ಗಟ್ಸಿ ಗಿಬ್ಬನ್- ಕನ್ನಡ ಬಳಕೆ
ಗಟ್ಸಿ ಗಿಬ್ಬನ್ ಇದೀಗ ಬಿಡುಗಡೆಯಾಗಿದೆ.
ಅದರಲ್ಲಿ ನಾನು ಕನ್ನಡ ಬಳಸೋದನ್ನ ಸುರು ಮಾಡಿದ್ದೀನಿ. ಇಲ್ಲಿವರೆಗೂ ಆಗಿರೋ ಬೆಳೆವಣಿಗೆ.
SCIM ಮತ್ತು m17n ಕೂರಿಸಿಯಾಯಿತು. ಇದರಿಂದ gedit ನಲ್ಲಿ ಕನ್ನಡ ಕೀಲಿಸಬಹುದು. ಆದರೆ ಒಪನಾಫಿಸ ಮತ್ತು ಫೈರಫಾಕ್ಸಿನಲ್ಲಿ ಕನ್ನಡ ಕೀಲಿಸಲಾಗಲಿಲ್ಲ. ಆಮೇಲೆ scim-bridge ಪ್ಯಾಕೇಜನ್ನು ಇಳಿಸಿ ಕೂರಿಸಿದೆ. GTK_IM_MODULE= scim-bridge ಸೆಟ್ ಮಾಡಬೇಕು. ಈಗ ಎಲ್ಲಾ ಕಡೆ ಕನ್ನಡ ಕೀಲಿಸಬಹುದು.
Swiftfox ಬಳಸಬೇಡಿ. ಅದರಲ್ಲಿ Pango ಇಲ್ಲ. ಆದ್ದ್ರಿಂದ ಕನ್ನಡ ಸರಿಯಾಗಿ ಮೂಡಲ್ಲ.
ನಾನು ಬಳಸ್ತಾ ಇರೋದು. Gutsy Gibbon( Ubuntu 7.10)/ Gnome desktop

- Login or register to post comments
- 386 hits
- Email this forum




RSS:
ಉ: ಗಟ್ಸಿ ಗಿಬ್ಬನ್- ಕನ್ನಡ ಬಳಕೆ
ನಾನೂ ಮೊನ್ನೆ ತಾನೆ ನನ್ನ ಎಲ್ಲ ಕಂಪ್ಯೂಟರುಗಳಲ್ಲಿ ಉಬುಂಟುವನ್ನು ಗಟ್ಸಿ ಗಿಬ್ಬನ್ ರಿಲೀಸಿಗೆ ಅಪ್ಗ್ರೇಡ್ ಮಾಡಿದೆ. ಕಳೆದ ೨ - ೩ ವರ್ಷಗಳಿಂದ ನಾನು ಲಿನಕ್ಸಿನಲ್ಲೇ ಕನ್ನಡ ಟೈಪಿಸೋದು, ಓದೋದು ಎಲ್ಲ. ವಿಕಿಪೀಡಿಯದಲ್ಲಿ ಬರೀತಿದ್ದ ಎಲ್ಲ ಸಮಯ ಲಿನಕ್ಸಿನಿಂದಲೇ ಟೈಪಿಸಿದ್ದು
"ಗಟ್ಸಿ"ಯಲ್ಲಿ 3D ಎಫೆಕ್ಸ್ ತುಂಬ ಚೆನ್ನಾಗಿವೆ. ಈಗ compiz ಡೀಫಾಲ್ಟ್ ಆಗಿ ಹಾಕಿ ಕೊಡುತ್ತಿದ್ದಾರೆ. ಚೆನ್ನಾಗಿ ಇಂಟಿಗ್ರೇಟ್ ಮಾಡಿದ್ದಾರೆ ಕೂಡ
ಕೇವೆಂ - ನೀವು ನಮ್ಮ ಲೋಕಲೈಸೇಶನ್ ಪ್ರಾಜೆಕ್ಟಿನಲ್ಲಿ ಕೈ ಜೋಡಿಸ್ರೀ! ಲಿನಕ್ಸ್ ಬಳಸುವ ಎಲ್ರೂ ಅದರಲ್ಲಿ ಕನ್ನಡದ ಕೆಲಸ ಮುಗಿಸೋಕೆ ಸಹಾಯ ಮಾಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಗಟ್ಸಿ ಗಿಬ್ಬನ್- ಕನ್ನಡ ಬಳಕೆ
ಖಂಡಿತ... ಹೆಂಗೆ ಶುರು ಮಾಡಬೇಕು ಹೇಳಿ?