ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

November 4, 2007 - 10:28pm — kpbolumbu

http://vijaykarnatakaepaper.com/pdf/2007/11/01/20071101a_008101003.jpg

ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

‹ ಬರಹದ ಶೈಲಿ ಬರಹಗಾರನ ಮನೋಭಾವನೆ ತಿಳಿಸುವ ಕನ್ನಡಿಯೇ ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? ›
  • ಸುದ್ದಿ, ಸಮಾಚಾರ
~.~
  • Login or register to post comments
  • 1045 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 4, 2007 - 10:41pm — ವೈಭವ

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

ವೈಭವ's picture

ಇವರು ಹೀಗೆ ಬರೀತಾರೆ. ಅದರ ಮರುದಿನನೇ "ಕಹಾ ಗಯೆ ವೋ ದಿನ್" (ಬಾನುವಾರದ ವಿ.ಕ ನೋಡಿ) ಅಂತ ಹಿಂದೀಲಿ ತಮ್ಮ ಸುದ್ದಿಯೋಲೆಯಲ್ಲಿ ತಲೆಬರಹ ಹಾಕ್ತಾರೆ.

ಇದು ಇಬ್ಬಂದಿತನವಲ್ಲವೆ? Smiling

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 4, 2007 - 10:45pm — ವೈಭವ

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

ವೈಭವ's picture

ಅದರ ಕೊಂಡಿ ಇಲ್ಲಿದೆ
http://vijaykarnatakaepaper.com/pdf/2007/11/04/20071104a_013101003.jpg

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 1:01pm — mahesha

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

mahesha's picture

Smiling ...

ವಿಕದಲ್ಲಿ ಬರುವ ಸ್ವಖ್ಯಾತ ಲೇಖಕಶಿಖಾಮಣಿಗಳ ಬರಹಗಳೆಲ್ಲ ಹೀಗೆಯೇ ಯಾಕೆ....

ಮೊನ್ನೆ ಯಾರೋ ಕೂಟ ತಮಿಳರ ಅಡುಗೆ ಅಂದಿದ್ರು (ವಿಕದಲ್ಲೇ.. ಬರೆದೊರ ಹೆಸರು ಮರೆತು ಹೋಯ್ತು) .. ಅದಕ್ಕೆ ನಮ್ಮ ಚನ್ನೀಲ ಸಿಕ್ಕಾಪಟ್ಟೆ ಸಿಟ್ಟುಗೈದಿದ್ದನ್ನು..

ಕೂಟು, ಪುಳಿಯೊಗರೆ ಇವೆಲ್ಲ ತಮಿಳರದು ಎಂದು ಹೇಳಿಕೊಂಡು ತಿರುಗುವ ಕನ್ನಡಿಗರೇ ಇದ್ದಾರಲ್ಲ..

ಪುಳಿಯೊಗರೆಯಲ್ಲಿರುವ ಒಗರೆ ಕನ್ನಡದ್ದೆ.. ತಮಿಳಲ್ಲಿ ಇಲ್ಲವಂತೆ Smiling

ಅಣ್ಣ.. ಇರಲಿ ಬಿಡು..! ನಮ್ಮನ್ನಾಳಲು ನಮಗಾರದು ಎಂದು 'ಠಾಕೂರರ' ಅಡಿ ಇರುವ ಕಾಲ ಬಂತು.. ನಮ್ಮ ಒಳಜಗಳದಿಂದ ಬೇರೆಯೋರು ನಮ್ಮಾಳುವುದು, ಹಾಳುವುದು ಮಾಮೂಲಿಯೇ.... ಇನ್ನು ಮೂಲಗನ್ನಡಿಗರಿಗೆ ಬೆಲೆಯಲ್ಲಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 2:36pm — mahesha

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

mahesha's picture

ಹಾಗಂತ ಎಲ್ಲ ವಿಕದ ಬರಹಗಾರರ ಚನ್ನಾಗಿಲ್ಲ ಅಂತ ಅಲ್ಲ....!!

ಕೆಲವು ನನಗೆ ಹಿಡಿಸಿಲ್ಲ.. ಸಿಟ್ಟು ಮಾಡಿಕೊಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 7:47am — srivathsajoshi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

srivathsajoshi's picture

ಮಹೇಶ್, ನಮಸ್ಕಾರ.

ವಿ.ಕದಲ್ಲಿ 'ಕೂಟು: ಒಂದು ಪದಾರ್ಥ ಚಿಂತಾಮಣಿ' ಲೇಖನವನ್ನು ಬರೆದಾತ ಶ್ರೀವತ್ಸ ಜೋಶಿ ಎಂಬುವವ!

ಅದರಲ್ಲಿ ಕೂಟು ಅಡುಗೆಯು ಮೂಲತಃ ತಮಿಳಿನವರದು ಎಂದು ಲೇಖಕ ಪ್ರತಿಪಾದಿಸಿದ್ದಾನೆ ಎಂದು ನಿಮಗೆ ಅನಿಸಿತೆ? ನನಗನಿಸುವ ಪ್ರಕಾರ ಲೇಖಕ ಹೇಳಿರುವುದು ೧) ಕೂಟು ಪದಾರ್ಥವನ್ನು ತಾನು ಮೊದಲು ತಿಂದದ್ದು ಒಬ್ಬ ತಮಿಳು ಸ್ನೇಹಿತರ ಮನೆಯಲ್ಲಿ ಮತ್ತು ೨) ಅದು ತಮಿಳು ಜನರ ನೆಚ್ಚಿನ ಅಡುಗೆ ಎಂದು ಆ ಆತಿಥೇಯರು ಹೇಳಿದಾಗ ಆ ಪದಕ್ಕೆ ತಮಿಳು ಭಾಷೆಯಲ್ಲಿನ `ಕುಟ್ಟುತ್ತಾಪನಂ' ಪದದೊಟ್ಟಿಗೆ ಹೇಗೆ ಸಂಬಂಧ ಇರಬಹುದು ಎಂದು ತಾನು ತರ್ಕ ಮಾಡಿದ ಕುರಿತು.

ಅದರ ಹೊರತಾಗಿ, ಕೂಟು ಯಾವ ಭಾಷೆಯವರು ಶುರುಮಾಡಿದ ರುಚಿವೈವಿಧ್ಯ ಎಂಬ ವಾದ ಆ ಲೇಖನದಲ್ಲಿ ಇದ್ದಂತಿಲ್ಲ.

ಇನ್ನು, ಪುಳಿಯೊಗರೆಯ ಪ್ರಸ್ತಾಪ ಆ ಲೇಖನದಲ್ಲಿ ಇಲ್ಲ. ಬೇರೆಲ್ಲಾದರೂ ಆ ಬಗ್ಗೆ ಚರ್ಚೆ ನಡೆದಿದ್ದರೆ ನನಗೆ ಗೊತ್ತಿಲ್ಲ!

ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 8:11am — mahesha

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

mahesha's picture

ಜೋಶಿಗಳೇ

೧) ಆ ಬರಹ ನಿಮ್ಮದೆಂದು ನಂಗೆ ತಿಳಿದಿಲ್ಲ
೩) ನಿಮ್ಮ ಬರಹವನ್ನು ನಾನೋದಿಲ್ಲವೆಂದು ಹೇಳಿದ್ದೀನಿ.. ನಮ್ಮ ಸುನಿಲ ಹಂಗೆ ಹೇಳ್ತಿದ್ದನೆಂದಿರುವುದು
to quote
"ಮೊನ್ನೆ ಯಾರೋ ಕೂಟ ತಮಿಳರ ಅಡುಗೆ ಅಂದಿದ್ರು (ವಿಕದಲ್ಲೇ.. ಬರೆದೊರ ಹೆಸರು ಮರೆತು ಹೋಯ್ತು) .. ಅದಕ್ಕೆ ನಮ್ಮ ಚನ್ನೀಲ ಸಿಕ್ಕಾಪಟ್ಟೆ ಸಿಟ್ಟುಗೈದಿದ್ದನ್ನು.."

೪) ಪುಳಿಯೊಗರೆಗೂ ನಿಮ್ಮ ಬರಹಕ್ಕೂ ನಂಟಿಲ್ಲ...

೫) ಕೂಟು ಬರೀ ತಮಿಳರಡುಗೆಯಂತೂ ಅಲ್ಲ

"ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?"
೧) ಈ ಪ್ರಶ್ನೆಗೆ ನಾನು ಈಗ ಉತ್ರ ಹೇಳಬೇಕಾಗಿಲ್ಲ.. ಇದು ನಿಮ್ಮ ಊಹೆ.
೨) ಆದ್ರೂ ಪ್ರಪಂಚದಲ್ಲಿ ಎಲ್ಲ ಯಾವುದೇ ಒಂದರಿಂದಂತೂ ಬಂದಿಲ್ಲ. ಹಂಗಂತ ಕನ್ನಡದಿಂದ ಏನೂ ಬಂದಿಲ್ಲ ಅಂತವೂ ಅಲ್ಲ..

ನಿಮ್ಮ ಲೇಖನದಲ್ಲಿ "ಅದು ತಮಿಳು ಜನರ ನೆಚ್ಚಿನ ಅಡುಗೆ ಎಂದು ಆ ಆತಿಥೇಯರು ಹೇಳಿದಾಗ ಆ ಪದಕ್ಕೆ ತಮಿಳು ಭಾಷೆಯಲ್ಲಿನ `ಕುಟ್ಟುತ್ತಾಪನಂ' ಪದದೊಟ್ಟಿಗೆ ಹೇಗೆ ಸಂಬಂಧ ಇರಬಹುದು ಎಂದು ತಾನು ತರ್ಕ ಮಾಡಿದ ಕುರಿತು." ಇದನ್ನು ಹೇಳಿ, ನಮ್ಮ ತೆಂಕಣ ಹೇಮಾವತಿ-ಕಾವೇರಿ ಸೀಮೆಯವರ ನೆಚ್ಚಿನ ಅಡುಗೆಯಾದ ಕೂಟಿನ ಬಗ್ಗೆ ನಿಮ್ಮ ಆರಯ್ಯು ಕಡಮೆ ಅನ್ನಿಸಲ್ವೇ! ಹಾಗಾದ್ರೆ ನಿಮ್ಮ ಲೇಖನ ಬರೀ ಯಾರೋ ಹೇಳಿದನ್ನು ಬರೆಯುವುದೇ...!( ಇದು ಓದಿದೋರಿಗೆ, ಅದ್ರಲ್ಲೂ ಉತ್ರಕರ್ನಾಟಕದವರು, ಕೂಟು ತಿನ್ನದವರಿಗೆ, ಕೂಟು ತಮಿಳರ ಅಡುಗೆ ಅನ್ನಿಸಬೋದಲ್ಲ.. ). ಇದು ನನ್ನನಿಸಿಕೆ.. ಅನಿಸಿಕೆ ಎಂದೇ ತಗೊಳ್ಳಿ.

ನಾಳೆ ಇನ್ನೊಬ್ರು "ಒಬ್ಬಟ್ಟು" ತೆಲುಗರದು, ಹೋಳಿಗೆ ಕನ್ನಡಿಗರದು.. ಅಂದ್ರೆ.. ಆವಾಗ್ಲೂ ಹೀಗೆ ಹೇಳಬೇಕಾಗ್ತದೆ...

ನೀವು "ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಹೀಗೆಲ್ಲ ಕೇಳಬೇಡಿ.. ಇದಕ್ಕೆ ಪ್ರತಿ ನಾನು "ನಿಮ್ಮ ಬರಹದಿಂದ ಏನು ಸಾಧಿಸಹೊರಟ್ಟಿದ್ದೀರಿ" ಎಂದು ಸಟೆದರೆ ಸುಮ್ನೆ ನಮ್ಮ ನಮ್ಮಲೇ ಮನಸ್ತಾಪ...

ನಾನು ನಿಮ್ಮ ಬರಹವನ್ನು ಟೀಕಿಸಿಲ್ಲ. ನೀವು ಸಿಟ್ಟು ಮಾಡಿಕೊಂಡಿದ್ರೆ ಮನ್ನಿಪು.

ನಿಮ್ಮ ಮೇಲೆ ನನಗೆ ಮೊದಲಿಂದಲೂ ಬಲು ಗೌರವವಿದೆ.. ನಿಮಗೂ ಗೊತ್ತು.. ದೇವರಾಣೆ.. ಆ ಬರಹ ನಿಮ್ಮದು ಎಂದು ಗೊತ್ತಿದ್ರೆ, ನಾನು ಈ ಕಮೆಂಟು ಹಾಕ್ತಿರಲಿಲ್ಲ..

ನನಗೆ ದಿಟವಾಗಲೂ ಸುನಿಲ ಯಾರೋ "ಕೂಟು" ತಮಿಳರಡುಗೆ ಎಂದು ಬರೆದಿದ್ದಾರೆ ಎಂದು ಬೇಸರದಿಂದ ಹೇಳಿದ್ದ. ನಾನು ಅವನು ಹೇಳಿದ್ದ ಎಂದೇ ಬರೆದೆನು..

ಇಷ್ಟೇ ನಾನು ಕೊಡಬೋದಾದ ಸಬೂಬು.. ನಿಮಗೆ ಇನ್ನೂ ನಾನು ದೋಷಿಯೆಂದು ಕಂಡರೆ, ನನಗೆ ದಿಟವಾಗಲು ಅದರಿಂದ ದುಃಖವಿದೆ.

ಇಂತಿ.. ನಿಮ್ಮನ್ನು ದೂಷಿಸದ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 5:56pm — srivathsajoshi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

srivathsajoshi's picture

ಮಹೇಶ್, ನಮಸ್ಕಾರ.

ನನ್ನ ಪ್ರತಿಕ್ರಿಯೆಯನ್ನು ಕೊನೆಯಲ್ಲೊಂದು ’ನಗುಮುಖಿ’ (smiley) ಯೊಂದಿಗೆ ಕೊನೆಗೊಳಿಸಿದ್ದರೂ ನಾನು ಸಿಟ್ಟಿನಿಂದ ಬರೆದದ್ದು ಎಂದೇಕೆ ಅಂದುಕೊಂಡಿರಿ? ನಾನು ಸಿಟ್ಟಿನಿಂದ ಬರೆದಿಲ್ಲ, ಯಥಾಪ್ರಕಾರ ಕೊಂಚ witನಿಂದ ಬರೆದಿರಬಹುದು. ಹಾಗಾಗಿ ನನ್ನ ಪ್ರತಿಕ್ರಿಯೆಯನ್ನು ಸುಲಭವಾಗಿ ತೆಗೆದುಕೊಳ್ಳಿ.

ಇನ್ನು ಕೆಲವು ಸ್ಪಷ್ಟೀಕರಣಗಳು:

೧. ಕೂಟು ತಮಿಳು ಮೂಲದ್ದು ಎಂದು ಆ ಲೇಖನದಲ್ಲಿ ಸಾಧಿಸಿಲ್ಲ. ಕೂಟು ನನಗೆ ಪರಿಚಯವಾದದ್ದು ತಮಿಳರಲ್ಲಿ, ತಮಿಳು ಭಾಷೆಯ ಕೂಟ್ಟುತ್ತಾಪನಂ ಶಬ್ದದ ಜತೆ ’ಕೂಟು’ ಶಬ್ದಕ್ಕೆ ಸಂಬಂಧ ಕಲ್ಪಿಸಿದ್ದು ನಾನು ಅಷ್ಟೇ. ಕರ್ನಾಟಕದಲ್ಲೂ ಕೂಟು ಅಥವಾ ಕೂಟನ್ನು ಹೋಲುವ ಪದಾರ್ಥಗಳಿವೆ ಎಂತಲೇ ಲೇಖನದಲ್ಲಿ ಹೇಳಿರುವುದು. ಬೆಂಗಳೂರು/ಮೈಸೂರು ಪ್ರಾಂತದವರಿಗೆ ಕೂಟು ಗೊತ್ತಿರುತ್ತದೆ ಎಂದೂ ಬರೆದಿದ್ದೇನೆ. ಅಷ್ಟೇ ಏಕೆ, ನನ್ನ ಸ್ನೇಹಿತನೊಬ್ಬ "ಕುಮಾರವ್ಯಾಸನ ಕಾವ್ಯದಲ್ಲಿ ಕೂಟಿನ ಉಲ್ಲೇಖವಿದೆ" ಎಂದಿದ್ದನ್ನೂ ಆ ಲೇಖನದಲ್ಲಿ ಬರೆದಿದ್ದೇನೆ.

೨. "ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎಂದು ಕೇಳಿದರೆ "ಪ್ರಪಂಚದಲ್ಲಿ ಯಾವುದಕ್ಕೂ ಕನ್ನಡ ಮೂಲ ಅಲ್ಲವೇ ಅಲ್ಲ!" ಎಂದೇಕೆ ನೀವು ಅರ್ಥೈಸಿಕೊಳ್ಳಬೇಕು? ಕೆಲವಕ್ಕೆ ಕನ್ನಡವೇ ಮೂಲವಿರಬಹುದು, ಇನ್ನು ಕೆಲವು ಕನ್ನಡಕ್ಕೆ ಎರವಲಾಗಿ ಬಂದದ್ದಿರಬಹುದು. ಎಲ್ಲ ಭಾಷೆಗಳು ಬೆಳೆಯುವುದೇ ಹಾಗೆ.

೩. ನೀವು ನನ್ನ ಬರಹವನ್ನು ಟೀಕಿಸಿದ್ದೀರೆಂದು ನಾನು ಹೇಳಿಲ್ಲ. ಅಥವಾ ನೀವು ಟೀಕಿಸಬಾರದಾದರೂ ಏಕೆ? ಬರಹವನ್ನೋದಿ ಸಕಾರಣವಾಗಿ ಟೀಕಿಸುವ ಹಕ್ಕು ನಿಮಗಿದ್ದೇ ಇದೆ. ರಚನಾತ್ಮಕ ಟೀಕೆ ಟಿಪ್ಪಣಿಗಳಿಂದ ಬರಹಕ್ಕೂ, ಬರಹಗಾರನಿಗೂ, ಓದುಗನಿಗೂ ಒಳ್ಳೆಯದೇ. "ಆ ಬರಹ ನಿಮ್ಮದು ಎಂದು ಗೊತ್ತಿದ್ರೆ, ನಾನು ಈ ಕಮೆಂಟು ಹಾಕ್ತಿರಲಿಲ್ಲ.. " ಎಂಬೋ ನಿನ್ನ ಧೋರಣೆ ಒಳ್ಳೆಯದಲ್ಲ. ಬರಹ ಯಾರದಾದರೇನಂತೆ, ವಸ್ತುನಿಷ್ಟವಾಗಿ ಚರ್ಚೆ ಯಾವತ್ತಿಗೂ ಒಳ್ಳೆಯದು. ಏನಂತೀರಿ?

೪. ಇರಲಿ, ಈ ಸಲ ಎರಡು ನಗುಮುಖಿ Smiling :-) ಗಳನ್ನು ಬರೆಯುತ್ತ ಈ ಪ್ರತಿಕ್ರಿಯೆಯನ್ನು ಮುಗಿಸುವೆ, ನನಗೆ ಖಂಡಿತವಾಗಿಯೂ ಸಿಟ್ಟಿಲ್ಲ ಎಂದು ಖಾತರಿಪಡಿಸಲು.

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 5:47pm — savithru

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

savithru's picture

>>ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?

ಹಂಗೆಲ್ಲ ಅರ್ಥ ಮಾಡಿಕೊಳ್ಳಬೇಡಿ...

ಕನ್ನಡದ ಅಸ್ತಿತ್ವವನ್ನು ಕೂಗಿ ಕೂಗಿ ಹೇಳಬೇಕಾದಂತ ಪರಿಸ್ತಿತಿ ಇಂದು ನಮಗೆ ಬಂದಿದೆ. ಮಹೇಷರ ಲೇಖನಗಳಲ್ಲಿ ಅಂತಹ ಕೂಗನ್ನು ನಾನು ಗುರಿತಿಸುತ್ತೇನೆ.

ನಂಗೂ ಶಂಕ ಊದಿ, ಗಂಟೆ ಬಾರಿಸಿ ಕೂಗಿ ಕೂಗಿ ಹೇಳಬೇಕು ಅನ್ನಿಸುತ್ತೆ... ಏನ್ಮಾಡ್ಲಿ ... ಮೂಕ ನಾನು!

ಅಂದಹಾಗೆ "ಕೂಟು" ಅಡಿಗೆ ಅಂದ್ರೆ ಏನು?.. ಬೆಂಗಳೂರಿನ ಹೋಟ್ಲು ಗಳಲ್ಲಿ ಸಿಗುತ್ತಾ?.. ಯಾವುದರಿಂದ ಮಾಡಿರ್ತಾರೆ?..

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 6:11pm — srivathsajoshi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

srivathsajoshi's picture

ಸವಿತೃ ಅವರಿಗೆ ನಮಸ್ಕಾರ.

"ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಎನ್ನುವುದರ ಮೂಲಕ ನಾನು ಕನ್ನಡದ ಅಸ್ತಿತ್ವವನ್ನು ಪ್ರಶ್ನಿಸಿಲ್ಲ. ಪ್ರತಿಯೊಂದಕ್ಕೂ ಕನ್ನಡವೇ ಮೂಲ ಆಗಿರುತ್ತದೆ/ಆಗಿರಬೇಕು ಎಂದೇನಿಲ್ಲ. ಹಾಗಂತ ಹೇಳಿ ಕನ್ನಡ ಮೂಲವಾಗಿರುವುದು ಯಾವುದೂ ಇಲ್ಲ ಎಂದೂ ಅಲ್ಲ.

"ಅಂದಹಾಗೆ ಕೂಟು ಅಡಿಗೆ ಅಂದ್ರೆ ಏನು?.. ಬೆಂಗಳೂರಿನ ಹೋಟ್ಲು ಗಳಲ್ಲಿ ಸಿಗುತ್ತಾ?.. ಯಾವುದರಿಂದ ಮಾಡಿರ್ತಾರೆ?.." ಎಂಬ ನಿಮ್ಮ ಪ್ರಶ್ನೆಗೆ ಮಹೇಶ್ ಉತ್ತರಿಸುತ್ತಾರೋ ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 9:13pm — ವೈಭವ

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

ವೈಭವ's picture

ನಮ್ಮಲ್ಲಿ(ಮಯ್ಸೂರು, ಮಂಡ್ಯ,ಚಾ.ನಗರ...) ಕೂಟು ಅಂದರೆ ಹಲವು ತರಕಾರಿಗಳಿಂದ(ಹುರುಳಿಕಾಯಿ, ಅವರೆಕಾಯಿ, ಚಪ್ಪರದವರೆಕಾಯಿ..ಹೀಗೆ ಇನ್ನು ಹಲವು...ತುರಿದು ಆಡಿಸಿದ ತೆಂಗಿನಕಾಯಿನೂ ಇರುತ್ತೆ) ಮಾಡಿದ ಒಂದು ಗಟ್ಟಿ ಸಾರು ಎನ್ನಬಹುದು. ಇದನ್ನ ನಾವು ಹೆಚ್ಚು ಸಂಕ್ರಾಂತಿಯ ದಿನ ಮಾಡುವುದುಂಟು ಮತ್ತು ಪಂಗ್ಲು(ಪೊಂಗಲ್) ಜೊತೆ ಇದನ್ನು ತಿನ್ನಲು ಸಿಕ್ಕಾಪಟ್ಟೆ ಚನ್ನಾಗಿರುತ್ತದೆ.

ಕೂಟನ್ನ ನೀವು ಚಪಾತಿ, ದೋಸೆ ಜೊತೆ ತಿನ್ನಲು ಬಳಸಬಹುದು.

ನನಗೆ ಬುದ್ದಿ ಬಂದಾಗಲಿಂದ(?? Smiling ) ನಾನು 'ಕೂಟು' ತಿನ್ಕೋಂಡ್ ಬಂದಿದ್ದೀನಿ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 10:07pm — srivathsajoshi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

srivathsajoshi's picture

"ಕೂಟು ಅಂದರೆ ..... ಒಂದು ಗಟ್ಟಿ ಸಾರು ಎನ್ನಬಹುದು."

ನನ್ನ ಲೇಖನದ ಒಟ್ಟಂದ ಅದೇ ಆಗಿತ್ತು. ಕೂಟು ಅಂದರೆ ಘನವೂ ಅಲ್ಲದ ದ್ರವವೂ ಅಲ್ಲದ ಪದಾರ್ಥ ಎಂಬ ವಿಷಯದ ವ್ಯಾಖ್ಯಾನ. ಅದರಲ್ಲಿ ತಮಿಳು-ಕನ್ನಡ ಭಾಷೆಗಳ ಶ್ರೇಷ್ಠತೆಯ ತುಲನೆ ಯಾರಿಗಾದರೂ ಯಾಕಾದರೂ ಭಾಸವಾಯಿತೋ ನಾನರಿಯೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 10:32pm — hamsanandi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

hamsanandi's picture

ಕೂಟು ಎಂದರೆ

೧. ಸಾರಿಗಿಂತ, ಹುಳಿಗೆ ಹತ್ತಿರವಾದದ್ದು ( ಈಗ, ಮತ್ತೆ ಹುಳಿ ಎಂದರೇನು ಎನ್ನಬೇಡಿ - ಅದೊಂದು ಓವರ್ಲೋಡೆಡ್ ಪದ Smiling ). ಏಕೆಂದರೆ, ಸಾರಿನಲ್ಲಿ ತರಕಾರಿಗಳಿರುವುದಿಲ್ಲ.

೨. ಸಾರು, ಹುಳಿ ಎರಡರಲ್ಲೂ ಹುಳಿ ಅಂಶ, ಎಂದರೆ ಹುಣಿಸೇಹಣ್ಣು, ಅಥವಾ ಟೊಮೇಟೋ ಹಾಕುತ್ತೇವಲ್ಲ ; ಆದರೆ, ಕೂಟಿನಲ್ಲಿ ಈ ರೀತಿ ಹುಳಿ ಹಾಕುವುದಿಲ್ಲ. ಅದಕ್ಕೆಂದೇ, ನೆಂಚಿಕೊಳ್ಳಲು ಮಜ್ಜಿಗೆಹುಳಿಯನ್ನೋ, ರಾಯತವನ್ನೋ ಮಾಡಲಾಗುತ್ತೆ.

೩. ಕೂಟಿಗೆ ತಿರುವಲು ( ಅಥವಾ ಮಸಾಲೆ ರುಬ್ಬಲು) ಮೆಣಸಿನಕಾಯಿಯ ಜೊತೆ, ಕಾಳು ಮೆಣಸನ್ನೂ ಉಪಯೋಗಿಸುತ್ತಾರೆ.

೨ ಮತ್ತು ೩ ಕೂಟನ್ನು ಕೂಟು ಮಾಡುವ ಮುಕ್ಗ್ಯ ಅಂಶಗಳು.

ಇಂತೀ ಕೂಟುಪುರಾಣದ ರಚನಾ ಕಾಂಡದ ಹೆಜ್ಜೆಗಳು ಪ್ರಕರಣವು ಮುಕ್ತಾಯವಾದುದು. ;೦)

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 7, 2007 - 9:38am — roshan_netla

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

roshan_netla's picture

ಕನ್ನಡದ ಹಾರಾಟ, ಹೊರಾಟ.. ಕೂಟು ಪುರ್‍ಆಣದ ವರೆಗೆ.!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 7, 2007 - 9:39am — roshan_netla

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

roshan_netla's picture

ಕನ್ನಡದ ಹಾರಾಟ, ಹೊರಾಟ.. ಕೂಟು ಪುರ್‍ಆಣದ ವರೆಗೆ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 7, 2007 - 11:09am — Sunil Jayaprakash

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

Sunil Jayaprakash's picture

ಅಣ್ಣಂದ್ರಾ, ಈ ಕೂಟಿನ ಸುತ್ತ ಇರುವ ಚರ್ಚೆಯನ್ನು ಕೂಟು : ಒಂದು 'ಪದಾರ್ಥ' ಚಿಂತಾಮಣಿ... ಎಂಬ ಎಳೆಯಲ್ಲಿಯೇ ಮುಂದುವರೆಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 12:40am — Ennares

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

Ennares's picture

ಈ ಲೇಖನ thatakannada.com ನಲ್ಲಿ ಪ್ರಕಟವಾದಾಗ ನನ್ನ ಪ್ರತಿಕ್ರಿಯೆ ಕೆಳಕಂಡಂತಿತ್ತು.
"ಕನ್ನಡಾ? ಅದಿ ಎನ್ನಡಾ?
ಕನ್ನಡ ಯಾರಿಗೆ ಸ್ವಾಮಿ ಬೇಕು? ಕನ್ನಡದವರಿಗೆ ತಾನೇ? ಕನ್ನಡದಿಂದ ಯಾರು ತಾನೆ ಉಧ್ಧಾರ ಆಗಿದ್ದಾರೆ? ವ್ಯಾಪಾರ ವಹಿವಾಟುಗಳಲ್ಲಿ ಕನ್ನಡಕ್ಕೇನು ಕೆಲಸ? ಕನ್ನಡ ಬರೀ ಸಾಹಿತ್ಯ, ಸಂಗೀತ, ಕಲೆಗಾಗಿ ಮಾತ್ರ ಸೀಮಿತವಾಗಿದೆಯಲ್ಲವೇ? ಕನ್ನಡ ಮಾತಾಡಿ ನಾಲಿಗೆ ತೀಟೆ ತೀರಿಸ್ಕೋಬೇಕಾದವ್ರು ಬೇಕಾದ್ರೆ ಕನ್ನಡ ಕಲೀಲಿ. ಎಲ್ರಿಗೂ ಯಾಕೆ ಸ್ವಾಮಿ ಒತ್ತಾಯ? ಪರಭಾಷೀಯರೇ ಬಹುಸಂಖ್ಯಾತರಾಗಿರುವ ಬೆಂಗಳೂರಿನಲ್ಲಿ ಅವಶ್ಯಕತೆ ಇಲ್ಲದಿದ್ದರೆ ವೃಥಾ ಶ್ರಮವಹಿಸಿ ಏಕೆ ಅಷ್ಟು ಭಾಷೆಗಳನ್ನು ಕಲಿಯಬೇಕು? ಮುಂದೆ ಒಳ್ಳೇ ಕೆಲಸ ಸಿಕ್ಕು ಹಣ ಸಂಪಾದಿಸೋಕ್ಕೆ ಇಂಗ್ಲೀಷ್ ಅಲ್ಲವೇ ಮುಖ್ಯ. ಅದನ್ನು ಕಲಿತರಾಯಿತು. ಕನ್ನಡ ಕಟ್ಕೊಂಡು ನಮಗೇನು ಅಂತ ತಾತ್ಸಾರ ನಮ್ಮ ಯುವ ಜನರಿಗೆ.

ಕನ್ನಡ ಉಧ್ಧಾರ ಮಾಡೋದಕ್ಕೇ ಸಾಕಷ್ಟು ಬೇರೆ ಕೆಲಸವಿಲ್ಲದ ಜನ ಇದ್ದಾರೆ. ಅವ್ರು ಮಾಡಲಿ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಇತ್ಯಾದಿಗಳನ್ನ. ಕನ್ನಡದ ನಾಮ ಫಲಕ ಬೇಕೆ? ಹಾಕಿದ್ರಾಯ್ತು. ಕೆಳಗೆ ಇಂಗ್ಲೀಷ್ನಲ್ಲಂತೂ ಇರುತ್ತಲ್ಲ. ಹೋಟೆಲ್‍ಗಳಲ್ಲಿ ತಿಂಡಿ ಪಟ್ಟಿ ಕನ್ನಡದಲ್ಲಿ ಬೇಕೆ? ಪ್ರಿಂಟ್ ಮಾಡಿಸಿ ಕೊಟ್ಟರಾಯ್ತು ಬಿಡಿ. ಟೀ ಶರ್ಟ್ ಹಾಕ್ಕೋಬೇಕೆ? ಅದೂ ಮಾಡೋಣ ಬಿಡಿ.
ಇನ್ನಾದ್ರೂ ನಮ್ಮನ್ನ ನಮ್ ಪಾಡಿಗೆ ಬಿಡ್ತೀರಾ ಅಂತ ಕೇಳ್ತಾರೆ ಈಗಿನ ಹುಡುಗ್ರು.

“ಟೈಮ್ಸ್” ಓದೋ ಬೆಂಗಳೂರು, “ವಿಜಯಕರ್ನಾಟಕ” ಓದೋ ಬೆಂಗಳೂರುಗಳು ಪೂರ್ತಿ ಭಿನ್ನ. ಅಲ್ಲಿರೋರು ಇಲ್ಲಿಲ್ಲ. ಇಲ್ಲಿರೋರು ಅಲ್ಲಿಲ್ಲ. ನಾವುಗಳು ನಮ್ಮ ಪ್ರಪಂಚದಲ್ಲಿದ್ದುಕೊಂಡು ಕನ್ನಡ ಕನ್ನಡ ಅಂತ ಎಷ್ಟು ಶಂಖ ಹೊಡಕೊಂಡರೂ ಅದನ್ನ ಕೇಳಬೇಕಾದ ಜನಗಳಿರುವ ಪ್ರಪಂಚಕ್ಕೆ ತಲುಪೋಲ್ಲ. ಬರಿಯ ಅರಣ್ಯರೋದನ ನಮ್ಮದು!

ಅಂದ ಹಾಗೇ, ನಿಮ್ಮ “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆ “ಲೀಡ್ ಇಂಡಿಯಾ” ಎಂಬ ಸ್ಪರ್ಧೆ ನಡೆಸುತ್ತಿದೆ. ಇದರ ಉದ್ದೇಶ್ಯ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಲು ಸಿದ್ಧರಿರುವ ಯುವ ಪೀಳಿಗೆಯ ಸ್ಫೂರ್ತಿವೆತ್ತ ಧುರೀಣರನ್ನು ಗುರುತಿಸುವುದು. ಹೀಗೆ ಬೆಂಗಳೂರನ್ನು ಪ್ರತಿನಿಧಿಸಲು ಆಯ್ಕೆಯಾದವರು ಒಬ್ಬರು ಉತ್ತರ ಭಾರತೀಯರು. ವಿಜಯಕರ್ನಾಟಕ ಏಕೆ ಈ ಸ್ಪರ್ಧೆಯ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ? ಅದೇಕೆ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಕನ್ನಡದ ಯುವ ಜನಾಂಗ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿ ಎಂದು ಹುರಿದುಂಬಿಸಲಿಲ್ಲ? ನಮ್ಮ ಕನ್ನಡದ ಯುವಕರಿಗೆ ಹುಮ್ಮಸ್ಸಿಲ್ಲವೇ? ಉತ್ಸಾಹವಿಲ್ಲವೇ?"

ಇದಕ್ಕೆ ಅವರ ಉತ್ತರ ಇನ್ನೂ ಸಿಕ್ಕಿಲ್ಲ.

ಈ ನಡುವೆ ವಿ. ಕ. ದಲ್ಲಿನ ಜಾಹೀರಾತುಗಳನ್ನು ನೋಡಿದ್ದೀರಾ. ಮುಕ್ಕಾಲು ಮೂರು ಪಾಲು ಜಾಹೀರಾತುಗಳೆಲ್ಲ ಇಂಗ್ಲೀಷ್ ಭಾಷೆಯದೇ. ಅದೇಕೆ ಅನುವಾದ ಮಾಡೋಕೆ ಒತ್ತಾಯಿಸಲಿಲ್ಲ? ಪಾಪ ಯಾರೋ ಇಂಗ್ಲ್ಲೀಷ್ ಲೇಖನ ಕೊಟ್ಟವರ ಮೇಲೆ ಆ ಹುಡುಗಿ ಮುಂದೆ ಹಾರಿ ಹಾಯ್ದು ಹೀರೋ ಅನ್ನಿಸಿಕೊಂಡ್ರಲ್ಲಾ. ಇಲ್ಲೇಕೆ ಮಾಡೋಲ್ಲ? ಯಾಕೇಂದ್ರೆ ಅವರ "commercial Interests" ಪ್ರಧಾನವಲ್ಲವೇ?

ಹಾಗೇನೇ ಬೆಂಗಳೂರಿನಲ್ಲಿ ಇರೋ ಕನ್ನಡದವರು ಕನ್ನಡದ ಬಗ್ಗೆ ತೋರಿಸೋ ಕಾಳಜಿ ಕೂಡ.

ಇನ್ನು ಅವರ ರಾಜ್ಯೋತ್ಸವದ ಬಗ್ಗೆ ಪ್ರಕಟಿಸಿದ ಕನ್ನಡಪರ ಲೇಖನಗಳದೆಷ್ಟು ಉನ್ನತ ಮಟ್ಟದ್ದಾಗಿತ್ತು ಅನ್ನೋದನ್ನು ಓದುಗರೇ ನಿರ್ಧರಿಸಬೇಕು.

ಬರೀ ಕನ್ನಡ ಮಾತಾಡಿಬಿಟ್ರೆ ಕನ್ನಡಿಗರ ಅಭಿವೃಧ್ಧಿ ಆಗುತ್ತೆ ಅಂದುಕೊಳ್ಳೋದು ಮೂರ್ಖತನ. ಪರಭಾಷೀಯರು ನಮ್ಮಲ್ಲಿ ಜಾಸ್ತಿ ಬೆರೆತು ನಮ್ಮನ್ನು ಮತ್ತು ನಮ್ಮ ಸಂಸ್ಕೃತಿ ಗೌರವಿಸುವ ಹಾಗೆ ಪ್ರೇರೇಪಿಸಲು ಏನು ಮಾಡಬೇಕು ಅಂತ ಯೋಚಿಸುವುದು ಮುಖ್ಯ. ಅವರನ್ನು ಹಂಗಿಸೋದು,ಕಡ್ಡಾಯ ಮಾಡೋದು, ಪ್ರತಿಭಟಿಸೋದು ಇವೆಲ್ಲ ಉಪಯೋಗವಿಲ್ಲದ ಕೆಲಸ.

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 1:08pm — kpbolumbu

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

kpbolumbu's picture

ವೈಭವ,

ಎರಡು ಹಿ೦ದಿಯ ಪದಗಳನ್ನು ಬಳಸಿದ್ದರಿ೦ದಾಗಿ ಕನ್ನಡಕ್ಕೇನೂ ಕೊರತೆಯಾಗಲಿಲ್ಲ. ನಮ್ಮಲ್ಲಿ ಹಿ೦ದಿ ಸೇರಿಸಿ ಮಾತಾಡುವವರು ಇಲ್ಲದ೦ತಾಗುವವರೆಗೂ ಅದು ಇಬ್ಬಂದಿತನವಲ್ಲ. 'ಸ್ಪರ್ಶ' ಚಿತ್ರದಲ್ಲಿ ಸಿಹಿಕಹಿ ಚ೦ದ್ರು ಹಿ೦ದಿ ಬೆರೆಸಿ ಮಾತಾಡುವಾಗ ಕಿರಿಕಿರಿಯಾಗಲಿಲ್ಲವೇ?
ಕನ್ನಡದಲ್ಲಿ ಇತರ ನುಡಿಗಳಿ೦ದ ಅನುವಾದಗೊಳ್ಳದ ಧಾರಾವಾಹಿಗಳನ್ನು ಪ್ರಕಟಿಸುವ ಒ೦ದೇ ಒ೦ದು ಮ್ಯಾಗಝಿನ್ ನಾನು ಕ೦ಡ೦ತೆ ಇಲ್ಲ. ಗೊತ್ತಿದ್ದವರು ತೋರಿಸಿಕೊಡಿ.

ಇತ್ತೀಚೆಗೆ ಟಿವಿಯಲ್ಲಿ ಮಲೆಯಾಳದ ನಿರ್ದೇಶಕ ಪ್ರಿಯದರ್ಶನ್‍ರ ಸ೦ದರ್ಶನ ಪ್ರಸಾರವಾಗುತ್ತಿತ್ತು.(ಮಲೆಯಾಳದ ಅತ್ಯುತ್ತಮ ನಿರ್ದೇಶಕ ಪ್ರಿಯದರ್ಶನ್‍, ಹಿ೦ದಿಯಲ್ಲೂ ಮನ್ನಣೆ ಗಳಿಸಿದ್ದಾರೆ. ಹಿ೦ದಿಯಲ್ಲಿ ಭೂಲ್‍ಭುಲಯ್ಯಾ ಸೇರಿದ೦ತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.) ಇ೦ಗ್ಲಿಷ್ ಬೆರೆಸಿದ ಮಲೆಯಾಳದಲ್ಲೇ ಮಾತಾಡುತ್ತಿದ್ದರು. ನಿರೂಪಕಿಯೂ ಚೆನ್ನಾಗಿ ಇ೦ಗ್ಲಿಷ್ ಮಾತಾಡುತ್ತಿದ್ದರು. ಮಾತಿನ ನಡುವೆ ನಿರೂಪಕಿ ಕೇಳಿದರು, 'ನೀವು ಅವರಿಗೆ ಯಾವ ಭಾಷೆಯಲ್ಲಿ ವಿವರಿಸುತ್ತೀರಿ' ಅ೦ತ. ಅವರ ಉತ್ತರ 'ಮಲೆಯಾಳದಲ್ಲಿ'. ಅ೦ದರೆ ಮಲೆಯಾಳಿಯೊಬ್ಬ ಯಾವುದೇ ನುಡಿಯನ್ನಾಡಿದರೂ ಅವರಿಗೆ ಅದು ಮಲೆಯಾಳವೇ.

ನವರತ್ನ ಸರ್,
ಪರಭಾಷೀಯರು ನಮ್ಮಲ್ಲಿ ಜಾಸ್ತಿ ಬೆರೆತು ನಮ್ಮನ್ನು ಮತ್ತು ನಮ್ಮ ಸಂಸ್ಕೃತಿ ಗೌರವಿಸುವ ಹಾಗೆ ಪ್ರೇರೇಪಿಸಲು ಏನು ಮಾಡಬೇಕು ಅಂತ ಯೋಚಿಸಿದರೆ ಮೊದಲನೆಯದಾಗಿ ನಮ್ಮದರ ಬಗೆಗೆ ಅಕ್ಕರೆಯಿರಬೇಕು. ನಮ್ಮಲ್ಲಿ ಅದು ಇಲ್ಲದಿದ್ದಾಗ ಇನ್ನೊಬ್ಬರನ್ನು ಒತ್ತಾಯಿಸುವುದಲ್ಲ. ನನಗೆ ಬೆ೦ಗಳೂರಿನಲ್ಲಿ ಸಿಗುವ ಸ್ಥಾನ ಒಬ್ಬ ಮಲೆಯಾಳಿಯದ್ದೇ. 'ನಿನ್ ಚಹರೇನೇ ಹ೦ಗಿದೆಯಲ್ಲೋ', 'ಕಾಸರಗೋಡು ಕೇರಳ ಅಲ್ವಾ ಗುರು', 'ನಿಮ್ ರಾಜ್ಯದ್ ಭಾಷೇನ ನೀವು ಮೊದ್ಲು ಗೌರವಿಸ್ಬೇಕು', 'ಕರ್ನಾಟಕದಲ್ಲಿ ಹುಟ್ಟಿರೋರು ಮಾತ್ರ ಕನ್ನಡಿಗರು', 'ಕನ್ನಡ ಹೆ೦ಗ್ ಬರುತ್ತೆ', 'ಕಾಸರಗೋಡಿನಲ್ಲಿ ಕನ್ನಡವನ್ನ ಯಾರು ಮಾತಾಡುತ್ತಾರೋ...ನಾನ೦ತೂ ನೋಡಿಲ್ಲಪ್ಪ!' ಇ೦ತಹ ಕಮೆ೦ಟುಗಳನ್ನು ಕನಿಷ್ಠ ಐನೂರು ಬಾರಿಯಾದರೂ ಬೆ೦ಗಳೂರಿನಲ್ಲಿ ಕೇಳಿದ್ದೇನೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 6:36pm — Khavi

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

Khavi's picture

ರೀ ಬೋಳುಂಬು ಮಲೆಯಾಳಿಗಳೆ ( Smiling ತಮಾಷೆಗೆ... )
ನಿಮ್ಮ ಮನಸ್ಸಿನಲ್ಲಿ ಅದೆಷ್ಟು.. ಕಾಸರಗೋಡು ಕನ್ನಡದ ಬುಗ್ಗೆ ಕುದಿತಿದೆಯಂತ ಅರಿವಾಗ್ತಿದೆ ನನಗೆ..
ಕರ್ನಾಟಕದ ಸುಮಾರು 15% ದಿಂದ 20% ಸಾಹಿತಿಗಳು ಕಾಸರಗೋಡಿನಲ್ಲಿದ್ದಾರೆ ಅಂತ ಕೇಳಿದ್ದೆ..
ಗೋವಿಂದ ಪೈಗಳು ಕಾಸರಗೋಡನ್ನು ಕನ್ನಡಕ್ಕೆ ಸೇರಿಸಬೇಕು ಅಂತ ಅದೆಷ್ಟು ಹೆಣಗಾಡಿದರು... ಪಾಪ ಅವರು ಇರೋವರೆಗೂ ಅದಾಗಲೆ ಇಲ್ಲ.
ನನಗೂ ತುಂಬಾ ಬೇಜಾರು... ಆದರೆ ಹೀಗೆ ಖುಷಿ ಪಡ್ತೀನಿ. ಏನೆಂದರೆ.. ಪಕ್ಕದ ರಾಜ್ಯದಲ್ಲೊಂದು ಜಿಲ್ಲೆಯಲ್ಲಿ ಕನ್ನಡದ ಪೆಂಪು ಇದೆ.. ಕಂಪೂ ಇದೆ ಅಂತ... ಮುಂದೊಂದು ದಿನ ಸೇರುತ್ತೆ ಅಂತ ಆಸೆ ಇದೆ ನನ್ನಲ್ಲಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2007 - 6:38pm — ವೈಭವ

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

ವೈಭವ's picture

ಅಣ್ಣ,

ಎರಡು ಪದ ಅಂತ ಅಲ್ಲ. ಒಂದು 'ಸಮಸ್ತ ಕನ್ನಡಿಗರ ಹೆಮ್ಮೆ' ಸುದ್ದಿಯೋಲೆಯಲ್ಲಿ ತಲೆಬರಹ ತೀರ ಹಿಂದಿಯಲ್ಲೇ ಇರಬೇಕ? ಎಲ್ಲೊ ಒಂದು ಕಡೆ ಇದ್ದಿದ್ದರೆ ನಾನು ಹೇಳುತ್ತಿರಲಿಲ್ಲ. ಒಂದು ತಲೆಬರಹದ ತೀರ ಬರೀ ಹಿಂದಿನೇ ಇದೆ. ಮತ್ತೆ ಯಾಕೆ ಹಿಂದಿನ ದಿನವೇ ಎಲ್ಲರೂ ಕನ್ನಡದಲ್ಲೇ ಮಾತಾಡಬೇಕು ಅವರು ಅಪ್ಪಣೆಯಿತ್ತರು. ಅದಕ್ಕೆ ಇಬ್ಬಂದಿತನವೆಂದೇ ಆಟೇ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 9, 2007 - 3:37pm — ismail

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

ismail's picture

ಚರ್ಚೆಯಲ್ಲಿ ಇಷ್ಟೊಂದು ತರಕಾರಿ ತುಂಬಿದರೆ ಹೇಗೇ? ಸ್ವಲ್ಪ ನಮ್ಮ ತರಹದವರ ಬಗ್ಗೆಯೂ ಯೋಚನೆ ಮಾಡಿ. ಕುರಿ ಬಾಡು, ಹಂದಿ ಬಾಡು, ಕೋಳಿ ತಿನ್ನುವವರೂ ಇದ್ದೀವಲ್ಲ. ಹುರುಕುಲು, ಎಸರು ಎಂಬ ಎರಡು ಪದದೊಳಗೇ ಬಾಡೂಟದ ಎಲ್ಲಾ ವಿಭವಗಳನ್ನೂ ವರ್ಣಿಸುವ ಸ್ಥಿತಿಯಲ್ಲಿ ನಾವಿದ್ದೀವಿ. ಹೆಚ್ಚಿನದು ಬೇಕೆಂದರೆ ಕಬಾಬ್, ಖೈಮಾ ಅಂತಾ ಉರ್ದುವಿಗೆ ಇಲ್ಲದಿದ್ದರೆ ಫ್ಱೈ, ಡ್ರೈ ಅಂತ ಇಂಗ್ಲಿಷಿಗೆ ಹೋಗಲೇ ಬೇಕಾದ ಸ್ಥಿತಿ ಸ್ವಾಮಿ ನಮ್ಮದು :) 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 9, 2007 - 5:55pm — kpbolumbu

ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

kpbolumbu's picture

ಶ್ರೀ ಇಸ್ಮಾಯಿಲ್,
ಇಲ್ಲಿ ಸಾಧ್ಯವಾದರೆ ಕನ್ನಡದ ಬಗೆಗೆ ಹೋರಾಟವನ್ನೋ ಹಾರಾಟವನ್ನೋ ಮಾಡಿ.ಕೂಟಿನ ಬಗೆಗಿನ ಚರ್ಚೆ ಇನ್ನೊ೦ದು ಎಳೆಯಲ್ಲಿ ಮು೦ದುವರಿದಿದೆ. )
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
  • ಇಂದಿನ ನ್ಯೂಸ್ ರೌಂಡ್ ಅಪ್
  • ಸುದ್ದಿ - ಸೊಗಡು
  • ಕನ್ನಡವೂ ಬಾರತದ ತುಂಬೆಲ್ಲಾ ಚಾಪು ಹಾಕಿದೆ
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
Syndicate content

ಲೇಖಕರು

kpbolumbu's picture

ಪೂರ್ಣ ಹೆಸರು
ಬೊಳುಂಬು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator