Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ನಮ್ಮ ನಿಜವಾದ ಶತೃ ಯಾರು?

November 10, 2007 - 12:55am — Pradyumna Belavadi

ಭಾರತ-ಅಮೆರಿಕದೊಡಗಿನ ಪರಮಾಣು ಸಂಧಾನ ಯತ್ನಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಅದರಲ್ಲಿ, ಸ್ವಯಂ ಘೋಷಿತ ಬಡವರ ಬಂಧು ಎಡರಂಗ ಮತ್ತು ಹಿಂದೂ ಉದ್ಧಾರಕ ಭಾರತೀಯ ಜನತಾ ಪಕ್ಷಗಳ ಮಾತು ಕೇಳಿ ಬರುತ್ತಿವೆ.

ಬಿಜೆಪಿಗೆ ಇದೊಂದು ಸಂಧಿಗ್ಧ ಪರಿಸ್ಥಿತಿ. ಅಧಿಕಾರದಲ್ಲಿದ್ದಾಗ ತಾವೇ ಶುರು ಮಾಡಿದ ಕಾರ್ಯವನ್ನು ವಿರೋಧಿಸಲು ಸಾಕಷ್ಟು ಒದ್ದಾಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಅವರ ಮಾತುಗಳು ಕೇವಲ ವಿರೋಧ ಪಕ್ಷದ ದುರ್ಬಲ ಅನಿಸಿಕೆಗಳಾಗಿ ಕಂಡು ಬರುತ್ತಿದೆ. ಮತ್ತೆ, ಅವರ ಮಾತುಗಳನ್ನು ಯಾರೂ ಹೆಚ್ಚು ಗಂಭೀರವಾಗಿ ಕೂಡ ತೆಗೆದುಕೊಳ್ಳುತ್ತಿಲ್ಲ. ನನಗೆ ಅನ್ನಿಸುವ ಹಾಗೆ, ಬಿಜೆಪಿಯ ಉದ್ದೇಶ UPA ಮತ್ತು ಎಡರಂಗಗಳ ಮಧ್ಯೆ ಒಡಕನ್ನುಂಟು ಮಾಡುವುದೇ ಆಗಿದೆ.

ಆದರೆ ವಿರೋಧದ ಮುಂಚೂಣಿಯಲ್ಲಿರುವ ಎಡರಂಗ ಈ ವಿಷಯವನ್ನು ಕೇವಲ ತತ್ವ ಬದ್ಧ ಕಾರಣಗಳಿಗಾಗಿ ಮಾತ್ರವಲ್ಲದೆ, UPA ಸರ್ಕಾರವನ್ನು ಹದ್ದಿನಲ್ಲಿಡುವ ತರ್ಕ ಬದ್ಧ ಕಾರಣಗಳೇ ಮುಖ್ಯವಾಗಿದೆ. ದೇಶದ 'ಹಿತ'ದೃಷ್ಟಿಯಿಂದ ಈ ಸಂಧಾನವನ್ನು ವಿರೋಧಿಸುತ್ತಿರುವುದಾಗಿ ಹೇಳುತ್ತಿರುವ ಎಡರಂಗದ ಮಾತು ಹಾಸ್ಯಾಸ್ಪದ ಎನಿಸುತ್ತಿದೆ. ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ.

ಪರಮಾಣು ಸಂಧಾನದ ಬಗ್ಗೆ ಅವರಿಗೆ ಏಕೆ ವಿರೋಧವೆಂದು ಖುದ್ದು ಅವರಿಗೇ ಗೊತ್ತಿಲ್ಲ. ಇದು ಅಮೆರಿಕದೊಡಗಿನ ವ್ಯವಹಾರವಾದ್ಧರಿಂದ ತಮಗೆ ವಿರೋಧಿಸುವ ಜನ್ಮ ಸಿದ್ಧ ಹಕ್ಕನ್ನು ಚಲಾಯಿಸುತ್ತಿದ್ದಾರೆ. ದೇಶದ ಬಗ್ಗೆ ಕಳಕಳಿ ಇರುವವರು, ಏರುತ್ತಿರುವ ನಿತ್ಯ ವಸ್ತುಗಳ ಬೆಲೆಯ ಬಗ್ಗೆ, ಹೆಚ್ಚುತ್ತಿರುವ ಉಗ್ರರ ಚಟುವಟಿಕೆ ಬಗ್ಗೆ, ಬಂಗ್ಲಾ ದೇಶದಿಂದ ನುಸುಳುತ್ತಿರುವ ಮುಸ್ಲಿಮರ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ?

ಬ್ರಿಟಿಶರ ಜೊತೆ ಕೈಗೂಡಿದವರು, ಚೀನಿಯರು ನಮ್ಮ ಮೇಲೆ ದಾಳಿ ಮಾಡಿದಾಗ ನಮ್ಮ ದೇಶದ ಹಿತವನ್ನು ಮಾರಿದವರು ಹೇಗೆ ದೇಶದ ಬಗ್ಗೆ ಯೋಚಿಸಲು ಸಾಧ್ಯ? ನೀವೆ ನೋಡಿ. ಕಾಶ್ಮೀರದಲ್ಲಿ ೧೫ ವರ್ಷದಿಂದ ಉಗ್ರರು ನಮ್ಮ ಮೇಲೆ ಹೋರಾಡುತ್ತಿದ್ದಾರೆ. ಒಮ್ಮೆಯಾದರೂ, ಎಡರಂಗದ ಯಾವುದೇ ಹೈದ ಉಗ್ರರನ್ನು ವಿರೋಧಿಸಿದ್ದಾನ. ಅಲ್ಲಿನ ಹಿಂದೂಗಳ ಮಾರಣ ಹೋಮ ನಡೆಯುತ್ತಿರುವಾಗ, ಅವರ ಬಗ್ಗೆ ಒಬ್ಬ 'ಎಡವಿ' ಕೂಡ ಬಾಯಿ ಬಿಟ್ಟಿದ್ದಾನ?

ವರ್ಷಕ್ಕೆ ಮೂರು ಬಾರಿ ಇವರು ಏಕೆ ಚೀನಾದಲ್ಲಿ ಕೂತು ಕೆಂಪು ಛಾಪಿನ ನಾಯಕರೊಡನೆ ಮಾತನಾಡಿ ಬರುತ್ತಾರೆ?ಮಲೇಶಿಯಾ, ಪಾಕಿಸ್ತಾನ ದೇಶಗಳು ತಮ್ಮ ದೇಶೀಯರಿಗೆ ಗುರುತು ಚೀಟಿ ಕೊಟ್ಟಿರುವಾಗ ನಮ್ಮಲ್ಲಿ ಅದೇ ಮಾಡಲು ಹೊರಟರೆ ಇವರಿಗೆ ಏಕೆ ಉರಿಯುತ್ತದೆ? ಚೀನದಲ್ಲಿ, ರಶಿಯಾದಲ್ಲಿ Uniform Civil Code ಇರುವಾಗ, ನಾವ್ಯಾಕೆ ಇಲ್ಲಿ ಆ ಕಾನೂನನ್ನು ತರಬಾರದು?

ಇದೆಲ್ಲ ಯೋಚಿಸಿದಾಗ ಎಡರಂಗದ ಢೋಂಗಿತನ ಗೊತ್ತಾಗುತ್ತದೆ? ಇವರಿಗೆ ಯಾವ ಪ್ರಜಾಪ್ರಭುತ್ವ ಇರುವ ದೇಶದಲ್ಲೂ ಬಹುಸಂಖ್ಯಾತ ಜನರ ಯಾವುದೂ ಸರಿ ಹೋಗಲ್ಲ. ಕಾರಣ? ಬಹುಸಂಖ್ಯಾತರಿಂದ ಇವರ ಬೇಳೆ ಬೇಯುವುದಿಲ್ಲ. ಅಲ್ಲಿ ಬಹುಸಂಖ್ಯಾತರು ಪ್ರಜಾಪ್ರಭುತ್ವವನ್ನು ನಂಬಿ ನಡೆಸುತ್ತಿರುತ್ತಾರೆ. ಅಲ್ಪಸಂಖ್ಯಾತರನ್ನು ತಮ್ಮ ಕಡೆ ಸೆಳೆಯಲು ಸುಲಭೋಪಾಯ ಅಂದರೆ ಅವರನ್ನು ಬಹುಸಂಖ್ಯಾತರ ವಿರೋಧಿಗಳನ್ನಾಗಿಸುವುದು. ಅದಕ್ಕೆ ಅವರಲ್ಲಿ ಸಂಶಯವನ್ನುಂಟು ಮಾಡುವುದು. ಅದಕ್ಕೆ ಬೇಕಾದ ಕಿಡಿ ಹತ್ತಿಸಲು ಮೊದಲು ಅವರನ್ನು ಹೆದರಿಸುವುದು-'ನಿಮ್ಮ ಗುಂಪು ಅಪಾಯದ ಸ್ಥಿತಿಯಲ್ಲಿದೆ; ಇನ್ನೇನು ಬಹುಸಂಖ್ಯಾತರು ಬಂದು ನಿಮ್ಮನ್ನು ಮುಗಿಸುತ್ತಾರೆ'. ಯಾವಾಗ ಕಿಡಿ ಹತ್ತುವುದೋ ಆಮೇಲೆ ತುಪ್ಪ ಹಾಕುವುದು; 'ಬಹುಸಂಖ್ಯಾತರು ಏನು ಮಾಡಿದರೂ ವಿರೋಧಿಸಿ; ನಿಮ್ಮ ಹಿಂದೆ ನಾವಿದ್ದೇವೆ'.

ಸಹಜವಾಗಿ ಇದು ಅಲ್ಪಸಂಖ್ಯಾತರನ್ನು ಇನ್ನಷ್ಟು ಹುರುದುಂಬಿಸುತ್ತದೆ. ಅವರ ಅಪನಂಬಿಕೆಗೆ 'ಎಡವಿ'ಗಳು ಸರಿಯಾಗಿ ಗಾಳಿ ಹಾಕುತ್ತ ಹೋಗುತ್ತಾರೆ.

ಆಮೆರಿಕದ ಈ ಸಂಧಾನವನ್ನು ವಿರೋಧಿಸುತ್ತಿರುವುದು, ಎಡವಿಗಳ ಕಾರ್ಯಕ್ರಮದ ಅನುಸಾರವಾಗಿಯೇ! ಹೇಗೂ ಅಮೆರಿಕನ್ನರು ಇರಾಕನ್ನು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ; ಅದನ್ನು ಧರ್ಮ ವಿರೋಧಿ ಕಾರ್ಯ ಎಂದು ಆಗಲೆ ಪಟ್ಟಿ ಮಾಡಿಯಾಗಿದೆ; ಭಾರತದಂತಹ ದೇಶದ ಅಲ್ಪಸಂಖ್ಯಾತರನ್ನು ಮತ್ತಷ್ಟು ಎತ್ತಿಕಟ್ಟುವುದಕ್ಕೆ ಈ ಪರಮಾಣು ಸಂಧಾನ ಅನುಕೂಲವಾಗಿದೆ. ಅಲ್ಪಸಂಖ್ಯಾತರಿಗೆ ಸರಿಯಾದ ಹೆದರಿಕೆ ತಂದಿದ್ದಾರೆ - 'ಅಮೆರಿಕವನ್ನು ಭಾರತದೊಡನೆ ಬಿಟ್ಟರೆ ಅದು ಅಲ್ಪಸಂಖ್ಯಾತರಿಗೆ ಘಾತಕವಾಗುತ್ತದೆ. ಈಗ ನಾವು ನಿಮ್ಮ ಪರವಾಗಿ ವಿರೋಧಿಸುತ್ತೇವೆ. ನೀವು ನಿಮ್ಮ ಜನರ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ಕೊಡಿ; ಸರ್ಕಾರ ಮುಂಬರುವ ಚುನಾವಣೆಗೋಸ್ಕರ ನಿಮ್ಮ ಮಾತು ಕೇಳುತ್ತಾರೆ'.

ಈ ಚಿತಾವಣಿ ಕೆಲಸ ಮಾಡಿದೆ. ಸರ್ಕಾರ ಸಂಧಾನವನ್ನು ಹಿಂದಕ್ಕಿಟ್ಟಿದೆ. ಮನಮೋಹನ ಸಿಂಹರಂತಹ ಪ್ರಧಾನಿ ಕೂಡ ಇವರ ಬಗ್ಗು ಬಡಿತಕ್ಕೆ ಶರಣಾಗಿದ್ದಾರೆ. ದೇಶದ ಪ್ರತಿಯೊಬ್ಬ ಪತ್ರಿಕೆಯೂ ಈ ವಿರೋಧವನ್ನು ಟೀಕಿಸಿದೆ. ಜನ ಸಾಮಾನ್ಯರಿಗೆ ಈ ಸಂಧಾನ ಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ಪರಮಾಣು ಇಂಧನ ನಮ್ಮ ದೇಶಕ್ಕೆ ಅತ್ಯಗತ್ಯ ಎಂದು ಎಲ್ಲರಿಗೂ ಗೊತ್ತಿದೆ.

ಇಂಥಹ ಸಂಧರ್ಭದಲ್ಲಿ ನನ್ನ ಅನಿಸಿಕೆ ಸರಿಯೋ ತಪ್ಪೋ ಹೇಗೆ ನೀವೇ ಹೇಳಿ.

‹ ನಿತ್ಯೋತ್ಸವ ಕವಿ ನಿಸಾರರ ಹಾಡುಗಳಿಗೆ ಬಹಿಷ್ಕಾರ ಹೊಗೇನಕಲ್ನ ಸಡಿಲಿಸಿದ ತ.ನಾ ›
  • ರಾಜಕೀಯ
Ornamental seperator
  • Login or register to post comments
  • 531 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 11, 2007 - 6:55pm — skakkilaya

ಉ: ನಮ್ಮ ನಿಜವಾದ ಶತೃ ಯಾರು?

skakkilaya's picture

ಸ್ವಾಮಿ, ಅಮೆರಿಕದೊಂದಿಗಿನ ಪರಮಾಣು ಒಪ್ಪಂದವನ್ನು ಎಡಪಂಥೀಯರು ಯಾಕೆ ವಿರೋಧಿಸುತ್ತಿದ್ದಾರೆಂದು ಅದರ ಆರಂಭದಿಂದಲೂ ಎಡಪಕ್ಷಗಳು ನೀಡಿರುವ ಸವಿವರವಾದ ಹೇಳಿಕೆಗಳಾವುವೂ ನಿಮ್ಮ ಗಮನಕ್ಕೆ ಬಂದಂತೆ ಅನಿಸುವುದಿಲ್ಲ. ಅವನ್ನು ಸ್ವಲ್ಪ ನೀವು ಓದುವುದು ಒಳ್ಳೆಯದು.

ಇನ್ನು ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ ಎಂಬ ನಿಮ್ಮ ಬರಹವನ್ನು ನೋಡಿ ನಗುಬಂತು. ಹಾಗಂದರೇನು? ಕಾರ್ಮಿಕರ, ರೈತರ ಪರವಾಗಿ ಕೂಗಾಡುವುದು ದೇಶದ ಮೇಲಿನ ಕಳಕಳಿಯಲ್ಲವೇ? ನಿಮ್ಮ ಕಲ್ಪನೆಯಲ್ಲಿ ದೇಶ ಎಂದರೆ ಏನು?
ಡಾ| ಶ್ರೀನಿವಾಸ ಕಕ್ಕಿಲ್ಲಾಯ

  • Login or register to post comments
  • link
  • Email this ಪ್ರತಿಕ್ರಿಯೆ
November 12, 2007 - 11:17am — roshan_netla

ಉ: ನಮ್ಮ ನಿಜವಾದ ಶತೃ ಯಾರು?

roshan_netla's picture

ಎಡಪಂಥಿಯರು ರೈತರ, ಕಾರ್ಮಿಕರ ಬಗ್ಗೆ ಕೂಗಾಡಿರುವುದು ಮಾತ್ರ ಅದರಿಂದ ಲಾಭಆಗಿಲ್ಲ, ಏಕೆಂದರೆ ಅವರದು ದ್ವಂದ್ವನೀತಿ ಕೇರ್‍ಅಳದಲ್ಲಿ ಮತ್ತು ಪ.ಬಂಗಾಳದಲ್ಲಿ ಕಾಂಗ್ರೆಸ್ಸನ್ನು ವಿರ್‍ಒದಿಸುವುದು ಮತ್ತು ಕೇಂದ್ರದಲ್ಲಿ ಬೆಂಬಲಿಸುವುದು, ಅವರ ಏಕೈಕ ಉದ್ದೇಶ ಬಜಾಪವನ್ನು ಅಧಿಕಾರದಿಂದ ದೂರ ಇಡುವುದು, ಅದ್ದಕ್ಕಾಗಿ ನಾಳೆ ಅವರು ಭಯೊತ್ಪಾದಕ ಸಂಘಟಣೆಗಳು,ಗೂಂಡಾಗಳು ಸೇರಿ ಒಂದು ಪಕ್ಷಮಾಡಿದರೆ ಅದ್ದನ್ನು ಬೆಂಬಲಿಸಿದರೆ ವಿಷೆಶವಿಲ್ಲ.
ಅಣು ಒಪ್ಪಂದ ನೀವು ಹೇಳಿದಸ್ಟು ಸುಲಭವಾಗಿದ್ದರೆ ತೊಂದರೆ ಇಲ್ಲ ಪತ್ರಿಕೆಯವರಿಗು ಕೂಡ ಒಪ್ಪಂದದಲ್ಲಿ ಯೆನಿದೆ ಅನ್ನೋದನ್ನು ನಮ್ಮ ಕೇಂದ್ರಸರಕಾರ ಹೇಳಲಿಲ್ಲ, ಅದರ ಬಗ್ಗೆ ಆರೊಗ್ಯವಂತ ಚರ್ಚೆ ಕೂಡ ನಡಿಲಿಲ್ಲ, ಯೆಲ್ಲ ಪಕ್ಷದವರು ಅವರ ಭವಿಷ್ಯದ (ಮತದ)ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ ಹೊರತು ಅದರ ನಿಜವಾದ ಸಾದಕ ಬಾದಕಗಳ್ಳನ್ನು ಜನರ ಯೆದುರಿಗೆ ಇಟ್ಟಿಲ್ಲ(ಮನಮೋಹನ ಸಿಂಗರನ್ನು ಸೇರಿಸಿ).

  • Login or register to post comments
  • link
  • Email this ಪ್ರತಿಕ್ರಿಯೆ
November 16, 2007 - 7:23pm — kishorpatwardhan

ಉ: ನಮ್ಮ ನಿಜವಾದ ಶತೃ ಯಾರು?

kishorpatwardhan's picture

ಶತೃ ಅಲ್ಲ ಸ್ವಾಮೀ, ಅದು ಶತ್ರು ಎಂದಾಗಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅವಕಾಶವಾದಿ ಅಮೆರಿಕಾ
  • ಪ್ರಧಾನಿಯ ದಿಟ್ಟಹೆಜ್ಜೆ
  • ಗಾಂಧಿ ನೆನಪು -೧
  • ಚಿಂತಕರ selective criticism
  • ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!
Syndicate content

ಲೇಖಕರು

Pradyumna Belavadi's picture

ಪರಿಚಯ

ಕಲಿಯೋದೆ ಕೋಟಿ ಭಾಷೆ, ಆಡೋದೆ ಓಂದೇ ಭಾಷೆ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator