ಇಂದು ಡಿ.ಎಲ್.ಐನಲ್ಲಿ ತಡಕಾಡುತ್ತಿದ್ದಾಗ, ಏಪ್ರಿಲ್ ೧೯೪೨ರಲ್ಲಿ ಬರೆಯಲ್ಪಟ್ಟ ಒಂದು ಪುಸ್ತಕ ಸಿಕ್ತು. ಅದರ ಹೆಸರು, [MARRIAGE AND FAMILY IN MYSORE|http://dli.iiit.ac.in/cgi-bin/Browse/scripts/use_scripts/advnew/aui/bookreader_india/bookReader_test.cgi?barcode=150701]. ಆಶ್ಚರ್ಯವೆಂದರೆ, ಆ ಪುಸ್ತಕದ [CHAPTER II - BRIDE PRICE|http://dli.iiit.ac.in//server11/disk3/Data_For%20Submission/150-Series/150701_OU_Marriage_And_Family_In_Mysore/PTIFF/00000024.tif] ಎಂಬ ಎಳೆಯಲ್ಲಿ ಈ ಎಳೆಗೆ ಸಂಬಂಧಪಟ್ಟ ಒಂದು ವಿಚಾರ ಇತ್ತು. ನೀವುಗಳೇ ಓದಿ ನೋಡಿ.
ಅಲ್ಲಿಗೆ ನಾನು ಹೇಳಿದ್ದು ಸರಿಯೇ ..
ನೋಡಿ ಕನ್ನಡದಲ್ಲಿ ಎಷ್ಟು "ತರ"ದ "ತೆರ"ಗಳು ಇವೆ.
ನಿಮಗೆ ಧನ್ಯವಾದ.
DLI ನಲ್ಲಿ "ಆಚ್ಚಗನ್ನಡ ನುಡಿಕೋಶ" ಈಗ ಕಳಚಿಕೊಂಡಿದೆ(offline). ಬೇರೆ ಎಲ್ಲಾದರು ಸಿಗ್ತಾ ಇದ್ಯಾ?
ತರ
Ka.
ತಱಿ taṟi state of being joined, of being put in or down, fixed or settled;
ತಱು taṟu (tatt-) to join, approach, engage in; n. state of being joined or connected, of being fit, of being settled;
ತಱುವಾಯ್ taṟu-vāy order, succession;
ತಱುಣ taṟuṇa fit or proper time.
ತಱ = opportune moment, time, turn( ತಿರುವಲ್ಲ.. in turn )
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ನನಗೆ ಗೊತ್ತಿರುವುದು
೧) ತರ = ತರಹ = ಬಗೆ,
ಮಾದರಿ: ಏನೋ ಒಂತರ, ಏನೋ ಒಂತರ ( ಹುಡುಗಾಟದ ಹಾಡು)
೨) ತೆರ = ಹೊಣೆ.
ಮಾದರಿ : ನೀ ಮಾಡಿದ ಕೆಲಸಗಳಿಗೆ ನೀನೆ ಬೆಲೆ ತೆರಬೇಕಾಗುತ್ತದೆ.
ಸರೀನಾ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ತೆರ=ಹೊಣೆ ತಪ್ಪು ಅಂತ ಅನ್ನಿಸುತ್ತೆ.
ತೆರ = ವಧುದಕ್ಷಿಣೆ ಎನ್ನುವ ಬಳಕ ಹಿಂದೆ ಒಕ್ಕಲಿಗರಲ್ಲಿ ಇತ್ತು ಎಂದು ಕೇಳಿದ್ದೀನಿ. ಅದು ಅವರು ಬ್ರಾಹ್ಮಣರನ್ನು ಅನುಕರಿಸಿ ವರದಕ್ಷಿಣೆ ಶುರು ಮಾಡಿದ ಮೊದಲು!!
ಆದ್ದರಿಂದ ತೆರ= ತೆತ್ತು / ಬೆಲೆ
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ಅದು ತೆರವಲ್ಲ, ತೆರು.
ತೆರು=ಕೊಡು
ಆದುದರಿ೦ದ ತೆರಬೇಕಾಗುತ್ತದೆ=ಕೊಡಬೇಕಾಗುತ್ತದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ಬೊಳುಂಬುರವರೆ,
ಅಡ್ಡಬಿದ್ದೆ. ನೀವು ಹೇಳಿರುವುದು ಸರಿ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ತೆರ ಎಂಬ ನಾಮಪದ ಈ ಬೇರಿನಿಂದಲೇ ಹುಟ್ಟಿದೆಯೇ? ತೆರ = ವಧುದಕ್ಷಿಣೆ /ಬೆಲೆ ಸರಿಯೇ?
ತೆರ , ತೆರಿಗೆ ಎರಡೂ ತೆರಬೇಕಾದದ್ದೆ.
ಧನ್ಯವಾದ.
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ಇಂದು ಡಿ.ಎಲ್.ಐನಲ್ಲಿ ತಡಕಾಡುತ್ತಿದ್ದಾಗ, ಏಪ್ರಿಲ್ ೧೯೪೨ರಲ್ಲಿ ಬರೆಯಲ್ಪಟ್ಟ ಒಂದು ಪುಸ್ತಕ ಸಿಕ್ತು. ಅದರ ಹೆಸರು, [MARRIAGE AND FAMILY IN MYSORE|http://dli.iiit.ac.in/cgi-bin/Browse/scripts/use_scripts/advnew/aui/bookreader_india/bookReader_test.cgi?barcode=150701]. ಆಶ್ಚರ್ಯವೆಂದರೆ, ಆ ಪುಸ್ತಕದ [CHAPTER II - BRIDE PRICE|http://dli.iiit.ac.in//server11/disk3/Data_For%20Submission/150-Series/150701_OU_Marriage_And_Family_In_Mysore/PTIFF/00000024.tif] ಎಂಬ ಎಳೆಯಲ್ಲಿ ಈ ಎಳೆಗೆ ಸಂಬಂಧಪಟ್ಟ ಒಂದು ವಿಚಾರ ಇತ್ತು. ನೀವುಗಳೇ ಓದಿ ನೋಡಿ.
ಆ ಪುಟದ ಎರಡನೆಯ ಪ್ಯಾರಾದಲ್ಲಿ "ತೆರ"ದ ಪ್ರಸ್ತಾಪ ಆಗಿದೆ.
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ಅರೆರೆ, ದಯವಿಟ್ಟು ಎಲ್ಲರೂ ಮನ್ನಿಸಿ. ಫಾರ್ಮಾಟಿಂಗ್ ತಪ್ಪಿನಿಂದಾಗಿ ಮೇಲಿನ ಕಾಮೆಂಟ್, ಕೊಚ್ಚಂಬಿಚ್ಚಿಯಾಗಿದೆ. ಸರಿಯಾದ ಕೊಂಡಿಗಳು ಇಂತಿವೆ.
ಪುಸ್ತಕದ ಕೊಂಡಿ,
ತೆರದ ಪ್ರಸ್ತಾಪ ಇರುವ ಪುಟದ ಕೊಂಡಿ.
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ಅಲ್ಲಿಗೆ ನಾನು ಹೇಳಿದ್ದು ಸರಿಯೇ ..
ನೋಡಿ ಕನ್ನಡದಲ್ಲಿ ಎಷ್ಟು "ತರ"ದ "ತೆರ"ಗಳು ಇವೆ.
ನಿಮಗೆ ಧನ್ಯವಾದ.
DLI ನಲ್ಲಿ "ಆಚ್ಚಗನ್ನಡ ನುಡಿಕೋಶ" ಈಗ ಕಳಚಿಕೊಂಡಿದೆ(offline). ಬೇರೆ ಎಲ್ಲಾದರು ಸಿಗ್ತಾ ಇದ್ಯಾ?
ಉ: ತೆರ ಮತ್ತು ತರ ಇವುಗಳ ನಡುವಿನ ಬೇರೆತನವೇನು?
ನಾನು ಹೇಳ ಹೊರಟ ತೆರ, ತರ ಇವು..
http://dsal.uchicago.edu/cgi-bin/philologic/getobject.pl?c.1:1:673.burro...
ತೆರ/ತೆಱ = way, course, manner, form, sort, kind
ತೆಱವು = way, manner;
ತೆಱಪು = manner
ತೆಱಂ(ನ್) = constituents, component parts, necessary elements, kind, class, sort, party, side, half, way, manner, family, relations, garb, costume, quality, state, nature, means, method, strength, power, goodness, excellence. ( ಇಲ್ಲಿ ನ್ ಹೞಗನ್ನಡ ಅಕ್ಕರ )
ಕವಿ ಹೇಳಿದ 'ತೆರಂಬೊಳೆವ'ದ ತೆರನ್ ಇದು.