ಆಸ್ವದಿಸು
ಆಸ್ವದಿಸು - ಇದಕ್ಕೊ೦ದು ಕನ್ನಡದ ಒರೇನ ಹುಡುಕ್ಕೊಡಿ. ಬಳಕೆಯಲ್ಲಿರುವುದು 'ಆಸ್ವಾದಿಸು' ಆದ್ರೂನೂನೂನೂ 'ಆಸ್ವದಿಸು' ಸರಿ ಅನ್ಸುತ್ತೆ.
ಅಥವಾ ಕನ್ನಡದಲ್ಲಿ ಆಸ್ವದಿಸು ಅ೦ತಾನೇನೇನೇ ಬಳಸ್ಕೊ೦ಡ್ರೆ ಹೆ೦ಗೆ? ತಮಿಳಿನಲ್ಲಿ 'ರಸಿಕ್ಕಿರದು' ಇದುಕ್ಕೆ ಸ೦ವಾದಿಯಾದ ಒರೆಯು.

- Login or register to post comments
- 435 hits
- Email this forum





RSS:
ಉ: ಆಸ್ವದಿಸು
ಕೃಷ್ಣಪ್ರಕಾಶಬೊಳಂಬು, ನಿಮಗೆ ಬೇಕಾಗಿದ್ದ ಪದ, "ಸವಿ". ಸವಿ ಸವಿ ನೆನಪು ಚಿತ್ರದ "ಸವಿಯೋ ಸವಿಯೋ, ಒಲವಾ ನೆನಪು" ಹಾಡನ್ನು ನೆನಪಿಸಿಕೊಳ್ಳಿ. ಕನ್ನಡ ಹಾಡುಗಳು ಎಷ್ಟೊಂದು ಚೆನ್ನಾಗಿವೆ.
ಕನ್ನಡ ನಿಘಂಟುಗಳಲ್ಲಿ ಇದಕ್ಕೆ ರುಚಿ ನೋಡುವುದು ಎಂಬ ಅರ್ಥ ಸಿಗುತ್ತೆ. ದ್ರಾವಿಡ ನುಡಿಕೋಶದ ಅರ್ಥ ಬೇಕಿದ್ದರೆ ಇಲ್ಲಿ ನೋಡಿ, ಸವಿ.
ಆಸ್ವಾದನೆ - ಸವಿ
ಆಸ್ವಾದಿಸುವಿಕೆ - ಸವಿಯುವುದು
ಆಸ್ವಾದಿಸುವಾಗ - ಸವಿಯುವಾಗ
ಆಸ್ವಾದಿಸಬಹುದಾದ - ಸವಿಯಾದ (ಸವಿಯಬಹುದಾದ), ಮಧುರವಾದ
ಉ: ಆಸ್ವದಿಸು
ಸವಿ, ಸವಿಯುವಿಕೆಯೇ ಸರಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಆಸ್ವದಿಸು
svada (p. 372) [ svâd-a ] m. taste, (good) flavour; charm (of a poem, rh.); -ana, n. tasting; -anîya, fp. savoury.
svadana (p. 372) [ sva½âdâna ] n. taking one's due.
visasvada (p. 292) [ visha½âsvâda ] m. poison to the taste.
rasasvada (p. 252) [ rasa½âsvâda ] m. perception of pleasure.
asvada (p. 043) [ â-svâd-a ] m. taste, enjoyment; flavour; -aka, a. tasting, enjoying; -ana, n. =âsvâda; -a-vat, a. tasting well, dainty; -ya, fp. to be tasted; palatable: -toya, a. having palatable water.
ಆಸ್ವಾದ..
ಸ್ವಾದ = ರುಚಿ
ಆಸ್ವಾದ = ರುಚಿಯನ್ನು ನಲಿಯುವುದು, flavour / ರುಚಿಯ ಬಗೆ
ಕನ್ನಡದಲ್ಲಿ
ರುಚಿ ( ರುಚಿ ನೋಡು) = ಸವಿ
ಆಸ್ವಾದ/ಸುರುಚಿ/ಮಧುರ = ಇನಿ ( sweet )
taste = ಕಡಿ ( ಇದು ಇದೆ )
http://dsal.uchicago.edu/cgi-bin/philologic/getobject.pl?c.0:1:2404.burr...
ಆದ್ರೆ taste/ಆಸ್ವಾದ/ಸ್ವಾದ = ಸವಿ.
Ka.
ಸವಿ/ಸಮ್ವಿ savi, saṃvi that has taste, that is palatable, savoury, sweet or nice; taste, sweetness;
ಸವಿ/ಸವೆ savi, save to test by eating, taste, eat;
ಸವಿಗಾರ/savigāṟa a man who creates pleasant feelings, a jocose or witty man, etc.;
ಸವಿಸು/savisu to cause to taste or eat;
ಸವಿಹ/saviha taste, flavour.
ಉ: ಆಸ್ವದಿಸು
ಅಲ್ಲ ಗುರೂ, ಅಷ್ಟೊ೦ದು ಅಚ್ಚಗನ್ನಡ ಮಾತಾಡಕ್ ಕಾಸರಗೋಡ್‍ನೋರು ನಾವೇನು ಕನ್ನಡಾಭಿಮಾನಿಗಳೇ, ನಮ್ಮ೦ಥೋರ ಕನ್ನಡಾಭಿಮಾನ ಮ೦ಗಳೂರಿನ್ ನೆ೦ಟ್ರು ಮೇಲಿನ್ ಪ್ರೀತಿ, ಅಷ್ಟೇ. ತೆಮಿಳಿನಲ್ಲೇ ರಸ ಅನ್ನೋ ಡ್ರಾವಿಡದ್ದಲ್ಲದ ಪ್ರಯೋಗಾ ಇರ್ಬೇಕಾದ್ರೆ ಆಸ್ವದಿಸು ಅ೦ದ್ರೆ ತಪ್ಪೇನು, at least ನಮ್ಮ೦ಥಾ ನಿರಭಿಮಾನಿಗುಳಾದ್ರೂ ಹೇಳ್ಕೋತೀವಿ ಗುರೂ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಆಸ್ವದಿಸು
ಧಾರಾಳವಾಗಿ ಆಸ್ವಾದಿಸು ಅನ್ನಿ. ಆಸ್ವದಿಸು ಅಲ್ಲ ಅನ್ನಿಸ್ತದೆ
ನೀವು ಕೇಳಿದಕ್ಕೆ ಹೇಳಿದ್ದು.. ನೀವು ’ಆಸ್ವಾದಿಸ’ಬೇಕು...
ಯಪ್ಪ..!! ನಿಮ್ಮ ಮೊದಲ ಬರಹವನ್ನು ನೋಡಿ...
ನೀವು ಹೇಳಿದ್ದು ಆಸ್ವಾದಿಸು ಇದಕ್ಕೆ ಕನ್ನಡದಲ್ಲಿ ಒರೆ ಇದ್ರೇ ಹೇಳಿ ಅಂತ.. ಹೇಳಿದ್ವಿ.. ಅಲ್ಲಿಗೆ ಮುಗಿತು.
ಉ: ಆಸ್ವದಿಸು
ಕಾಸರ್‍ಗೋಡೂ ಕನ್ನಡಾಭಿಮಾನಿಗುಳೂ ಅನ್ನೋ ಟಾಪಿಕ್ಕು ಯಾಕ್ ಬ೦ತೂ೦ತ ನಿಮಗ್ಗೊತ್ತು ಅನ್ಕ೦ತೀನಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಆಸ್ವದಿಸು
ಗೊತ್ತಾಗಿಲ್ಲ...
ಏನು ಮರ್ಮವೋ ಪ್ರಭುವೇ ಏನು ಮರ್ಮವೋ!!
ಏನ್ರೀ ಅದು ಹೆಗ್ಗುಟ್ಟು ಕಾಸರಗೊಡಿದ್ದು? ವಸಿ ಬಿಡಿಸಿ ಹೇಳ್ರೀ..
ಉ: ಆಸ್ವದಿಸು
ಸ೦ಪದ ಪಾಡ್‍ಕ್ಯಾಸ್ಟ್ ನ೦.3.
ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತಾಡೋರು, ಕಾಸರಗೋಡಿನಲ್ಲಿ ಒ೦ದು ಮುನ್ಸಿಪಾಲಿಟಿ ಆಗಿ, ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅ೦ತ ಒ೦ದು ನಿರ್ಣಯ ಮಾಡಿದ್ರು.ಆಗ ನಾವಿಲ್ಲಿ ಚಪ್ಪಾಳೆ ತಟ್ತಾ ಇದ್ವಿ. ಅವ್ರು ಹಾಗೊ೦ದು ನಿರ್ಣಯ ಮಾಡೋದು, ಅವರ ಭಾಷಾಭಿಮಾನದಿ೦ದಲ್ಲ; ಮಾತ್ರವಲ್ಲ, ಯಾಕೇ೦ದ್ರೆ ಕಾಸರಗೋಡಿನಲ್ಲಿ ಇರೋರಿಗೆ ಬಹಳ ಜನ ನೆ೦ಟ್ರು, ಇಷ್ಟರು ಎಲ್ಲಾ ಇರೋದು ಮ೦ಗಳೂರಿನಲ್ಲಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಆಸ್ವದಿಸು
ರೀ ನನಗೆ ಇನ್ನು ಅರಿತವಾಗಿಲಿಲ್ಲ..!!
ಆಸ್ವಾದ ಒರೆಗೂ ಕಾಸರಗೊಡಿಗೂ ಏನು ನಂಟು?
ಏನ್ರಪ್ಪ.. ಬಿಡಿಸಿ ತಿಳಿಸಿಸಿ.!!
ಉ: ಆಸ್ವದಿಸು
ಸ೦ಪದ ಪಾಡ್‍ಕ್ಯಾಸ್ಟ್ ನ೦.3. ಇಳಿಸಿಕೊಳ್ಳಿ.ಅದರಿ೦ದ ಉದ್ಧರಿಸಿದ ಭಾಗ ಮೇಲೆ ಕಾಣಿಸುವ೦ಥದ್ದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು