'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
``ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ..." -ಈ ಸಾಲುಗಳೊಂದಿಗೆ ಆರಂಭವಾದದ್ದು ವಿಚಿತ್ರಾನ್ನ ಅಂಕಣದ ಪ್ರಪ್ರಥಮ ಸಂಚಿಕೆ. ಅದು ಪ್ರಕಟವಾದದ್ದು 2002ರ ಅಕ್ಟೋಬರ್ 15ರಂದು ಮಂಗಳವಾರ. ಇನ್ಸಿಡೆಂಟಲಿ ಅದೇ ಸಾಲುಗಳು ವಿಚಿತ್ರಾನ್ನ ಅಂಕಣದ ಈ ಕೊನೆಯ ಸಂಚಿಕೆಯಲ್ಲೂ ಕಾಣಿಸಿಕೊಂಡಿವೆ, ಇದು ಪ್ರಕಟವಾಗುತ್ತಿರುವುದು 2007ರ ಅಕ್ಟೋಬರ್ 16ರಂದು ಮಂಗಳವಾರ! ಬಹುಶಃ ಇವತ್ತು ಕೊನೆಯದಾಗಿ ``ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ... ಇನ್ನು ನನ್ನ ಕಿಸೆಯಲಿ ನಾಣ್ಯ ನಾಕಾಣೆ"! ಎಂದು ಸ್ವಲ್ಪ ಬದಲಾಯಿಸಬಹುದೇನೊ. ವರ್ಷಕ್ಕೆ ಒಂದಾಣೆಯಂತೆ ಅಂದುಕೊಂಡರೂ ಐದು ವರ್ಷಗಳಲ್ಲಿ ಒಟ್ಟು ಐದಾಣೆ ನಮ್ಮ ಅಧಿದೇವತೆ ಗಣೇಶನಿಗೆ ಸಂದಾಯವಾಗಿದೆ ಎಂಬ ಲೆಕ್ಕಾಚಾರ ಮಾಡಿ, ಅವತ್ತಾಡಿದ್ದ ಮಾತು ಮುರಿದಿಲ್ಲ ಎಂತಲೂ ತಿಳಿದುಕೊಳ್ಳಬಹುದೇನೊ. ಓದಿ..ಹೇಳಿ ನಿಮಗೆ ವಿಚಿತ್ರಾನ್ನ ಮುಗಿಯಿತು ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ? ವಿಚಿತ್ರಾನ್ನ

- Login or register to post comments
- 507 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ಯಾಕಂತ್ತೆ ನಿಲ್ಲಿಸಿದ್ದು? ನಿಮೆಗೆನಾದ್ರು ಗೊತ್ತಾ?
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ಎಲ್ಲದಕ್ಕೂ ಅಂತ್ಯವೆಂಬುದಿದೆಯಲ್ಲ ಎನ್ನುವ ಸಮಜಾಯಿಷಿ,ಅಂಕಣ ಪ್ರಕಟಿಸುವ ತಾಣದ ಸಂಪಾದಕರಿಂದ ಬಂದಿದೆ. "ಆದಿ ಮತ್ತು ಅಂತ್ಯವಿಲ್ಲದ್ದು ಸೃಷ್ಟಿಯಲ್ಲಿ ಯಾವುದಿದೆ? ಹೌದು, ಎಲ್ಲಾ ಆರಂಭಕ್ಕೂ ಅಂತ್ಯವಿರುತ್ತದೆ. ಎಲ್ಲಾ ಅಂತ್ಯಕ್ಕೂ ಆರಂಭವಿರುತ್ತದೆ. ಅದೇ ರೀತಿ 'ವಿಚಿತ್ರಾನ್ನ'ಅಂಕಣಕ್ಕೆ ಇಂದು ತೆರೆಬೀಳುತ್ತಿದೆ. ಸುಸ್ತಾಗದೇ, ಸೊರಗದೇ, ರಾಜೀಮಾಡಿಕೊಳ್ಳದೇ ವಿಚಿತ್ರಾನ್ನ ಬಡಿಸಿದ ಅಂಕಣಕಾರರಿಗೆ, ವಿಚಿತ್ರಾನ್ನಕ್ಕಾಗಿ ಹಂಬಲಿಸಿದ ಓದುಗರಿಗೆ ಧನ್ಯವಾದ. ಅಂಕಣ ಸಮಾಪ್ತಿ ಎಂಬ ವಿಚಾರ ಕೇಳಿ, ಪ್ರತಿ ಮಂಗಳವಾರ ರಸಗವಳ ಸವಿದ ಓದುಗ ಪ್ರಭುಗಳಿಗೆ ನಿಜಕ್ಕೂ ನಿರಾಸೆಯಾಗಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಏನು ಮಾಡುವುದು; ಎಲ್ಲಾ ಆರಂಭಕ್ಕೂ ಒಂದು ಅಂತ್ಯವಿರುತ್ತದೆ...-ಸಂಪಾದಕ"
*ಅಶೋಕ್
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
"ಅನುರಾಧಾ ಅವರಿಗೆ ನಮಸ್ಕಾರ. ಸುಸ್ತ್ ಅಂತೇನಿಲ್ಲ. ಮಸ್ತ್ ಆಗಿರುವಾಗಲೇ, ಇನ್ನೂ ಸ್ವಲ್ಪ ಬೇಕು ಎಂದಿರುವಾಗಲೇ ಕೊನೆಗೊಂಡರೆ ಚೆನ್ನ. ಖಂಡಿತವಾಗಿಯೂ ಮತ್ತೆ ಭೇಟಿಯಾಗೋಣ ಇದೇ ದಟ್ಸ್‌ಕನ್ನಡದಲ್ಲಿ ಆಗೊಮ್ಮೆ ಈಗೊಮ್ಮೆ. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದ."
ಯಾಕೆ ನಿಲ್ಲಿಸಿದಿರಿ ಅನ್ನುವ ಓದುಗರ ಪ್ರಶ್ನೆಗೆ ಜೋಷಿಯವರ ಉತ್ತರ ಮೇಲಿನದು.
*ಅಶೋಕ್
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ರಾಹುಲ್ ದ್ರಾವಿಡ್ ಥರಾ... ಉತ್ತುಂಗಕ್ಕೆ ತಲುಪಿರುವಾಗ ಡಿಗ್ನಿಟಿಯಿಂದ ಬೈ ಬೈ ಹೇಳಿದರು ಜೋಶಿಯವರು. ಅವರ ಪುಸ್ತಕಗಳು ಬೆಸ್ಟ್ ಸೆಲ್ಲರ್ ಲಿಸ್ಟುಗಳಲ್ಲಿ ಕಾಣಿಸಿಕೊಂಡಿವೆ. ಶ್ರೀವತ್ಸರವರ ಲೇಖನಗಳು ಹೆವಿಲಿ ಎಂಜಾಯಬಲ್ಲು, ಆದರೆ ಪನ್ ತೀರ ಹೆಚ್ಚಾದಾಗ ಬೋರ್ ಹೊಡೆಯಬಲ್ಲು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: 'ಪನ್'ಚವಾರ್ಷಿಕಯೋಜನೆ ಸಮಾಪ್ತಿ;ವಿಚಿತ್ರಾನ್ನಕ್ಕೆ ಶುಭಂ
ರಾಹುಲ್ ಡ್ರಾವಿಡ್ ಡಿಗ್ನಿಟಿಯಿಂದ ಬೈ ಬೈ ಹೇಳಿ ಈಗ ಬ್ಯಾಟಿಂಗ್ ಮಾಡೊದು ಮರ್ತಿದ್ದಾನೆ! ಜೊಶಿಯವರ ಬರಹದಲ್ಲಿ ನಗುಮಾಸದಿರಲಿ