ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

November 21, 2007 - 12:05pm — ರಘುನಂದನ

ಮೋಜಿಲ್ಲ ಬೆಂಕಿತೋಳದ ೨.೦.೦೯ ಈ ಆವೃತ್ತಿಯಲ್ಲಿ ಕನ್ನಡ ಕಚಪಚ ಅಂತ ಬರ್ತಿದೆ. ಇದು ಹಿಂದಿಗೂ ಇರುವ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಸಾಧನವನ್ನೇನಾದರೂ ಹಾಕಿಕೊಳ್ಳಬೇಕೆ ಹೆಂಗೆ?

‹ ಉಬುಂಟು ವಿತರಣೆಯ ಹೊಸ ಆವೃತ್ತಿ ಲಭ್ಯ ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ? ›
  • ತಂತ್ರಜ್ಞಾನ
~.~
  • Login or register to post comments
  • 607 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2007 - 11:42am — hpn

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

hpn's picture

ಹೆಚ್ಚು ಮಾಹಿತಿಯೊಂದಿಗೆ ಬರೆದರೆ ಉತ್ತಮ - ಉದಾ: ಯಾವ ಆಪರೇಟಿಂಗ್ ಸಿಸ್ಟಮ್ ಇತ್ಯಾದಿ.

ವಿಂಡೋಸ್ ಎಕ್ಸ್ ಪಿ ಯ ಡೀಫಾಲ್ಟ್ installation ನಲ್ಲಿ ಇಂಡಿಕ್ ಎನೇಬಲ್ ಮಾಡಬೇಕು. ಅದು ಮಾಡದೆ ಫೈರ್ ಫಾಕ್ಸ್ ಕನ್ನಡವನ್ನು ಸರಿಯಾಗಿ ರೆಂಡರ್ ಮಾಡುವುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 23, 2007 - 3:53pm — gc

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

gc's picture

ನೀವು ಯಾವ OS ಉಪಯೋಗಿಸ್ತಾ ಇದೀರಿ? Windows ಇದ್ರೆ ಮೇಲೆ HPN ಹೇಳಿದ ಹಾಗೆ ಮಾಡಿ. ನಾನು ಇವತ್ತಿಂದ ಫೈರ್ ಫಾಕ್ಸ್ ೩ ಬೀಟಾ ೧ ಉಪಯೋಗಿಸ್ತಾ ಇದೀನಿ. ಇಂಡಿಕ್ ಎನೇಬಲ್ ಮಾಡದೇ ಕನ್ನಡ ಫಾಂಟುಗಳು ಸರಿಯಾಗಿ ಕಾಣಿಸ್ತಿವೆ Smiling Mozilla seems to have fixed Indic font rendering issues in Gecko layout engine after many many years!!

ನೀವೇನಾದ್ರು ಲಿನಕ್ಸ್ OS ಉಪಯೋಗಿಸ್ತಾ ಇದ್ರೆ ದೇವರೇ ಗತಿ Smiling ಸ್ವಲ್ಪ ದಿನ ಗುದ್ದಾಟ ಮಾಡಲೇಬೇಕು. Getting Indic font rendering and input methods to work correctly is still a nightmare in Linux Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 23, 2007 - 8:26pm — smurthygr

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

smurthygr's picture

ಲಿನಕ್ಸ್‌ನಲ್ಲಿ ಕಾಂಕರರ್‍ ಬ್ರೌಸರ್‌ನಲ್ಲಿ ಕನ್ನಡ ಹಾಗೇ ಬರುತ್ತೆ. (KDE ನ konqueror browser). firefox ಮಾತ್ರ ತೊಂದರೆ. ಲಿನಕ್ಸ್‌ನಲ್ಲಿ ಕನ್ನಡ ಬರಿಸಲು ಇನ್ನೂ ಕಷ್ಟ ಪಡ್ತಾ ಇದ್ದೇನೆ. ಎಲ್ಲೋ ಏನೋ ತಪ್ಪು ಆಗ್ತಾ ಇದೆ. ಯಾವಾಗಲಾದರೂ ಜ್ಞಾನೋದಯ ಆಗಬಹುದು ಅಂತ ಪ್ರಯತ್ನ ಮುಂದುವರೆಸಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 23, 2007 - 9:42pm — gc

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

gc's picture

ಭಾರತೀಯ ನುಡಿಗಳಿಗೆ KDE Konqueror ಒಂದು ಉತ್ತಮ ಬ್ರೌಸರ್. ನಾನು ಮನೆಯಲ್ಲಿ ಬಳಸೋದು Ubuntu Dapper. Firefox ಜೊತೆ ಕೆಲ ದಿನ ದೊಂಬರಾಟ ಆಡಿದರೂ ಕನ್ನಡ ಸರಿಯಾಗಿ ಮೂಡಲಿಲ್ಲ. Wiki, Ubuntu Forumಗಳು ಹಾಗೂ ವಿವಿಧ FAQಗಳ ಸಲಹೆಗಳು ಉಪಯೋಗಕ್ಕೆ ಬರಲಿಲ್ಲ. ಕನ್ನಡ ಸ್ಪಷ್ಟವಾಗಿ ಕಂಡದ್ದು KDE Konqueror ಹಾಕಿದ ಮೇಲೆ!! ಕೆಲ ವಾರಗಳ ನಂತರ GNOME/Firefoxಗಳ ಅಪಡೇಟ್ ಬಂದಾಗ Firefox ಸರಿ ಹೋಯಿತಾದರೂ ಇಂದಿಗೂ ಕನ್ನಡ ಫಾಂಟಗಳಲ್ಲಿ ಸಮಸ್ಯೆಗಳಿವೆ.

SCIM ಕೂಡ ಮೊದಲು ಸರಿಯಾಗಿ ಕೆಲಸ ಮಾಡಲಿಲ್ಲ. SCIM ತೊಂದರೆಗಳಿಗೆ ಕೊನೆಗೆ ಸರಿಯಾದ ಸಲಹೆ ದೊರೆತದ್ದು ತೆಲುಗು Wikiಯಲ್ಲಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 23, 2007 - 10:50pm — hpn

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

hpn's picture

gc,
ಇವೆರಡು ಪುಟಗಳನ್ನು ಓದಿದೀರೇನ್ರಿ?:
http://dev.sampada.net/wiki/Kannada-on-Ubuntu-Edgy
http://dev.sampada.net/wiki/Kannada-on-Ubuntu-Dapper

Dapper ಬಳಸುತ್ತಿದ್ರೂ ಎರಡೂ ಪುಟಗಳನ್ನು ಓದಿ. ಜೊತೆಗೆ ಆ ಪುಟಗಳಲ್ಲಿ ಕೆಳಗಿರುವ ಲಿಂಕುಗಳಿಗೂ ಭೇಟಿ ಕೊಟ್ಟು ಓದಿ.

ಇನ್ನು ನಿಮ್ಮ ಪ್ರತಿಕ್ರಿಯೆಗೆ ಉತ್ತರ:
Konqueror (QT) ರೆಂಡರಿಂಗ್ ಎಲ್ಲದಕ್ಕಿಂತ ಉತ್ತಮ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಫೈರ್ ಫಾಕ್ಸಿನಲ್ಲಿ ಕನ್ನಡ ಬರಿಸೋದು ಕಷ್ಟದ ಕೆಲಸ ಅಲ್ಲವೇ ಅಲ್ಲ. ನೀವು ವಿಕಿ, ಉಬುಂಟು ಫಾರಂ ಅಂತ ದೂರ ಹೋಗಿದ್ದೀರ... ಇಲ್ಲೇ ಸಂಪದದಲ್ಲಿ ನಾನು ಸಾಕಷ್ಟು ಸಮಯ ವ್ಯಯ ಮಾಡಿ ಬರೆದಿಟ್ಟಿರುವ ಡಾಕ್ಯುಮೆಂಟು ಇದೆ. ಹಿಂದೊಮ್ಮೆ ಇದೇ ಕೆಲಸವನ್ನ ನಾನು ಮತ್ತು ನನ್ನ ಸ್ನೇಹಿತ ಪಮ್ರಿ ಕನ್ನಡ ವಿಕಿಪೀಡಿಯದಲ್ಲಿ ಮಾಡಿದ್ವು... ಅದನ್ನು ಎಷ್ಟೋ ಜನ ಬಳಸಿಕೊಂಡೂ ಇದ್ದರು (ತದನಂತರ ಯಾರೋ ಅಲ್ಲಿ ಏನೇನೋ ಬರೆದದ್ದು ನನಗೆ ಬೇಸರವಾಗಿ ಇಲ್ಲಿ ಸಂಪದದಲ್ಲಿಯೇ ಮತ್ತೊಮ್ಮೆ ಹೊಸ ರೀತಿಯಲ್ಲಿ ಬರೆದಿಟ್ಟೆ).

ಇನ್ನು ಕನ್ನಡ ಫಾಂಟುಗಳ ಸಮಸ್ಯೆಗೆ ಇತಿಶ್ರೀ ಸದ್ಯಕ್ಕೆ ಕಣ್ಣಿಗೆ ಕಾಣದು. ನಾವೇ ಹೊಸ ಫಾಂಟುಗಳನ್ನು ಮಾಡಬೇಕು. ಉತ್ಸಾಹವಿದ್ದರೆ ಕೈಜೋಡಿಸಿ - ಒಂದು ಫಾಂಟ್ ಮಾಡಿಯೇಬಿಡೋಣ.
ಸಂಪದದ ಫಂಡ್ಸ್ ಪರಿಸ್ಥಿತಿ ಒಂದಷ್ಟು ಉತ್ತಮವಾದರೆ ಅದೇ ದುಡ್ಡಲ್ಲಿ ಒಂದು ಫಾಂಟಿಗೆ ಬೇಕಾದ ಆರ್ಟ್ ವರ್ಕ್ ಮಾಡಿಸೋದು, ಹಾಗೆ ಮಾಡಿದ ಫಾಂಟು ಜಿ ಪಿ ಎಲ್ ನಲ್ಲಿ ರಿಲೀಸ್ ಮಾಡೋದು ಜೊತೆಗೆ ಉಚಿತವಾಗಿ ಹಂಚೋದು ಎಂದು ನಾವುಗಳು ಕೆಲವರು ಮಾತನಾಡಿಕೊಂಡಿದ್ದೆವು - ಹಾಗೆ ಆಗುತ್ತದೆಯೋ ನೋಡೋಣ.

SCIM ತೊಂದರೆಗಳಿಗೆ ಡ್ಯಾಪರ್ ಮಟ್ಟಿಗೆ ನಾನು ಬರೆದ ಡಾಕ್ಯುಮೆಂಟಿನಲ್ಲಿಯೇ ಸೊಲ್ಯೂಶನ್ ಇದೆ. ತೆಲುಗು ವಿಕಿಯಲ್ಲಿ ಡಾಕ್ಯುಮೆಂಟ್ ಬರೆದ ಸ್ನೇಹಿತ ಸುನೀಲ್ ಮೋಹನ್ ಅಡಪ ಮೊದಲು ಲಾಂಚ್ ಪ್ಯಾಡಿನ ಒಂದು ಪುಟದಲ್ಲಿ ಕೆಲವು ವಿವರ ಸೇರಿಸಿದ್ದರು. ಅದನ್ನಾಧರಿಸಿ ಜೊತೆಗೆ ಇನ್ನಷ್ಟು ಮಾಹಿತಿಯನ್ನು ಸೇರಿಸಿ http://dev.sampada.net/wiki/SCIM-m17n-on-Ubuntu ಬರೆದಿರುವೆ. ಓದಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 23, 2007 - 10:29pm — hpn

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

hpn's picture

gc,
ಎಲ್ಲರಿಗೂ ಲಿನಕ್ಸ್ ನಲ್ಲಿ ಕನ್ನಡ ಬಳಸೋದು ಕಷ್ಟ ಅಂತ ಹೇಳಿ ಹೆದರಿಸಿ ಓಡಿಸ್ಬೇಡ್ರೀ... Smiling ನಾನು ಸುಮಾರು ಮೂರು ವರ್ಷಗಳಿಂದ ಲಿನಕ್ಸಿನಿಂದಲೇ ಕನ್ನಡಲ್ಲಿ ಬರೆಯುತ್ತಿರುವುದು. ಸುಮಾರು ಎರಡೂವರೆ ವರ್ಷ ಕನ್ನಡ ವಿಕಿಪೀಡಿಯ ಎಡಿಟ್ ಮಾಡಿದ್ದು ಲಿನಕ್ಸ್ ಬಳಸಿ. ಸಂಪದ ಕೂಡ ಮಾಡಿರುವುದು ಲಿನಕ್ಸ್ ಬಳಸಿಯೇ. ಲಿನಕ್ಸಿನಲ್ಲಿ ಕನ್ನಡ ಬಳಸೋದು ಬಹಳ ಸುಲಭ.
ಹಾಗೆ ನೋಡಿದರೆ ಹಿಂದೆ ಇದ್ದಷ್ಟು ತೊಂದರೆಗಳಿಲ್ಲ ಅಂತ ಹೇಳಲೂಬಹುದು. ನಾವುಗಳು ಸ್ವತಃ ಫೈರ್ ಫಾಕ್ಸ್ ಕಂಪೈಲ್ ಮಾಡಿಕೊಂಡು ಬಳಸುತ್ತಿದ್ದೆವು (ನನ್ನ ಬ್ಲಾಗಿನಲ್ಲಿ ಹಾಗೆ ಕಂಪೈಲ್ ಮಾಡಿ ರಿಲೀಸ್ ಮಾಡಿದ ಆವೃತ್ತಿಗಳು ಇನ್ನೂ ಇವೆ). ಈಗ ಬರೇ ಪ್ಯಾಂಗೋ ಎನೇಬಲ್ ಮಾಡಿದರಾಯಿತು! ಇತ್ತೀಚಿನ ಲಿನಕ್ಸ್ ವಿತರಣೆಗಳಲ್ಲಿ ಅದೂ ಮಾಡಬೇಕಿಲ್ಲ! ಉಬುಂಟು ಗಟ್ಸಿ, ಫೆಡೋರಾದ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ ಬೈ ಡೀಫಾಲ್ಟ್ ಬರುತ್ತೆ.

smurthygr,
ಒಮ್ಮೆ ಎಲ್ಲರೂ ಒಟ್ಟಾಗಿ... ಒಂದು ದಿನ ಮೀಟಿಂಗ್ ಫಿಕ್ಸ್ ಮಾಡಿ... ನಾನೇ ಖುದ್ದಾಗಿ ಬಂದು ಲಿನಕ್ಸಿನಲ್ಲಿ ಕನ್ನಡ ಬಳಸೋದು ಹೇಗೆ ಎಂಬುದನ್ನ ತೋರಿಸಿಕೊಡುವೆ. ಮೊನ್ನೆ ಅನಿವಾಸಿಯವರ "ಮುಖಾಮುಖಿ" ಚಿತ್ರದ ಸ್ಕ್ರೀನಿಂಗಿಗೆ ಬಂದಿದ್ದರೆ ಈಗಾಗಲೇ ನಿಮಗೆ ತೋರಿಸಿಕೊಟ್ಟಿರುತ್ತಿದ್ದೆ. ನೀವೆಲ್ಲೋ ಒಂದು ಚಿಕ್ಕ ಪುಟ್ಟ ಮಿಸ್ಟೇಕ್ ಮಾಡಿಕೊಂಡಿರುತ್ತೀರಿ - ಹೀಗಾಗಿ ಸರಿಯಾಗಿ ಬರುತ್ತಿರುವುದಿಲ್ಲ.

- ಹರಿ ಪ್ರಸಾದ್ ನಾಡಿಗ್

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 24, 2007 - 10:45am — ರಘುನಂದನ

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

ರಘುನಂದನ's picture

ನಾನು ಬಳಸ್ತಾ ಇರೋದು ವಿಂಡೋಸ್ ಎಕ್ಸ್ಪಿ ಸ.ಪ್ಯಾ ೨. ಮುಂಚೆ ಸಹ ಇದೇ ಇತ್ತು, ಇಂಡಿಕ್ ಎನೇಬಲ್ ನಾನಾಗಿಯೇ ಏನೂ ಮಾಡಿಕೊಂಡಿರಲಿಲ್ಲ. ಆದರೂ ಎಲ್ಲಾ ಕಡೆ ಸರಿಯಾಗಿ ಬರ್ತಾ ಇತ್ತು. ಮೋಜಿಲ್ಲ ಏನೂ ಇದಕ್ಕೆ ಹೊರತಾಗಿರಲಿಲ್ಲ. ಮತ್ತೆ ನಾನು ಹಾರ್ಡ್ ಡಿಸ್ಕ್ ಫಾರ್ಮ್ಯಾಟ್ ಮಾಡಿ ಪುನಃ ಹಾಕಿಕೊಂಡಾಗ ಮೊಜಿಲ್ಲಾದ ಹೊಸ ಆವೃತ್ತಿಯನ್ನು ಹಾಕಿಕೊಂಡೆ ಇದು ಸಮಸ್ಯೆಗೆ ದಾರಿ ಆಯಿತು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 24, 2007 - 11:51am — hpn

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

hpn's picture

ವಿಂಡೋಸ್ ಡೀಫಾಲ್ಟ್ ಇನ್ಸ್ಟಲ್ಲೇಶನ್ ಹಾಗಾದ್ರೆ. ಇಂಡಿಕ್ ಎನೇಬಲ್ ಮಾಡಿಕೊಳ್ಳಿ. ಹೊಸ ತುಂಗ ಫಾಂಟ್ ಕೂಡ ಹಾಕಿಕೊಳ್ಳಬೇಕಾಗಬಹುದು. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2007 - 10:50am — ರಘುನಂದನ

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

ರಘುನಂದನ's picture

ಹೆಹೆ... ನನ್ ಕಂಪ್ಯೂಟರಿನಲ್ಲಿ ಭೂತಸಂಚಾರವೇನಾದರೂ ಇದೆಯೋ ಅಥವಾ ರಾತ್ರಿ ಸರಿಹೊತ್ತಿನಲ್ಲಿ ಯಾವುದೋ ದೇವತೆ ರಿಪೇರಿ ಮಾಡಿಹೋಯ್ತೋ ಗೊತ್ತಿಲ್ಲ, ಎಲ್ಲಾ ಕಡೆ ಕನ್ನಡ, ಸಂಸ್ಕೃತ ಮಾತ್ರವಲ್ಲ ನನಗೆ ಇಷ್ಟವಿಲ್ಲದಿರುವ ಭಾಷೆಗಳೆಲ್ಲ ಲೀಲಾಜಾಲವಾಗಿ ಬರ್ತಾ ಇವೆ. ಸಂಪದದಲ್ಲಿ ಈ ಬಗ್ಗೆ ಬರೆದಿದ್ದೇ ಇದು ಸರಿಯಾಗುವುದಕ್ಕೆ ಕಾರಣವಾಗಿದ್ದರೂ ಇರಬಹುದು. ಆದರೆ ಮುರಿದ ಚಕ್ಕುಲಿಯಂತಿರುವ ತುಂಗೆಯನ್ನು ಚೇಂಜು ಮಾಡ್ಕೋಬೇಕು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 24, 2007 - 9:56pm — gc

ಉ: ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

gc's picture

HPN, ಲಿನಕ್ಸಿನಿಂದ ಜನರನ್ನು ಓಡಿಸೋ ಉದ್ದೇಶ ಖಂಡಿತ ಇಲ್ಲ!! ಭಾರತಿಯ ನುಡಿಗಳಿಗೆ ಸಂಬಂಧಿಸಿದಂತೆ FOSSಗಳಲ್ಲಿ ಇನ್ನೂ ತೊಂದರೆಗಳಿವೆ ಅನ್ನೋದು ನಿಜ. ನಿಮ್ಮಂತಹ ಉತ್ಸಾಹಿಗಳ ಪ್ರಯತ್ನದಿಂದ FOSSಗಳನ್ನು ಮೊದಲು ಸ್ವಲ್ಪ ಕಷ್ಟವಾದರೂ ಉಪಯೋಗಿಸಬಹುದಲ್ಲ ಅನ್ನೋ ಸಮಾಧಾನವಿದೆ. ನಾನು ವಿವಿಧ ಬಗೆಯ FOSSಗಳನ್ನು ೧೫ ವರ್ಷಗಳಿಂದ ಉಪಯೋಗಿಸ್ತಾ ಇದೀನಿ. ಜೊತೆಗೆ FOSSನ ಕಟ್ಟಾ ಬೆಂಬಲಿಗ. Archie, Gopher, NCSA Mosaic, Lynx ಗಳಿಂದ ಹಿಡಿದು ಅಂತರ್ಜಾಲದ ಬೆನ್ನುಹುರಿಯ ಉಸ್ತುವಾರಿಗೆ ಬೇಕಾದ FOSS ತಂತ್ರಾಂಶಗಳನ್ನು ಉಪಯೋಗಿಸಿದ ಅನುಭವವಿದೆ. ಲಿನಕ್ಸ ಮತ್ತು ವಿಂಡೋಸನಲ್ಲಿ ಕನ್ನಡವನ್ನ ಒಂದೂವರೆ ವರ್ಷಗಳಿಂದ ಮಾತ್ರ ಬಳಸಿ ಗೊತ್ತು.

ಸಂಪದದ ಫಂಡಿಗೆ ಖಂಡಿತ ಸಹಾಯ ಮಾಡುವೆ. ಆದರೆ ಕನ್ನಡ ಫಾಂಟ್ ಬರೀಲಿಕ್ಕೆ ಯಾವ ರೀತಿಯ ಸಹಾಯ ಬೇಕು? ನನಗೆ programming ಬರಲ್ಲ. ಬೇರೆ ರೀತಿಯ ಸಹಾಯ ಮಾಡಲು ಸಿದ್ಧ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಮಸ್ಯೆ
  • ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
  • ಕೋಪ
  • ಕೋಪ
  • ನಂಗನ್ನಿಸಿದ್ದು.....
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator