ತುಂಗೆ ಮತ್ತು ಕನ್ನಡ ಸಾಹಿತ್ಯ
ಪ್ರಕೃತಿ ಎಂದಾಕ್ಷಣ ನಮ್ಮ ಕಣ್ಣಮುಂದೆ ನಿಲ್ಲುವುದು ಹಸಿರು. ಹಾಗು, ಇದರ ಸುತ್ತವೇ ಆ ಹಚ್ಚ ಹಸಿರಿಗೆ ಕಾರಣವಾದ ಸೂರ್ಯ, ನೀರು, ಮಣ್ಣಿನ ವಾಸನೆ, ಮಳೆ, ಕಾಡು..ಹೀಗೆ ಏನೇನೆಲ್ಲಾ ನೆನಪಾಗುತ್ತದೆ ಅಲ್ಲವೇ. ಪ್ರಕೃತಿ ಮತ್ತು ಕಲೆಗೆ ಊಕಾಲದಿಂದಲೂ ಸಂಗ್ಯಾ ಬಾಳ್ಯ ರೀತಿಯ ಬೆಸುಗೆ. ನಿಸರ್ಗ ನಮಗೆ ಕಾಲಕಾಲಕ್ಕೂ ಅವಕಾಶಗಳನ್ನು ನೀಡುತ್ತಾ ಸಾಗಿದರೆ, ಮನುಷ್ಯ ಆಯಾ ಸೌಲಭ್ಯಗಳನ್ನು ಬಳಸುತ್ತಾ ಕಲಾತ್ಮಕೆಯನ್ನು ರೂಪಿಸಿಕೊಳ್ಳುತ್ತಿರುತ್ತಾನೆ. ನಮ್ಮ ಬೇಲೂರು, ಹಳೇಬೀಡು, ಹಂಪೆಯ ಇತಿಹಾಸ, ಸೋಮನಾಥಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಅಜಂತಾ, ಎಲ್ಲೋರಾ ಇವೆಲ್ಲವನ್ನೂ ನೋಡಿದರೆ ನಾವು ಕನ್ನಡಿಗರು ಎಂತಹ ಉತ್ಕೃಷ್ಟ ನಾಗರೀಕತೆಯ ಪ್ರತಿನಿಧಿಗಳು ಎಂಬುದನ್ನು ಮನಗಾಣುತ್ತೇವೆ. ಈ ಹಿನ್ನೆಲೆಯೊಂದಿಗೆ ಪ್ರಕೃತಿಗೆ ನನ್ನಿಗಳನ್ನು ತಿಳಿಸುತ್ತಾ, "ಕನ್ನಡ ಸಂಸ್ಕೃತಿ ಹಾಗು ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ವಿಚಾರವನ್ನು ಎಲ್ಲರೂ ಚರ್ಚಿಸೋಣ, ಅದುವೇ "ತುಂಗೆ ಮತ್ತು ಕನ್ನಡ ಸಾಹಿತ್ಯ".
ನಾವು ಕನ್ನಡಿಗರು ಒಂದು ವಿಷಯದಲ್ಲಿ ನಿಜಕ್ಕೂ ಸ್ವಲ್ಪ ಹೆಚ್ಚಾಗಿಯೇ ಪುಣ್ಯ ಮಾಡಿದ್ದೇವೆ. ಅದು ನಮ್ಮಲ್ಲಿನ ನದಿಗಳು. ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ಪುಸ್ತಕ "ಕವಿರಾಜಮಾರ್ಗಂ"ದ "ಕಾವೇರಿಯಿಂದಮ್ ಆ ಗೋದಾವರಂ ಇರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಳಯ ವಿಲೀನ ವಿಷಯ ವಿಶದ ವಿಶೇಷಂ" ಪದ್ಯ ನಿಜಕ್ಕೂ ರೋಮಾಂಚನ ಉಂಟುಮಾಡುತ್ತಾ, ನಮ್ಮನ್ನು ಹಿನ್ನೆಪ್ಪಾಗಿಸದೆ(nostalgic ಆಗಿಸದೆ) ಎಂದೆಂದಿಗೂ ನಮ್ಮ ಗಟ್ಟಿತನವನ್ನು ಸಾಬೀತು ಪಡಿಸುತ್ತಲೇ ಇರುತ್ತದೆ. ಕರ್ನಾಟಕದಲ್ಲಿ ಕಾವೇರಿಯ ಹಾಗೆ ಇರುವ ಮತ್ತೊಂದು ಜೀವನದಿಯೆಂದರೆ, ತುಂಗೆ. ವಿಜಯನಗರದ ವೀರಪುತ್ರ ಚಿತ್ರದ "ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು, ಕರ್ನಾಟವಿದುವೆ, ನಿತ್ಯ ಶಿಲ್ಪ ಕಲೆಯ ಬೀಡಿದು" ಹಾಡು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಈ ಹಾಡಿನಲ್ಲಿ ಬರುವ ಒಂದು ಸಾಲು, "ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ, ಮಾನವನ ಪಾಪವನು ತೊಳೆಯ ಕಲ್ಪವಲ್ಲಿ" ನಿಜಕ್ಕೂ ಅರ್ಥಪೂರ್ಣವೆನಿಸುತ್ತೆ. ಕಾವೇರಿಯನ್ನೇನೋ ಕವಿಗಳು ಅದೆಷ್ಟು ಹಾಡಿ ಹೊಗಳಿರುವರೋ ಮಿತಿಯೇ ಇಲ್ಲ. ಆದರೆ ಇದೇ ರೀತಿ, ತುಂಗೆಯ ಪ್ರಸ್ತಾಪ ನಮ್ಮ ಸಾಹಿತ್ಯದಲ್ಲಿ (ಅಥವಾ ಬೇರೆ ಭಾಷೆಯ ಸಾಹಿತ್ಯದಲ್ಲಿ) ಎಲ್ಲೆಲ್ಲಿ ಹೇಗೆ ಆಗಿದೆ.
"ತುಂಗೆಯ ಪ್ರಸ್ತಾಪ ಸಾಹಿತ್ಯದಲ್ಲಿ, ಶಾಸನಗಳಲ್ಲಿ ಹೇಗೆ ಆಗಿದೆ" ಎಂಬುದರ ಬಗ್ಗೆ ಒಂದಷ್ಟು ಚರ್ಚಿಸುತ್ತಾ ಈ ವಾರದ ಕೆಲಸವನ್ನು ನೆಗಳ್ಚೋಣ.

- Login or register to post comments
- 732 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
೧)ಶ್ರುಂಗೇರಿ ಶಾರದೆಯ ಹಾಡುಗಳಲ್ಲಿ ತುಂಗೆ ಬಂದಿರ್ತಾಳೆ.
೨)
ವಿಶ್ವವಿನೂತನ ವಿದ್ಯಾ ಚೇತನ
ಸರ್ವ ಹ್ರುದಯ ಸಂಸ್ಕಾರಿ ಜಯ ಬಾರತಿ...
...
ಕ್ರುಶ್ಣೇ ತುಂಗೇ ಕಾವೇರಿ, ಪವಿತ್ರಿತ ತೀರ ಮನೋಹಾರಿ..(?)
( ಈ ಹಾಡಲ್ಲಿ ಬಂದಿದೆ ಅಲ್ವ? )
೩)ಜಯ ಬಾರತ ಜನನಿಯ ತನುಜಾತೆ... ಇದರಲ್ಲಿ
ಕ್ರುಶ್ಣ ಶರಾವತಿ ತುಂಗಾ
ಕಾವೇರಿಯ.....
೪) ನನ್ನ ಬಳ್ಳಾರಿ ಕೆಳೆಯ "ಗಂಗೇ ಚ ಯಮುನೇ " ಶ್ಲೋಕವನ್ನು ಹೀಗೆ ಹೇಳ್ತಾನೆ.
ಗಂಗೇ ಚ ಯಮುನೇ ಚೈವ ಗೋದವರೀ ಸರಸ್ವತಿ
)
ನರ್ಮದೇ ತುಂಗೇ ಕಾವೇರೀ ಪವಿತ್ರಂ ಸನ್ನಿದ್ಧಿಂ ಕುರು..... ( ಸಿಂಧು ಇಂದು ಪಾಕಿಸ್ತಾನಕ್ಕೆ ಹೋದುದಕ್ಕೆ ಇರಬೋದು
ಬೇಕಾದಶ್ಟಿವೆ....
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ನನ್ನ ನೆನಪಿಗೆ ಬಂದಿದ್ದು ಇಷ್ಟು...
೧> " ಗಂಗಾ ಸ್ನಾನ, ತುಂಗಾ ಪಾನ" ಅನ್ನೋ ಗಾದೆ.
೨> "ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ......" -- ನಿಸಾರ್ ಅಹಮದ್
೩> "ತುಂಗಾ ತೀರದ ಬಲಗಡೆಯಲ್ಲಿ, ಇದ್ದುದ್ದೊಂದು ಬೊಮ್ಮನಹಳ್ಳಿ....." -- ಕುವೆಂಪು
೪> "ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ....ಗಿರಿಸಿರಿ ಬನ ಸಂಚಾರಿಣಿ ತುಂಗಾಜಲ ನೀಲೆ....." -- ಸಾ.ಶಿ.ಮರುಳಯ್ಯ
೫> "ತುಂಗಾತೀರ ವಿರಾಜಂ ಭಜಮನ, ರಾಘವೇಂದ್ರ ಗುರುರಾಜಂ ಭಜಮನ" --- ಯಾರು ಬರೆದದ್ದು ಗೊತ್ತಿಲ್ಲ.
೬> "ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ...." -ದಾಸವಾಣಿಯಲ್ಲಿ ಭೀಮಸೇನ ಜೋಶಿಯವರು ಹಾಡಿರೋದು.
೭> "ಧರಣಿ ಮಂಡಲ ಮಧ್ಯದೊಳಗೆ... ಗಂಗೆ ಬಾರೆ ಗೌರಿ ಬಾರೆ, ತುಂಗಭದ್ರೆ......" ---ಗೋವಿನ ಹಾಡು
೮> "ಗಂಗೆ ಬಾರೆ, ತುಂಗೆ ಬಾರೆ.. ಬಾರೆ ನೀರೇ.. ದಾಹ ತೀರೇ..." ---- ಚಲನಚಿತ್ರದ ಹಾಡು
೯> "ತುಂಗ ಭದ್ರ" ಹೆಸರಿನ ಒಂದು ಕಥೆ/ಕಾದಂಬರಿ ಸುಮಾರು ೧೮/೨೦ ವರ್ಷದ ಕೆಳಗೆ ಪದವಿ ಪಥ್ಯವಾಗಿತ್ತು. ನನ್ನ ಚಿಕ್ಕಮ್ಮನ ಹತ್ತಿರ ಇದ್ದ ನೆನಪು
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ತುಂಗಭದ್ರ ಬರೆದಿರೋದು ಎಂ.ಕೆ.ಇಂದಿರಾ ಇರಬಹುದು...
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ನನ್ನಿ!
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ತಡವಾಗಿ ಟಿಪ್ಪಣಿ ಸೇರಿಸುತ್ತಿದ್ದೇನೆ. ಎಂಥ ಡೇಟಾಬೇಸ್ ಇಟ್ಟಿದ್ದೀರಾ ರೀ ನೀವು ? ಹೆನ್ನನ್ನಿ (= ತುಂಬಾ ತುಂಬಾ, ತುಂಬಾ thanks) ಕಣ್ರೀ "ಪೂರ್ಣಿಮಾಸ್" ಅವರೇ.
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಈ ದಿನ ರಾಘವಾಂಕನ "ಹರೀಶ್ಚಂದ್ರ ಕಾವ್ಯ"ದಲ್ಲಿ ತುಂಗಭದ್ರೆಯ ಪ್ರಸ್ತಾಪವಿರುವ ಒಂದು ಪದ್ಯವು ಸಿಕ್ಕಿತು.
ಒಡಲನಾವರಿಸಿದಂಗೋಪಾಂಗಸಂಕಳದ
ನಡುವೆ ನಯನದ್ವಯಂಗಳು ಸಲೆ ನವಗ್ರಹದ
ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ
ನಡುವೆ ಸುರುಚಿರ ಗಂಗೆತುಂಗಭದ್ರೆಗಳೊಪ್ಪ
ವಡೆದು ಮಹಿಮೆಯೊಳೆಸೆವ ತೆಱದಿ ಸುರಪನ ಸಭೆಯ
ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು
ಕೊಸರು - ಹರೀಶ್ಚಂದ್ರ ಕಾವ್ಯದ ಮೇಲೆ ಒಂದು ಗಮಕ ಕಾರ್ಯಕ್ರಮ ರಾಗಿಗುಡ್ಡದಲ್ಲಿ ನಡೆಯಲಿದೆ ಮೇ, ೧೨ರಿಂದ.
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಲೇಖನ ಮತ್ತು ಪ್ರತಿಕ್ರಿಯೆಗಳೆರಡೂ ಚೆನ್ನಾಗಿವೆ.
"ಏರಿದವನು ಚಿಕ್ಕವನಿರಬೇಕು"
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಹಲವಾರು ಪುರಂದರ ದಾಸರ ರಚನೆಗಳಲ್ಲಿ ತುಂಗೆ, ತುಂಗಭದ್ರೆ ಕಾಣಿಸಿಕೊಳ್ಳುತ್ತಾಳೆ. ಕೆಲವು ಉದಾಹರಣೆಗಳನ್ನು ಕೊಡುವೆ.
೧. ಕಂಡೆನಾ ಕನಸಿನಲಿ ಗೋವಿಂದನ ಅನ್ನುವ ಪದದಲ್ಲಿ "ಮಂಗಳಮಯ ತುಂಗಭದ್ರದಿ ಮೆರೆವನ" ಎಂದು ಬಣ್ಣಿಸಲಾಗಿದೆ. ಹಾಗಾಗಿ ಈ ರಚನೆ (ಈಗ ದೇವಾಲಯದಲ್ಲಿ ಇಲ್ಲದ) ವಿಜಯ ವಿಟ್ಠಲನ ಮೂರುತಿಯ ಬಗ್ಗೆ ಇರಬೇಕೆಂದು ನನ್ನ ಅನಿಸಿಕೆ.
ಪೂರ್ತಿ ಹಾಡನ್ನು ಇಲ್ಲಿ ಓದಿ : http://purandara.wordpress.com/2008/04/22/
೨. ಎಲ್ಲಿ ಶ್ರೀ ತುಳಸಿಯ ವನವು, ಹರಿಯೆಂದು ಮನದಲಿ, ಎನ್ನುವ ರಚನೆಗಳಲ್ಲಿ ಗಂಗೆ ಯಮುನೆ ಕಾವೇರಿ ಮೊದಲಾದ ನದಿಗಳ ಸಾಲಿನಲ್ಲಿ ತುಂಗಭದ್ರೆಯೂ ಬರುತ್ತಾಳೆ.
೩. ತುಂಗೆ ಮಂಗಳ ತರಂಗೆ ಎನ್ನುವ ಇಡೀ ಹಾಡು ತುಂಗಭದ್ರೆಯ ಸ್ತುತಿಯಾಗಿದೆ.
೪. ಕಾರುಣ್ಯ ಮೂರುತಿಯೆ ಎಂದು ಮೊದಲಾಗುವ ಹಂಪೆಯ ವಿರೂಪಾಕ್ಷನ ಸ್ತುತಿತಾದ ದೇವರನಾಮದಲ್ಲಿಯೂ ತುಂಗಭದ್ರೆ ಕಾಣುತ್ತಾಳೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಹಂಸಾನಂದಿಗಳೇ, ತುಂಬಾ ನನ್ನಿ, ಹಾಗಾದರೆ ಹರಿದಾಸರ ಪದಗಳಲ್ಲಿ ತುಂಗೆ ಮೈದುಂಬಿ ಹರಿದಿದ್ದಾಳೆ ಅಂದ ಹಾಗಾಯಿತು.
ಅಲ್ಲ ನನಗೊಂದು ಸಂದೇಹ, ತುಂಗೆಯ ದಡದಲ್ಲಿ ಅನೇಕ ಮಠಗಳು, ಪಟ್ಟಣಗಳು ಇದ್ದುವಲ್ಲವೇ. ಯಾಕೋ ನನಗೆ, ತುಂಗೆಯನ್ನು ಕನ್ನಡದವರು ಕಾವೇರಿಯನ್ನು ಕೊಂಡಾಡಿದಷ್ಟು, ಹೊತ್ತುಮೆರೆಸಿಲ್ಲ ಅಂತ ಅನ್ನಿಸೋಕ್ಕೆ ಶುರುವಾಗಿದೆ. ನನ್ನ ಅನಿಸಿಕೆ ತಪ್ಪಿರಲಿ ಅಂತ ಆಶಿಸುವೆ.
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ನಲ್ನನ್ನಿ = ಸಂತೋಷ ಸಹಿತ ಧನ್ಯವಾದಗಳು
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಇನ್ನು ಸಾಹಿತ್ಯದಲ್ಲಿ ತುಂಗೆ.....
ಕುವೆಂಪು ಮಹಾ ಕಾದಂಬರಿಗಳಾದ ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಎರಡರಲ್ಲಿಯೂ ತುಂಗಾ ನದಿಯ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. ಕಾನೂರು.... ಶುರುವಾಗುವುದೇ ತುಂಗಾನದಿಯ ರಾಮತೀರ್ಥದ ಕಲ್ಲುಸಾರದಿಂದ !!
ಅವರ ಜೀವನ ಚರಿತ್ರೆ ನೆನಪಿನ ದೋಣಿಯಲ್ಲಿ ಪುಸ್ತಕದಲ್ಲಿ ಬಾಲ್ಯದಲ್ಲಿ , ಒಮ್ಮೆ ಮೀನು ಹಿಡಿಯಲು ಹೋಗಿ , ಹೆಮ್ಮಲಗ ಎಂಬ ದುರ್ವಾಸನೆಯ ದೊಡ್ಡ ಮೀನು (?) ಹಿಡಿದು ಹಿರಿಯರಿಂದ ಬೈಸಿಕೊಂಡ ಸ್ವಾರಸ್ಯಕರ ಘಟನೆ ಇದೆ.
ಶಿವಮೊಗ್ಗದ ಕವಿಗಳ ಕಾವ್ಯದಲ್ಲಿ ತುಂಗೆ ಕಾಣುತ್ತಾಳೆ. ಉದಾ ನಿಸಾರ್ ಅಹಮದ್ ( ಮೇಲೆ ಹೇಳಿದಂತೆ...). ಇನ್ನು ಲಕ್ಷ್ಮೀನಾರಾಯಣಭಟ್ಟರ ಕವನ (ಶಿವಮೊಗ್ಗದ ಮಳೆ (?) ) ದಲ್ಲಿಯೂ ತುಂಗೆಯ ಪ್ರಸ್ತಾಪ ಇದ್ದಂತೆ ನೆನಪು.