Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಭಾರತೀಯ ಪ್ರಜಾಸತ್ತೆ

November 2, 2007 - 7:40pm — csomsekraiah

ಇಂದಿನ ಭಾರತೀಯ ಪ್ರಜಾಸತ್ತೆ ಸರಿಯಾದ ದಾರಿಯಲ್ಲಿ ಚಲಿಸುತ್ತಿದೆಯೇ ?

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆಂಬುವು , ರಥದ ಎರಡು ಚಕ್ರಗಳು. ಕಾಲಕ್ರಮದಲ್ಲಿ ಇವು ಒಂದರ ಸ್ಥಾನಕ್ಕೆ ಇನ್ನೊಂದು ಬರುವುದು ಪ್ರಜಾಸತ್ತೆಯ ಸಹಜ ಪ್ರಕ್ರಿಯೆ. ರಾಜಕೀಯ ಪಕ್ಷವೊಂದು ಆಡಳಿತ ಪಕ್ಷವಾಗಿದ್ದರೂ ; ವಿರೋಧ ಪಕ್ಷವಾಗಿದ್ದರೂ ಅದರ ಸ್ಥಾನಬಲದ ಮೇಲೆ ಸಾಂವಿಧಾನಿಕ ಕರ್ತ ವ್ಯಗಳಿದ್ದೇ ಇರುತ್ತವೆ.

ಬಂದಿರುವ ತೊಂದರೆ ಎಂದರೆ ಯಾವ ಪಕ್ಷವೂ ಈಗ ವಿರೋಧಪಕ್ಷವಾಗಲು ಇಷ್ತಪಡುತ್ತಿಲ್ಲ.ಪ್ರಜಾ ಪ್ರಭುತ್ವದಲ್ಲಿ ಯಾವ ಸ್ಥಾನವಾದರೂ ನಿರ್ಣಾಯಕವೇ ಎಂಬ ಅರಿವಿನ ಕೊರತೆಯಿಂದ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾದ ಪಕ್ಷಗಳು ಆಜನ್ಮ ವೈರಿ ಪಡೆಗಳಂತೆ ಬವಿದಾಡುತ್ತಿವೆ

ಪಕ್ಷಗಳು ಪರಸ್ಪರ ಗೌರವ ತೋರಿಸದಿರುವ; ಉದಾರತೆ ಮೆರೆಯದಿರುವ ಪರಿಣಾಮವಾಗಿ, ಸಂಸತ್ತು ಯಾವುದೇ ಪರಿಣಾಮಕಾರಿಯಾದ ಚರ್ಚೆಯನ್ನು ನಡೆಸಲಾರದ ಸ್ಠಿತಿಗೆ ಮುಟ್ಟಿ, ಕೇವಲ ಗಲಭೆ ಗೊಂದಲಗಳ ಗೂಡಾಗುತ್ತಿದೆ.

ಸಂವಿಧಾನಾತ್ಮಕವಾಗಿ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ಪಡೆದ ಪಕ್ಷಗಳನ್ನು ಸಮಾಜವಿರೋಧಿಗಳಂತೆ ಚಿತ್ರಿಸುವ ಪರಿಪಾಠ ಸಹ ಸಂವಿಧಾನಕ್ಕೆ ಮತ್ತು ಆರಿಸಿದ ಜನ ಸಮುದಾಯಕ್ಕೆ ಮಾಡುವ ಅಪಮಾನವೇ ಆಗುತ್ತದೆ ;ಹಾಗೂ ಪಕ್ಷಗಳೂ ಸಹ ತುಂಬಾ ಜಾವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೆ ಬದ್ದವಾಗಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ವಂಶಾಧಿಕಾರ ಪದ್ದತಿಯನ್ನು ಎಗ್ಗಿಲ್ಲದೆ ಪ್ರತಿಪಾದಿಸಲಾಗುತ್ತಿದೆ.ಇದು ಪ್ರಜಾಸತ್ತೆಯ ಮೇಲೆ ನಡೇಸುವ ಕ್ರೂರ ದಾಳಿ.ನಾಡಿನ ಪ್ರತಿಭ್ಹಾವಂತ ಯುವ ಸಮುದಾಯದ ಮೇಲೆ ಇದರ ಕೆಟ್ಟ ಪರಿಣಾಮ ಊಹಿಸಲು ಬಾರದ್ದು.
ಭಾರತದಂತಹ ಬೃಹತ್ ಪ್ರಜಾಸತ್ತೆಯ ಹೊಣೆಯನ್ನು ಹೊತ್ತ ಕೇಂದ್ರ ಸರ್ಕಾರದಲ್ಲಿ ಎಷ್ಟು ಮಾನವ ಪ್ರತಿಭ್ಹೆ ಇದ್ದರೂ ಸಾಲದು,ಅದಕ್ಕೆ ಬದಲಾಗಿ, ಕೇವಲ ನಾಯಕ ನಿಷ್ಟೆಗೆ; ವಿಚಾರಹೀನ ವಿಧೇಯತೆಗೆ ಒತ್ತು ಕೊಡುತ್ತಿರುವುದು ಪ್ರಜಾಸತ್ತೆಯನ್ನು ಮರಣಾಸನ್ನ ಸ್ಠಿತಿಗೆ ದೂಡಿದಂತೆಯೇ ಆಗುತ್ತದೆ.

ರಾಜ್ಯಾಂಗದತ್ತವಾದ ತನಿಖಾ ಸಂಸ್ಠೆಗಳನ್ನು , ಸ್ವಾಯತ್ತೆ ಸಂಸ್ಠೆಗಳನ್ನು ದುರುಪಯೋಗಪಡೀಸಿ ಎದುರಾಳಿಗಳನ್ನು ಸದೆಬಡಿಯಲು; ಸ್ವಜನರನ್ನು ಬಚಾವು ಮಾಡಲು ಉಪಯೋಗಿಸಿಕೊಳ್ಳುವುದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುವ ಕ್ರಮವಾಗುತ್ತದೆ.

ಸ್ವಾತಂತ್ರ್ಯ ನಂತರ ಕೇವಲ ಅರವತ್ತು ವರ್ಷಗಳಲ್ಲಿ ಭಾರತೀಯ ಪ್ರಜಾಸತ್ತೆ ಚಲಿಸುತ್ತಿರುವ ಇಂತಹ ಅಪಾಯದ ಹಾದಿಯನ್ನು ಕಂಡೂ ಎಚ್ಚರಿಸದಿರುವುದು ಪ್ರಾಜ್ನರ ಕರ್ತವ್ಯ ಲೋಪವೇ ಆಗುತ್ತದೆ

‹ ಈ ಪರಿಯ ಸೊಬಗು ಹೊಗೇನಕಲ್ ವಿವಾದ: ಪಕ್ಷಬೇಧ ಮರೆತ ಸಂಸದರು ›
  • ರಾಜಕೀಯ
Ornamental seperator
  • Login or register to post comments
  • 340 hits
  • Email this forum
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬದಲಾಗುತ್ತಿರುವ ಸಂಸತ್ತಿನ ನಡವಳಿಕೆಗಳು
  • ಶೇಕಡಾ ಏಳರ ಹಣದುಬ್ಬರವೂ, ಬಣ್ಣದ ಟಿ.ವಿ.ಯೂ...
  • ಹೞಗನ್ನಡದ ’ಱ’ ಹಾಗೂ ’ೞ’ ಗಳು ಬೇಕೇ?
  • ತಿರಿಚಿ ಬರೆದ ಇತಿಹಾಸ ...
  • ನಮ್ಮ ಸೈನಿಕರ ರಕ್ತಕ್ಕೆ ಬೆಲೆಯಿಲ್ಲವೇ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು

ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator