’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ನನಗೆ ತಿಳಿದಿರುವಂತೆ ’ರಾಜೀನಾಮೆ’ ಉರ್ದು / ಪಾರ್ಸಿಯಿಂದ ಬಂದ ಒರೆ. ಆ ನುದಿಗಳಲ್ಲಿ ಈ ಪದದ ಅರ್ಥ -- ಒಡಂಬಡಿಕೆ ( agreement or treaty).ಆದ್ದರಿಂದ ಇದು ಆ ಕಾರಣದಿಂದಲೂ ತಪ್ಪು. ಉರ್ದುವಿನಲ್ಲಿ ಸರಿಯಾದ ಅರ್ಥ ಕೊಡುವ ಪದ " ಇಸ್ತೀಫಾ" .ಹಿಂದಿಯಲ್ಲಿ ಸಂಸ್ಕೃತದಿಂದ ಬಂದ ’ ತ್ಯಾಗ ಪತ್ರ" ಬಳಸುತ್ತಾರೆ.
ಅಚ್ಚಕನ್ನಡದಲ್ಲಿ ಇದಕ್ಕೆ ಸರಿಯಾದ ಒರೆ ಇದೆಯೇ?
ನನಗೆ ಹೊಳೆದದ್ದು-- ’ ಕಡೆಯೋಲೆ’ / ’ ತೊರೆದೋಲೆ’

- Login or register to post comments
- 645 hits
- Email this forum




RSS:
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ವಂಕಟೇಶರೇ...
ಬೀಳ್ಕೊಡುಗೆ ಅಂದ್ರೆ ವಿದಾಯ, adieu..
ನೋಡಿ, ಇದರ ಸುತ್ತುಮುತ್ತು ಒಂದು ಒರೆ ಹುಟ್ಟಿಸಬೋದೇನೋ..
ತೊರೆವೋಲೆ( ತೊರೆವು + ಓಲೆ, ತೊರೆಯುವ ಓಲೆ ) ನಿಮ್ಮ ನೆಗಳ್ಚು ಕೂಡ ಚನ್ನಾಗಿದೆ.
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ದೇವರೇ ಕನ್ನಡವನ್ನು ಈ 'ವೀರ ಕನ್ನಡಿಗರ' ಸೆರೆಯಿಂದ ಬಿಡಿಸು, ಆದರೆ ಕನ್ನಡದಲ್ಲಿ ದೇವರೇ ಇಲ್ಲಾ ! ಹ...ಹ...ಹಾ..
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಕನ್ನಡದಲ್ಲಿ 'ದೇವರು' ಇದಕ್ಕೆ ಕಡವಳ, ಆಂಡವ ಎಂಬ ಒರೆಗಳವೆ. ಬಳಕೆಯಲ್ಲೂ ಇತ್ತು.
ಇಂದು ಬರೀ ತಮಿಳರು ಅದನ್ನು ಬಳಕೆಯಲ್ಲಿ ಇಟ್ಟುಕೊಂಡಿದ್ದಾರೆ..
ಕಡವಳ = ಕಡೆಯದಾಗಿ ಎಲ್ಲರೂ ಹೋಗಿ ಸೇರುವ ಸಂಗತಿ
ಆಂಡವ = ಕಾಪಾಡುವವನು ( ಆಂಡಯ್ಯ ಹೀಗೆ ಬಂದುದು )
ಸಂಗತಿಯ ಅರಿವು ಹಿರಿದು.. !! ಅದರ ಬಳಕೆ ತಟ್ಟನೆ ಕಾಣದಿದ್ರೂ, ಸಂಗತಿಗಳನ್ನು ತಿಳಿದಿರಬೇಕು... ಇದೇ ಇಲ್ಲೀ ಕೂಡ ನಡೆದುದು..
ತಮಾಷೆಯನ್ನಾದರೂ ಯಾವ ಸಂಗತಿಯ ಬಗ್ಗೂ ಮಾಡಬೋದು..
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ತಮಾಷೆಯನ್ನಾದರೂ ಯಾವ ಸಂಗತಿಯ ಬಗ್ಗೂ ಮಾಡಬೋದು..
ಇದನ್ನೇ ನಾನೂ ಮಾಡಿದ್ದು
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಕನ್ನಡಿಗರಿಗೆ ದುಡಿಮೆಯೇ ದೇವರು.
ಯಾರು ದುಡಿಯಲ್ಲ ಅಂತವರಿಗೆ ಸಕ್ಕದದ 'ದೇವರು' ಬೇಕು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ದುಡೀಯೋ ಜನ , ದುಡೀದೇ ಇರೋ ಜನದಲ್ಲಿ ೯೯.೯೯೯೯೯೯೯೯೯೯ % ಜನಕ್ಕೆ ದೇವ್ರು ಗೊತ್ತು . ಕಡೆವಳ .... ಇತ್ಯಾದಿ ಗೊತ್ತಿಲ್ಲ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಹಾಗೇ...
೯೯.೯೯೯೯% ಮಂದಿಗೆ 'ಇತ್ಯಾದಿ, ಪರಮ'.. ಮುಂತಾದವೂ ಗೊತ್ತಿರಲ್ಲ..
ಮಿಶ್ರಕೋಟಿಗಳು ೯೯.೯೯೯೯೯೯ % ಮಂದಿಗೆ ಗೊತ್ತೇ ಇಲ್ಲ ಅನ್ನೋದು ತುಸು ತೀರಾ ಆಯ್ತು.. ೯೯% ತಮಿಳಿಗೆ ಈ ಒರೆ ಗೊತ್ತು ಅಂತ ಇದೆಯಲ್ಲ....
ಇಲ್ಲಿ ಎಲ್ರಿಗೂ ಇದು ಗೊತ್ತು ಅಂತ ಉವರು ಹೇಳೇ ಇಲ್ಲ.... ಕನ್ನಡದಲ್ಲಿ 'ದೇವರು' ಇದಕ್ಕೆ ಸಮವಾದ ಒರೆ ಐತೆ ಅಂತ ಹೇಳಿದೆ.. ಅದೂ ಒಂದು ಕನ್ನಡದಲ್ಲಿ ದೇವರು ಅನ್ನೋದಕ್ಕೆ ಒರೆಯೇ ಇಲ್ಲ ಅನ್ನೋ ಚಾಲೆಂಚು ಬಂದುದಕ್ಕೆ.
"ಕನ್ನಡದ ಪುಲ್ಲೆನೆಗೆ ಪರಮ ಪಾವನ ತುಳಸಿ" ಅಂದಾಗ, ನಾನೂ ನಿಮಗೆ ಪ್ರಶ್ನೆ ಮಾಡಬೋದು, ತುಳಿಸಿ ಅದೆಷ್ಟು ಪಾವನ ಎಂದು ಎಷ್ಟು ಮಂದಿಗೆ ಗೊತ್ತು? ನಿಮ್ಮ ಧಾರ್ಮಿಕ ಹಿನ್ನೆಲೆಯನ್ನು ಬಿಟ್ರೆ, ತುಳಸಿಯೂ, ಪಾಪಸ್ಕಳ್ಳಿಯೂ ಎರಡೂ ಒಂದೇ, ಎರಡ್ರಲ್ಲೂ ಮದ್ದು ಮಾಡಬೋದು.
ಹೋಗಲಿ.. ಇಲ್ಲಿ 'ಪುಲ್ಲೆನೆಗೆ' ಅಂದ್ರೆ ಎಷ್ಟು ಮಂದಿಗೆ ಅರಿತವಾಗುವುದು.? ( ಕನ್ನಡನೆಲದಲ್ಲಿ ಇಂದು ಎಷ್ಟು ಮಂದಿ ಹುಲ್ಲಿಗೆ ಪುಲ್ಲು ಅಂತಾರೆ? 'ನನಗೆ'ಗೆ ಎನಗೆ ಅಂತಾರೆ? ) ಹಾಗಂತ ಈ ಸಾಲು ಇರುವ ಹಾಡು ಕಸವೇ?
ಆದ್ರೆ ಹಿಂಗೆ ಮಾತಿಗೊಂದು ಮಾತು ಆದ್ರೆ ಸುಮ್ನೆ ಇರುಸು-ಮುರುಸು!!
ಮಿಶ್ರಕೋಟಿ ಸಾರ್...
ಕೇವೆಂ ಎತ್ತಿರುವ ರಾಜೀನಾಮೆ ಬಗ್ಗೆ ಹೇಳಿ.. ಅವರ ಮಾತು ಸರಿ ಅಲ್ವಾ?
ರಾಜೀನಾಮೆ ಅಂದ್ರೆ ಒಡಂಬಡಿಕೆಯೋಲೆ ಅನ್ನೋದು ಸರಿ. ಇಸ್ತೀಫಾ ಇದು resignationಗೆ ಸರಿ ಒರೆ ಅಲ್ವಾ?
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಕನ್ನಡಿಗರಿಗೆ ದುಡಿಮೆಯೇ ದೇವರು, ಇದು ನಿಜವಾಗಿದ್ದಿದ್ದರೆ, ಕನ್ನಡ-ಕನ್ನಡಿಗರು-ಕರ್ನಾಟಕ ಪ್ರಪಂಚದಲ್ಲೆ ಮೊದಲ ಸ್ಥಾನದಲ್ಲಿರುತ್ತಿತ್ತು. ಹೀಗೆ ನಾವು ಯಾರೂ ಕ್ಯಾರೇ ಎನ್ನುವವರಿಲ್ಲದಂತಿರುತ್ತಿರಲಿಲ್ಲ. ಈ ಒಣ ಜಂಭ, ದುರಹಂಕಾರದಿಂದಲೇ ವೀರ ಕನ್ನಡಿಗರು ಮಹಿಷಿ-ವರದಿ, ಕನ್ನಡ ಕಾವಲುಸಮಿತಿ, ರಕ್ಷಣಾವೇದಿಕೆಗಳನ್ನು ಸೃಸ್ಟಿಸಿಕೊಂಡು ಸೋಲುತ್ತಿರುವುದು. ಕರ್ನಾಟಕದ ಶೇಕಡ ೯೦ ರಷ್ಟು ಉದ್ದಿಮೆಗಳು, ಶೇಕಡ ೬೦ ರಷ್ಟು ವ್ಯಾಪಾರ ವಹಿವಾಟುಗಳು ಕನ್ನಡೇತರರದ್ದು. ನಾವು ಅವರ ಗೇಟಿನಮುಂದೆ ನಿಂತು ಕೆಲಸದಭಿಕ್ಷೆಗೆ ಅಂಗಲಾಚುತ್ತಿರುವುದು. ವೀರ ಕನ್ನಡಿಗರು ಅನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಪ್ರೀತಿ ಹುಟ್ಟಿಸುವ ಬದಲು ಅಸಹ್ಯ ಹುಟ್ಟಿಸುತ್ತಿದ್ದಾರೆ. ಬೇರೆಭಾಷೆಯನ್ನು (ವಿಷೇಶವಾಗಿ ಸಂಸ್ಕೃತವನ್ನು) ದೂಷಣೆಮಾಡಿ-ದ್ವೇಷಬಿತ್ತಿ ಕನ್ನಡವನ್ನು ಕಟ್ಟುವುದು ಸಾಧ್ಯವಿಲ್ಲ. 'ಭಾರತ ಜನನಿಯ ತನುಜಾತೆ' ಎಂಬ ಸತ್ಯವನ್ನು ಮರೆತು ತಲೆಹರಟೆ ಮಾಡಿದರೆ ಅದೇ ಕನ್ನಡದ ಸಾವಿಗೆ ಮುನ್ನುಡಿ.
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ನನ್ನಿ!
ಈಗ ಕೇವೆಂ ಅವರೇ
'ರಾಜೀನಾಮಾ' ಬಗ್ಗೆ ಓದಿಕೊಂಡೆನು..
ನೀವು ಹೇಳಿದ್ದು ಖರೆ ಐತ್ರಿ. ರಾಜೀ = ಒಡಂಬಡಿಕೆ, ನಾಮಾ=ಓಲೆ/ಪತ್ರ...
ರಾಜೀನಾಮಾ ಅನ್ನೋದು ನೀವು ಹೇಳಿದ ಓಸುಗರಗಳಿಂದ ತಪ್ಪೇ.. ಆದ್ರೆ ನಮ್ಮ ಕನ್ನಡದಲ್ಲಿ ಹೇಗೋ ಬಳಕೆಗೆ ಬಂದುಬಿಟ್ಟಿದೆ...
'ಇಸತೀಪೆ' ಅನ್ನೋದನ್ನೂ ಬಳಸಬೋದು.. ಇದೇ ಚನ್ನಾಗಿದೆ..
ಆದ್ರೆ ತ್ಯಾಗಪತ್ರ
ಅಂದ್ರೆ ಇಲ್ಲಿ ಕೆಲಸಬಿಡೋದು ಯಾವ ತ್ಯಾಗವೋ? ನಾವು ಕನ್ನಡದೊರು ತ್ಯಾಗ ಅನ್ನೊ ಒರೆಯನ್ನು sacrifice ಅನ್ನೋದ ದೊಡ್ಡ-ಅರಿತದಲ್ಲಿ ಬಳಸ್ತೀವಿ..
ಇನ್ನು ಕೇವೆಂ, ನೀವು ಅಪ್ಪಟಗನ್ನಡದಲ್ಲೇ ಒಂದು ಒರೆಬೇಕು( ಇದು ಬಳಕೆಗೆ, ಬರೀ ಅರಿವಿಗೂ ಅದು ಬೇರೆ ಮಾತು) ಅಂತ ಎಳಸಿದರೆ, ನೀವು ಹೇಳಿದ "ತೊರೆವೋಲೆ" ಚನ್ನಾಗಿದೆ.
ಕೇವೆಂ ಇಂತಹ ಗೊಂದಲದ ಒರೆಗಳ ಬಗ್ಗೆ ತಿಳಿಸ್ತಾ ಇರಿ. ನನ್ನಿ! ಒಳ್ಳೇದಾಗಲಿ
ಉ: ’ರಾಜೀನಾಮೆ’ ಗೆ ಕನ್ನಡದ ಪದ ಇದೆಯೇ?
ಬಿಡುವೋಲೆ=ರಾಜೀನಾಮೆ.