲಿ "ನಿನ್ನೆ ತಾನೆ" ಎಂದು ಓದಿಕೊಳ್ಳಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ನಾನು Acer ಕಂಪನಿಯ Aspire 4710z ಅನ್ನುವ ಮಾಡೆಲ್ ಅನ್ನು ತಗೊಂಡೆ, ಅದರಲ್ಲಿ ಮೊದಲಿಗೆ ಯಾವುದೂ OS ಇರಲಿಲ್ಲ... ನನಗೂ 34500 ರೂ ಗೆ ಸಿಕ್ಕಿತು.
ನನಗೆ fedora ಲಿನಕ್ಸ್ ನ ಮೇಲೆ ತುಂಬಾ ಒಲವು ಹಾಗಾಗಿ fedora 7 ಅನ್ನು ಅನುಷ್ಟಾಪಿಸಿದೆ. ತುಂಬಾ ಚೆನ್ನಾಗಿದೆ.
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ನಾನು ಫೆಡೋರ ಬಳಸೋದು ಬಿಟ್ಟು ಒಂದು ವರ್ಷದ ಮೇಲಾಯ್ತು - ಹೀಗಾಗಿ ಅದರ ಬಗ್ಗೆ ಏನೂ ಹೇಳಲಾರೆ.
ಆದರೆ ಉಬುಂಟು ಹಾಗೂ ಡೆಬಿಯನ್ ನನಗೆ ಬಹಳ ಇಷ್ಟವಾದದ್ದು ಅದರಲ್ಲಿರುವ ಪ್ಯಾಕೇಜ್ ಮ್ಯಾನೇಜರ್ - apt-get ಇರೋದ್ರಿಂದ. apt-get ಕಮ್ಯಾಂಡಿಗೆ Synaptic ಅನ್ನೋ ಒಂದು GUI wrapper ಇದೆ (ವಿಂಡೋಸ್ ನ Add/Remove Programs ಥರಾ). ಇದನ್ನು ಬಳಸಿ ಎಷ್ಟೆಲ್ಲಾ ಪ್ರೋಗ್ರಾಮುಗಳನ್ನ ಸುಲಭವಾಗಿ ಹಾಕಿಕೊಂಡುಬಿಡಬಹುದು. ಎಲ್ಲ ತರದ ಮೀಡಿಯ ಕೂಡ ತಲೆ ನೋವಿಲ್ದೇ ಪ್ಲೇ ಆಗತ್ತೆ...
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ನಾನು ಉಬಂಟು ಕೂಡ ಬಳಸಿದ್ದೇನೆ. ನನ್ನ ಅನುಭವದ ಪ್ರಕಾರ ಎಲ್ಲಾ ಲಿನಕ್ಸ್ ಗಳೂ ಒಂದೆ.
ಮೊದಲು ನಾನು ಲಿನಕ್ಸ್ ಬಳಸಲು ಶುರು ಮಾಡಿದಾಗ ಯಾವುದು ಅಂತ ತಿಳಿಯದೆ, UBUNTU ಅನ್ನು ಪರ್ಮನೆಂಟ್ ಆಗಿ ಅನುಷ್ಟಾಪಿಸಿ ಅದರ ಜೊತೆ ಒಂದರ ನಂತರ ಒಂದರಂತೆ fedora, Open Suse, Knopix, Mandravia ಅನುಷ್ಟಾಪಿಸಿ ನೋಡಿದೆ. ನನಗೆ ಕಂಡು ಬಂದಿರುವ ವ್ಯತ್ಯಾಸವೆಂದರೆ default ತಂತ್ರಾಂಶಗಳು

ಫೆಡೋರದಲ್ಲಿ ಕೂಡ ಪ್ಯಾಕೇಜ್ ಮ್ಯಾನೇಜರ್ ಇದೆ, yum ಅಂತ ಅದ್ರ ಹೆಸ್ರು. ಅದಕ್ಕೆ yumex ಅಂತ GUI Wrapper ಕೂಡ ಇದೆ.
ಅದೂ ಅಲ್ಲದೆ ಯಾವುದಾದರು ಲಿನಕ್ಸ್ ನಲ್ಲಿ ತಂತ್ರಾಂಶ ಚೆನ್ನಾಗಿದೆ ಅಂದ್ರೆ ಅದರ source ಅಂತೂ ಸಿಕ್ಕೇ ಸಿಗುತ್ತೆ , ಅದನ್ನ ತಗೊಂಡು ಯಾವ ಲಿನಕ್ಸ್ ಗೆ ಬೇಕಿದ್ದರೂ ಇನ್ಸ್ಟಾಲ್ ಮಾಡ್ಬೋದು.
ನಾನು ಫೆಡೊರ ಇಷ್ಟ ಪಡಲು ಕಾರಣ ಏನೆಂದರೆ, ಕಳೆದ ಆರು ತಿಂಗಳಿಂದ ಅದರ Development cycle ಅನ್ನು track ಮಾಡುತ್ತಿದ್ದೇನೆ, ಅದರ ಚಟುವಟಿಕೆಗಳನ್ನು ನೋಡಿ ಆಶ್ಚರ್ಯ ಪಟ್ಟಿದ್ದೇನೆ.
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಫೆದೋರ೭ ನಲ್ಲಿ ಕನ್ನಡ ಸುಲಭವಾಗಿ ಬರುತ್ತಾ? ನಾನು kubuntu 7.04 ನಲ್ಲಿ ಪ್ರಯತ್ನಿಸಿ (ಅನೇಕರ ಸಲಹೆಗಳ ನಂತರವೂ) ಸಫಲನಾಗದೆ ಈಗ ೭.೧೦ (shipit ನಲ್ಲಿ) ಬರುತ್ತೆ ಅಂತ ಕಾಯ್ತಾ ಇದ್ದೇನೆ. (internetನಲ್ಲಿ download ಮಾಡಲು ಸಾಧ್ಯವಿಲ್ಲ - ತುಂಬಾ ಬೆಲೆ ಜಾಸ್ತಿ!)
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಫೆಡೋರಾದ ಹೊಸ ಆವೃತ್ತೀಲಿ ಕನ್ನಡ out-of-box ಬರತ್ತೆ ಅಂತ ಕೇಳಿದ್ದೀನಿ. ಮೊನ್ನೆ ತಾನೆ ಉಬುಂಟು ೭.೧೦ ಹಾಕಿಕೊಂಡೆ - ಅದರಲ್ಲಿ ಕೂಡ ಕನ್ನಡ out-of-box ಬರತ್ತೆ.
ಉಬುಂಟು 7.10 ಸಿಡಿಗಳಿಗೆ ಯಾಕೆ ಕಾಯ್ತೀರಿ? ನನ್ನ ಹತ್ತಿರ ಇದೆ ಬೇಕಾದರೆ ತಗೊಂಡು ಒಂದು ಕಾಪಿ ಮಾಡಿಕೊಳ್ಳಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಸಿಡಿ offerಗೆ (ಒಳ್ಳೆ ಕನ್ನಡದ ಪದ ಕೂಡಲೇ ಸಿಕ್ತಿಲ್ಲ!) ನನ್ನಿ. ಆದರೆ.. ನಾನೆಲ್ಲೋ (ಮೈಸೂರು) ನೀವೆಲ್ಲೋ (ಬೆಂಗಳೂರು?). ಇನ್ನೇನು shipit ಸಿಡಿ ಬರಬಹುದು ಮೊದಲೇ ಬೇಡಿಕೆ ಸಲ್ಲಿಸಿದ್ದೆ. ರವಾನೆಯಾಗಿದೆಯಂತೆ.
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಛೆ, offer ಹೇಗಾಗತ್ರೀ? ಸರಿಯಾಯ್ತು! ಬೇಕಿದ್ರೆ ಒಂದು ಕಾಪಿ ಮಾಡ್ಕೊಳಿ ಅಂದದ್ದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಮೈಸೂರಿನಲ್ಲಿ ಬೇಕಾದ್ರೆ ಶಶಿ ಹಾಗೂ ರವಿಯವರನ್ನು ಸಂಪರ್ಕಿಸಿ - ಖಾಲಿ ಸಿಡಿ ಹಿಡಿದುಕೊಂಡು ಹೋಗದಿದ್ರೂ ಒಂದು ಕಾಪಿ ಮಾಡಿಕೊಡೋದಕ್ಕೇನೂ ಹಿಂದೆ ಮುಂದೆ ನೋಡೋದಿಲ್ಲ ಅವರುಗಳು. ಖುಷಿಯಿಂದ ಒಂದು ಕಾಪಿ ಕೊಡ್ತಾರೆ. (ಆದರೆ ಒಂದು ಖಾಲಿ ಸಿಡಿ ಹಿಡಿದುಕೊಂಡು ಹೋಗಿ)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಉಬಂಟು, ಫೆಡೋರಾ ಸಿಡಿ/ಡಿವಿಡಿ ಗಳು ನನ್ನ ಬಳಿಯೂ ಲಬ್ಯ ಇದೆ, ಅದೂ ಅಲ್ಲದೆ ನಾನು ಮೈಸೂರಿನಲ್ಲಿ ಲಬ್ಯ
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಮೈಸೂರಲ್ಲಿ ಎಲ್ಲಿ,ಯಾವಾಗ, ಹೇಗೆ?
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ನನ್ನ ಬಳಿ Ubuntu 7.04 ಮತ್ತು Fedora 7 ಇದೆ. ನನ್ನ ವಾಸ ಸೂರ್ಯಬೇಕರಿ ಸರ್ಕಲ್ ನ ಹತ್ತಿರ. ನನ್ನ ದೂರವಾಣಿ ಸಂಖ್ಯೆ ೯೪೪೯೫೪೭೧೪೨.
Fedora 8 ಇನ್ನೊಂದು ವಾರದಲ್ಲಿ ನನ್ನ ಕೈ ಗೆ ಬರಲಿದೆ. ಉಬಂಟು 7.10 ಇನ್ನೂ ಸಿಕ್ಕಿಲ್ಲ.
ಧನ್ಯವಾದಗಳೊಂದಿಗೆ
ಅರವಿಂದ
http://www.belaku.net
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಫೆಡೋರ8 ಬಂದಿದೆಯಂತಲ್ಲಾ. ತುಂಬಾ ಚೆನ್ನಾಗಿದೆ ಅಂತ ಓದಿದೆ. ನಿಮ್ಮ ಬಳಿ ಇದೆಯಾ? (ಮೈಸೂರಲ್ಲಿ ಎಲ್ಲಿ ಯಾವಾಗ ಲಭ್ಯ - ಅಂತ ತಿಳೀಲಿಲ್ಲ!)
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಮೇಲಿನ ಪ್ರತಿಕ್ರಿಯೆ ಬರೆದ ಮೇಲೆ ನಿಮ್ಮ ಮಾಹಿತಿ ಕಂಡಿತು. ಯಾಕೆ ಮೊದಲು ಕಾಣಲಿಲ್ಲವೋ ಗೊತ್ತಿಲ್ಲ. ಮಧ್ಯ ಒಂದು ಸಲ ಸರ್ವರ್ ಎರರ್ ಅಂತಲೂ ಬಂತು. ಇರಲಿ ಫೆಡೋರ8 ನಿಮಗೆ ಸಿಕ್ಕಿದ ಮೇಲೆ ಪಡೆದುಕೊಳ್ಳುತ್ತೇನೆ. ಸವಿಯೊದಗು.
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಉಬುಂಟು ಮತ್ತು ಕುಬುಂಟು ೭.೧೦ ಎರಡೂ (32 bit & 64 bit) CDಗಳು ನನಗೆ ಬಂದಿವೆ. ಇನ್ನೂ ಹಾಕಿ ನೋಡ್ತಾ ಇದ್ದೇನೆ. ಪ್ರತಿಗಳು ಬೇಕೇ?
ಉ: ಲಿನಕ್ಸ್ ನ ಲ್ಯಾಪ್ ಟಾಪ್ ಕೊಳ್ಳುವ ಬಗ್ಗೆ
ಅರವಿಂದರೆ, ಸವಿಯೊದಗು, ನೀವು ಕೊಟ್ಟ ಫೆ ಡೋರ೮ ಹಾಕಿಕೊಂಡೆ. ಕನ್ನಡ ಸುಲಭವಾಗಿ ಬಂತು. ಆದರೆ (ಏನಾದರೊಂದು ಇರಲೇ ಬೇಕಲ್ಲಾ!), ನನಗೆ ಸುಲಭವಾಗಿದ್ದ KGP ಕೀ ಬೋರ್ಡ್ ಇದರಲ್ಲಿ ಸರಿಯಾಗಿ ಬರ್ತಿಲ್ಲ. ಮತ್ತೆ ಇನ್ನು ಕೆಲವು ಸಣ್ಣ ಪುಟ್ಟ ತೊಂದರೆಗಳು, ನಿಧಾನವಾಗಿ ಅಂತರ್ಜಾಲದಲ್ಲಿ ಹುಡುಕಿ ಸರಿಮಾಡಿಕೊಳ್ಬೇಕು.