ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

October 21, 2007 - 9:28pm — ವೈಭವ

ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ.
ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದೆ.

೧) ಯಾವುದೇ ಮಹಾಪ್ರಾಣ ಇಲ್ಲ
೨) ಅರ್ಕ ವತ್ತು ಇದರಲ್ಲಿ ಇಲ್ಲ
೩) 'ಕೃಷ್ಣ' ಅಲ್ಲ 'ಕ್ರುಶ್ಣ'
೪) 'ಮೈಸೂರು'ಅಲ್ಲ 'ಮಯ್ಸೂರು'

ಹೀಗೆ ಕನ್ನಡಿಗರ ಬಾಯಲ್ಲಿ ಯಾವ ಬಗೆಯಲ್ಲಿ ಕನ್ನಡ ಇದೆ ಅದೇ ಬಗೆಯಲ್ಲಿ ಬರೆಯಲಾಗಿದೆ. ನಿಜಕ್ಕೂ ಶಂಕರಬಟ್ಟರನ್ನು ಮೆಚ್ಚಲೇಬೇಕು.
ಅವರ ಹೊತ್ತಿಗೆಗಳಿಂದ ತಮ್ಮ ಅರಿಮೆಯನ್ನು ಹೆಚ್ಚಿಸಿಕೊಂಡಿರುವವರಲ್ಲಿ ನಾನು ಒಬ್ಬನು.

‹ ಚೆನ್ನುಡಿ ಮತ್ತು ಕನ್ನುಡಿ ಸಾಹಿತ್ಯ-ಸಂಗೀತಗಳು ಜುಟ್ಟಿಗೆ ಮಲ್ಲಿಗೆ ಹೂವೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1057 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 22, 2007 - 10:01am — mahesha

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

mahesha's picture

ಈ ಹೊತ್ತುಗೆ ಸಪನದಲ್ಲಿ ಇಂನೂ ಬಂದಿಲ್ಲ...

ನೆಂನೆ ಅಂಕಿತ ಕದ-ತೆರೆದಿದ್ದಿಲ್ಲ.

ಕೃಷ್ಣ = ಕ್ರಿಶ್ಣ, ನಾವು ಕೃ ಅನ್ನು ಕ್ರು ಅನ್ನೋದಿಲ್ಲ ಅಲ್ವಾ!! ನೋಡೋಣ.

ಮೃಗ = ಮಿಗ
ಋಷಿ = ರಿಸಿ

ಹೀಗೆ ನೋಡಿದ್ರೆ, ಕೃಷ್ಣ = ಕಿಣ್ಣ/ಕಣ್ಣ ಆಗಬೇಕು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 22, 2007 - 10:04am — ವೈಭವ

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ವೈಭವ's picture

ನಾವು ಕೃಷ್ಣಂಗೆ 'ಕಿಟ್ಟಿ' ಅಂತಾನೆ ಹೇಳದು. Smiling ಕಿಲಾಡಿ ಕಿಟ್ಟು, ಕಿಟ್ಟು-ಪುಟ್ಟು

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 22, 2007 - 8:25pm — ವೈಭವ

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ವೈಭವ's picture

ಅಂಕಿತಕ್ಕೆ ದೂರುಲಿ ಮಾಡಿ ನೋಡಿದೆ ... ಅಲ್ಲೂ ಇಲ್ಲ Sad

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 22, 2007 - 8:27pm — mahesha

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

mahesha's picture

ದೂರುಲಿ ಅಲ್ಲ...

ದೂರದುಲಿ Smiling ( ಸುನಿಲಂನ ನೆನೆದು )

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 22, 2007 - 8:43pm — ವೈಭವ

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ವೈಭವ's picture

ನನ್ನಿ Smiling
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 4, 2007 - 10:56pm — ವೈಭವ

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ವೈಭವ's picture

ಈ ಹೊತ್ತಗೆ ಚೆನ್ನಾಗಿ ಓಡುತ್ತಿರುವ ಹೊತ್ತಗೆಗಳಲ್ಲಿ ೨ನೇ ಇಕ್ಕೆ ಪಡೆದಿದೆ Smiling
http://vijaykarnatakaepaper.com/pdf/2007/11/04/20071104a_027101004.jpg

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 5, 2007 - 12:29pm — kpbolumbu

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

kpbolumbu's picture

ಈ ಹೊತ್ತಗೆಯನ್ನು ನಾನು ಓದಿಲ್ಲ, ಆದರೆ ಡಿ.ಎನ್. ಶಂಕರಭಟ್ಟರ "ಭಾಷೆಯ ಬಗೆಗೆ ನೀವೇನು ಬಲ್ಲಿರಿ" ಓದಿದ್ದೇನೆ. ಮು೦ಬದಿಯಲ್ಲಿ ಹೀಗೆ ಅಚ್ಚಾಗಿತ್ತು...'ತೃತೀಯ ಪರಿಷ್ಕೃತ ಮುದ್ರಣ'.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 5, 2007 - 12:56pm — shreekant.mishrikoti

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

shreekant.mishrikoti's picture

ಶಹಬ್ಬಾಸ್ ! ಭಾಪು , ಭಳಿರೆ ! Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 5, 2007 - 12:35pm — mahesha

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

mahesha's picture

ಅಣ್ಣ

ನಾನಿದ್ನೋದಿ ಮುಗಿಸಾಯ್ತು... ಚನ್ನಾಗಿದೆ....

ನಮ್ಮ ಕನ್ನಡದೊಳನುಡಿಗಳು ಹೇಗೇಗೆ ಬೇರೆ ಬೇರೆ ಬಗೆಗಳಲ್ಲಲಿಗಳನ್ನು ತೋರುವುವು..
ಹೇಗೆ ಪೞಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪುಗಳಾಗಿರುವುವು...
ತಮಿಳು-ತೆಲುಗು-ತುಳುಗಳ ಕೂಡೇ ಹೋಲಿಕೆ

ಇವೆಲ್ಲ ಬಲು ಚನ್ನಾಗಿದೆ....

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 8:50am — kadakolla05

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

kadakolla05's picture

ನಾನು ಈ ಹೊತ್ತಿಗೆ ಓದಿದೆ. ಕನ್ನಡದ ತುಂಬಾ ತಿಳುವಳಿಕೆ ಮೂಡಿತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:40pm — ishwar.shastri

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ishwar.shastri's picture

ಕೃಷ್ಣ ನನ್ನು ಕ್ರಿಶ್ಣ ಆಗಬೇಕಾಗಿತ್ತು ಎಂಬುದಾಗಿ ಭಾವಿಸುವ ಮಹೇಶರು ಕ್ರುಶ್ಣಾ ಕುಶ್ಣಾ ಕ್ರಿಸ್ನಾ ಕ್ರಿಸ್ಣಾ ಕ್ರಿಸ್ನಾ ಕುಟ್ಣಾ ಕಿಟ್ಟಾ ಕಿಟ್ಟೀ ಮುಂತಾದವುಗಳ ಬಗ್ಗೆ ಏಕೆ ಮಾತನಾಡಿಲ್ಲವೋ ಅರ್ಥವಾಗುತ್ತಿಲ್ಲ.
ನನಗೆ ಅರ್ಥವಾದಂತೆ ಕೆಳಗಿನ ಲಿಂಕಿನಲ್ಲಿ ಬರೆದಿದ್ದೇನೆ

http://sampada.net/blog/ishwarshastri/06/10/2008/12394

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 2:06pm — mahesha

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

mahesha's picture

ಆ ಲಿಂಕಂನು ಓಡಿದೆ

ನಿಮಗೆ ಸಂಗತಿ ಸರಿಯಾಗಿ ಅರಿವಾಗಿಲ್ಲ

ದಿಟವಾಗಲು ಆ ಹೊತ್ತಗೆಯನ್ನು ಓದಲಾಯಿತೆ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 6:52pm — ishwar.shastri

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

ishwar.shastri's picture

http://sampada.net/blog/ishwarshastri/07/09/2008/11509
ಮಹೇಶರವರೇ,
ನನ್ನ ತಪ್ಪುಗಳನ್ನು ಕಂಡುಹಿಡಿಯಲಿಕ್ಕೆ ನನ್ನ ಈ ಮೇಗಣ ಬ್ಲಾಗಿಗೆ ಭೇಟಿಕೊಟ್ಟದ್ದಕ್ಕ್ಕಾಗಿ ಧನ್ಯವಾದಗಳು. ನಿಮ್ಮ ನಗು ಅನವಶ್ಯಕವಾಗಿತ್ತು. ಚರ್ಚೆಯು ವಿಷಯಗತವಾಗದೇ ವ್ಯಕ್ತಿಗತವಾಗಿದೆ. ನಾನು ಯಾವರೀತಿಯಾಗಿ ಬರೆಯಬಾರದೆಂದು ಹೇಳಿದ್ದೆನೋ. ಅದನ್ನೇ ತೋರಿಸಿ ನನ್ನ ವಿರುದ್ಧ ನಗೆಯಾಡಿದ್ದೀರಿ. ನಾನು ಎಂಟನ್ನು ಯೆಂಟು ಎಂಬುದಾಗಿ ಬರೆಯಬಾರದೆಂಬುದನ್ನೇ ಹೇಳುತ್ತೇನೆ.

ಅದು ನಾನು ಬರೆದ ಪತ್ರಿಕೆಯಾಗಿರಲಿಲ್ಲ. ನನ್ನ ಬರವಣಿಗೆಯಲ್ಲೂ ನನೆಗೆ ಹಾಗೆ ತಪ್ಪಾಗಿ ಬರೆಯಲು ಅಧಿಕಾರವಿದೆ. ಏಕೆಂದರೆ ನಾನು ಕನ್ನಡ ಪಂಡಿತನಲ್ಲ. ನಾನು ಹೇಳುತ್ತಿರುವುದು ಪಂಡಿತರು ಮಾಡುವ ಅನವಶ್ಯಕ ಬದಲಾವಣೆಗಳ ಬಗೆಗೆ. ಎಂಟನು ಹೇಳೂವಾಗ ಯೆಂಟು ಎಂಬುದಾಗಿ ಹೇಳಿದರೂ ಬರವಣಿಗೆಯಲ್ಲಿ ಅದು ಯೆಂಟು ಆಗಬಾರದು. ಅದು ಎಂಟು ಆಗಲೇಬೇಕು. - ಇದೇ ನನ್ನ ವಾದ.
ಆ ಪತ್ರಿಕೆ ಬರೆದವರ ಮೇಲೆ ನಿಮ್ಮ ಕ್ಷಮೆ ಇರಲಿ. ಏಕೆಂದರೆ ಅದನ್ನು ಬರೆದವರು ಪಂಡಿತರಲ್ಲ. ಹಳ್ಳಿಯ ಸಾಮಾನ್ಯ ಜನರು. ಅವರು ತಪ್ಪನ್ನು ಮಾಡುವುದು ಸಹಜ. ಆದರೆ, ನೀವೂ ಯಾಕೆ ತಪ್ಪನ್ನು ಮಾಡಿದಿರಿ? ಪಾಪ, ಅವರು ಎಂಟನ್ನು ಎಂಟು ಎಂದೇ ಬರೆದಾಗ್ಯೂ ನೀವು ಅದನ್ನು ಯೆಂಟು ಎಂದು ಏಕೆ ಓದಿದಿರಿ? ಸರಿಯಾಗಿ ಇನ್ನೊಮ್ಮೆ ಓದಿ. Eye-wink ನನ್ನ ಮೇಲೆ ದಾಳಿಮಾಡಲು ಇದು ಸಾಕೆಂದು ಹರಾಬಿರಿಯಲ್ಲಿ ನೀವು ನಿರ್ಧರಿಸಿದ್ದೀರಲ್ಲವೇ?
ಅವರೂ ತಪ್ಪು ಮಾಡಿದ್ದಾರೆ. ಅವರು ಎಂಟು ಎಂದು ಬರೆಯುವಲ್ಲಿ ಏ ಎಂದು ಬರೆದಿದ್ದಾರೆ. ಅದಕ್ಕೆ ಕಾರಣವೇನೆಂದರೆ ಮರಾಠಿ ಪ್ರಭಾವದ ಆ ಭಾಗದ ಜನರು ಬಹಳ ಕಡೆಗೆ ದೀರ್ಘಾಕ್ಷರಗಳನ್ನು ಬಳಸುವ ವಾಡಿಕೆ ಹೊಂದಿರುತ್ತಾರೆ.. ಅವರು ಎಂಟನ್ನು ಏಂಟು ಎಂದರೆ ನನದೇನು ಅಭ್ಯಂತರವಿಲ್ಲ. ಆದರೆ ಅದು ಬರೆವಣಿಗೆಗೆ ಬಂದಾಗ ಎಂಟರ ಬದಲು ಬೇರೇ ಇನ್ನೇನೂ ಆಗಬಾರದು. (ಟು ಎಂಬ ಅಕ್ಷರವು ದು ಎಂದು ಮುದ್ರಿತ ಗೊಂಡಿದೆ. ಇದು ಮುದ್ರಾರಾಕ್ಷಸನ ಹಾವಳಿ. ಹುಡುಕುತ್ತ ಹೋದರೆ ಇನ್ನೂ ಕೆಲವು ಮುದ್ರಾರಾಕ್ಷಸನ ಹಾವಳಿ ಸಿಗುತ್ತದೆ.)
ಇನ್ನೋಂದ್ಚೂರು;- ಮರಾಠಿ ಸೇರಿದಂತೆ ಉತ್ತರ ಭಾರತ ಪ್ರದೇಶಗಳಲ್ಲಿ ವೈದ್ಯರು ರೋಗಿಗಳಿಗೆ;- ’ಮಲ ಮೂತ್ರಗಳನ್ನು ಟೆಸ್ಟ್ ಮಾಡಿಕೊಂಡು ಬರ್ರಿ’ ಎಂದು ಹೇಳುವು ಬದಲು ಮಲ ಮೂತ್ರಗಳನ್ನು ಟೇಸ್ಟ್ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ! ಹೆದರಬೇಡಿ ಬರೆವಣಿಗೆಯಲ್ಲಿ ಇಲ್ಲ. Eye-wink ( ಅದನ್ನು ಬರವಣಿಗೆಯಲ್ಲೂ ತರಬೇಕಾಗಿತ್ತು ಅಂತೀರಾ?)

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2008 - 8:21am — mahesha

ಉ: ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'

mahesha's picture

"ಏಕೆಂದರೆ ಅದನ್ನು ಬರೆದವರು ಪಂಡಿತರಲ್ಲ. ಹಳ್ಳಿಯ ಸಾಮಾನ್ಯ ಜನರು"

ಇದೇ .. ಬರವಣಿಗೆ ಪಂಡಿತರ ಸೊತ್ತಾಗಿದೆ ಇಂದು ಅದು, ಹಳ್ಳಿಗರ ಸಾಮಾನ್ಯರ ಸೊತ್ತಾಗಬೇಕಾದರೆ.. ಆಡುಮಾತಿಗೆ ಹತ್ತಿರವಿರಬೇಕು ಬರಹ...

ಒಂದು ಊರಲ್ಲಿ ಯೆಂಟು ಎಂದು ಉಲಿದರೆ ಅವರು ಯೆಂಟು ಎಂದು ಬರೆಯೋದೇ ಸರಿ.. Smiling ಇದು ನಮ್ ಮಾತು...

ಮತ್ತೇ ಹೇಳಿದನ್ನೇ ಹೇಳಿಸಿಕೊಳ್ಳಬೇಡಿ..

ಕಂನಡದ ಯಾವ ಒರೆಯಲ್ಲೂ ಮಹಾಪ್ರಾಣ, ಷ, ಋ, ಅಃ ಇಲ್ಲ.. ಸಾಮಾನ್ಯರು ಸಂಸ್ಕ್ರುತದ ಬಳಕೆ ಮಾಡಲ್ಲ.. !!

ನೀವು ವಿಶಯದ ಬಗ್ಗೆ ಮಾತಾಡದೇ ’beating around the bush' ಮಾಡುತ್ತಿದ್ದೀರಿ.. ಅದೇ ಕಿರಿಕಿರಿ.

ಉತ್ತರ ಬಾರತೀಯರ, ಮರಾಟಿಗಳ ಹರಿಕತೆ ನಮಗೆ ಬೇಕಿಲ್ಲ. ಏಕೆಂದರೆ ಕಂನಡ ಇಂಡೋ-ಆರ್ಯನ್ ನುಡಿಯಲ್ಲ.. ಅದೊಂದು ತೆನ್ನುಡಿ/ದ್ರವೀಡಿಯನ್ ನುಡಿ. ಇವುಗಳ ಬಗ್ಗೆ ಹೆಚ್ಚು ತಿಳಿದು ಇಲ್ಲವೇ ಶಂಕರಬಟ್ಟರ ಹೊತ್ತಗೆಗಳನ್ನು ಸರಿಯಾಗಿ ದಿಟವಾಗಿ ಪೂರ್ತಿಯಾಗಿ ಓದಿ ನುಡಿಯಿರಿ......

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು - ಶಂಕರಬಟ್ಟರು - ಬನವಾಸಿ ಬಳಗದ ನೆರವು
  • ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
  • ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
  • ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 1:21pm
  • gurubaliga
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 1:21pm
  • roopablrao
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 1:04pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:49pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:46pm
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:43pm
  • hariharapurasridhar
    ಉ: "ಸತ್ಯವೇ ಗೊತ್ತಿಲ್ಲದ ಸತ್ಯಮ್"
    January 8, 2009 - 12:40pm
  • roopablrao
    ಉ: nanna kiru parichaya
    January 8, 2009 - 12:33pm
  • palachandra
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 12:33pm
  • palachandra
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 12:30pm
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator