ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

ಇನ್ನು ಕನ್ನಡ ಟೈಪಿಸುವುದು ನೀರು ಕುಡಿಯುವುದಕ್ಕಿಂತ ಸುಲಭ! ಗೂಗಲ್‍ನ ಇಂಡಿಕ್ ಟ್ರಾನ್ಸಲೇಟರ್ ಲ್ಯಾಬ್‍ನಿಂದ ಕನ್ನಡ  ಟೈಪಿಸಲು ಹೊಸ ತಂತ್ರಾಂಶ ತಯಾರಾಗಿ ಹೊರಬಂದಿದೆ. ನೀವು ಈ ಹಿಂದೆ ಕ್ವಿಲ್‍ಪ್ಯಾಡ್ ಬಳಸಿರಬಹುದು.  ಇದೂ ಅದೇ ರೀತಿಯ ತಂತ್ರಾಂಶ. ಆದರೆ  ಕ್ವಿಲ್ ಪ್ಯಾಡ್ ಗಿಂತಲೂ ಚೆನ್ನಾಗಿದೆ.  ಬಳಸಿ ನೋಡಿ: ನಿಮಗೆ ಖುಷಿಯಾಗುವುದರಲ್ಲಿ ಸಂದೇಹವೇ ಇಲ್ಲ.

http://www.google.com/transliterate/indic/Kannada

 

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

mahesha's picture

ತುಂಬ ಚೆನ್ನಾಗಿದೆ ...

ನನ್ನಿ

ಉ: ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

shaamala's picture

ಸುಶ್ರುತ ಅವರೇ,

ಈ ಪ್ರತಿಕ್ರಿಯೆಯನ್ನು ಗೂಗಲ್ ತಂತ್ರಾಂಶ ಉಮಯೋಗಿಸಿಯೇ ಬರೆಯುತ್ತಿದ್ದೇನೆ. ನಮ್ಮ ಹುಡುಗರಿಗೆ ಕನ್ನಡ ಪಾಠಗಳನ್ನು ಸಿದ್ಧಮಾಡಲು ಈ ತಂತ್ರಾಂಶ ಬಹಳ ಉಪಯುಕ್ತವಾಗಿದೆ.

ಧನ್ಯವಾದಗಳು

ಶಾಮಲ

ಉ: ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

hpn's picture

ಶ್ಯಾಮಲರವರೆ,

ಒಂದೊಂದೇ ವರ್ಡು ಟೈಪಿಸಿಕೊಂಡು ಹೋಗುತ್ತ ಹೋಗುತ್ತಿರುವಷ್ಟರಲ್ಲಿ ನಿಮ್ಮ ಹುಡುಗರು ಪಾಠ ಬಿಟ್ಟು ಓಡಿ ಹೋಗಾರು. ಬೇಗ ಸಿದ್ಧಪಡಿಸಬೇಕಂದ್ರೆ ಬರಹ ಐ ಎಮ್ ಇ ಡೌನ್ಲೋಡ್ ಮಾಡಿಕೊಂಡು ಹಾಕಿಕೊಳ್ಳಿ. ಗೂಗಲ್ ರವರ ಟ್ರಾನ್ಸ್ಲಿಟರೇಶನ್ ಸಲಕರಣೆ ನಿಮ್ಮ ಮೊಬೈಲ್ ಫೋನಿನಲ್ಲಿರುವ t9 ನಂತೆ - ವ್ಯತ್ಯಾಸ ಇಷ್ಟೆ - ಇಂಗ್ಲೀಷಿನಲ್ಲಿ ಟೈಪಿಸಿದ ಅಕ್ಷರಗಳು ಫೊನೆಟಿಕ್ ಆಗಿ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತವೆ... ಕೆಲವೊಮ್ಮೆ ಸರಿ, ಕೆಲವೊಮ್ಮೆ ತಪ್ಪು. ನೀವು ಟೈಪಿಸಿದ ಪದಗಳನ್ನು ಅವು ಅರ್ಥ ಮಾಡಿಕೊಳ್ಳುತ್ತ ಹೋಗುವಂತೆ ತಪ್ಪುಗಳು ಕಡಿಮೆಯಾಗಬಹುದು. ಆದರೆ totally simple ಸೊಲ್ಯೂಶನ್ ಬರಹ ಐ ಎಮ್ ಇ ಅಥವ locally install ಮಾಡಿಕೊಂಡ ಯಾವುದಾದರೂ IME (Input Method Editor).
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

hpn's picture

ಕ್ವಿಲ್ ಪ್ಯಾಡ್ ಮತ್ತು ಗೂಗಲ್ ಟ್ರಾನ್ಸ್ಲಿಟರೇಶನ್ ಟೂಲ್ - ಇವೆರಡೂ ನಿತ್ಯದ ಟ್ರಾನ್ಸ್ಲಿಟರೇಶನ್ ಮಾಡೋದಕ್ಕೆ ಉಪಯೋಗವಾಗೋದಿಲ್ಲ. ಇವು ನೀವು ಟೈಪಿಸುವ ಪದಗಳನ್ನ ಅರಗಿಸಿಕೊಂಡು ಅರ್ಥಮಾಡಿಕೊಳ್ಳುತ್ತ ತಮ್ಮನ್ನು ತಾವೇ train ಮಾಡಿಕೊಳ್ಳುವಂತಹ ಸಾಫ್ಟ್ವೇರುಗಳು.

ಒಮ್ಮೆ ಪದವೊಂದಕ್ಕೆ ಎಲ್ಲ ರೀತಿಯ phonetic combinations ಬಳಸಿ ನೋಡಿ. ಗೊತ್ತಾಗುತ್ತದೆ.

ನನಗಂತೂ ಈ ಸಲಕರಣೆಗಳು ಗೂಗಲ್ ಹಾಗೂ ಕ್ವಿಲ್ ಪ್ಯಾಡಿನವರ ದೂರ ದೃಷ್ಟಿಯಿಂದ ಹೊರಬಂದ ಸಲಕರಣೆಗಳು ಎನಿಸುತ್ತದೆ. ನಿತ್ಯದ ಬಳಕೆಗೆ ಇವಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಗೂಗಲ್‍ನ ಮತ್ತೊಂದು ಅದ್ಭುತ ಪ್ರಾಡಕ್ಟ್

keshav's picture

ಧನ್ಯವಾದಗಳು. ಬರಹವನ್ನು ಇಳಿಸಿಕೊಳ್ಳಲು ಬಿಡದ ಆಫೀಸಿನ ಕಂಪ್ಯೂಟರಗಳಲ್ಲಿ ಇಂಥ ಸುಂದರ ಆನ್ ಲೈನ್ transliteration ಅನ್ನು ಕೊಟ್ಟ ಗೂಗಲ್ ಗೆ ಅಭಿನಂದನೆಗಳು, ಪರಿಚಯಿಸಿದ ತಮಗೆ ಧನ್ಯವಾದಗಳು.
keshav
Visit my blog:
http://kannada-nudi....