19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!

November 8, 2005 - 4:11pm
hpn
'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :) ೫೦೦ನೇ ಸದಸ್ಯರಾದ [:http://sampada.net/u...|ಅರುಣ್] ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ ಎಲ್ಲ ಸದಸ್ಯರಿಗೂ‌ ಅಭಿನಂದನೆಗಳು. 'ಸಂಪದ'ವನ್ನು ಅಂತರಜಾಲದ ಅತಿದೊಡ್ಡ ಸಾಹಿತ್ಯ, ಬರವಣಿಗೆಗಳಿಗಾಗಿಯೇ ಮುಡುಪಾಗಿಟ್ಟ ಅಚ್ಚ ಕನ್ನಡದ ಸಮುದಾಯವನ್ನಾಗಿಸಿದ್ದೀರಿ ;) ನಮ್ಮ ಕನ್ನಡಿಗರಿಗಿರುವ ಕನ್ನಡ ಬರವಣಿಗೆ ಹವ್ಯಾಸವನ್ನು ಲೆಕ್ಕ ಹಾಕಿದರೆ ಇಷ್ಟರ ಮಟ್ಟಿಗೆ ಸಂಪದ ಬೆಳೆದಿರುವುದು ಅಚ್ಚರಿಯ ಸಂಗತಿಯೆಂದೇ ಹೇಳಬಹುದು (ಇದರಲ್ಲಿ ಸಂಪದದಲ್ಲಿರುವ ಕನ್ನಡ ಸಾಹಿತ್ಯ ಪ್ರೇಮಿಗಳ ಪಾತ್ರ ಬಹುದೊಡ್ಡದು). ಈ ಸಂದರ್ಭದಲ್ಲಿ 'ಸಂಪದ'ದಲ್ಲಾಗಲಿರುವ ಹಲವು ಬದಲಾವಣೆಗಳ ಬಗ್ಗೆ ಮುಂಚೆಯೇ ತಿಳಿಸಲು ಬಯಸುತ್ತೇನೆ. ನೀವೂ ಸಂಪದದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, 'ಸಂಪದ'ದಲ್ಲಿ "ಇದು ಬದಲಾಗಬೇಕು" ಎಂದು ಯಾವುದರ ಬಗ್ಗೆಯಾದರೂ ಅನಿಸಿಕೆ ಇದ್ದರೆ ತಪ್ಪದೆ ನಮಗೆ ತಿಳಿಸಿ. ಸಲಹೆ ಸರಿಯೆನಿಸಿದರೆ ಖಂಡಿತ ಅದನ್ನು ಜಾರಿಗೆ ತರುವೆವು. ಧನ್ಯವಾದಗಳು! - ಹೆಚ್ ಪಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

Submitted by prakashaka on
ಸಂಪದದಲ್ಲಿ ೫೦೦ !! ಶುಭಾಶಯಗಳು.. ಅಂದ ಹಾಗೆ ಸಂಪದದಲ್ಲಿ ವಿಶೇಷ ಸದಸ್ಯರಿಗೆ ವಿಶೇಷ ಸದಸ್ಯ ಸಂಖ್ಯೆ ಸಿಗುತ್ತದೆಯೋ ಹೇಗೆ..? ೧. ಎಚ್.ಪಿ.ಎನ್. ೧೧. ಪವನಜ ೫೦. ಪ್ರಕಾಶಕ (ಹೆ ಹ್ಹೆ) ಈಗ ೫೦೦ ಅರುಣ್

Submitted by venkatb83 on

ಹರಿ ಅವ್ರೆ-
೨೦೦೫ ರ ನವೆಂಬರ್ ನಲ್ಲಿ ೫೦೦ ಇದ್ದ ಸದಸ್ಯರ ಸಂಖ್ಯೆ ಈಗ ಎಸ್ಟಿದೆ?

ನಾ ಹಲವಾರು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಇತ್ತು ಗಮನಿಸಿದ ಹಾಗೆ,
ಅವುಗಳಲ್ಲಿ ಸಂಪದದಲ್ಲಿಯೇ ಅತಿ ಹೆಚ್ಚು ಜನ ಸಕ್ರಿಯವಾಗಿ ತೊಡಗಿಸಿಕೊಂಡಿರುವರು ಅನ್ನಿಸುತ್ತಿದೆ...

ಕಾಲ ಕಾಲಕ್ಕೆ ತಕ್ಕಂತೆ ಮತ್ತು ಸದಸ್ಯರ ಅನುಕೂಲಕ್ಕಾಗಿ ಓದುಗರನ್ನು(ಅತಿಥಿ ಓದುಗರು) ಗಮನದಲ್ಲಿ ಇರಿಸಿಕೊಂಡು ನೀವ್ ಮಾಡಿದ ಬದಲಾವಣೆಗಳು ಚೆನ್ನಾಗಿವೆ..

ಶುಭವಾಗಲಿ

ಸಂಪದ ನಿರ್ವಾಹಕರಿಗೆ

ನನ್ನಿ

\|/