ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?
ಅಲ್ಲ ಶಿವ, ಪ್ಲಾನೆಟ್ ಕನ್ನಡದಲ್ಲಿ ಕನ್ನಡವೇ ಇರಲ್ವಲ್ಲ, ತವಿಶ್ರೀ, ವಿಕಿಪೀಡಿಯ, ಸಂಪದ, ನಾಡಿಗ್ ಮತ್ತಿತರ ಕೆಲವೇ ಕೆಲವು ತಾಣಗಳನ್ನು ಬಿಟ್ಟರೆ ಕನ್ನಡಿಗರು ಕನ್ನಡದಲ್ಲಿ ಬ್ಲಾಗ್ ಮಾಡೋದೇ ಇಲ್ವೆ ಹಾಗಾದ್ರೆ?
ಅಥವ, ಸಂಪದದಲ್ಲಿ 'ಕಷ್ಟ ಪಟ್ಟು' ಕನ್ನಡ ಬರೆಯೋದ್ರಿಂದ ಮತ್ತೆ ಅದೇ ತಲೆ ಬಿಸಿಯಾಕೆ ಅಂತಾನೋ, ಸಾಕು ಇಷ್ಟು ಕನ್ನಡ ಸೇವೆ ಅಂತಾನೋ ಅಥವ ಇವರಿಗೆ ಕನ್ನಡ ಬರದೇ ಇರುವ ಆಡಿಯನ್ಸೇ ಜಾಸ್ತೀನೋ... ಒಟ್ಟಿನಲ್ಲಿ ಇಂಗ್ಲೀಷ್ ನಲ್ಲೇ ಬ್ಲಾಗಿಸಿಬಿಡ್ತಾರೆ. ಸಂಪದವನ್ನ ಕರ್ನಾಟಕಕ್ಕೆ ಹೋಲಿಸಿದರೆ ಪ್ಲಾನೆಟ್ ಕನ್ನಡ ಬೆಂಗಳೂರಿದ್ದಂತೆ, ನಮ್ಮದಾದರೂ ನಮ್ಮವರು ಕನ್ನಡವನ್ನು ಬಳಸುವುದೇ ಅಪರೂಪ ಇಲ್ಲಿ
ಶಿವ ಶಿವ!

- Login or register to post comments
- 950 hits
- Email this forum





RSS:
ಕನ್ನಡದ ವ್ಯಥೆ
ಅಯ್ಯೋ, ನೀವು ದೂರ ಹೋದ್ರಿ! 'ಸಂಪದ'ದಲ್ಲೇ ಕನ್ನಡದಲ್ಲಿ ಬರೆಯುವುದು ಕಡಿಮೆಯಾಗಿ ಹೋಗಿದೆ. ಇನ್ನು ಅವರವರ ಬ್ಲಾಗುಗಳಲ್ಲಿ ಕನ್ನಡವನ್ನುಪಯೊಗಿಸ್ತಾರಾ?
ಬ್ಲಾಗಿನಲ್ಲಿ ಕನ್ನಡ ಉಪಯೋಗಿಸಿದರೆ ಕೆಲವರಿಗೆ ಪ್ರೆಸ್ಟೀಜು ಕಡಿಮೆಯಾಗುತ್ತದೆ. ಕೆಲವರಿಗೆ ತಮ್ಮ ಬ್ಲಾಗುಗಳನ್ನೋದುವ ಕನ್ನಡದವರಲ್ಲದ ಸ್ನೇಹಿತರಿಗೆ (ಬರೆದಿರುವುದರ ಬಗ್ಗೆಯೂ, ಯೂನಿಕೋಡ್ ಬಗ್ಗೆಯೂ) explanation ಕೊಡಬೇಕಾಗಿ ಬರುತ್ತದಾದ್ದರಿಂದ ಕನ್ನಡದಲ್ಲಿ ಬರೆಯುವ ಗೋಜಿಗೇ ಹೋಗುವುದಿಲ್ಲ. ನನ್ನ ಕಾಲೇಜು ಸಮಯದ ಸ್ನೇಹಿತರಲ್ಲೇ ಹಲವರು ಕನ್ನಡ ಪುಸ್ತಕಗಳನ್ನು ಓದುತ್ತಾರೆ (ಹಾಗಿರುವುದೇ ಸ್ವಲ್ಪ ರೇರ್ ಆಗಿದೆ). ಅವರಲ್ಲಿ ಹಲವರಿಗೆ 'ಸಂಪದ'ದ ಬಗ್ಗೆ ಗೊತ್ತು. ಕೆಲವರು 'ಸಂಪದ'ವನ್ನು ಓದುತ್ತಲೂ ಇರಬಹುದು. ಆದರೆ ಯಾರೂ ಇಲ್ಲಿ ಬರೆಯುತ್ತಿಲ್ಲ. ಮತ್ತೆ ಮತ್ತೆ ಹೇಳಲು ನನಗೂ ಬೇಜಾರು. ಉತ್ಸಾಹ ಇದ್ದೋರು ಬರೀಲಿ, force ಯಾಕೆ ಅಂತಂದ್ಕೊಂಡು ನಾನೂ ಸುಮ್ಮನಾಗಿಬಿಟ್ಟಿದ್ದೇನೆ.
ಇದೇ ರೀತಿಯ ತಾಣವನ್ನು ನಾನು ತಮಿಳಿಗೆ ಮಾಡಿದ್ದಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು.
--
http://hpnadig.net/blog
http://kn.wikipedia.org
"ಹೊಸ ಚಿಗುರು, ಹಳೆ ಬೇರು"
ಯುವಜನ ಕನ್ನಡ!!
'ಸಂಪದ'ದಂತಹ ತಾಣವನ್ನು ತಮಿಳಿಗೆ ಮಾಡಿದ್ದರೆ ಕಥೆಯೇ ಬೇರೆಯಾಗುತ್ತಿತ್ತು, ಎನ್ನುವ ತಮ್ಮ ಮಾತು ನಿಜವೇ ಆದರೂ, ಕೆಲವೊಂದು ವಿಷಯಗಳಲ್ಲಿ ನಾವು ಹಿಂದಿದ್ದೇವೆ ಅನಿಸುತ್ತದೆ. ನನ್ನ ಅರಿವಿನಂತೆ, ಕನ್ನಡವನ್ನು ಹೆಮ್ಮೆಯಿಂದ ಬಳಸುವ ಯುವಜನತೆ ಸಾಕಷ್ಟು ಇದ್ದಾರೆ. ಲೇಖನ/ಸಾಹಿತ್ಯ... ಹೀಗೆ ಕನ್ನಡವನ್ನು ಕೇವಲ ಈ ಕ್ಷೇತ್ರಗಳಲ್ಲಷ್ಟೇ ಮೀಸಲಿಡದೆ, ಯುವಜನತೆಯ ದಿನಬಳಕೆಯ ವಿಷಯಗಳಲ್ಲಿ ಕನ್ನಡವನ್ನು ಸೂಕ್ಷ್ಮವಾಗಿ ನಿಲ್ಲಿಸಬೇಕು. ತಮಿಳಿನಲ್ಲಿ ಇಂತಹ ಉದಾಹರಣೆ ಎಂದರೆ, "ಗಾನಾ" ಮಾದರಿ. ಇದರಲ್ಲಿ ಕಾಣುವುದೇನೆಂದರೆ, ಜಾಹಿರಾತಿನಲ್ಲಿ ಹಾಡುಗಳು ಬಹುಶಃ ತಮಿಳಿನಲ್ಲೇ ಇದ್ದು, ಮಧ್ಯೆ ಆಂಗ್ಲಭಾಷೆಯ Punchline ಗಳನ್ನು ಸೇರಿಸುವುದು... ಹೀಗೆ ಬೇರೆ ಬೇರೆ ನಿಟ್ಟಿನಲ್ಲಿ ಯುವಜನತೆಯನ್ನು ಭಾಷೆಯತ್ತ ಸೆಳೆಯುವ ಸಫಲ ಕೆಲಸಗಳನ್ನು ಮಾಡಲಾಗಿದೆ. ನೋಡುವುದಕ್ಕೆ/ಕೇಳುವುದಕ್ಕೆ ಮೊದಲಿಗೆ ಅಸಂಬದ್ಧವೆನಿಸಿದರೂ, ಭಾಷಾಪ್ರೇಮವನ್ನು ಬೆಳೆಸುವುದಕ್ಕೆ ಒಂದು ಸಾಧನವಾಗಿದೆ.
ಹಾಗೆಯೇ ಕನ್ನಡವನ್ನು ಅಂತರ್ಜಾಲದಲ್ಲಿ ಸುಲಭವಾಗಿ ಬರೆಯುವ ಸಾಧನಗಳ ಅವಶ್ಯಕತೆಯೂ ಸಾಕಷ್ಟಿದೆ. ಇವೆಲ್ಲ ಏನೇ ಆದರೂ ನಾವು ನೀವುಗಳಂತೂ ಕನ್ನಡವನ್ನು ಬಿಡದೆ ಬಳಸೋಣ... ಹನಿ ಹನಿಗೂಡಲಿ, ಅಂತರ್ಜಾಲದಲ್ಲಿ ಕನ್ನಡ:-)
ವಂದನೆಗಳೊಂದಿಗೆ,
ರವಿಶಂಕರ