ಈ ಸಾಲು ಸರಿಯೇ?
"ರಾಮ ತರಕಾರಿ ತಂದು, ಸೀತೆ ಅಡುಗೆ ಮಾಡಿದಳು".
"ರಾಮ ಆಟ ಆಡಿ, ಸೀತೆ ಪೇಟೆಗೆ ಹೋದಳು"
ಹೀಗೆ ನಾವು ಹೇಳ್ತಿವ?
ಈ ಸಾಲಲ್ಲಿ ಏನು ಎಡವಟ್ಟಿದೆ, ಇಲ್ಲ.. ಹೇಳಿರಿ.

- Login or register to post comments
- 388 hits
- Email this forum



"ರಾಮ ತರಕಾರಿ ತಂದು, ಸೀತೆ ಅಡುಗೆ ಮಾಡಿದಳು".
"ರಾಮ ಆಟ ಆಡಿ, ಸೀತೆ ಪೇಟೆಗೆ ಹೋದಳು"
ಹೀಗೆ ನಾವು ಹೇಳ್ತಿವ?
ಈ ಸಾಲಲ್ಲಿ ಏನು ಎಡವಟ್ಟಿದೆ, ಇಲ್ಲ.. ಹೇಳಿರಿ.




ಉ: ಈ ಸಾಲು ಸರಿಯೇ?
ಈ ಸಾಲುಗಳು ತಪ್ಪು. ಇಲ್ಲಿ ರಾಮ ಮತ್ತು ಸೀತೆ ಎರಡು ಬೇರೆ ಬೇರೆ ನಾಮ ಪದ.
ಇವು ಬೇರೆ ಬೇರೆ ವ್ಯಕ್ತಿಯನ್ನು ಸೂಚಿಸುತ್ತವೆ. ಹಾಗು ಅವರು ಮಾಡುತ್ತಿರುವ ಕ್ರಿಯೆಗಳು ಸಹ ಬೇರೆ ಬೇರೆ ಆಗಿರುವುದರಿಂದ ಎರಡು ವಾಕ್ಯಗಳನ್ನು ಸೇರಿಸಿ ಒಂದೇ ವಾಕ್ಯ ಮಾಡುವುದು ತಪ್ಪು. ಅಥವಾ ಇಲ್ಲಿ ನಂತರ, ಆಗ, ಆದಮೇಲೆ ಎಂಬ ಪದಗಳ್ಳನ್ನಾದರೂ ಉಪಯೋಗಿಸಬೇಕು.
ಮಧುಸೂದನ್ ಡಿ ಆರ್
ಉ: ಈ ಸಾಲು ಸರಿಯೇ?
ಈ ತರ ಹೇಳಬಹುದು ...
ನೀವೊಂದು ಮಾತು ಅಂದು , ನಾನು ಅದಕ್ಕೊಂದು ಉತ್ರ ಬರ್ದು , ಮತ್ತಿನ್ನಾರೋ ಇನ್ನೇನೋ ಒಗ್ಗರಣೆ ಹಾಕಿ , ಜಗಳ ಆಗಿ , ಬಿಡಿಸ್ಲಿಕ್ಕೆ ನಾಕನೇಯೋರು ಬಂದು ....
ಹೀಗೆ ಬೇರೆ ಬೇರೆ ಘಟನೆಗಳು ಸಂಭವಿಸೋದನ್ನ ... ಸಾಲಾಗಿ ಹೇಳಬಹುದು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"